ಇವತ್ತಿನ ತರಾತುರಿಯ ಜೀವನದಲ್ಲಿ ಬೆಳಗಿನ ಅಲ್ಪೋಪಹಾರಕ್ಕಾಗಿ (ನಾಷ್ಟಾ) ಸಮಯ ಸಿಗುವುದಿಲ್ಲವೆಂದು ಅನೇಕ ಜನರು ಹೇಳುತ್ತಿರುವದನ್ನು ನಾವು ಕೇಳುತ್ತೇವೆ....ಮತ್ತು ಆ ಸಮಯದಲ್ಲಿ ಸಿಕ್ಕಿದ್ದನ್ನು ಹೆಚ್ಚಿನದಾಗಿ ಬ್ರೆಡ್ ನಮ್ಮ ಅಲ್ಪೋಪಹಾರದ ಅವಿಭಾಜ್ಯ ಭಾಗವಾಗುವದು. ’ಬ್ರೆಡ್ ನ ಹೊರತು ನಾಷ್ಟಾ’ ಈ ಸಂಕಲ್ಪನೆಯು ಹಲವರಿಗೆ ಒಪ್ಪುವದಿಲ್ಲ. ಹೀಗಿದ್ದರು ಕೂಡ ಅನೇಕರ ಮನೆಗಳಲ್ಲಿ ಇವತ್ತು ಸಹ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ.
ಆದರೆ ಬಾಪೂರವರ ನಾಷ್ಟಾ ಮಾತ್ರ ಸ್ಟಾಂಡರ್ಡ್ ಆಗಿದೆ. ಬಾಪೂ ತನ್ನ ನಾಷ್ಟಕ್ಕಾಗಿ ಆಂಬೀಲ ಅಥವಾ ಇಡ್ಲಿಯನ್ನು ತಿನ್ನುತ್ತಾರೆ, ಮತ್ತು ಇಡ್ಲಿ ಕೂಡ ಅಕ್ಕಿ ಮಾತ್ತು ಉದ್ದಿನಬೇಳೆಯ ಹಿಟ್ಟಿನ್ನದ್ದೇ ! ಹಲವು ಕಡೆಯಲ್ಲಿ ಇಡ್ಲಿಯನ್ನು ಕೇವಲ ಅಕ್ಕಿಯಿಂದಲೇ ಮಾಡುವ ಪದ್ಧತಿಯಿದೆ. ಆದರೆ ಈ ತರಹ ಮಾಡಿದ ಇಡ್ಲಿಯನ್ನು ಬಾಪೂ ಸಾಧ್ಯವಾದಲ್ಲಿ ತಿನ್ನುತ್ತಿಲ್ಲ. " ಆಂಬೀಲ " ಮಾತ್ರ ಬಾಪೂ ಬೆಳಗಿನ ನಾಷ್ಟಾದಲ್ಲಿ ಹೆಚ್ಚಾಗಿ ತಿನ್ನುತ್ತಾರೆ. ಇವತ್ತಿನ ತರುಣ ಸಂತಾನಕ್ಕೆ ಒಂದು ವೇಳೆ ಆಂಬೀಲದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ನಾನು ಯಾರೊಡನೆ ಮಾತನಾಡಿದೆ ಅವರು ಆಂಬೀಲವನ್ನು ಬಹಳ ವಿರಳವಾಗಿ ತಿಂದಿರುವದು ತಿಳಿದು ಬಂತು. ಅಕ್ಕಿಯಿಂದ ಮಾಡಿದ, ಮಾಡಲು ಸುಲಭವಾದ ಮತ್ತು ಕಡಿಮೆ ಖರ್ಚಿನಿಂದ ಮಾಡಿದ ಈ ಆಂಬೀಲವು ಶರೀರಕ್ಕಾಗಿ ಮಾತ್ರ ಅತ್ಯಂತ ಗುಣಕಾರಿಯಾಗಿದೆ.
ಇವತ್ತು ಬಾಪೂರವರ ಮಾರ್ಗದರ್ಶನನುಸಾರವಾಗಿ ನಾವು ನಾಷ್ಟಕ್ಕೆ ಆಂಬೀಲವನ್ನೇ ತೆಗೆದುಕೊಳ್ಳುತ್ತೇವೆ. ಚಿಕ್ಕ ಒಂದುವರೆ-ಎರಡು ಬಾವುಲ್ ತುಂಬಿಸಿ ಆಂಬೀಲವು ಒಬ್ಬ ಮನುಷ್ಯನಿಗೆ ಪರ್ಯಾಪ್ತವಾಗಿದೆ. ಆಂಬೀಲವನ್ನು ಅಲ್ಪೋಪಹಾರವಾಗಿ ತೆಗೆದುಕೊಂಡಾಗ ನಾವು ಅದರ ಜೊತೆ ಇನ್ನೇನಾದರು ಪದಾರ್ಥ ತೆಗೆದು ಕೊಳ್ಳುತ್ತಿದ್ದರೆ ಅದರ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಅತಿರಿಕ್ತ ಕ್ಯಾಲರೀಜ್ ಹೊಟ್ಟೆಗೆ ಹೋಗುವ ಪ್ರಶ್ನೆ ಬರಲಾರದು. ಆಂಬೀಲದಿಂದ ಹಸಿವು ತಣಿಯುವದು ಮತ್ತು ಹೊಟ್ಟೆಗಾಗಿ ಶಾಮಕವು ಆಗುವದು. ಇವತ್ತು ಎಲ್ಲರಿಗೂ ತಿಳಿಯಲೆಂದು ಪರಮಪೂಜ್ಯ ನಂದಾಯೀಯವರು ಮನೆಯಲ್ಲಿ ಮಾಡುತ್ತಿರುವ ಆ ಆಂಭೀಲದ ರೆಸಿಪಿಯನ್ನು ಕೆಳಗೆ ಕೊಡುತ್ತಿದ್ದೇನೆ.
ಸಾಹಿತ್ಯ -
ಪರಿಮಲ್ ಅಕ್ಕಿ - ೧ ವಾಟಿ
ಸಕ್ಕರೆ - ೧ ಚಮಚೆ
ಮೊಸರಿನ ಮಜ್ಜಿಗೆ - ೫ ವಾಟಿ
ನೀರು - ೭ ವಾಟಿ
ಉಪ್ಪು - ರುಚಿಗನುಸಾರ
ಮಾಡುವ ಕೃತಿ -
ಮೊಟ್ಟಮೊದಲು ೧ ವಾಟಿ ಪರಿಮಲ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಆ ನಂತರ ಆ ಅಕ್ಕಿಯನ್ನು ಮೂರು ಸಲ ನೀರಿನಿಂದ ತೊಳೆದು ತೆಗೆಯಿರಿ. ತೊಳೆದ ನಂತರ ಅದರಲ್ಲಿ ೭ ವಾಟಿ ನೀರು ತೆಗೆದುಕೊಳ್ಳಿ. ನಾವು ಅಕ್ಕಿಯನ್ನು ಅಳೆಯಲು ಯಾವ ವಾಟಿಯನ್ನು ತೆಗೆದುಕೊಂಡಿದ್ದೇವೆ ಅದೇ ವಾಟಿಯನ್ನು ನೀರಿಗಾಗಿ ಉಪಯೋಗಿಸಿರಿ. ಇದರಿಂದ ಪ್ರಮಾಣದಲ್ಲಿ ಅಂತರ ಬರುವುದಿಲ್ಲ. ನೀರನ್ನು ಹಾಕಿದ ಮೇಲೆ ಅಕ್ಕಿಯ ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಮೂರು ಶಿಟಿಯಾಗುವ ತನಕ ಬೇಯಿಸಬೇಕು.
ಅಕ್ಕಿ ಬೇಯಿದ ಮೇಲೆ ಅನ್ನದ ಪಾತ್ರೆಯನ್ನು ಕುಕ್ಕರಿನಿಂದ ಹೊರತೆಗೆದಿಡಬೇಕು. ನಾವು ಯಾವಾಗ ಅನ್ನದ ಪಾತ್ರೆಯನ್ನು ಹೊರಗೆ ತೆಗೆದಿಡಿತ್ತೇವೆ ಆಗ ಅದರಲ್ಲಿ ನೀರು ಇರುವದು. ಈಗ ಈ ಅನ್ನ ತಣ್ಣಗಾದಾಗ ಅದನ್ನು ಮಿಕ್ಸರಿನಲ್ಲಿ ೫ ಸೆಕೆಂದಿನ ತನಕ ಮಾತ್ರ ಸಣ್ಣ ಮಾಡಿ ತೆಗೆಯಬೇಕು. ಮಿಕ್ಸರಿನಿಂದ ಆ ಅನ್ನವನ್ನು ಪುನ: ಅದೇ ಪಾತ್ರೆಯಲ್ಲಿ ತೆಗೆಯಬೇಕು. ಈಗ ಅದರಲ್ಲಿ ೧ ಚಮಚೆ ಸಕ್ಕರೆ ಹಾಗು ರುಚಿಗೆ ಅನುಸಾರವಾಗಿ ಉಪ್ಪನ್ನು ಹಾಕಬೇಕು. ಸಕ್ಕರೆ ಮತ್ತು ಉಪ್ಪು ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಬೇಕು.
ನಂತರ ಹೀಗೆ ಮಿಕ್ಸ್ ಮಾಡಿದ ಅನ್ನದಲ್ಲಿ ೫ ವಾಟಿ ಮಜ್ಜಿಗೆಯನ್ನು ಹಾಕಬೇಕು. ಮಜ್ಜಿಗೆ ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಮಿಕ್ಸ್ ಮಾಡಿದ ಅನ್ನದ ರುಚಿಯನ್ನು ನೋಡಿಕೊಂಡು ಅಗತ್ಯವೆಣಿಸಿದಲ್ಲಿ ಇನ್ನು ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಆ ನಂತರ ಈ ಅನ್ನದ ಪಾತ್ರೆಯನ್ನು ಪೂರ್ಣ ರಾತ್ರೆ ಹಾಗೆಯೇ ಇಡಬೇಕು. ಫ್ರಿಜ್ಜಿನಲ್ಲಿ ಇಡಬಾರದು. ಆಂಬೀಲ ಸಿದ್ದವಾಗಲು ಸಾಧಾರಣ ೧೨-೧೪ ಗಂಟೆಯ ಕಾಲ ಬೇಕಾಗುತ್ತದೆ.
ಈ ತರಹ ಸಿದ್ಧವಾದ ಆಂಬೀಲವನ್ನು ನಾವು ಮರುದಿವಸ, ಅಂದರೆ ೧೪ ಗಂಟೆಯಾದ ಮೇಲೆ ತಿನ್ನಬಹುದು. ಅಂದರೆ ಸಾಯಂಕಾಲ ೮ ಗಂಟೆಗೆ ಮಾಡಿದ ಆಂಬೀಲವನ್ನು ನಾವು ಮರುದಿವಸ ಬೆಳಿಗ್ಗೆ ೧೦ ಗಂಟೆಗೆ ತಿನ್ನಬಹುದು.
|| ಹರಿ ಓಂ || ಶ್ರೀರಾಮ || ಅಂಬಜ್ನ ||
No comments:
Post a Comment