Monday 4 March 2013

ನಾನು ಅನಿರುದ್ಧನಿದ್ದೇನೆ


ತನ್ನ ಐವತ್ತನೇಯ ಜನ್ಮದಿವಸದ ಅವಸರದಂದು ಪ್ರಕಾಶಿತವಾಗುವ ದೈನಿಕದ ವಿಶೇಷ ಆವೃತ್ತಿಯ ಅಗ್ರಲೇಖ ಹಾಗು ತನ್ನದೇ ವಿಷಯದಲ್ಲಿ ಬರೆಯುವ, ಬಹುಶಃ ನಾನು ಏಕಮೇವ ಕಾರ್ಯಕಾರೀ ಸಂಪಾದಕನಾಗಿರಬೇಕು. ನನ್ನ ಮಾಯೀ ನನ್ನ ಬಾಲ್ಯದಿಂದಲೂ ಅನೇಕವೇಳೆ, "ಇವನು ಏನು ಮಾಡುವನೊ, ಯಾವತ್ತು ತಿಳಿಯುವುದಿಲ್ಲ" ಯೆಂದು ಹೇಳುತ್ತಿದ್ದಳು.  ಆದರೆ ನನ್ನ ತಾಯೀ ನನಗೆ "ಚಕ್ರಮಾದಿತ್ಯ ಚಮತ್ಕಾರ" ಅನ್ನುತಿದ್ದಳು. ಬಹುಶಃ ನನ್ನ ಬಾಲ್ಯಕಾಲದ ಆ ವಿಚಿತ್ರ ಸ್ವಭಾವದ ವಿಕಾಸ ಸದಾ ಆಗುತ್ತಿರಬೇಕು. ಪ್ರತಿಯೊಬ್ಬನಿಗೂ ಶಾಲೆಯ ಶಿಕ್ಷಣ ಮುಗಿಸಿದ ನಂತರ ಒಂದು ವೇಳೆ ಯಾವುದೇ ಮಗ್ಗಿ ಮರೆತರೂ ಸಹ "ನಾನೊಂದಲೆ ನಾನು ರಿಂದ ಹಿಡಿದು ನಾನ್ಹತ್ಲೇ ನಾನು"  ಈ ಮಗ್ಗಿಯು ಸಹಜವಾಗಿ ಬರುತ್ತದೆ ಕಾರಣ ಈ "ಅಹಂ" ಹತ್ತು ದಿಕ್ಕುಗಳಲ್ಲಿ ಮನಸ್ಸಿನ ಕುದುರೆಯ ಮೇಲೆರಿಸಿ ಬೇಕಾಗಿರುವಾಗ ಬೇಕಾದಂತೆ  ಬಳಸಬಲ್ಲನು. ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು, ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ, ನನಗೆ ಇದು ಬೇಕು ಮತ್ತು ನನಗೆ ಅದು ಬೇಡಾ, ನಾನು ಇದನ್ನು ಮಾಡಿರುವೆನು ಮತ್ತು ನಾನು ಅದನ್ನು ಮಾಡಿರುವೆನು, ಹೀಗೆ ಅನೇಕ ರೂಪಗಳಲ್ಲಿ ಪ್ರತಿಯೊಬ್ಬನ ಈ "ಅಹಂ" ಜೀವನಪೂರ್ತಿ ಆಟಾಡವಾಡುತಿರುವದು. ಈ ಅನಿರುದ್ಧನಾದರು ಸಣ್ಣ ಮಕ್ಕಳ "ಧಾಂಗಡಧಿಂಗಾ" ಶಿಬಿರದ ಪ್ರಬಲ ಸಮರ್ಥಕನಾಗಿರುವೆನು.  ಹೀಗಿರುವಾಗ ಈ ಅನಿರುದ್ಧನ "ಅಹಂ" ಶಾಂತವಾಗಿ ಕೂಡಲೂ ಸಾಧ್ಯವೇ? 


ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು - ನಾನು ಹೇಗಿರುವೆನು ಅದು ಕೇವಲ ನನಗೆ ತಿಳಿದಿರುವುದು. ಆದರೆ ನಾನು ಹೇಗೆ ಇರುವುದಿಲ್ಲವೆಂಬುವುದು ಮಾತ್ರ ನನಗೆ ಗೊತ್ತಿಲ್ಲ. ನಾನು ಹೇಗಿರುವೆನು? ಅದು ನನ್ನ ಆ ಸನ್ನಿವೇಶದಲ್ಲಿ ಅಸ್ತಿತ್ವವಾಗಿದ್ದ ಆ ಮಾನವನನ್ನು ಅವಲಂಬಿಸಿರುವುದಿಲ್ಲ, ಆ ಪರಿಸ್ಥಿತಿಮೇಲೆ ಸಹ ಅವಲಂಬಿತವಾಗಿಲ್ಲ. ಪಕ್ಕದ ಮನುಷ್ಯನು ಮತ್ತು ಪರಿಸ್ಥಿತಿಯು ಯಾವುದೇ ಪ್ರಕಾರದಾಗಿರಲಿ, ನಾನು ಮಾತ್ರ ಹಾಗೆಯೇ ಇರುವೆನು ಕಾರಣ ನಾನು ಸದಾ ವರ್ತಮಾನಕಾಲದಲ್ಲಿಯೇ ಸಂಚರಿಸುವೆನು ಮತ್ತು ವಾಸ್ತವತೆಯ ಅರಿವನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ. ಭೂತಕಾಲದ ಅರಿವು ಹಾಗು ಸ್ಮೃತಿ ವರ್ತಮಾನಕಾಲದಲ್ಲಿ ಅಧಿಕಾಧಿಕ ಜಾಗರೂಕತೆಯಾಗಿರಲು ಮತ್ತು ಭವಿಷ್ಯಕಾಲದ ಮುನ್ಸೊಚನೆಯು ವರ್ತಮಾನಕಾಲದಲ್ಲಿ ಎಚ್ಚರಿಕೆಯಿಂದಿರಲು ಮಾತ್ರ, ಇದು ನನ್ನ ವೃತ್ತಿ.

ನಾನು ಒಳ್ಳೆಯವನು ಅಥವಾ ಕೆಟ್ಟವನು- ಇದನ್ನು ತೀರ್ಮಾನಿಸುವ ಅಧಿಕಾರವನ್ನು ಸಂಪೂರ್ಣವಾಗಿ ನಾನು ಇಡೀ ಜಗತ್ತಿಗೆ ಕೊಟ್ಟಿರುವೆನು ಕಾರಣ ಇತರ ಯಾರೇ  ಆಗಲಿ ನನ್ನನ್ನು ಏನೇ ಅಂದರು ಅದಕ್ಕೆ ನಾನು ಗಮನ ನೀಡುವುದಿಲ್ಲ. ಕೇವಲ ನನ್ನ ದತ್ತಗುರು ಹಾಗು ನನ್ನ ಗಾಯತ್ರಿಮಾತೆಯವರಿಗೆ ಇಷ್ಟಪಡುವ ರೀತಿಯಲ್ಲಿ ಇರಬೇಕು ಎಂಬುವುದೇ ನನ್ನ ಜೀವನದ ಏಕಮೇವ ಉದ್ದೇಶವಿದೆ ಮತ್ತು ಅವರದೇ ವಾತ್ಸಲ್ಯದಿಂದ ಅವರು ಬಯಸಿದಂತೆ ನಾನು ರೂಪಗೊಳ್ಳುವೆನು.   

ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ - ನಾನು ಹೇಗೆ, ಎಲ್ಲಿ ಮತ್ತು ಯಾವಾಗ ಇರುವುದಿಲ್ಲವೆಂಬುದು ಮಾತ್ರ ನನಗೆ ನಿಜವಾಗ್ಲೂ ಗೊತ್ತಿಲ್ಲ ಆದರೆ ನಾನು ಯಾವುದರಲ್ಲಿ ಇಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಮತ್ತು ಇದುವೇ ನನ್ನ ಪ್ರತಿಯೊಂದು ಹಾದಿಯ ಪ್ರಕಾಶ.     

ನನಗೆ ಇದು ಬೇಕು ಮತ್ತು ನನಗೆ ಅದು ಬೇಡ - ನನಗೆ ಭಕ್ತಕಾರಣ ಬೇಕು ಮತ್ತು ರಾಜಕಾರಣ ಬೇಡಾ, ನನಗೆ ಸೇವೆಯನ್ನು ಸಲ್ಲಿಸುವುದು ಬೇಕು ಆದರೆ ಯಾವುದೇ  ಸ್ಥಾನ ಬೇಡ, ನನಗೆ ಮಿತ್ರರ ಪ್ರೀತಿಯ ಸಿಂಹಾಸನ ಬೇಕು ಆದರೆ ಆಳ್ವಿಕೆ ಬೇಡ, ನನಗೆ ಅಹಿಂಸೆ ಬೇಕು ಆದರೆ ದುರ್ಬಲತೆ ಬೇಡ, ನನಗೆ ಸರ್ವಸಮರ್ಥತೆ ಬೇಕು ಆದರೆ ಅತ್ಯಾಚಾರ ಬೇಡ, ಬಲ ಬೇಕು ಆದರೆ ಹಿಂಸೆಯು ಬೇಡ, ನಾನು ಪರಮೇಶ್ವರನ ಪ್ರತ್ಯೇಕ ಭಕ್ತನ ದಾಸ್ಯತ್ವ ಸ್ವೀಕರಿಸಲು ಉತ್ಸುಕನಾಗಿರುವೆನು ಆದರೆ ದಾಂಭಿಕ ಮೋಸಗಾರಿಕೆ ಮತ್ತು ಮೂಢನಂಬಿಕೆಗಳ ನಾಯಕತ್ವ ಬೇಡ.   

ಅನೇಕರಿಗೆ ನಾನು ಯಾರಿಗೂ ಭೇಟಿಯಾಗಲು ಹೋಗುದಿಲ್ಲವೆಂದು ಕೋಪ ಬರುತ್ತದೆ ಆದರೆ ನನಗೆ ಯಾರಿಂದಲೂ ಏನು ಸ್ವೀಕರಿಸುವುದಿರುವುದಿಲ್ಲ  ಹಾಗೆಯೇ ಯಾರಿಗೂ ಏನು ನೀಡುವುದಿರುವುದಿಲ್ಲ. ಆಗ ಯಾರಿಗೂ ಭೇಟಿಯಾಗುವ ಪ್ರಶ್ನೆ ಎಲ್ಲಿ ಉದ್ಭವಿಸುತದೆ? ನಾನು ನನ್ನ ಮಿತ್ರರಿಗೆ ಮಾತ್ರ ಬೇಟಿಯಾಗುವೆನು ಕಾರಣ "ಆಪ್ತಸಂಬಂಧ" ಅಂದರೆ ಲೇವಾ-ದೇವಿವಲ್ಲದ ಏಕಮೇವ ಒಲುಮೆಯ ಭೇಟಿಯೇ ಕಾರಣವಾಗಿರುತ್ತದೆ, ಆದ್ದರಿಂದ ನಾನು ಬಡ್ಡಿರಹಿತ ಭೇಟಿಯನ್ನು ಬಯಸುತ್ತೆನೆ, ಆದರೆ ಲೇಣಿ-ದೇಣಿ ಅಥವಾ ವಿಚಾರಮಂಥನದ ಭೇಟಿಯು ಬಯಸುವುದಿಲ್ಲ.

ನನಗೆ ಜ್ಞಾನ ಬೇಡ ಅಂದರೆ ಜ್ಞಾನದ ಕಾರ್ಯಶೂನ್ಯ ಶಬ್ದಗಳು ಮತ್ತು ಪ್ರದರ್ಶನ ಬೇಡವಾಗುವುದು ಆದರೆ ನನಗೆ ಪರಿಶ್ರಮಪೂರ್ವಕ ಜ್ಞಾನದ ಸೃಜನಾತ್ಮಕ ಕಾರ್ಯಕ್ಕಾಗಿ ನಿಸ್ವಾರ್ಥ ಬಳಕೆಯು ಅಗತ್ಯವಾಗಿದೆ.

ನಾನು ಇದನ್ನು ಮಾಡಿದೆನು ಮತ್ತು ನಾನು ಅದನ್ನು ಮಾಡಿದೆನು - "ನಾನು ಏನೂ ಮಾಡುವುದಿಲ್ಲ, ಅಥವಾ ನಾನು ಯಾವತ್ತಿಗೂ ಎಲ್ಲವನ್ನು ಮಾಡುತ್ತಿರುವುದಿಲ್ಲ" ಇದು ನನ್ನ ಅಂತಿಮ ಶ್ರದ್ಧೆಯಿರುವುದು.  ಆಗ ಈ ನನ್ನ "ಅಹಂ" ಸ್ವಸ್ಥವಾಗಿ ಕುಳಿತು ನಿಷ್ಕ್ರಿಯವಿರುವುದೇ? ಅದಂತು ಸಾಧ್ಯವೇ ಇಲ್ಲ. ಈ ಅನಿರುದ್ಧನ "ಅಹಂ" ಆ "ಅಹಂ ಇಲ್ಲದ" ಪ್ರತ್ಯೇಕ ಶ್ರದ್ಧಾವಾನನ ಜೀವನಪ್ರವಾಹವನ್ನು ಗಮನಿಸುತ್ತಿರುವನು ಮತ್ತು ಆ ಪ್ರವಾಹದ ವೇಗ ನಿಲ್ಲುವುದಿಲ್ಲ ಹಾಗು ಪಾತ್ರ ಒಣಗುವುದಿಲ್ಲ, ಎಂಬುದರ ಕಾಳಜಿವಹಿಸಲು  "ಅಹಂ ಇಲ್ಲದ" ಉಗಮ ಅವನದೇ ಪ್ರೇಮದಿಂದ ಶ್ರದ್ಧಾವಾನನ ಜೀವನನದಿಯಲ್ಲಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾ ಸತತವಾಗಿ ಹರಿಯುತ್ತಿರಲು ಸುರಿಯುತ್ತಿರುವೆನು. ನನಗೆ ಹೇಳಿ, ಇದರಲ್ಲಿ ನನ್ನದೇನಿದೆ?

ನಾನು ಸತ್ಯ, ಪ್ರೇಮ ಮತ್ತು ಆನಂದ ಈ ಮೂರು ಮೂಲಭೂತ ಗುಣಗಳನ್ನು ಅತ್ಯಂತ ಮೆಚ್ಚುವೆನು ಆದುದ್ದರಿಂದ ಅಸತ್ಯ, ದ್ವೇಷ ಮತ್ತು ದುಃಖ ಇವುಗಳ ವಿರೋಧ ನನ್ನ ನೈಸರ್ಗಿಕ ಗುಣಧರ್ಮವಾಗಿದೆ; ಇದರರ್ಥ, ಈ ಕಾರ್ಯವು ತನ್ನಿಂದ ತಾನೆ ಕಾರ್ಯಗತವಾಗಿದೆ. ಕಾರಣ ಯಾವ ಸ್ವಭಾವವಿರುವುದೋ ಅದು ತನ್ನಿಂದ ತಾನೆ ಕಾರ್ಯಗತವಾಗುತ್ತದೆ, ಅದಕ್ಕೊಸ್ಕರ ಬೇಕೆಂದಲೇ ಏನು ಮಾಡುವ ಆವಶ್ಯಕತೆಯು ಇರುವುದಿಲ್ಲ.

ಪ್ರಭುರಾಮಚಂದ್ರರ ಮರ್ಯಾದಾಯೋಗ, ಭಗವಾನ ಶ್ರೀಕೃಷ್ಣರ ನಿಷ್ಕಾಮ ಕರ್ಮಯೋಗ ಮತ್ತು ಶ್ರೀಸಾಯೀನಾಥರ ಮರ್ಯಾದಾಧಿಷ್ಠಿತ ಭಕ್ತಿಯೋಗ ಇವು ನನ್ನ ಆದರ್ಶವಾಗಿವೆ. ನಾನು ಸ್ಥಿತಪ್ರಜ್ಞನಲ್ಲ, ನಾನು ಪ್ರೇಮಪ್ರಜ್ಞನಾಗಿರುವೆನು. ನಾನು "ವಾಸ್ತವತೆಯ" ಅಂದರೆ ಸ್ಥೂಲ ಸತ್ಯದೊಂದಿಗೆ ಬದ್ಧನಾಗದೆ ಯಾವುದರಲ್ಲಿ ಪಾವಿತ್ರ್ಯ ಉತ್ಪನ್ನವಾಗುವುದು ಅಂತಃ ಮೂಲಭೂತ ಸತ್ಯದೊಂದಿಗೆ ಬದ್ಧನಾಗಿರುವೆನು.                   

ನಾನು ಏನು ಮಾಡಬೇಕೆಂದು ಬಯಸುತ್ತೆನೆ? ನಾನು ಏನು ಮಾಡಲು ಹೋಗುತಿದ್ದೆನೆ? ನನ್ನ ಅಗ್ರಲೇಖ ಬರೆಯುವ ಕಾರಣವೇನಿದೆ? ನಾನು ಮೂರನೆ ವಿಶ್ವ ಮಹಾಯುಧ್ದದ ವಿಷಯದಲ್ಲಿ ಅಷ್ಟೊಂದು ಬರೆಯುವ ಕಾರಣವೇನಿದೆ? ನಾನು ಪ್ರವಚನ ಮಾಡುವುದು ಏತಕ್ಕಾಗಿ? ಇವುಗಳ ಉತ್ತರ ನನ್ನ ಹೃದಯಕ್ರಿಯೆ ಹೇಗೆ ನಡೆಯುತ್ತದೆ ಮತ್ತು ನಾನು ಉಸಿರಾಡುವಿಕೆ ಹೇಗೆ ಮಾಡುವೆನು ಅಷ್ಟೇ ಸುಲಭವಾಗಿದೆ, ನಿಜವೆಂದರೆ ಅದುವೇ ಉತ್ತರವಾಗಿದೆ.  

ನನ್ನ ಸ್ನೇಹಿತರೆ, ಕೇವಲ ಪವಿತ್ರತೆ ಮತ್ತು ಪ್ರೇಮ ಎಂಬ ಎರಡು ನಾಣ್ಯಗಳಿಗೆ ನಾನು ಒಲೆಯುವೆನು, ಇತರ ಯಾವುದೇ ಚಲನ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ನಿಜವೆಂದರೆ, ಈ ಅನಿರುದ್ಧನ "ಅಹಂ" ಕೇವಲ ನಿಮ್ಮದೇ ಆಗಿದೆ, ಅದು ಎಂದಿಗೂ ನನ್ನದಾಗಿರಲಿಲ್ಲ ಮತ್ತು ಎಂದಿಗೂ ನನ್ನದಾಗುವುದಿಲ್ಲ.

ಮಿತ್ರರ ಮಿತ್ರ,
ಅನಿರುದ್ಧ.