Thursday 14 July 2022

ಗ್ಯಾಸ್ ಸೋರಿಕೆ ಜೊತೆಗೆ ಅಡುಗೆ, ಆದರೆ ಸದ್ಗುರುವಿನ ಕೃಪೆಯಿಂದ ರಕ್ಷಣೆ (ಅರುಣಾ ಅಲೈ, ಅಮಳನೇರ)

ಗ್ಯಾಸ್ ಸೋರಿಕೆ ಅಥವಾ ಗ್ಯಾಸ್ ಸಿಲಿಂಡರ್‌ ಅಪಘಾತದಿಂದ ಮನೆಗಳಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ನಾವು  ಆಗಾಗ್ಗೆ ಓದುತ್ತಿರುತ್ತೇವೆ. ಅಂತಹ ಅಪಘಾತಗಳ ತೀವ್ರತೆ ಮತ್ತು ಪರಿಣಾಮದ ಬಗ್ಗೆ ನಿಸ್ಸಂಶಯವಾಗಿ ತಿಳಿಯುತ್ತದೆ. ಆದರೆ,ಈ ಘಟನೆಯನ್ನು ನಮಗೆ ಹೇಳುತ್ತಿರುವ ಶ್ರದ್ದಾವಂತಳು  ತನ್ನ ಅಡುಗೆಮನೆಯಲ್ಲಿ ಗ್ಯಾಸ್ ಸೋರಿಕೆ ಇದ್ದಾಗಲೂ  ಸದ್ಗುರು ಅನಿರುದ್ಧ ಬಾಪುರವರ  ಕೃಪೆಯಿಂದ ರಕ್ಷಿಸಲ್ಪಟ್ಟಳು. ಅಷ್ಟೇ ಅಲ್ಲಬೆಳಗಿನ ಉಪಾಹಾರಚಹಾಮಧ್ಯಾಹ್ನದ ಊಟವನ್ನೂ ಸಿದ್ಧಪಡಿಸಿ ಮುಂದೆ ಬರಲಿರುವ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.


ನಾನು ಗಂಗೆಯ ಜಲಧಾರೆಯನ್ನು ನೋಡಿದ್ದೇನೆ. ಗಂಗೋತ್ರಿಗೂ ಭೇಟಿ ನೀಡಿದ್ದೆ. ಸದಾ ಹರಿಯುವ ಆ ನೀರನ್ನು ನೋಡಿದಾಗಸಾವಿರಾರು ವರ್ಷಗಳಿಂದ ನೀರು ನಿರಂತರವಾಗಿ ಹೇಗೆ ಹರಿಯುತ್ತಿದೆ ಎಂದು ನನಗೆ ಆಶ್ಚರ್ಯವಾಯಿತು. ವಿಜ್ಞಾನಕ್ಕೂ ಈ ವಿದ್ಯಮಾನವನ್ನು ವಿವರಿಸಲು ಸಾಧ್ಯವಾಗಲಿಲ್ಲ. ವಿಜ್ಞಾನ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿ ಆಧ್ಯಾತ್ಮಿಕತೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.  ಅಧ್ಯಾತ್ಮದಲ್ಲಿ ನಿಶ್ಚಲ ನಂಬಿಕೆ ಮುಖ್ಯತನ್ನ ದೇವರಲ್ಲಿ, ತನ್ನ ಸದ್ಗುರುವಿನಲ್ಲಿ ಅಚಲವಾದ ನಂಬಿಕೆ ಮತ್ತು ವಿಶ್ವಾಸ ಹೊಂದಿರಬೇಕು. ಅದನ್ನೇ ಬಾಪು ನಮಗೆ ಹೇಳುತ್ತಲೇ ಇರುತ್ತಾರೆ  “ಏಕ್ ವಿಶ್ವಾಸ್ ಅಸಾವಾ ಪುರ್ತಾ ಕರ್ತಾ ಹರ್ತಾ ಗುರು ಐಸಾ”. (ಗುರುವಿನಲ್ಲಿ ದೃಢ ನಂಬಿಕೆ ಇರಬೇಕುಎಲ್ಲವನ್ನು  ಮಾಡುವವನು,ರಕ್ಷಿಸುವವನು ಗುರು ಒಬ್ಬನೇ )

 

ಸಂಪೂರ್ಣವಾಗಿ ವಿವರಿಸಲಾಗದ ನನ್ನ ಅನುಭವ ಹೇಳುತ್ತಿದ್ದೇನೆ. ಸೆಪ್ಟೆಂಬರ್ 03,2013 ರಂದು ಬೆಳಿಗ್ಗೆ ಎದ್ದು ನಾನು ಚಹಾ ಮಾಡಲು ಗ್ಯಾಸ್ ಸ್ಟವ್ ಆನ್ ಮಾಡಲು ಪ್ರಯತ್ನಿಸಿದೆ ಆದರೆ ಅದು ಹೊತ್ತಿಕೊಳ್ಳಲಿಲ್ಲ. ನನ್ನ ಮಗ ಸ್ವಲ್ಪ ಪ್ರಯತ್ನ ಮಾಡಿ ಹೊಸ ಸಿಲಿಂಡರ್ ಅನ್ನು ಜೋಡಿಸಿದನುನಂತರ ಅದು ಹೊತ್ತಿಕೊಂಡಿತು. ನನ್ನ ಸೊಸೆಯು ಚಹಾತಿಂಡಿ ಮತ್ತು ಊಟವನ್ನು ತಯಾರಿಸಿದಳು. ನಂತರ ನಾವು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದೆವು.

 

ನಾನುಅನಿಲ್‌ಸಿಂಹ ಮತ್ತು ನನ್ನ ಮಗಳು ಡ್ರಾಯಿಂಗ್ ರೂಮ್‌ನಲ್ಲಿ ಕುಳಿತಾಗನಮಗೆ  ಗ್ಯಾಸ್ ಸೋರಿಕೆಯ ವಾಸನೆ ಬಂದಿತು. ಏನಾಗುತ್ತಿದೆ ಎಂದು ನೋಡಲು  ತಕ್ಷಣ ನಾವು ಅಡುಗೆ ಮನೆಗೆ ನುಗ್ಗಿದೆವು. ನಮ್ಮೆಲ್ಲರಿಗೂ ಆಶ್ಚರ್ಯವಾಯಿತುಹಿಸ್ಸಿಂಗ್ ಶಬ್ದದೊಂದಿಗೆ ಗ್ಯಾಸ್ ಪೈಪ್ ಮೂಲಕ ಗ್ಯಾಸ್ ಧಾರಾಕಾರವಾಗಿ ಸೋರಿಕೆಯಾಗುತ್ತಿತ್ತು. ಗ್ಯಾಸ್ ಮನೆಯೆಲ್ಲ ಹರಡಿತ್ತು. ಇದರರ್ಥ ನಿಯಂತ್ರಕವನ್ನು(Regulator)ಸರಿಯಾಗಿ ಅಳವಡಿಸಲಾಗಿಲ್ಲ ಮತ್ತು ಗ್ಯಾಸ್ ಸೋರಿಕೆಯಾಗುತ್ತಿತ್ತು. ನಾವು ತಕ್ಷಣ ನಿಯಂತ್ರಕವನ್ನು ಸ್ವಿಚ್ ಆಫ್ ಮಾಡಿದೆವು ಮತ್ತು ಅನಿಲ್‌ಸಿಂಹ ಅವರು ದೂರು ನೀಡಲು ಗ್ಯಾಸ್ ಕಂಪನಿಗೆ ಕರೆ ಮಾಡಿದರು.

 

ಮಧ್ಯಾಹ್ನ 3 ಗಂಟೆಗೆ ಮೆಕ್ಯಾನಿಕ್ ಬಂದು ಪರಿಶೀಲಿಸಿದಾಗ ರೆಗ್ಯುಲೇಟರ್‌ನಲ್ಲಿ ವಾಲ್ವ ಇಲ್ಲದಿರುವುದು ಗೊತ್ತಾಯಿತು. ನಾವು ಗಾಬರಿಗೊಂಡೆವು. ಅದು ಹೇಗೆ ಸಾಧ್ಯ ಯಾಕೆಂದರೆ ಕೆಲವೇ ಗಂಟೆಗಳ ಹಿಂದೆ ಅದೇ ಒಲೆಯ ಮೇಲೆ ಅಡುಗೆ ಮಾಡಿ ಮುಗಿಸಿದ್ದೇವೆ ಎಂದು ಮೆಕ್ಯಾನಿಕ್ ಗೆ ಹೇಳಿದೆವು.

 

ಅವನಿಗೂ ಅಷ್ಟೇ ಆಶ್ಚರ್ಯವಾಯಿತು. ಅವನು ಗೋಡೆಯ ಮೇಲಿದ್ದ ದತ್ತಗುರು ಮತ್ತು ಬಾಪು ಅವರ ಚಿತ್ರವನ್ನು ನೋಡಿ, "ನಿಮ್ಮ ಮೇಲೆ ಸದ್ಗುರುಗಳ ಆಶೀರ್ವಾದವಿದೆ ಮತ್ತು ಅವರಿಂದಲೇ  ದೊಡ್ಡ ಪ್ರಾಣಾಪಾಯವನ್ನು ತಪ್ಪಿಸಲಾಗಿದೆ" ಎಂದು ಹೇಳಿದನು.

 

ನಂತರ ಅವನು ರೆಗ್ಯುಲೇಟರ್‌ನಲ್ಲಿ  ವಾಲ್ವನ್ನು ಅಳವಡಿಸಿದನು ಮತ್ತು ಗ್ಯಾಸ್ ಸಿಲಿಂಡರನ್ನು ನಾರ್ಮಲ್ ಮೋ (mode) ಗೆ ಹೊಂದಿಸಿದನು. ನಾವು ನಮ್ಮ ಮನಸ್ಸಿನಲ್ಲಿಯೇ ಬಾಪುಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದೆವು. ಬಾಪು ಅವರ ಆಶೀರ್ವಾದದಿಂದಾಗಿ ಪ್ರಾಣಾಪಾಯ ತಪ್ಪಿತು. ನಮ್ಮ ಸದ್ಗುರುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಅನುಕ್ರಮವನ್ನು ತಿಳಿದಿದ್ದಾರೆ. ಅವರ ಶ್ರದ್ಧಾವಂತ ಭಕ್ತರು ಎಲ್ಲೇ ಇದ್ದರೂ ಮತ್ತು ಅವರು ಎಷ್ಟೇ ದೊಡ್ಡ ಸಂಕಟದ ಸ್ಥಿತಿಯಲ್ಲಿದ್ದರೂ ಅವರನ್ನು ರಕ್ಷಿಸಲು ನಮ್ಮ ಸದ್ಗುರು ಯಾವಾಗಲೂ ಇರುತ್ತಾರೆ ಎಂಬ ಸತ್ಯವನ್ನು ನಾವು ಅನುಭವಿಸುತ್ತೇವೆ. ಬಾಪುನಾವು ಅಂಬಜ್ಞರಿದ್ದೇವೆ.

 

ಸ್ಮರ್ತೃಗಾಮಿ ಬಾಪು ದತ್ತಗುರು ಗುರುತಿಸಿದೆ I

ಅನಿರುದ್ಧಾ,  ನಾನು ನಿನ್ನ ಎಷ್ಟು ಋಣಿಯಾದೆ II

No comments:

Post a Comment