Showing posts with label Aniruddha Bapu. Show all posts
Showing posts with label Aniruddha Bapu. Show all posts

Wednesday, 7 February 2018

ಅಮಲನೆರನಲ್ಲಿ ನಡೆದ ಶ್ರೀ ದತ್ತಜಯಂತಿ ಉತ್ಸವ - ಪ್ರಥಮ ದಿನ

ಸದ್ಗುರು ಶ್ರೀ ಅನಿರುದ್ಧರ ಸಂಕಲ್ಪನೆ ಅನುಸಾರ  ಪುಣ್ಯಕ್ಷೇತ್ರದ ನಿರ್ಮಾಣದ ಕಾರ್ಯ ಈ ವರ್ಷದ ಶ್ರೀ ದತ್ತ ಜಯಂತಿ ಉತ್ಸವದಿಂದ  ಆರಂಭವಾಗಲಿದೆ ಎಂದು ಎಲ್ಲ ಶ್ತದ್ಧಾವಾನರಿಗೆ ಗೊತ್ತಿದೆ. ಅದೇ ತರಹ ಶ್ರೀ ಸದ್ಗುರು ಪುಣ್ಯಕ್ಷೇತ್ರದ ನಿರ್ಮಾಣದ ಒಂದು ಭಾಗವೆಂದು ಬಾಪುರವರ ಹೇಳಿಕೆ ಪ್ರಕಾರ  ಈ ವರ್ಷದಿಂದ ಅಮಲನೆರನಲ್ಲಿ ಸಹ ಶ್ರೀ ದತ್ತ ಜಯಂತಿ ಉತ್ಸವ ಆಚರಿಸಲಾಗುವುದೆಂದು ಘೋಷಿಸಲಾಗಿತ್ತು. ಈ ವರ್ಷ ಮೊದಲನೆ ವರ್ಷ ಇದ್ದ ಕಾರಣ, ಶ್ರೀ ದತ್ತ ಜಯಂತಿ ಉತ್ಸವ ನಾಲ್ಕು ದಿವಸ ಆಚರಿಸಲಾಗಿದ್ದು, ಇವತ್ತು ಮೊದಲನೇ ದಿನ ಇತ್ತು.

ದಿನಾಂಕ ೨೯-೧೧-೨೦೧೭ರಂದು ಮುಂಬಯಿಂದ, ಪೂಜೆಯಲ್ಲಿ ಇರುವ ಶ್ರೀ ದತ್ತಪಂಚಾಯತನ ಫೋಟೋ ((೧)  ಶ್ರೀ ದತ್ತಾತ್ರೆಯ (೨) ಶ್ರೀಪಾದಶ್ರೀವಲ್ಲಭ (೩) ಶ್ರೀ ನರಸಿಂಹಸರಸ್ವಸತಿ (೪) ಶ್ರೀ ಅಕ್ಕಲಕೊಟ್ ಸ್ವಾಮಿ ಹಾಗೂ ( ೫) ಶ್ರೀ ಸಾಯಿನಾಥ ಇವರ ಫೋಟೋ ) ಹಾಗೂ ಶ್ರೀದತ್ತಾತ್ರೆಯ ಉದಿ ಕುಂಭ ಅಮಲನೆರಗೆ ಕೊಂಡುಹೋಗಲಾಯಿತು. ಈ ದತ್ತಾತ್ರೆಯ ಉದಿ ಕುಂಭದಲ್ಲಿ ಸದ್ಗುರು ಬಾಪುರವರು ಮಾಡಿಸಿ ಕೊಂಡಿರುವ ದತ್ತ ಉಪಾಸನ / ಸಾಯಿ ಗಾಯತ್ರಿ ಯಜ್ಞ ಹಾಗು ಇತರ ಮಹತ್ವದ ಉತ್ಸವ ಹಾಗೂ ಶ್ರೀ   ಗುರುಕ್ಷೇತ್ರಂದಲ್ಲಿ ನಡೆಯುತ್ತಿರುವ ಹವನ ಹಾಗೂ ಯಜ್ಞದ ಉದಿಯನ್ನು ಇಟ್ಟಿದಾರೆ.  ಇವತ್ತು ಉತ್ಸವದ ಸ್ಥಳದಲ್ಲಿ ಬೆಳ್ಳಿಗೆ ೯:೩೦ ಗಂಟೆಗೆ ಮುಖ್ಯ ಸ್ಟೇಜ ನಲ್ಲಿ ಫೋಟೋಗಳನ್ನು ಸ್ಥಾಪನೆ ಮಾಡಿ ನಿತ್ಯ ಪ್ರಾಥಮಿಕ   ಪೂಜನಾವಾಯಿತು. ಈ ಪೂಜನಾ ಆದ ಬಳಿಕ ಪರದೆ ಸರಿಸಲಾಯಿತು ನಂತರ ಉತ್ಸವದ ಸ್ಥಳದಲ್ಲಿ ಶ್ರದ್ಧಾವಾನರು ಬಹಳ ಜಲ್ಲೋಷದಿಂದ ಶ್ರೀ ದತ್ತಾತ್ರೆಯ ಉದಿ ಕುಂಭದ ಸ್ವಾಗತ ಮಾಡಿದರು.  ಶ್ರದ್ಧಾವಾನರು ' ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ  ದಿಗಂಬರಾ’ ಈ ಗಜರ್ ಹಾಡುತ್ತಾ  ಪಾಲಕಿಯಿಂದ ಶ್ರೀ ದತ್ತಾತ್ರೆಯ ಉದಿ ಕುಂಭವನ್ನು ಸ್ಟೇಜಗೆ ತಂದರು. ಮಹಾಧರ್ಮವರ್ಮನ್ ಯೋಗಿಂದ್ರರಸಿಂಹ ಉದಿ ಕುಂಭ ಸ್ಥಾಪನೆ ಮಾಡಿ ಕುಂಭದ ಮೇಲೆ ಸ್ವೇತ ಪುಷ್ಪ ಹಾಗೂ ಸ್ವೇತ ಪುಷ್ಪದ ಹಾರವನ್ನು ಅರ್ಪಣೆ ಮಾಡಿದರು. ಸ್ಥಾಪನೆ ಆದ ನಂತರ ಮಹಧರ್ಮವರ್ಮನ್ ಎಲ್ಲಾ ಉಪಸ್ಥಿತ ಶ್ರದ್ಧಾವನರಿಗೆ ಉದಿ ಕುಂಭದ ಮಾಹಿತಿಯನ್ನು ಕೊಟ್ಟರು. ನಂತರ ಪೂಜಕರ ಪರವಾಗಿ ಉತ್ಸವದ ಪ್ರಥಮ ದಿವಸದ ಪೂಜನೆ ಆಚರಣೆ ಆಯಿತು. ಇವತ್ತಿನ ಪೂಜನದಲ್ಲಿ  ಶ್ರೀ ಗಣಪತಿ ಆಥರ್ವಶೀರ್ಷದ ೨೧ ಸಲ ಪಠಣ  ಆದಮೇಲೆ ನೈವೇದ್ಯ ಅರ್ಪಣ ಮಾಡಲಾಯಿತು. ಪಠಣದ ನಂತರ ಮಹಧರ್ಮವರ್ಮನ್ ಉಪಾಸನೆ ಮಾಡಿ ಇವತ್ತಿನ ಪೂಜೆಯನ್ನು ಸಂಪನ್ನಗೊಳಿಸಿದರು. ಪೂಜೆಯ ನಂತರ ಪ್ರತಿಯೊಬ್ಬ ಶ್ರದ್ಧಾವಾನರಿಗೆ ದುರ್ವ ಅರ್ಪಣೆ ಮಾಡುವ ಅವಕಾಶ ದೊರೆಯಿತು. ಉತ್ಸವ ಸ್ಥಳದಲ್ಲಿ ಶ್ರದ್ಧಾವಾನರಿಗೆ ಸಾಯಂಕಾಲದ ಸಮಯದಲ್ಲಿ ಒಂದು ತಾಸು, ಮುಂಬಯಿಯಲ್ಲಿಯ ಆದೀವೇಶನದ  ಸಿ.ಡಿ ಯಿಂದ ಕೆಲವು ಗಜರ್ ಹಾಗೂ ಅಭಂಗ ತೋರಿಸಲಾಯಿತು. ಇವತ್ತಿನ ಪೂಜನೆಯ ಕೆಲವು ಛಾಯಾಚಿತ್ರಗಳನ್ನು ನೀಡಲಾಗಿದೆ.
श्री अनिरुद्ध गुरुक्षेत्रम[