Tuesday 12 August 2014

ಆಲ್ಟರ್ನೇಟಿಂಗ್ ಕರೆಂಟ್ ಮತ್ತು ಡಾ ನಿಕೋಲಾ ಟೆಸ್ಲಾ (Alternating current & Dr. Nikola Tesla)

ಒಂದು ಬಹಳ ಪ್ರಸಿದ್ಧ ಲೋಕೋಕ್ತಿಯಿದೆ, "ದುರಂಹಕಾರವೆಂದರೆ ಬಲವಲ್ಲ, ಆದರೆ ಅದು ಭಯದ ಇನ್ನೊಂದು ಮುಖವಾಡವಾಗಿದೆ." ಈ ಲೇಖನವನ್ನು ಮುಗಿಸುವಾಗ ಇದೇ ಮಾತನ್ನು ಸಾಧಿಸುವ ಮುಖ್ಯವಾದ ಪರಿಸಮಾಪ್ತಿಗೆ ನಾವು ಬರುತ್ತೇವೆ.

ನೀವು ಆಲ್ಟರ್ ನೇಟಿಂಗ್ ಕರಂಟ್ (ಏಸಿ) ಬಗ್ಗೆ ಕೇಳಿರುವಿರೆಂದು ನನಗೆ ಖಾತ್ರಿಯಿದೆ. ಆಲ್ಟರ‍್ ನೇಟಿಂಗ್ ಕರಂಟ್ (ಪರ್ಯಾಯ ವಿದ್ಯುತಚ್ಛಕ್ತಿ) ನಲ್ಲಿ ವಿದ್ಯುತಚ್ಛಕ್ತಿಯು ತನ್ನ ಪ್ರವಾಹವನ್ನು ನಿಯಮಿತಕಾಲಗಳಲ್ಲಿ ವಿಪರೀತ ದಿಶೆಗಳಿಗೆ ತಿರುಗಿಸುತ್ತದೆ. ಇದರ ತುಲನೆಯಲ್ಲಿ ಡಾಯ್ ರೆಕ್ಟ್ ಕರಂಟ್ (ಡೀಸಿ) ತನ್ನ ವಿದ್ಯುತಚ್ಛಕ್ತಿಯ ಪ್ರವಾಹವನ್ನು ಒಂದೇ ದಿಶೆಯಲ್ಲಿ ತೆಗೆದುಕೊಳ್ಳುವದು. ಇದರ ಬಹಳ ಸುಲಭದ ಉದಾಹರಣೆ ಕೊಡಬೇಕಾದರೆ ಅದು ನಮ್ಮ ನಿತ್ಯದ ಜೀವನದಲ್ಲಿಯ ಏಸಿಯ ಬಳಕೆ ಅಂದರೆ; ನಮ್ಮ ಮನೆಗಳಿಗೆ ಪೂರೈಸಲಾಗುತ್ತಿರುವ ವಿದ್ಯುತಚ್ಛಕ್ತಿ. ಇತ್ತೀಚೆಗೆ ಇಂಡಿಯನ್ ರೇಲ್ವೆಯ ಹಲವು ವಿಭಾಗಗಳಲ್ಲಿ ಟ್ರೇನುಗಳನ್ನು ಚಲಿಸಲು ಅವರು ಡೀಸಿ ಸಿಸ್ಟಮ್ ನ್ನು ಏಸಿ ಸಿಸ್ಟಮಿನಲ್ಲಿ ಸ್ಥಾನಾಂತರ ಮಾಡಿರುವರು ಎಂದು ನಾವು ಕೇಳಿರುವೆವು. ಪ್ರತಿದಿನ ೭.೫ ಮಿಲ್ಲಿಯನ್ ಗಿಂತಲು ಹೆಚ್ಚಿಗೇನೆ ಇರುವ ರೇಲ್ವೆ ಯಾತ್ರಿಗಳನ್ನು ಕರೆದೊಯ್ಯುವಾಗ ಮುಂಬಯಿಯಲ್ಲಿ ಮಿತಿಮೀರಿ ಉಪಯೋಗಿಸಲಾಗುತ್ತಿರುವ ನೆಟ್ ವರ್ಕ್ ಗಳಿಗಾಗಿ ಸುಲಭವಾಗಲೆಂದು ಮುಖ್ಯವಾಗಿ ಈ ಬದಲಾಣೆಯನ್ನು ಬಳಕೆಗೆ ತಂದಿದ್ದಾರೆ.




ಡಾ. ನಿಕೋಲಾ ಟೇಸಲಾರವರೇ ೧೮೮೨ ರಲ್ಲಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಪೂರೈಸುವ  ಪ್ರಸಿದ್ಧ ಸಿಸ್ಟಮ್ ನ್ನು ಉತ್ಪಾದಿಸಿ ಅದರ ಬಳಕೆಯು ವ್ಯವಹಾರಕ್ಕಾಗಿ ಸಮರ್ಥವಾಗಿರುವುದೆಂದು ವಿವರಿಸಿದರು. ಈ ಆಲ್ಟರ್ ನೇಟಿಂಗ್ ಕರಂಟ್ ನ ವಿಚಾರ ಡಾ. ನಿಕೋಲಾ ಟೇಸಲಾರವರಿಗೆ ಹೇಗೆ ಸೂಚಿರಬೇಕೆಂಬುದು ಬಹಳ ಕುತೂಹಲಕಾರವಾಗಿದೆ. ಡಾ ಟೇಸಲಾರವರು ಅವರ ಎಲ್ಲಾ ಸಂಶೋಧನೆಗಳನ್ನು ತನ್ನ ಸ್ವಪ್ನದೃಷ್ಟಾಂತದಲ್ಲಿ ಕಾಣಿದ್ದಾರೆಂದು ಹೇಳುತ್ತಿದ್ದರು. ಏಸಿ ಕರಂಟ್ ಮೋಟರಿನ ಸಂಕಲ್ಪನೆಯು ಇದೇ ಸ್ವಪ್ನದೃಷ್ಟಾಂತದಲ್ಲಿ ಬಂದಿತ್ತೆಂದು ಹೇಳುತ್ತಾರೆ. ೧೮೮೨ ರಲ್ಲಿ ಒಮ್ಮೆ ನಿಕೋಲಾ ಟೇಸಲಾರವರು ಬುಡಾಪೇಸ್ಟ್ ನಲ್ಲಿದ್ದರು. ಒಮ್ಮೆ ಮದ್ಯಾಹ್ನ ನಿಕೋಲಾರವರು ಸಿಟಿ ಪಾರ್ಕ್ ನಲ್ಲಿ ತನ್ನೊಬ್ಬ ಮಿತ್ರನೊಡನೆ ತಿರುಗಾಡುತ್ತಿರುವಾಗ ಕಾವ್ಯವನ್ನು ಹಾಡುತ್ತಿದ್ದರು. ಆ ಪ್ರಾಯದಲ್ಲಿ ತರುಣ ನಿಕೋಲಾರವರಿಗೆ ಅವರ ಪುಸ್ತಕದಲ್ಲಿದ್ದೆಲ್ಲಾ ಶಬ್ದಶ: ಪಾಠಾಂತರವಾಗಿತ್ತು. ಅವುಗಳಲ್ಲಿ ಗೊಯೆಥ್ ರವರ ಫೌಸ್ಟ್ ಒಂದಾಗಿತ್ತು. ಸೂರ್ಯಾಸ್ತದ ಸಮಯವಾಗಿತ್ತು ಆಗ ನಿಕೋಲಾರವರಿಗೆ ಆ ಕಾವ್ಯದ ಅತ್ಯುತಮ ಪರಿಚ್ಛೇದನಗಳ ನೆನಪಾಯಿತು, "ದ ಗ್ಲೋ ರಿಟ್ರೀಟ್ಸ್, ಡನ್ ಈಜ್ ದ ಡೇ ಅಫ್ ಟೋಯಿಲ್; ಇಟ್ ಯ್ಯೊಂಡರ್ ಹೇಸ್ಟ್ಸ್, ನಿವ್ ಫೀಲ್ಡ್ಸ್ ಅಫ್ ಲಾಯಿಫ್ ಎಕ್ಸ್ ಪ್ಲೋರಿಂಗ್: ಆಹ್, ದ್ಯಾಟ್ ನೊ ವಿಂಗ್ ಕ್ಯಾನ್ ಲಿಫ್ಟ್ ಮಿ ಫ್ರಮ್ ದ ಸೊಯಿಲ್ ಅಪೊನ್ ಇಟ್ಸ್ ಟ್ರಾಕ್ಟ್ ಟು ಫಾಲೊ, ಫಾಲೊ ಸೋರಿಂಗ್ !" ನಿಕೋಲಾ ಈ ಉತ್ಸಾಹಪೂರ್ಣ ಶಬ್ದಗಳನ್ನು ಉಚ್ಚಾರಿಸತೊಡಗಿದರು ಆಗ ಅವರ ತಲೆಯಲ್ಲಿ ಮಿಂಚಿನ ಪ್ರಕಾಶ ಹೊಳೆದಂತೆ ಈ ವಿಚಾರ ಅವರಿಗೆ ಬಂತು. ಕ್ಷಣದಲ್ಲಿಯೇ ಅವರಿಗೆ ಸತ್ಯದ ಪರಿಚಯವಾಯಿತು. ಇದನ್ನು ಅವರು ಆ ಸರ್ವಸಮರ್ಥ ದೇವರ ಕೆಲಸವೆಂದು ತಿಳಿದರು. ನಿಕೋಲಾ ಟೇಸಲಾರವರು ತಾನು ಸ್ವಪ್ನದೃಷ್ಟಾಂತದಲ್ಲಿ ಕಂಡ ಆಲ್ಟರ್ ನೇಟಿಂಗ್ ಸಿಸ್ಟಮಿನ ಆಕೃತಿಯನ್ನು ಮರುಳಿನಲ್ಲಿ ಕೋಲಿನಿಂದ ತೆಗೆದರು. ಈ ಆಕೃತಿಯು ರೊಟೇಟಿಂಗ್ ಮ್ಯಾಗ್ನೆಟಿಕ್ ಫೀಲ್ಡ್ ನದ್ದಾಗಿತ್ತು. ಡಾ. ಟೇಸಲಾರವರು ಆರು ವರ್ಷದ ನಂತರ ಅಮೇರಿಕನ್ ಇಂಸ್ಟಿಟ್ಯುಟ್ ಆಫ್ ಎಲೆಕ್ರ್ಟಿಕಲ್ ಇಂಜಿನಿಯರ್ಸ್ ಗಳ ಮುಂದೆ ಈ ಆಕೃತಿಯನ್ನು ವಿವರಿಸಿ ಮತ್ತು ಪ್ರಾತ್ಯಕ್ಷಿಕವಾಗಿ ಮಾಡಿ ತೋರಿಸಿದರು. ಇದರ ಪ್ರತಿಮೆಗಳು ಆಶ್ಚರ್ಯಕರವಾಗಿ ಸ್ಪಷ್ಟ ಮತ್ತು ನಿಚ್ಛಳ ಹಾಗು ಲೋಹದಂತೆ ಸ್ಥಿರವಾಗಿತ್ತು. ಇದನ್ನು ವರ್ಣಿಸುವಾಗ ನಿಕೋಲಾ ಟೇಸಲಾರವರು "ಇಲ್ಲಿ ನನ್ನ ಮೋಟರನ್ನು ನೋಡಿ ಮತ್ತು ನಾನು ಅದನ್ನು ಹಿಂದಿರುಗಿಸುವದನ್ನು ಗಮನಿಸಿ" ಎಂದು ಹೇಳಿದರು.

ನಿಕೋಲಾ ಟೇಸಲಾರವರು ಅವರ ಸ್ವಪ್ನದೃಷ್ಟಾಂತದ ಮೂಲಕ ಆಲ್ಟರ್ ನೇಟಿಂಗ್ ಸಿಸ್ಟಮ್ ಆಫ್ ಜನರೇಟರ್ಸ್ ಗಳಲ್ಲಿ ಅನೇಕ ತರಹದ (ಮೂರು ತರಹ) ಬದಲಾವಣೆಗಳನ್ನು ವಿಕಸಿತ ಮಾಡಿದರು, ಆಲ್ಟರ್ ನೇಟಿಂಗ್ ಕರಂಟ್ ಡೈನಮೋವನ್ನು ಒಳಗೊಂಡ ಮೋಟರ್ಸ್ ಆಂಡ್ ಟ್ರಾಂಸ್ ಫೊರಮರ್ಸ್, ಸ್ಟೆಪ್ ಅಪ್ ಆಂಡ್ ಸ್ಟೆಪ್ ಡೌನ್ ಟ್ರಾಂಸ್ ಫೊರಮರ್ಸ್ ಮತ್ತು ಇನ್ನೊಂದು ಬದಿಯಲ್ಲಿ ಏಸಿ ಮೋಟರ್ಸ್ ನ್ನು ಮಾಡಿ ತೋರಿಸಿದರು. ಈ ಸಿಸ್ಟಮಿನಲ್ಲಿ ೪೦ ಮೂಲ ದಾಖಲೆಗಳನ್ನು ಯುಎಸ್ ನಲ್ಲಿ ಡಾ. ನಿಕೋಲಾ ಟೇಸಲಾರವರು ನಮೂದು ಮಾಡಿರುವರು. ೧೮೮೮ ರಲ್ಲಿ ಡಾ. ನಿಕೋಲಾ ಟೇಸಲಾರವರು ಒಂದು ವಾರ್ತೆಪತ್ರಿಕೆಯಲ್ಲಿ " ಏ ನಿವ್ ಸಿಸ್ಟಮ್ ಆಫ್ ಆಲ್ಟರ್ ನೇಟಿಂಗ್ ಕರಂಟ್ ಮೋಟರ್ಸ್ ಆಂಡ್ ಟ್ರಾಂಸ್ ಫೊರಮರ್ಸ್ ’ಎಂಬ ಶಿರೋನಾಮೆ ಕೊಟ್ಟು ತನ್ನ ಮೋಟರ್ಸ್ ಆಂಡ್ ಎಲೆಕ್ ಟ್ರಿಕಲ್ ಸಿಸ್ಟಮ್ ನ ಪರಿಚಯ ಮಾಡಿಸಿದರು ಮತ್ತು ಇದನ್ನೇ ಅವರು ೧೮೮೮ ರಲ್ಲಿ ಅಮೇರಿಕನ್ ಇಂಸ್ಟಿಟ್ಯುಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ರವರ ಮುಂದಿಟ್ಟಾಗ ಅಲ್ಲಿ ಉಪಸ್ಥಿತ ಜನರೆಲ್ಲರ, ಉದ್ಯೋಗ ಸಮಾಜದವರ ಅಲ್ಲದೆ ವರ್ತಮಾನ ಪತ್ರಕಾರರ ಗಮನ ಸೆಳೆಯಿತು. ಡಾ. ನಿಕೋಲಾ ಟೇಸಲಾರವರು ಮೂರು ತರಹದ ಆಲ್ಟರ್ ನೇಟಿಂಗ್  ಕರಂಟ್ ಸಿಸ್ಟಮ್ ನ್ನು ತಯಾರಿಸುವಾಗ ನಿಜವಾಗಿಯೇ ಅವರು ಪಾವನ ತ್ರೈಮೂರ್ತಿತ್ವವನ್ನು ಸ್ವಪ್ನದೃಷ್ಟಾಂತದಲ್ಲಿ ಕಂಡದಂತಿತ್ತು .

ಡಾ. ನಿಕೋಲಾ ಟೇಸಲಾರವರು ಪ್ರಸ್ಥಾಪಿಸಿದ ಭವ್ಯವಾದ ಏಸಿ ಸಿಸ್ಟಮ್ ಆಫ್ ಎಲೆಕ್ಟ್ರಿಸಿಟಿ ಜನರೇಶನ್, ೧೮೮೮ ರಿಂದ ನಮ್ಮ ಮನೆ, ವಾಣಿಜ್ಯ ಹಾಗು ಟ್ರಾಂಸ್ ಪೋರ್ಟ್ ಗಳಿಗಾಗಿ ಇವತ್ತು ಕೂಡ ಅದೇ ಪದ್ಧತಿ ಮತ್ತು ವಿಶಿಷ್ಟ ಪ್ರಕಾರದಿಂದ ಉಪಯೋಗಿಸಲಾಗುತ್ತಿದೆ. ಡಾ. ನಿಕೋಲಾ ಟೇಸಲಾರವರ ಈ ಸಂಶೋಧನೆಯನ್ನು ೧೮೬೦ ರಲ್ಲಿ ಪ್ರಾರಂಭವಾದ ಎರಡನೇಯ ಉದ್ಯೋಗ ಕ್ರಾಂತಿಯ ಗತಿಶಕ್ತಿಗೆ ಕಾರಣಿಭೂತವಾಗಿ ಮತ್ತು ಇದರಿಂದಾಗಿಯೇ ಮುಂದೆ ಫ್ಯಾಕ್ಟರಿ ಎಲೆಕ್ಟ್ರಿಫಿಕೇಶನ್, ಮಾಸ್ ಪ್ರೊಡಕ್ಷನ್, ಪ್ರೊಡಕ್ಷನ್ ಲಾಯಿನ್ ಮೊದಲಾದವುಗಳ ಸಂಶೋಧನೆಗಳಾದವು.

ಡಾ. ನಿಕೋಲಾ ಟೇಸಲಾರವರು ಅವರ ಹೆಸರಿನಲ್ಲಿ ೭೦೦ ಕ್ಕಿಂತ ಮೀರಿದ ದಾಖಲೆಗಳನ್ನು ನಮೂದುಮಾಡಲಾಗಿ ಮುಂದೆ ಇದರಿಂದಾಗಿಯೇ ನೂರಕ್ಕಿಂತಲು ಹೆಚ್ಚು ಸಂಶೋಧನೆಗಳಾಗಿ ಅವುಗಳ ಸಾವಿರಾರು ಪ್ರಕಾರಗಳಲ್ಲಿ ಉಪಯೋಗ ಮಾಡಲಾಯಿತು. ಅವರು ಮಾಡಿದ ಮೊದಲನೇಯ ಸಂಶೋಧನವಾದ ಏಸಿ ಪಾವರ್ ಮತ್ತು ಆ ಸಂಶೋಧನೆಗಳಂತೆಯೇ ಮುಗಿಯಲಾರದ ಅಗಣಿತ ಪಟ್ಟಿಗಳನ್ನು ನೋಡಿದಾಗ ಡಾ. ನಿಕೋಲಾ ಟೇಸಲಾರವರ ಸಂಶೋಧನೆಗಳು ನಮ್ಮ ಜೀವನದ ಪ್ರತಿಯೊಂದು ಸೆಕೆಂದುಗಳನ್ನು ಸ್ಪರ್ಷಿಸುತ್ತಿರುವದು ಸ್ಪಟಿಕದಂತೆ ನಿಶ್ಛಳವಾಗಿದೆ. ಹೀಗಿರುವಾಗ ನಮ್ಮಲ್ಲಿ ಹಲವರು ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನಗಳಲ್ಲಿ ಹೇಳುವ ತನಕ ಅವರ ಹೆಸರನ್ನೇ ಅಂದಿನವರೆಗೆ ಕೇಳಿರಲಿಲ್ಲ,
 

ಕಳೆದ ವಾರದ ಲೇಖನವನ್ನು ಮುಂದುವರಿಸುವಾಗ ನಾವು ಡಾ. ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ರವರನ್ನು ಭೇಟಿ ಮಾಡುವ ತನಕ ಅವರನ್ನು ಪೂಜಿಸುತ್ತಿದ್ದರೆಂದು ನೋಡಿದೇವು. ಅವರ ಪ್ರಥಮ ಭೇಟಿಯಲ್ಲಿಯೇ ಟೇಸಲಾರವರ ಬಗ್ಗೆ ಮಾಹಿತಿಯನ್ನು ಎಡಿಸನ್ ಪಡೆದುಕೊಂಡರು. ಆ ಸಮಯದಲ್ಲಿ ಎಡಿಸನ್ ರವರನ್ನು "ಕಿಂಗ್ ಆಫ್ ಎಲೆಕ್ಟ್ರಿಸಿಟಿ" ಎಂದು ಜಗತ್ತಿನಲ್ಲೆಲ್ಲಾ ಕರೆಯಲಾಗುತ್ತಿತ್ತು. ಆಗ ಡೀಸಿ ಪಾವರ್ ನ್ನು ನೂರಾರು ಪಾವರ್ ಸ್ಟೇಶನ್ ಗಳಿಂದ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಅದರ ಎಡಿಸನ್ ಮಾಲಿಕರಾಗಿದ್ದು ಆ ಸಮಯದಲ್ಲಿಯ ಎಲೆಕ್ಟ್ರಿಕಲ್ ಇಂಸ್ಟ್ರುಮೆಂಟ್ ಗಳಿಗೆ ಪಾವರ್ ಮತ್ತು ಜನರೇಟ್ ಮಾಡುತ್ತಿತ್ತು. ಕಾರಣ ಅದನ್ನು ಕೇವಲ ಡೀಸಿ ಪಾವರಿಗಾಗಿ ಉದ್ದೇಶಪೂರ್ವಕವಾಗಿ ತಯಾರಿಸಲಾಗಿತ್ತು.


ಎಡಿಸನ್ ರ ಭೇಟಿಯ ಸಮಯದಲ್ಲಿ ನಿಕೋಲಾ ಟೇಸಲಾರವರು ಆಲ್ಟರ್ ನೇಟಿಂಗ್ ಕರಂಟ್ ಮೋಟರಿಗೆ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡಲು ಮೂಲವಾದ ರೋಟೆಟಿಂಗ್ ಮ್ಯಾಗ್ನೇಟಿಕ್ ಫೀಲ್ಡ್ ನ ಮೂಲತತ್ವವನ್ನು ವಿವರಿಸಿ ಹೇಳಿದರು. ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಮೂಲತತ್ವದ ಉಪಯೋಗದ ಬಗ್ಗೆ ಎಡಿಸನ್ ವಿಚಾರ ಕೂಡ ಮಾಡಿರಲಿಲ್ಲ ಹಾಗು ಅದನ್ನು ಅರ್ಥ ಕೂಡ ಮಾಡಿಕೊಳ್ಳಲು ಅಸಮರ್ಥರಾಗಿರುವರೆಂದು ಟೇಸಲಾರವರಿಗೆ ಬಹಳ ಆಶ್ಚರ್ಯವಾಯಿತು. ಟೇಸಲಾರವರು ಎಡಿಸನ್ ಗೆ ವಿವರಿಸುವಾಗ ಡೀಸಿ ಪಾವರನ್ನು ದೂರದ ಅಂತರಕ್ಕೆ ಕಳುಹಿಸುವಾಗ ಏಸಿ ಪಾವರಿನ ತುಲನೆಯಲ್ಲಿ ಎಡಿಸನ್ ರವರ ಡೀಸಿ ಗೆ ನಿವ್ ಯಾರ್ಕ್ ನ ಪಟ್ಟಣಕ್ಕೆ ಕಳುಹಿಸಲು ನೂರಾರು ಪಾವರ್ ಸ್ಟೇಶನ ಗಳ ಪಾವರ್ ಬೇಕಾಗುವದು ಹಾಗು ಆಗ ಸಹ ಆ ಪಟ್ಟಣದ ಹೊರ ಭಾಗ ಕತ್ತಲೆಯಲ್ಲಿ ಉಳಿಯುವದು ಮತ್ತು ಅದರ ತುಲನೆಯಲ್ಲಿ ನಿಕೋಲಾ ಟೇಸಲಾರವರ ಆಲ್ಟರ್ ನೇಟಿಂಗ್ ಕರಂಟ್ ಮಾಡುವ ಕೆಲಸವನ್ನು ಕೇವಲ ಒಂದೇ ಪಾವರ್ ಸ್ಟೇಶನ್ ನೆರವೇರಿಸುತ್ತದೆ. ಇದು ಕೇವಲ ನಿವ್ ಯಾರ್ಕ್ ಪಟ್ಟಣಕ್ಕಲ್ಲದೆ ಪೂರ್ಣ ನಿವ್ ಯಾರ್ಕ್ ಸ್ಟೇಟಿಗೆ ಸ್ಥಳಾಂತರ ಮಾಡುವದು ಎಂದು ಹೇಳಿದರು.

ನಿಕೋಲಾ ಟೇಸಲಾರವರು ಡೀಸಿ ಸ್ಯಿಸ್ಟಮ್ ದೂರದ ಅಂತರಕ್ಕೆ ಕಳುಹಿಸುವಾಗ ಪಾವರ್ ನ್ನು  ವ್ಯಯ ಮಾಡುತ್ತದೆ ಆದರೆ ಏಸಿ ಸಿಸ್ಟಮ್ ಹಾಗೆ ಮಾಡುವುದಿಲ್ಲ ಎಂದು ವಿವರಿಸಿ ಹೇಳಿದರು. ಅದಲ್ಲದೆ ಡಾ. ನಿಕೋಲಾ ಟೇಸಲಾರವರ ಏಸಿ ಕರಂಟ್ ಸಿಸ್ಟಮ್ ನಲ್ಲಿ ಸ್ಟೆಪ್ ಅಪ್ ಮತ್ತು ಸ್ಟೆಪ್ ಡೌನ್ ಟ್ರಾಂಸ್ ಫೊರಮರ್ಸ್ ಇದ್ದು ಅದು ವೊಲ್ಟೇಜ್ ನ್ನು ಹೆಚ್ಚು ಕಡಿಮೆ ಮಾಡಲು ಉಪಯೊಗಿಸಬಹುದು. ಈ ಸಿಸ್ಟಮ್ ಸಾವಿರ ಪಾಲಿನಷ್ಟು ಸುರಕ್ಷಿತವಾಗಿದ್ದು ಮತ್ತು ಆರ್ಥಿಕ ದೃಷ್ಟಿಯಲ್ಲಿಯೂ ಬಹಳ ಸಮರ್ಪಕವಾಗಿದೆ. ಮುಂದೆ ಅವರಿಗೆ ವಿವರಿಸುವಾಗ ಟೇಸಲಾರವರು ನಾವು ನೈಸರ್ಗಿಕವಾಗಿ ಪಡೆದ ಈ ಪಾವರನ್ನು ಗಾಳಿಯಲ್ಲಿ ಬಿಸಾಡಿದಂತೆ ವ್ಯಯವಾಗುವದು ಎಂದು ಹೇಳಿದರು. ಈ ಡೀಸಿ ಪಾವರ್ ನ ಎಲೆಕ್ಟ್ರಿಕ್ ಪಾವರ್ ಅಪೂರ್ಣವಾಗಿದ್ದು ಅದು ಅನೈಸರ್ಗಿಕವಾಗಿದೆಯೆಂದು ಕೂಡ ಹೇಳಿದರು. ಅಲ್ಲದೆ ಅದು ನಿಸರ್ಗದ ಏಕತಾಳವನ್ನು ನಷ್ಟ ಮಾಡುತ್ತಿದೆಯೆಂದು ಸಹ ಹೇಳಿದರು.ಈ ಡೀಸಿಯನ್ನು ಏಸಿಯಲ್ಲಿ ರೂಪಾಂತರಗೊಳಿಸಿದಾಗ ಒಂದು ದೊಡ್ಡ ಹೆಜ್ಜೆ ಮುಂದಿಟ್ಟಂತೆ ಅದು ಪೂರ್ಣ ಜಗತ್ತನ್ನೇ ಬದಲಾಯಿಸುವದು ಮತ್ತು ಮಾನವನಿಗೆ ಲಾಭದಾಯಿಯಾಗುವದೆಂದು ವಿಸ್ತಾರದಿಂದ ವಿವರಿಸಲು ಪ್ರಯತ್ನಿಸಿದರು

ಈ ಕ್ರಾಂತಿಕಾರಕ ವಿಚಾರಗಳನ್ನು ಕೇಳಿದಾಗ, ಥೋಮಸ್ ಎಡಿಸನ್ ಆಶ್ಚರ್ಯಪಟ್ಟು ಅಸ್ವಸ್ಥಗೊಂಡರು. ನಿಕೋಲಾ ಟೇಸಲಾರವರ ಈ ವಿಚಾರಗಳು ನಿಜದಲ್ಲಿ ರೂಪಗೊಂಡರೆ ಅವರ ಪಾವರ್ ಉದ್ಯೋಗಕ್ಕೆ ಗಂಡಾಂತರವಿದೆಯೆಂದು ಎಡಿಸನ್ ಗೆ ಸ್ಪಷ್ಟವಾಗಿ ತೋರಿತು. ಇದರ ವಿಚಾರಗಳೇ ಎಡಿಸನ್ ನನ್ನು ಬಹಳ ಕದಡಿಸಿ ಅವರು ಕ್ಷುಭ್ದಗೊಂಡರು. ತನ್ನ ಪಾವರ್ ಸಾಮ್ರಾಜ್ಯವನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಎಡಿಸನ್ ರವರು ಟೇಸಲಾರವರ ವಿಚಾರಗಳನ್ನು ಆಗಲೇ ಅಲ್ಲಿಯೇ ತ್ಯಜಿಸಿದರು ಮತ್ತು ಅವರ ಪರಿಹಾಸ್ಯ ಮಾಡಿ, ಅವರು ಮುಂದೆ ಹೋಗಲಾರದ ತಪ್ಪು ಹಾದಿಯಲ್ಲಿ ಹೋಗುತ್ತಿದ್ದಾರೆಂದು ಹೇಳಿದರು.



ಆದ್ದರಿಂದ ಮೇಲಿನ ಸಂಗ್ರಹದಿಂದ ನಿಕೋಲಾ ಟೇಸಲಾರವರು ಬಹಳ ಸ್ಪಷ್ಟವಕ್ತರಾಗಿದ್ದು, ಪ್ರಾಮಾಣಿಕವಾಗಿ ಸತ್ಯದ ಬದಿಯಲ್ಲಿ ಸ್ಥಿರತೆಯಿಂದ ನಿಲ್ಲುವವರಾಗಿದ್ದರೆಂದು ತೋರಿಸಿಕೊಳ್ಳುತ್ತದೆ. ಅವರ ಈ ಮೂಲತತ್ವದ ಕಾರಣದಿಂದಾಗಿಯೇ ಡಾ. ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ಗೆ  ಅವರ ಪಾವರ್ ಜನರೇಶನಿನ ಮಾದರಿಯಲ್ಲಿ ಕುಂದು ಇದ್ದು ನಿಕೋಲಾ ಟೇಸಲಾರವರು ಪ್ರಸ್ಥಾಪಿಸುತ್ತಿರುವ ಆಲ್ಟರ್ ನೇಟಿಂಗ್ ಕರಂಟ್ ಬಹಳ ಸುಧಾರಿತವಾದ ಹಾಗು ಎಲ್ಲಾ ತರಹದಿಂದ ಸಮರ್ಥವಾಗಿದೆಯೆಂದು ಪ್ರಾಮಾಣಿಕತೆಯಿಂದ ಹಾಗು ಧೈರ್ಯದಿಂದ ಹೇಳಲು ಸಾಧ್ಯವಾಯಿತು. ಈ ಧೈರ್ಯವು ಟೇಸಲಾರವರ ದೇವರಲ್ಲಿದ್ದ ಪಾವನ ನಂಬಿಕೆಯಿಂದಾಗಿ ಉತ್ಪನ್ನವಾಗಿತ್ತು. ಮತ್ತು ವಿಜ್ನಾನದಲ್ಲಿಯ ಅವರ ಆತ್ಮವಿಶ್ವಾಸ ಹಾಗು ಅದನ್ನು ಅರ್ಥಮಾಡಿಕೊಂಡಿದ್ದರಿಂದ ಅವರು ಬಹಿರಂಗವಾಗಿ ಆ ಕಾಲದಲ್ಲಿ ಧೀರನೆಂದುಕೊಂಡವನನ್ನು ಎದುರಿಸಲು ಯಾವುದೇ ಪ್ರಕಾರದಿಂದ ಹಿಂದುಳಿಯಲಿಲ್ಲ. "ದುರಂಹಕಾರವೆಂದರೆ ಬಲವಲ್ಲ, ಆದರೆ ಅದು ಭಯದ ಇನ್ನೊಂದು ಮುಖವಾಡವಾಗಿದೆ" ಎಂದು ಹೇಳುವ ಲೋಕೋಕ್ತಿಯನ್ನು ಸಿದ್ಧಪಡಿಸುತ್ತದೆ ಎಂಬುದನ್ನು ಈ ಲೇಖನದ ಪ್ರಾರಂಭದಲ್ಲಿ ನೋಡಿದ್ದೇವೆ. ಮುಂದಿನ ಲೇಖನದಲ್ಲಿ ವಿದ್ಯುತಚ್ಛಕ್ತಿಯ ಶಕ್ತಿ ಮತ್ತು ಬುದ್ಧಿಯುಳ್ಳ ಘರ್ಷಣೆಯನ್ನು ನೋಡಲಿರುವೆವು.....(ಮುಂದುವರಿಯಲಿದೆ) 

 || ಹರಿ ಓಂ || ಶ್ರೀರಾಮ || ಅಂಬಜ್ನ ||


    

Friday 8 August 2014

ಡಾ. ನಿಕೋಲಾ ಟೇಸಲಾರವರ - ಆರಂಭಿಕ ಜೀವನ

ಹಿಂದಿನ ಲೇಖನದಲ್ಲಿ ನಾವು ಅತೀ ಉಚ್ಚದ ವ್ಯಕ್ತಿಮತ್ವ ಪಡೆದ ಡಾ. ನಿಕೋಲಾ ಟೇಸಲಾ ಎಂದು ಜಗತ್ತಿನಲ್ಲಿ ಪ್ರಸಿದ್ದರಾಗಿರುವರ ಪರಿಚಯ ಮಾಡಿ ಕೊಂಡೆವು. ಡಾ. ಟೇಸಲಾರವರ ಮಹತ್ಕಾರ್ಯಗಳು ಮತ್ತು ಅವರ ಜೀವನವನ್ನು ವರ್ಣಿಸುವಾಗ’ ಅತೀ ಉಚ್ಚ’ ಶಬ್ದದ ಉಪಯೋಗ ಬಹಳ ಸಣ್ಣದಾಗಿದೆಯೆಂದು ಎಣಿಸುವದು. ನನಗೆ ಅದನ್ನು ಸರಿಯಾದ ಅರ್ಥದಲ್ಲಿ ಉಪಯೋಗಿಸಬೇಕಾದರೆ ನಾನು ಅದನ್ನು ’ಹಿಮಾಲಯದಂತಿರುವ ವ್ಯಕ್ತಿಮತ್ವ’ ಹೇಳಬಲ್ಲೆ ಯಾಕೆಂದರೆ ಡಾ. ಟೇಸಲಾರವರು ನಿಜವಾಗಿಯೂ ಅತಿ ದೊಡ್ಡ ಎತ್ತರವನ್ನು ಪಾರು ಮಾಡಿದವರು ಮತ್ತು ಅದಕ್ಕಾಗಿಯೇ ಅವರನ್ನು ವಿಜ್ನಾನದ ದೇವರು’ (ಗಾಡ್ ಆಫ್ ಸಾಯನ್ಸ್) ಎಂದು ಗುರುತಿಸಲಾಗಿತ್ತು. ಇವತ್ತು ನಾವು ಈ ಪ್ರತಿಭಾವಂತನ ಬಗ್ಗೆ ಹೆಚ್ಚು ಪರಿಚಯ ಮಾಡಿಕೊಳ್ಳುವ.

ನನ್ನ ಹಿಂದಿನ ಬ್ಲಾಗ್ ಪೋಸ್ಟ್ ನಲ್ಲಿ ನಾನು ವಿಶೇಷವಾಗಿ ನಿಕೋಲಾ ಟೇಸಲಾರವರ ಜನ್ಮ ಮತ್ತು ಅವರ ಶಿಕ್ಷಣ, ಅವರಿಗೆ ಸಿಕ್ಕಿದ ಮಾನ್ಯತೆ ಮತ್ತು ಅವರ ಕೆಲವು ಪ್ರತಿಷ್ಠಿತ ಶೋಧನೆಗಳ ಬಗ್ಗೆ ಬರೆದಿದ್ದೆ. ಇವತ್ತಿನ ಬ್ಲಾಗ್ ಪೋಸ್ಟ್ ನಲ್ಲಿ , ಅವರ ಬಾಲ್ಯತನದ ಜೀವನ ಪರಿಚಯ, ತಾರುಣ್ಯಕ್ಕೆ ಬರುವ ಮೊದಲಿನ ವರ್ಷಗಳು ಮತ್ತು ಆನಂತರ ತಾರುಣ್ಯದಲ್ಲಿ ಉದಯಕ್ಕೆ ಬರುತ್ತಿರುವ ಸಂಶೋಧಕನ ಕೆಲೈಡೋಸ್ಕೋಪ್ (ವಿವಿಧ ಚಿತ್ರದರ್ಶಕ) ನ್ನು ಕೊಡಲಿದ್ದೇನೆ. ಈ ಕಾಲದಲ್ಲಿಯೇ ಡಾ. ಟೇಸಲಾರವರು ಭಕ್ತಿಯಲ್ಲಿ ಸುಸ್ಥಾಪಿತರಾದರು ಮತ್ತು ಇದೇ ಅವರನ್ನು ನವೀನತೆಯ ಸಂಶೋಧಕನಾಗಿ ಆಕಾರಕ್ಕೆ ತಂದಿತು.
 
ಡಾ. ನಿಕೋಲಾ ಟೇಸಲಾರವರು ಧರ್ಮನಿಷ್ಠ ಕೆಥೊಲಿಕ ಕುಟುಂಬದಲ್ಲಿ ಜನ್ಮಿಸಿದರೆಂದು ನಮಗೆ ಈಗ ತಿಳಿದಿದೆ. ಅವರ ತಂದೆ, ಮಿಲುಟಿನ್ ಟೇಸಲಾರವರು ಪಾದ್ರಿಯಾಗಿದ್ದು ಅವರ ತಾಯಿಯ ತಂದೆಯವರು ಕೂಡ ಪಾದ್ರಿಯಾಗಿದ್ದರು. ಅವರ ತಾಯಿ, ಡ್ಯುಕಾ ಟೇಸಲಾ ಅಶಿಕ್ಷಿತರಾಗಿದ್ದರು. ಅವರಿಗೆ ಯಾವ ಶಿಕ್ಷಣ ಸಿಗದಿದ್ದರೂ ಕೂಡ ಹೊಸ ಪದ್ಧತಿಯಲ್ಲಿ ರುಚಿಯುಳ್ಳ ಗೃಹಿಣಿಯಾಗಿದ್ದರು. ಅವರ ಪ್ರತಿದಿನದ ಹೊಸ ಕಲ್ಪನೆಯಿಂದಾಗಿ ಅವರು ಮೊಟ್ಟೆಯನ್ನು ಒಡೆದು ಏಕಜೀವ  ಮಾಡುವ ಯಂತ್ರ (ಮೆಕ್ಯಾನಿಕಲ್ ಎಗ್ ಬೀಟರ್) ವನ್ನು ತಯಾರಿಸಿದರು. ಹೀಗೆ ತಾರುಣ್ಯದಿಂದಲೇ ನಿಕೋಲಾರವರಿಗೆ ಅವರ ಬೆಳೆಯುತ್ತಿರುವ ವಯಸ್ಸಿನಲ್ಲಿ ವಿಜ್ನಾನ ಮತ್ತು ಆಧ್ಯಾತ್ಮಿಕ (ಭಕ್ತಿ) ದ ಪರಿಚಯವಾಯಿತು. ಅವರ ಜೀವನವನ್ನು ಮುಂದುವರಿಸಲು, ಅವರ ಉತ್ಕೃಷ್ಟವಾದ ಸುಧಾರಿತ ವಿಜ್ನಾನ ಹಾಗು ಅಚಲ ಭಕ್ತಿಯು  ಎರಡು ಸಮಾನ ಶಕ್ತಿಗಳಾಗಿ ಆಧಾರಸ್ತಂಭಗಳಂತಾಗಿದ್ದವು. ಡಾ. ನಿಕೋಲಾ ಟೇಸಲಾರವರು ಅವರ ತಾಯಿಗೆ ಬಹಳ ಹತ್ತಿರವಾಗಿದ್ದು ತನಗೆ ಲಭಿಸಿದ ಛಾಯಾಚಿತ್ರಣದಂತಹ ಸೃತಿಶಕ್ತಿ ಹಾಗು ನಿರ್ಮಾಣಮಾಡುವ ಕೃತಿಯ ಶ್ರೇಯಸ್ಸನ್ನು ಅವರ ತಾಯಿಗೆ ಕೊಟ್ಟಿರುವರು. ನಿಜವಾಗಿಯೇ ಪಾಲಕರೇ ತನ್ನ ಮಕ್ಕಳ ವ್ಯಕ್ತಿಮತ್ವವನ್ನು ಬಾಲ್ಯತನದಿಂದಲೇ ನಿರ್ಮಿಸಿ ಮತ್ತು ರೂಪಿಸುತ್ತಾರೆ ಮತ್ತು ಅವರನ್ನು ಮುಂದಿನ ಪ್ರಯಾಣಕ್ಕಾಗಿ ಸಿದ್ಧಪಡಿಸುತ್ತಾರೆ. ಆದರೆ ಅವರ ತಂದೆ-ತಾಯಿಗಳು ತನ್ನ ಮಗುವನ್ನು ನಿಕೋಲಾ ಟೇಸಲಾನಂತೆ ರೂಪಿಸಬೇಕಾದರೆ ಅವರು ನಿಜವಾಗಿಯೂ ಅವರ ಜೀವನದಲ್ಲಿ ವಿಶಾಲ ಮನಸ್ಸಿನ, ನವೀನತೆಯನ್ನು ಕಲ್ಪಿಸುವ, ವಾದ ಸಾಮರ್ಥ್ಯಯುಕ್ತ, ಭಯರಹಿತ ಹಾಗು ವಿಶೇಷವಾಗಿ ಧರ್ಮನಿಷ್ಠರಾಗಿರಬೇಕು.

ಅವರ ತಾಯಿ-ತಂದೆಯಲ್ಲದೆ ಡಾ. ನಿಕೋಲಾ ಟೇಸಲಾರವರಿಗೆ ಮಿಲ್ಕಾ, ಎಂಜಲೀನಾ, ಮತ್ತು ಮಾರಿಕಾ ಅಂತ ಮೂರು ಅಕ್ಕ-ತಂಗಿಯರು ಹಾಗು ಡೇನ್ ಅಂತ ದೊಡ್ಡ ಅಣ್ಣ ಕುಟುಂಬದಲ್ಲಿದ್ದರು. ದುರ್ದೈವದಿಂದ ಡೇನ್ ಕುದುರೆ ಅಪಘಾತದಲ್ಲಿ ಅಕಾಲಿಕ ಹಾಗು ದು;ಖದ ಮರಣ ಹೊಂದಿದ್ದನು.ಈ ಅಪಘಾತದಲ್ಲಿ ನಿಕೋಲಾರವರ ಕೈ ಇದೆಯೆಂದು ಟೇಸಲಾರವರ ಪ್ರತಿರೋಧಿಗಳು ಕಥೆಮಾಡಿ ಹೇಳತೊಡಗಿದರು. ಇದು ಕೇವಲ ಡಾ. ನಿಕೋಲಾ ಟೇಸಲಾರವರನ್ನು ದೂಷಿಸಲೆಂದು ಅಸತ್ಯವನ್ನು ಪ್ರಚಾರಮಾಡಿದ್ದಾಗಿತ್ತು.

ನಿಕೋಲಾರವರ ಜನ್ಮಭೂಮಿಯಾದ ಸ್ಮಿಲ್ಜನ್ ನಲ್ಲಿ ಜರ್ಮನ್, ಗಣಿತಶಾಸ್ತ್ರ ಮತ್ತು ಧರ್ಮವನ್ನು ಶಿಶುವಿಹಾರ ಹಾಗು ಪ್ರಾಥಮಿಕ ಶಾಲೆಗಳಲ್ಲಿ ಕಲಿತ ನಂತರ ನಿಕೋಲಾರವರ ತಂದೆಯು ಪಾದ್ರಿಯ ಕೆಲಸ ತೆಗೆದುಕೊಂಡ ಕಾರಣಕ್ಕಾಗಿ ಟೇಸಲಾ ಕುಟುಂಬವು ಗೊಸ್ಪಿಕ್ ಗೆ ಸ್ಥಲಾಂತರ ಮಾಡಿತು. ನಿಕೋಲಾರವರ ಶಾಲೆಯ ಶಿಕ್ಷಣ ಮುಗಿದಂತೆ ಟೇಸಲಾರವರು ೧೮೭೦ ರಲ್ಲಿ ಕಾರ್ವೋಲಾಕ್ ಗೆ ಸ್ಥಲಾಂತರ ಮಾಡಿಕೊಂಡರು ಇಲ್ಲಿ ನಿಕೋಲಾರವರು ತನ್ನ ಉಚ್ಚ ಶಿಕ್ಷಣವನ್ನು ಮುಂದುವರಿಸಿದರು. ಇಲ್ಲಿ ನಿಕೋಲಾರವರು ಪೂರ್ಣಾಂಕದ ನಿಶ್ಚಿತರೀತಿಯ ಪ್ರಶ್ನೆಗಳ ಒಗಟುಗಳನ್ನು ಕಾಗದದ ಮೇಲೆ ಬಿಡಿಸದೆ ತನ್ನ ಮನಸ್ಸಿಲ್ಲಿ ಬಿಡಿಸುತ್ತಿದ್ದರು. ಕೇವಲ ಮನಸ್ಸಿನಲ್ಲಿ ...ಇದು ನಂಬಲು ಅಸಾಧ್ಯವಾದದ್ದು ಮತ್ತು ಶಿಕ್ಷಕರು ಆರಂಭದಲ್ಲಿ ನಿಕೋಲಾರವರು ನಮಗೆ ಮೋಸ ಮಾಡುತ್ತಿದ್ದಾನೆಂದು ತಿಳಿದಿದ್ದರು. ಆದರೆ ಅದು ನಿಜವಾಗಿರಲಿಲ್ಲ. ಯಾಕೆಂದರೆ ಇದರ ನಂತರ ನಿಕೋಲಾರವರು ತನ್ನ ಪದವಿಯ ಶಿಕ್ಷಣವನ್ನು ನಾಲ್ಕು ವರ್ಷ ತೆಗೆದುಕೊಳ್ಳದೆ ಕೇವಲ ಮೂರು ವರ್ಷಗಳಲ್ಲಿ ಮುಗಿಸಿ ತನ್ನ ಅಸಾಧಾರಣ ಬುದ್ಧಿಶಕ್ತಿಯನ್ನು ಸಿದ್ದಪಡಿಸಿದರು. ಮತ್ತು ೧೮೭೩ ರಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅವರು ಸ್ಮಿಲ್ಜನ್ ಗೆ ಹಿಂತಿರುಗಿ ಬಂದರು ಆದರೆ ಪ್ರಾಣಾಂತಕವಾದ ಕೊಲೇರಾ ರೋಗದಿಂದ ಪೀಡಿತರಾದರು ಇದರಿಂದಲು ಅವರು ಹೆಚ್ಚು ಬಲಶಾಲಿಯಾಗಿ ಹೊರಬಂದರು.
 
೧೮೭೪ ರಲ್ಲಿ ಡಾ. ನಿಕೋಲಾ ಟೇಸಲಾರವರು ಪರ್ವತೀಯ ಗ್ರಾಮಾಂತರ ಪ್ರದೇಶಗಳ ಬಗ್ಗೆ ಪರಿಚಯ ಮಾಡಿ, ಅರ್ಥಮಾಡಿ, ದೇವರು ಮತ್ತು ನಿಸರ್ಗ ಹಾಗು ಅದರ ಕಾರ್ಯಪದ್ಧತಿಗಳನ್ನು ತಿಳಿಯಲೆಂದು ಅಲ್ಲಿ ಸಂಚಾರಿಸಿದರು.ಇದು ಟೇಸಲಾರವರನ್ನು ಮಾನಸಿಕವಾಗಿ ಅಲ್ಲದೆ ಶಾರೀರಿಕ ದೃಷ್ಟಿಯಲ್ಲಿಯು ಹೆಚ್ಚು ಬಲಶಾಲಿ ಮಾಡಿ ನೈಸರ್ಗಿಕ ಕಾರ್ಯ ಪದ್ಧತಿಯ ಬಗ್ಗೆಯೂ ಪರಿಚಿತರಾದರು. ಇದೇ ಮುಂದೆ ಅವರಿಗೆ ಅವರ ಸಂಶೋಧನೆಗಳಿಗಾಗಿ ಮೂಲ ಕಾರಣವಾಯಿತು.

೧೮೭೫ ರಿಂದ ಡಾ. ನಿಕೋಲಾ ಟೇಸಲಾರವರು ಗ್ರೇಝಿನ್ ಆಸ್ಟ್ರಿಯನ್ ಪೊಲಿಟೆಕ್ನಕ್ ನಲ್ಲಿ ತನ್ನನ್ನು ಸೇರಿಸಿಕೊಂಡರು. ಇಲ್ಲಿಯ ಅವರ ವಾಸ್ತವ್ಯ ವಿಶೇಷವಾಗಿ ಗಮನಿಸುವಂತಿದೆ. ಮೊದಲು ಅವರು ವಿದ್ಯಾರ್ಥಿವೇತನವನ್ನು ಪಡೆದು ದಾಖಲೆ ತೆಗೆದುಕೊಂಡರು. ಜ್ನಾನ ಪಡೆಯಲು ತವಕಗೊಂಡ ನಿಕೋಲಾರವರು ಯಾವುದೇ ಲೆಕ್ಚರನ್ನು ತಪ್ಪಿಸಲಿಲ್ಲ ಆದ್ದರಿಂದ ಅವರು ಎಲ್ಲರಿಗಿಂತ ಉಚ್ಚ ಕ್ರಮಾಂಕ ಪಡೆದರು, ವಾಸ್ತವ್ಯದಲ್ಲಿ ಆವಶ್ಯಕತೆಯಿಂದ ಎರಡು ಪಾಲರಷ್ಟು ಹೆಚ್ಚಾಗಿರುವ ಒಂಬತ್ತು ಪರೀಕ್ಷೆಗಳಲ್ಲಿ ಉತ್ತೀರ್ಣರಾದರು ಮತ್ತು ಸರ್ಬಿಯನ್ ಕಲ್ಚರ್ ಕ್ಲಬ್ ನ್ನು ಕೂಡ ಆರಂಭಿಸಿದರು. ಅಂತ್ಯದಲ್ಲಿ ಪೊಲಿಟೆಕ್ನಿಕಿನ ಡೀನ್ (ವೈದ್ಯಕೀಯ ಕಾಲೇಜಿನ ಮುಖ್ಯಸ್ಥ) ಗುಣವಿವೇಚನೆಯ ಪತ್ರವನ್ನು ನಿಕೋಲಾರವರ ತಂದೆಗೆ ಬರೆದು ನಿಕೋಲಾರವರನ್ನು ಪ್ರಶಂಸಿದರು ಮತ್ತು ನಿಕೋಲಾರವರನ್ನು ’ಸ್ಟಾರ್ ಆಫ್ ಫರ್ಸ್ಟ್ ರೆಂಕ್ ’ ಕೊಡಲು ನಿರ್ಣಯಿಸಿದ್ದನ್ನು ತಿಳಿಸಿದರು. ಇಲ್ಲಿಂದಲೇ ಮುಂದೆ ಡಾ. ನಿಕೋಲಾ ಟೇಸಲಾರವರು ತನ್ನ ಕಠೋರ ಪರಿಶ್ರಮದ ವಿವರಪಟ್ಟಿಯನ್ನು ಆರಂಭಿಸಿದರು, ಬೆಳಿಗ್ಗೆ ೩.೦೦ ರಿಂದ ರಾತ್ರಿಯ ೧೧.೦೦ ಗಂಟೆಯತನಕ ಅಂದರೆ ದಿವಸದಲ್ಲಿ ೨೦ ಗಂಟೆಯ ಕಾಲ ಕೆಲಸ ಮಾಡತೊಡಗಿದರು, ಅದು ಕೂಡ ಯಾವುದೇ  ಹಬ್ಬ ಅಥವಾ ರಜೆಯನ್ನು ತೆಗೆದುಕೊಳ್ಳದೆ. ೧೮೭೮ ರ ಡಿಸೆಂಬರ್ ತಿಂಗಳಿನಲ್ಲಿ ನಿಕೋಲಾ ಗ್ರೇಝ್ ನ್ನು ಬಿಟ್ಟು ಪುನ: ಗೊಸ್ಪಿಕ್ ಗೆ ಬಂದು ಅವರು ಮಾಧ್ಯಮಿಕ ಶಾಲೆಯಲ್ಲಿ ಕಲಿಸ ತೊಡಗಿದರು.

೧೮೮೦ ರಲ್ಲಿ ಪ್ರೇಗಿನಲ್ಲಿದ್ದ ಮೇಲೆ ಡಾ. ನಿಕೋಲಾ ಟೇಸಲಾರವರು ಬುಡಾಪೇಸ್ಟ್ ಗೆ ಬಂದು ಬುಡಾಪೇಸ್ಟ್ ನಲ್ಲಿ ಫೆರೆನ್ ಪುಸ್ಕಸ್ ದಲ್ಲಿ ಕಟ್ಟಲ್ಪಡುತ್ತಿರುವ ಟೆಲಿಫೋನ್ ಎಕ್ಸ್ ಚೆಂಜ್ ನಲ್ಲಿ ಕೆಲಸ ಮಾಡತೊಡಗಿದರು. ಹೀಗೆ ಟೇಸಲಾರವರು ಸೆಂಟ್ರಲ್ ಟೆಲೆಗ್ರಾಫ್ ಕಾರ್ಯಾಲಯದಲ್ಲಿ ಕರಡುಪ್ರತಿಗಳನ್ನು ತಯಾರಿಸುವ ಕೆಲಸ ತೆಗೆದುಕೊಂಡರು ಇಲ್ಲಿಂದ ಸ್ವಲ್ಪ ತಿಂಗಳಿನಲ್ಲಿ ಬುಡಾಪೇಸ್ಟಿನ ಟೆಲಿಫೋನ್ ಎಕ್ಶ್ ಚೆಂಜ್ ಕಾರ್ಯರತವಾಯಿತು ಮತ್ತು ಟೇಸಲಾರವರನ್ನು ಮುಖ್ಯವಾಗಿ ಚೀಫ್ ಎಲೆಕ್ಟ್ರಿಶೀಯನ್ ನ್ನಾಗಿ ಮಾಡಿದರು. ಇಲ್ಲಿರುವಾಗ ಆವರು ಸೆಂಟ್ರಲ್ ಸ್ಟೇಶನ್ ಎಕ್ವಿಪ್ ಮೆಂಟ್ ನಲ್ಲಿ ಅನೇಕ ಪ್ರಕಾರದ ಬದಲಾವಣೆಗಳನ್ನು ಮಾಡಿದರು. ಇಲ್ಲಿರುವಾಗಲೇ ಡಾ. ಟೇಸಲಾರವರು ತಮ್ಮ ಪ್ರಥಮ ಸಂಶೋಧನೆಯನ್ನು ಮಾಡಿದರು. ಡಾ. ಟೇಸಲಾರವರು ಟೆಲಿಫೋನ್ ರಿಪೀಟರ್ ಮತ್ತು ಎಂಪ್ಲಿಫೈರ್ ನ್ನು ಪೂರ್ಣಗೊಳಿಸಿದರು. ಟೇಸಲಾರವರು ತಾನು ಮಾಡಿದ ಈ ಸಂಶೋಧನೆಯ ಶ್ರೇಯಸ್ಸನ್ನು ಕೂಡ ಜನಕಲ್ಯಾಣಕ್ಕಾಗಿ ಸಮರ್ಪಿತ ಮಾಡಿದರು.

ಇದರ ನಂತರ ಟೇಸಲಾರವರು ಫ್ರಾಂಸ್ ನಲ್ಲಿರುವ ಪ್ಯಾರೀಸಿನಲ್ಲಿ ಕೊಂಟಿನೆಂಟಲ್ ಎಡಿಸನ್ ಕಂಪನಿಯಲ್ಲಿ ಇಂಜಿನಿಯರ್ ಆಗಿ, ವಿದ್ಯುತಚ್ಛಕ್ತಿಯ ಸಾಧನಸಲಕರಣೆಗಲ್ಲಿ ಶಕ್ಯವಾದ ಸುಧಾರಣೆ ಮಾಡುವ ಕೆಲಸಕ್ಕೆ ಸೇರಿದರು. ಇಲ್ಲಿ ಕೂಡ ಟೇಸಲಾರವರು ಫಲೋತ್ಪಾದಕ ಕಾರ್ಯ ಮಾಡಿ ತೋರಿಸಿದರು.ಇದರ ಪರಿಣಾಮವಾಗಿ ಚಾರ್ಲ್ಸ್ ಬಾಚುಲರ್ ಯಾರಿಗೆ ನಿಕೋಲಾ ಟೇಸಲಾರವರು ವರದಿಕೊಡುತ್ತಿದ್ದರು, ಅವರು ಟೇಸಲಾರವರನ್ನು ನಿವ್ ಯಾರ್ಕ್, ಯುನಾಯಿಟೇಡ್ ಸ್ಟೇಸ್ಟ್ ಗೆ ಥೋಮಸ್ ಆಲ್ವಾ ಎಡಿಸನ್ ರನ್ನು ನೇರವಾಗಿ ಭೇಟಿ ಮಾಡಲು ಕಳುಹಿಸಿದರು. ’ನನಗೆ ಎರಡು ಸರ್ವೋತ್ತಮ ವ್ಯಕ್ತಿಗಳ ಪರಿಚಯವಿದೆ; ಅದರಲ್ಲಿ ಒಬ್ಬರು ನೀವು ಮತ್ತೊಬ್ಬ ಈ ತರುಣನು " ಎಂದು ಅವರನ್ನು ಕಳುಹಿಸಿದಾಗ ಬಾಚುಲರರು ಎಡಿಸನ್ ಗೆ ವಿಶೇಷ ಶಿಫಾರಸಿನ ಪತ್ರ ಬರೆದು ಕೊಟ್ಟರು. ಹೀಗೆ ೧೮೮೪ ರಲ್ಲಿ ಕೇವಲ ನಾಲ್ಕು ಸೆಂಟ್ಸ್ ನ್ನು ಜೇಬಿನಲ್ಲಿಟ್ಟು ಡಾ. ನಿಕೋಲಾ ಟೇಸಲಾರವರು ಯುನಾಯಿಟೇಡ್ ಸ್ಟೇಸ್ಟ್ ಆಫ್ ಅಮೇರಿಕಾದ ಭೂಮಿಯ ಮೇಲೆ ಕಾಲಿಟ್ಟರು. ಇದೇ ಭೂಮಿಯಲ್ಲಿ ಅವರು ೭೦೦ ಕ್ಕಿಂತ ಮೇಲೆ ಮೀರಿದ ಹೊಸ ದಾಖಲೆಗಳನ್ನು ಮುಂದಿನ ಅರವತ್ತು ವರ್ಷಗಳಲ್ಲಿ ತನ್ನ ಹೆಸರಿನಲ್ಲಿ ನಮೂದು ಮಾಡಿದರು.

ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ನನ್ನು ಪ್ರತ್ಯಕ್ಷದಲ್ಲಿ ಭೇಟಿಯಾಗಲು ಬಹಳ ಉತ್ತೇಜಿತರಾಗಿದ್ದರು ಯಾಕೆಂದರೆ ಅಷ್ಟರವರೆಗೆ ಟೇಸಲಾರವರು ಎಡಿಸನ್ ನನ್ನು ಪೂಜಿಸುತ್ತಿದ್ದರು. ಆದರೆ ತೀವ್ರದಲ್ಲಿಯೇ ಅದು ಹಾಗೆ ಆಗಲಿಕ್ಕಿಲ್ಲ...... (ಮುಂದುವರಿಯಲಿದೆ)

|| ಹರಿ ಓಂ || ಶ್ರೀರಾಮ || ಅಂಬಜ್ನ ||