ಸದ್ಗುರು ನಮಗಾಗಿ ಅಸಂಖ್ಯಾತ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಆದರೆ ಯಾವತ್ತೂ ತಮ್ಮ ತುತ್ತೂರಿಯನ್ನು ಊದುವುದಿಲ್ಲ. ಆದಾಗ್ಯೂ, ಒಬ್ಬ ಭಕ್ತನು ಒಳ್ಳೆಯ ಕಾರ್ಯವನ್ನು ಮಾಡಿದರೆ, ಅದು ಚಿಕ್ಕದಾಗಿದ್ದರೂ, ದೇವರು ಅದನ್ನು ದೊಡ್ಡದನ್ನಾಗಿ ಮಾಡುತ್ತಾನೆ. ನನ್ನ ಅನುಭವವು ಈ ವಿಚಾರವನ್ನು ದೃಢಪಡಿಸುತ್ತದೆ.
ಸದ್ಗುರು ಅನಿರುದ್ಧ ಬಾಪುರವರ ಪವಿತ್ರ ಅನುಗ್ರಹದ ಅನೇಕ ಅನುಭವಗಳನ್ನು ನಾನು ಹೊಂದಿದ್ದೇನೆ. ಅವುಗಳಲ್ಲಿಯ ಕೆಲವನ್ನು ಮಾತ್ರ ಹೇಳುತ್ತಿದ್ದೇನೆ.
ನನ್ನ ಪತ್ನಿ ಸುಷ್ಮಾ ಪಂಚಶೀಲ ಪರೀಕ್ಷೆಯ ಸರಣಿಯಲ್ಲಿ ಮೊದಲನೆಯ ಸಲ ಪರೀಕ್ಷೆಗೆ ಕುಳಿತಿದ್ದಳು. ಅವಳು "ಮುಂದಿನ ಬಾರಿ" ಎಂಬ ರಿಮಾರ್ಕ್ಸ್ ನ್ನು ಪಡೆದಳು (ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ). ಆಗ ಅವಳು ಸಾಕಷ್ಟು ನಿರಾಶೆಗೊಂಡಳು. ಇನ್ನು ಮುಂದೆ ಎಂದಿಗೂ ಪಂಚಶೀಲ ಪರೀಕ್ಷೆ ಕೊಡುವದಿಲ್ಲವೆಂದು ಅವಳು ನಿರ್ಧರಿಸಿದಳು. ಇದು ನನ್ನಿಂದಾಗದ ಮಾತು ಎಂದು ಅವಳು ಭಾವಿಸಿದಳು. ನಾನು ಅವಳಿಗೆ ವಿವರಿಸಿದೆ, "ಪಂಚಶೀಲ ಪರೀಕ್ಷೆಯು ಜ್ಞಾನದ ಪರೀಕ್ಷೆ ಅಲ್ಲ, ಅದು ನಿಮ್ಮ ಭಕ್ತಿಯ, ಪ್ರೇಮದ ಪರೀಕ್ಷೆ ಎಂದು ಬಾಪು ನಮಗೆ ಹೇಳಿದ್ದಾರೆ." ನಾನು ಅವಳನ್ನು ಮತ್ತೆ ಪ್ರಯತ್ನಿಸಲು ಶಿಫಾರಸು ಮಾಡಿದೆ. ನಾನು ಅವಳಿಗೆ ಬಾಪುವಿನ ಮೇಲೆ ನಂಬಿಕೆ ಇಡಲು ಹೇಳಿದೆ. ತನ್ನ ಎಲ್ಲಾ ಭಕ್ತರಿಗಾಗಿ, ಬಾಪು ಈಗಾಗಲೇ " ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ " ಎಂದು ಘೋಷಿಸಿದ್ದಾರೆ.
ಸ್ವಲ್ಪ ಕಾಲದ ನಂತರ, ಮತ್ತೊಮ್ಮೆ ಪರೀಕ್ಷೆ ಕೊಡಬೇಕು ಎಂದು ಅವಳು ಭಾವಿಸಿದಳು. ಅವಳು ತನ್ನ ಸದ್ಗುರುವಿನ ಮೇಲೆ ಪೂರ್ತಿ ನಂಬಿಕೆ ಇಟ್ಟಳು ಮತ್ತು ಆಶ್ಚರ್ಯಕರ ಸಂಗತಿಯೊಂದು ಸಂಭವಿಸಿತು. ಪರಮಪೂಜ್ಯ ಬಾಪುರವರ ಕೃಪೆಯಿಂದ, ಅವಳು ಚತುರ್ಥ ಪರೀಕ್ಷೆಯತನಕ ತಲುಪಿದಳು. ಅವಳಿಗೆ ಚತುರ್ಥ ಪರೀಕ್ಷೆಯಲ್ಲಿ "ಡಿಸ್ಟಿಂಕ್ಷನ್" ದೊರಕಿತು. ಹೀಗಾಗಿಯೇ, ಬಾಪು ತನ್ನ ಬೇಷರತ್ತಾದ(UNCONDITIONAL)ಪ್ರೀತಿ
ಯಾರು ಈ ಚರಣಕಮಲಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೋ ಮತ್ತು ದೃಢವಾಗಿ ನಂಬಿದರೋ !!
ನನ್ನ ಮಗಳು ಶ್ರೇಯಾ ನಮ್ಮೊಂದಿಗೆ ಪರಮಪೂಜ್ಯ ಸುಚಿತದಾದಾರವರ ಕ್ಲಿನಿಕ್‌ಗೆ ಸುಷ್ಮಾ ಅವಳ ಉತ್ತರ ಪತ್ರಿಕೆಯನ್ನು ಪಡೆಯಲು ಬಂದಿದ್ದಳು. ದಾದಾ ಶ್ರೇಯಾಳನ್ನು ಕೇಳಿದರು, " ಮಗುವೇ, ನೀನು ಏನು ಮಾಡುತ್ತಿ?" ಇದಕ್ಕೆ ಶ್ರೇಯಾ, ‘ನಾನು ಇಂಗ್ಲಿಷನಲ್ಲಿ ಡಿ. ಎಡ್ ವ್ಯಾಸಂಗ ಮಾಡುತ್ತಿದ್ದೇನೆ. ವಾಸ್ತವವಾಗಿ ನಾನು ಫಾರ್ಮಸಿಯನ್ನು ಮುಂದುವರಿಸಲು ಬಯಸಿದ್ದೆ ಆದರೆ ಬಾಪು ನನಗೆ ಡಿ.ಎಡ್ ಮಾಡಲು ಮಾರ್ಗದರ್ಶನ ನೀಡಿದರು’. ಆಗ ದಾದಾ ಕೇಳಿದರು, "ನೀವು ಬಾಪುರವರನ್ನು ಎಲ್ಲಿ ಭೇಟಿಯಾದಿರಿ?" ಅವರು ನನ್ನ ಕನಸಿನಲ್ಲಿ ಕಾಣಿಸಿಕೊಂಡಾಗ ಅದರ ಬಗ್ಗೆ ಹೇಳಿದ್ದರು ಎಂದು ಶ್ರೇಯಾ ಹೇಳಿದಳು. ಆಗ ದಾದಾ ಆಶ್ಚರ್ಯದಿಂದ ಉದ್ಗರಿಸಿದರು, “ಏನು! ನಿನ್ನ ಕನಸಿನಲ್ಲಿ? ಮತ್ತು ನೀನು ಒಪ್ಪಿಕೊಂಡೆಯಾ? ” ಅದಕ್ಕೆ ಶ್ರೇಯಾ ಪ್ರತಿಕ್ರಿಯಿಸಿ, "ಹೌದು, ಅದು ನನ್ನ ಕನಸಿನಲ್ಲಿದ್ದರೂ ಸಹ, ಬಾಪುರವರ ಆದೇಶವು ನನಗೆ ಸರಿಯಾದ ಮತ್ತು ಅತ್ಯಂತ ಸೂಕ್ತವಾಗಿಯೇ ಇದೆ." ದಾದಾ ಹೇಳಿದರು, "ಶ್ರೀರಾಮ! ಹರಿ ಓಂ!”
ದಾದಾ ಅವಳಿಗೆ ಆಶೀರ್ವಾದ ಮಾಡಿದರು!. ಮುಂದಿನ ತಿಂಗಳಲ್ಲಿ ಮೊದಲ ವರ್ಷದ D.Ed ಫಲಿತಾಂಶ ಬರುವದಿತ್ತು. ಶ್ರೇಯಾ ತನ್ನ ಕಾಲೇಜಿನಲ್ಲಿ ಪ್ರಥಮ RANK ಪಡೆದಳು.
ವಾಸ್ತವವಾಗಿ, ನಾನು ಪಂಚಶೀಲ ಪರೀಕ್ಷೆಯ ಎಲ್ಲಾ ಐದು ಪರೀಕ್ಷೆಗಳಿಗೆ ಕುಳಿತುಕೊಂಡು ಉತ್ತೀರ್ಣನಾಗಿದ್ದೆ. ದಾದಾ ಒಮ್ಮೆ ನನ್ನನ್ನು ಕೇಳಿದರು, "ನೀವು ಮತ್ತೊಮ್ಮೆ ಪರೀಕ್ಷೆಗೆ ಏಕೆ ಕುಳಿತುಕೊಳ್ಳಬಾರದು?" ನಾನು ಉತ್ತರಿಸಿದೆ, "ದಾದಾ ನಾನು ಮತ್ತೆ ಕುಳಿತುಕೊಂಡಿದ್ದೇನೆ. ನಾನು ಈಗಷ್ಟೇ ಎರಡನೇ ಪರೀಕ್ಷೆಗೆ ಕುಳಿತುಕೊಂಡಿದ್ದೆ. ಮತ್ತೆ ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳಿ ಎಂದು ಬಾಪುರವರೇ ಹೇಳಿದ್ದಾರೆ. ನೀವು ಒಂದು ಅಂಕ ಹೆಚ್ಚಾಗಿ ಪಡೆದರೆ,ನಿಮ್ಮ ಭಕ್ತಿ ಸ್ವಲ್ಪಮಟ್ಟಿಗೆ ಬೆಳೆದಿದೆ ಎಂದು ತಿಳಿಯಿರಿ. ನಾನು ಅದನ್ನು ನಿಜವಾಗಿಯೂ ಇಷ್ಟಪಟ್ಟೆ. ” ದಾದಾ ಹೇಳಿದರು "ತುಂಬಾ ಚೆನ್ನಾಗಿದೆ"
ಹಾಗೆಯೇ ನಮ್ಮ ಮಗ ರಿತೇಶನಿಗೆ ಪುಸ್ತಕದಂತೆ ಅಧ್ಯಯನ ಮಾಡುವುದು ಇಷ್ಟವಿಲ್ಲ. ಅವನು ತನ್ನ 12 ನೇ ತರಗತಿಯನ್ನು ಸಾಧಾರಣವಾಗಿ ಉತ್ತೀರ್ಣನಾಗಿದ್ದಾನೆ. ಅವನು ತನ್ನ ಭವಿಷ್ಯ ಮತ್ತು ಮುಂದಿನ ಕ್ರಮದ ಬಗ್ಗೆ ಚಿಂತಿಸುತ್ತಿರುವಾಗ, ಬಾಪುರವರ ಕೃಪೆಯಿಂದ, ಒಂದು ದಿನ ಅವನ ಸ್ನೇಹಿತನೊಬ್ಬನು ಬಂದು ರಿತೇಶನ ಆಸಕ್ತಿಯ ಬಗ್ಗೆ ಕೇಳಿದನು. ರಿತೇಶನು ತಾಂತ್ರಿಕ ಜ್ಞಾನ ಪಡೆಯುವ ಆಸಕ್ತಿಯ ಬಗ್ಗೆ ಅವನಿಗೆ ತಿಳಿಸಿದನು. ಅದನ್ನು ಕೇಳಿದ ಅವನ ಸ್ನೇಹಿತ ಬೊರಿವಲಿಯ ಜೆಟ್ಕಿಂಗ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡಿದನು. ಮತ್ತೊಮ್ಮೆ ಬಾಪೂರವರ ಕೃಪೆಯಿಂದ ರಿತೇಶನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎರಡನೇ RANK ಪಡೆದನು. ಈಗ ಅವನು ಕಂಪ್ಯೂಟರ್ ಸಾಯನ್ಸ್ ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾನೆ. ಇದೆಲ್ಲವೂ ಬಾಪೂರವರ ಕೃಪಾಶೀರ್ವಾದದಿಂದಲೇ!
ಬಾಪೂರವರಿಗೆ ನಾವು ಸದಾ ಋಣಿಯಾಗಿದ್ದೇವೆ. ಅವರು ನಮ್ಮ ಕುಟುಂಬಕ್ಕಾಗಿ ಮಾಡಿರುವ ಎಲ್ಲದಕ್ಕೂ ನಾವು ಯಾವಾಗಲೂ ಅವರಿಗೆ ಋಣಿಯಾಗಿರುತ್ತೇವೆ. ಭಕ್ತನ ಒಂದು ಸಣ್ಣ ಕ್ರಿಯೆಯನ್ನು ದೇವರು ಎಷ್ಟು ಹೊಗಳುತ್ತಾನೆ! ನಮ್ಮ ಸದ್ಗುರು ಭಕ್ತನ ಹೆಸರನ್ನು ತೆಗೆದುಕೊಳ್ಳುವುದನ್ನು ನೋಡುವುದು ನಮಗೆ ತುಂಬಾ ಹೆಮ್ಮೆಯ ವಿಷಯ! ಪಂಚಶೀಲ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆಯುವ ಭಕ್ತರ ಹೆಸರನ್ನು ಬಾಪು ಓದುವಾಗ ನಮ್ಮಲ್ಲಿ ಅನೇಕರು ಒಬ್ಬೊಬ್ಬರ ಹೆಸರನ್ನು ಕೇಳಲು ಆನಂದ ಪಡುತ್ತಾರೆ. ಇದು ಬಾಪುರವರ ಭಕ್ತರ ಮೇಲಿನ ನಿಜವಾದ ಪ್ರೀತಿಯ ಸಂಕೇತವಾಗಿದೆ!
ನಾನು ಸದ್ಗುರು ಬಾಪುರವರ ಚರಣಕಮಲಗಳಿಗೆ ನಮಸ್ಕರಿಸುತ್ತೇನೆ!
No comments:
Post a Comment