ಡಾ. ಅನಿರುದ್ಧ ಧೈರ್ಯಧರ ಜೋಶಿ |
ಪ್ರತಿ ವರ್ಷ ಅನಿರುದ್ಧ ಪೊರ್ಣಿಮೆ(ತ್ರಿಪುರಾರಿ ಪೊರ್ಣಿಮೆ)ಯ ಶುಭದಿನದಂದು ಸಾಧಾರಣ 25-30 ಲಕ್ಷ ಶ್ರದ್ಧಾವಾನರು ಮಹಾರಾಷ್ಟ್ರದ, ಭಾರತದ, ಅಲ್ಲದೆ ವಿಶ್ವದ ಎಲ್ಲಾ ಭಾಗದಿಂದಲೂ ಬಾಪೂಜಿಯವರ ದರ್ಶನಕ್ಕಾಗಿ ಬರುತ್ತಾರೆ. ಈ ಶ್ರದ್ಧಾಳುಗಳಲ್ಲಿ ಸಾಮಾನ್ಯ ಜನರೊಂದಿಗೆ ವೈದ್ಯಕೀಯ, ಇಂಜಿನಿಯರ್ಸ್, ಪ್ರಾಧ್ಯಾಪಕ, ಸಾಹಿತಿವರ್ಗದವರೊಂದಿಗೆ ಸರಕಾರಿ ಹುದ್ದೆಯವರು ಹಾಗು ರಕ್ಷಣಾ ಕ್ಷೆತ್ರದವರು ಭಾಗವಹಿಸುತ್ತಾರೆ. ಈ ಶ್ರದ್ಧಾಳುಗಳು ಬಾಪೂಜಿಯವರ ಪ್ರೇಮ ಭರಿತವಾದಂತಹ ಒಂದು ನೋಟಕ್ಕೆ ತಾಸುಗಟ್ಟಲೆ ತಮ್ಮ ಸರದಿಗಾಗಿ ಕಾದು ಅವರ ದರ್ಶನದ ಬಳಿಕ ಆನಂದ ಲಹರಿಯಲ್ಲಿ ತಮ್ಮನ್ನು ತಾವೆ ಮರೆಯುತ್ತಾರೆ.
ಈಗಿನ ಕಾಲದಲ್ಲಿ ಜನರನ್ನು ತಮ್ಮೆಡೆಗೆ ಆಕರ್ಷಿಸಲು ಹಲವರು, ನಾನವಿದಗಳನ್ನು ಅನುಸರಿಸುತ್ತಾರೆ. ಕಾಪಾಯಿ ವಸ್ತ್ರವನ್ನು ಧರಿಸದೆ ಕೈಯಲ್ಲಿ ದಂಡ-ಕಮಂಡಲಗಳನ್ನು ಮತ್ತು ಜಪಮಾಲೆಯನ್ನು ಹಿಡಿಯದೆ ಹಣೆಗೆ ಚಂದನದ ತಿಲಕವನ್ನು ಹಾಕದೆ ಮತ್ತು ಚಮತ್ಕಾರವನ್ನು ಕೈಚಳಕವೆಂದೇ ಘಂಟಾಪೋಷವಾಗಿ ಉದ್ಗರಿಸುವ ಬಾಪೂಜಿಯವರನ್ನು ಸುಶಿಕ್ಷಿತ ಮತ್ತು ಅನ್ಯ ವರ್ಗದವರು ಸದ್ಗುರುವೆಂದು ಯಾಕೆ ಭಾವಿಸುತ್ತಾರೆ?
ತಮ್ಮ ಜೀವನದಲ್ಲಿ ಪಡೆದ ಅನುಭವ ಮತ್ತು ಘಟನೆಗಳಿಂದ ಬಾಪೂಜಿಯವರನ್ನು ತಿಳಿದ ಜನರು ಅವರನ್ನು ಪರಮಾತ್ಮನೆಂದು ಭಾವಿಸುತ್ತಾರೆ. ಅವರ ಪ್ರತಿಯೊಂದು ಸಮಾರಂಭವು ಅಸಂಖ್ಯ ಮತ್ತು ಅಗಣಿತ ಶ್ರದ್ಧಾಳುಗಳಿಂದ ತುಂಬಿದ್ದರೂ ಈ ಸಮಾರಂಭಗಳಲ್ಲಿ ಯಾವುದೊಂದು ಅಹಿತಕರ ಘಟನೆಗಳು ನಡೆಯದೆ ಪ್ರತಿಯೊಬ್ಬರು ಬಾಪೂಜಿಯವರಿಗೆ ಪ್ರೀಯವಾದಂತಹ ಅನುಶಾಸನವನ್ನು ಪಾಲಿಸಿ ಭಾವಪೂರ್ಣ ವಾತಾವರಣದಲ್ಲಿ ಸಮಾರಂಭವು ಸಮಾಪ್ತಿಯಾಗುತ್ತದೆ. ಬಾಪೂಜಿಯವರ ದರ್ಶನಕ್ಕಾಗಿ ಶ್ರದ್ಧಾಳುಗಳು 6 ರಿಂದ 7 ಗಂಟೆವರೆಗೆ ತಮ್ಮ ಸರದಿಗಾಗಿ ಅತೀ ಶಾಂತತೆಯಲ್ಲಿ ಕಾಯುವ ಸಮಯದಲ್ಲೂ ಹೆಚ್ಚಿನವರು ‘‘ಅನಿರುದ್ಧಾಜ್ ಯುನಿವರ್ಸಲ್ ಬ್ಯಾಂಕ್ ಆಫ್ ರಾಮನಾಮ’’ದ ಪುಸ್ತಕವನ್ನು ಬರೆದರೆ ಇನ್ನು ಕೆಲವರು ವಿಭಿನ್ನ ಮಂತ್ರ ಸ್ತೋತ್ರಗಳನ್ನು ಪಠಿಸುತ್ತಾರೆ.
ಇಂತಹ ಶ್ರದ್ಧಾಳುಗಳನ್ನು ಕಂಡಾಗ ಬಾಪೂಜಿಯವರ ಬಗ್ಗೆ ಅಪರಿಚಿತ ವ್ಯಕ್ತಿಗಳಿಗೂ ಕುತುಹಲ ಜಾಗೃತವಾಗುತ್ತದೆ. ಇವರು ಯಾರು? ಎಂದು ಪ್ರಚಲಿತ ದೃಷ್ಟಿಯಿಂದ ಕಾಣುವಾಗ ಆಧ್ಯಾತ್ಮಿಕವಾಗಿ ಹೇಳುವಂತಹ ಏಕಮಾತ್ರ ಚಿನ್ಹೆಯು ಅವರಲ್ಲಿ ಕಂಡು ಬರುವುದಿಲ್ಲ ಆದರೂ ಭಾವಿಕರು ಅವರನ್ನು ಸದ್ಗುರುವೆಂದು ಹೇಗೆ ಮತ್ತು ಯಾಕೆ ಭಾವಿಸುತ್ತಾರೆ? ಬಾಪೂಜಿಯವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ತಮ್ಮ ಗ್ರಹಸ್ತಿ, ಉದ್ಯೋಗ ಮತ್ತು ವ್ಯವಸಾಯಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಿ ಅತಿ ಆತುರತೆಯಿಂದ ಬಾಪೂಜಿಯವರ ವಿಭಿನ್ನ ಸೇವಾ ಉಪಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದನ್ನು ಕಾಣುವಾಗ ಪ್ರತಿಯೊಬ್ಬರಿಗು ಸಹಜವಾಗಿ ಆಶ್ಚರ್ಯವಾಗುತ್ತದೆ. ಪ್ರಚಾರ ಮತ್ತು ಪ್ರಸಾರವಿಲ್ಲದಿದ್ದರೂ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಬಾಪೂಜಿಯವರೊಂದಿಗೆ ಈ ಜನಸಮುದಾಯ ಯಾಕೆ ಇದೆ? ಬಾಪೂಜಿಯವರ ವಿಚಾರಧಾರೆ ಏನು? ಅವರು ಏನು ಮಾಡಲು ಬಯಸುತ್ತಾರೆ? ಇಷ್ಟೆಲ್ಲ ಉಪಕ್ರಮಗಳನ್ನು ನಮ್ಮಿಂದ ಏಕೆ ಮಾಡಿಸುತ್ತಾರೆ? ಇಂತಹ ಹಲವಾರು ಪ್ರಶ್ನೆಗಳು ಪ್ರತಿಯೊಬ್ಬ ಅಪರಿಚಿತ ವ್ಯಕ್ತಿಗಳಿಗೆ ಉಂಟಾಗುವುದು ಸಹಜವಾಗಿದೆ.
ಡಾ. ಅನಿರುದ್ಧ ಧೈರ್ಯಧರ ಜೋಶಿ ಅಂದರೆ ಸದ್ಗುರು ‘ಶ್ರಿ ಅನಿರುದ್ಧ ’ (ಬಾಪೂ) ವೈದ್ಯಕೀಯ ಕ್ಷೇತ್ರದಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ M.D. (ಮೆಡಿಸಿನ್) ಪದವಿಯನ್ನು ಗಳಿಸಿದ್ದಾರೆ ಹಾಗು ಪ್ರಖ್ಯಾತ ವೈದ್ಯರೆಂದು ಹೆಸರನ್ನು ಪಡೆದಿದ್ದಾರೆ. ಸ್ವತಃ ಗ್ರಹಸ್ತರಾಗಿದ್ದು ಗ್ರಹಸ್ತಾಶ್ರಮವನ್ನು ಪಾಲಿಸಿ ಪರಮಾರ್ಥವನ್ನು ಸಾದಿಸಲು ಸಾದ್ಯವಿದೆ ಎಂಬ ತತ್ವವನ್ನು ತಾವು ಸ್ವತಃ ಪಾಲಿಸಿ ತೋರಿಸುತ್ತಾರೆ. ಆಧ್ಯಾತ್ಮಿಕ ಅಂದರೆ ತಮ್ಮ ಹೊಣೆಗಾರಿಕೆಯಿಂದ ದೂರ ಓಡುವುದಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸದೆ ಸಂಸಾರವನ್ನು ತ್ಯಜಿಸಿ ಶರೀರದ ಮೇಲೆ ಭಸ್ಮವನ್ನು ಲೇಪಿಸುವುದು ಪರಮಾರ್ಥವಲ್ಲ. ಯಾವನು ಸಂಸಾರದ ಹೊಣೆಗಾರಿಕೆಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದೆ ಪರಮಾರ್ಥಿಕ ಮಾರ್ಗವನ್ನು ಅನುಸರಿಸುತ್ತಾನೊ ಅವನು ಡಾಂಬಿಕ ಎಂದು ಬಾಪೂಜಿಯವರು ಈ ತತ್ವವನ್ನು ‘‘ಸಾಯಿ ಸಚ್ಚರಿತೆ’’ಯ ಮೂಲಕ ಸಮರ್ಥಿಸಿದ್ದಾರೆ ಮತ್ತು ಪ್ರತಿಯೊಬ್ಬರನ್ನು ಪುರುಷಾರ್ಥಿಯಾಗಲು ಪ್ರಯತ್ನಿಸುತ್ತಾರೆ.
ವ್ಯವಹಾರದಲ್ಲಿ ಜಾಗೃತವಾಗಿದ್ದರೆ ಪರಮಾರ್ಥವು ಅನಾಯಸವಾಗಿ ಪ್ರಾಪ್ತವಾಗುತ್ತದೆ, ಆದುದರಿಂದ ಗ್ರಹಸ್ತಾಶ್ರಮದ ಜವಾಬ್ದಾರಿಗಳಿಂದ ದೂರ ಸರಿಯದೆ ಪುರುಷಾರ್ಥವನ್ನು ಸಾದೀಸುತ್ತಾ ಇರಬೇಕು.
(ಸಾಯಿ ಸಚ್ಚರಿತೆಯ ಅಧ್ಯಾಯ 14/27ರ ವರೆಗೆ)
ಬಾಪೂಜಿಯವರು ಏನು ಮಾಡಲು ಇಚ್ಛಿಸುತ್ತಾರೆ? ಅವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾರೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿಯೆ ಸಿಗುತ್ತದೆ. ಬಾಪೂಜಿಯವರು ಪ್ರತಿಯೊಬ್ಬನನ್ನು ‘‘ಓಜಸ್ವಿ’’ ಪುರುಷಾರ್ಥಿಯಾಗಲು ಬಯಸುತ್ತಾರೆ. ದರ್ಮ, ಕಾಮ, ಅರ್ಥ, ಮೋಕ್ಷ, ಭಕ್ತಿ ಮತ್ತು ಮರ್ಯಾದೆ ಎಂಬ ಈ ಆರು ಪುರುಷಾರ್ಥಗಳನ್ನು ಸಾದೀಸುವುದೇ ಮಾನವ ದರ್ಮದ ಪರಮ ಕರ್ತವ್ಯವಾಗಿದೆ. ಗ್ರಹಸ್ತಾಶ್ರಮದ ಪಾಲನೆ ಮಾಡಿ ಸಂಸಾರ ಮತ್ತು ಪರಮಾರ್ಥ ಮಾರ್ಗದಲ್ಲಿ ಸಫಲತೆಯನ್ನು ಯಶಸ್ವಿಯಾಗಿ ಸಾದಿಸಲು ಸಾದ್ಯ ಎಂದು ನಮ್ಮೆಲ್ಲರ ಮಾರ್ಗದರ್ಶನಕ್ಕಾಗಿ ಬಾಪೂಜಿಯವರು ಸ್ವಯಂ ‘ಗ್ರಂಥರಾಜ’ ಪುರುಷಾರ್ಥವನ್ನು ಪ್ರಕಟಿಸಿದ್ದಾರೆ.
ಗ್ರಂಥರಾಜ ಪುರುಷಾರ್ಥದಲ್ಲಿ ಅವರ ಜೀವನದ ಉದ್ದೇಶವನ್ನು ಸ್ಪಷ್ಟಪಡಿಸುವುದರೊಂದಿಗೆ ನಮೆಲ್ಲರನ್ನು ಮಿತ್ರರೆಂದು ಉದ್ದೇಶಿಸಿ ಸಂಪೂರ್ಣ ವಿಶ್ವದಲ್ಲಿ ಮರ್ಯಾದಾ ಪುರುಷಾರ್ಥದ ಸ್ಥಾಪನೆ ಮಾಡದ ಹೊರತು ಮರ್ಯಾದಾ ಪುರುಷೋತ್ತಮನಾದಂತಹ ಪ್ರಭು ಶ್ರಿರಾಮಚಂದ್ರರ ರಾಜ್ಯ ಬರಲಿಕ್ಕೆ ಸಾದ್ಯವಿಲ್ಲ. ಆದುದರಿಂದ ಮರ್ಯಾದಾ ಪುರುಷಾರ್ಥದ ಮಾರ್ಗವನ್ನು ಅನುಸರಿಸಿ ಅದರ ವೃದ್ಧಿಯನ್ನು ಮಾಡುವುದೇ ನನ್ನ ಸತ್ಯ ಸಂಕಲ್ಪವಾಗಿದೆ ಎಂದು ಸಾರಿ ಹೇಳುತ್ತಾರೆ.
ಬಾಪೂಜಿಯವರ ಸಂವಾದವು ಪ್ರತಿಯೊಬ್ಬ ಶ್ರದ್ಧಾವಾನನಿಗೆ ಮಿತ್ರನ ಭುಮಿಕೆಯನ್ನು ನಿರ್ವಹಿಸುತ್ತದೆ. ಬಾಪೂಜಿಯವರು ಸ್ವಯಂ ತನ್ನನ್ನು ‘‘ನಾನು ಯಾರ ಅವತಾರವು ಅಲ್ಲ’’ ಎಂದು ಹೇಳಿದ್ದಾರೆ ಹಾಗು ಗ್ರಂಥರಾಜ ಶ್ರಿಮದ್ ಪುರುಷಾರ್ಥದಲ್ಲಿ ತನ್ನ ಸ್ವತಃ ಹಸ್ತಾಕ್ಷರದಲ್ಲಿ ‘ನಾನು ನಿಮ್ಮ ಮಿತ್ರ, ನಾನು ಯಾರ ಅವತಾರವು ಅಲ್ಲ, ನಾನು ಮೊದಲು ಅನಿರುದ್ಧನಾಗಿದ್ದೆ, ಈಗಲೂ ಅನಿರುದ್ಧನಾಗಿದ್ದೇನೆ, ಇನ್ನು ಮುಂದೆಯೂ ನಾನು ಅನಿರುದ್ಧನೆ’ ಎಂದಿದ್ದಾರೆ.
’ನಾನು’ ಯೋಧ ಮತ್ತು ಪ್ರಾರಬ್ಧದೊಂದಿಗೆ ಯಾರು ಯುದ್ಧ ಮಾಡಲು ಇಚ್ಛಿಸುತ್ತಾರೊ ಅವರಿಗೆ ಯುದ್ಧ ಕಲೆಯನ್ನು ಕಲಿಸುವುದು ನನಗೆ ಬಹಳ ಇಷ್ಷ ಎಂದು ಬಾಪು ಹೇಳುತ್ತಾರೆ.
ಗ್ರಂಥರಾಜ ಶ್ರಿಮದ್ ಪುರುಷಾರ್ಥಗಳಾದ - ‘‘ಸತ್ಯಪ್ರವೇಶ, ಪ್ರೇಮ ಪ್ರವಾಸ ಮತ್ತು ಆನಂದಸಾಧನ’’ ಎಂಬ ಮೂರು ಖಂಡಗಳು ಪ್ರಕಾಶಿಸಲ್ಪಟ್ಟಿವೆ. ಈ ಗ್ರಂಥಗಳ ಮೂಲಕವಾಗಿ ಬಾಪೂಜಿಯವರು ನಮ್ಮ ಮಿತ್ರರಾಗಿ ನಾವು ಪರಮೇಶ್ವರಿ ಮಾರ್ಗದಲ್ಲಿ ನಡೆದು ನಮ್ಮ ಸಮಗ್ರ ಜೀವನವನ್ನು ವಿಕಾಸ ಮಾಡಲು ಅನುಕೂಲವಾಗುವಂತ ಮಾರ್ಗಗಳನ್ನು ಬಹಳ ಸುಲಭವಾದಂತಹ ಶಬ್ದಗಳಲ್ಲಿ ಸ್ಪಷ್ಟೀಕರಿಸಿದ್ದಾರೆ. ನೀವು ನನ್ನನ್ನು ಯಾವ ಹೆಸರಿನಿಂದಾದರೂ ಕರೆಯಿರಿ ಇಲ್ಲವೆ ನನಗೆ ಯಾವ ಹೆಸರನ್ನಾದರೂ ಕೊಡಿರಿ ಆದರೆ ನಾನು ಮಾತ್ರ ನಿಮ್ಮನ್ನು ಮಿತ್ರನೆಂದು ಭಾವಿಸುತ್ತೆನೆ. ಯಾವ ಸಮಯದಲ್ಲಿಯೂ ನಿಮಗೆ ವಂಚನೆ ಮಾಡದೆ ಹಾಗು ಸತತ ನಿಮ್ಮ ಸಂತೋಷದಲ್ಲಿಯೆ ಆನಂದವನ್ನು ಕಾಣುವ ಮಿತ್ರನಾಗುವೆನು.
"ಧರ್ಮ" ಈ ಪುರುಷಾರ್ಥವನ್ನು ಸ್ಪಷ್ಟೀಕರಿಸುತ್ತಾ ಬಾಪೂಜಿಯವರು ಸದಾ ಹೇಳುತ್ತಾರೆ, ಪಾವಿತ್ರತೆಯ ಅಧಿಷ್ಠಾನ ಆಗಿರುವಂತೆ ‘‘ಪವಿತ್ರತೆಯೆ ಪ್ರಮಾಣ’’ ಈ ತತ್ವದ ಬುನಾದಿಯಲ್ಲಿ ಸ್ಥಿತವಾಗಿರುವಂತಹ ಸತ್ಯ, ಪ್ರೇಮ ಮತ್ತು ಆನಂದವೇ ಪರಮೇಶ್ವರಿ ಮೂಲದ ನಿಜಧರ್ಮವಾಗಿದೆ. ಮರ್ಯಾದಾ ಮಾರ್ಗವೇ ಮಾನವ ಧರ್ಮಕ್ಕೆ ಪರಮೇಶ್ವರಿ ಐಶ್ವರ್ಯದ ಪ್ರಾಪ್ತಿಯನ್ನು ಮಾಡಿಸುತ್ತದೆ ಎಂಬುವುದನ್ನು ಶ್ರಿ ಅನಿರುದ್ಧರವರು ಶ್ರಿಮದ್ ಪುರುಷಾರ್ಥದಲ್ಲಿ ಹೇಳಿರುತ್ತಾರೆ.
ಎಲ್ಲಾ ಭಾರತೀಯ ಸಂತರು ಪ್ರಾಚೀನ ಭಾರತೀಯ ಸಂಸ್ಕೃತಿಯ ಸಮನ್ವಯಶೀಲ ಭಕ್ತಿಮಾರ್ಗವನ್ನು ಉಪದೇಶಿಸಿದ್ದಾರೆ. ಅತೀಶಯ ನಿವೃತ್ತಿವಾದ ಹಾಗು ಐಹಿಕ ಸ್ವಾರ್ಥದಿಂದ ಕೂಡಿದ ಪ್ರವೃತ್ತಿವಾದ ಈ ಎರಡು ಪದಗಳ ಭಿನ್ನತೆಯ ಕಾರಣದಿಂದ ವ್ಯಕ್ತಿಗತ ಜೀವನದಲ್ಲಿ ಮತ್ತು ಸಮಾಜದಲ್ಲಿ ಅಸಮಂಜಸತೆಯು ಉತ್ಪನ್ನವಾಗುತ್ತದೆ. ವಿಜ್ಞಾನ ಮತ್ತು ಆಧ್ಯಾತ್ಮವು ಪರಸ್ಪರ ವಿರೋದಗಳಾಗಿರದೆ ಪರಸ್ಪರ ಪೂರಕವಾಗಿರುತ್ತದೆ. ಇದರ ಸಮನ್ವಯದಿಂದಾಗಿಯೆ ಮಾನವ ಸಮಾಜದ ವಿಕಾಸವಾಗಲು ಸಾದ್ಯವಾಗುತ್ತದೆ ಎಂಬುವುದನ್ನು ಬಾಪೂಜಿಯವರು ಸಾರಾಸಾರಿ ಹೇಳುತ್ತಾರೆ.
ಸಾಯಿಸಚ್ಚರಿತೆಯಂತಹ ಶ್ರೇಷ್ಠಗ್ರಂಥದ ಆಧಾರಿತ ಪಂಚಶೀಲ ಪರೀಕ್ಷೆಯನ್ನು ಪ್ರಾರಂಭಿಸಿ ಬಾಪೂಜಿಯವರು ಭಕ್ತಿತತ್ವ ಮತ್ತು ವಿಜ್ಞಾನತತ್ವ ಪರಸ್ಪರ ವಿರೋ ದಿಗಳಾಗದೆ ಪೂರಕವಾಗಿದೆ ಎಂದು ಪ್ರಾಯೋಗಿಕವಾಗಿ ಸ್ಪಷ್ಟೀಕರಿಸಿದ್ದಾರೆ.
ಪಂಚಗುರುಗಳು |
ಶ್ರಿಮದ್ ಪುರುಷಾರ್ಥ ಗ್ರಂಥದಲ್ಲಿ ಶ್ರಿ ಅನಿರುದ್ಧರವರು ತನ್ನ ಪಂಚಗುರುಗಳ ಬಗ್ಗೆ ಈ ರೀತಿಯಾಗಿ ಸ್ಪಷ್ಟೀಕರಿಸಿದ್ದಾರೆ, ದತ್ತಗುರು ನನ್ನಿಂದ ಮಾಡಿಸುವ ಗುರುಗಳಾಗಿದ್ದಾರೆ, ಗಾಯತ್ರಿ ಮಾತೆಯು ನನ್ನ ವಾತ್ಸಲ್ಯ ಗುರುವಾಗಿ ಪ್ರಭು ಶ್ರಿರಾಮನು ನನ್ನ ಕರ್ತಾಗುರುವಾಗಿದ್ದಾರೆ. ಅಂತೆಯೆ ಶ್ರಿ ಹನುಮಂತನು ನನ್ನ ರಕ್ಷಕಗುರುವಾದರೆ, ಶ್ರಿಸಾಯಿನಾಥರು ನನ್ನ ದಿಗ್ದರ್ಶಕಗುರುವಾಗಿದ್ದಾರೆ. ಸಮರ್ಥ ಶ್ರಿರಾಮದಾಸ ಸ್ವಾಮೀಜಿಯವರ ಮನಃ ಶ್ಲೋಕ (ಮನಬೋಧ), ಭೀಮರೂಪಿ ಮಹಾರುದ್ರಾ ಶ್ಲೋಕ, ದಾಸಬೋಧಗಳಂತಹ ರಚನೆಗಳೊಂದಿಗೆ ಸಂತ ಶ್ರೇಷ್ಠ ಶ್ರಿ ತುಳಸೀದಾಸಜಿಯವರ ಶ್ರಿಹನುಮಾನ ಚಾಲೀಸಾ, ಸಂಕಟಮೋಚನ ಹನುಮಾನಾಷ್ಟಕ ಇಂತಹ ಮಹಾನ ರಚನೆಗಳ ಮಹತ್ವವನ್ನು ಶ್ರಿಅನಿರುದ್ಧರವರು ಪದೇ ಪದೇ ಪ್ರತಿಪಾದಿಸುತ್ತಾರೆ.
ಬಾಪೂಜಿಯವರ ಜೊತೆ ಶಿರಡಿ, ಶ್ರಿಸ್ವಾಮೀಸಮರ್ಥರ ಪಾವನ ಭೂಮಿಯಾದ ‘ಅಕ್ಕಲಕೋಟ’ ಶ್ರಿಸಂತ ತುಕಾರಾಮರ ಪಾವನ ಭೂಮಿಯಾದಂತಹ ‘ದೆಹೂ’ ಅಂತೆಯೇ ಜ್ಞಾನೇಶ್ವರರ ಪಾವನ ಭೂಮಿಯಾದಂತಹ ‘ಆಳಂದಿ’ ಅಂತೆಯೇ ಮಂಗೇಶ - ಶಾಂತಾದುರ್ಗೆಯರ ಪವಿತ್ರಕ್ಷೆತ್ರವಿದ್ದಂತಹ ಗೋವಾ ಇಂತಹ ಪವಿತ್ರ ಕ್ಷೇತ್ರಗಳ ರಸಯಾತ್ರೆಗಳಲ್ಲಿ ತಥಾ ಪಂಡರಪುರದ ಭಾವಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಭಾವಿಕನಿಗೆ ಭಕ್ತಿಯ ಅವಿಸ್ಮರಣೀಯ ಅನುಭೂತಿ ಪ್ರಾಪ್ತಿಯಾಗಿದೆ. ಬಾಪೂಜಿಯವರ ಮನೆಯಲ್ಲಿ ಪ್ರತಿವರುಷ ಆಚರಿಸಲ್ಪಡುವಂತಹ ಗಣೇಶೋತ್ಸವದಲ್ಲಿ ಹಾಗು ಗಣಪತಿ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಶ್ರದ್ಧಾಳುಗಳಿಗೆ ಭಕ್ತಿಯ ರಸಗಂಗೆಯ ಅಮೃತಪಾನದ ಅನುಭವವಾಗಿದೆ.
ಮಂಗಲಮಯ ಮತ್ತು ಪವಿತ್ರಮಯ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿ ವಿಭಿನ್ನ ರೀತಿಯ ಉಪಾಸನೆ ಮಾಡುವುದು ಹಾಗು ಪುರಾತನ ಭಾರತೀಯ ಸಂಸ್ಕೃತಿಯನ್ನು ತಿಳಿಯುವುದು ಬಾಪೂಜಿಯವರಿಗೆ ಮೊದಲಿನಿಂದ ಆಕರ್ಷಣೆಯಾಗಿತ್ತು. ಆದರ್ಶ ತೀರ್ಥ ಕ್ಷೇತ್ರಗಳ ಉದಾಹರಣೆಗಾಗಿ ಬಾಪೂಜಿಯವರ ಮಾರ್ಗದರ್ಶನದಲ್ಲಿ ಜುಹಿನಗರದ ‘ಗುರುಕುಲ’, ಕರ್ಜತ್‌ನಲ್ಲಿ ‘ಕೊಟಿಂಬೇ’ ಎಂಬ ಹಳ್ಳಿಯಲ್ಲಿ ‘ಗೋವಿದ್ಯಾಪಿಠಮ್’, ರತ್ನಾಗಿರಿಯಲ್ಲಿ ‘ಅತುಲಿತಬಲಧಾಮ’ ಮತ್ತು ಧುಳೆಯ ನಿಮ್‌ಗಾಂವನಲ್ಲಿ ಸದ್ಗುರು ಪುಣ್ಯಕ್ಷೇತ್ರವೆಂಬ ಹಲವಾರು ಪ್ರತಿಷ್ಠಿತ ಪುಣ್ಯಕ್ಷೇತ್ರಗಳನ್ನು ಸ್ಥಾಪಿಸಿದರು. ಅಂತೆಯೆ ಶಿರಡಿಯ ಶ್ರಿಸಾಯಿ ಬಾಬಾರವರ ಆಜ್ಞೆಯಂತೆ ಅವರ ‘ಸಚ್ಚರಿತೆ’ಯ ಲೇಖಕರಾದ ಶ್ರಿಹೇಮಾಡಪಂತರ ಮೊಮ್ಮಗರಾದ ಸದ್ಯಪಿಪಾ ಶ್ರಿ ಅಪ್ಪಾಸಾಹೇಬ ದಾಭೊಳಕರ ಮತ್ತು ಅವರ ಧರ್ಮಪತ್ನಿ ಶ್ರಿಮತಿ ಮೀನಾತಾಯಿಯವರ ಮುಖಾಂತರ ಬಾಪೂಜಿಯವರು ಶ್ರಿಸಾಯಿ ಬಾಬಾರ ದ್ಯಾನಮೂರ್ತಿಯನ್ನು ಅವರ ನಿವಾಸ ಸ್ಥಾನವಾದಂತಹ ಬಾಂದ್ರದ ಶ್ರಿಸಾಯಿನಿವಾಸದಲ್ಲಿ ಸ್ಥಾಪನೆ ಮಾಡಿಸಿದರು. ಮುಂಬೈ ಮಹಾನಗರದ ಖಾರ್‌ನಲ್ಲಿ ಬಾಪೂಜಿಯವರು ಸ್ಥಾಪಿಸಿದಂತಹ ‘ಶ್ರಿಗುರುಕ್ಷೆತ್ರಮ್’ ಶ್ರದ್ಧಾಳುಗಳಿಗೆ ತೀರ್ಥಕ್ಷೇತ್ರಗಳ ಮುಕುಟಮಣಿಯಾಗಿದೆ.
ನಿಸ್ವಾರ್ಥ ಪ್ರೇಮವೇ ಶ್ರಿಅನಿರುದ್ಧರ ಮೂಲಗುಣಧರ್ಮವಾಗಿದೆ ಎಂಬುವುದನ್ನು ಬಾಪೂಜಿಯವರ ಸಂಪರ್ಕದಲ್ಲಿರುವ ಪ್ರತಿಯೊಬ್ಬ ಶ್ರದ್ಧಾಳುಗಳು ತಿಳಿದಿದ್ದಾರೆ. ಬಾಪೂಜಿಯವರು ಯಾರಿಂದಲೂ ಏನನ್ನು ಅಪೇಕ್ಷಿಸುವುದಿಲ್ಲ. ಅವರ ಜನ್ಮದಿನವಾದ ತ್ರಿಪುರಾರಿ ಪೊರ್ಣಿಮೆಯ ದಿನದಲ್ಲಿಯೂ ಅವರು ಯಾರಿಂದಲೂ ಯಾವುದೇ ರೀತಿಯ ಉಪಹಾರಗಳನ್ನು ಸ್ವೀಕರಿಸುವುದಿಲ್ಲ. ಎಷ್ಟೆಂದರೆ ಬಾಪೂಜಿಯವರ ಪ್ರವಚನ ಸಮಯದಲ್ಲಿ ಉಪಸ್ಥಿತರಿರುವಂತಹ ಭಾವಿಕರಿಂದಲೂ ಅವರು ಪ್ರಣಾಮವನ್ನು ಕೂಡ ಅಪೇಕ್ಷಿಸುವುದಿಲ್ಲ.
ಪ್ರತಿಗುರುವಾರವೂ ಬಾಪೂಜಿಯವರು ಗುರುಚರಿತ್ರೆಯ ಹದಿನಾಲ್ಕನೇಯ (14) ಅಧ್ಯಾಯದ ಪಠಣೆಯನ್ನು ಮಾಡಿಸುತ್ತಾರೆ ಹಾಗು ಶ್ರಿದತ್ತಗುರುವಿನ ಪೂಜನೆಯನ್ನು ಸ್ವತಃ ಮಾಡುತ್ತಾರೆ. ಆ ಬಳಿಕ ಎಲ್ಲರೊಂದಿಗೆ ಕೂಡಿ ಆರಾಧನಾಜ್ಯೋತಿಯ ಉಪಾಸನೆಯೊಂದಿಗೆ ಸಾಮೂಹಿಕ ನಾಮಸಂಕೀರ್ತನೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.
ಮೂರನೆ ಮಹಾ ವಿಶ್ವಯುದ್ಧ |
ಭವಿಷ್ಯ ಕಾಲಖಂಡದಲ್ಲಿ ವಿಷಮ ಪರಿಸ್ಥಿತಿಯ ವಿಕೋಪವನ್ನು ಎದುರಿಸಲು ಸರ್ವರೀತಿಯಲ್ಲಿ ಸಮರ್ಥರಾಗಿ ತಮ್ಮ ಜೀವನ ವಿಕಾಸದಲ್ಲಿ ಯಶಸ್ವಿಯಾಗಲೂ ಬಾಪೂಜಿಯವರು ಶ್ರದ್ಧಾಳುಗಳಿಗೆ ಆರಾಧನಾ ಜ್ಯೋತಿಯ ಉಪಾಸನೆಯನ್ನು ವರಪ್ರಧಾನ ಮಾಡಿದ್ದಾರೆ. ತಮ್ಮ ಜೀವನದಲ್ಲಿ ಯಶಸ್ವಿಯಾಗಲೂ ಭಕ್ತಿಯೆ ಶಕ್ತಿಯನ್ನು ಪ್ರಧಾನ ಮಾಡುತ್ತದೆ. ಇದುವೇ ಬಾಪೂಜಿಯವರ ಉದ್ದೇಶವಾಗಿದೆ. ಮುಂಬರುವ ಭೀಕರ ಕಾಲಚಕ್ರವನ್ನು ಯಶಸ್ವಿಯಾಗಿ ಪಾರಾಗಲು ಪ್ರತಿಯೊಬ್ಬ ಶ್ರದ್ಧಾವಾನರನ್ನು ಸಮಗ್ರ ರೀತಿಯಲ್ಲಿ ಸಮರ್ಥ ಮತ್ತು ಸೊಸಜ್ಜಿತನನ್ನಾಗಿ ಮಾಡಲು ಬಾಪೂಜಿಯವರು ಮೂರನೆ ವಿಶ್ವ ಮಹಾಯುದ್ಧದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಒಂದು ಭವಿಷ್ಯದ ದಂತಕಥೆಯಾಗಿರದೆ ಭೀಕರ ಪರಿಸ್ಥಿಗಳ ಮತ್ತು ಸತ್ಯದ ಲೆಕ್ಕಾಚಾರವಾಗಿದೆ.
ಈ ಪುಸ್ತಕದಲ್ಲಿ ಮೊದಲು ನಡೆದು ಹೋದ ಎರಡು ಮಹಾ ವಿಶ್ವಯುದ್ಧಗಳ ಮಿಮಾಂಶೆಯೊಂದಿಗೆ ಇನ್ನು ನಡೆಯುವ ಮೂರನೆ ಮಹಾ ವಿಶ್ವಯುದ್ಧದ ಸಂಕಲ್ಪನೆಯನ್ನು ವರ್ತಮಾನಕಾಲದಲ್ಲಿ ನಡೆಯುವಂತಹ ಪರಿಸ್ಥಿತಿಯ ಬದಲಾವಣೆಯ ಆಧಾರದ ಮೇಲೆ ಸಕಾರಾತ್ಮಕ ಪರ್ಯಾಲೋಚನೆ ಮತ್ತು ಪರೀಕ್ಷಣೆ ಮಾಡಿದ್ದಾರೆ. ಅಂತೆಯೇ ಮೂರನೆ ವಿಶ್ವ ಮಹಾಯುದ್ಧದಲ್ಲಿ ಬಳಿಸುವಂತಹ ಜೈವಿಕ, ರಾಸಾಯನಿಕ ಮತ್ತು ವಿಭಿನ್ನ ಶಸ್ತ್ರಾಸ್ತ್ರಗಳ ಬಳಕೆಯ ಸಮಾವೇಶವನ್ನು ನಮೂದಿಸಿದ್ದಾರೆ. 2006ರಲ್ಲಿ ಪ್ರಕಟಣೆಯಾದ ಮೂರನೆ ವಿಶ್ವ ಮಹಾಯುದ್ಧದ ಪ್ರತಿಗಳು ಹಿಂದಿ ಭಾಷೆಯಲ್ಲಿಯೂ ಕೂಡ ಲಭ್ಯವಾಗಿದೆ. ಈ ಪುಸ್ತಕವನ್ನು ಓದಿದವರಿಗೆ ಅದರಲ್ಲಿ ಪ್ರಕಟಿತವಾದಂತಹ ವಿಷಯಗಳ ಸತ್ಯದ ಅರಿವನ್ನು ಗಮನಿಸಬಹುದು.
ಮೂರನೆ ವಿಶ್ವ ಮಹಾಯುದ್ಧದ ಭಯಾನಕ ಕಾಲಖಂಡವನ್ನು ಸಕ್ಷಮವಾಗಿ ಎದುರಿಸಲು ಪ್ರತಿಯೊಬ್ಬ ಶ್ರದ್ಧಾಳು ಸಮಗ್ರ ರೀತಿಯಲ್ಲಿ ಸಮರ್ಥರಾಗುವುದು ಅತ್ಯಾವಶ್ಯಕವಾಗಿದೆ.
‘‘ರಕ್ಷಣೆಗಾಗಿ ಕಾದುವುದು ಸೋಲಿಗೆ ಮೂಲ’
ಆಕ್ರಮಣವೇ ವಿಜಯದ ನಾಂದಿ’’
ಅನಿರುದ್ಧಾಜ್ ಆಕ್ಯಾಡೆಮಿ ಆಫ್ ಡಿಜಾಸ್ಟರ್ ಮ್ಯಾನೆಜಮೆಂಟ್ |
ಬಾಪೂಜಿಯವರ ತ್ರಯೋದಶಿ ಯೋಜನೆಯ ಮುಖಾಂತರ ಹಲವು ಭಕ್ತಿಪೂರ್ಣ ಸೇವಾಕ್ರಮ ಯೋಜನೆಗಳು ಅವರ ನೇತೃತ್ವದಲ್ಲಿ ನಡೆಯುತ್ತದೆ. ಕಳೆದ ಐದು ವರ್ಷಗಳಿಂದ ಕೋಲ್ಹಾಪೂರದ ‘‘ಪೇಂಡಾಖಳೇ’’ ನಲ್ಲಿ ನೈರ್ಮಲ್ಯ ಮತ್ತು ಸ್ವಾಸ್ಥ್ಯ(ಆರೋಗ್ಯ) ಅಭಿಯಾನವು ಸತತವಾಗಿ ನಡೆಯುತ್ತಾ ಬಂದಿದೆ. 2012ರಲ್ಲಿ ಸರ್ವಸಾಧಾರಣವಾಗಿ 16,300 ಪೀಡಿತ ಜನರನ್ನು ಪರೀಕ್ಷಿಸಿ ಅವರಿಗೆ ಬೇಕಾಗುವಂತಹ ಆವಶ್ಯಕ ಔಷಗಳನ್ನು ಒದಗಿಸಲಾಯಿತು. ಅದರೊಂದಿಗೆ ಅಗತ್ಯವಿರುವವರಿಗೆ ‘‘ಕನ್ನಡ್ಕಾ’’ ನೀಡಲಾಯಿತು. ಈ ಶಿಬಿರದಲ್ಲಿ ಪೀಡಿತರಿಗೆ E.C.G., ಸೋನೊಗ್ರಾಫಿ, ಎಕ್ಸರೆ ಮತ್ತು ದಂತ ಚಿಕಿತ್ಸೆ ಸೇವೆಗಳನ್ನು ನಿಶುಲ್ಕವಾಗಿ ನೀಡಲಾಯಿತು. 7634 ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಅವರಿಗೆ ಬೇಕಾದಂತಹ ಔಷ‘ಗಳ ಪೂರೈಕೆಯೊಂದಿಗೆ ಅವರವರ ಶಾಲೆಯ 2 ಜೋತೆ (ಜೋಡಿ) ಸಮವಸ್ತ್ರಗಳನ್ನು ನೀಡಿದರು (ಒಟ್ಟಿಗೆ 15268), ಇದರೊಂದಿಗೆ ಕ್ರೀಡಾಸಾಹಿತ್ಯ, ಟೋಪಿಗಳು, ಪಾದರಕ್ಷೆ ಇತ್ಯಾದಿಗಳನ್ನು ನಿಶೂಲ್ಕವಾಗಿ ಕೊಡಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವಾಗ ಆಗುವಂತಹ ಅಡಚನೆಗಳನ್ನು ದೂರ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದಂತಹ ಸಮವಸ್ತ್ರವನ್ನು ಬಾಪೂಜಿಯವರ ತ್ರಯೋದಶಿ ಯೋಜನೆಗಳಲ್ಲಿ ಒಂದು ಯೋಜನೆಯಾಗಿರುವ ‘‘ಚರಕಯೋಜನೆ’’ ಯ ಮೂಲಕ ಸ್ವಯಂ ಸೇವಕರು ಸ್ವತಃ ಚರಕ ನಡೆಸಿ ಅದರಿಂದ ಉತ್ಪನ್ನವಾದ ನೂಲಿನಿಂದ ಮಾಡಲಾಗಿದೆ. ಇಷ್ಟರವರೆಗೆ ಸುಮಾರು 4000 ಚರಕಗಳಿಂದ 1,58,700 ಮೀಟರ್ ವಸ್ತ್ರದಿಂದ 91,386 ಸಮವಸ್ತ್ರಗಳನ್ನು 35,683 ವಿದ್ಯಾರ್ಥಿಗಳಿಗೆ ಸಂಸ್ಥೆಯ ಮೂಲಕ ನಿಶುಲ್ಕವಾಗಿ ವಿತರಣೆ ಮಾಡಲಾಗಿದೆ. ಅನ್ನಪೂರ್ಣ ಪ್ರಸಾದ ಯೋಜನೆಯ ಅಂತರ್ಗತ ಗ್ರಾಮೀಣ ಆದಿವಾಸಿ ವಿಭಾಗಗಳಲ್ಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿದಿನದ ಮದ್ಯಾಹ್ನದ ಭೋಜನವನ್ನು ವಿನಮೂಲ್ಯವಾಗಿ ನೀಡಲಾಗುತ್ತದೆ. ಇಲ್ಲಿಯೂ ಕೂಡ ಸ್ವಯಂ ಸೇವಕರು ಸ್ವತಃ ವಿದ್ಯಾರ್ಥಿಗಳಿಗೆ ಊಟವನ್ನು ತಯಾರುಮಾಡಿ ಅತೀ ಪ್ರೇಮದಿಂದ ಅವರಿಗೆ ಬಡಿಸುತ್ತಾರೆ. ಒಟ್ಟಿಗೆ 31 ಶಾಲೆಗಳಲ್ಲಿ 31,000 ವಿದ್ಯಾರ್ಥಿಗಳಿಗೆ ಪ್ರತಿದಿನ ಈ ಸೇವೆಯನ್ನು ನೀಡಲಾಗುತ್ತದೆ. ಹಾಗೆಯೆ ಶಿಬಿರ ನಡೆಯುವಾಗಲೂ ಈ ಯೋಜನೆಯ ಮುಖಾಂತರ 40 ಸಾವಿರ ವಿದ್ಯಾರ್ಥಿ ಮತ್ತು ಗ್ರಾಮವಾಸಿಗಳಿಗೆ ಮಹಾಪ್ರಸಾದದ ರೂಪದಲ್ಲಿ ಭೋಜನವನ್ನು ನೀಡಲಾಗುತ್ತದೆ. ಇಂತಹ ಸಂದರ್ಭರ್ಗಳಲ್ಲಿ ಈ ಬೃಹತ್ ಪ್ರಮಾಣದ ಅನ್ನದಾನದ ಕಾರ್ಯಕ್ರಮವನ್ನು ಸ್ವತಃ ಸ್ವಯಂ ಸೇವಕರು ನಿರ್ವಹಿಸುತ್ತಾರೆ.
ಇಕೊ ಫ್ರೆಂಡಲಿ ಗಣಪತಿ |
2005- 2006ರಲ್ಲಿ ಪುಣೆ ಜಿಲ್ಲೆಯ ಪುರಂದರ ತಾಲೂಕಿನ ಗೊರ್ಪಡೆ ವಸತಿಯಲ್ಲಿ ಸಾಧಾರಣ 400- 500 ಜಾನುವಾರುಗಳಿಗೆ ಚಾರಾಯೋಜನೆಯ ಮುಖಾಂತರ ಸತತವಾಗಿ ನಾಲ್ಕು ತಿಂಗಳ ತನಕ ಒಂದೊಂದು ಲಾರಿ ಹುಲ್ಲನ್ನು ಪೂರೈಸಲಾಯಿತು. ಸಮಯೋಚಿತವಾಗಿ ನಿರ್ವಹಿಸಿದಂತಹ ಈ ಸೇವಾಕಾರ್ಯದ ಕಾರಣದಿಂದ 400 - 500 ಅಕಾಲಪೀಡಿತ ಜಾನುವಾರುಗಳ ಅಕಾಲ ಮರಣದ ಸಂಕಟವು ತಪ್ಪಿ ಹೋಯಿತು. ಈ ವಸತಿಯಲ್ಲಿ ಪುನಃ ಈ ತರಹದ ಸಂಕಟವು ಬರಬಾರದೆಂಬ ಉದ್ದೇಶದಿಂದ ಅದೇ ವರ್ಷ ಸಂಸ್ಥೆಯ ಸ್ವಯಂ ಸೇವಕರು ಅತೀ ಪರಿಶ್ರಮದಿಂದ ಮಳೆಯ ನೀರನ್ನು ಶೇಖರಿಸಲು ತಡೆಗೋಡೆಯನ್ನ (Dam) ನಿರ್ಮಿಸಿದರು. ತ್ರಯೋದಶಿ ಯೋಜನೆಯ ಕಾರ್ಯಕ್ರಮದ ‘‘ಕಸದಿಂದ ರಸ’’ (Old is gold) ಈ ಯೋಜನೆಯ ಮುಖಾಂತರ ಪುರಂದರ ತಾಲೂಕಿನ ಸರ್ವೆಕ್ಷಣಿಯನ್ನು ಮಾಡಿ ಅಬಲರಿಗೆ ವಿಭಿನ್ನ ಪ್ರಕಾರದ ಜೀವನಾವಶ್ಯಕ ವಸ್ತುಗಳನ್ನು ನಿಶುಲ್ಕವಾಗಿ ವಿತರಣೆ ಮಾಡಲಾಯಿತು.
ಬಾಪೂಜಿಯವರ ತ್ರಯೋದಶಿ ಸೇವಾ ಉಪಕ್ರಮಗಳ ಯೋಜನೆಗಳನ್ನು ಕಾರ್ಯರತ ಮಾಡುವಾಗ "ಭಕ್ತಿಯೇ ಸೇವೆಯ ಹೃದಯವಾಗಿದೆ" ನಾವು ಸೇವೆ ಮಾಡುವಾಗಲೂ ‘ಭಕ್ತಿಮಯ ಸೇವೆ (Devotional Service) ಮಾಡುತ್ತೆವೆ ಎಂದು ತಿಳಿಯಬೇಕು. ಭಕ್ತಿ ಎಂಬ ಶಬ್ದವು "ಭಜ ಸೇವಾಯಂ" ಈ ಧಾತುವಿನಿಂದ ಆಗಿದೆ. ಭಕ್ತಿ ಅಂದರೆ ಪ್ರೇಮಪೂರ್ವಕ ಮತ್ತು ಆತ್ಮೀಯತೆಯಿಂದ ಮಾಡಿದ ಸೇವೆ. ಸೇವಾರಹಿತ ಭಕ್ತಿಯಲ್ಲಿ ಪೂರ್ಣತೆಯು ಪ್ರಾಪ್ತಿಯಾಗುವುದಿಲ್ಲ. ಅಂತೆಯೆ ಭಕ್ತಿರಹಿತ ಸೇವೆಯು ನಿಜ ಸೇವೆಯಾಗುವುದಿಲ್ಲ. "ಭಕ್ತಿಯಿಂದ ಮಾಡಿದ ಸೇವೆಯಲ್ಲಿ ಅಹಂಕಾರ ಬರುವುದಿಲ್ಲ" ಎಂಬ ತತ್ವವನ್ನು ಶ್ರಿ ಅನಿರುದ್ಧರವರು ಪ್ರತಿಪಾದಿಸುತ್ತಾರೆ.
‘ಮೊದಲು ಸ್ವತಃ ಮಾಡು ಮತ್ತೆ ಇತರರಿಗೆ ಹೇಳು’ ಎಂಬ ಈ ವಚನದ ಅನುಸರಣೆಯನ್ನು ಬಾಪೂ ಮಾಡಿ ತೋರಿಸುತ್ತಾರೆ. ಅವರು ದಿನಪ್ರತಿ ಚರಕ ಚಲಾಯಿಸುತ್ತಾರೆ. ರಾಮನಾಮ ಪುಸ್ತಕವನ್ನು ಬರೆಯುತ್ತಾರೆ. ಒಂದು ಗಂಟೆ ವ್ಯಾಯಾಮಕ್ಕಾಗಿ ನಡೆಯುತ್ತಾರೆ. ಅವರ ಮಕ್ಕಳಿಗೆ ವಿದ್ಯೆಯನ್ನು ಕಲಿಸುತ್ತಾರೆ ಮತ್ತು ಸಾಯಿ ಸಚ್ಚರಿತೆಯ ಒಂದು ಅಧ್ಯಾಯ ಮತ್ತು ಗುರುಚರಿತ್ರೆಯ ಎರಡು ಅಧ್ಯಾಯಗಳನ್ನು ಪಠಣ ಮಾಡುತ್ತಾರೆ. ವಿಷ್ಣು ಸಹಸ್ತ್ರನಾಮ, ಶ್ರಿರಾಮಚರಿತಮಾನಸ, ಸುಂದರಕಾಂಡ, ಶ್ರಿರಾಮರಸಾಯನ ಗ್ರಂಥ, ವಾಸುದೇವಾನಂದ ಸರಸ್ವತಿ ವಿರಚಿತ ‘ದತ್ತ ಮಹಾತ್ಮೆ’. ಈ ಗ್ರಂಥಗಳ ಒಂದೊಂದು ಅಧ್ಯಾಯಗಳ ಪಠಣಗಳೊಂದಿಗೆ ಶ್ರಿರಾಮರಕ್ಷಾಸ್ತೋತ್ರವನ್ನು ಜಪಿಸುತ್ತಾರೆ.
ಬಾಪೂಜಿಯವರು ಪದೇ ಪದೇ ಸ್ಪಷ್ಟವಾಗಿ ಶ್ರದ್ಧಾಳುಗಳನ್ನು ಉದ್ದೇಶಿಸಿ ನೀವು ನನಗೆ ಏನನ್ನಾದರು ಕೊಡಲು ಇಚ್ಛಿಸುವುದಿದ್ದರೆ ರಾಮನಾಮದ ಜಪವನ್ನು ಮಾಡಿ ಮತ್ತು ಶ್ರಿರಾಮರಕ್ಷಾಸ್ತೋತ್ರದ ಪಠಣೆಯನ್ನು ಮಾಡಿ ಅವುಗಳನ್ನು ಅರ್ಪಿಸಿರಿ. ನಾನು ನಿಮ್ಮ ಈ ಅಮಾನತ್ತನ್ನು ನನ್ನ ದತ್ತಗುರುವಿಗೆ ಬ್ಯಾಂಕಿನಲ್ಲಿ ನಿಮ್ಮದೆಯಾದ ಖಾತೆಯಲ್ಲಿ ಠೇವಣಿಯಾಗಿ ಇಡುತ್ತೆನೆ. ನಿಮಗೆ ಭವಿಷ್ಯದಲ್ಲಿ ಯಾವಾಗ ಇದರ ಅತ್ಯಾವಶ್ಯಕತೆಯಿರುತ್ತದೆಯೊ ಆವಾಗ ನೀವು ಮಾಡಿದಂತಹ ಜಪಗಳು, ಪಠಣಗಳು ನಿಮ್ಮ ಕೆಲಸಕ್ಕೆ ಬರುತ್ತದೆ. ಆದುದರಿಂದ ನೀವೆಲ್ಲರೂ ನಿಮ್ಮ ಸಮಯ ಮತ್ತು ಪರಿಶ್ರಮವನ್ನು ನನಗೆ ಕೊಡಿರಿ ಹಾಗು ನಿರ್ಬಲ ಸಹೋದರ, ಸಹೋದರಿಯರ ಸೇವೆಯನ್ನು ಮಾಡಿರಿ. ಭಗವಂತನ ಉಪಾಸನೆಕ್ಕಾಗಿ ದಿವಸದ 24 ಗಂಟೆಗಳಲ್ಲಿ 24ನಿಮಿಷಗಳನ್ನಾದರು ಕೊಡಿರಿ. ಇದುವೆ ವರ್ತಮಾನ ಮತ್ತು ಭವಿಷ್ಯಕಾಲದಲ್ಲಿ ಅಂತೆಯೆ ಅಂತ್ಯಕಾಲದಲ್ಲಿ ನಿಮ್ಮ ಉಪಯೋಗಕ್ಕೆ ಬರುತ್ತದೆ. ಮೂರನೆ ವಿಶ್ವಯುದ್ಧದ ಸಮಯದಲ್ಲಿ ಆಗುವಂತಹ ಭೀಕರ ಅನಾಹುತದ ಸಮಯದಲ್ಲಿ ಯಾವನು ಭಕ್ತಿ ಮತ್ತು ಸೇವೆಯನ್ನು ಮಾಡುವನೊ ಅದುವೆ ಅವರಿಗೆ ತಾರಕಮಂತ್ರವಾಗುತ್ತದೆ. ಭಕ್ತಿ ಮಾಡುವುದು ವೀರರ ಲಕ್ಷಣವಾಗಿದೆ ಅದು ಹೇಡಿಗಳ ಕೆಲಸವಲ್ಲ. ನಾವು ಭಕ್ತಿಮಾರ್ಗದಲ್ಲಿದ್ದೇವೆ, ಜಗತ್ತಿನ ಆಗುಹೋಗುಗಳ ಪರಿಣಾಮದಲ್ಲಿ ನಮಗೇನು ಆಸಕ್ತಿ ಇಲ್ಲ, ನಾವು ಹೇಗಾದರು ಅವ್ಯವಸ್ಥಿತರಾಗಿ ಇರುತ್ತೆವೆ ಎಂದು ಭಾವಿಸುವುದು ಸರಾಸರಿ ತಪ್ಪಾಗುತ್ತದೆ. ಆಧುನಿಕ ತಂತ್ರಜ್ಞಾನ, ವಿಜ್ಞಾನ, ಜಗತ್ತಿನಲ್ಲಿ ನಡೆಯುವಂತ ಬದಲಾವಣೆಯನ್ನು ತಿಳಿದು ಅಂತೆಯೆ ಆಧುನಿಕ ಯುಗದ ಪರಿಸ್ಥಿತಿಯ ಅನುಸಾರವಾಗಿ ಯೋಗ್ಯರೀತಿಯಲ್ಲಿ ನಮ್ಮ ಜೀವನದಲ್ಲಿ ಬದಲಾವಣೆಯನ್ನು ಮಾಡುವುದು ಹಾಗು ಪ್ರಗತಿಯನ್ನು ಸಾದಿಸುವುದು ಜೀವನದಲ್ಲಿ ಅಗತ್ಯವಾಗಿದೆ.
ಮೂರನೆ ಮಹಾಯುದ್ಧ ಪುಸ್ತಕದ ಪೀಠಿಕೆಯಲ್ಲಿಯೆ ಶ್ರಿಅನಿರುದ್ಧರವರು ಸ್ಪಷ್ಟವಾಗಿ ಮುಂಬರುವ ಸರ್ವ ಸಾಧಾರಣ 20- 25 ವರ್ಷಗಳ ವರೆಗೆ ಪ್ರಥ್ವಿಯ ಪ್ರತಿಯೊಂದು ಮೂಲೆಯಲ್ಲಿಯೂ ಸಂಘರ್ಷಣೆಯೆ ದೈನಿಕ ವ್ಯವಹಾರವಾಗುತ್ತದೆ. ಇದರಲ್ಲಿ ಯಾವ ಸಂಶ್ಯವೇ ಇಲ್ಲ. ಭವಿಷ್ಯದಲ್ಲಿ ಇಂದಿನ ಸಮೀಕರಣ ನಾಳೆ ಇರುತ್ತದೆ ಎಂಬ ಭರವಸೆ ಇಲ್ಲ. ಮುಂಜಾನೆ ಏಳು ಗಂಟೆಯ ಸಮೀಕರಣವು ಏಳು ಗಂಟೆ ಐದು ನಿಮಿಷಕ್ಕೆ (7.05) ಮೂಲತಃ ಸಾದ್ಯವಿದ್ದರು ಅದು ಅಸಾದ್ಯವಾಗುತ್ತದೆ. ನಿರ್ಣಯಾತ್ಮಕ ಸ್ವರೂಪದ ಗಣಿತ ಸೂತ್ರದ ಆಧಾರದ ಮೇಲೆ ಈಗ ಪ್ರತಿ ವರುಷದ ದಿನದರ್ಶಕ (ಕ್ಯಾಲೆಂಡರ್) ಪ್ರಕಾಶಿತವಾಗುತ್ತದೆಯಾದರೆ, ಮೂರನೆ ಮಹಾ ವಿಶ್ವಯುದ್ಧದ ನಂತರ ಕ್ಯಾಲೆಂಡರಿನ ಸ್ವರೂಪ ಪ್ರತಿದಿನದ ಬದಲಾವಣೆಯ ಮೇಲೆ ನಿರ್ಭರ ವಾಗಿದೆ. ತೃತಿಯ ಮಹಾಯುದ್ಧದ ಸಮಯದಲ್ಲಿ ಭಾರತದ ಭೂಮಿಕೆಯು ವಿಷೇಶ ಮತ್ತು ಮಹತ್ವಪೂರ್ಣವಾಗಿರುತ್ತದೆ ಎಂಬುವುದನ್ನು ಶ್ರಿಅನಿರುದ್ಧರವರು ಸ್ಪಷ್ಟೀಕರಿಸಿದ್ದಾರೆ. ಎಲ್ಲಕ್ಕಿಂತ ಮಹತ್ವಪೂರ್ಣ ವಿಷಯವೆಂದರೆ ಮೂರನೆ ಮಹಾಯುದ್ಧದ ಬಳಿಕ ಉಳಿದವರ ರಕ್ಷಣೆಯ ಮತ್ತು ಪ್ರನರ್ ನಿರ್ಮಾಣದ ಕಾರ್ಯವು ಬಹುಶಃ ಭಾರತಕ್ಕೆ ಸೇರಿದುದ್ದಾಗಿದೆ ಎಂದು ಶ್ರಿಅನಿರುದ್ಧರವರು ಅಭಿಪ್ರಾಯಪಟ್ಟಿದ್ದಾರೆ.
ಶ್ರಿಅನಿರುದ್ಧರವರೀಗೆ ಇದರಲ್ಲಿ ಪೂರ್ಣ ಭರವಸೆ ಇರುವುದು ಅಂದರೆ ವಿದ್ವಂಸಕ ಶಕ್ತಿ ಎಷ್ಟು ಘಾತಕ ಮತ್ತು ಬಲಶಾಲಿಯಾಗಿದ್ದರೂ ಪವಿತ್ರ ವಿದಾಯಕ ಶಕ್ತಿಯ ಮುಂದೆ ಎಳ್ಳಿನಷ್ಟು ಇಲ್ಲ. ಅಂತೆಯೆ ಪರಮೇಶ್ವರಿ ಮೂಲ್ಯದ ಅನುಸಾರವಾಗಿ ನೀತಿಮಾನ ವಿದಾಯಕ ಕಾರ್ಯವನ್ನು ಮಾಡಲು ಅವರು ಯಾವಾಗಲೂ ಕಟಿಬದ್ಧವಾಗಿರುತ್ತಾರೆ ಎಂದು ಶ್ರಿಅನಿರುದ್ಧರವರು ಪೂರ್ಣ ಭರವಸೆಯಲ್ಲಿ ಹೇಳಿದ್ದಾರೆ. ಎಲ್ಲಾ ಶ್ರದ್ಧಾಳುಗಳನ್ನು ತನ್ನೊಟ್ಟಿಗೆ ಮಾರ್ಗದ ಮೂಲಕ ಸಂಪೂರ್ಣ ವಿಶ್ವವನ್ನು ಈ ಸಂಘರ್ಷದಿಂದ ಪಾರಾಗಿಸಲು ಒಬ್ಬ ಮಿತ್ರನ ಭೂಮಿಕೆಯಲ್ಲಿ ಶ್ರಿಅನಿರುದ್ಧರವರು ನಿರಂತರ ಕಾರ್ಯರತರಾಗಿದ್ದಾರೆ. ಒಂದು ನವಯುಗದ ಪ್ರಾರಂಭ ಮಾಡಲಿಕ್ಕೆ ........ ಅಂದರೆ ಆ ಯುಗವು .......... ಪ್ರೇಮದ ! ಮಾನವಧರ್ಮದ ! ಮತ್ತು ಮಿತ್ರತೆಯ !

ಈ ನವಯುಗದ ಶುಭಾರಂಭದ ಸ್ವರ್ಣಮಯ ಕನಸನ್ನು ತಮ್ಮ ಆಶಾಭರೀತ ಕಣ್ಣಿನಲ್ಲಿ ಜೋಪಾನವಾಗಿಟ್ಟುಕೋಂಡು ಮತ್ತೆ ಅದಕ್ಕೆ ನಿಜ ಸ್ವರೂಪವನ್ನು ನೀಡಲಿಕ್ಕೆ ಸತತ ಪರಿಶ್ರಮದಲ್ಲಿ ತೊಡಗಿರುವುದೇ ಈ ಯುಗಪ್ರವರ್ತನ ನಿರ್ಣಯ ಮತ್ತು ನಿದಿದ್ಯಾನವೆ ಆಗಿದೆ .......
‘‘ ಈ ಸಂಪೂರ್ಣ ಸಂಸಾರದಲ್ಲಿ ಸುಖಶಾಂತಿಯನ್ನು ಸ್ಥಾಪಿಸುತ್ತಾನೆ ಅಂತೆಯೆ ಮೂರು ಲೋಕವು ಆನಂದಸಾಗರದಲ್ಲಿ ತಂಬಿ ತುಳುಕಾಡಲಿ’’
॥ಹರಿ ಓಂ॥
No comments:
Post a Comment