Wednesday 24 December 2014

ವ್ಹೆಜ್ ಚೀಜ್ ಮತ್ತು ನಾನ್ ವ್ಹೆಜ್ ಚೀಜ್ (ಶಾಕಾಹಾರಿ ಚೀಜ್ ಮತ್ತು ಮಾಂಸಹಾರಿ ಚೀಜ್)

ಚಾಯ್ ನೀಜ್ ಖಾದ್ಯಪ್ರಕಾರದ ಜೊತೆ ಈಗ ಇಟಾಲಿಯನ್, ಲೆಬನೀಜ್, ಕೋರಿಯನ್ ಅಂತಹ ಅನೇಕ ವಿದೇಶದ ಖಾದ್ಯಪ್ರಕಾರಗಳು ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಲೋಕಪ್ರಿಯವಾಗುತ್ತಿದೆ. ಈ ಖಾದ್ಯಪ್ರಕಾರದಲ್ಲಿ ಬಹಳ ಸಲ "ಚೀಜ್" ನ್ನು ಉಪಯೋಗಿಸಲಾಗುತ್ತಿದೆ. ಈ ಚೀಜ್ ನ ಪ್ರಕಾರವು ಭಾರತದಲ್ಲಿ ಅನೇಕ ವರ್ಷಗಳಿಂದ ಸಿಗುತ್ತಿದ್ದರು ಕೂಡ ಕಳೆದ ಹಲವು ವರ್ಷಗಳಲ್ಲಿ "ಚೀಜ್" ನ ಅಭಿರುಚಿಯು ಜನರಲ್ಲಿ ಬಹಳ ಹೆಚ್ಚಾಗಿದೆ. 

ಸದ್ಗುರು ಅನಿರುದ್ಧ ಬಾಪೂರವರು ( ಡಾ. ಅನಿರುದ್ಧ ಜೋಶಿ ) ದಿನಾಂಕ ೨೫ ಸಪ್ಟೆಂಬರ್ ೨೦೧೪ ರ ಹಿಂದಿ ಪ್ರವಚನದಲ್ಲಿ  " ವ್ಹೆಜ್ ಚೀಜ್ " ಮತ್ತು " ನಾನ್ ವ್ಹೆಜ್ ಚೀಜ್ " ಬಗ್ಗೆ ಮಾಹಿತಿಯನ್ನು ಹೇಳಿದರು. ಚೀಜ್, ಇಂದು ಅನೇಕರ ಬೆಳಗಿನ ಅಲ್ಪೋಪಹಾರದಿಂದ ರಾತ್ರಿಯ ಊಟದ ತನಕ ಸ್ಥಾನವನ್ನು ಪಡೆದಿದೆ. ಅದರ ಪ್ರಕಾರಗಳ ಬಗ್ಗೆ ಹಾಗು ಮಾಡುವ ಪ್ರಕ್ರಿಯೆಯ ವಿಷಯದಲ್ಲಿ ಬಹಳ ಕಡಿಮೆ ಜನರಿಗೆ ತಿಳಿದಿದೆ. ಆದ್ದರಿಂದ ಇದೊಂದು ಬಹಳ ಗಂಭೀರ ವಿಷಯವಾಗಿದೆ. ಆದರೆ ಇಂದು ಚೀಜ್ ಸ್ಯಾಂಡ್ ವೀಜ್, ಸೂಪ್. ಪರಾಠೆ, ಕೋಫ್ತಾ, ಪಾವ್ ಭಾಜಿ, ದೋಸೆ, ಪಕೋಡೆ, ಟೋಸ್ಟ್, ಸ್ಯಾಲಡ್, ರೋಲ್ಸ್, ಪೀಝಾ, ಬರ್ಗರ್ ಇಷ್ಟೇ ಅಲ್ಲದೆ ನಮ್ಮ ನಿತ್ಯದ ಕಾಯಿಪಲ್ಯೆಗಳ ರಸದಲ್ಲಿ ಮತ್ತು ನಾವು ಯಾವಾಗಲೂ ತಿನ್ನುವ ವಡಾಪಾವ್ ಗಳಲ್ಲಿ ಕೂಡ ಅದನ್ನು ಉಪಯೋಗಿಸಲಾಗುತ್ತಿದೆ. ಆದ್ದರಿಂದ ಈ ಚೀಜ್ ಬಗ್ಗೆ ಅಧಿಕವಾಗಿ ತಿಳಿದುಕೊಳ್ಳುವದು ಆವಶ್ಯಕವಾಗಿದೆ. ಆದ್ದರಿಂದ ಚೀಜ್ ಹೇಗೆ ಮಾಡುತ್ತಾರೆ ಎಂಬುದನ್ನು ಸಂಕ್ಷೇಪದಲ್ಲಿ ನೋಡುವ.

ಚೀಜ್ ಈ ಪದಾರ್ಥವು ಹಾಲಿನಿಂದ ಮಾಡಲಾಗುತ್ತದೆ. ಚೀಜ್ ಮಾಡುವಾಗ ಹಾಲನ್ನು ಕುದಿಸಿ ದಪ್ಪವಾಗಿ ಮಾಡುವ ಪ್ರಕ್ರಿಯೆಯಿದೆ. ಆದರೆ ಬಹಳ ಸಲ ಈ ಪ್ರಕ್ರಿಯೆಯನ್ನು ಬೇಗವಾಗಿ ಮಾಡಲೆಂದು ಅದರಲ್ಲಿ ಒಂದು ವಿಶಿಷ್ಟ ಪದಾರ್ಥ ಹಾಕಲಾಗುತ್ತದೆ ಅದರ ಹೆಸರು ರೆನೆಟ್ (Rennet) ಇದೆ. http://en.wikipedia.org/wiki/Rennet


ಆದರೆ ಈ ರೆನೆಟ್ ಎಲ್ಲಿಂದ ಬರುತ್ತದೆ ? ರೆನೆಟಿನ್ ಪಾರಂಪರಿಕ ಸ್ತ್ರೋತ ಅಂದರೆ ಗೋಮಾಂಸ. ದನದ ಅಥವಾ ದನದ ಕರುವಿನ ಹೊಟ್ಟೆಯಲ್ಲಿದ್ದ ಕರುಳಿನಲ್ಲಿ ರೆನೆಟ್ ಸಿಗುತ್ತದೆ, ಕಾರಣ ಸಸ್ತನ ಹಾಗು ಮೆಲುಕು ಹಾಕುತ್ತಿರುವ ಪ್ರಾಣಿಗಳ ಅನ್ನ ಪಚನದಲ್ಲಿ ಈ ರೆನೆಟ್ ನ ಆವಶ್ಯಕತೆ ಇರುತ್ತದೆ. ಈ ರೆನೆಟ್ ನ ಉಪಯೋಗ ಮಾಡಿ ಮಾಡಿದ ಚೀಜ್ ಗೆ " ನಾನ್ ವ್ಹೆಜ್ ಚೀಜ್ " ಹೇಳುತ್ತಾರೆ. ಆದ್ದರಿಂದ ಈ ರೆನೆಟ್ ನ್ನು ಹಾಕಿದ ಚೀಜ್ ನ್ನು ನಾವು ಯಾವಾಗ ತಿನ್ನುತ್ತೇವೆ ಆಗ ನಾವು ಅಪ್ರತ್ಯಕ್ಷರೀತಿಯಿಂದ ಗೋಮಾಂಸವನ್ನೇ ಭಕ್ಷಣ ಮಾಡುತ್ತಿರುತ್ತೇವೆ. ಭಾರತದ ಮಾರುಕಟ್ಟೆಗಳಲ್ಲಿ ವ್ಹೆಜಿಟೇರಿಯನ್ (ಶಾಕಾಹಾರಿ) ಚೀಜ್ ಕೂಡ ಸಿಗುತ್ತದೆ. ಅದನ್ನು ಕೆಲವು ಭಾರತದ ಕಂಪನಿಗಳು ಹಾಗು ಕೆಲವು ಮಲ್ಟಿನೇಶನಲ್ ಕಂಪನಿಗಳು ಉತ್ಪಾದಿಸಿದ್ದಾರೆ.

ಸನಾತನ ವೈದಿಕ ಧರ್ಮದಲ್ಲಿ ನಾವು ಆಕಳನ್ನು " ಗೋಮಾತಾ " ಎಂದು ನಂಬುತ್ತೇವೆ. ಶ್ರದ್ಧಾವಾನರ ೯ ಸಮಾನ ನಿಷ್ಠೆಯಲ್ಲಿ ಕೂಡ ಗೋಮಾತೆ, ಗಂಗಾಮಾತೆ ಮತ್ತು ಗಾಯತ್ರಿಮಾತೆಯರ ಉಲ್ಲೇಖವಿದೆ. ಆಕಳು ನಮಗಾಗಿ ಪಾವಿತ್ರೇಯ ಪ್ರತೀಕವಾಗಿದೆ.

ಚೀಜ್ ಮಾಡುವ ಪ್ರಕ್ರಿಯೆ ತಿಳಿಯದೆ ಅಜಾಗರೂಕತೆಯಿಂದಾಗಿ ಅನೇಕರಿಂದ "ನಾನ್ ವ್ಹೆಜ್" ಚೀಜ್ ತಿನ್ನಲಾಗುತ್ತದೆ. ಯಾರಿಗೆ ನಾನ್ ವ್ಹೆಜ್ ಚೀಜ್ ನ್ನು ತಿನ್ನುವುದನ್ನು ನಿಲ್ಲಿಸಲ್ಲಿಕ್ಕಿದೆ ಅವರು ಇಂದಿನ ಮುಂದೆ ಚೀಜ್ ಅಥವಾ ಚೀಜ್ ಹಾಕಿದ ಪದಾರ್ಥಗಳನ್ನು ತೆಗೆದುಕೊಳ್ಳುವಾಗ ಈ ಚೀಜ್ " ವ್ಹೆಜ್ ಚೀಜ್ " ಇದೆಯೇ ಅಥವಾ " ನಾನ್ ವ್ಹೆಜ್ ಚೀಜ್ " ಇದೆಯೇ ಎಂದು ಕೇಳುವದು ಆವಶ್ಯಕವಾಗಿದೆ. ಅನೇಕ ಸಲ ಉತ್ಪಾದಕರಿಂದ ಚೀಜ್ ನಲ್ಲಿ ರೆನೆಟ್ ಉಪಯೋಗಿಸಿದ್ದನ್ನು ಹೇತುಪೂರ್ವಕವಾಗಿ ಸ್ಪಷ್ಟೀಕರಿಸಲಾಗುವುದಿಲ್ಲ. ಆಗ ನಾವೇ ಜಾಗರೂಕರಾಗಿ ಹಾಗು ನಮ್ಮ ದಕ್ಷತೆಯನ್ನು ಉಪಯೋಗಿಸಬೇಕು. ಆದರೆ ಇದರ ಅರ್ಥ ಚೀಜ್ ತಿನ್ನಲೇ ಬಾರದು ಎಂದು ತಿಳಿಯುವದು ಯೋಗ್ಯವಲ್ಲ.


|| ಹರಿ ಓಂ || ಶ್ರೀರಾಮ || ಅಂಬಜ್ನ ||

ಮಾನವ ಸ್ವಭಾವ ತಿಳಿದ ಟೇಸಲಾ

ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಏರು-ಪೇರುಗಳು ಬರುತ್ತಿರುತ್ತವೆ. ಕೆಲಸದಲ್ಲಿಯ ವಿಫಲತೆ, ನಮ್ಮ ಆತ್ಮೀಯರನ್ನು ಕಳೆದುಕೊಳ್ಳುವದು ಅಥವಾ ಕೇವಲ ಆರ್ಥಿಕ ನಷ್ಟವೂ ಕೂಡ ಬಹಳ ಆಶಾವಾದಿಯಾದ ವ್ಯಕ್ತಿಯನ್ನು ನಿರಾಶವಂತನಾಗಿ ಮಾಡಲು ಸಾಧ್ಯವಿದೆ. ಹಾಗಿರುವಾಗ, ಯಾರು ತಾನು ಸ್ವಪ್ನಿಸಿದ ಕಾರ್ಯಗಳು, ಅವನು ಸಾಧಿಸಿದ್ದು ಹಾಗು ಅವನ ಜೀವನವಿಡಿ ಮಾಡಿದ ಎಲ್ಲಾ ಕಾರ್ಯಗಳು ನಾಶವಾಗುತ್ತಿರುವುದನ್ನು ಕಣ್ಣಾರೆ ಕಂಡಾಗ ಅವನಿಗೆಷ್ಟು ಕಷ್ಟವಾಗಿರಬೇಕೆಂದು ನೀವು ಕಲ್ಪಿಸಬಹುದು. ಇದನ್ನು ವಾಸ್ತವದಲ್ಲಿ ಸಂಪೂರ್ಣ ಧ್ವಂಸವೆನ್ನಬೇಕು. ಇಂತಹದನ್ನು ಎದುರಿಸಿದಾಗ ಹೆಚ್ಚಿನ ಜನರು ತನ್ನ ನಿದ್ದೆ, ಚಿತ್ತ ಮತ್ತು ದೇವರಲ್ಲಿಯ ವಿಶ್ವಾಸವನ್ನು ಕಳೆದುಕೊಳ್ಳುವರು.

ಹಿಂದಿನ ಲೇಖನದಲ್ಲಿ ಡಾ.ನಿಕೋಲಾ ಟೇಸಲಾರವರು ಅವರ ಪ್ರಯೋಗಶಾಲೆಯು ಬೆಂಕಿಯಿಂದಾಗಿ ಸುಟ್ಟಾಗ ಇಂತಹದೇ ಸಮಾನವಾದ ಪರಿಸ್ಥಿತಿಯನ್ನು   ಎದುರಿಸಿದರೆಂದು ನಾವು ನೋಡಿರುವೆವು. ಡಾ. ಟೇಸಲಾರವರಿಗೆ ತಾನು ಸಾಧಿಸಿದ ಕಾರ್ಯಗಳು , ಅವರ ಸ್ವಪ್ನಗಳು, ಅವರ ಮನೋರಾಜ್ಯವು ಅಗ್ನಿಯಲ್ಲಿ ಉರಿದು ಬೂದಿಯಾದದ್ದನ್ನು ನೋಡುವದು ನಿಜವಾಗಿಯೂ ಹೃದಯ ತಿರುಚಿದಂತಾಗಿತ್ತು. ಇದರ ಪರಿಣಾಮವಾಗಿ ಅವರು ತನ್ನನ್ನು ಜನರ ಗಮನದಿಂದ ದೂರ ಮಾಡಿಕೊಂಡರು. ಡಾ. ಟೇಸಲಾರವರು ಅವರ ತಾಯಿಯು ಅಮೇರಿಕಕ್ಕೆ ಬಂದಾಗ ಹೆಚ್ಚಾಗಿ ಹೋಗುತ್ತಿರುವ ಗ್ರಾಮಾಂತರ ಪ್ರದೇಶದ ಚರ್ಚಿಗೆ ತಿರುಗಿ ಬಂದರೆಂದು ಹೇಳಲಾಗುತ್ತದೆ. ಇಲ್ಲಿಯೇ ಡಾ. ಟೇಸಲಾರವರ ಪುರ್ನ್ಜನ್ಮವಾಯಿತು. ದೇವರು ಅವರನ್ನು ಯಾವುದೋ ಉದ್ದೇಶಕ್ಕಾಗಿ ಜೀವಂತವಾಗಿ ಇಟ್ಟಿದ್ದಾರೆಂದು ಮತ್ತು ಆದ ವಿನಾಶಕ್ಕೆ ದೇವರನ್ನು ದೂಷಿಸದೆ ಆ ಉದ್ದೇಶವನ್ನು ಅವರು ಪರಿಪೂರ್ಣಿಸಬೇಕೆಂದು ಅವರಿಗೆ ಅರಿವಾಯಿತು. ಅವರನ್ನು ತನ್ನ ದೈವಿಕ ಹಸ್ತಕ್ಷೇಪದಿಂದ  ಕಾಪಾಡಿದಕ್ಕಾಗಿ ಡಾ. ಟೇಸಲಾರವರು ದೇವರಿಗೆ ಕೃತಜ್ನತೆಯನ್ನು ಅಭಿವ್ಯಕ್ತಿಸಿದರು. ಯಾವುದೋ ಉದ್ದೇಶಕ್ಕಾಗಿ ದೇವರು ಹೀಗೆ ಆಗಲು ಬಿಟ್ಟರೆಂದು ಡಾ. ಟೇಸಲಾರವರ ನಂಬಿಕೆಯಾಗಿತ್ತು ಅದರ ಅರ್ಥ ಡಾ.ಟೇಸಲಾರವರು ಇದನ್ನು ಪುನ: ವಿಚಾರ ಮಾಡಿ ಅವರು ಮಾಡುವ ಕೆಲವು ಕಾರ್ಯಗಳನ್ನು ಬದಲಾಯಿಸುವ ಆವಷ್ಯಕತೆಯಿದೆ ಎಂದು ತಿಳಿದರು.

ಒಂದು ತಿಂಗಳ ತನಕ ಆಲೋಚನೆ ಮಾಡಿದ ನಂತರ, ಡಾ. ಟೇಸಲಾರವರು ಪುನ: ಶೂನ್ಯದಿಂದ ಅರಂಭಿಸಲು ಹಾಗು ಅಳಿಸಿ ಹೋದದ್ದನ್ನು ಇನ್ನೊಂದು ಸಲ ಮುಂದಿನಂತೆ ತಯಾರಿಸಿ ನಿಲ್ಲಿಸಲೆಂದು ದೃಢ ನಿರ್ಧಾರ ಮಾಡಿ ಹಿಂದಿರುಗಿ ನಿವ್ ಯಾರ್ಕಿಗೆ ಬಂದರು. ಇದನ್ನು ಸಾಧಿಸುವದು ನಿಜವಾಗಿಯೂ ಬಹಳ ದೊಡ್ಡ ಗುರಿಯಾಗಿತ್ತು. ಆಲ್ಟರ್ ನೇಟಿಂಗ್ ಕರಂಟಿನ ಆಧಾರದ ಮೇಲೆ ಹೈಡ್ರೊ-ಎಲೆಕ್ಟ್ರಿಕ್ ಪಾವರ್ ಜನರೇಶನ್ ಪ್ಲಾಂಟ್ ನ್ನು ನೈಗರ ಫಾಲ್ಸ್ ಮೇಲೆ ಕಟ್ಟುವ ಮೊದಲ ಧ್ಯೇಯವಾಗಿತ್ತು. ಇದು ಡಾ.ಟೇಸಲಾರವರು ಚಿಕ್ಕಂದಿನಿಂದ ನೋಡಿದ ಸ್ವಪ್ನವಾಗಿತ್ತು.
Tesla-_nigara


ಡಾ. ಕೆಲ್ವಿನ್ ಮತ್ತು ಅವರ ಕಮೀಶನ್ (ನಿಯೋಗಿಸುವವರು) ರವರು ನೈಗರದ ಪಾವರ್ ಸರಂಜಾಮು ಮಾಡುತ್ತಿದ್ದು ಬಫೆಲೊ ಪಟ್ಟಣಕ್ಕು ಕೂಡ ಪಾವರ್ (ಯಂತ್ರಶಕ್ತಿ) ಮಾಡುವ  ಅಧಿಕಾರಿಗಳಾಗಿದ್ದರು. ಮುಖ್ಯದ ಸಂಗತಿಯೆಂದರೆ ಇವತ್ತು ಅದು ನಿವ್ ಯಾರ್ಕ್ ಪ್ರಾಂತದ ಎರಡನೇಯ ಬಹಳ ಶಕ್ತಿಶಾಲಿ ನಗರವಾಗಿದ್ದು ಇದರ ಕರಾರನ್ನು ಸಂಯೋಜಕರಾಗಿರುವ ಜೊರ್ಜ್ ವೆಸ್ಟಿಂಗ್ ಹೌಸ್ ಹಾಗು ಡಾ.ಟೇಸಲಾರವರಿಗೆ ಕೊಡಲಾಯಿತು. ಇದರಿಂದ ಡಾ.ಟೇಸಲಾರವರ ಸ್ವಪ್ನ ಸಾಕಾರವಾದಂತಾಯಿತು. ಈ ಪ್ರಕಲ್ಪಕ್ಕಾಗಿ ಅವರು ನಿರಂತರ ಪರಿಶ್ರಮ ಮಾಡಿ ಮತ್ತು ಅಪರಮಿತ ಸಮರ್ಪಣೆಯಿಂದ ದುಡಿದರು ಹಾಗು ಅವರ ಈ ಕಠಿಣ ಪರಿಶ್ರಮದಿಂದಾಗಿ ಸಂಪೂರ್ಣ ಏಸಿ ಪಾವರ್ ಪ್ಲಾಂಟ್ ನ ಕೆಲಸವನ್ನು ನೈಗರದಲ್ಲಿ  ಹನ್ನೊಂದು ತಿಂಗಳಿನಲ್ಲಿ ಅಸಾಧ್ಯವಾಗಿರುವುದನ್ನು ಅಲ್ಪ ಸಮಯದಲ್ಲಿ ಸಾಧ್ಯ ಮಾಡಿ ತೋರಿಸಿದರು. ಇದು ೧೬ ನೇ ನವೆಂಬರ್ ೧೮೯೬ ದಿವಸದಂದು ಅಂದರೆ ಅವರ ಪ್ರಯೋಗಶಾಲೆಯು ಪೂರ್ಣ ಭೂಮಿಗತವಾಗಿ ಒಂದು ವರ್ಷ ಆಗುವ ಒಳಗೆ  ಡಾ. ನಿಕೋಲಾ ಟೇಸಲಾರವರು ಬಫೆಲೊದಲ್ಲಿಯ ಉದ್ಯೋಗಗಳಿಗಾಗಿ ನೈಗರದಲ್ಲಿರುವ ಎಡ್ ವರ್ಡ್ ಡೀನ್ ಆಡಮ್ಸ್ ಸ್ಟೇಷನ್ ನಿಂದ ಹೈಡ್ರೊಎಲೆಕ್ಟ್ರಿಕ್ ಜನರೇಟರ್ಸ್ ಮೂಲಕ ಎಲೆಕ್ಟ್ರಿಕ್ ಪಾವರನ್ನು ಜನರೇಟ್ ಹಾಗು ಟ್ರಾಂಸ್ ಮಿಟ್ ಮಾಡಿದರು. ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕೊರ್ಪೊರೇಶನ್ ರವರು ಡಾ. ಟೇಸಲಾರವರ ಏಸಿ ಸಿಸ್ಟಮ್ ನ ಪೇಟೆಂಟ್ ಗಳನ್ನು ಉಪಯೋಗಿಸಿ ಜನರೇಟರ್ಸ್ ನ್ನು ತಯಾರಿಸಿದ್ದರು. ಜನರೇಟರ್ಸ್ ಗಳ ಮೇಲೆ ನಿಕೋಲಾ ಟೇಸಲಾರವರ ಹೆಸರನ್ನು ನಮೂದು ಮಾಡಲಾಗಿತ್ತು. ಕೆಲವೇ ವರ್ಷದ ಒಳಗೆ ಒಟ್ಟು ಹತ್ತು ಜನರೇಟರ್ಸ್ ಗಳು ಪ್ರಕಲ್ಪದ ರಚನಾಕ್ರಮೆಯಂತೆಯೇ ನೈಗರಾದಲ್ಲಿ ಕೆಲಸ ಮಾಡ ತೊಡಗಿದವು. ಈಗ ಈ ಪ್ಲಾಂಟ್ ನ ಮೂಲಕವೇ ಸಂಪೂರ್ಣ ನಿವ್ ಯಾರ್ಕ್ ನಗರಕ್ಕೆ ಎಲೆಕ್ಟ್ರಿಸಿಟಿಯನ್ನು ಪೂರೈಸಲಾಗುತ್ತಿದೆ. ಸಿಟಿ ಬ್ರಾಡ್ ವೆಜ್, ಎಂದು ಕರೆಯಲಾಗುತ್ತಿರುವ ಬಹಳ ಲೋಕಪ್ರಿಯವಾದ ಮನೋರಂಜನೆಯ ಜಿಲ್ಲೆಗಳು ಪ್ರಕಾಶದಿಂದ ಜಗಜಗಿಸುತ್ತಿದೆ, ಲಿಫ್ಟ್ ಗಳು, ರೇಲ್ವೆಯ ಹಾದಿಗಳು ಮತ್ತು ಒಳಹಾದಿಗಳು ನೈಗರಾದಿಂದ ಪಡೆಯುವ ಎಲೆಕ್ಟ್ರಿಸಿಟಿಯಿಂದ ಪ್ರಕಾಶಿಸುತ್ತಿವೆ. ಆದರೆ ಬಹಳ ಆಶ್ಚರ್ಯಕರ ಹಾಗು ದಿಗ್ಬ್ರಮೆ ಮಾಡುವ ಮಾತೆಂದರೆ ಎಡಿಸನ್ ಕೂಡ ತನ್ನ ಸಾಂಪ್ರದಾಯಿಕ (ಕನ್ ವೆಂಶನಲ್) ಡಾಯ್ ರೆಕ್ಟ್ ಕರಂಟ್ ಸಿಸ್ಟಮನ್ನು ಆಲ್ಟರ್ ನೇಟಿಂಗ್ ಕರಂಟ್ ಸಿಸ್ಟಮ್ ಗೆ ಪರಿವರ್ತಿಸಿದನು. ಡಾ. ನಿಕೋಲಾ ಟೇಸಲಾರವರ ಪತನ ನಾಶನದಿಂದ ಅದ್ಭುತವಾದ ಏಳಿಕೆಯು ಅದು ಕೂಡ ಅವರ ಪ್ರಯೋಗಶಾಲೆಯು ನಾಶವಾಗಿ ಹನ್ನೊಂದು ತಿಂಗಳಿನ ಒಳಗೆ ಆದಾಗ ಅದನ್ನು ನಾವು ಪ್ರಸಿದ್ಧವಾದ ಫಿನಿಕ್ಸ್ ಪಕ್ಷಿಯು ಬೂದಿಯಿಂದ ಹೊರಬಂದು ಮೇಲೇರಿ ಹಾರಾಡಿತು ಎಂಬುದಕ್ಕೆ  ಹೋಲಿಸಬಹುದು. ಮತ್ತು ಹೀಗೆ ಹಿಂದಿರುಗಿ ಗೆದ್ದು ಬಂದ ಹೋರಾಟವನ್ನು ನಿಜವಾಗಿಯೂ ದೇವರಲ್ಲಿ ದೃಢ ವಿಶ್ವಾಸವಿದ್ದವನಿಂದಲೇ ಅಪೇಕ್ಷಿಸಬಹುದು. ಕೇವಲ ವಿಶ್ವಾಸವೇ ಇಂತಹ ತತ್ವವನ್ನು ಪಾಲಿಸುವದು.

೧೨ನೇ ಜನೇವರಿ ೧೮೯೭ ರಂದು ಪ್ಲಾಂಟಿನ ಪ್ರಾರಂಭೋತ್ಸವದ ಮುಖ್ಯವಾದ ಪ್ರಸಂಗದ ಸಮಯದಲ್ಲಿ ಡಾ.ನಿಕೋಲಾ ಟೇಸಲಾರವರು ಕೆಳಗಿನ ಶಬ್ದಗಳನ್ನು ಉಚ್ಚರಿಸಿದರು, " ನಮ್ಮ ಹತ್ತಿರ ಕಳೆದ ಕಾಲದ ಹಲವು ಸ್ಮಾರಕ ಚಿಹ್ನೆಗಳಿವೆ, ನಮ್ಮ ಹತ್ತಿರ ಅರಮನೆಗಳು ಹಾಗು ಗೋಪುರಗಳಿವೆ, ಗ್ರೀಕಿನ ದೇವಸ್ಥಾನಗಳು ಹಾಗು ಕ್ರೈಸ್ತ ಪ್ರಪಂಚದ ಆರಾಧನಾ ಮಂದಿರಗಳಿವೆ. ಅವುಗಳಲ್ಲಿ ನಿದರ್ಶನಕ್ಕೆ ಬರುವಂತಹದು ಮನುಷ್ಯನ ಶಕ್ತಿ, ರಾಷ್ಟ್ರಗಳ ಮಹತ್ವ, ಕಲೆ ಮೇಲಿನ ಪ್ರೀತಿ ಮತ್ತು ಧಾರ್ಮಿಕ ಭಕ್ತಿ. ಆದರೆ ನೈಗರಾದ ಸ್ಮಾರಕಚಿಹ್ಮೆಯು ತನ್ನಲ್ಲಿಯೇ ಒಂದು ಮಹತ್ವದ್ದುಳ್ಳದಾಗಿದೆ, ನಮ್ಮ ವರ್ತಮಾನದ ವಿಚಾರ ಹಾಗು ಪ್ರವೃತ್ತಿಯನ್ನು ಒಡಂಬಡಿಸಿದೆ. ಇದು ನಮ್ಮ ವಿಜ್ನಾನ ಕಾಲದ ಬಹಳ ಬಹುಮೂಲ್ಯವಾದ ಸ್ಮಾರಕಚಿಹ್ಮೆಯಾಗಿದೆ, ಜ್ನಾನೋದಯದ ಹಾಗು ಶಾಂತಿಯ ನಿಜವಾದ ಸ್ಮಾರಕಚಿಹ್ಮೆಯಾಗಿದೆ. ಇದು ಮಾನವನ ಸೇವೆಗಾಗಿ ನೈಸರ್ಗಿಕ ಶಕ್ತಿಯ ವಿಜಯವನ್ನು ಸೂಚಿಸುತ್ತದೆ. ಕ್ರೂರ ಪದ್ಧತಿಗಳಿಂದ ಬಿಡುಗಡೆ, ದಶಲಕ್ಷ (ಮಿಲ್ಲಿಯನ್ಸ್) ಜನರ ಕಷ್ಟತಾಪತ್ರಯಗಳನ್ನು ಪರಿಹರಿಸಿದೆ." ಡಾ.ಟೇಸಲಾರವರ ಉದಾತ್ತ ಧ್ಯೇಯದ ಉದ್ದೇಶ ಮತ್ತು ಅವರ ಅಸಮಾನತೆಯನ್ನು ಕೊನೆಗೊಳಿಸುವ ದೂರದೃಷ್ಟಿಯು ಅವರ ಈ ಮಾತುಗಳಿಂದ ವ್ಯಕ್ತವಾಗಿತ್ತು ಮತ್ತು ಡಾ.ಟೇಸಲಾರಂತಹ ಒಬ್ಬ ಸತ್ಪುರುಷನೇ ಇದನ್ನು ಸ್ವಪ್ನಿಸಬಹುದು ಹಾಗು ಆ ಪ್ರಕಲ್ಪವನ್ನು ನಿರ್ವಹಿಸಿ, ನಿರಹಂಕಾರಿಯಾಗಿ ಉಳಿದು ಹಾಗು ಮಾನವ ಜೀವನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಮಾಡಲು ಅವರು ತನ್ನ ಪ್ರಯೋಗಶಾಲೆಗೆ ಹಿಂದಿರುಗಿದರು.

ಆದರೆ ಅವರ ಈ ವಿಜಯವು ಸಿಹಿ-ಕಹಿಯಂತಿತ್ತು. ೧೮೮೯ರ ಸಮಯದಲ್ಲಿ ಥೋಮಸ್ ಎಡಿಸನ್ ರವರಿಗೆ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಉತ್ಪಾದಿಸುವ ಹಲವು ಕಂಪನಿಗಳಲ್ಲಿ ಔದ್ಯೋಗಿಕ ರುಚಿಯಿತ್ತು. ೧೮೮೯ ರಲ್ಲಿ  ಜೆ.ಪಿ ಮೊರ್ಗನ್ ಮತ್ತು ಅಂಥೋನಿ ಡ್ರೆಕ್ಸೆಲ್ ರವರು ಸ್ಥಾಪಿಸಿದ ಡ್ರೆಕ್ಸೆಲ್, ಮೊರ್ಗನ್ ಆಂಡ್ ಕಂಪನಿಗಳು ಎಡಿಸನ್ ರವರ ಸಂಶೋಧನೆಗಳಿಗಾಗಿ ಆರ್ಥಿಕ ಸಹಾಯ ಮಾಡುತಿತ್ತು ಮತ್ತು ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿಯನ್ನು ಸ್ಥಾಪಿಸಿ ಒಂದು ಸಂಸ್ಥೆಯ ಅಧಿಪತ್ಯದಲ್ಲಿ ಬರಲು ಈ ಕಂಪನಿಗಳಿಗೆ ಒಂದಾಗಲು ಸಹಾಯ ಮಾಡಿದ್ದರು. ಹೊಸತಾಗಿ ಸ್ಥಾಪಿತವಾದ ಈ ಕಂಪನಿಯು ಸ್ಪ್ರೇಗ್ ಎಲೆಕ್ಟ್ರಿಕ್ ರೇಲ್ವೆ ಆಂಡ್ ಮೋಟರ್ ಕಂಪನಿಯನ್ನು ಕೂಡ ಅದೇ ವರ್ಷದಲ್ಲಿ ಪಡೆದು ಕೊಂಡಿತು.

ಅದೇ ಸಮಯದಲ್ಲಿ ಚಾರ್ಲ್ಸ್ ಕೊಫಿನ್ ರವರ ಅಧಿಪತ್ಯದಲ್ಲಿ ಥೊಮಸನ್-ಹ್ಯುಸ್ಟನ್ ಎಲೆಕ್ಟ್ರಿಕ್ ಕಂಪನಿಯು ಹಲವು ಪ್ರತಿಸ್ಪರ್ಧಿಗಳನ್ನು ಹಾಗು ಅವರ ಬಹಳ ಮಹತ್ವದ ಪೇಟೆಂಟ್ ಗಳನ್ನು ಸುಗಮತೆಯಿಂದ ಪಡೆದುಕೊಂಡರು. ನಂತರ ೧೮೯೨ ರಲ್ಲಿ ಔಪಚಾರಿಕವಾಗಿ ಜನರಲ್ ಎಲೆಕ್ಟ್ರಿಕ್ ಸ್ಥಾಪಿತಮಾಡಿ ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿ ಆಫ್ ಸ್ಕೆನೆಕ್ಟಡಿ, ನಿವ್ ಯಾರ್ಕ್ ಮತ್ತು ಥೊಮಸನ್ -ಹ್ಯುಸ್ಟನ್ ಎಲೆಕ್ಟಿಕ್ ಕಂಪನಿ ಆಫ್ ಲಿಯನ್ ಮ್ಯಾಸ್ಸಾಚುಸೆಟ್ಸ್ ಗಳನ್ನು ಅದರಲ್ಲಿ ಒಂದುಗೂಡಿಸಿದಾಗ ಎಡಿಸನ್ ತನ್ನ ಕಂಪನಿಯ ಕಸಬು ಪ್ರವೀಣರಾದ ಕಾರ್ಯಸ್ಥಾಪಕರ ಮೇಲಿನ ಅಧಿಕಾರವನ್ನು ಕಳೆದುಕೊಂಡರು ಹಾಗು ಜನರಲ್ ಎಲೆಕ್ಟ್ರಿಕ್ ಎಂಬ ಹೆಸರಿನಲ್ಲಿ ಒಂದಾಗಿ ಉದಯಕ್ಕೆ ಬಂದಿತು. ಮತ್ತು ಏಸಿ ಸಿಸ್ಟಮ್ ನ ಪೇಟೆಂಟಿಗಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯ ವಿರುದ್ಧ ಜನರಲ್ ಎಲೆಕ್ಟ್ರಿಕ್ ಕಂಪನಿಯು ಕಾನೂನಿನ ಸಹಾಯಪಡೆದುಕೊಂಡಿತು. ಆದರೆ ಈ ಕೇಸಿನಲ್ಲಿ ವೆಸ್ಟಿಂಗ್ ಹೌಸ್ ರವರು ವಿಜಯಿಯಾದರು ಕೂಡ ಈ ವಿಜಯಕ್ಕಾಗಿ ಬಹಳ ಹಣವು ವ್ಯಯವಾಯಿತು. ಇದರಿಂದಾಗಿ ವೆಸ್ಟಿಂಗ್ ಹೌಸ್ ಗೆ ತನ್ನನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಯಿತು. ೧೯೦೭ ರಲ್ಲಿ ಇಂತಹ ವಿಪತ್ಕರ ಸಂದರ್ಭದಲ್ಲಿ ಮತ್ತು ಆರ್ಥಿಕ ವ್ಯವಹಾರದ ಮಾರುಕಟ್ಟೆಯಲ್ಲಿ ಡಾ.ಟೇಸಲಾರವರಿಗೆ ವಿರೋಧಿಸುತ್ತಿರುವ ವಿಪರೀತ ಉದ್ದೇಶವುಳ್ಳ ಸಂಚುಗಾರರ ಕಾರಣದಿಂದಾಗಿ ವೆಸ್ಟಿಂಗ್ ಹೌಸ್ ಕಂಪನಿಯ ಸ್ಟಾಕ್ ನ ಬೆಲೆಯು ಬೀಳತೊಡಗಿತು.

ಇಂತಹ ಸಮಯದಲ್ಲಿ ಡಾ. ಟೇಸಲಾರವರು ಇನ್ನೊಮ್ಮೆ ವೆಸ್ಟಿಂಗ್ ಹೌಸ್ ರವರ ಸಹಾಯಕ್ಕೆಂದು ಮುಂದೆ ಬಂದರು. ಡಾ. ನಿಕೋಲಾ ಟೇಸಲಾರವರು ವೆಸ್ಟಿಂಗ್ ಹಾಸ್ ರವರ ಜೊತೆ ಮಾಡಿದ ೧೨ ಮಿಲ್ಲಿಯನ್ ಡಾಲರಿನ ಬೆಲೆಯ ಕರಾರನ್ನು ನಿಜದಲ್ಲಿ ಹರಿದು ಬಿಸಾಡಿದರು ಇದರ ಪ್ರಕಾರ ವೆಸ್ಟಿಂಗ್ ಹೌಸ್ ರವರು ಡಾ. ಟೇಸಲಾರವರಿಗೆ ಅವರ ಏಸಿ ಪೇಟಂಟ್ ನ್ನು ಉಪಯೋಗಿಸಿ  ಪ್ರತಿಯೊಂದು ಹೊರ್ಸ್ ಪಾವರ್ ಆಫ್ ಎನರ್ಜಿಯನ್ನು ಜನರೇಟ್ ಮಾಡಿದಾಗ ಒಂದು ಡಾಲರಿನಂತೆ ಕೊಡಲು ಅವರ ಕಂಪನಿಯು ವಚನ ಬದ್ಧವಾಗಿತ್ತು. ಚಿತ್ತಾಕರ್ಷಕದ ವಿಷಯವೆಂದರೆ ಇಂದಿನ ಕಾಲದಲ್ಲಿ ಈ ಕರಾರನ್ನು ೩೦೦ ಮಿಲ್ಲಿಯನ್ ಡಾಲರ್ಸ್ ನಷ್ಟು ಮೂಲ್ಯವಾಗಿದೆಯೆಂದು ಬ್ಯಾಂಕಿನವರು ಅಂದಾಜು ಹಾಕಿರುವರು.

ಡಾ. ಟೇಸಲಾರವರು ವೆಸ್ಟಿಂಗ್ ಹೌಸ್ ನ ಕಂಪನಿಯನ್ನು ಋಣ ಮುಕ್ತಮಾಡಲು ತನ್ನ ಆರ್ಥಿಕ ಲಾಭವನ್ನು ಹೀಗೆಯೇ ಬಿಟ್ಟು ಕೊಟ್ಟರು ಯಾಕೆಂದರೆ ಅವರ ಪ್ರಾರಂಭದ ಪೇಚಾಟದ ದಿವಸದಲ್ಲಿ ವೆಸ್ಟಿಂಗ್ ಹೌಸ್ ನವರು ಅವರಿಗೆ ಸಹಾಯ ಮಾಡಿದ್ದರು ಮತ್ತು ಜನಸಾಮಾನ್ಯರಿಗೆ ಬಹಳ ಕಡಿಮೆ ಕ್ರಯದಲ್ಲಿ ಎಲೆಕ್ಟ್ರಿಸಿಯನ್ನು ಪೂರೈಸಿದ್ದರು. ಡಾ. ಟೇಸಲಾರವರ ಇಂತಹ ನಿ:ಸ್ವಾರ್ಥದ ವರ್ತನೆಯಿಂದಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯು ಜೆ.ಪಿ. ಮೊರ್ಗನ್ ರವರ ಕೈಯಲ್ಲಿ ಸ್ಥಾನಾಂತರವಾಗುವದು ತಳ್ಳಿತು ಹಾಗು ಪಾವರ್ ಜನರೇಶನ್ ನ ವ್ಯಾಪಾರ ಸಂಸ್ಥೆಗಳಿಗೆ ಏಕಾಧಿಕಾರ ಸಿಗದಿದ್ದರಿಂದ ಸಾಮಾನ್ಯ ಜನರ ತನಕ ಅಗ್ಗವಾದ ಎಲೆಕ್ಟ್ರಿಸಿಟಿ ತಲುಪಲು ಅಡ್ಡಿ ಬರಲಾಗಲಿಲ್ಲ. ಅವರ ಪೇಟಂಟ್ಸ್ ಗಳನ್ನು ಮಾರಿದ್ದರಿಂದ ಮತ್ತು ಅವರ ೧೨ ಮಿಲ್ಲಿಯನ್ ಡಾಲರಿನ ಕರಾರನ್ನು ರದ್ದು ಮಾಡಿದ್ದರಿಂದ ಡಾ. ಟೇಸಲಾರವರ ಸ್ಥಾಯಿಕ ಉತ್ಪಾದನೆಯು ತೀವ್ರವಾಗಿ ನಶಿಸಿತು ಆದರೂ ಅವರು ಕೇವಲ ಒಂದೇ ಒಂದು ಕಾರಣಕ್ಕಾಗಿ ಅಂದರೆ ಮಾನವೀಯತೆಯ ಉದ್ಧಾರವನ್ನು ಬಯಸಿದ್ದರು.

ಈ ಮಹಾನ ಮನುಷ್ಯನ ಅದ್ಭುತಕಾರ್ಯಗಳು ಮತ್ತು ಶಬ್ದಗಳು ನಿಜವಾಗಿಯೂ ಪ್ರೇರಣೆ ಕೊಡುತ್ತದೆ. ಇಂತಹ ಆವ್ಹಾನಗಳನ್ನು ಮತ್ತು ವಿಷಮ ಪರಿಸ್ಥಿತಿಗಳನ್ನು               ಒಂಟಿಯಾಗಿಯೇ ಎದುರಿಸಿ ಯಾವುದಕ್ಕು ಕೂಡ ಬಗ್ಗದೆ ಅಭಿಮಾನದಿಂದ ನಡೆದ ಅವರು ಮೆಚ್ಚಿಗೆಯ ಪಾತ್ರವಲ್ಲದೆ ಅದನ್ನು ಕಲ್ಪಪಿಸಲು ಕೂಡ ಅಸಾಧ್ಯ. ನಮ್ಮ ಮುಂದಿನ ಲೇಖನದಲ್ಲಿ ನಾವು ಡಾ. ನಿಕೋಲಾ ಟೇಸಲಾರವರ ಕಥೆಯ ಬಹಳ ಚಿತ್ತಾಕರ್ಷಕ ಭಾಗವನ್ನು ನೋಡಲಿರುವೆವು. ಅಲ್ಲಿಯ ತನಕ ಹೇಗೆ ಒಬ್ಬ ಮನುಷ್ಯನು  ತನ್ನ ಸರ್ವಸ್ವವನ್ನು ಕಳೆದುಕೊಂಡರೂ ವಿಶ್ವಾಸ ಮಾತ್ರ ಕಳೆದುಕೊಳ್ಳದೆ ಕೇವಲ ದೇವರಲ್ಲಿಯ ದೃಢ ವಿಶ್ವಾಸದಿಂದಾಗಿ ತನ್ನ ತತ್ವ ಮತ್ತು ಉದ್ದೇಶವನ್ನು  ಸಾದಿಸಬಹುದೆನ್ನುವುದನ್ನು ವಿಚಾರ ಮಾಡಿ.


|| ಹರಿ ಒಂ ||  || ಶ್ರೀರಾಮ || || ಅಂಬಜ್ನ ||