Friday 5 June 2015

ಹಲವಾರು ನಿರ್ಮಾಣಗಳ ಜನಕ (ಫಾದರ್ ಅಫ್ ಮೆನಿ ಇನ್ವೆಂಶನ್ಸ್)

ನಿಜವಾದ ಶ್ರ‍ೇಷ್ಠ ಜನರು ಯಾವಾಗಲೂ ಉದಾರ ಮನಸ್ಸಿನವರಾಗಿದ್ದು, ಇತರರ ಮಾತುಗಳನ್ನು ಕಿವಿಕೊಟ್ಟು ಕೇಳುವವರು ಮತ್ತು ತೆರೆದ ಕಣ್ಣುಗಳಿಂದ ನೋಡುವವರಾಗಿರುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಷಯ. ಡಾ. ನಿಕೋಲಾ ಟೇಸಲಾರವರು ಕೂಡ ಮನಸ್ಸಿನಲ್ಲಿ ಯಾವ ಪ್ರಕಾರದ ಸ್ಥಿರವಾದ ಊಹನೆಯನ್ನು ಮಾಡದೆ ಎಲ್ಲಾ ವಸ್ತುಗಳನ್ನು ವೀಕ್ಷಿಸುವ ಅದ್ಭುತವಾದ ಗುಣಧರ್ಮವನ್ನು ಪಡೆದಿದ್ದರು. ಡಾ. ಟೇಸಲಾರವರು ಯಾವುದೇ ಅಸಾಧಾರಣ ಅಥವಾ ಅವರ ಸ್ವಂತದ ಶೋಧನೆಗಳನ್ನು ಕೂಡ ಅಸಂಖ್ಯಾತ ಅಭಿಪ್ರಾಯ ಮತ್ತು ದೃಷ್ಟಿಕೋನಗಳಿಂದ ನೋಡುತ್ತಿದ್ದರು. ಇದು ಅವರನ್ನು ಯಾವಾಗಲೂ ನಿರ್ದಿಷ್ಟ ವಸ್ತುವಿನ ಉಪಯೋಗವನ್ನು ವಿವಿಧ ಬಗೆಯಲ್ಲಿ ಮಾಡುವ ಕಡೆ ಒಯ್ಯುತಿತ್ತು ಮತ್ತು ಅದರ ಅಚ್ಚು ಅವರ ಪ್ರತಿಯೊಂದು ನಿರ್ಮಾಣದಲ್ಲಿ ಕಾಣುತ್ತಿತ್ತು. ಇತರರಿಂದ ಯೋಚಿಸಲು ಅಸಾಧ್ಯವಾದ ಅವರ ವಿಚಾರಗಳು ಅವರನ್ನು ’ಜುಗಾಡ್’ (ತನ್ನ ಜಾಣತನದಿಂದ ಯಾವುದೇ ಸಮಸ್ಯೆಗಳಿಗೆ ಅಲ್ಪ ಖರ್ಚಿನ ಸಮಾಧಾನ ಕೊಡುವದು) ನಲ್ಲಿ ನೈಪುಣ್ಯತೆಯನ್ನು ಕೊಟ್ಟಿತು. ಇಂದಿನ ಕಾಲದಲ್ಲಿ ಅದನ್ನು" ಹೊಸ ಸಹಸ್ರ ವರ್ಷ ಕಾಲದ ಯಂತ್ರ ಕೌಶಲ್ಯ" ("ದ ಸ್ತ್ರಾಟೇಜಿ ಆಫ್ ದ ನಿವ್ ಮಿಲ್ಲೇನಿಯಮ್") ಎಂದು ಪರಿಗಣಿಸಲಾಗುತ್ತದೆ. ಮತ್ತು ವಾಸ್ತವದಲ್ಲಿ ಸಂಪೂರ್ಣ ಭೂಮಂಡಲದ ಬಹಳ ವೇಗದಿಂದ ಬರಿದಾಗುತ್ತಿರುವ ನೈಸರ್ಗಿಕ ಸಾಧನೆಗಳ ಸಂರಕ್ಷಕ ಎಂದು ತಿಳಿಯಲಾಗುತ್ತಿದೆ. ಇಂತಹ ಕೌಶಲ್ಯವು ಕ್ಷುಲ್ಲಕದಿಂದ ಹೆಚ್ಚಿನದನ್ನು ಪಡೆಯುವ ಕಲ್ಪನೆಯಿಂದ ಆವರಿಸಿರುತ್ತದೆ.

ಮ್ಯಾಡಿಸನ್ ಸ್ಕ್ವೆರ್ ಎಲೆಕ್ಟ್ರಿಕಲ್ ನ ಪ್ರದರ್ಷನೆಯಲ್ಲಿ ಕೂಡ ಡಾ. ನಿಕೋಲಾ ಟೇಸಲಾರವರು ಒಂದು, ನೀರಿನ ಮೇಲೆ ರಿಮೋಟಿನ ಮೂಲಕ ನಿಯಂತ್ರಿತ ಹಾಗು ಇನ್ನೊಂದರಲ್ಲಿ ಬಚ್ಚಿಟ್ಟ ಎಂಟಿನಾವಿಟ್ಟು ಅದನ್ನು ನೀರಿನ ಕೆಳಗಿಂದ ನಿಯಂತ್ರಣ ಮಾಡುತ್ತಿರುವ ಎರಡು ಹಡಗುಗಳನ್ನು ಕಟ್ಟಿರುವ ಮಾತು ಬಹಳ ಕಡಿಮೆ ಜನರಿಗೆ ಗೊತ್ತಿತ್ತು. ವಾಸ್ತವದಲ್ಲಿ ಡಾ. ಟೇಸಲಾರವರು ನಿಜವಾಗಿಯೂ ಭೂಮಂಡಲದ ಮೊಟ್ಟ ಮೊದಲನೇಯ ನೀರಿನ ಅಡಿಯಿಂದ ’ತಂತಿರಹಿತವಾಗಿ ಚಲಾಯಿಸುವ ಸಬ್ ಮರೀನ್ ’ ನನ್ನು ತಯಾರಿಸಿದರೆಂದು ವಾಚಕರಿಗೆ ತಿಳಿಯಲೆಂದು ಯಾರಿಗೂ ತಿಳಿಯಲಾರದ ಅನುಮಾನಗಳನ್ನು ಹೇಳಿ ತೋರಿಸಿಕೊಡಲಾಗುತ್ತಿದೆ. ಆದರೆ ಅವರ ವಾಡಿಕೆಯಂತೆ ಮತ್ತು ಅವರು ತನ್ನ ಸಂಶೋಧನೆಗಳನ್ನು ಅನೇಕ ಪ್ರಕಾರಗಳ ಪದ್ಧತಿಯಲ್ಲಿ ಊಹಿಸುವ ಅವರ ಸ್ವಭಾವದ ಕಾರಣದಿಂದಾಗಿ ಡಾ. ಟೇಸಲಾರವರು ಅಲ್ಲಿಯೇ ನಿಲ್ಲಲಿಲ್ಲ. ಡಾ. ಟೇಸಲಾರವರ ಮನಸ್ಸಿನಲ್ಲಿ ನಿಜವಾಗಿಯೂ ಏನಿತ್ತೆಂದು ಅದನ್ನು ಅವರು ಪರ್ಡ್ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ.ಎಫ್.ಮೈಸ್ನೇರ್ ಅವರಿಗೆ ಬರೆದ ಪತ್ರದಿಂದ ಸ್ಪಷ್ಟವಾಗುತ್ತದೆ.

ಅವರ ಪತ್ರದಲ್ಲಿ ಡಾ. ಟೇಸಲಾ ಬರೆದಿದ್ದರು. "ನಾನು ಪೂರ್ಣ ಕಾರ್ಯಕ್ಷೇತ್ರವನ್ನು ಉದಾತ್ತನಾಗಿ ನಡೆಸಿಕೊಂಡೆ, ದೂರದಿಂದ ನಿಯಂತ್ರಣ ಮಾಡುವ ಯಾಂತ್ರಿಕಕೌಶಲ್ಯಕ್ಕೆ ನನ್ನನ್ನು ಸೀಮಿತನಾಗಿಡದೆ ಬುದ್ಧಿಶಕ್ತಿ ಪಡೆದ ಯಂತ್ರಗಳ ತನಕ ಹೋದೆ. ಅಂದಿನಿಂದ ನಾನು ಲೋಕವಿಕಾಸದ ಸಂಶೋಧನೆಗಳಲ್ಲಿ ಮುಂದುವರಿದೆ ಮತ್ತು ಬಾಹ್ಯದಿಂದ ಹಟತ್ತಾಗಿ ನಿಯಂತ್ರಿತವಾಗದ ಹಾಗು ಕಾರಣವಿದ್ದಾಗ ಕಾರ್ಯ ಮಾಡುವ ಆಟೋಮೇಟನ್ (ಸ್ವಂಯಚಲಿತ ಯಂತ್ರ) ನನ್ನು ತಯಾರಿಸಿ ತೋರಿಸಲು ಹೆಚ್ಚು ಸಮಯ ದೂರದವಿಲ್ಲವೆಂದು ನನಗೆಣಿಸುತ್ತದೆ. ಇಂತಹ ಮಹತ್ಕಾರ್ಯಕ್ಕಾಗಿ ವ್ಯವಹಾರಿಕ ಸಾಧ್ಯತೆಗಳು ಏನೇ ಇರಲಿ, ಇದು ಮಾತ್ರ ಯಂತ್ರಶಾಸ್ತ್ರಗಳ ಯುಗಾರಂಭವಾಗಿದೆ. ಡಾ. ನಿಕೋಲಾ ಟೇಸಲಾರವರ ಉದ್ಗಾರಗಳು ಸ್ವಂಯಮ್ ಸ್ಪಷ್ಟೀಕರಣಾತ್ಮಕವಾಗಿದೆ.  ಇಲ್ಲಿ ಡಾ. ಟೇಸಲಾರವರು ಆಟೋಮೇಟನ್ ನನ್ನು ಇದ್ದ ಹಾಗೆಯೇ ಇಟ್ಟಲ್ಲಿ ಅದಕ್ಕೆ ವಹಿಸಿ ಕೊಟ್ಟ ಕಾರ್ಯವನ್ನು ಸ್ವತಶ್ಚಲಿಸಿ ತನ್ನದೇ ರೀತಿಯಲ್ಲಿ ಮುಂದರಿಯುವ ಆಟೋಮೇಟನ್ ನನ್ನು ವಿಕಾಸಗೊಳಿಸಬಹುದೆಂದು ತಿಳಿಸುತ್ತಾರೆ. ಈ ಆಟೋಮೇಟನ್ ತನ್ನದೇ ಬುದ್ಧಿಶಕ್ತಿ ಮತ್ತು ಉಚಿತ ಸಾಮರ್ಥ್ಯದ್ದಾಗಿರುವದು. ಇವತ್ತಿಗೆ ಡಾ. ನಿಕೋಲಾ ಟೇಸಲಾರವರ ಈ ವಕ್ತವ್ಯಕ್ಕೆ ೧೧೬ ವರ್ಷಗಳಾಗಿವೆ ಆದರೆ ನಾವು ಕೇವಲ ಕೆಲವೇ ವರ್ಷಗಳ ಮೊದಲು ನಿಜವಾಗಿ ಇದನ್ನು ಅರ್ಥ ಮಾಡತೊಡಗಿದೆವು. ಡಾ. ಟೇಸಲಾರವರ ಟೆಕ್ನೋಲಾಜಿಯ ಮೇಲೆ ಕೆಲಸ ಮಾಡುತ್ತಿರುವ ವೈಜ್ನಾನಿಕರು ಮತ್ತು ಸಂಶೋಧಕರು ಡಾ. ಟೇಸಲಾರವರ ಮಾರ್ಗದರ್ಶಕ ಉಕ್ತಿಗಳು ಅಂದರೆ ವಾಸ್ತವ್ಯದಲ್ಲಿ  ಯಾವುದರಲ್ಲಿ ಕೃತ್ರಿಮ ಬುದ್ಧಿ ಮತ್ತು ವಿಜ್ನಾನಕ್ಕೆ ಸಂಬಂಧದ ಉಪಯೋಗಗಳ ಸಮಾವೇಷವಾಗಿದೆ ಅಂತಹ ಹ್ಯುಮನಾಯಿಡ್ ರೊಬೋಟ್ ಬಗ್ಗೆ ಹೇಳಿದರೆಂದು ಸಿದ್ಧಮಾಡಿದರು. ಇದೊಂದು ದಿಗಂತದದಾಚೆ ನೋಡಿದ ಮುಂದಾಲೋಚನೆಯ ಇನ್ನೊಂದು ಬಹಳ ಉಚ್ಚ ದೃಷ್ಟಾಂತದ ಉದಾಹರಣೆಯಾಗಿದೆ.

ಡಾ. ನಿಕೋಲಾ ಟೇಸಲಾ ಅವರು ಸ್ವಪ್ನಿಸಿದ ಟೆಲೆ-ಆಟೋಮೇಟನ್ ನನ್ನು ತಯಾರಿಸುವಾಗ ಲೊಜಿಕ್ ಗೇಟ್ ನ ಕಲ್ಪನೆಯನ್ನು ಉಪಯೋಗಿಸುವ ಬಗ್ಗೆ ನಾವು ನಮ್ಮ ಹಿಂದಿನ ಕೆಲವು ಲೇಖನಗಳಲ್ಲಿ ಓದಿರುವೆವು. ಅದಲ್ಲದೆ ಡಾ. ಟೇಸಲಾರವರ ಕೆಲವು ಪೇಟೆಂಟ್ಸಗಳು ಲೊಜಿಕಲ್ ಮತ್ತು ಸರ್ಕೀಟಿನ ಮೂಲಧಾತುಗಳ ಮೇಲೆ ಆಧಾರಿತವಾಗಿದ್ದವು. ಇದರ ಪ್ರತಿಕೂಲವಾಗಿ ಬಹಳ ಖೇದದ ಮಾತೆಂದರೆ ಡಾ. ಟೇಸಲಾರವರ ಟೆಲೆ-ಆಟೋಮೇಟನ್ ನ ಕೆಲಸದ ಪ್ರದರ್ಶನೆಯನ್ನು ಮಾಡಿದ ಅವರಿಗೆ ೫೦ ವರ್ಷಗಳ ನಂತರ  ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಾಯಿಜ್ ಕೇವಲ ಮನೆಯ ಟ್ರಾಂಸ್ ಸಿಸ್ಟರ್ ಅಂದರೆ ಲೊಜಿಕ್ ಗೇಟ್ಸ್ ನ ಮೂಲದ ಮೇಲೆ ಮಾಡಿದ ಸಲಕರಣೆಗಳನ್ನು ಡಾ. ಟೇಸಲಾರವರು ತಯಾರಿಸಿದಕ್ಕೆ ಕೊಡಲಾಯಿತು. ಇದರಿಂದ ಸ್ಪಷ್ಟವಾಗುತ್ತದೆ ಅಂದರೆ ಡಾ. ನಿಕೋಲಾರವರ ಸಂಶೋಧನೆಗಳನ್ನು ಸಂಪೂರ್ಣವಾಗಿ ದುರ್ಲಕ್ಷಿಸಲಾಗಿತ್ತು ಮತ್ತು ಜನರನ್ನು ದಿಗ್ಬ್ರಮೆ ಮಾಡಲಾಗಿತ್ತು. ಇಲ್ಲಿ ನಾವು ಗಮನಿಸಬೇಕಿದೆ ಅಂದರೆ ಲೊಜಿಕ್ ಗೇಟ್ ಇಂದಿನ ಆಧುನಿಕ ಕಂಪ್ಯೂಟರಿನ ಮೂಲಾಧಾರ ಮಾತ್ರವಲ್ಲದೆ ಅದು ರಿಮೋಟ್ ಕಂಟ್ರೋಲ್ ಟೆಕ್ನೋಲೊಜಿ, ರೊಬೋಟಿಕ್ಸ್, ವಾಯರ್ ಲೆಸ್ ಟೆಕ್ನೋಲೊಜಿ ಹಾಗೆಯೇ ರೇಡಿಯೋ ಇಂಡಸ್ಟ್ರಿಯ ಕೂಡ ಮೂಲಾಧಾರವಾಗಿದೆ. ಆದ್ದರಿಂದ ಅವಶ್ಯವಾಗಿ ಡಾ. ನಿಕೋಲಾ ಟೇಸಲಾರವರು ವಿಜ್ನಾನ ಮತ್ತು ಟೆಕ್ನೋಲೊಜಿ ಮತ್ತು ಅದರಿಂದ ವಿಕಾಸಗೊಳುವ ಉದ್ಯೋಗಗಳ ವಿಭಾಗಳಿಗೆ ನಿಜವಾದ ಪ್ರೇರಕರು.


ಡಾ. ನಿಕೋಲಾ ಟೇಸಲಾರವರ ಈ ನಿರ್ಮಿತಿಯ ಜೊತೆ ಇನ್ನೊಂದು ಸಂಶೋಧನೆಯು ಸಂಭವಿಸಿದೆ. ಇದರ ವೈಶಿಷ್ಠ್ಯವೆಂದರೆ ಇದನ್ನು "ಶ್ಯಾಡೋಗ್ರಾಫ್ಸ್" ಎಂದು ಕರೆಯಲಾಗಿ ಜೀವಾಣುಗಳಿಗಾಗುವ ಪರಿಣಾಮಗಳ ಬಗ್ಗೆ ಅಭ್ಯಾಸ ಮಾಡಿದರು. ಹಾಯ್ ಫ್ರಿಕ್ವೆನ್ಸಿ ಎಲೆಟ್ರಿಕಲ್ ಕರಂಟ್ಸ್ ಮೇಲೆ ಕೆಲಸ ಮಾಡುವಾಗ ಡಾ. ಟೇಸಲಾರವರು ಅವರ ಪ್ರಯೋಗಶಾಲೆಯಲ್ಲಿಟ್ಟ ಅವರ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳಿಗೆ ಬಹಳ ಗೂಢವಾದ ಹಾನಿಯಾದದ್ದನ್ನು ಗಮನಿಸಿದರು. ಇದು ಡಾ. ಟೇಸಲಾರವರಲ್ಲಿದ್ದ ಜಿಜ್ನಾಸೆಯನ್ನು ಹೆಚ್ಚಿಸಿ ಮುಂದೆ ಅವರು ಅದರ ಪರಿಣಾಮಗಳ ಪರೀಕ್ಷಣೆಯನ್ನು ಮಾಡಲೆಂದು ವಿವಿಧ ರೀತಿಯಲ್ಲಿ ಪ್ರಯೋಗಗಳನ್ನು ಮಾಡಿದರು. ಈ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಪ್ರಯೋಗ ಮಾಡುವಾಗ ಅವರು ಬಹಳ ವಿಲಕ್ಷಣ ನಮೂನೆಯನ್ನು ಗಮನಿಸಿದರು ಮತ್ತು ಅದನ್ನು ಅವರು "ಶ್ಯಾಡೋಗ್ರಾಫ್ಸ್" ಎಂದು ಕರೆದರು. ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಪ್ರಯೋಗ ಮಾಡಲೆಂದು ಡಾ. ನಿಕೋಲಾ ಟೇಸಲಾರವರು ವ್ಯಾಕ್ಯುಮ್ ಟ್ಯೂಬಿನ ನಿರ್ಮಾಣ ಮಾಡಿದರು.  ಈ ಪ್ರಯೋಗಗಳಲ್ಲಿ ಡಾ. ಟೇಸಲಾರವರೇ ತಯಾರಿಸಿದ "ಟೇಸಲಾ ಕಾಯಿಲ್" ಎಂದು ಕರೆಯಲ್ಪಡುವ ಕಾಯಿಲನ್ನು ವ್ಯಾಕ್ಯುಮ್ ಟ್ಯೂಬ್ ನ್ನು ನಡೆಸಲು ಉಪಯೋಗಿಸಲಾಯಿತು. ಮುಂದೆ ಈ ಪ್ರಯೋಗಗಳನ್ನು ಪ್ರತ್ಯಕ್ಷವಾಗಿ ಮಾಡುತ್ತಿರುವಾಗ ಬಹಳ ಸೂಕ್ಷ್ಮ ಕಣಗಳಿಂದ ತಯಾರಾಗುವ ಕಿರಣಗಳನ್ನು ಡಾ. ಟೇಸಲಾರವರು ಗಮನಿಸಿದರು ಮತ್ತು ಈ ಕಿರಣಗಳು ಮಾನವನ ಶರೀರದ ಒಳಗೋಗಿ ಬರುವ ಕ್ಷಮತೆ ಪಡೆದಿದ್ದವು ಆದರೆ ಅವುಗಳಿಗೆ ಮನುಷ್ಯನ ಶರೀರದ ಎಲಬುಗಳು ಅಡ್ಡ ಬರುತ್ತಿರುವ ಕಾರಣದಿಂದ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಅದರ ಪ್ರತಿಬಿಂಬಗಳು (ಇಮ್ಯಾಜೆಸ್) ತಯಾರಾಗುತ್ತಿದ್ದವು.

ಇದರ ನಂತರ ಅವರ ಪ್ರಯೋಗಗಳ ಪರೀಕ್ಷಣೆಯ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರು ವ್ಯಾಕುಮ್ ಟ್ಯೂಬಿನ ಸಹಾಯದಿಂದ ಅವರ ಮಿತ್ರರಾದ ಮಾರ್ಕ್ ಟ್ವಾಯಿನ್ ರವರ ( ಅಮೇರಿಕೆಯ ಪ್ರಸಿದ್ಧ ಲೇಖಕ ಹಾಗು ಹಾಸ್ಯಗಾರ) ಇಮ್ಯಾಜೆಸ್ ತೆಗೆಯಲು ಹೋದಾಗ ಶ್ಯಾಡೋಗ್ರಾಫ್ ಇಮ್ಯಾಜೆಸ್ ನ್ನು ತಯಾರಿಸಿದರು. ಆಶ್ಚರ್ಯಕರವೆಂದರೆ ಟ್ವಾಯಿನ್ ರವರ ಆಕೃತಿಯ ಪ್ರತಿಬಿಂಬವನ್ನು ತೋರಿಸುವ ಬದಲು ಅದೇ ಕೋಣೆಯಲ್ಲಿ ಫೋಟೋಗ್ರಾಫಿಕ್ ಪ್ಲೇಟಿನ ಹತ್ತಿರ ಕ್ಯಾಮೆರದ ಲೆಂಸನ್ನು ಸರಿಮಾಡಲು ಇಟ್ಟಿದ್ದ ಸ್ಕ್ರೂವನ್ನು ತೋರಿಸಿತು. ಇದರಿಂದಾಗಿ ಅಲ್ಲದೇ ಹಾಗೆಯೇ ಅದರಲ್ಲಿ ಅವರು ಮುಂದೆ ಮಾಡಿದ ಪ್ರಯೋಗಗಳಿಂದಾಗಿ ನಿಜವಾಗಿಯೂ ಮಾನವನ ಶರೀರದೊಳಗಿನ ಶ್ಯಾಡೋಗ್ರಾಫ್ ಇಮ್ಯಾಜೆಸ್ ಗಳನ್ನು ಪಡೆಯುವುದರಲ್ಲಿ ಡಾ. ಟೇಸಲಾರವರು ಯಶಸ್ವಿಯಾದರು. ಹಲವಾರು ವರ್ಷಗಳ ನಂತರ ಭೌತವಿಜ್ನಾನಿಗಳು ಈ ಕಣಗಳನ್ನು ಫೋಟೋನ್ಸ್ ಮತ್ತು ಗೂಢವಾದ ಕಿರಣಗಳನ್ನು ಎಕ್ಸ್ ರೇ ಎಂದು ವರ್ಣಿಸಿದರು. ಡಾ. ಟೇಸಲಾರವರ ಕ್ಷ-ಕಿರಣಗಳ (ಎಕ್ಸ್ ರೇಜ್ಸ್)  ಶೋಧನೆಗಳಿಗೆ ಮಾಡಿದ ಸಮರ್ಪಣೆಯನ್ನು ಜನಸಾಮಾನ್ಯರಿಗೆ ಮತ್ತು ವೈಜ್ನಾನಿಕ ಸಮಾಜಕ್ಕೆ ತಿಳಿಯದಿರಲು ಕಾರಣಗಳೆಂದರೆ  ನಿವ್ ಯಾರ್ಕಿನ ಅವರ ಪ್ರಯೋಗಶಾಲೆಗೆ ಹಚ್ಚಿದ ಬೆಂಕಿಯೇ ಮುಖ್ಯ ಕಾರಣವಾಗಿತ್ತು. ೧೮೯೫ರ ಮಾರ್ಚ್ ೧೩ ರಂದು ಹಚ್ಚಿದ ಬೆಂಕಿಯಲ್ಲಿ ಅವರು ಮಾಡಿದ ಎಲ್ಲಾ ಕೆಲಸಗಳನ್ನು ಕಳೆದುಕೊಂಡರು. ೧೮೯೫ ನವೆಂಬರ್ ೮ ರಂದು ಈ ಘಟನೆಯ ಕೆಲವೇ ತಿಂಗಳಿನ ಒಳಗೆ ವಿಲ್ಹೆಲ್ಮ್ ಕೊನ್ ರಾಡ್ ರೊಂಟ್ಜೆನ್ ಎಂಬ ವೈಜ್ನಾನಿಕನು ಅವರ ಕ್ಷ-ಕಿರಣಗಳ ಶೋಧನೆಯನ್ನು ಪ್ರಕಾಶನೆ ಮಾಡಿದರು ಮತ್ತು ನಂತರ ಈ ಶೋಧನೆಗಾಗಿ ಭೌತಶಾಸ್ತ್ರದ ನೋಬೆಲ್ ಪ್ರಾಯಿಜ್ ನ್ನು ಪಡೆದರು. ಅವರ ಪ್ರಯೋಗಶಾಲೆಯು ಸುಟ್ಟಿ ಮತ್ತು ಅವರು ಮಾಡಿದ ಎಲ್ಲಾ ಕೆಲಸಗಳನ್ನು ಕಳೆದುಕೊಂಡರು ಕೂಡ ಡಾ. ಟೇಸಲಾರವರು ಅವರ ಕ್ಷ-ಕಿರಣದ ಶೋಧನೆಗೆ ರೊಂಟ್ಜೆನ್ ಯವರಿಗೆ ಪೂರ್ಣ ಗಣ್ಯತೆ ಕೊಟ್ಟರು. ಅದಲ್ಲದೆ ಡಾ. ಟೇಸಲಾರವರು ಅವರ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ತೆಗೆದ ಇಮ್ಯಾಜೆಸ್ ಗಳನ್ನು ರೋಂಟ್ಜೆನ್ ರವರಿಗೆ ಕಳುಹಿಸಿದರು. ಅದನ್ನು ಸ್ತುತಿಸುವಾಗ ರೊಂಟ್ಜೆನ್ ರವರು ಇಂತಹ ಆಧುನಿಕ ಇಮ್ಯಾಜೆಸ್ ಗಳನ್ನು ಕಳುಹಿಸಿದಕ್ಕಾಗಿ ವಿನಯಶೀಲತೆಯಿಂದ ಡಾ. ಟೇಸಲಾರವರಿಗೆ ಧನ್ಯವಾದ ಹೇಳಿದರು. ನಿಜವಾಗಿಯೂ ಇಂತಹ ನಿಸ್ವಾರ್ಥ ನಿರಂಹಕಾರದ ಕೆಲಸಗಳನ್ನು ನೋಡಿದಾಗ ಡಾ. ಟೇಸಲಾರವರು ಲೋಕಪ್ರಿಯತೆ ಹಾಗು ಪ್ರಸಿದ್ಧಿಯ ಹಿಂದೆ ಇರದೆ ಅವರು ಜನಸಾಮಾನ್ಯರ ಜೀವನದ ಉತ್ತಮತೆಗಾಗಿ ಹಾಗು ವಿಜ್ನಾನದ ಉನ್ನತಿಯನ್ನು ಇಚ್ಛಿಸುತ್ತಿದ್ದರೆಂದು ನಮಗೆ ತಿಳಿಯುತ್ತದೆ. ಕೇವಲ ಒಬ್ಬ ನಿಜ ಭಕ್ತನು ಮತ್ತು ಪರಮಾತ್ಮನಲ್ಲಿ ಬಲವತ್ತರದ ನಂಬಿಕೆಯುಳ್ಳವನು ಮಾತ್ರ ಮಾಡಲು ಸಾಧ್ಯ.

ಡಾ. ಟೇಸಲಾರವರು ಅವರ ಕ್ಷ-ಕಿರಣಗಳ ಸಂಶೋಧನೆಗಳನ್ನು ತನ್ನ ಹೊಸದಾಗಿ ಕಟ್ಟಿದ ಪ್ರಯೋಗಶಾಲೆಯಲ್ಲಿ ಮುಂದುವರಿಸಿದರು ಮತ್ತು ೧೮೯೫ ರ ಜೀವ ನಾಶಕ ಹಚ್ಚಿದ ಬೆಂಕಿಯ ನಂತರ ಕೂಡ ಅವರು ಕ್ಷ-ಕಿರಣದ ಉಪಯೋಗ ಹಾಗು ಜೀವಾಣುಗಳಿಗಾಗುವ ಪರಿಣಾಮಗಳಲ್ಲಿ ಬಹಳ ಮಹತ್ವದ ಶೋಧನೆಗಳನ್ನು ಕಂಡು ಹಿಡಿದರು ಮತ್ತು  ಅವರ ಕ್ಷ-ಕಿರಣದ ಶೋಧನೆಗಾಗಿ ಅವರಿಗೆ ಸಿಗಬೇಕಾದ ಗಣ್ಯತೆಯು ಸಿಗದಿದ್ದಾಗಲು ಕೂಡ ಅದನ್ನು ಮುಂದುವರಿಸಿದರು. ಮುಂದಿನ ಲೇಖನದಲ್ಲಿ ಕ್ಷ-ಕಿರಣದ ಕ್ಷೇತ್ರದಲ್ಲಿ ಶೋಧನೆ ಮತ್ತು ಡಾ.ನಿಕೋಲಾ ಟೇಸಲಾರವರ ಹೆಚ್ಚಿನ ಸಮರ್ಪಣೆಯನ್ನು ನೋಡಬಹುದು.

|| ಹರಿ ಓಂ || ಶ್ರೀರಾಮ || ಅಂಬಜ್ನ ||        

http://www.aniruddhafriend-samirsinh.com/nikola-tesla-xrays/

Friday 29 May 2015

ಡಾ. ನಿಕೋಲಾ ಟೇಸಲಾರವರ ಮಾನವ ಕುಲಕ್ಕಾಗಿ ಮಾಡಿದ ಕ್ಷ-ಕಿರಣದ ಸಂಶೋಧನೆ

(ಡಾ. ನಿಕೋಲಾ ಟೇಸಲಾಸ್ ಎಕ್ಸರೇ ರಿಸರ್ಚ್ ಫೊರ್ ಮ್ಯಾನ್ ಕೈಂಡ್)

ವಿವಿಧ ಹೊಸ ಅದ್ಭುತ ಸಂಕಲ್ಪನೆಗಳು ಹಾಗು ಶೋಧನೆಗಳ ನಿರ್ಮಾಣದ ಮೇಲೆ ಕೆಲಸ ಮಾಡುವದು ಡಾ. ನಿಕೋಲಾ ಟೇಸಲಾರವರ ನಿತ್ಯದ ದಿನಚರಿಯಾಗಿತ್ತು. ಅವರ ಶೋಧನೆಗಳಿಗೆ ಸ್ಪೂರ್ಥಿ ಕೊಡಲು ಹಾಗು ನಿರ್ಮಾಣಗಳಿಗೆ ಸಂಯೋಜಿತವಾಗಿರುವ ಕೇವಲ ಒಂದೇ ಪರಮಶ್ರೇಷ್ಠ ಹಾಗು ಬಲವಾದ ಇಚ್ಛೆಯೆಂದರೆ ಡಾ. ಟೇಸಲಾರವರಿಗೆ ವಾಡಿಕೆಯಲ್ಲಿದದ್ದನ್ನು ತ್ಯಜಿಸಿ ಮಾನವನ ಜೀವನವನ್ನು ಸುಖದಾಯಕ ಮಾಡುವದು. ಡಾ. ಟೇಸಲಾರವರಿಗೆ ಕ್ಷ-ಕಿರಣದ(ಎಕ್ಸರೇ) ನಿರ್ಮಾಣಕ್ಕಾಗಿ ಗಣ್ಯತೆ ಸಿಗದಿದ್ದರೂ ಕೂಡ ಅವರಿಗೆ ತಂತಿರಹಿತ ವಿದ್ಯುತಚ್ಛಕ್ತಿಯಂತೆ, ಕ್ಷ-ಕಿರಣಗಳನ್ನು ಕೂಡ ಸರಿಯಾಗಿ ಉಪಯೋಗಿಸದಿದ್ದಲ್ಲಿ ಅಥವಾ ಅನುಚಿತ ಕೈಯಲ್ಲಿದ್ದರೆ ಮಾನವ ಕುಲವನ್ನು ಬಹಳ ಗಂಡಾಂತರ ಪರಿಸ್ಥಿತಿಯಲ್ಲಿ ಹಾಕಬಹುದೆಂದು ತಿಳಿದಿದ್ದರು. ಆದ್ದರಿಂದ ಡಾ. ಟೇಸಲಾರವರು ತನ್ನ ಹ್ಯುಸ್ಟನ್ ಸ್ಟ್ರೀಟಿನ ಪ್ರಯೋಗಶಾಲೆಯಲ್ಲಿ  ಕ್ಷ-ಕಿರಣದ ಸಂಶೋಧನೆಗಳನ್ನು ತೀವ್ರತೆಯಿಂದ ಮಾಡತೊಡಗಿದರು. ಡಾ. ನಿಕೋಲಾ ಟೇಸಲಾರವರು ಕ್ಷ-ಕಿರಣದ ಟ್ಯುಬ್ಸ್ ಗಳ ಮೇಲೆ ಕೆಲಸ ಮಾಡುವಾಗ ಜೀವಾಣುಗಳಿಗೆ ಆಗುವ ಅಪಾಯಗಳನ್ನು ಹೇಳುವ ಮೊದಲ ವೈಜ್ನಾನಿಕರಾಗಿದ್ದರು. ಕ್ಷ-ಕಿರಣದ ಟ್ಯುಬ್ಸ್ ಗಳ ಸಂಪರ್ಕದಲ್ಲಿ ಬಹಳ ಹೆಚ್ಚು ಸಮಯದ ಕಾಲವಿದ್ದರೆ ಮಾನವನ ಶರೀರಕ್ಕೆ ಹಾನಿಕಾರಕ ಪರಿಣಾಮಗಳಾಗುವದು ಎಂದು ಗಮನ ಸೆಳೆದರು. ತ್ವಚೆಯಲ್ಲಿ ದೀರ್ಘ ಬದಲಾವಣೆಗಳು ಅಂದರೆ ಕೆಂಪಾಗುವದು, ನೋವು, ಬಾವು ಹಾಗೆಯೇ ದೀರ್ಘ ಕಾಲದ ಅದರ ಪ್ರಭಾವ ಅಂದರೆ ತಲೆಕೂದಲನ್ನು ಕಳೆದು ಕೊಳ್ಳುವದು ಹಾಗು ಅನಿಚ್ಛಿತ ಉಗುರುಗಳ ಬೆಳೆಯುವಿಕೆಯನ್ನು ವಿವರಿಸಿದರು. ಕ್ಷ-ಕಿರಣಗಳ ಮೇಲೆ ಕೆಲಸ ಮಾಡುತ್ತಿರುವಾಗ ಕಣ್ಣಿನಲ್ಲಿ ಆಕಸ್ಮಿಕ ನೋವು ಹಾಗು ಕಣ್ಣಿನಲ್ಲಿ ಉರಿ ಬರುವುದನ್ನು ಗಮನಿಸಿದರು. ಕಣ್ಣಿನ ನೋವು ಹಾಗು ಉರಿ ಬರುವ ಕಾರಣವೆಂದರೆ ಕತ್ತಲೆಯಲ್ಲಿ ಫ್ಲೊರೊಸೆಂಟ್ ಸ್ಕ್ರೀನನ್ನು ಬಹಳ ಸಮಯದ ತನಕ ನಿರಂತರವಾಗಿ ನಿರೀಕ್ಷಣೆ ಮಾಡುವದರಿಂದ ಕಣ್ಣಿನ ಮೇಲೆ ಬೀಳುವ ಶ್ರಮದಿಂದಾಗಿ ಆಗುವದು ಎಂದು ತಿಳಿಯಲಾಯಿತು. 

Dr. Nikola Tesla
Roentgen’s letter to Dr. Tesla dated July 20th, 1901. Rontgen writes: “Dear Sir! You have surprised me tremendously with the beautiful photographs of wonderful discharges and I tell you thank you very much for that. If only I knew how you make such things! With the expression of special respect I remain yours devoted – W. C. Roentgen.”

(ರೊಂಟ್ಜೆನ್ ರವರು ಡಾ.ಟೇಸಲಾರವರಿಗೆ ೨೦ ಜುಲ್ಯ ೧೯೦೧ ರಂದು ಬರೆದ ಪತ್ರದ ಪ್ರಕಾರ, ಡೀಯರ್ ಸರ್,   ನೀವು ನನಗೆ ನಿಮ್ಮ ಅದ್ಭುತವಾಗಿ ಪ್ರವಾಹಿಸುವ ಸುಂದರವಾದ ಫೋಟೊಗಳಿಂದ ಪ್ರಚಂಡ ಆಶ್ಚರ್ಯ ಮಾಡಿರುವಿರಿ.  ಮತ್ತು ಅದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಇಂತಹದನ್ನು ನೀವು ಹೇಗೆ ಮಾಡುತ್ತಿರೆಂದು ನನಗೆ ತಿಳಿಯಬೇಕಾಗಿದೆ. ಬಹಳ ಆದರ ಪೂರ್ವಕವಾಗಿ ನಾನು ನಿಮ್ಮ ದೃಢ ನಿಷ್ಠಾವಂತನಾಗಿರುವೆ.)

ಡಾ. ನಿಕೋಲಾ ಟೇಸಲಾರವರು ಹೇಳಿರುವರು, ಕ್ಷ-ಕಿರಣಗಳ ಟ್ಯೂಬ್ಸ್ ಗಳನ್ನು ಬಹಳ ಸುರಕ್ಷಿತವಾದ ಅಂತರದಲ್ಲಿ ಇಟ್ಟರೆ ಅಥವಾ ಕ್ಷ-ಕಿರಣಗಳ ಸಂಪರ್ಕಗಳ ಸಮಯವನ್ನು ಕಡಿಮೆ ಮಾಡಿದರೆ ಕ್ಷ-ಕಿರಣಗಳಿಂದಾಗುವ ಅಪಾಯಕಾರಿ ಪರಿಣಾಮಗಳನ್ನು ಕಡಿಮೆ ಮಾಡಬಹುದು . ಡಾ. ಟೇಸಲಾರವರು ಕ್ಷ-ಕಿರಣಗಳನ್ನು ಶೋಷಿಸಿ ಬಹಳ ಕಡಿಮೆ ಪ್ರಮಾಣದಲ್ಲಿ ಬೇಕಾದಷ್ಟೇ ಕಿರಣಗಳು ಮನುಷ್ಯನ ಶರೀರದೊಳಗೆ ಪ್ರವೇಶಿಸಿ ಹೊರ ಬರುವ ಢಾಲಿನಂತಿರುವ ತಡೆಯನ್ನು (ಶೀಲ್ಡ್) ಉಪಯೋಗಿಸುವ ಮೂರನೇಯ ಪರ್ಯಾಯವನ್ನು ಸಹ ಸೂಚಿಸಿದರು. ಡಾ. ಟೇಸಲಾರವರು ಅಲ್ಯುಮಿನಿಯಮ್ ತಂತಿಗಳನ್ನು ಭೂಮಿಗೆ ಜೋಡಿಸಿದಾಗ ಅದು ಅಪಾಯಕಾರಿ ಕ್ಷ-ಕಿರಣಗಳ ರೇಡಿಯೆಶನ್ ಗಳನ್ನು ಶೋಷಿಸುವಂತಹ ಮಾನವನಿಗಾಗಿ ಸುರಕ್ಷಿತವಾಗಿರುವ ರಕ್ಷಕ ತಡೆಯನ್ನು (ಶೀಲ್ಡ್) ತಾವೇ ಸ್ವತ: ತಯಾರಿಸಿದರು. ಡಾ. ಟೇಸಲಾರವರು ಉಚ್ಚ ಗುಣಧರ್ಮದ ಕ್ಷ-ಕಿರಣದ ಫೋಟೊಗ್ರಾಫ್ಸ್ ಗಳನ್ನು ತಯಾರಿಸುವಾಗ ಸಂಬಂಧಿತ ವಸ್ತುವನ್ನು ಮತ್ತು ಫೋಟೊಗ್ರಾಫಿಕ್ ಪ್ಲೇಟನ್ನು ಸರಿಯಾದ ಅಂತರದಲ್ಲಿಟ್ಟು ನಂತರ ಸಂಪರ್ಕದ ಸಮಯವನ್ನು ಕಡಿಮೆಮಾಡಿ ಪ್ರದರ್ಶಿಸಿ ತೋರಿಸಿದರು. ಮಿ. ವಿಲ್ಲಿಯಮ್ ರೊಂಟ್ಜೆನ್ (ಇವರನ್ನು ಇತಿಹಾಸದಲ್ಲಿ ಕ್ಷ-ಕಿರಣಗಳ ನಿರ್ಮಾತನೆಂದು ತಿಳಿಸಲಾಗಿದೆ) ರವರು ಕೂಡ ಡಾ. ಟೇಸಲಾರವರು ತಯಾರಿಸಿದ ಕ್ಷ-ಕಿರಣದ ಪ್ರತಿಬಿಂಬಗಳು ಬಹಳ ಉಚ್ಚ ಗುಣಧರ್ಮದಾಗಿದೆ ಎಂದು ಪ್ರಶಂಸಿ ತನ್ನಿಂದ ಕೂಡ ಅಷ್ಟು ಒಳ್ಳೆಯ ಗುಣಧರ್ಮದ ಕ್ಷ-ಕಿರಣಗಳ ಪ್ರತಿಬಿಂಬಗಳನ್ನು ತಯಾರಿಸಲು ಸಾಧ್ಯವೇ ಎಂದು ವಿಸ್ಮಯಪಟ್ಟರು. ರೊಂಟ್ಜೆನ್ ತನ್ನ ವಿಚಾರಗಳನ್ನು ಒಂದು ಪತ್ರದ ಮೂಲಕ ವ್ಯಕ್ತ ಪಡಿಸಿ ಅದನ್ನು ಡಾ. ಟೇಸಲಾರವರಿಗೆ ಕಳುಹಿಸಿದರು. ಈ ಪತ್ರವು ನಿಜವಾಗಿಯೂ ಅವರ ಸಮಕಾಲೀನ ವ್ಯಕ್ತಿಯಿಂದ ಒಬ್ಬ ವೈಜ್ನಾನಿಕನ ಮೇಲೆ ಸುರಿಸಿದ ಪ್ರಾಮಾಣಿಕ ಪ್ರಶಂಸೆಯಾಗಿತ್ತೆಂದು ತೋರಿಸಿತು.

ಇದರ ಮೊದಲು ಡಾ. ನಿಕೋಲಾ ಟೇಸಲಾರವರ ತಂತಿರಹಿತ ವಿದ್ಯುತಚ್ಛಕ್ತಿಯ ಉಪಯೋಗದ ಬಗ್ಗೆ ಹಾಗು ನಂತರ ಅದನ್ನು ಸುರಕ್ಷಿತಗೊಳಿಸಿ ಒಬ್ಬ ಸಾಧಾರಣ ಮನುಷ್ಯನು ಸಹ ಉಪಯೋಗಿಸುವಂತೆ ಮಾಡಿದರೆಂದು ನಾವು ಓದಿದ್ದೇವೆ. ಡಾ. ಟೇಸಲಾರವರು ನಿರ್ಭಯದಿಂದ ತನ್ನ ಬಗ್ಗೆ ವಿಚಾರ ಮಾಡದೆ ಅಥವಾ ನೋವಿನ ಬಗ್ಗೆ ಚಿಂತಿಸದೆ ಅಥವಾ ಸಂಶೋಧನೆಯ ಸಮಯದಲ್ಲಿ ಬರುವ ಅಪಾಯಗಳನ್ನು ವಿಚಾರ ಮಾಡದೆ ಕೆಲಸ ಮಾಡಿದರು. ಹಾಗೆಯೇ ಅದನ್ನು ನಾವು ಇಲ್ಲಿ ನೋಡಬಹುದು. ಕ್ಷ-ಕಿರಣಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಗೊತ್ತಿದ್ದರು ಕೂಡ ಕೇವಲ ಒಂದೇ ಉದ್ದೇಶದಿಂದ ಅಂದರೆ ಈ ಕಿರಣಗಳನ್ನು ಸುರಕ್ಷಿತವಾಗಿ ಮಾಡಿ ಮತ್ತು ಅದನ್ನು ಮಾನವನಿಗಾಗಿ ಉಪಯೋಗವಾಗುವಂತೆ ಮಾಡಲೆಂದು ಡಾ. ಟೇಸಲಾರವರು ತನ್ನ ಕಠಿಣ ಪ್ರಯೋಗಗಳನ್ನು ಮುಂದುವರಿಸಿದರು. ಅದಲ್ಲದೆ ಡಾ. ಟೇಸಲಾರವರು ಕ್ಷ-ಕಿರಣಗಳ ಕ್ಲಿನಿಕಲ್ (ಕಾಯಿಲೆಗೆ ಸಂಬಂಧಪಟ್ಟ) ಲಾಭಗಳನ್ನು ಅಂದರೆ ಬಾಹ್ಯವಸ್ತುವಿನ ನಿರ್ದಿಷ್ಟ ಸ್ಥಳವನ್ನು ಹಾಗು ಪುಪ್ಪುಸದ ಕಾಯಿಲೆಗಳನ್ನು ಪತ್ತೆ ಹಚ್ಚಬಹುದು ಎಂದು ವಿವರಿಸಿದರು. ಡಾ. ಟೇಸಲಾರವರು ಕ್ಷ-ಕಿರಣಗಳಿಗೆ ನಿಬಿಡವಾದ ಶರೀರವು ಅಪಾರದರ್ಶಕವಾಗಿರುವದು. ಎಂದು ಬಹಳ ಮಹತ್ವದ ಅಭಿಪ್ರಾಯ ಕೊಟ್ಟಿರುವರು. ಕ್ಷ-ಕಿರಣಗಳ ಉಪಯೋಗವನ್ನು ಸರಿಯಾದ ರೀತಿಯಲ್ಲಿ ಮಾಡುವ ಬಗ್ಗೆ ಜನಜಾಗೃತಿ ಮಾಡಲು, ಡಾ. ಟೇಸಲಾರವರು ಕ್ಷ-ಕಿರಣಗಳು ಮತ್ತು ಜೀವಶಾಸ್ತ್ರಗಳಿಗೆ ಸಂಬಂಧಿತ ಅಪಾಯಗಳು (ಎಕ್ಸ್- ರೇಜ್ ಆಂಡ್ ದೆರ್ ಬಾಯೊಲೊಜಿಕಲ್ ಹ್ಯಾಝರ್ಡ್ಸ್ ) ಈ ಶೀರ್ಷಕದ ಲೇಖನಗಳ ಸರದಿಯನ್ನು ಹಲವು ವೈಜ್ನಾನಿಕ ಜರ್ನಲ್ಸ್ ಗಳಲ್ಲಿ ಪ್ರಕಾಶಿತ ಮಾಡಿದರು ಮತ್ತು ಆ ವಿಷಯಗಳ ಮೇಲೆ ಬೇರೆ ಬೇರೆ ಲೆಕ್ಚರ್ಸ್ ಗಳನ್ನು ಭಿನ್ನ ಭಿನ್ನ ಜನರ ಮುಂದೆ ಹೇಳಿದರು. ಈ ವಿಷಯದ ಮೇಲೆ ಬಹಳ ಮಹತ್ವದ ಲೆಕ್ಚರ್ ೧೮೯೭ರಲ್ಲಿ ನಿವ್ ಯಾರ್ಕ್ ಎಕಾಡಮಿ ಆಫ್ ಸಾಯನ್ಸೆಸ್ ಇವರ ಮುಂದೆ ಹೇಳಿದ್ದರು. 

ಮುಂದೆ ಡಾ.ಟೇಸಲಾರವರು ಎಕ್ಸ್-ರೇ ರೇಡಿಯೆಶನನ್ನು ಸ್ಪೆಷಲ್ ವ್ಯಾಕುಮ್ ಟ್ಯೂಬಿನ ಮೂಲಕ ಪಡೆದರು ಇದು ಬೇರೆ ಏನೇ ಆಗಿರದೆ ಡಾ. ಟೇಸಲಾರವರೇ ತಯಾರಿಸಿದ ಎಕ್ಸ್-ರೇ ಬಲ್ಬುಗಳು ಆಗಿದ್ದವು. ಈ ಟ್ಯೂಬ್ಸ್ ಗಳು ಕ್ಷ-ಕಿರಣಗಳನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಉಷ್ಣತೆಯನ್ನು ಜನರೇಟ್ ಮಾಡುತ್ತಿದ್ದವು, ಹೀಗೆ ಅವರ ಎಕ್ಸ್-ರೇ ಟ್ಯೂಬ್ಸ್ ಗಳ ಒಳಗಿನ ಹೆಚ್ಚಿನ ಉಷ್ಣತೆ ಹಾಗು ವ್ಯಾಕುಮ್ ಟ್ಯೂಬ್ಸ್ ಗಳ ಒಳ ಬದಿಯ ಕರಗುವಿಕೆಯನ್ನು ತಪ್ಪಿಸಿ ಕೊಳ್ಳಲು ಡಾ. ಟೇಸಲಾರವರು ಟ್ಯೂಬಿನ ಜೊತೆ ಕೋಲ್ಡ್ ಬ್ಲಾಸ್ಟ್ ಆಫ್ ಎಯರ್ ನ ಮೇಲೆ ಆಧಾರಿತವಾದ ಕೂಲಿಂಗ್ ಸಿಸ್ಟಮನ್ನು ತಯಾರಿಸಿದರು ಮತ್ತು ಅಧಿಕವಾಗಿ ಟ್ಯೂಬನ್ನು  ತಣ್ಣಗಾಗಿರಿಸಲು ಅದನ್ನು ನಿರಂತರವಾಗಿ ಎಣ್ಣೆಯಲ್ಲಿ ಮುಳುಗಿರುವಂತೆ ಸಿಸ್ಟಮ್ ನ ಏರ್ಪಾಡು ಮಾಡಿಟ್ಟರು. ಇದು ಬೇರೆ ಯಾವುದೇ ತಾಂತ್ರಿಕ ಕೌಶಲ್ಯವಾಗಿರದೆ ಅದು ಇಂದಿನ ದಿನಗಳಲ್ಲಿ ವಿವಿಧ ಯಂತ್ರಗಳನ್ನು ಕೂಲಿಂಗ್ ಮಾಡಲು ಹಾಗು ಪ್ರಯೋಗಾತ್ಮಕವಾಗಿ ಸ್ಥಾಪಿಸಿರುವ ಬಹುತೇಕರಿಂದ ಅಂಗೀಕರಿತವಾದ ಆಯಿಲ್ ಕೂಲಿಂಗ್ ಸಿಸ್ಟಮ್ ಆಗಿದೆ.

ಇಂದಿನ ಕಾಲದಲ್ಲಿ ಕ್ಷ-ಕಿರಣಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳುವ ಮುಂಜಾಗೃತೆಯು ನಿಜವಾಗಿಯೂ ಡಾ. ಟೇಸಲಾರವರು ೧೦೦ ವರ್ಷಗಳ ಮೊದಲು ವಿವರಿಸಿದಂತೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹಲವಾರು ವೈಜ್ನಾನಿಕರ ನಂಬಿಕೆಯಾಗಿದೆ.

ಕ್ಷ-ಕಿರಣಗಳ ಆವಿಷ್ಕಾರದ ನಂತರ ಮತ್ತು ಡಾ. ನಿಕೋಲಾ ಟೇಸಲಾರವರು ಅದರ ಮೇಲೆ ವಿಸ್ತಾರವಾಗಿ ಮಾಡಿದ ಕೆಲಸಗಳನ್ನು, ಥೋಮಸ್ ಎಡಿಸನ್ಸ್ ಕಂಪನಿಯು ಕೂಡ ಪ್ರಯೋಗಪರೀಕ್ಷೆ ಮಾಡತೊಡಗಿತ್ತು ಹಾಗು ’ಕ್ಲಾರೆಂಸ್ ಡ್ಯಾಲ್ಲಿ" ಯವರನ್ನು ಕೆಲಸಕ್ಕೆ ತೆಗೆದುಕೊಂಡು ಅವರು ಕ್ಷ-ಕಿರಣದ ಬಲ್ಬ್ ಗಳನ್ನು ತಯಾರಿಸತೊಡಗಿ ಅದನ್ನು ಬಳಕೆಯಲ್ಲಿ ತಂದರು. ಆದರೆ ಎಕ್ಸ್-ರೇ ಬಲ್ಬುಗಳನ್ನು ಸರಿಯಾಗಿ ಉಪಯೋಗ ಮಾಡದರಿಂದ ಕೆಲವೇ ವರ್ಷಗಳಲ್ಲಿ ಡ್ಯಾಲ್ಲಿಯವರಿಗೆ ಅವರ ಎರಡು ಕೈಗಳಲ್ಲಿಯೂ ವ್ರಣವಾಗಿ ಬಾವು ಬಂದಿತು ಹಾಗು ನೋಯತೊಡಗಿತು. ಅದರ ನೋವು ಇಷ್ಟು ಹೆಚ್ಚಿನ ಪ್ರಮಾಣದಲ್ಲಿತ್ತೆಂದರೆ  ತ್ವಚೆಯ ಕ್ಯಾಂಸರ್ ಆಗಿ ಅವರ ಎರಡೂ ಕೈಗಳನ್ನು ವಿಚ್ಛೇದಿಸಬೇಕಾಯಿತು. ಡ್ಯಾಲ್ಲಿ ಮತ್ತು ಎಡಿಸನ್ ಅವರು ಡಾ. ಟೇಸಲಾರವರು ಪತ್ತೆ ಹಚ್ಚಿರುವಂತೆ ಮತ್ತು ಅವರು ಹೇಳಿದಂತೆ ಮುಂಜಾಗೃತೆಯ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಿದ್ದರೆ ಅನಾವಶ್ಯಕವಾಗಿ ಬಂದ ದುರಂತರವನ್ನು ತಳ್ಳಬಹುದಿತ್ತು ಆದರೆ ಡಾ. ಟೇಸಲಾರವರನ್ನು ಅವರು ತನ್ನ ಮಹಾಶತ್ರು ಎಂದು ತಿಳಿಯುತ್ತಿದ್ದರು. 

ಡಾ. ನಿಕೋಲಾ ಟೇಸಲಾರವರ ಕ್ಷ-ಕಿರಣದ ಶೋಧನೆಯು ಅವರು ಮಾಡುತ್ತಿರುವ ಕೆಲಸ ಹಾಗು ಹಾಯ್ ಫ್ರಿಕ್ವೆನ್ಸಿ ಎಲೆಕ್ಟ್ರಿಸಿಟಿಯ ಸಂಶೋಧನೆಯಿಂದ ಚಿಗುರಿ ಬಂದಿದೆ. ಅವರ ಹಾಯ್ ಫ್ರಿಕ್ವೆನ್ಸಿ ಎಲೆಕ್ಟ್ರಿಸಿಟಿಯ ಪ್ರಯೋಗಗಳನ್ನು ಮುಂದುವರಿಸಲು , ಡಾ. ಟೇಸಲಾರವರಿಗೆ ಹಾಯರ್ ವೋಲ್ಟೆಜ್ಸ್ ಬೇಕಾಗಿತ್ತು ಆದ್ದರಿಂದ ಪ್ರಯೋಗಗಳಿಗಾಗಿ ದೊಡ್ಡ ಸ್ಥಳದ ಆವಶ್ಯಕತೆ ಇತ್ತು. ೧೮೯೭ ರಲ್ಲಿ ಡಾ. ಟೇಸಲಾರವರು ವಾಯರ್ ಲೆಸ್ ಟ್ರಾಂಸ್ ಮಿಶನ್ ಆಫ್ ಪಾವರ್ ನ ಸಿಸ್ಟಮ್ ನ್ನು ಪೇಟೆಂಟ್ ಮಾಡಿದರು. ಪ್ರತಿಯೊಂದು ಕ್ಷಣ ಸರಿದಂತೆ ಡಾ. ಟೇಸಲಾರವರ ಸ್ವಪ್ನಗಳು ದೊಡ್ಡ ದೊಡ್ಡದಾಗಿ ಬೆಳೆಯತೊಡಗಿತು. ಅವರ ವಿಚಾರಗಳು ಅಸಾಧಾರಣವಾಗಿರುತ್ತಿದ್ದವು ಮತ್ತು ತಂತಿರಹಿತ ಎನರ್ಜಿಯನ್ನು ಸಮೀಪದ ಅಂತರಗಳಿಗೆ ಸ್ಥಳಾಂತರ ಮಾಡುವ ತನಕ ತನ್ನನ್ನು ಕುಂಠಿತ ಮಾಡಿರಲಿಲ್ಲ.
  
೧೮೯೮ ರ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರ ಕೌಶಲ್ಯವು ಹಾಯ್ ಫ್ರಿಕ್ವೆನ್ಸಿ ಎಲೆಕ್ಟ್ರಿಸಿಟಿಯ ಕ್ಷೇತ್ರದಲ್ಲಿ ಬಹಳ ಉಚ್ಚ ಸ್ಥರದಲ್ಲಿತ್ತು. ಡಾ. ಟೇಸಲಾರವರ ಕೆಲಸಗಳು ಇಷ್ಟು ಪ್ರಬಲವಾಗಿತ್ತೆಂದರೆ ಅವರು ಕೊಟ್ಟಿರುವ ಅವರ ಹಲವಾರು ನಿರ್ಮಾಣಗಳು ಹಾಗು ಸಂಶೋಧನೆಗಳನ್ನು ಭೂಮಂಡಲದಲ್ಲಿ ಇವತ್ತಿನ ಕಾಲಕ್ಕೂ ಯಾರಿಂದಲು ಕೂಡ ಮೀರಲು ಸಾಧ್ಯವಾಗಲಿಲ್ಲ. ಅದರಂತೆಯೇ ೧೮೯೫ರಲ್ಲಿ ಅವರ ನಿವ್ ಯಾರ್ಕಿನ ಪ್ರಯೋಗಶಾಲೆಗೆ ಆದ ಪ್ರಚಂಡ ಹಾನಿಯು ಕೂಡ ಅವರನ್ನು ಬಹಳ ಸಮಯದ ತನಕ ಹಿಂದಿಡಲು ಸಾಧ್ಯವಾಗಲಿಲ್ಲ. ಅವರು ತನ್ನ ಪ್ರಯೋಗಗಳನ್ನು ಕೂಡಲೇ ಹ್ಯುಸ್ಟನ್ ಸ್ಟ್ರೀಟಿನ ತನ್ನ ಪ್ರಯೋಗಶಾಲೆಯಲ್ಲಿ ಪ್ರಾರಂಭಿಸಿದರು. ಮತ್ತು ತನ್ನ ಅದ್ಭುತ ಶೋಧನೆಗಳನ್ನು ಮುಂದುವರಿಸಿದರು. 
Dr. Nikola Tesla

ಡಾ. ನಿಕೋಲಾ ಟೇಸಲಾರವರು ಹಾಯ್ ಫ್ರಿಕ್ವೆನ್ಸಿಯ ಮೇಲೆ ಯಾವಾಗ ಕೆಲಸ ಮಾಡತೊಡಗಿದರು, ಆಗ ಅವರು ತಂತಿರಹಿತ ಎಲೆಕ್ಟ್ರಿಸಿಟಿಯ ಟ್ರಾಂಸ್ ಮಿಶನ್ ಒಂದು ಕಡೆಯಿಂದ ಇನ್ನೊಂದೆಡೆಗೆ ಕಳುಹಿಸುವ ಶಕ್ಯತೆ ಬಹಳ ಇದೆಯೆಂದು ತಿಳಿದರು. ಪ್ರಸಿದ್ದ ನಾಯಗರಾ ಫಾಲ್ಸ್ ನ ಹಾಯಡ್ರೋಎಲೆಕ್ಟ್ರಿಕ್ ಪಾವರ್ ಪ್ಲಾಂಟ್  ತೆರೆಯುವ ಉತ್ಸವದಂದು ಜಗತ್ತಿನ ಇತಿಹಾಸದಲ್ಲಿ ಮೊದಲನೇಯ ಸಲ ಎಲೆಕ್ಟ್ರಿಕ್ ಪಾವರನ್ನು ಬಹಳ ದೂರದ ಅಂತರಕ್ಕೆ ಸ್ಥಳಾಂತರ ಮಾಡುವ ಕಾರ್ಯಸಾಧಿಸಿದರು. ಡಾ. ಟೇಸಲಾ ಹೇಳಿದರು, " ಒಂದು ಸ್ಟೇಶನ್ ನಿಂದ ಇನ್ನೊಂದು ಸ್ಟೇಶನ್ ಗೆ ಟ್ರಾಂಸ್ ಮಿಶನ್ ಆಫ್ ಪಾವರ್ ಯಾವುದೇ ಪ್ರಕಾರದ ತಂತಿಗಳನ್ನು ಜೋಡಿಸದೆ ಮಾಡಬಹುದು ಎಂದು ಈ ಕ್ಷೇತ್ರದಲ್ಲಿ ಆದ ಪ್ರಗತಿಯನ್ನು ನೋಡಿ ನನಗೆ ನನ್ನ ಒಂದು ಸ್ವಪ್ನದ ಪೂರ್ತತೆ ಆಗುವ ನಂಬಿಕೆಯಾಗಿದೆ.

ಹ್ಯುಸ್ಟನ್ ಸ್ಟ್ರೀಟಿನ ಪ್ರಯೋಗಶಾಲೆಯಲ್ಲಿ ಡಾ. ನಿಕೋಲಾ ಟೇಸಲಾರವರು ೨ ರಿಂದ ೪ ರ ತನಕ ಮೆಗಾವೋಲ್ಟ್ಸ್ ಗಳನ್ನು ಹಾಯ್ ಫ್ರಿಕ್ವೆನ್ಸಿ ಟ್ರಾಂಸ್ ಫೊರ್ಮರ್ ಉಪಯೋಗಿಸಿ ೨.೪೪ ಮೀಟರಿನ ಕಾಯಿಲ್ ಡಾಯಾಮೀಟರ್ ನ ಜೊತೆ ವೋಲ್ಟೆಜ್ ನ್ನು ಜನರೇಟ್ ಮಾಡಿದರು. ಆದರೆ ಈಗ ಡಾ. ಟೇಸಲಾರವರಿಗೆ ಇದಕ್ಕಿಂತ ಹೆಚ್ಚಿನ ಪ್ರಮಾಣದ ಹಾಯರ್ ಫ್ರಿಕ್ವೆನ್ಸಿಯ್ ಟ್ರಾಂಸ್ ಫೊರ್ಮರಿನ ಆವಶ್ಯಕತೆ ಇತ್ತು ಮತ್ತು ಕಾಯಿಲ್ ಡಾಯಾಮೀಟರ್ ೧೫ ಮೀಟರ್ ತನಕ ಬೇಕಾಗಿತ್ತು. ಆದ್ದರಿಂದ ಜಾಗೆಯ ಅಭಾವದಿಂದಾಗಿ ಡಾ.ಟೇಸಲಾರವರು ಅವರ ಪ್ರಯೋಗಶಾಲೆಗಾಗಿ ಹೊಸ ಜಾಗೆಯನ್ನು ಹುಡುಕತೊಡಗಿದರು.

ಈ ಸಮಯದಲ್ಲಿ ಎರಡು ವ್ಯಕ್ತಿಗಳು ಡಾ. ನಿಕೋಲಾ ಟೇಸಲಾರವರಿಗೆ ಮಿ.ಲಿಯೊನಾರ್ಡ್ ಕರ್ಟಿಸ್ ಸಹಾಯ ಮಾಡಲು ಮುಂದೆ ಬಂದರು. ಅವರು ಡಾ.ಟೇಸಲಾರವರ ಮಿತ್ರ ಹಾಗು ಅವರ ಪೇಟೆಂಟ್ ಗಳ ವಕೀಲರಾಗಿದ್ದರು. ಅವರು ಡಾ. ಟೇಸಲಾರವರಿಗೆ ಹೊಸ ಪ್ರಯೋಗಶಾಲೆಗಾಗಿ ಕೊಲೊರಾಡೊ ಸ್ಪ್ರಿಂಗ್ಸ್ ನಲ್ಲಿ ಜಮೀನನ್ನು ಮತ್ತು ಸಂಶೋಧನೆಗಾಗಿ ಪಾವರನ್ನು ಎಲ್ ಪಾಸೊ ಪಾವರ್ ಕಂಪನಿಯವರಿಂದ ದೊರಕಿಸಿಕೊಟ್ಟರು. ಮತ್ತೊಬ್ಬ ಸಹಾಯಕ ಕೊಲೊನೆಲ್ ಜಾನ್ ಜೇಕಬ್ ಆಸ್ಟರ್ ಎಂಬವನು ಮುಂದೆ ಬಂದನು. ಕೊಲೊನೆಲ್ ಜಾನ್ ಆಸ್ಟರ್ ಡಾ. ಟೀಸಲಾರವರಿಗೆ ೩೦,೦೦೦ ಡಾಲರ್ಸ್ ಧನಸಹಾಯ ಮಾಡಿದರು. ಆಸ್ಟರ್ ಅವರು ಜರ್ಮನಿಯಲ್ಲಿ ಜನಿಸಿದ ಅಮೇರಿಕನಿನ ಉದ್ಯೋಗಪತಿಯಾಗಿದ್ದು, ಆ ಸಮಯದದಲ್ಲಿ ಅಮೇರಿಕೆಯ ಒಬ್ಬ ಶ್ರೀಮಂತ ವ್ಯಕ್ತಿಯೆಂದು ತಿಳಿಯಲಾಗಿದ್ದರು.

ಡಾ. ನಿಕೋಲಾ ಟೇಸಲಾರವರು ಕೊಲೊರಾಡೊ ಸ್ಪ್ರಿಂಗ್ಸ್ ನಲ್ಲಿ ತನ್ನ ಹೊಸ ಸಂಶೋಧನೆಗಳನ್ನು ಮಾಡಲು ಹೆಜ್ಜೆ ಇಟ್ಟು  ಅವರಿಗಾಗಿ ಕಾಯುತ್ತಿರುವ ವೈಜ್ನಾನಿಕ ಅದ್ಭುತ ದೃಷ್ಟಾಂತಕ್ಕಾಗಿ ಸಿದ್ಧತೆ ಮಾಡತೊಡಗಿದರು.

|| ಹರಿ ಓಂ || ಶ್ರೀರಾಮ || ಅಂಬಜ್ನ ||

For Read in English - http://www.aniruddhafriend-samirsinh.com/dr-nikola-teslas-x-ray-research-mankind/