Thursday, 14 July 2022

ಗ್ಯಾಸ್ ಸೋರಿಕೆ ಜೊತೆಗೆ ಅಡುಗೆ, ಆದರೆ ಸದ್ಗುರುವಿನ ಕೃಪೆಯಿಂದ ರಕ್ಷಣೆ (ಅರುಣಾ ಅಲೈ, ಅಮಳನೇರ)

ಗ್ಯಾಸ್ ಸೋರಿಕೆ ಅಥವಾ ಗ್ಯಾಸ್ ಸಿಲಿಂಡರ್‌ ಅಪಘಾತದಿಂದ ಮನೆಗಳಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ನಾವು  ಆಗಾಗ್ಗೆ ಓದುತ್ತಿರುತ್ತೇವೆ. ಅಂತಹ ಅಪಘಾತಗಳ ತೀವ್ರತೆ ಮತ್ತು ಪರಿಣಾಮದ ಬಗ್ಗೆ ನಿಸ್ಸಂಶಯವಾಗಿ ತಿಳಿಯುತ್ತದೆ. ಆದರೆ,ಈ ಘಟನೆಯನ್ನು ನಮಗೆ ಹೇಳುತ್ತಿರುವ ಶ್ರದ್ದಾವಂತಳು  ತನ್ನ ಅಡುಗೆಮನೆಯಲ್ಲಿ ಗ್ಯಾಸ್ ಸೋರಿಕೆ ಇದ್ದಾಗಲೂ  ಸದ್ಗುರು ಅನಿರುದ್ಧ ಬಾಪುರವರ  ಕೃಪೆಯಿಂದ ರಕ್ಷಿಸಲ್ಪಟ್ಟಳು. ಅಷ್ಟೇ ಅಲ್ಲಬೆಳಗಿನ ಉಪಾಹಾರಚಹಾಮಧ್ಯಾಹ್ನದ ಊಟವನ್ನೂ ಸಿದ್ಧಪಡಿಸಿ ಮುಂದೆ ಬರಲಿರುವ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.


ನಾನು ಗಂಗೆಯ ಜಲಧಾರೆಯನ್ನು ನೋಡಿದ್ದೇನೆ. ಗಂಗೋತ್ರಿಗೂ ಭೇಟಿ ನೀಡಿದ್ದೆ. ಸದಾ ಹರಿಯುವ ಆ ನೀರನ್ನು ನೋಡಿದಾಗಸಾವಿರಾರು ವರ್ಷಗಳಿಂದ ನೀರು ನಿರಂತರವಾಗಿ ಹೇಗೆ ಹರಿಯುತ್ತಿದೆ ಎಂದು ನನಗೆ ಆಶ್ಚರ್ಯವಾಯಿತು. ವಿಜ್ಞಾನಕ್ಕೂ ಈ ವಿದ್ಯಮಾನವನ್ನು ವಿವರಿಸಲು ಸಾಧ್ಯವಾಗಲಿಲ್ಲ. ವಿಜ್ಞಾನ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿ ಆಧ್ಯಾತ್ಮಿಕತೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.  ಅಧ್ಯಾತ್ಮದಲ್ಲಿ ನಿಶ್ಚಲ ನಂಬಿಕೆ ಮುಖ್ಯತನ್ನ ದೇವರಲ್ಲಿ, ತನ್ನ ಸದ್ಗುರುವಿನಲ್ಲಿ ಅಚಲವಾದ ನಂಬಿಕೆ ಮತ್ತು ವಿಶ್ವಾಸ ಹೊಂದಿರಬೇಕು. ಅದನ್ನೇ ಬಾಪು ನಮಗೆ ಹೇಳುತ್ತಲೇ ಇರುತ್ತಾರೆ  “ಏಕ್ ವಿಶ್ವಾಸ್ ಅಸಾವಾ ಪುರ್ತಾ ಕರ್ತಾ ಹರ್ತಾ ಗುರು ಐಸಾ”. (ಗುರುವಿನಲ್ಲಿ ದೃಢ ನಂಬಿಕೆ ಇರಬೇಕುಎಲ್ಲವನ್ನು  ಮಾಡುವವನು,ರಕ್ಷಿಸುವವನು ಗುರು ಒಬ್ಬನೇ )

 

ಸಂಪೂರ್ಣವಾಗಿ ವಿವರಿಸಲಾಗದ ನನ್ನ ಅನುಭವ ಹೇಳುತ್ತಿದ್ದೇನೆ. ಸೆಪ್ಟೆಂಬರ್ 03,2013 ರಂದು ಬೆಳಿಗ್ಗೆ ಎದ್ದು ನಾನು ಚಹಾ ಮಾಡಲು ಗ್ಯಾಸ್ ಸ್ಟವ್ ಆನ್ ಮಾಡಲು ಪ್ರಯತ್ನಿಸಿದೆ ಆದರೆ ಅದು ಹೊತ್ತಿಕೊಳ್ಳಲಿಲ್ಲ. ನನ್ನ ಮಗ ಸ್ವಲ್ಪ ಪ್ರಯತ್ನ ಮಾಡಿ ಹೊಸ ಸಿಲಿಂಡರ್ ಅನ್ನು ಜೋಡಿಸಿದನುನಂತರ ಅದು ಹೊತ್ತಿಕೊಂಡಿತು. ನನ್ನ ಸೊಸೆಯು ಚಹಾತಿಂಡಿ ಮತ್ತು ಊಟವನ್ನು ತಯಾರಿಸಿದಳು. ನಂತರ ನಾವು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದೆವು.

 

ನಾನುಅನಿಲ್‌ಸಿಂಹ ಮತ್ತು ನನ್ನ ಮಗಳು ಡ್ರಾಯಿಂಗ್ ರೂಮ್‌ನಲ್ಲಿ ಕುಳಿತಾಗನಮಗೆ  ಗ್ಯಾಸ್ ಸೋರಿಕೆಯ ವಾಸನೆ ಬಂದಿತು. ಏನಾಗುತ್ತಿದೆ ಎಂದು ನೋಡಲು  ತಕ್ಷಣ ನಾವು ಅಡುಗೆ ಮನೆಗೆ ನುಗ್ಗಿದೆವು. ನಮ್ಮೆಲ್ಲರಿಗೂ ಆಶ್ಚರ್ಯವಾಯಿತುಹಿಸ್ಸಿಂಗ್ ಶಬ್ದದೊಂದಿಗೆ ಗ್ಯಾಸ್ ಪೈಪ್ ಮೂಲಕ ಗ್ಯಾಸ್ ಧಾರಾಕಾರವಾಗಿ ಸೋರಿಕೆಯಾಗುತ್ತಿತ್ತು. ಗ್ಯಾಸ್ ಮನೆಯೆಲ್ಲ ಹರಡಿತ್ತು. ಇದರರ್ಥ ನಿಯಂತ್ರಕವನ್ನು(Regulator)ಸರಿಯಾಗಿ ಅಳವಡಿಸಲಾಗಿಲ್ಲ ಮತ್ತು ಗ್ಯಾಸ್ ಸೋರಿಕೆಯಾಗುತ್ತಿತ್ತು. ನಾವು ತಕ್ಷಣ ನಿಯಂತ್ರಕವನ್ನು ಸ್ವಿಚ್ ಆಫ್ ಮಾಡಿದೆವು ಮತ್ತು ಅನಿಲ್‌ಸಿಂಹ ಅವರು ದೂರು ನೀಡಲು ಗ್ಯಾಸ್ ಕಂಪನಿಗೆ ಕರೆ ಮಾಡಿದರು.

 

ಮಧ್ಯಾಹ್ನ 3 ಗಂಟೆಗೆ ಮೆಕ್ಯಾನಿಕ್ ಬಂದು ಪರಿಶೀಲಿಸಿದಾಗ ರೆಗ್ಯುಲೇಟರ್‌ನಲ್ಲಿ ವಾಲ್ವ ಇಲ್ಲದಿರುವುದು ಗೊತ್ತಾಯಿತು. ನಾವು ಗಾಬರಿಗೊಂಡೆವು. ಅದು ಹೇಗೆ ಸಾಧ್ಯ ಯಾಕೆಂದರೆ ಕೆಲವೇ ಗಂಟೆಗಳ ಹಿಂದೆ ಅದೇ ಒಲೆಯ ಮೇಲೆ ಅಡುಗೆ ಮಾಡಿ ಮುಗಿಸಿದ್ದೇವೆ ಎಂದು ಮೆಕ್ಯಾನಿಕ್ ಗೆ ಹೇಳಿದೆವು.

 

ಅವನಿಗೂ ಅಷ್ಟೇ ಆಶ್ಚರ್ಯವಾಯಿತು. ಅವನು ಗೋಡೆಯ ಮೇಲಿದ್ದ ದತ್ತಗುರು ಮತ್ತು ಬಾಪು ಅವರ ಚಿತ್ರವನ್ನು ನೋಡಿ, "ನಿಮ್ಮ ಮೇಲೆ ಸದ್ಗುರುಗಳ ಆಶೀರ್ವಾದವಿದೆ ಮತ್ತು ಅವರಿಂದಲೇ  ದೊಡ್ಡ ಪ್ರಾಣಾಪಾಯವನ್ನು ತಪ್ಪಿಸಲಾಗಿದೆ" ಎಂದು ಹೇಳಿದನು.

 

ನಂತರ ಅವನು ರೆಗ್ಯುಲೇಟರ್‌ನಲ್ಲಿ  ವಾಲ್ವನ್ನು ಅಳವಡಿಸಿದನು ಮತ್ತು ಗ್ಯಾಸ್ ಸಿಲಿಂಡರನ್ನು ನಾರ್ಮಲ್ ಮೋ (mode) ಗೆ ಹೊಂದಿಸಿದನು. ನಾವು ನಮ್ಮ ಮನಸ್ಸಿನಲ್ಲಿಯೇ ಬಾಪುಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದೆವು. ಬಾಪು ಅವರ ಆಶೀರ್ವಾದದಿಂದಾಗಿ ಪ್ರಾಣಾಪಾಯ ತಪ್ಪಿತು. ನಮ್ಮ ಸದ್ಗುರುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಅನುಕ್ರಮವನ್ನು ತಿಳಿದಿದ್ದಾರೆ. ಅವರ ಶ್ರದ್ಧಾವಂತ ಭಕ್ತರು ಎಲ್ಲೇ ಇದ್ದರೂ ಮತ್ತು ಅವರು ಎಷ್ಟೇ ದೊಡ್ಡ ಸಂಕಟದ ಸ್ಥಿತಿಯಲ್ಲಿದ್ದರೂ ಅವರನ್ನು ರಕ್ಷಿಸಲು ನಮ್ಮ ಸದ್ಗುರು ಯಾವಾಗಲೂ ಇರುತ್ತಾರೆ ಎಂಬ ಸತ್ಯವನ್ನು ನಾವು ಅನುಭವಿಸುತ್ತೇವೆ. ಬಾಪುನಾವು ಅಂಬಜ್ಞರಿದ್ದೇವೆ.

 

ಸ್ಮರ್ತೃಗಾಮಿ ಬಾಪು ದತ್ತಗುರು ಗುರುತಿಸಿದೆ I

ಅನಿರುದ್ಧಾ,  ನಾನು ನಿನ್ನ ಎಷ್ಟು ಋಣಿಯಾದೆ II

Saturday, 19 September 2020

ಹನುಮಾನಚಲೀಸಾ ಪಠಣ

 

ಹರಿ ಓಂ





ಎಲ್ಲ  ಶ್ರದ್ಧಾವಂತರ ಸಲುವಾಗಿ ಒಂದು ಆನಂದದ ಸುದ್ದಿ ಏನೆಂದರೆ,  ಪ್ರತಿವರ್ಷ ಶ್ರೀ ಅನಿರುದ್ಧ ಗುರುಕ್ಷೇತ್ರಮದಲ್ಲಿ ನಡೆಯಲಿರುವ ಹನುಮಾನಚಲೀಸಾ ಪಠಣ ಈ ವರ್ಷದ ಅಧಿಕ ಆಶ್ವಿನ ಮಾಸದಲ್ಲಿ  ಸೋಮವಾರ ದಿನಾಂಕ 21 ಸಪ್ಟೆಂಬರ 2020 ರಿಂದ ಭಾನುವಾರ ದಿನಾಂಕ 27 ಸಪ್ಟೆಂಬರ 2020  7 ದಿವಸಗಳಲ್ಲಿ ಸಂಪನ್ನವಾಗಲಿದೆ. ಮಾತ್ರ ಈ ವರ್ಷ  ಗುರುಕ್ಷೇತ್ರಮದಲ್ಲಿ ಪ್ರತ್ಯಕ್ಷವಾಗಿ ಪಠಣ ಮಾಡಲು ಬರದೇ ಇರುವ ತೊಂದರೆ ಗಮನಿಸಿ, ಕಳೆದ ಹಲವಾರು ವರ್ಷಗಳ ರೆಕಾರ್ಡಿಂಗನ ಉಪಯೋಗ ಮಾಡಿ, ಅನಿರುದ್ಧ ಟಿ.ವ್ಹಿ., ಫೇಸಬುಕ್ ಪೇಜ್, ಯು ಟ್ಯೂಬ ನ  ಮುಖಾಂತರ ಹಾಗೆಯೇ '' ಅನಿರುದ್ಧ ಭಜನ ಮ್ಯೂಜಿಕ್ ರೇಡಿಯೋ '' ಮೇಲಿಂದ ( ಆಡಿಯೋ ಸ್ವರೂಪದಲ್ಲಿ ) ಶ್ರದ್ಧಾವಂತರಿಗೆ ಈ ಪಠಣದ ಲಾಭವನ್ನು ಪಡೆಯುವ ವ್ಯವಸ್ಥೆ  ಮಾಡಲಾಗಿದೆ.

ಈ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ತಮ್ಮತಮ್ಮ ಮನೆಯಲ್ಲಿ ಕುಳಿತುಕೊಂಡು ಒಂದು ದಿವಸ  ಅಥವಾ ಅವನ ಇಚ್ಛೆ ಇದ್ದರೆ ಒಂದಕ್ಕಿಂತ ಹೆಚ್ಚು ದಿವಸ ಕೂಡಾ ಜಪಕನೆಂದು ಸಹಭಾಗಿ ಆಗಬಹುದು. ಮಾತ್ರ ಸಂಪ್ರದಾಯದಂತೆ ಪ್ರತಿಯೊಂದು ದಿವಸ ಈ ಪಠಣದಲ್ಲಿ '' A  ''  ಹಾಗು  '' B  ''  ಹೀಗೆ ಎರಡು ಬ್ಯಾಚುಗಳು ಇರುವದು ಹಾಗು  ಆ ದಿವಸದ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ಎರಡರಲ್ಲಿಯ ಒಂದೇ ಬ್ಯಾಚಿನಲ್ಲಿ ಹೆಸರನ್ನು ರಜಿಸ್ಟರ್ ಮಾಡಲು ಸಾಧ್ಯ.

ಪಠಣದವೇಳಾಪತ್ರಿಕೆ( ಸಮಯಸೂಚಿ)ಕೆಳಗಿನಂತೆಇರುವದು.

 

'' A '' ಬ್ಯಾಚು

'' B '' ಬ್ಯಾಚು

ಆವರ್ತನೆಗಳು

ಎರಡೂಬ್ಯಾಚುಗಳಲ್ಲಿಯಶ್ರದ್ಧಾವಂತರಿಗೆ ಒಂದೊಂದು ಗಂಟೆಯ ಆವರ್ತನೆ ಇರುವದು ಹಾಗು ಪೂರ್ಣ ದಿವಸದಲ್ಲಿ ಅವರಿಗೆ ಒಟ್ಟಿಗೆ ಆರು ಸಲ ಆವರ್ತನೆಗೆಕುಳಿತುಕೊಳ್ಳುವದಿದೆ. ''A''ಬ್ಯಾಚಿನ ಆವರ್ತನೆ ಆಗುತ್ತಿರುವಾಗ''B''ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು  ಮತ್ತುಅದರಂತೆಯೇ ''B  '' ಬ್ಯಾಚಿನ ಆವರ್ತನೆ ಆಗುತ್ತಿರುವಾಗ'' A   '' ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು.

 

ಬೆಳಿಗ್ಗೆ  8.00-8.15  ಎರಡೂ ಬ್ಯಾಚುಗಳು ಒಟ್ಟಿಗೆ

3

1

8.15 – 9.00

9.00 – 10.00

8 + 11

2

10.00 – 11.00

11.00 – 12.00

11 + 11

3

12.00 – 1.00

1.00 – 2.00

11 + 11

4

2.00 – 3.00

3.00 – 4.00

11 + 11

5

4.00 – 5.00

5.00 – 6.00

11 + 11

6

6.00 – 7.00

7.00 – 8.00

11 + 11

 

ಸಾಯಂಕಾಲ 8.00-8.15ಎರಡೂ ಬ್ಯಾಚುಗಳು ಒಟ್ಟಿಗೆ

3

 

 ಈ ಪಠಣದಲ್ಲಿ ಸಹಭಾಗಿಯಾಗಲು ಹೆಸರನ್ನು ರಜಿಸ್ಟ್ರೇಷನ್  ಮಾಡುವ ಸಲುವಾಗಿ ಶ್ರದ್ಧಾವಂತರು ಭಾನುವಾರ ದಿನಾಂಕ 13 ಸಪ್ಟೆಂಬರ್ 2020 ರಿಂದ ಕೆಳಗೆ ಕೊಟ್ಟಿರುವ ವೆಬ್ಸೈಟ್ (website) ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರನ್ನು ರಜಿಸ್ಟರ್ ಮಾಡಬಹುದು.

 

ಹೆಸರನ್ನು ರಜಿಸ್ಟರ್ ಮಾಡುವ ಸಲುವಾಗಿ  ವೆಬ್ಸೈಟ್ (website) ಲಿಂಕ್

https://pathan.aniruddha-devotionsentience.com

 

ಹಾಗೆಯೇ ಯಾವನೊಬ್ಬ ಶ್ರದ್ಧಾವಂತನಿಗೆ ಪೂರ್ಣ ದಿವಸ ಜಪಕನೆಂದು ಸಹಭಾಗಿಯಾಗಲು ಸಾಧ್ಯವಾಗದಿದ್ದರೆ, ಅವನು ಪಠಣದ ಈ ಏಳು ದಿವಸಗಳಲ್ಲಿ ದಿವಸದ ಯಾವದೇ ವೇಳೆಗೆ ತನ್ನ ಅನುಕೂಲದಂತೆ ಪಠಣದಲ್ಲಿ ಸಹಭಾಗಿಯಾಗಬಹುದು.

 

ಜಪಕರಿಗೆ ಊಟದ ಪಥ್ಯೆಯ ಅಥವಾ ಡ್ರೆಸ್ ಕೋಡಿನ ಯಾವದೇ  ಬಂಧನ ಇರುವದಿಲ್ಲ ಎಂಬುದನ್ನು ಎಲ್ಲ ಶ್ರದ್ಧಾವಂತರು ಗಮನದಲ್ಲಿಡಬೇಕು. ಆದರೆ ಮಾಂಸಾಹಾರ ಸೇವನೆ ಮಾಡದೇ ಇರುವದು ಶ್ರೇಯಸ್ಕರ.

 

ಅದಕ್ಕಾಗಿ ಸದ್ಗುರು ಅನಿರುದ್ಧರ ಕೃಪಾಶೀರ್ವಾದದಿಂದ ಲಭಿಸಿದ ಈ ಸುವರ್ಣ ಅವಕಾಶದ ಲಾಭವನ್ನು ಆದಷ್ಟು ಹೆಚ್ಚು ಶ್ರದ್ಧಾವಂತರು ಪಡೆಯಬೇಕು.

 

II ಹರಿ ಓಂII  IIಶ್ರೀರಾಮII  IIಅಂಬಜ್ಞII

IIನಾಥಸಂವಿಧ್II

 

- ಸಮೀರಸಿಂಹ ದತ್ತೋಪಾಧ್ಯೆ

ಶುಕ್ರವಾರ ದಿನಾಂಕ  11 ಸಪ್ಟೆಂಬರ್ 2020

 

 

Wednesday, 7 February 2018

ಅಮಲನೆರನಲ್ಲಿ ನಡೆದ ಶ್ರೀ ದತ್ತಜಯಂತಿ ಉತ್ಸವ - ಪ್ರಥಮ ದಿನ

ಸದ್ಗುರು ಶ್ರೀ ಅನಿರುದ್ಧರ ಸಂಕಲ್ಪನೆ ಅನುಸಾರ  ಪುಣ್ಯಕ್ಷೇತ್ರದ ನಿರ್ಮಾಣದ ಕಾರ್ಯ ಈ ವರ್ಷದ ಶ್ರೀ ದತ್ತ ಜಯಂತಿ ಉತ್ಸವದಿಂದ  ಆರಂಭವಾಗಲಿದೆ ಎಂದು ಎಲ್ಲ ಶ್ತದ್ಧಾವಾನರಿಗೆ ಗೊತ್ತಿದೆ. ಅದೇ ತರಹ ಶ್ರೀ ಸದ್ಗುರು ಪುಣ್ಯಕ್ಷೇತ್ರದ ನಿರ್ಮಾಣದ ಒಂದು ಭಾಗವೆಂದು ಬಾಪುರವರ ಹೇಳಿಕೆ ಪ್ರಕಾರ  ಈ ವರ್ಷದಿಂದ ಅಮಲನೆರನಲ್ಲಿ ಸಹ ಶ್ರೀ ದತ್ತ ಜಯಂತಿ ಉತ್ಸವ ಆಚರಿಸಲಾಗುವುದೆಂದು ಘೋಷಿಸಲಾಗಿತ್ತು. ಈ ವರ್ಷ ಮೊದಲನೆ ವರ್ಷ ಇದ್ದ ಕಾರಣ, ಶ್ರೀ ದತ್ತ ಜಯಂತಿ ಉತ್ಸವ ನಾಲ್ಕು ದಿವಸ ಆಚರಿಸಲಾಗಿದ್ದು, ಇವತ್ತು ಮೊದಲನೇ ದಿನ ಇತ್ತು.

ದಿನಾಂಕ ೨೯-೧೧-೨೦೧೭ರಂದು ಮುಂಬಯಿಂದ, ಪೂಜೆಯಲ್ಲಿ ಇರುವ ಶ್ರೀ ದತ್ತಪಂಚಾಯತನ ಫೋಟೋ ((೧)  ಶ್ರೀ ದತ್ತಾತ್ರೆಯ (೨) ಶ್ರೀಪಾದಶ್ರೀವಲ್ಲಭ (೩) ಶ್ರೀ ನರಸಿಂಹಸರಸ್ವಸತಿ (೪) ಶ್ರೀ ಅಕ್ಕಲಕೊಟ್ ಸ್ವಾಮಿ ಹಾಗೂ ( ೫) ಶ್ರೀ ಸಾಯಿನಾಥ ಇವರ ಫೋಟೋ ) ಹಾಗೂ ಶ್ರೀದತ್ತಾತ್ರೆಯ ಉದಿ ಕುಂಭ ಅಮಲನೆರಗೆ ಕೊಂಡುಹೋಗಲಾಯಿತು. ಈ ದತ್ತಾತ್ರೆಯ ಉದಿ ಕುಂಭದಲ್ಲಿ ಸದ್ಗುರು ಬಾಪುರವರು ಮಾಡಿಸಿ ಕೊಂಡಿರುವ ದತ್ತ ಉಪಾಸನ / ಸಾಯಿ ಗಾಯತ್ರಿ ಯಜ್ಞ ಹಾಗು ಇತರ ಮಹತ್ವದ ಉತ್ಸವ ಹಾಗೂ ಶ್ರೀ   ಗುರುಕ್ಷೇತ್ರಂದಲ್ಲಿ ನಡೆಯುತ್ತಿರುವ ಹವನ ಹಾಗೂ ಯಜ್ಞದ ಉದಿಯನ್ನು ಇಟ್ಟಿದಾರೆ.  ಇವತ್ತು ಉತ್ಸವದ ಸ್ಥಳದಲ್ಲಿ ಬೆಳ್ಳಿಗೆ ೯:೩೦ ಗಂಟೆಗೆ ಮುಖ್ಯ ಸ್ಟೇಜ ನಲ್ಲಿ ಫೋಟೋಗಳನ್ನು ಸ್ಥಾಪನೆ ಮಾಡಿ ನಿತ್ಯ ಪ್ರಾಥಮಿಕ   ಪೂಜನಾವಾಯಿತು. ಈ ಪೂಜನಾ ಆದ ಬಳಿಕ ಪರದೆ ಸರಿಸಲಾಯಿತು ನಂತರ ಉತ್ಸವದ ಸ್ಥಳದಲ್ಲಿ ಶ್ರದ್ಧಾವಾನರು ಬಹಳ ಜಲ್ಲೋಷದಿಂದ ಶ್ರೀ ದತ್ತಾತ್ರೆಯ ಉದಿ ಕುಂಭದ ಸ್ವಾಗತ ಮಾಡಿದರು.  ಶ್ರದ್ಧಾವಾನರು ' ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ  ದಿಗಂಬರಾ’ ಈ ಗಜರ್ ಹಾಡುತ್ತಾ  ಪಾಲಕಿಯಿಂದ ಶ್ರೀ ದತ್ತಾತ್ರೆಯ ಉದಿ ಕುಂಭವನ್ನು ಸ್ಟೇಜಗೆ ತಂದರು. ಮಹಾಧರ್ಮವರ್ಮನ್ ಯೋಗಿಂದ್ರರಸಿಂಹ ಉದಿ ಕುಂಭ ಸ್ಥಾಪನೆ ಮಾಡಿ ಕುಂಭದ ಮೇಲೆ ಸ್ವೇತ ಪುಷ್ಪ ಹಾಗೂ ಸ್ವೇತ ಪುಷ್ಪದ ಹಾರವನ್ನು ಅರ್ಪಣೆ ಮಾಡಿದರು. ಸ್ಥಾಪನೆ ಆದ ನಂತರ ಮಹಧರ್ಮವರ್ಮನ್ ಎಲ್ಲಾ ಉಪಸ್ಥಿತ ಶ್ರದ್ಧಾವನರಿಗೆ ಉದಿ ಕುಂಭದ ಮಾಹಿತಿಯನ್ನು ಕೊಟ್ಟರು. ನಂತರ ಪೂಜಕರ ಪರವಾಗಿ ಉತ್ಸವದ ಪ್ರಥಮ ದಿವಸದ ಪೂಜನೆ ಆಚರಣೆ ಆಯಿತು. ಇವತ್ತಿನ ಪೂಜನದಲ್ಲಿ  ಶ್ರೀ ಗಣಪತಿ ಆಥರ್ವಶೀರ್ಷದ ೨೧ ಸಲ ಪಠಣ  ಆದಮೇಲೆ ನೈವೇದ್ಯ ಅರ್ಪಣ ಮಾಡಲಾಯಿತು. ಪಠಣದ ನಂತರ ಮಹಧರ್ಮವರ್ಮನ್ ಉಪಾಸನೆ ಮಾಡಿ ಇವತ್ತಿನ ಪೂಜೆಯನ್ನು ಸಂಪನ್ನಗೊಳಿಸಿದರು. ಪೂಜೆಯ ನಂತರ ಪ್ರತಿಯೊಬ್ಬ ಶ್ರದ್ಧಾವಾನರಿಗೆ ದುರ್ವ ಅರ್ಪಣೆ ಮಾಡುವ ಅವಕಾಶ ದೊರೆಯಿತು. ಉತ್ಸವ ಸ್ಥಳದಲ್ಲಿ ಶ್ರದ್ಧಾವಾನರಿಗೆ ಸಾಯಂಕಾಲದ ಸಮಯದಲ್ಲಿ ಒಂದು ತಾಸು, ಮುಂಬಯಿಯಲ್ಲಿಯ ಆದೀವೇಶನದ  ಸಿ.ಡಿ ಯಿಂದ ಕೆಲವು ಗಜರ್ ಹಾಗೂ ಅಭಂಗ ತೋರಿಸಲಾಯಿತು. ಇವತ್ತಿನ ಪೂಜನೆಯ ಕೆಲವು ಛಾಯಾಚಿತ್ರಗಳನ್ನು ನೀಡಲಾಗಿದೆ.
श्री अनिरुद्ध गुरुक्षेत्रम[