Friday 25 October 2013

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ ೧)

ಮಿಡಲ್ ಈಸ್ಟೀನ ವಸ್ತುಸ್ಥಿತಿ ಬೆಂದುತ್ತಿರುವಾಗ ಮತ್ತು ಯು ಎಸ್ ನವರು ಶಿರಿಯಾದ ಮೇಲೆ ಮಾಡಬಹುದಾದ ಆಕ್ರಮಣದಿಂದಾಗಿ ಉಲ್ಭಣವಾಗುವ ಪರಿಸ್ಥಿತಿಯು ಬಂದಾಗ ರಶಿಯಾದ ರಾಷ್ಟ್ರಪತಿಯಾದ, ಲಾದಿಮಿರ್ ಪುತೀನರವರು ತನ್ನ ಒಂದು ಚೂರು ಚಾತುರ್ಯ ಮತ್ತು ಜಾಣತನದಿಂದ ಅಂತರರಾಷ್ಟ್ರೀಯ ವ್ಯವಹಾರದ ನಿಪೂಣತೆಯನ್ನು ತೋರಿಸಿದಾಗ ಅದು ಯು ಎಸ್ ನವರ ಕೆಲಸಕ್ಕೆ ಬಂದಿತು. ಶಿರಿಯಾದ ಮೇಲೆ ಯು ಎಸ್ ನವರು ಮಾಡಬಹುದಾದ ಆಕ್ರಮಣವನ್ನು ಪ್ರಶ್ನಿಸಿ,   ಯು ಎನ್ ನ ಮಾನ್ಯತೆ ತೆಗೆದುಕೊಳ್ಳದಿದ್ದರಿಂದ ಅದನ್ನು ಕೇವಲ ಶಿರಿಯಾದ ಮೇಲಿನ ಆಕ್ರಮಣವೆಣಿಸದೆ, ಯು ಎನ್ ನ ಅಸ್ತಿತ್ವದ ಹಾಗು ಭವಿಷ್ಯದ ಮೇಲೆ ಮಾಡಿದ  ಆಕ್ರಮಣವಾಗಬಹುದೆಂದು ಮತ್ತು ಯಾವುದನ್ನು ಜಗತ್ತಿನಲ್ಲಿ ಚಿರಕಾಲದ ತನಕ ಶಾಂತಿ ಉಳಿಯಬೇಕೆಂದು ಸ್ಥಾಪಿಸಿದ ಸಂಸ್ಥೆಗೆ ಮಾಡಿದ ಆಕ್ರಮಣವೆಂದು ಪುತೀನರು ನಿವ್ ಯೋರ್ಕ್ ಟೈಮ್ಸಿನಲ್ಲಿ ತನ್ನ ಮತವನ್ನು ವ್ಯಕ್ತಪಡಿಸಿದರು. ಅವರು ಲೀಗ್ ಆಫ್ ನೇಶನ್ ಆಗಿರುವ ಯು ಎನ್ ನ ಅದೃಷ್ಟವನ್ನು  ಮೊದನೇಯ ಮಹಾಯುದ್ಧದ ನಂತರದ ಕಾಲದಂತಾಗಿರುವುದೆಂದು ಇದೊಂದು ಯು ಎನ್ ಗೆ ಮುನ್ಸೂಚನೆಯೆಂದು ಹೋಲಿಸಿದಾಗ ಪುತೀನಿನವರ ವಿಚಾರ ಗ್ಲೋಬಲ್ ಕಮ್ಯುನಿಟಿಗೆ (ಭೂಮಂಡಲದ ಸಮಾಜ) ಮುಖ್ಯವಾಗಿ ಯು ಎಸ್ಸ್ ಗೆ ಬೆರಗುಗೊಳಿಸುವ ಆಘಾತದಂತಿತ್ತು. ಈ ಒಂದೇ ಮಹತ್ವದ ಮಾತನ್ನು ಕೇಳಿದ ಯು ಎಸ್ ತನ್ನ ತಪ್ಪಿನ ಅರಿವಾಗಿ ಶಿರಿಯಾದಲ್ಲಿದ್ದ ವಿವಾದಾಂಶ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅತೀ ಮಹತ್ವದ ವಿಷಯವಾಗಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗದ ಬಗ್ಗೆ ರಶಿಯಾದ ಜೊತೆ ಒಮ್ಮತವಾಗಿ ವಿಚಾರವಿನಿಮಯ ಮಾಡಲು ಸಿದ್ಧವಾಯಿತು.

ಇದನ್ನು ನೋಡಿದಾಗ ಶಸ್ತ್ರಾಸ್ತ್ರಗಳ ತಿಕ್ಕಾಟದ ನಿವಾರಣೆ ಸದ್ಯಕ್ಕೆ ಆದಂತೆ ಕಂಡು ಬಂದರೂ ಮುಂದೆ ಭವಿಷ್ಯದಲ್ಲಿ ಇದರ ಪುನವರ್ತನೆಯಾಗುವ ಸಾದ್ಯತೆಯಿದೆ. ಆದ್ದರಿಂದ ರಶಿಯಾದವರಿಂದ ಬಂದ ಪ್ರಸ್ತಾಪದ ಪರಿಣಾಮವಾಗಿ ಶಿರಿಯಾ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಿಟ್ಟುಕೊಟ್ಟು ಅದರ ಉಪಯೋಗವನ್ನು ಮಾಡುವುದಿಲ್ಲವೆಂದು ಒಪ್ಪಿದೆ. ಶಿರಿಯಾದ ಸಂದಿಗ್ಧ ಪರಿಸ್ಥಿತಿ ಬಗ್ಗೆ ರಶಿಯಾದ ಜೊತೆ ಮಾಡಿದ ಪ್ರಸ್ತಾಪಕ್ಕೆ ಯು ಎಸ್ ಒಪ್ಪಿದ್ದರೂ ಅವರಿಬ್ಬರಲ್ಲಿ ಬಹಳ ವಿಶಾಲ ಮತ್ತು ಗಂಡಾಂತಕಾರಿಯಾದ ವಿಚಾರದ ಮತಭೇದವು ಉಳಿದೇ ಇದೆ. ಯಾಕೆಂದರೆ ಶಿರಿಯಾ ತನ್ನ ಮಾತನ್ನಿಡದಿದ್ದರೆ ಯು ಎಸ್ ಹೇಗೆ ಪ್ರತಿಕ್ರಿಯೆ ತೋರಿಸಬಹುದು ಇದನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಶಿರಿಯಾ ತಾನು ಕೊಟ್ಟ ಮಾತನ್ನಿಡದಿದ್ದರೆ ತನ್ನ ಸೈನ್ಯದ ಉಪಯೋಗ ಮಾಡುವುದೊಂದೇ ಅದರ ಪರಿಹಾರವಾಗಿದೆ ಎಂದು ಯು ಎಸ್  ಕೆಲವು ದಿವಸದ ಹಿಂದೆ ಸಂಕೇತ ಕೊಟ್ಟಿದೆ. ಆದರೆ ಯು ಎಸ್ ರಾಷ್ಟ್ರಪತಿಯಾದ ಬರಾಕ್ ಒಬಾಮಾ ಅವರು ಯುನೈಟೇಡ್ ನೇಶನ್ಸ್ ಜನರಲ್ ಎಸಂಬ್ಲಿಯಲ್ಲಿ ಕಳೆದ ವಾರ ಭಾಷಣ ಮಾಡಿದಾಗ ಈ ವಿಷಯದ ಉಲ್ಲೇಖ  ಮಾಡಲು ಬೇಕೆಂದೇ ತಳ್ಳಿದರು. ಆದರೆ ಒಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾಗಿರುವುದೆಂದರೆ ರಶಿಯಾ ಮಾಡಿದ ಮಧ್ಯಸ್ತಿಕೆಯ ಒಪ್ಪಂದಕ್ಕೆ ಯು ಎಸ್ ಒಪ್ಪಿದ್ದರೂ, ಅವರು ಶಿರಿಯಾದ ಶಾಸನದ ವಿರುದ್ಧ ಹೋರಾಡುವ ದಂಗೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಯು ಎಸ್ ನ ಜೊತೆ ಸೌದಿ ಅರೇಬಿಯಾ, ಯುನೈಟೇಡ್ ಅರಬ್ ಎಮಿರೇಟ್ಸ್ ಹಾಗು ಕತಾರ್ ದೇಶಗಳು ಎಲ್ಲಾ ಪ್ರಕಾರದ ಸಹಾಯವನ್ನು ಈ ದಂಗೆಕೋರರಿಗೆ ಕೊಡಲಾರಂಭಿಸಿದ್ದಾರೆ. ಶಿರಿಯಾದ ದಂಗೆಕೋರರಿಗೆ ಟರ್ಕಿ ಮತ್ತು ಜೊರ್ಡನಿನಿಂದ ಕೂಡ ಸಹಾನುಭೂತಿಯು ಸಿಗತೊಡಗಿದೆ. ಇಂತಹ ಸಮಯದಲ್ಲಿ ಶಿರಿಯಾದ ರಾಷ್ಟ್ರಪತಿಯವರು ಯಾವ-ಯಾವ ದೇಶಗಳು ಮತ್ತು ಮುಖ್ಯವಾಗಿ ಟರ್ಕಿ ದೇಶವು ದಂಡೆಕೋರರಿಗೆ ಸಹಾಯವನ್ನು ಕೊಡುತ್ತಿದ್ದು ಅವರಿಗೆ ಮುಂದೆ ಬರುವ ಕಾಲದಲ್ಲಿ ಪಶ್ಚಾತ್ತಾಪ ಪಡಬೇಕಾಗುವದು, ಯಾಕೆಂದರೆ ಅವರು ಈಗ ದಂಡೆಕೋರರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಅವರೇ ಮುಂದೆ ಬರುವ ಕಾಲದಲ್ಲಿ ಅವರ ವಿರುದ್ದ ನಿಲ್ಲಲ್ಲಿದ್ದಾರೆ ಎಂದು ಹೇಳಿರುವರು. ಈಗ ಆಗುತ್ತಿರುವ ಘಟನೆಗಳನ್ನು ನೋಡಿದರೆ ಮುಂದೆ ಬರುವ ಸಮಯದಲ್ಲಿ ಮುಖ್ಯವಾಗಿ ಶಿರಿಯಾದ ಸುತ್ತಮುತ್ತಲು ಮತ್ತು ಮಿಡಲ್ ಈಸ್ಟೀನಲ್ಲಿ ಬಹಳ ದೊಡ್ಡ ಪ್ರಕಾರದ ಕಚ್ಚಾಟ ಹಾಗು ಹಿಂಸೆಯ ಪರಿಮಾಣ ಹೆಚ್ಚಾಗಲಿದೆ.

ಮಧ್ಯಂತರದ ಸಮಯದಲ್ಲಿ ರಾಸಾಯನಿಕ ಶಷ್ತ್ರಾಸ್ತ್ರಗಳ ಉಪಯೋಗ ಸಾಧಾರಣ ನಾಗರಿಕರ ಮೇಲೆ ಮಾಡಿದ ಅವೇಶಯುಕ್ತ ದೋಷಾರೋಪಣೆಗಳನ್ನು ಯು ಎಸ್ ಮತ್ತು ಶಿರಿಯಾದ ದಂಡೆಕೋರರು ಒಂದಾಗಿ ಹಾಗು ಅಸ್ಸಾದ್ ರೆಜಿಮ್ ಮತ್ತು ರಶಿಯಾ ಇನ್ನೊಂದು ಕಡೆಯಲ್ಲಿ ಒಟ್ಟಾಗಿ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಆದರೆ ಪ್ರೊಹಿಬಿಶನ್ ಆಫ್ ಕೆಮಿಕಲ್ ವೆಪನ್ಸ್ ನ ಸಂಸ್ಥೆಯು (ಓಪಿಸಿಡಬ್ಲ್ಯೂ), ಇದು ಆಂತರಿಕ ಸರಕಾರದ ಸಂಸ್ಥೆಯಾಗಿ ಅದರ ನಿದರ್ ಲ್ಯಾಂಡ್ ಮುಖ್ಯಸ್ಥರಾಗಿದ್ದು ಅದು ಕೆಮಿಕಲ್ ವೆಪನ್ಸ್ ಕನ್ವೆಂಶನ್ (ರಾಸಾಯನಿಕ ಶಸ್ತ್ರಾಸ್ತ್ರದ ಒಪ್ಪಂದ)ಕ್ಕನುಗುಣವಾಗಿ ಪ್ರೊತ್ಸಾಹಿಸಿ ಹಾಗೆಯೇ ಅವಲಂಬಿಸಿರುವ ಮಾರ್ಗದ ಯಥಾರ್ಥವನ್ನು ನೋಡುತ್ತಿದ್ದು ಅವರಿಗೆ ರಶಿಯಾದವರು ಮಾಡಿದ ಮಧ್ಯಸ್ತಿಕೆಯ ಒಪ್ಪಂದದ ಪ್ರಕಾರ ಅಸ್ಸಾದ್ ಸರಕಾರದಿಂದ ಶಿರಿಯನ್ ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಹಾಗು ಅದರ ಸಾಮರ್ಥ್ಯದ ಬಗ್ಗೆ ಕೆಲವು ಪತ್ರಗಳು ಕಳುಹಿಸಲಾಗಿದೆಯೆಂದು ಒಪ್ಪಿದೆ, ಇದರಿಂದಾಗಿ ಯುದ್ಧದ ವಾತಾವರಣದಲ್ಲಿದ್ದ ಭಾಗಗಳಿಗೆ ಇದೊಂದು ಸ್ವಲ್ಪ ಬಿಡುವು ಸಿಕ್ಕಿದಂತಾಗಿದೆ. ಆದರೆ ಇಂತಹ ಮಹತ್ವದ ಸಮಯದಲ್ಲಿ ರಶಿಯಾದ ರಾಷ್ಟ್ರಪತಿಯವರು ಮಾಡಿದ ವಕ್ತವ್ಯದ ಪ್ರಕಾರ ಅದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಯಾಕೆಂದರೆ ಅಸ್ಸಾದ್ ರಾಜ್ಯಕಾರಭಾರದವರು ಇಷ್ಟೊಂದು ಒಟ್ಟು ಹಾಕಿಟ್ಟ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹಾಗು ಅವುಗಳ ಸೌಲಭ್ಯಗಳನ್ನು ಬಿಟ್ಟು ಕೊಡುವ ಮಾತು ಅದಲ್ಲದೆ ಅದರ ಸಂಪೂರ್ಣ ಏರ್ಪಾಡಿನ ಬಗ್ಗೆ ಪಾಶ್ಚಿಮಾತ್ಯ ಪ್ರಭುತ್ವಗಳು ಶಂಕಿತರಾಗಿರುವರು. ಅಸ್ಸಾದ್ ರೆಜಿಮ್ ದವರು ಈ ಸಂಪುರ್ಣ ಒಟ್ಟು ಹಾಕಿದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಸಾಧಾರಣ ಒಂದು ವರ್ಷದ ಅವಧಿ ಆಗಬಹುದೆಂದು ಮತ್ತು ಅದರ ಖರ್ಚು ಸಾಧಾರಣವಾಗಿ ಒಂದು ಬಿಲಿಯನ್ ಡಾಲರ್ ಆಗಬಹುದೆಂದು ಹೇಳಿದ್ದಾರೆ. ಅದಲ್ಲದೆ ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರುವಂತಹದೆಂದರೆ ಯು ಎಸ್ ನ ಗತಕಾಲದ ಸೆಕ್ರೆಟರಿ ಆಫ್ ಸ್ಟೇಟ್ ಯಾಗಿರುವ ಹಾಗು ಅನುಭವಿ ಡಿಪ್ಲೊಮ್ಯಾಟ್ ನಾಗಿರುವ ಹೇನ್ರಿ ಕಿಸ್ಸಿಂಜರ್ ಅವರು  ಶಿರಿಯಾ ಮತ್ತು ರಶಿಯಾದ ಒಪ್ಪಂದದ ಬಗ್ಗೆ ತನ್ನ ಸಂದೇಹ ವ್ಯಕ್ತಪಡಿಸಿದ್ದಾರೆ. ಪುತೀನಿನವರು ಹೇಳಿದಂತೆ ಕಿಸ್ಸಿಂಜರ್ ಕೂಡ ಶಿರಿಯಾ ಕೇವಲ ೯೦% ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಿ ಉಳಿದುದನ್ನು ಹಾಗೆಯೇ ಇಡಲಿಕ್ಕಿದೆಯೆಂದು ಹೇಳಿರುವರು. ಹಾಗೆಯೇ ಈ ಉಳಿದಿರುವ ಒಟ್ಟು  ರಾಸಾಯನಿಕ ಶಸ್ತ್ರಾಸ್ತ್ರಗಳು ಕೂಡ ಭವಿಷ್ಯದಲ್ಲಿ ಅಪಾಯಕಾರಿಯಾಗಲಿಕ್ಕಿದೆಯೆಂದು ಹೇಳಿರುವರು. ಆದರೆ ಇವರು ಒಂದು ಕಡೆಯಲ್ಲಿ ಶಿರಿಯಾವನ್ನು ದೂರಿದರೂ ಇನ್ನೊಂದು ಕಡೆಯಲ್ಲಿ ಕಿಸ್ಸಿಂಜರ್, ರಶಿಯಾದವರು ಶಿರಿಯಾದವರೊಡನೆ ಮಾಡಿಕೊಂಡ ಒಪ್ಪಂದವನ್ನು ನಂಬುವದು ಯು ಎಸ್ ನ ಹಿತಕ್ಕಾಗಿರುವುದೆಂದು ಆಶ್ಚರ್ಯದ ಮಾತು ಹೇಳಿರುವರು.


 Bashar al-Assad – President of Syria

ಈ ಮಧ್ಯದ ಕಾಲದಲ್ಲಿ ಅಂದರೆ ಕಳೆದ ಶುಕ್ರವಾರ ದ ಯು ಎನ್ ಸೆಕ್ಯುರಿಟಿ ಕೌಂಸಿಲ್ ಏಕಮತದಿಂದ ಅಸ್ಸಾದ್ ರೆಜಿಮ್ ದವರಿಗೆ, ಓಪಿಸಿಡಬ್ಲ್ಯೂಹೇಳಿದಂತೆ ಕೇಳಬೇಕಾದದ್ದು ಕಾನೂನುಬದ್ಧವಾಗಿದೆಂದು ರೆಜ್ಯುಲುಶನ್ ಮಾಡಿತು. ಆದರೆ ಕಳೆದ ವಾರದಲ್ಲಾದ ರಶಿಯಾ ಮತ್ತು ಪಾಶ್ಚಿಮಾತ್ಯ ಪ್ರಭುತ್ವದೊಡನಾದ ಒಪ್ಪಂದವನ್ನು ಇತ್ಯರ್ಥ್ಯಗೊಳಿಸಲು ಮಾಡಿದ ರೆಜ್ಯುಲುಶನಿನ ಪ್ರಕಾರ ಶಿರಿಯನ್ ಸರಕಾರ ಸಮ್ಮತಿಸಲು ತಪ್ಪಿದರೆ ಅದಕ್ಕೆ ಸೂಕ್ತವಾಗಿ ದಂಡಿಸುವ ಅಧಿಕಾರ ರೆಜ್ಯುಲುಶನ್ ಪ್ರಕಾರ ಸಿಗುವುದಿಲ್ಲ. ಮಧ್ಯಂತರದ ಕಾಲದಲ್ಲಿ ಶಿರಿಯಾದ ಮೇಲೆ ಜಾರಿಗೆ ತಂದ ರೆಜ್ಯುಲುಶನ್ ನಂತೆ ಶಿರಿಯಾದಲ್ಲಿದ್ದ ಯು ಎನ್ ನ ಶಸ್ತ್ರಾಸ್ತ್ರಗಳ ನಿರೀಕ್ಷಿಕರು ಒಟ್ಟು ಏಳು ಸ್ಥಳಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮಾಡಲಾಗಿರುವುದಾಗಿ ತನ್ನ ಪರೀಕ್ಷಣೆಯನ್ನು ಮಾಡಿ ತಿಳಿಸಿದರು. ಅದರಲ್ಲಿ ಶಿರಿಯಾದ ನಾಗರಿಕರ ಮೇಲೆ ೨೧ ಅಗಷ್ಟ್ ನಂತರ ಮಾಡಲಾದ ಮೂರು ಆಕ್ರಮಣಗಳ ಘಟನೆಗಳನ್ನು ಕೂಡ ತಿಳಿಸಲಾಯಿತು. ಎಲ್ಲಾ ಪಕ್ಷದವರು ಕೂಡಿ ಮಿಡಲ್ ಈಸ್ಟೀನ ಮೇಲೆ ಬಂದ ಯುದ್ಧದ ಮೋಡವನ್ನು ಸರಿಸಲು ಒಮ್ಮತವಾಗಿದ್ದರೂ ಎರಡು ಪಕ್ಷಗಳಲ್ಲಿದ್ದ ತೀಕ್ಷ್ಣ ವಿರುದ್ದ ಅಭಿಪ್ರಾಯಗಳು ಇನ್ನು ಮುಂದೆಯೂ ಉಳಿಯಲಿಕ್ಕಿದೆ.
(ಮುಂದುವರಿಯಲಿದೆ...)

Saturday 19 October 2013

ಪರಮ ಪೂಜ್ಯ ಬಾಪೂರವರು ಕೊಟ್ಟ ೧೩ ಕಲಮಿನ (ನಿರ್ದಿಷ್ಟ) ಕಾರ್ಯಕ್ರಮಗಳು

ಹನ್ನೊಂದು ವರ್ಷಗಳ ಹಿಂದೆ ಅಂದರೆ ೩ ಅಕ್ಟೋಬರ್ ೨೦೦೨ರ ದಿನದಂದು, ಪರಮ ಪೂಜ್ಯ ಬಾಪೂರವರು ಹೃದಯ ಸ್ಪರ್ಷಿಸುವ ಹಾಗು ಪ್ರೇರಿಸುವ ಭಾಷಣವನ್ನು ಮಾಡಿದ್ದಾಗ ೧೩ ಕಲಮಿನ ಕಾರ್ಯಕ್ರಮಗಳನ್ನು ಕಲ್ಪಿಸಿದ್ದರು. ಈ ಕಾರ್ಯಕ್ರಮಗಳು ಇಂದಿಗೆ ಕಾರ್ಯರತವಾಗಿದ್ದು ಪರಮಪೂಜ್ಯ ಬಾಪೂರವರ ಮಾರ್ಗದರ್ಶನದಲ್ಲಿ ಸಫಲವಾಗಿ ನಡೆಯುತ್ತಿದ್ದು ಸಾವಿರಾರು ಶ್ರದ್ಧಾವಾನರು ಸ್ವಯಂ ಪ್ರೇರಿತರಾಗಿ ಪೂರ್ಣ ಶಕ್ತಿ ಹಾಗು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹನ್ನೊಂದು ವರ್ಷಗಳು ಕಳೆದರೂ ಅದರ ಮಹತ್ವ ಹೇತುಗರ್ಭಿತವಾಗಿ ಉಳಿದು ಮುಂದೆ ಬರುವ ವರ್ಷಗಳಲ್ಲಿ ಹಾಗೆಯೇ ಸಂಗತಮತವಾಗಿ ಮುಂದುವರಿಯಲ್ಲಿಕ್ಕಿದೆ.



ಆದ್ದರಿಂದ ಇವತ್ತಿನಿಂದ ಬಾಪೂರವರು ವಿವರಿಸಿದಂತೆ ಈ ಕಾರ್ಯಕ್ರಮದ ೧೩ ಕಲಮುಗಳು ಅಂತರ್ಭೂತವಾಗಿರುವ ಒಂದು ವಿಡಿಯೋ ಸಿರೀಜನ್ನು ನಾನು ಪ್ರಾರಂಭಿಸಲ್ಲಿದ್ದೇನೆ. ಇವತ್ತು ನಾನು ಈ ಪ್ರವಚನದ ಪೀಠಿಕೆಯನ್ನು ಪ್ರಸಿದ್ದ ಮಾಡಲಿದ್ದೇನೆ. ಮುಂದಕ್ಕೆ ನಾನು ಈ ಕಾರ್ಯಕ್ರಮದಲ್ಲಿದ್ದ ೧೩ ಕಲಮಿನ ಪ್ರತಿಯೊಂದು ಕಲಮಿನ ಬಗ್ಗೆ ಪ್ರದರ್ಶಿಸಲಿದ್ದೇನೆ.

Thursday 26 September 2013

ವಿಶ್ವದ ರಹಸ್ಯ ತ್ರಿವಿಕ್ರಮ - π (Pi)

ಕಳೆದ ಹಲವು ವಾರಗಳಿಂದ ಪರಮಪೂಜ್ಯ ಬಾಪೂರವರ ಪ್ರವಚನಗಳು ಶ್ರೀ ಅನಿರುದ್ಧ ಗುರುಕ್ಷೇತ್ರಮ್ ಮಂತ್ರದಲ್ಲಿರುವ ಅಂಕುರಮಂತ್ರದ ಭಾಗದಲ್ಲಿಯ ಮೂರನೇ ಪದವಾದ  "ಓಂ" ರಾಮವರದಾಯಿನಿ ಶ್ರೀಮಹಿಷಾಸುರಮರ್ದಿನೈ ನಮ: |" ದ ಮೇಲೆ ಆಗುತ್ತಿದೆ.


ಈ ಪ್ರವಚನದಲ್ಲಿ ಬಾಪೂರವರು ನಮಗೆ ಪರಮೇಶ್ವರಿ ಸೂತ್ರ  (algorithms) ಹಾಗು ಶುಭಚಿಹ್ನೆಗಳ ಪರಿಚಯವನ್ನು ಮಾಡಿಕೊಟ್ಟರು. ಈ ಸೂತ್ರದ ಮೂಲಕ ಬಾಪೂರವರು ನಮಗೆ ಸ್ಕಂದಚಿಹ್ನೆ, ಸ್ವಸ್ತಿಕ, ಸೃಷ್ಟಿಯ ಸೂರ್ಯ ಹಾಗು ಚಂದ್ರ, ದೀಪ, ಆರತಿಯಂತಹ ಅನೇಕ algorithms ಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಹೇಳಿದರು.

ಅದರನಂತರ ಜುಲೈ ತಿಂಗಳಿನಲ್ಲಿ ಬಾಪೂರವರು  ಪ್ರವಚನವನ್ನು ಆರಂಭ ಮಾಡುವ ಮೊದಲು ನಮಗೆ ಹೇಳಿದ್ದರು, "ಇವತ್ತು ನಮಗೆ ವಿಶ್ವದ ಬಹಳ ದೊಡ್ಡ ರಹಸ್ಯವನ್ನು ನೋಡಬೇಕಾಗಿದೆ" ಮತ್ತು ಈ ಪ್ರವಚನದಲ್ಲಿ ಬಾಪೂರವರು ಪ್ರಶ್ನೆ ಕೇಳಿದ್ದರು, ಗಣಿತದಲ್ಲಿರುವ Pi (π) constant (ಸ್ಥಿರಾಂಕ) ಹೇಗೆ ನಿರ್ಮಾಣವಾಯಿತು? ಮತ್ತು ಅದರ ಉತ್ತರ ಕೊಡುವಾಗ ತಿಳಿಸಿ ಹೇಳಿದರು, Pi (π) ಈ ಸ್ಥಿರಾಂಕ ಸೃಷ್ಟಿಯಲ್ಲಿ ಎಂದೂ ಬದಲಾಯಿಸುವುದಿಲ್ಲ ಹಾಗೆಯೇ ಈ ಸ್ಥಿರಾಂಕವೆಂದರೆ ವರ್ತುಳದ ಪರೀಘ ಭಾಗಿಲೆ ವ್ಯಾಸ. ಇದನ್ನು ಹೇಳುವಾಗ ಹನುಮಂತನೊಡನೆ ಇದರ ಸಂಬಂಧ ಹೇಗಿದೆ, ಹನುಮಂತನ ಈ ವರ್ತುಳದ ಸಂಬಂಧ ಹೇಗಾಗಿರುವುದನ್ನು ವಿವರಿಸುವಾಗ ಶ್ರೀಮಾರುತಿ ಸ್ತ್ರೋತ್ರದ" ಬ್ರಹ್ಮಾಂಡಭೋವತೆ ವೇಢೆ ವಜ್ರ ಪುಚ್ಛೆ ಕರು ಶಕೆ " ಈ ಸಾಲಿನ ಉಲ್ಲೇಖ ಮಾಡಿ ತಿಳಿಸಿದರು.  ಅದರ ನಂತರ ಈ ವರ್ತುಳಾಕೃತಿಯಾದ ಬ್ರಹ್ಮಾಂಡಕ್ಕೆ ಹನುಮಂತನ ಬೀಲದ ಸುತ್ತು ಹೇಗೆ ಚಿರಕಾಲದತನಕ ಇರುವುದನ್ನು ಕೂಡ ಬಾಪೂ ಸ್ಪಷ್ಟ ಮಾಡಿದರು.

ಹಿಂದೆ ಮಾಡಿರುವ ಪ್ರವಚನದಲ್ಲಿ ಅಂದರೆ ೮ ಆಗಷ್ಟ್ ೨೦೧೩ ರ ಪ್ರವಚನದಲ್ಲಿ ಬಾಪೂರವರು Pi (π) ಸ್ಥಿರಾಂಕದ ಮುನ್ನೂರ ಅರವತ್ತು ದಶಾಂಶದ ತನಕ ಬೆಲೆಯನ್ನು ತೋರಿಸಿಕೊಟ್ಟರು. ಈ ಬೆಲೆಯನ್ನು ಐದು-ಐದರ ಭಾಗ (set) ದಲ್ಲಿ ತೋರಿಸಿ ಅದು ಐದು-ಐದರ ಸೆಟ್ಟಿನಲ್ಲಿ ಯಾಕಿರುವುದನ್ನು ವಿಶದ ಮಾಡಿದರು.

ಆದರೆ ಅನೇಕರ ತಪ್ಪು ಕಲ್ಪನೆಯಿರುವುದೇನೆಂದರೆ ೨೨/೭ ಇದು Pi (π)  ಅದರ ಸರಿಯಾದ ಬೆಲೆ (exact value) ಆಗಿರುವದು. ಆದರೆ ಅದು ಹಾಗಿರದೆ  Pi (π) ಒಂದು ಸ್ಥಿರಾಂಕವಾಗಿದೆ. ’Pi or Π is an irrational number, which means that it cannot be expressed exactly as a ratio of any two integers. Fractions such as 22/7 are commonly used as an approximation of Π; no fraction can be its exact value.’ ಗಣಿತಜ್ನರು ಇಷ್ಟರವರೆಗೆ ದಶಾಂಶ ಚಿಹ್ನೆಯ ಮುಂದೆ ಐದು ದಶಲಕ್ಷ ಅಂಕೆಯ ತನಕ Pi (π) ಅದರ ಬೆಲೆಯನ್ನು ಕಂಡುಹಿಡಿದಿದ್ದಾರೆ.

ಭಾರತೀಯ ಅಧ್ಯಾತ್ಮ ಶಾಸ್ತ್ರದಲ್ಲಿ  Pi (π) ಈ ಸಂಜ್ನೆಯನ್ನು ತ್ರಿಪುರಾರಿ ತ್ರಿವಿಕ್ರಮ ಚಿಹ್ನೆಯಿಂದ ತೋರಿಸಲಾಗುತ್ತಿದೆ ಎಂದು ಬಾಪೂರವರು ವಿಶದ ಮಾಡಿದರು. ಇದನ್ನು ಹೇಳುವಾಗ ಬಾಪೂರವರು ಮುಂದೆ ಹೇಳಿದರು, "ಈ ಬ್ರಹ್ಮಾಂಡದ ಅಂದರೆ ಆದೀಮಾತೆಯು ನಿರ್ಮಾಣ ಮಾಡಿರುವ ವಿಶ್ವದ ವಿಸ್ತಾರವು ಸಂತುಲಿತವಾಗಿದೆ. ಅದರ ಮಿತಿ ಅಂದರೆ (ಲಿಮಿಟ್) ಹನುಮಂತನಾಗಿರುವನು. ಆದ್ದರಿಂದಲೇ ಅವನು ಪ್ರಥಮಪುತ್ರ (ದತ್ತಾತ್ರೇಯ ಸ್ವರೂಪ ಶುಭಪ್ರಕಾಶ) ನಾಗಿರುವನು. ಮತ್ತು ಈ ಬ್ರಹ್ಮಾಂಡದ ವ್ಯಾಸವು ಈ ತ್ರಿವಿಕ್ರಮ (ಹರಿಹರ) ಅಂದರೆ ಮಹಾವಿಷ್ನು ಮತ್ತು ಪರಮಶಿವ ಏಕತ್ರಿತವಾಗಿರುವದು; ಶ್ರೀರಾಮ ಮತ್ತು ಹನುಮಂತ ಏಕತ್ರಿತ; ಶೌರ್ಯ ಹಾಗು ಕ್ಷಮೆ ಏಕತ್ರಿತವಾಗಿರುವಂತೆ ಇರುವದು.

೨೨/೭ ಈ ಗಣಿತಸಂಖ್ಯೆಯು  Pi (π) ನ approximation ಅಂದರೆ ಅಂದಾಜು ಹಾಕಿದ ಬೆಲೆಯಾಗಿರುವದು ಅಂದರೆ ಭೌತಿಕ ಜಗತ್ತಿನ ಸಾಮಾನ್ಯ ಗಣಿತದಲ್ಲಿ ಅದನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಲಾಗುವದು.

ಬಾಪೂರವರು ಹೇಳಿದ ಪ್ರಕಾರ ತ್ರಿವಿಕ್ರಮವು ಅನಂತನಾಗಿರುವುದರಿಂದ Pi (π) ಗಣಿತಸಂಜ್ನೆಯ exact ಬೆಲೆಯನ್ನು ತೆಗೆಯಲು ಅಸಾಧ್ಯವಾಗಿದೆ.