Saturday, 19 September 2020

ಹನುಮಾನಚಲೀಸಾ ಪಠಣ

 

ಹರಿ ಓಂ





ಎಲ್ಲ  ಶ್ರದ್ಧಾವಂತರ ಸಲುವಾಗಿ ಒಂದು ಆನಂದದ ಸುದ್ದಿ ಏನೆಂದರೆ,  ಪ್ರತಿವರ್ಷ ಶ್ರೀ ಅನಿರುದ್ಧ ಗುರುಕ್ಷೇತ್ರಮದಲ್ಲಿ ನಡೆಯಲಿರುವ ಹನುಮಾನಚಲೀಸಾ ಪಠಣ ಈ ವರ್ಷದ ಅಧಿಕ ಆಶ್ವಿನ ಮಾಸದಲ್ಲಿ  ಸೋಮವಾರ ದಿನಾಂಕ 21 ಸಪ್ಟೆಂಬರ 2020 ರಿಂದ ಭಾನುವಾರ ದಿನಾಂಕ 27 ಸಪ್ಟೆಂಬರ 2020  7 ದಿವಸಗಳಲ್ಲಿ ಸಂಪನ್ನವಾಗಲಿದೆ. ಮಾತ್ರ ಈ ವರ್ಷ  ಗುರುಕ್ಷೇತ್ರಮದಲ್ಲಿ ಪ್ರತ್ಯಕ್ಷವಾಗಿ ಪಠಣ ಮಾಡಲು ಬರದೇ ಇರುವ ತೊಂದರೆ ಗಮನಿಸಿ, ಕಳೆದ ಹಲವಾರು ವರ್ಷಗಳ ರೆಕಾರ್ಡಿಂಗನ ಉಪಯೋಗ ಮಾಡಿ, ಅನಿರುದ್ಧ ಟಿ.ವ್ಹಿ., ಫೇಸಬುಕ್ ಪೇಜ್, ಯು ಟ್ಯೂಬ ನ  ಮುಖಾಂತರ ಹಾಗೆಯೇ '' ಅನಿರುದ್ಧ ಭಜನ ಮ್ಯೂಜಿಕ್ ರೇಡಿಯೋ '' ಮೇಲಿಂದ ( ಆಡಿಯೋ ಸ್ವರೂಪದಲ್ಲಿ ) ಶ್ರದ್ಧಾವಂತರಿಗೆ ಈ ಪಠಣದ ಲಾಭವನ್ನು ಪಡೆಯುವ ವ್ಯವಸ್ಥೆ  ಮಾಡಲಾಗಿದೆ.

ಈ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ತಮ್ಮತಮ್ಮ ಮನೆಯಲ್ಲಿ ಕುಳಿತುಕೊಂಡು ಒಂದು ದಿವಸ  ಅಥವಾ ಅವನ ಇಚ್ಛೆ ಇದ್ದರೆ ಒಂದಕ್ಕಿಂತ ಹೆಚ್ಚು ದಿವಸ ಕೂಡಾ ಜಪಕನೆಂದು ಸಹಭಾಗಿ ಆಗಬಹುದು. ಮಾತ್ರ ಸಂಪ್ರದಾಯದಂತೆ ಪ್ರತಿಯೊಂದು ದಿವಸ ಈ ಪಠಣದಲ್ಲಿ '' A  ''  ಹಾಗು  '' B  ''  ಹೀಗೆ ಎರಡು ಬ್ಯಾಚುಗಳು ಇರುವದು ಹಾಗು  ಆ ದಿವಸದ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ಎರಡರಲ್ಲಿಯ ಒಂದೇ ಬ್ಯಾಚಿನಲ್ಲಿ ಹೆಸರನ್ನು ರಜಿಸ್ಟರ್ ಮಾಡಲು ಸಾಧ್ಯ.

ಪಠಣದವೇಳಾಪತ್ರಿಕೆ( ಸಮಯಸೂಚಿ)ಕೆಳಗಿನಂತೆಇರುವದು.

 

'' A '' ಬ್ಯಾಚು

'' B '' ಬ್ಯಾಚು

ಆವರ್ತನೆಗಳು

ಎರಡೂಬ್ಯಾಚುಗಳಲ್ಲಿಯಶ್ರದ್ಧಾವಂತರಿಗೆ ಒಂದೊಂದು ಗಂಟೆಯ ಆವರ್ತನೆ ಇರುವದು ಹಾಗು ಪೂರ್ಣ ದಿವಸದಲ್ಲಿ ಅವರಿಗೆ ಒಟ್ಟಿಗೆ ಆರು ಸಲ ಆವರ್ತನೆಗೆಕುಳಿತುಕೊಳ್ಳುವದಿದೆ. ''A''ಬ್ಯಾಚಿನ ಆವರ್ತನೆ ಆಗುತ್ತಿರುವಾಗ''B''ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು  ಮತ್ತುಅದರಂತೆಯೇ ''B  '' ಬ್ಯಾಚಿನ ಆವರ್ತನೆ ಆಗುತ್ತಿರುವಾಗ'' A   '' ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು.

 

ಬೆಳಿಗ್ಗೆ  8.00-8.15  ಎರಡೂ ಬ್ಯಾಚುಗಳು ಒಟ್ಟಿಗೆ

3

1

8.15 – 9.00

9.00 – 10.00

8 + 11

2

10.00 – 11.00

11.00 – 12.00

11 + 11

3

12.00 – 1.00

1.00 – 2.00

11 + 11

4

2.00 – 3.00

3.00 – 4.00

11 + 11

5

4.00 – 5.00

5.00 – 6.00

11 + 11

6

6.00 – 7.00

7.00 – 8.00

11 + 11

 

ಸಾಯಂಕಾಲ 8.00-8.15ಎರಡೂ ಬ್ಯಾಚುಗಳು ಒಟ್ಟಿಗೆ

3

 

 ಈ ಪಠಣದಲ್ಲಿ ಸಹಭಾಗಿಯಾಗಲು ಹೆಸರನ್ನು ರಜಿಸ್ಟ್ರೇಷನ್  ಮಾಡುವ ಸಲುವಾಗಿ ಶ್ರದ್ಧಾವಂತರು ಭಾನುವಾರ ದಿನಾಂಕ 13 ಸಪ್ಟೆಂಬರ್ 2020 ರಿಂದ ಕೆಳಗೆ ಕೊಟ್ಟಿರುವ ವೆಬ್ಸೈಟ್ (website) ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರನ್ನು ರಜಿಸ್ಟರ್ ಮಾಡಬಹುದು.

 

ಹೆಸರನ್ನು ರಜಿಸ್ಟರ್ ಮಾಡುವ ಸಲುವಾಗಿ  ವೆಬ್ಸೈಟ್ (website) ಲಿಂಕ್

https://pathan.aniruddha-devotionsentience.com

 

ಹಾಗೆಯೇ ಯಾವನೊಬ್ಬ ಶ್ರದ್ಧಾವಂತನಿಗೆ ಪೂರ್ಣ ದಿವಸ ಜಪಕನೆಂದು ಸಹಭಾಗಿಯಾಗಲು ಸಾಧ್ಯವಾಗದಿದ್ದರೆ, ಅವನು ಪಠಣದ ಈ ಏಳು ದಿವಸಗಳಲ್ಲಿ ದಿವಸದ ಯಾವದೇ ವೇಳೆಗೆ ತನ್ನ ಅನುಕೂಲದಂತೆ ಪಠಣದಲ್ಲಿ ಸಹಭಾಗಿಯಾಗಬಹುದು.

 

ಜಪಕರಿಗೆ ಊಟದ ಪಥ್ಯೆಯ ಅಥವಾ ಡ್ರೆಸ್ ಕೋಡಿನ ಯಾವದೇ  ಬಂಧನ ಇರುವದಿಲ್ಲ ಎಂಬುದನ್ನು ಎಲ್ಲ ಶ್ರದ್ಧಾವಂತರು ಗಮನದಲ್ಲಿಡಬೇಕು. ಆದರೆ ಮಾಂಸಾಹಾರ ಸೇವನೆ ಮಾಡದೇ ಇರುವದು ಶ್ರೇಯಸ್ಕರ.

 

ಅದಕ್ಕಾಗಿ ಸದ್ಗುರು ಅನಿರುದ್ಧರ ಕೃಪಾಶೀರ್ವಾದದಿಂದ ಲಭಿಸಿದ ಈ ಸುವರ್ಣ ಅವಕಾಶದ ಲಾಭವನ್ನು ಆದಷ್ಟು ಹೆಚ್ಚು ಶ್ರದ್ಧಾವಂತರು ಪಡೆಯಬೇಕು.

 

II ಹರಿ ಓಂII  IIಶ್ರೀರಾಮII  IIಅಂಬಜ್ಞII

IIನಾಥಸಂವಿಧ್II

 

- ಸಮೀರಸಿಂಹ ದತ್ತೋಪಾಧ್ಯೆ

ಶುಕ್ರವಾರ ದಿನಾಂಕ  11 ಸಪ್ಟೆಂಬರ್ 2020

 

 

Wednesday, 7 February 2018

ಅಮಲನೆರನಲ್ಲಿ ನಡೆದ ಶ್ರೀ ದತ್ತಜಯಂತಿ ಉತ್ಸವ - ಪ್ರಥಮ ದಿನ

ಸದ್ಗುರು ಶ್ರೀ ಅನಿರುದ್ಧರ ಸಂಕಲ್ಪನೆ ಅನುಸಾರ  ಪುಣ್ಯಕ್ಷೇತ್ರದ ನಿರ್ಮಾಣದ ಕಾರ್ಯ ಈ ವರ್ಷದ ಶ್ರೀ ದತ್ತ ಜಯಂತಿ ಉತ್ಸವದಿಂದ  ಆರಂಭವಾಗಲಿದೆ ಎಂದು ಎಲ್ಲ ಶ್ತದ್ಧಾವಾನರಿಗೆ ಗೊತ್ತಿದೆ. ಅದೇ ತರಹ ಶ್ರೀ ಸದ್ಗುರು ಪುಣ್ಯಕ್ಷೇತ್ರದ ನಿರ್ಮಾಣದ ಒಂದು ಭಾಗವೆಂದು ಬಾಪುರವರ ಹೇಳಿಕೆ ಪ್ರಕಾರ  ಈ ವರ್ಷದಿಂದ ಅಮಲನೆರನಲ್ಲಿ ಸಹ ಶ್ರೀ ದತ್ತ ಜಯಂತಿ ಉತ್ಸವ ಆಚರಿಸಲಾಗುವುದೆಂದು ಘೋಷಿಸಲಾಗಿತ್ತು. ಈ ವರ್ಷ ಮೊದಲನೆ ವರ್ಷ ಇದ್ದ ಕಾರಣ, ಶ್ರೀ ದತ್ತ ಜಯಂತಿ ಉತ್ಸವ ನಾಲ್ಕು ದಿವಸ ಆಚರಿಸಲಾಗಿದ್ದು, ಇವತ್ತು ಮೊದಲನೇ ದಿನ ಇತ್ತು.

ದಿನಾಂಕ ೨೯-೧೧-೨೦೧೭ರಂದು ಮುಂಬಯಿಂದ, ಪೂಜೆಯಲ್ಲಿ ಇರುವ ಶ್ರೀ ದತ್ತಪಂಚಾಯತನ ಫೋಟೋ ((೧)  ಶ್ರೀ ದತ್ತಾತ್ರೆಯ (೨) ಶ್ರೀಪಾದಶ್ರೀವಲ್ಲಭ (೩) ಶ್ರೀ ನರಸಿಂಹಸರಸ್ವಸತಿ (೪) ಶ್ರೀ ಅಕ್ಕಲಕೊಟ್ ಸ್ವಾಮಿ ಹಾಗೂ ( ೫) ಶ್ರೀ ಸಾಯಿನಾಥ ಇವರ ಫೋಟೋ ) ಹಾಗೂ ಶ್ರೀದತ್ತಾತ್ರೆಯ ಉದಿ ಕುಂಭ ಅಮಲನೆರಗೆ ಕೊಂಡುಹೋಗಲಾಯಿತು. ಈ ದತ್ತಾತ್ರೆಯ ಉದಿ ಕುಂಭದಲ್ಲಿ ಸದ್ಗುರು ಬಾಪುರವರು ಮಾಡಿಸಿ ಕೊಂಡಿರುವ ದತ್ತ ಉಪಾಸನ / ಸಾಯಿ ಗಾಯತ್ರಿ ಯಜ್ಞ ಹಾಗು ಇತರ ಮಹತ್ವದ ಉತ್ಸವ ಹಾಗೂ ಶ್ರೀ   ಗುರುಕ್ಷೇತ್ರಂದಲ್ಲಿ ನಡೆಯುತ್ತಿರುವ ಹವನ ಹಾಗೂ ಯಜ್ಞದ ಉದಿಯನ್ನು ಇಟ್ಟಿದಾರೆ.  ಇವತ್ತು ಉತ್ಸವದ ಸ್ಥಳದಲ್ಲಿ ಬೆಳ್ಳಿಗೆ ೯:೩೦ ಗಂಟೆಗೆ ಮುಖ್ಯ ಸ್ಟೇಜ ನಲ್ಲಿ ಫೋಟೋಗಳನ್ನು ಸ್ಥಾಪನೆ ಮಾಡಿ ನಿತ್ಯ ಪ್ರಾಥಮಿಕ   ಪೂಜನಾವಾಯಿತು. ಈ ಪೂಜನಾ ಆದ ಬಳಿಕ ಪರದೆ ಸರಿಸಲಾಯಿತು ನಂತರ ಉತ್ಸವದ ಸ್ಥಳದಲ್ಲಿ ಶ್ರದ್ಧಾವಾನರು ಬಹಳ ಜಲ್ಲೋಷದಿಂದ ಶ್ರೀ ದತ್ತಾತ್ರೆಯ ಉದಿ ಕುಂಭದ ಸ್ವಾಗತ ಮಾಡಿದರು.  ಶ್ರದ್ಧಾವಾನರು ' ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ  ದಿಗಂಬರಾ’ ಈ ಗಜರ್ ಹಾಡುತ್ತಾ  ಪಾಲಕಿಯಿಂದ ಶ್ರೀ ದತ್ತಾತ್ರೆಯ ಉದಿ ಕುಂಭವನ್ನು ಸ್ಟೇಜಗೆ ತಂದರು. ಮಹಾಧರ್ಮವರ್ಮನ್ ಯೋಗಿಂದ್ರರಸಿಂಹ ಉದಿ ಕುಂಭ ಸ್ಥಾಪನೆ ಮಾಡಿ ಕುಂಭದ ಮೇಲೆ ಸ್ವೇತ ಪುಷ್ಪ ಹಾಗೂ ಸ್ವೇತ ಪುಷ್ಪದ ಹಾರವನ್ನು ಅರ್ಪಣೆ ಮಾಡಿದರು. ಸ್ಥಾಪನೆ ಆದ ನಂತರ ಮಹಧರ್ಮವರ್ಮನ್ ಎಲ್ಲಾ ಉಪಸ್ಥಿತ ಶ್ರದ್ಧಾವನರಿಗೆ ಉದಿ ಕುಂಭದ ಮಾಹಿತಿಯನ್ನು ಕೊಟ್ಟರು. ನಂತರ ಪೂಜಕರ ಪರವಾಗಿ ಉತ್ಸವದ ಪ್ರಥಮ ದಿವಸದ ಪೂಜನೆ ಆಚರಣೆ ಆಯಿತು. ಇವತ್ತಿನ ಪೂಜನದಲ್ಲಿ  ಶ್ರೀ ಗಣಪತಿ ಆಥರ್ವಶೀರ್ಷದ ೨೧ ಸಲ ಪಠಣ  ಆದಮೇಲೆ ನೈವೇದ್ಯ ಅರ್ಪಣ ಮಾಡಲಾಯಿತು. ಪಠಣದ ನಂತರ ಮಹಧರ್ಮವರ್ಮನ್ ಉಪಾಸನೆ ಮಾಡಿ ಇವತ್ತಿನ ಪೂಜೆಯನ್ನು ಸಂಪನ್ನಗೊಳಿಸಿದರು. ಪೂಜೆಯ ನಂತರ ಪ್ರತಿಯೊಬ್ಬ ಶ್ರದ್ಧಾವಾನರಿಗೆ ದುರ್ವ ಅರ್ಪಣೆ ಮಾಡುವ ಅವಕಾಶ ದೊರೆಯಿತು. ಉತ್ಸವ ಸ್ಥಳದಲ್ಲಿ ಶ್ರದ್ಧಾವಾನರಿಗೆ ಸಾಯಂಕಾಲದ ಸಮಯದಲ್ಲಿ ಒಂದು ತಾಸು, ಮುಂಬಯಿಯಲ್ಲಿಯ ಆದೀವೇಶನದ  ಸಿ.ಡಿ ಯಿಂದ ಕೆಲವು ಗಜರ್ ಹಾಗೂ ಅಭಂಗ ತೋರಿಸಲಾಯಿತು. ಇವತ್ತಿನ ಪೂಜನೆಯ ಕೆಲವು ಛಾಯಾಚಿತ್ರಗಳನ್ನು ನೀಡಲಾಗಿದೆ.
श्री अनिरुद्ध गुरुक्षेत्रम[













Friday, 5 June 2015

ಹಲವಾರು ನಿರ್ಮಾಣಗಳ ಜನಕ (ಫಾದರ್ ಅಫ್ ಮೆನಿ ಇನ್ವೆಂಶನ್ಸ್)

ನಿಜವಾದ ಶ್ರ‍ೇಷ್ಠ ಜನರು ಯಾವಾಗಲೂ ಉದಾರ ಮನಸ್ಸಿನವರಾಗಿದ್ದು, ಇತರರ ಮಾತುಗಳನ್ನು ಕಿವಿಕೊಟ್ಟು ಕೇಳುವವರು ಮತ್ತು ತೆರೆದ ಕಣ್ಣುಗಳಿಂದ ನೋಡುವವರಾಗಿರುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಷಯ. ಡಾ. ನಿಕೋಲಾ ಟೇಸಲಾರವರು ಕೂಡ ಮನಸ್ಸಿನಲ್ಲಿ ಯಾವ ಪ್ರಕಾರದ ಸ್ಥಿರವಾದ ಊಹನೆಯನ್ನು ಮಾಡದೆ ಎಲ್ಲಾ ವಸ್ತುಗಳನ್ನು ವೀಕ್ಷಿಸುವ ಅದ್ಭುತವಾದ ಗುಣಧರ್ಮವನ್ನು ಪಡೆದಿದ್ದರು. ಡಾ. ಟೇಸಲಾರವರು ಯಾವುದೇ ಅಸಾಧಾರಣ ಅಥವಾ ಅವರ ಸ್ವಂತದ ಶೋಧನೆಗಳನ್ನು ಕೂಡ ಅಸಂಖ್ಯಾತ ಅಭಿಪ್ರಾಯ ಮತ್ತು ದೃಷ್ಟಿಕೋನಗಳಿಂದ ನೋಡುತ್ತಿದ್ದರು. ಇದು ಅವರನ್ನು ಯಾವಾಗಲೂ ನಿರ್ದಿಷ್ಟ ವಸ್ತುವಿನ ಉಪಯೋಗವನ್ನು ವಿವಿಧ ಬಗೆಯಲ್ಲಿ ಮಾಡುವ ಕಡೆ ಒಯ್ಯುತಿತ್ತು ಮತ್ತು ಅದರ ಅಚ್ಚು ಅವರ ಪ್ರತಿಯೊಂದು ನಿರ್ಮಾಣದಲ್ಲಿ ಕಾಣುತ್ತಿತ್ತು. ಇತರರಿಂದ ಯೋಚಿಸಲು ಅಸಾಧ್ಯವಾದ ಅವರ ವಿಚಾರಗಳು ಅವರನ್ನು ’ಜುಗಾಡ್’ (ತನ್ನ ಜಾಣತನದಿಂದ ಯಾವುದೇ ಸಮಸ್ಯೆಗಳಿಗೆ ಅಲ್ಪ ಖರ್ಚಿನ ಸಮಾಧಾನ ಕೊಡುವದು) ನಲ್ಲಿ ನೈಪುಣ್ಯತೆಯನ್ನು ಕೊಟ್ಟಿತು. ಇಂದಿನ ಕಾಲದಲ್ಲಿ ಅದನ್ನು" ಹೊಸ ಸಹಸ್ರ ವರ್ಷ ಕಾಲದ ಯಂತ್ರ ಕೌಶಲ್ಯ" ("ದ ಸ್ತ್ರಾಟೇಜಿ ಆಫ್ ದ ನಿವ್ ಮಿಲ್ಲೇನಿಯಮ್") ಎಂದು ಪರಿಗಣಿಸಲಾಗುತ್ತದೆ. ಮತ್ತು ವಾಸ್ತವದಲ್ಲಿ ಸಂಪೂರ್ಣ ಭೂಮಂಡಲದ ಬಹಳ ವೇಗದಿಂದ ಬರಿದಾಗುತ್ತಿರುವ ನೈಸರ್ಗಿಕ ಸಾಧನೆಗಳ ಸಂರಕ್ಷಕ ಎಂದು ತಿಳಿಯಲಾಗುತ್ತಿದೆ. ಇಂತಹ ಕೌಶಲ್ಯವು ಕ್ಷುಲ್ಲಕದಿಂದ ಹೆಚ್ಚಿನದನ್ನು ಪಡೆಯುವ ಕಲ್ಪನೆಯಿಂದ ಆವರಿಸಿರುತ್ತದೆ.

ಮ್ಯಾಡಿಸನ್ ಸ್ಕ್ವೆರ್ ಎಲೆಕ್ಟ್ರಿಕಲ್ ನ ಪ್ರದರ್ಷನೆಯಲ್ಲಿ ಕೂಡ ಡಾ. ನಿಕೋಲಾ ಟೇಸಲಾರವರು ಒಂದು, ನೀರಿನ ಮೇಲೆ ರಿಮೋಟಿನ ಮೂಲಕ ನಿಯಂತ್ರಿತ ಹಾಗು ಇನ್ನೊಂದರಲ್ಲಿ ಬಚ್ಚಿಟ್ಟ ಎಂಟಿನಾವಿಟ್ಟು ಅದನ್ನು ನೀರಿನ ಕೆಳಗಿಂದ ನಿಯಂತ್ರಣ ಮಾಡುತ್ತಿರುವ ಎರಡು ಹಡಗುಗಳನ್ನು ಕಟ್ಟಿರುವ ಮಾತು ಬಹಳ ಕಡಿಮೆ ಜನರಿಗೆ ಗೊತ್ತಿತ್ತು. ವಾಸ್ತವದಲ್ಲಿ ಡಾ. ಟೇಸಲಾರವರು ನಿಜವಾಗಿಯೂ ಭೂಮಂಡಲದ ಮೊಟ್ಟ ಮೊದಲನೇಯ ನೀರಿನ ಅಡಿಯಿಂದ ’ತಂತಿರಹಿತವಾಗಿ ಚಲಾಯಿಸುವ ಸಬ್ ಮರೀನ್ ’ ನನ್ನು ತಯಾರಿಸಿದರೆಂದು ವಾಚಕರಿಗೆ ತಿಳಿಯಲೆಂದು ಯಾರಿಗೂ ತಿಳಿಯಲಾರದ ಅನುಮಾನಗಳನ್ನು ಹೇಳಿ ತೋರಿಸಿಕೊಡಲಾಗುತ್ತಿದೆ. ಆದರೆ ಅವರ ವಾಡಿಕೆಯಂತೆ ಮತ್ತು ಅವರು ತನ್ನ ಸಂಶೋಧನೆಗಳನ್ನು ಅನೇಕ ಪ್ರಕಾರಗಳ ಪದ್ಧತಿಯಲ್ಲಿ ಊಹಿಸುವ ಅವರ ಸ್ವಭಾವದ ಕಾರಣದಿಂದಾಗಿ ಡಾ. ಟೇಸಲಾರವರು ಅಲ್ಲಿಯೇ ನಿಲ್ಲಲಿಲ್ಲ. ಡಾ. ಟೇಸಲಾರವರ ಮನಸ್ಸಿನಲ್ಲಿ ನಿಜವಾಗಿಯೂ ಏನಿತ್ತೆಂದು ಅದನ್ನು ಅವರು ಪರ್ಡ್ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಬಿ.ಎಫ್.ಮೈಸ್ನೇರ್ ಅವರಿಗೆ ಬರೆದ ಪತ್ರದಿಂದ ಸ್ಪಷ್ಟವಾಗುತ್ತದೆ.

ಅವರ ಪತ್ರದಲ್ಲಿ ಡಾ. ಟೇಸಲಾ ಬರೆದಿದ್ದರು. "ನಾನು ಪೂರ್ಣ ಕಾರ್ಯಕ್ಷೇತ್ರವನ್ನು ಉದಾತ್ತನಾಗಿ ನಡೆಸಿಕೊಂಡೆ, ದೂರದಿಂದ ನಿಯಂತ್ರಣ ಮಾಡುವ ಯಾಂತ್ರಿಕಕೌಶಲ್ಯಕ್ಕೆ ನನ್ನನ್ನು ಸೀಮಿತನಾಗಿಡದೆ ಬುದ್ಧಿಶಕ್ತಿ ಪಡೆದ ಯಂತ್ರಗಳ ತನಕ ಹೋದೆ. ಅಂದಿನಿಂದ ನಾನು ಲೋಕವಿಕಾಸದ ಸಂಶೋಧನೆಗಳಲ್ಲಿ ಮುಂದುವರಿದೆ ಮತ್ತು ಬಾಹ್ಯದಿಂದ ಹಟತ್ತಾಗಿ ನಿಯಂತ್ರಿತವಾಗದ ಹಾಗು ಕಾರಣವಿದ್ದಾಗ ಕಾರ್ಯ ಮಾಡುವ ಆಟೋಮೇಟನ್ (ಸ್ವಂಯಚಲಿತ ಯಂತ್ರ) ನನ್ನು ತಯಾರಿಸಿ ತೋರಿಸಲು ಹೆಚ್ಚು ಸಮಯ ದೂರದವಿಲ್ಲವೆಂದು ನನಗೆಣಿಸುತ್ತದೆ. ಇಂತಹ ಮಹತ್ಕಾರ್ಯಕ್ಕಾಗಿ ವ್ಯವಹಾರಿಕ ಸಾಧ್ಯತೆಗಳು ಏನೇ ಇರಲಿ, ಇದು ಮಾತ್ರ ಯಂತ್ರಶಾಸ್ತ್ರಗಳ ಯುಗಾರಂಭವಾಗಿದೆ. ಡಾ. ನಿಕೋಲಾ ಟೇಸಲಾರವರ ಉದ್ಗಾರಗಳು ಸ್ವಂಯಮ್ ಸ್ಪಷ್ಟೀಕರಣಾತ್ಮಕವಾಗಿದೆ.  ಇಲ್ಲಿ ಡಾ. ಟೇಸಲಾರವರು ಆಟೋಮೇಟನ್ ನನ್ನು ಇದ್ದ ಹಾಗೆಯೇ ಇಟ್ಟಲ್ಲಿ ಅದಕ್ಕೆ ವಹಿಸಿ ಕೊಟ್ಟ ಕಾರ್ಯವನ್ನು ಸ್ವತಶ್ಚಲಿಸಿ ತನ್ನದೇ ರೀತಿಯಲ್ಲಿ ಮುಂದರಿಯುವ ಆಟೋಮೇಟನ್ ನನ್ನು ವಿಕಾಸಗೊಳಿಸಬಹುದೆಂದು ತಿಳಿಸುತ್ತಾರೆ. ಈ ಆಟೋಮೇಟನ್ ತನ್ನದೇ ಬುದ್ಧಿಶಕ್ತಿ ಮತ್ತು ಉಚಿತ ಸಾಮರ್ಥ್ಯದ್ದಾಗಿರುವದು. ಇವತ್ತಿಗೆ ಡಾ. ನಿಕೋಲಾ ಟೇಸಲಾರವರ ಈ ವಕ್ತವ್ಯಕ್ಕೆ ೧೧೬ ವರ್ಷಗಳಾಗಿವೆ ಆದರೆ ನಾವು ಕೇವಲ ಕೆಲವೇ ವರ್ಷಗಳ ಮೊದಲು ನಿಜವಾಗಿ ಇದನ್ನು ಅರ್ಥ ಮಾಡತೊಡಗಿದೆವು. ಡಾ. ಟೇಸಲಾರವರ ಟೆಕ್ನೋಲಾಜಿಯ ಮೇಲೆ ಕೆಲಸ ಮಾಡುತ್ತಿರುವ ವೈಜ್ನಾನಿಕರು ಮತ್ತು ಸಂಶೋಧಕರು ಡಾ. ಟೇಸಲಾರವರ ಮಾರ್ಗದರ್ಶಕ ಉಕ್ತಿಗಳು ಅಂದರೆ ವಾಸ್ತವ್ಯದಲ್ಲಿ  ಯಾವುದರಲ್ಲಿ ಕೃತ್ರಿಮ ಬುದ್ಧಿ ಮತ್ತು ವಿಜ್ನಾನಕ್ಕೆ ಸಂಬಂಧದ ಉಪಯೋಗಗಳ ಸಮಾವೇಷವಾಗಿದೆ ಅಂತಹ ಹ್ಯುಮನಾಯಿಡ್ ರೊಬೋಟ್ ಬಗ್ಗೆ ಹೇಳಿದರೆಂದು ಸಿದ್ಧಮಾಡಿದರು. ಇದೊಂದು ದಿಗಂತದದಾಚೆ ನೋಡಿದ ಮುಂದಾಲೋಚನೆಯ ಇನ್ನೊಂದು ಬಹಳ ಉಚ್ಚ ದೃಷ್ಟಾಂತದ ಉದಾಹರಣೆಯಾಗಿದೆ.

ಡಾ. ನಿಕೋಲಾ ಟೇಸಲಾ ಅವರು ಸ್ವಪ್ನಿಸಿದ ಟೆಲೆ-ಆಟೋಮೇಟನ್ ನನ್ನು ತಯಾರಿಸುವಾಗ ಲೊಜಿಕ್ ಗೇಟ್ ನ ಕಲ್ಪನೆಯನ್ನು ಉಪಯೋಗಿಸುವ ಬಗ್ಗೆ ನಾವು ನಮ್ಮ ಹಿಂದಿನ ಕೆಲವು ಲೇಖನಗಳಲ್ಲಿ ಓದಿರುವೆವು. ಅದಲ್ಲದೆ ಡಾ. ಟೇಸಲಾರವರ ಕೆಲವು ಪೇಟೆಂಟ್ಸಗಳು ಲೊಜಿಕಲ್ ಮತ್ತು ಸರ್ಕೀಟಿನ ಮೂಲಧಾತುಗಳ ಮೇಲೆ ಆಧಾರಿತವಾಗಿದ್ದವು. ಇದರ ಪ್ರತಿಕೂಲವಾಗಿ ಬಹಳ ಖೇದದ ಮಾತೆಂದರೆ ಡಾ. ಟೇಸಲಾರವರ ಟೆಲೆ-ಆಟೋಮೇಟನ್ ನ ಕೆಲಸದ ಪ್ರದರ್ಶನೆಯನ್ನು ಮಾಡಿದ ಅವರಿಗೆ ೫೦ ವರ್ಷಗಳ ನಂತರ  ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಾಯಿಜ್ ಕೇವಲ ಮನೆಯ ಟ್ರಾಂಸ್ ಸಿಸ್ಟರ್ ಅಂದರೆ ಲೊಜಿಕ್ ಗೇಟ್ಸ್ ನ ಮೂಲದ ಮೇಲೆ ಮಾಡಿದ ಸಲಕರಣೆಗಳನ್ನು ಡಾ. ಟೇಸಲಾರವರು ತಯಾರಿಸಿದಕ್ಕೆ ಕೊಡಲಾಯಿತು. ಇದರಿಂದ ಸ್ಪಷ್ಟವಾಗುತ್ತದೆ ಅಂದರೆ ಡಾ. ನಿಕೋಲಾರವರ ಸಂಶೋಧನೆಗಳನ್ನು ಸಂಪೂರ್ಣವಾಗಿ ದುರ್ಲಕ್ಷಿಸಲಾಗಿತ್ತು ಮತ್ತು ಜನರನ್ನು ದಿಗ್ಬ್ರಮೆ ಮಾಡಲಾಗಿತ್ತು. ಇಲ್ಲಿ ನಾವು ಗಮನಿಸಬೇಕಿದೆ ಅಂದರೆ ಲೊಜಿಕ್ ಗೇಟ್ ಇಂದಿನ ಆಧುನಿಕ ಕಂಪ್ಯೂಟರಿನ ಮೂಲಾಧಾರ ಮಾತ್ರವಲ್ಲದೆ ಅದು ರಿಮೋಟ್ ಕಂಟ್ರೋಲ್ ಟೆಕ್ನೋಲೊಜಿ, ರೊಬೋಟಿಕ್ಸ್, ವಾಯರ್ ಲೆಸ್ ಟೆಕ್ನೋಲೊಜಿ ಹಾಗೆಯೇ ರೇಡಿಯೋ ಇಂಡಸ್ಟ್ರಿಯ ಕೂಡ ಮೂಲಾಧಾರವಾಗಿದೆ. ಆದ್ದರಿಂದ ಅವಶ್ಯವಾಗಿ ಡಾ. ನಿಕೋಲಾ ಟೇಸಲಾರವರು ವಿಜ್ನಾನ ಮತ್ತು ಟೆಕ್ನೋಲೊಜಿ ಮತ್ತು ಅದರಿಂದ ವಿಕಾಸಗೊಳುವ ಉದ್ಯೋಗಗಳ ವಿಭಾಗಳಿಗೆ ನಿಜವಾದ ಪ್ರೇರಕರು.


ಡಾ. ನಿಕೋಲಾ ಟೇಸಲಾರವರ ಈ ನಿರ್ಮಿತಿಯ ಜೊತೆ ಇನ್ನೊಂದು ಸಂಶೋಧನೆಯು ಸಂಭವಿಸಿದೆ. ಇದರ ವೈಶಿಷ್ಠ್ಯವೆಂದರೆ ಇದನ್ನು "ಶ್ಯಾಡೋಗ್ರಾಫ್ಸ್" ಎಂದು ಕರೆಯಲಾಗಿ ಜೀವಾಣುಗಳಿಗಾಗುವ ಪರಿಣಾಮಗಳ ಬಗ್ಗೆ ಅಭ್ಯಾಸ ಮಾಡಿದರು. ಹಾಯ್ ಫ್ರಿಕ್ವೆನ್ಸಿ ಎಲೆಟ್ರಿಕಲ್ ಕರಂಟ್ಸ್ ಮೇಲೆ ಕೆಲಸ ಮಾಡುವಾಗ ಡಾ. ಟೇಸಲಾರವರು ಅವರ ಪ್ರಯೋಗಶಾಲೆಯಲ್ಲಿಟ್ಟ ಅವರ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳಿಗೆ ಬಹಳ ಗೂಢವಾದ ಹಾನಿಯಾದದ್ದನ್ನು ಗಮನಿಸಿದರು. ಇದು ಡಾ. ಟೇಸಲಾರವರಲ್ಲಿದ್ದ ಜಿಜ್ನಾಸೆಯನ್ನು ಹೆಚ್ಚಿಸಿ ಮುಂದೆ ಅವರು ಅದರ ಪರಿಣಾಮಗಳ ಪರೀಕ್ಷಣೆಯನ್ನು ಮಾಡಲೆಂದು ವಿವಿಧ ರೀತಿಯಲ್ಲಿ ಪ್ರಯೋಗಗಳನ್ನು ಮಾಡಿದರು. ಈ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಪ್ರಯೋಗ ಮಾಡುವಾಗ ಅವರು ಬಹಳ ವಿಲಕ್ಷಣ ನಮೂನೆಯನ್ನು ಗಮನಿಸಿದರು ಮತ್ತು ಅದನ್ನು ಅವರು "ಶ್ಯಾಡೋಗ್ರಾಫ್ಸ್" ಎಂದು ಕರೆದರು. ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಪ್ರಯೋಗ ಮಾಡಲೆಂದು ಡಾ. ನಿಕೋಲಾ ಟೇಸಲಾರವರು ವ್ಯಾಕ್ಯುಮ್ ಟ್ಯೂಬಿನ ನಿರ್ಮಾಣ ಮಾಡಿದರು.  ಈ ಪ್ರಯೋಗಗಳಲ್ಲಿ ಡಾ. ಟೇಸಲಾರವರೇ ತಯಾರಿಸಿದ "ಟೇಸಲಾ ಕಾಯಿಲ್" ಎಂದು ಕರೆಯಲ್ಪಡುವ ಕಾಯಿಲನ್ನು ವ್ಯಾಕ್ಯುಮ್ ಟ್ಯೂಬ್ ನ್ನು ನಡೆಸಲು ಉಪಯೋಗಿಸಲಾಯಿತು. ಮುಂದೆ ಈ ಪ್ರಯೋಗಗಳನ್ನು ಪ್ರತ್ಯಕ್ಷವಾಗಿ ಮಾಡುತ್ತಿರುವಾಗ ಬಹಳ ಸೂಕ್ಷ್ಮ ಕಣಗಳಿಂದ ತಯಾರಾಗುವ ಕಿರಣಗಳನ್ನು ಡಾ. ಟೇಸಲಾರವರು ಗಮನಿಸಿದರು ಮತ್ತು ಈ ಕಿರಣಗಳು ಮಾನವನ ಶರೀರದ ಒಳಗೋಗಿ ಬರುವ ಕ್ಷಮತೆ ಪಡೆದಿದ್ದವು ಆದರೆ ಅವುಗಳಿಗೆ ಮನುಷ್ಯನ ಶರೀರದ ಎಲಬುಗಳು ಅಡ್ಡ ಬರುತ್ತಿರುವ ಕಾರಣದಿಂದ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ಅದರ ಪ್ರತಿಬಿಂಬಗಳು (ಇಮ್ಯಾಜೆಸ್) ತಯಾರಾಗುತ್ತಿದ್ದವು.

ಇದರ ನಂತರ ಅವರ ಪ್ರಯೋಗಗಳ ಪರೀಕ್ಷಣೆಯ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರು ವ್ಯಾಕುಮ್ ಟ್ಯೂಬಿನ ಸಹಾಯದಿಂದ ಅವರ ಮಿತ್ರರಾದ ಮಾರ್ಕ್ ಟ್ವಾಯಿನ್ ರವರ ( ಅಮೇರಿಕೆಯ ಪ್ರಸಿದ್ಧ ಲೇಖಕ ಹಾಗು ಹಾಸ್ಯಗಾರ) ಇಮ್ಯಾಜೆಸ್ ತೆಗೆಯಲು ಹೋದಾಗ ಶ್ಯಾಡೋಗ್ರಾಫ್ ಇಮ್ಯಾಜೆಸ್ ನ್ನು ತಯಾರಿಸಿದರು. ಆಶ್ಚರ್ಯಕರವೆಂದರೆ ಟ್ವಾಯಿನ್ ರವರ ಆಕೃತಿಯ ಪ್ರತಿಬಿಂಬವನ್ನು ತೋರಿಸುವ ಬದಲು ಅದೇ ಕೋಣೆಯಲ್ಲಿ ಫೋಟೋಗ್ರಾಫಿಕ್ ಪ್ಲೇಟಿನ ಹತ್ತಿರ ಕ್ಯಾಮೆರದ ಲೆಂಸನ್ನು ಸರಿಮಾಡಲು ಇಟ್ಟಿದ್ದ ಸ್ಕ್ರೂವನ್ನು ತೋರಿಸಿತು. ಇದರಿಂದಾಗಿ ಅಲ್ಲದೇ ಹಾಗೆಯೇ ಅದರಲ್ಲಿ ಅವರು ಮುಂದೆ ಮಾಡಿದ ಪ್ರಯೋಗಗಳಿಂದಾಗಿ ನಿಜವಾಗಿಯೂ ಮಾನವನ ಶರೀರದೊಳಗಿನ ಶ್ಯಾಡೋಗ್ರಾಫ್ ಇಮ್ಯಾಜೆಸ್ ಗಳನ್ನು ಪಡೆಯುವುದರಲ್ಲಿ ಡಾ. ಟೇಸಲಾರವರು ಯಶಸ್ವಿಯಾದರು. ಹಲವಾರು ವರ್ಷಗಳ ನಂತರ ಭೌತವಿಜ್ನಾನಿಗಳು ಈ ಕಣಗಳನ್ನು ಫೋಟೋನ್ಸ್ ಮತ್ತು ಗೂಢವಾದ ಕಿರಣಗಳನ್ನು ಎಕ್ಸ್ ರೇ ಎಂದು ವರ್ಣಿಸಿದರು. ಡಾ. ಟೇಸಲಾರವರ ಕ್ಷ-ಕಿರಣಗಳ (ಎಕ್ಸ್ ರೇಜ್ಸ್)  ಶೋಧನೆಗಳಿಗೆ ಮಾಡಿದ ಸಮರ್ಪಣೆಯನ್ನು ಜನಸಾಮಾನ್ಯರಿಗೆ ಮತ್ತು ವೈಜ್ನಾನಿಕ ಸಮಾಜಕ್ಕೆ ತಿಳಿಯದಿರಲು ಕಾರಣಗಳೆಂದರೆ  ನಿವ್ ಯಾರ್ಕಿನ ಅವರ ಪ್ರಯೋಗಶಾಲೆಗೆ ಹಚ್ಚಿದ ಬೆಂಕಿಯೇ ಮುಖ್ಯ ಕಾರಣವಾಗಿತ್ತು. ೧೮೯೫ರ ಮಾರ್ಚ್ ೧೩ ರಂದು ಹಚ್ಚಿದ ಬೆಂಕಿಯಲ್ಲಿ ಅವರು ಮಾಡಿದ ಎಲ್ಲಾ ಕೆಲಸಗಳನ್ನು ಕಳೆದುಕೊಂಡರು. ೧೮೯೫ ನವೆಂಬರ್ ೮ ರಂದು ಈ ಘಟನೆಯ ಕೆಲವೇ ತಿಂಗಳಿನ ಒಳಗೆ ವಿಲ್ಹೆಲ್ಮ್ ಕೊನ್ ರಾಡ್ ರೊಂಟ್ಜೆನ್ ಎಂಬ ವೈಜ್ನಾನಿಕನು ಅವರ ಕ್ಷ-ಕಿರಣಗಳ ಶೋಧನೆಯನ್ನು ಪ್ರಕಾಶನೆ ಮಾಡಿದರು ಮತ್ತು ನಂತರ ಈ ಶೋಧನೆಗಾಗಿ ಭೌತಶಾಸ್ತ್ರದ ನೋಬೆಲ್ ಪ್ರಾಯಿಜ್ ನ್ನು ಪಡೆದರು. ಅವರ ಪ್ರಯೋಗಶಾಲೆಯು ಸುಟ್ಟಿ ಮತ್ತು ಅವರು ಮಾಡಿದ ಎಲ್ಲಾ ಕೆಲಸಗಳನ್ನು ಕಳೆದುಕೊಂಡರು ಕೂಡ ಡಾ. ಟೇಸಲಾರವರು ಅವರ ಕ್ಷ-ಕಿರಣದ ಶೋಧನೆಗೆ ರೊಂಟ್ಜೆನ್ ಯವರಿಗೆ ಪೂರ್ಣ ಗಣ್ಯತೆ ಕೊಟ್ಟರು. ಅದಲ್ಲದೆ ಡಾ. ಟೇಸಲಾರವರು ಅವರ ಫೋಟೋಗ್ರಾಫಿಕ್ ಪ್ಲೇಟ್ಸ್ ಗಳ ಮೇಲೆ ತೆಗೆದ ಇಮ್ಯಾಜೆಸ್ ಗಳನ್ನು ರೋಂಟ್ಜೆನ್ ರವರಿಗೆ ಕಳುಹಿಸಿದರು. ಅದನ್ನು ಸ್ತುತಿಸುವಾಗ ರೊಂಟ್ಜೆನ್ ರವರು ಇಂತಹ ಆಧುನಿಕ ಇಮ್ಯಾಜೆಸ್ ಗಳನ್ನು ಕಳುಹಿಸಿದಕ್ಕಾಗಿ ವಿನಯಶೀಲತೆಯಿಂದ ಡಾ. ಟೇಸಲಾರವರಿಗೆ ಧನ್ಯವಾದ ಹೇಳಿದರು. ನಿಜವಾಗಿಯೂ ಇಂತಹ ನಿಸ್ವಾರ್ಥ ನಿರಂಹಕಾರದ ಕೆಲಸಗಳನ್ನು ನೋಡಿದಾಗ ಡಾ. ಟೇಸಲಾರವರು ಲೋಕಪ್ರಿಯತೆ ಹಾಗು ಪ್ರಸಿದ್ಧಿಯ ಹಿಂದೆ ಇರದೆ ಅವರು ಜನಸಾಮಾನ್ಯರ ಜೀವನದ ಉತ್ತಮತೆಗಾಗಿ ಹಾಗು ವಿಜ್ನಾನದ ಉನ್ನತಿಯನ್ನು ಇಚ್ಛಿಸುತ್ತಿದ್ದರೆಂದು ನಮಗೆ ತಿಳಿಯುತ್ತದೆ. ಕೇವಲ ಒಬ್ಬ ನಿಜ ಭಕ್ತನು ಮತ್ತು ಪರಮಾತ್ಮನಲ್ಲಿ ಬಲವತ್ತರದ ನಂಬಿಕೆಯುಳ್ಳವನು ಮಾತ್ರ ಮಾಡಲು ಸಾಧ್ಯ.

ಡಾ. ಟೇಸಲಾರವರು ಅವರ ಕ್ಷ-ಕಿರಣಗಳ ಸಂಶೋಧನೆಗಳನ್ನು ತನ್ನ ಹೊಸದಾಗಿ ಕಟ್ಟಿದ ಪ್ರಯೋಗಶಾಲೆಯಲ್ಲಿ ಮುಂದುವರಿಸಿದರು ಮತ್ತು ೧೮೯೫ ರ ಜೀವ ನಾಶಕ ಹಚ್ಚಿದ ಬೆಂಕಿಯ ನಂತರ ಕೂಡ ಅವರು ಕ್ಷ-ಕಿರಣದ ಉಪಯೋಗ ಹಾಗು ಜೀವಾಣುಗಳಿಗಾಗುವ ಪರಿಣಾಮಗಳಲ್ಲಿ ಬಹಳ ಮಹತ್ವದ ಶೋಧನೆಗಳನ್ನು ಕಂಡು ಹಿಡಿದರು ಮತ್ತು  ಅವರ ಕ್ಷ-ಕಿರಣದ ಶೋಧನೆಗಾಗಿ ಅವರಿಗೆ ಸಿಗಬೇಕಾದ ಗಣ್ಯತೆಯು ಸಿಗದಿದ್ದಾಗಲು ಕೂಡ ಅದನ್ನು ಮುಂದುವರಿಸಿದರು. ಮುಂದಿನ ಲೇಖನದಲ್ಲಿ ಕ್ಷ-ಕಿರಣದ ಕ್ಷೇತ್ರದಲ್ಲಿ ಶೋಧನೆ ಮತ್ತು ಡಾ.ನಿಕೋಲಾ ಟೇಸಲಾರವರ ಹೆಚ್ಚಿನ ಸಮರ್ಪಣೆಯನ್ನು ನೋಡಬಹುದು.

|| ಹರಿ ಓಂ || ಶ್ರೀರಾಮ || ಅಂಬಜ್ನ ||        

http://www.aniruddhafriend-samirsinh.com/nikola-tesla-xrays/