Monday, 30 June 2014

ಆನ್ ಲಾಯಿನ್ ಬ್ಯಾಂಕಿಗ್ ಮೂಲಕ ಸ್ವೇಚ್ಛಾನಿಧಿ ಕೊಡುವ ಸೌಲಭ್ಯ ಎಲ್ಲರಿಗಾಗಿ ಮಾಡಲಾಗಿದೆ

ಕೆಲವು ದಿವಸದ ಮೊದಲು ಸದ್ಗುರು ಬಾಪೂರವರು ಎಲ್ಲಾ ಶ್ರದ್ಧಾವಾನರ ಹಿತಕ್ಕಾಗಿ ಮತ್ತು ಪವಿತ್ರ ಸ್ಪಂದನದ ಅಭಿಸರಣೆಗಾಗಿ ಆಳಂದಿಯಲ್ಲಿಯ ಮೊದಲ ’ಅನಿರುದ್ಧ ಧಾಮ್ ’ ಹಾಗು ಅದರ ರಚನೆಯ ಸಂಬಂಧದಲ್ಲಿ ಮಾಹಿತಿಯನ್ನು ಕೊಟ್ಟರು. ಅದರ ಜೊತೆ ಅಸಹಾಯ ವೃದ್ಧರಿಗಾಗಿ ಜುಯೀ ನಗರದಲ್ಲಿ ತಯಾರಿಸುತ್ತಿರುವ "ಇಂಸ್ಟಿಟ್ಯೂಟ್ ಆಫ್ ಜೆರಿಯಾಸ್ಟ್ರಿಕ್ಸ್ ಆಂಡ್ ರಿಸರ್ಚ್ ಸೆಂಟರ್" ನ ಕೆಲಸದ ಬಗ್ಗೆ ಮತ್ತು ಇವೆರೆಡರ ಪ್ರಕಲ್ಪದ ವ್ಯಾಪ್ತಿ, ಕಾರ್ಯ ಹಾಗು ಖರ್ಚಿನ ಬಗ್ಗೆಯೂ ಪ್ರವಚನದಲ್ಲಿ ಮಾಹಿತಿಯನ್ನು ಕೊಟ್ಟರು.


ರಾಮರಾಜ್ಯದ ಪ್ರವಚನದಲ್ಲಿ ವಿಸೃತ ಮಾಡಿದಂತೆ ಕಷ್ಟ ಪಡುವ ಹಾಗು ಬಡ ರೈತರ ಶ್ರೇಯಸ್ಸಿಗಾಗಿ ಕರ್ಜತ್ - ಕೋಠಿಂಬೆಯ ಹತ್ತಿರ ಗೋವಿದ್ಯಾಪೀಠಮ್ ದಲ್ಲಿ ನಡೆಯುತ್ತಿರುವ " ಅನಿರುದ್ಧಾಜ್ ಇಂಸ್ಟಿಟ್ಯೂಟ್ ಆಫ್ ಗ್ರಾಮ ವಿಕಾಸ " ದ ಪ್ರಕಲ್ಪ ಕೂಡ ಈಗ ಬಹಳ ವೇಗದಲ್ಲಿ ಕಾರ್ಯರತವಾಗಿದೆ. ಶ್ರದ್ಧಾವಾನರಿಂದ ಸಿಗುತ್ತಿರುವ ಬೆಂಬಲವನ್ನು ಲಕ್ಷ್ಯದಲ್ಲಿ ತೆಗೆದುಕೊಂಡು www.aniruddhafoundation.com ಈ ಸಾಯಿಟಿನಲ್ಲಿ ನಾವು ಎಲ್ಲಾ ಶ್ರದ್ಧಾವಾನರಿಗೆ ಸ್ವೇಚ್ಛಾನಿಧಿಯನ್ನು ಕೊಡಲು ಸುಲಭವಾಗಲೆಂದು ಮೊದಲಿದ್ದ ಕ್ರೆಡಿಟ್ ಕಾರ್ಡಿನ ಒಟ್ಟಿಗೆ ಈಗ ಇಂಟರ್ ನೆಟ್ ಬ್ಯಾಂಕಿಂಗಿನ ಪರ್ಯಾಯವನ್ನು ಸಹ ಮಾಡಿಕೊಡುತ್ತಿದ್ದೇವೆ.

ಇಂತಹ ಮಹತ್ವದ ಪ್ರಕಲ್ಪಕ್ಕಾಗಿ ಎಲ್ಲಾ ಇಚ್ಛುಕ ಶ್ರದ್ಧಾವಾನರು ’ಪೆಮೆಂಟ್ ಗೆಟ್ವೆ ’ ಯ ಉಪಯೋಗ ಮಾಡಿ ತಮ್ಮ ತಮ್ಮ ಕ್ಷಮತೆಯನುಸಾರವಾಗಿ ಸಂಸ್ಥೆಗೆ ಸ್ವೇಚ್ಛಾನಿಧಿಯ ಮೂಲ್ಯವನ್ನು ಕೊಡಬಹುದು. ಆನ್ ಲಾಯಿನ್ ಡೋನೇಶನ್ ನ ಸೌಕರ್ಯಕ್ಕಾಗಿ ಈ ಪ್ರಕಾರ ಪ್ರಕ್ರಿಯೆಗಳಿವೆ.

೧) ಶ್ರೀ ಅನಿರುದ್ಧ ಉಪಾಸನಾ ಫೌಂಡೇಶ್ ನಿನ www.aniruddhafoundation.com ಈ ವೆಬ್ ಸಾಯಿಟ್ ಮೇಲಿನ ‘Click here to Donate Online’ ಈ ಬಟನ್ ನನ್ನು ಕ್ಲಿಕ್ ಮಾಡಬೇಕು.

೨) ಆ ನಂತರ ನಮ್ಮ ಸ್ಕ್ರೀನ್ ಮೇಲೆ ಬರುವ ಫಾರ್ಮ್ ದಲ್ಲಿಯ ಮಾಹಿತಿನ್ನು ತುಂಬಿಸಿ ‘Donate Now’ ಈ ಬಟನ್ ಮೇಲೆ ಕ್ಲಿಕ್ ಮಾಡಿ ಮಾತ್ರ ಅದರ ಮೊದಲು ಫಾರ್ಮ್ ದಲ್ಲಿರುವ ’Name’, ’E-mail’, ’Mobile No.’ ಮತ್ತು ’Donation amount’ ಈ ಮಾಹಿತಿಯನ್ನು ತುಂಬಿಸಿ ಹಾಗು ಅದರ ಜೊತೆ ’Card Payment’ ಅಥವಾ ’Internet Banking’ ಈ ಎರಡು ಪರ್ಯಾಯದಲ್ಲಿಯ ಒಂದನ್ನು ಆಯ್ಕೆ ಮಾಡುವದು ಆವಶ್ಯಕವಿದೆ.

೩) ಮುಂದಿನ ಪ್ರಕ್ರಿಯೆಗಳು ಪೂರ್ಣವಾದ ಮೇಲೆ ಸಿಸ್ಟಮ್ ತಯಾರಿಸಿದ ರಶೀದಿಯು ನೀವು ಕೊಟ್ಟ ಈ-ಮೇಲ್ ಗೆ ಸಂಸ್ಥೆಯ ಮೂಲಕ ಕಳುಹಿಸಲಾಗುವದು. ಶ್ರದ್ಧಾವಾನರು ಈ "ಪೆಮೆಂಟ್ ಗೆಟ್ವೆ" ಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ  ತೆಗೆದುಕೊಂಡು ಹಾಗು ಈ ಪವಿತ್ರ ಕಾರ್ಯದಲ್ಲಿ ಆರ್ಥಿಕ ಸಹಾಯ ಮಾಡುವರೆಂದು ನನ್ನ ವಿಶ್ವಾಸವಿದೆ.

No comments:

Post a Comment