Saturday, 19 October 2013

ಪರಮ ಪೂಜ್ಯ ಬಾಪೂರವರು ಕೊಟ್ಟ ೧೩ ಕಲಮಿನ (ನಿರ್ದಿಷ್ಟ) ಕಾರ್ಯಕ್ರಮಗಳು

ಹನ್ನೊಂದು ವರ್ಷಗಳ ಹಿಂದೆ ಅಂದರೆ ೩ ಅಕ್ಟೋಬರ್ ೨೦೦೨ರ ದಿನದಂದು, ಪರಮ ಪೂಜ್ಯ ಬಾಪೂರವರು ಹೃದಯ ಸ್ಪರ್ಷಿಸುವ ಹಾಗು ಪ್ರೇರಿಸುವ ಭಾಷಣವನ್ನು ಮಾಡಿದ್ದಾಗ ೧೩ ಕಲಮಿನ ಕಾರ್ಯಕ್ರಮಗಳನ್ನು ಕಲ್ಪಿಸಿದ್ದರು. ಈ ಕಾರ್ಯಕ್ರಮಗಳು ಇಂದಿಗೆ ಕಾರ್ಯರತವಾಗಿದ್ದು ಪರಮಪೂಜ್ಯ ಬಾಪೂರವರ ಮಾರ್ಗದರ್ಶನದಲ್ಲಿ ಸಫಲವಾಗಿ ನಡೆಯುತ್ತಿದ್ದು ಸಾವಿರಾರು ಶ್ರದ್ಧಾವಾನರು ಸ್ವಯಂ ಪ್ರೇರಿತರಾಗಿ ಪೂರ್ಣ ಶಕ್ತಿ ಹಾಗು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹನ್ನೊಂದು ವರ್ಷಗಳು ಕಳೆದರೂ ಅದರ ಮಹತ್ವ ಹೇತುಗರ್ಭಿತವಾಗಿ ಉಳಿದು ಮುಂದೆ ಬರುವ ವರ್ಷಗಳಲ್ಲಿ ಹಾಗೆಯೇ ಸಂಗತಮತವಾಗಿ ಮುಂದುವರಿಯಲ್ಲಿಕ್ಕಿದೆ.



ಆದ್ದರಿಂದ ಇವತ್ತಿನಿಂದ ಬಾಪೂರವರು ವಿವರಿಸಿದಂತೆ ಈ ಕಾರ್ಯಕ್ರಮದ ೧೩ ಕಲಮುಗಳು ಅಂತರ್ಭೂತವಾಗಿರುವ ಒಂದು ವಿಡಿಯೋ ಸಿರೀಜನ್ನು ನಾನು ಪ್ರಾರಂಭಿಸಲ್ಲಿದ್ದೇನೆ. ಇವತ್ತು ನಾನು ಈ ಪ್ರವಚನದ ಪೀಠಿಕೆಯನ್ನು ಪ್ರಸಿದ್ದ ಮಾಡಲಿದ್ದೇನೆ. ಮುಂದಕ್ಕೆ ನಾನು ಈ ಕಾರ್ಯಕ್ರಮದಲ್ಲಿದ್ದ ೧೩ ಕಲಮಿನ ಪ್ರತಿಯೊಂದು ಕಲಮಿನ ಬಗ್ಗೆ ಪ್ರದರ್ಶಿಸಲಿದ್ದೇನೆ.

No comments:

Post a Comment