ಚಾಯ್ ನೀಜ್ ಖಾದ್ಯಪ್ರಕಾರದ ಜೊತೆ ಈಗ ಇಟಾಲಿಯನ್, ಲೆಬನೀಜ್,
ಕೋರಿಯನ್ ಅಂತಹ ಅನೇಕ ವಿದೇಶದ ಖಾದ್ಯಪ್ರಕಾರಗಳು ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ
ಲೋಕಪ್ರಿಯವಾಗುತ್ತಿದೆ. ಈ ಖಾದ್ಯಪ್ರಕಾರದಲ್ಲಿ ಬಹಳ ಸಲ "ಚೀಜ್" ನ್ನು ಉಪಯೋಗಿಸಲಾಗುತ್ತಿದೆ.
ಈ ಚೀಜ್ ನ ಪ್ರಕಾರವು ಭಾರತದಲ್ಲಿ ಅನೇಕ ವರ್ಷಗಳಿಂದ ಸಿಗುತ್ತಿದ್ದರು ಕೂಡ ಕಳೆದ ಹಲವು ವರ್ಷಗಳಲ್ಲಿ
"ಚೀಜ್" ನ ಅಭಿರುಚಿಯು ಜನರಲ್ಲಿ ಬಹಳ ಹೆಚ್ಚಾಗಿದೆ.
ಸದ್ಗುರು ಅನಿರುದ್ಧ ಬಾಪೂರವರು ( ಡಾ. ಅನಿರುದ್ಧ ಜೋಶಿ ) ದಿನಾಂಕ ೨೫ ಸಪ್ಟೆಂಬರ್ ೨೦೧೪ ರ ಹಿಂದಿ
ಪ್ರವಚನದಲ್ಲಿ " ವ್ಹೆಜ್ ಚೀಜ್ " ಮತ್ತು
" ನಾನ್ ವ್ಹೆಜ್ ಚೀಜ್ " ಬಗ್ಗೆ ಮಾಹಿತಿಯನ್ನು ಹೇಳಿದರು. ಚೀಜ್, ಇಂದು ಅನೇಕರ ಬೆಳಗಿನ ಅಲ್ಪೋಪಹಾರದಿಂದ ರಾತ್ರಿಯ ಊಟದ ತನಕ ಸ್ಥಾನವನ್ನು ಪಡೆದಿದೆ.
ಅದರ ಪ್ರಕಾರಗಳ ಬಗ್ಗೆ ಹಾಗು ಮಾಡುವ ಪ್ರಕ್ರಿಯೆಯ ವಿಷಯದಲ್ಲಿ ಬಹಳ ಕಡಿಮೆ ಜನರಿಗೆ ತಿಳಿದಿದೆ. ಆದ್ದರಿಂದ
ಇದೊಂದು ಬಹಳ ಗಂಭೀರ ವಿಷಯವಾಗಿದೆ. ಆದರೆ ಇಂದು ಚೀಜ್ ಸ್ಯಾಂಡ್ ವೀಜ್, ಸೂಪ್.
ಪರಾಠೆ, ಕೋಫ್ತಾ, ಪಾವ್ ಭಾಜಿ, ದೋಸೆ, ಪಕೋಡೆ, ಟೋಸ್ಟ್, ಸ್ಯಾಲಡ್, ರೋಲ್ಸ್, ಪೀಝಾ,
ಬರ್ಗರ್ ಇಷ್ಟೇ ಅಲ್ಲದೆ ನಮ್ಮ ನಿತ್ಯದ ಕಾಯಿಪಲ್ಯೆಗಳ ರಸದಲ್ಲಿ ಮತ್ತು ನಾವು ಯಾವಾಗಲೂ
ತಿನ್ನುವ ವಡಾಪಾವ್ ಗಳಲ್ಲಿ ಕೂಡ ಅದನ್ನು ಉಪಯೋಗಿಸಲಾಗುತ್ತಿದೆ. ಆದ್ದರಿಂದ ಈ ಚೀಜ್ ಬಗ್ಗೆ ಅಧಿಕವಾಗಿ
ತಿಳಿದುಕೊಳ್ಳುವದು ಆವಶ್ಯಕವಾಗಿದೆ. ಆದ್ದರಿಂದ ಚೀಜ್ ಹೇಗೆ ಮಾಡುತ್ತಾರೆ ಎಂಬುದನ್ನು ಸಂಕ್ಷೇಪದಲ್ಲಿ
ನೋಡುವ.
ಚೀಜ್ ಈ ಪದಾರ್ಥವು ಹಾಲಿನಿಂದ ಮಾಡಲಾಗುತ್ತದೆ. ಚೀಜ್ ಮಾಡುವಾಗ ಹಾಲನ್ನು ಕುದಿಸಿ ದಪ್ಪವಾಗಿ
ಮಾಡುವ ಪ್ರಕ್ರಿಯೆಯಿದೆ. ಆದರೆ ಬಹಳ ಸಲ ಈ ಪ್ರಕ್ರಿಯೆಯನ್ನು ಬೇಗವಾಗಿ ಮಾಡಲೆಂದು ಅದರಲ್ಲಿ ಒಂದು
ವಿಶಿಷ್ಟ ಪದಾರ್ಥ ಹಾಕಲಾಗುತ್ತದೆ ಅದರ ಹೆಸರು ರೆನೆಟ್ (Rennet) ಇದೆ. http://en.wikipedia.org/wiki/Rennet
ಆದರೆ ಈ ರೆನೆಟ್ ಎಲ್ಲಿಂದ ಬರುತ್ತದೆ ? ರೆನೆಟಿನ್
ಪಾರಂಪರಿಕ ಸ್ತ್ರೋತ ಅಂದರೆ ಗೋಮಾಂಸ. ದನದ ಅಥವಾ ದನದ ಕರುವಿನ ಹೊಟ್ಟೆಯಲ್ಲಿದ್ದ ಕರುಳಿನಲ್ಲಿ ರೆನೆಟ್
ಸಿಗುತ್ತದೆ, ಕಾರಣ ಸಸ್ತನ ಹಾಗು ಮೆಲುಕು ಹಾಕುತ್ತಿರುವ ಪ್ರಾಣಿಗಳ ಅನ್ನ
ಪಚನದಲ್ಲಿ ಈ ರೆನೆಟ್ ನ ಆವಶ್ಯಕತೆ ಇರುತ್ತದೆ. ಈ ರೆನೆಟ್ ನ ಉಪಯೋಗ ಮಾಡಿ ಮಾಡಿದ ಚೀಜ್ ಗೆ
" ನಾನ್ ವ್ಹೆಜ್ ಚೀಜ್ " ಹೇಳುತ್ತಾರೆ. ಆದ್ದರಿಂದ ಈ ರೆನೆಟ್ ನ್ನು ಹಾಕಿದ ಚೀಜ್ ನ್ನು
ನಾವು ಯಾವಾಗ ತಿನ್ನುತ್ತೇವೆ ಆಗ ನಾವು ಅಪ್ರತ್ಯಕ್ಷರೀತಿಯಿಂದ ಗೋಮಾಂಸವನ್ನೇ ಭಕ್ಷಣ ಮಾಡುತ್ತಿರುತ್ತೇವೆ.
ಭಾರತದ ಮಾರುಕಟ್ಟೆಗಳಲ್ಲಿ ವ್ಹೆಜಿಟೇರಿಯನ್ (ಶಾಕಾಹಾರಿ) ಚೀಜ್ ಕೂಡ ಸಿಗುತ್ತದೆ. ಅದನ್ನು ಕೆಲವು
ಭಾರತದ ಕಂಪನಿಗಳು ಹಾಗು ಕೆಲವು ಮಲ್ಟಿನೇಶನಲ್ ಕಂಪನಿಗಳು ಉತ್ಪಾದಿಸಿದ್ದಾರೆ.
ಸನಾತನ ವೈದಿಕ ಧರ್ಮದಲ್ಲಿ ನಾವು ಆಕಳನ್ನು " ಗೋಮಾತಾ " ಎಂದು ನಂಬುತ್ತೇವೆ. ಶ್ರದ್ಧಾವಾನರ
೯ ಸಮಾನ ನಿಷ್ಠೆಯಲ್ಲಿ ಕೂಡ ಗೋಮಾತೆ, ಗಂಗಾಮಾತೆ ಮತ್ತು ಗಾಯತ್ರಿಮಾತೆಯರ
ಉಲ್ಲೇಖವಿದೆ. ಆಕಳು ನಮಗಾಗಿ ಪಾವಿತ್ರೇಯ ಪ್ರತೀಕವಾಗಿದೆ.
ಚೀಜ್ ಮಾಡುವ ಪ್ರಕ್ರಿಯೆ ತಿಳಿಯದೆ ಅಜಾಗರೂಕತೆಯಿಂದಾಗಿ ಅನೇಕರಿಂದ "ನಾನ್ ವ್ಹೆಜ್"
ಚೀಜ್ ತಿನ್ನಲಾಗುತ್ತದೆ. ಯಾರಿಗೆ ನಾನ್ ವ್ಹೆಜ್ ಚೀಜ್ ನ್ನು ತಿನ್ನುವುದನ್ನು ನಿಲ್ಲಿಸಲ್ಲಿಕ್ಕಿದೆ
ಅವರು ಇಂದಿನ ಮುಂದೆ ಚೀಜ್ ಅಥವಾ ಚೀಜ್ ಹಾಕಿದ ಪದಾರ್ಥಗಳನ್ನು ತೆಗೆದುಕೊಳ್ಳುವಾಗ ಈ ಚೀಜ್
" ವ್ಹೆಜ್ ಚೀಜ್ " ಇದೆಯೇ ಅಥವಾ " ನಾನ್ ವ್ಹೆಜ್ ಚೀಜ್ " ಇದೆಯೇ ಎಂದು ಕೇಳುವದು
ಆವಶ್ಯಕವಾಗಿದೆ. ಅನೇಕ ಸಲ ಉತ್ಪಾದಕರಿಂದ ಚೀಜ್ ನಲ್ಲಿ ರೆನೆಟ್ ಉಪಯೋಗಿಸಿದ್ದನ್ನು ಹೇತುಪೂರ್ವಕವಾಗಿ
ಸ್ಪಷ್ಟೀಕರಿಸಲಾಗುವುದಿಲ್ಲ. ಆಗ ನಾವೇ ಜಾಗರೂಕರಾಗಿ ಹಾಗು ನಮ್ಮ ದಕ್ಷತೆಯನ್ನು ಉಪಯೋಗಿಸಬೇಕು. ಆದರೆ
ಇದರ ಅರ್ಥ ಚೀಜ್ ತಿನ್ನಲೇ ಬಾರದು ಎಂದು ತಿಳಿಯುವದು ಯೋಗ್ಯವಲ್ಲ.
|| ಹರಿ ಓಂ || ಶ್ರೀರಾಮ || ಅಂಬಜ್ನ ||
No comments:
Post a Comment