Wednesday 23 July 2014

ಶಾಸ್ತ್ರಜ್ನ ನಿಕೋಲಾ ಟೇಸಲಾರವರ (Scientist Nikola Tesla) ಬಗ್ಗೆ ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನದಲ್ಲಿ ಹೇಳಿದ ಮಾಹಿತಿ

ಪರಮ ಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪೂರವರು ಗುರುವಾರ ದಿ. ೨೭ ಮಾರ್ಚ್ ೨೦೧೪ ರಂದು ಮರಾಠಿ ಪ್ರವಚನದಲ್ಲಿ ಶ್ರೀ ಹರಿಗುರುಗ್ರಾಮದಲ್ಲಿ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾರವರ ಬಹುಮೂಲ್ಯ ಸಂಶೋಧನೆಯ ಕಾರ್ಯದ ಬಗ್ಗೆ ಹೇಳಿದರು.




ಅಸಂಖ್ಯ ತೊಡಕುಗಳನ್ನು ಎದುರಿಸಲಾಗುತ್ತಿದ್ದರೂ ಕೂಡ ಭಗವಂತನ ಮೇಲಿರುವ ಶ್ರದ್ಧೆಯನ್ನು ಸ್ವಲ್ಪ ಕೂಡ ವಿಚಲಿತಗೊಳಿಸದ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾ ಅವರು ಅಥಕ ಪರಿಶ್ರಮದಿಂದ ಬಹುಮೂಲ್ಯ ಸಂಶೋಧನೆಗಳನ್ನು ಮಾಡಿ ಲೋಕೋಪಯೋಗಕ್ಕಾಗಿ ಅನೇಕ ಶೋಧನೆಗಳನ್ನು ಮಾಡಿದರು. ಬಾಪೂರವರು ಅವರ ಮಹಾನ ಕಾರ್ಯದ ಪರಿಚಯವನ್ನು ಮಾಡಿ ಕೊಟ್ಟರು. ಅದನ್ನು ನಾವು ಈ ವ್ಹಿಡಿಯೋದಲ್ಲಿ ನೋಡಬಹುದು.

Tuesday 8 July 2014

ಬಾಪೂರವರ ನಿತ್ಯದ ಬೆಳಿಗ್ಗೆಯ ಅಲ್ಪೋಪಹಾರ (ನಾಷ್ಟಾ) - ಆಂಬೀಲ ಅಥವಾ ಇಡ್ಲಿ

ಇವತ್ತಿನ ತರಾತುರಿಯ ಜೀವನದಲ್ಲಿ ಬೆಳಗಿನ ಅಲ್ಪೋಪಹಾರಕ್ಕಾಗಿ (ನಾಷ್ಟಾ) ಸಮಯ ಸಿಗುವುದಿಲ್ಲವೆಂದು ಅನೇಕ ಜನರು ಹೇಳುತ್ತಿರುವದನ್ನು ನಾವು ಕೇಳುತ್ತೇವೆ....ಮತ್ತು ಆ ಸಮಯದಲ್ಲಿ ಸಿಕ್ಕಿದ್ದನ್ನು ಹೆಚ್ಚಿನದಾಗಿ ಬ್ರೆಡ್ ನಮ್ಮ ಅಲ್ಪೋಪಹಾರದ ಅವಿಭಾಜ್ಯ ಭಾಗವಾಗುವದು. ’ಬ್ರೆಡ್ ನ ಹೊರತು ನಾಷ್ಟಾ’ ಈ ಸಂಕಲ್ಪನೆಯು ಹಲವರಿಗೆ ಒಪ್ಪುವದಿಲ್ಲ. ಹೀಗಿದ್ದರು ಕೂಡ ಅನೇಕರ ಮನೆಗಳಲ್ಲಿ ಇವತ್ತು ಸಹ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ.


ಆದರೆ ಬಾಪೂರವರ ನಾಷ್ಟಾ ಮಾತ್ರ ಸ್ಟಾಂಡರ್ಡ್ ಆಗಿದೆ. ಬಾಪೂ ತನ್ನ ನಾಷ್ಟಕ್ಕಾಗಿ ಆಂಬೀಲ ಅಥವಾ ಇಡ್ಲಿಯನ್ನು ತಿನ್ನುತ್ತಾರೆ, ಮತ್ತು ಇಡ್ಲಿ ಕೂಡ ಅಕ್ಕಿ ಮಾತ್ತು ಉದ್ದಿನಬೇಳೆಯ ಹಿಟ್ಟಿನ್ನದ್ದೇ ! ಹಲವು ಕಡೆಯಲ್ಲಿ ಇಡ್ಲಿಯನ್ನು ಕೇವಲ ಅಕ್ಕಿಯಿಂದಲೇ ಮಾಡುವ ಪದ್ಧತಿಯಿದೆ. ಆದರೆ ಈ ತರಹ ಮಾಡಿದ ಇಡ್ಲಿಯನ್ನು ಬಾಪೂ ಸಾಧ್ಯವಾದಲ್ಲಿ ತಿನ್ನುತ್ತಿಲ್ಲ. " ಆಂಬೀಲ " ಮಾತ್ರ ಬಾಪೂ ಬೆಳಗಿನ ನಾಷ್ಟಾದಲ್ಲಿ ಹೆಚ್ಚಾಗಿ ತಿನ್ನುತ್ತಾರೆ. ಇವತ್ತಿನ ತರುಣ ಸಂತಾನಕ್ಕೆ ಒಂದು ವೇಳೆ ಆಂಬೀಲದ ಬಗ್ಗೆ  ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ನಾನು ಯಾರೊಡನೆ ಮಾತನಾಡಿದೆ ಅವರು ಆಂಬೀಲವನ್ನು ಬಹಳ ವಿರಳವಾಗಿ ತಿಂದಿರುವದು ತಿಳಿದು ಬಂತು. ಅಕ್ಕಿಯಿಂದ ಮಾಡಿದ, ಮಾಡಲು ಸುಲಭವಾದ ಮತ್ತು ಕಡಿಮೆ ಖರ್ಚಿನಿಂದ ಮಾಡಿದ ಈ ಆಂಬೀಲವು ಶರೀರಕ್ಕಾಗಿ ಮಾತ್ರ ಅತ್ಯಂತ ಗುಣಕಾರಿಯಾಗಿದೆ.

ಇವತ್ತು ಬಾಪೂರವರ ಮಾರ್ಗದರ್ಶನನುಸಾರವಾಗಿ ನಾವು ನಾಷ್ಟಕ್ಕೆ ಆಂಬೀಲವನ್ನೇ ತೆಗೆದುಕೊಳ್ಳುತ್ತೇವೆ. ಚಿಕ್ಕ ಒಂದುವರೆ-ಎರಡು ಬಾವುಲ್ ತುಂಬಿಸಿ ಆಂಬೀಲವು ಒಬ್ಬ ಮನುಷ್ಯನಿಗೆ ಪರ್ಯಾಪ್ತವಾಗಿದೆ. ಆಂಬೀಲವನ್ನು ಅಲ್ಪೋಪಹಾರವಾಗಿ ತೆಗೆದುಕೊಂಡಾಗ ನಾವು ಅದರ ಜೊತೆ ಇನ್ನೇನಾದರು ಪದಾರ್ಥ ತೆಗೆದು ಕೊಳ್ಳುತ್ತಿದ್ದರೆ ಅದರ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಅತಿರಿಕ್ತ ಕ್ಯಾಲರೀಜ್ ಹೊಟ್ಟೆಗೆ ಹೋಗುವ ಪ್ರಶ್ನೆ ಬರಲಾರದು. ಆಂಬೀಲದಿಂದ ಹಸಿವು ತಣಿಯುವದು ಮತ್ತು ಹೊಟ್ಟೆಗಾಗಿ ಶಾಮಕವು ಆಗುವದು. ಇವತ್ತು ಎಲ್ಲರಿಗೂ ತಿಳಿಯಲೆಂದು ಪರಮಪೂಜ್ಯ ನಂದಾಯೀಯವರು ಮನೆಯಲ್ಲಿ ಮಾಡುತ್ತಿರುವ ಆ ಆಂಭೀಲದ ರೆಸಿಪಿಯನ್ನು ಕೆಳಗೆ ಕೊಡುತ್ತಿದ್ದೇನೆ.



ಸಾಹಿತ್ಯ -

ಪರಿಮಲ್ ಅಕ್ಕಿ - ೧ ವಾಟಿ

ಸಕ್ಕರೆ - ೧ ಚಮಚೆ

ಮೊಸರಿನ ಮಜ್ಜಿಗೆ - ೫ ವಾಟಿ

ನೀರು - ೭ ವಾಟಿ

ಉಪ್ಪು - ರುಚಿಗನುಸಾರ


ಮಾಡುವ ಕೃತಿ -

ಮೊಟ್ಟಮೊದಲು ೧ ವಾಟಿ ಪರಿಮಲ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಆ ನಂತರ ಆ ಅಕ್ಕಿಯನ್ನು ಮೂರು ಸಲ ನೀರಿನಿಂದ ತೊಳೆದು ತೆಗೆಯಿರಿ. ತೊಳೆದ ನಂತರ ಅದರಲ್ಲಿ ೭ ವಾಟಿ ನೀರು ತೆಗೆದುಕೊಳ್ಳಿ. ನಾವು ಅಕ್ಕಿಯನ್ನು ಅಳೆಯಲು ಯಾವ ವಾಟಿಯನ್ನು ತೆಗೆದುಕೊಂಡಿದ್ದೇವೆ ಅದೇ ವಾಟಿಯನ್ನು ನೀರಿಗಾಗಿ ಉಪಯೋಗಿಸಿರಿ. ಇದರಿಂದ ಪ್ರಮಾಣದಲ್ಲಿ ಅಂತರ ಬರುವುದಿಲ್ಲ. ನೀರನ್ನು ಹಾಕಿದ ಮೇಲೆ ಅಕ್ಕಿಯ ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಮೂರು ಶಿಟಿಯಾಗುವ ತನಕ ಬೇಯಿಸಬೇಕು.


 
ಅಕ್ಕಿ ಬೇಯಿದ ಮೇಲೆ ಅನ್ನದ ಪಾತ್ರೆಯನ್ನು ಕುಕ್ಕರಿನಿಂದ ಹೊರತೆಗೆದಿಡಬೇಕು. ನಾವು ಯಾವಾಗ ಅನ್ನದ ಪಾತ್ರೆಯನ್ನು ಹೊರಗೆ ತೆಗೆದಿಡಿತ್ತೇವೆ ಆಗ ಅದರಲ್ಲಿ ನೀರು ಇರುವದು. ಈಗ ಈ ಅನ್ನ ತಣ್ಣಗಾದಾಗ ಅದನ್ನು ಮಿಕ್ಸರಿನಲ್ಲಿ ೫ ಸೆಕೆಂದಿನ ತನಕ ಮಾತ್ರ ಸಣ್ಣ ಮಾಡಿ ತೆಗೆಯಬೇಕು. ಮಿಕ್ಸರಿನಿಂದ ಆ ಅನ್ನವನ್ನು ಪುನ: ಅದೇ ಪಾತ್ರೆಯಲ್ಲಿ ತೆಗೆಯಬೇಕು. ಈಗ ಅದರಲ್ಲಿ ೧ ಚಮಚೆ ಸಕ್ಕರೆ ಹಾಗು ರುಚಿಗೆ ಅನುಸಾರವಾಗಿ ಉಪ್ಪನ್ನು ಹಾಕಬೇಕು. ಸಕ್ಕರೆ ಮತ್ತು ಉಪ್ಪು ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಬೇಕು.

ನಂತರ ಹೀಗೆ ಮಿಕ್ಸ್ ಮಾಡಿದ ಅನ್ನದಲ್ಲಿ ೫ ವಾಟಿ ಮಜ್ಜಿಗೆಯನ್ನು ಹಾಕಬೇಕು. ಮಜ್ಜಿಗೆ ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಮಿಕ್ಸ್ ಮಾಡಿದ ಅನ್ನದ ರುಚಿಯನ್ನು ನೋಡಿಕೊಂಡು ಅಗತ್ಯವೆಣಿಸಿದಲ್ಲಿ ಇನ್ನು ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಆ ನಂತರ ಈ ಅನ್ನದ ಪಾತ್ರೆಯನ್ನು ಪೂರ್ಣ ರಾತ್ರೆ ಹಾಗೆಯೇ ಇಡಬೇಕು. ಫ್ರಿಜ್ಜಿನಲ್ಲಿ ಇಡಬಾರದು. ಆಂಬೀಲ ಸಿದ್ದವಾಗಲು ಸಾಧಾರಣ ೧೨-೧೪ ಗಂಟೆಯ ಕಾಲ ಬೇಕಾಗುತ್ತದೆ.


ಈ ತರಹ ಸಿದ್ಧವಾದ ಆಂಬೀಲವನ್ನು ನಾವು ಮರುದಿವಸ, ಅಂದರೆ ೧೪ ಗಂಟೆಯಾದ ಮೇಲೆ ತಿನ್ನಬಹುದು. ಅಂದರೆ ಸಾಯಂಕಾಲ ೮ ಗಂಟೆಗೆ ಮಾಡಿದ ಆಂಬೀಲವನ್ನು ನಾವು ಮರುದಿವಸ ಬೆಳಿಗ್ಗೆ ೧೦ ಗಂಟೆಗೆ ತಿನ್ನಬಹುದು. 
 
|| ಹರಿ ಓಂ || ಶ್ರೀರಾಮ || ಅಂಬಜ್ನ ||


Monday 30 June 2014

ಆನ್ ಲಾಯಿನ್ ಬ್ಯಾಂಕಿಗ್ ಮೂಲಕ ಸ್ವೇಚ್ಛಾನಿಧಿ ಕೊಡುವ ಸೌಲಭ್ಯ ಎಲ್ಲರಿಗಾಗಿ ಮಾಡಲಾಗಿದೆ

ಕೆಲವು ದಿವಸದ ಮೊದಲು ಸದ್ಗುರು ಬಾಪೂರವರು ಎಲ್ಲಾ ಶ್ರದ್ಧಾವಾನರ ಹಿತಕ್ಕಾಗಿ ಮತ್ತು ಪವಿತ್ರ ಸ್ಪಂದನದ ಅಭಿಸರಣೆಗಾಗಿ ಆಳಂದಿಯಲ್ಲಿಯ ಮೊದಲ ’ಅನಿರುದ್ಧ ಧಾಮ್ ’ ಹಾಗು ಅದರ ರಚನೆಯ ಸಂಬಂಧದಲ್ಲಿ ಮಾಹಿತಿಯನ್ನು ಕೊಟ್ಟರು. ಅದರ ಜೊತೆ ಅಸಹಾಯ ವೃದ್ಧರಿಗಾಗಿ ಜುಯೀ ನಗರದಲ್ಲಿ ತಯಾರಿಸುತ್ತಿರುವ "ಇಂಸ್ಟಿಟ್ಯೂಟ್ ಆಫ್ ಜೆರಿಯಾಸ್ಟ್ರಿಕ್ಸ್ ಆಂಡ್ ರಿಸರ್ಚ್ ಸೆಂಟರ್" ನ ಕೆಲಸದ ಬಗ್ಗೆ ಮತ್ತು ಇವೆರೆಡರ ಪ್ರಕಲ್ಪದ ವ್ಯಾಪ್ತಿ, ಕಾರ್ಯ ಹಾಗು ಖರ್ಚಿನ ಬಗ್ಗೆಯೂ ಪ್ರವಚನದಲ್ಲಿ ಮಾಹಿತಿಯನ್ನು ಕೊಟ್ಟರು.


ರಾಮರಾಜ್ಯದ ಪ್ರವಚನದಲ್ಲಿ ವಿಸೃತ ಮಾಡಿದಂತೆ ಕಷ್ಟ ಪಡುವ ಹಾಗು ಬಡ ರೈತರ ಶ್ರೇಯಸ್ಸಿಗಾಗಿ ಕರ್ಜತ್ - ಕೋಠಿಂಬೆಯ ಹತ್ತಿರ ಗೋವಿದ್ಯಾಪೀಠಮ್ ದಲ್ಲಿ ನಡೆಯುತ್ತಿರುವ " ಅನಿರುದ್ಧಾಜ್ ಇಂಸ್ಟಿಟ್ಯೂಟ್ ಆಫ್ ಗ್ರಾಮ ವಿಕಾಸ " ದ ಪ್ರಕಲ್ಪ ಕೂಡ ಈಗ ಬಹಳ ವೇಗದಲ್ಲಿ ಕಾರ್ಯರತವಾಗಿದೆ. ಶ್ರದ್ಧಾವಾನರಿಂದ ಸಿಗುತ್ತಿರುವ ಬೆಂಬಲವನ್ನು ಲಕ್ಷ್ಯದಲ್ಲಿ ತೆಗೆದುಕೊಂಡು www.aniruddhafoundation.com ಈ ಸಾಯಿಟಿನಲ್ಲಿ ನಾವು ಎಲ್ಲಾ ಶ್ರದ್ಧಾವಾನರಿಗೆ ಸ್ವೇಚ್ಛಾನಿಧಿಯನ್ನು ಕೊಡಲು ಸುಲಭವಾಗಲೆಂದು ಮೊದಲಿದ್ದ ಕ್ರೆಡಿಟ್ ಕಾರ್ಡಿನ ಒಟ್ಟಿಗೆ ಈಗ ಇಂಟರ್ ನೆಟ್ ಬ್ಯಾಂಕಿಂಗಿನ ಪರ್ಯಾಯವನ್ನು ಸಹ ಮಾಡಿಕೊಡುತ್ತಿದ್ದೇವೆ.

ಇಂತಹ ಮಹತ್ವದ ಪ್ರಕಲ್ಪಕ್ಕಾಗಿ ಎಲ್ಲಾ ಇಚ್ಛುಕ ಶ್ರದ್ಧಾವಾನರು ’ಪೆಮೆಂಟ್ ಗೆಟ್ವೆ ’ ಯ ಉಪಯೋಗ ಮಾಡಿ ತಮ್ಮ ತಮ್ಮ ಕ್ಷಮತೆಯನುಸಾರವಾಗಿ ಸಂಸ್ಥೆಗೆ ಸ್ವೇಚ್ಛಾನಿಧಿಯ ಮೂಲ್ಯವನ್ನು ಕೊಡಬಹುದು. ಆನ್ ಲಾಯಿನ್ ಡೋನೇಶನ್ ನ ಸೌಕರ್ಯಕ್ಕಾಗಿ ಈ ಪ್ರಕಾರ ಪ್ರಕ್ರಿಯೆಗಳಿವೆ.

೧) ಶ್ರೀ ಅನಿರುದ್ಧ ಉಪಾಸನಾ ಫೌಂಡೇಶ್ ನಿನ www.aniruddhafoundation.com ಈ ವೆಬ್ ಸಾಯಿಟ್ ಮೇಲಿನ ‘Click here to Donate Online’ ಈ ಬಟನ್ ನನ್ನು ಕ್ಲಿಕ್ ಮಾಡಬೇಕು.

೨) ಆ ನಂತರ ನಮ್ಮ ಸ್ಕ್ರೀನ್ ಮೇಲೆ ಬರುವ ಫಾರ್ಮ್ ದಲ್ಲಿಯ ಮಾಹಿತಿನ್ನು ತುಂಬಿಸಿ ‘Donate Now’ ಈ ಬಟನ್ ಮೇಲೆ ಕ್ಲಿಕ್ ಮಾಡಿ ಮಾತ್ರ ಅದರ ಮೊದಲು ಫಾರ್ಮ್ ದಲ್ಲಿರುವ ’Name’, ’E-mail’, ’Mobile No.’ ಮತ್ತು ’Donation amount’ ಈ ಮಾಹಿತಿಯನ್ನು ತುಂಬಿಸಿ ಹಾಗು ಅದರ ಜೊತೆ ’Card Payment’ ಅಥವಾ ’Internet Banking’ ಈ ಎರಡು ಪರ್ಯಾಯದಲ್ಲಿಯ ಒಂದನ್ನು ಆಯ್ಕೆ ಮಾಡುವದು ಆವಶ್ಯಕವಿದೆ.

೩) ಮುಂದಿನ ಪ್ರಕ್ರಿಯೆಗಳು ಪೂರ್ಣವಾದ ಮೇಲೆ ಸಿಸ್ಟಮ್ ತಯಾರಿಸಿದ ರಶೀದಿಯು ನೀವು ಕೊಟ್ಟ ಈ-ಮೇಲ್ ಗೆ ಸಂಸ್ಥೆಯ ಮೂಲಕ ಕಳುಹಿಸಲಾಗುವದು. ಶ್ರದ್ಧಾವಾನರು ಈ "ಪೆಮೆಂಟ್ ಗೆಟ್ವೆ" ಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ  ತೆಗೆದುಕೊಂಡು ಹಾಗು ಈ ಪವಿತ್ರ ಕಾರ್ಯದಲ್ಲಿ ಆರ್ಥಿಕ ಸಹಾಯ ಮಾಡುವರೆಂದು ನನ್ನ ವಿಶ್ವಾಸವಿದೆ.