Saturday, 11 January 2014

ದೈನಿಕ ಪ್ರತ್ಯಕ್ಷ - ನವ ವರ್ಷದ ವಿಶೇಷಾಂಕ ೨೦೧೪

ಭಾರತವು ಸರ್ವಾಧಿಕವಾಗಿ ತರುಣರ ದೇಶವಾಗುತ್ತ ಹೋಗುತ್ತಲಿದೆ. ಅಷ್ಟೇ ಪ್ರಮಾಣದಲ್ಲಿ ಈ ದೇಶದ ತರುಣರ ಸರ್ವಾಧಿಕ ಮೆಚ್ಚಿನ ಮಾಧ್ಯಮವಾಗಿರುವ ಸೋಶಲ್ ಮೀಡಿಯಾದ ಪ್ರಭಾವ ಪ್ರಚಂಡ ಪ್ರಮಾಣದಲ್ಲಿ ಹೆಚ್ಚುತ್ತಲಿದೆ. ದೇಶದ ನೆಟಿಝಂಸ್ ನ ಸಂಖ್ಯೆಯು ಕೋಟ್ಯಾವಧಿ ಪ್ರಮಾಣದಲ್ಲಿ ಹೆಚ್ಚುತ್ತಲ್ಲಿರುವಾಗ, ಸೋಶಲ್ ಮೀಡಿಯಾದ ಹೆಚ್ಚುತಿರುವ ಪ್ರಭಾವವನ್ನು ಯಾರೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ.

ತಂತ್ರಜ್ನಾನದ ವಿಕಾಸದ ಜೊತೆಗೆ ಅಧಿಕಾಧಿಕವಾಗಿ ವ್ಯಾಪಕವಾಗುತ್ತಿರುವ ಈ ಮಾಧ್ಯಮ, ಇವತ್ತು ದೇಶದಲ್ಲೆಲ್ಲ ಅಧಿರಾಜ್ಯವನ್ನು ಸ್ಥಾಪಿಸುತ್ತಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸೋಶಲ್ ಮೀಡಿಯಾದ ಅಪರಿಹಾರ್ಯ ಪರಿಣಾಮ ಬಹಳ ಸ್ಪಷ್ಟವಾಗಿ ತೋರಿಬರುತ್ತಿದೆ.

ಆದ್ದರಿಂದಲೇ ಈಗ ಸಮಯ ಬಂದಿದೆ, ಅದೆಂದರೆ ಬಹಳ ಕ್ಷಮತೆಯುಳ್ಳ ಈ ಮಾಧ್ಯಮವನ್ನು ಅಧಿಕ ಪೂರ್ತತೆಯಿಂದ, ಕಲ್ಪಕತೆಯಿಂದ ಹಾಗು ಹೊಣೆಗಾರಿಕೆಯಿಂದ ನೋಡಬೇಕಾಗಿದೆ. ಅದಕ್ಕಾಗಿಯೇ ಬರುತ್ತಲಿದೆ, "ದೈನಿಕ ಪ್ರತ್ಯಕ್ಷದ" ೧ ನೇ ಜನೇವರಿ ೨೦೧೪ ರ ನವವರ್ಷದ ವಿಶೇಷಾಂಕ, ಅದರ ವಿಷಯವಾಗಿದೆ....

ಸೋಶಲ್ ಮೀಡಿಯಾ - ಪರಿಪೂರ್ಣ ವ ಪರಿಪಕ್ವ ವಾಪರ್ " (ಸೋಶಲ್ ಮೀಡಿಯಾ-ಪರಿಪೂರ್ಣ ಹಾಗು ಪರಿಪಕ್ವದ ಬಳಕೆ)
 

Saturday, 30 November 2013

ಸಪ್ತಮಾತೃಕಾ ಪೂಜನೆ

ಗುರುವಾರ ದಿ. ೨೪ ಅಕ್ಟೋಬರ್ ೨೦೧೩ ರಂದು ಪರಮಪೂಜ್ಯ ಬಾಪೂರವರು ಒಂದು ಬಹಳ ಮಹತ್ವಪೂರ್ಣ ವಿಷಯದ ಮೇಲೆ ಪ್ರವಚನ ಕೊಟ್ಟರು. ಪ್ರತಿಯೊಬ್ಬ ತಾಯಿ-ತಂದೆಯವರಿಗೆ ತನ್ನ ಮಗುವಿನ ಜೀವನ ನಿರೋಗಿಯಾಗಿದ್ದು ಮತ್ತು ಅವರಿಗೆ ದೀರ್ಘಾಯುಷ್ಯ ಲಭಿಸಬೇಕೆಂದು ಇಚ್ಛೆ ಇರುತ್ತದೆ. ಈ ದೃಷ್ಟಿಕೋನದಿಂದ  ಪ್ರಾಚೀನ ಪರಂಪರೆಯ ಅನುಸಾರವಾಗಿ ಮನೆಯಲ್ಲಿ ಮಗು ಜನ್ಮಕ್ಕೆ ಬಂದಾಗ ಷಷ್ಟೀ ಪೂಜೆಯನ್ನು ಮಾಡಲಾಗುತ್ತಿತ್ತು. ಆದರೆ ಕಾಲದ ಪ್ರವಾಹದಲ್ಲಿ ತಪ್ಪು ರೂಢಿಯನ್ನು ಅನುಸರಿಸಿದ ಕಾರಣದಿಂದಾಗಿ ಈ ಪೂಜನೆಯ ಮಹತ್ವವು ಕೇವಲ ಕರ್ಮಕಾಂಡವಾಗಿಯೇ ಮರ್ಯಾದಿತವಾಗಿ ಉಳಿಯಿತು.ಈ ಪೂಜನೆಯ ಉದ್ದೇಶ, ಅದರ ಮಹತ್ವ ಹಾಗು ಪೂಜನೆ ಪದ್ಧತಿಯ ಮೂಲದ ಬಗ್ಗೆ ಪರಮಪೂಜ್ಯ ಬಾಪೂರವರು ಪ್ರವಚನದ ಮೂಲಕ ಮಾರ್ಗದರ್ಶನೆ ಮಾಡಿದರು.

ಪರಮಪೂಜ್ಯ ಬಾಪೂರವರು ಹೇಳಿದರು, ’ಬ್ರಹ್ಮರ್ಷಿಯವರಲ್ಲಿ ಮೊಟ್ಟಮೊದಲನೆಯ ಸಲ ತಾಯಿಯಾದ ಲೋಪಾಮುದ್ರೆಯು (ಅಗಸ್ತ್ಯ ಋಷಿಯವರ ಪತ್ನಿ) ಹಾಗು ಅರುಂಧತಿ (ವಸಿಷ್ಟ ಋಷಿಯವರ ಪತ್ನಿ) ಇವರಿಬ್ಬರು ಒಂದೇ ಸಮಯಕ್ಕೆ ಪ್ರಸೂತರಾದರು. ಅಗಸ್ತ್ಯ-ಲೋಪಾಮುದ್ರಾ ಹಾಗು ವಸಿಷ್ಟ-ಅರುಂಧತಿ, ಈ ನಾಲ್ವರು ತನ್ನ ತನ್ನ ಬಾಲಕರ ಮೊದಲನೇಯದಾಗಿ ಮಾಡಿದ ಪೂಜನೆಯನ್ನು ’ಸಪ್ತಷಷ್ಟೀ ಪೂಜನೆ’ಎಂದು ಸಂಭೋಧಿಸಲಾಯಿತು.

ಮಾತೃವಾತ್ಸಲ್ಯವಿಂದಾನಮ್ ದಲ್ಲಿ ನಾವು ಓದುತ್ತೇವೆ ಏನೆಂದರೆ ಶುಂಭ-ನಿಶುಂಭ ರಾಕ್ಷಸರ ಜೊತೆ ಯುದ್ಧಮಾಡುವ ಸಮಯ ಬಂದಾಗ ಮಹಾಸರಸ್ವತಿಯ ಸಹಾಯಕ್ಕಾಗಿ ದೇವರೆಲ್ಲರು ತಮ್ಮ-ತಮ್ಮ ಶಕ್ತಿಯನ್ನು ಕಳುಹಿಸುತ್ತಾರೆ. ಆ ಏಳು ಶಕ್ತಿಗಳೇ ಸಪ್ತಮಾತೃಕಾ ಹಾಗು ಅವರ ಸೇನಾಪತಿ ಕಾಲಿ. ಆ ಏಳು ಮಾತೃಕರ ಹೆಸರುಗಳು ಕೆಳಗಿನಂತಿವೆ.

೧) ಮಾಹೇಶ್ವರಿ - ಇವಳು ಪಂಚಮುಖಿಯಾಗಿರುವಳು ಹಾಗು ವೃಷಭದ ಮೇಲೆ ಆರೂಢವಾಗಿರುವಳು. ಅವಳ ಕೈಯಲ್ಲಿ ತ್ರಿಶೂಲವಿದೆ.

೨) ವೈಷ್ನವಿ - ಇವಳು ಗರುಡದ ಮೇಲೆ ಆರೂಢವಾಗಿರುವಳು, ಅವಳ ಕೈಯಲ್ಲಿ ಚಕ್ರ, ಗದೆ ಹಾಗು ಪದ್ಮವಿದೆ.

೩) ಬ್ರಮ್ಹಾಣಿ - ಇವಳು ನಾಲ್ಕು ಮುಖದವಳಾಗಿ ಹಂಸದ ಮೇಲೆ ಆರೂಢವಾಗಿದ್ದಾಳೆ. ಅವಳ ಕೈಯಲ್ಲಿ ಕಮಂಡಲು ಹಾಗು ಅಕ್ಷಮಾಲೆಯಿದೆ.
 
೪) ಐಂದ್ರಿ - ಇವಳು ಇಂದ್ರನ ಶಕ್ತಿಯಾಗಿರುವಳು ಹಾಗು ಐರಾವತದ ಮೇಲೆ ಆರೂಢವಾಗಿರುವಳು.ಅವಳ ಕೈಯಲ್ಲಿ ವಜ್ರವಿದೆ.
 
೫) ಕೌಮಾರಿ - ಇವಳು ಆರು ಮುಖದವಳಾಗಿ ಮತ್ತು ನವಿಲಿನ ಮೇಲೆ ಆರೂಢವಾಗಿರುವಳು.
 
೬) ನಾರಸಿಂಹಿ - ಇವಳ ಮುಖ ಸಿಂಹದ್ದಾಗಿದೆ. ಅವಳ ಕೈಯಲ್ಲಿ ಗದೆ ಮತ್ತು ಖಡ್ಗವಿದೆ.
 
೭) ವಾರಾಹಿ - ಇವಳ ಮುಖ ವರಹದ್ದಾಗಿದೆ (ಹಂದಿ) ಹಾಗು ಇವಳು ಬಿಳಿ ಬಣ್ಣದ ಕೋಣದ ಮೇಲೆ ಆರೂಢವಾಗಿರುವಳು. ಅವಳ ಕೈಯಲ್ಲಿ ಚಕ್ರ, ಖಡ್ಗ, ಕತ್ತಿ ಮತ್ತು ಢಾಲು ಇದೆ.

ಈ ಸಪ್ತಮಾತೃಕರವರ ಪೂಜನೆಯೇ ’ಸಪ್ತಷಷ್ಟೀ ಪೂಜನೆ ". ಸ್ವತ: ಬಾಪೂರವರ ಜನ್ಮದ ನಂತರ ಅವರ ಮನೆಯಲ್ಲಿ ಈ ಪೂಜೆಯನ್ನು ಮೂಲ ಪದ್ಧತಿಯನುಸಾರವಾಗಿ ಮಾಡಲಾಯಿತು. ಈ ಪೂಜೆಯಲ್ಲಿ ಉಪಯೋಗಿಸಲಾಗುವ ಸಪ್ತಮಾತೃಕೆಯವರ ಚಿತ್ರವನ್ನು ಬಾಪೂರವರು ೨೪ ಅಕ್ಟೋಬರ್ ೨೦೧೩ ರಂದು ಪ್ರವಚನದ ಸಮಯದಲ್ಲಿ ಎಲ್ಲಾ ಶ್ರದ್ಧಾವಾನರಿಗೆ ತೋರಿಸಿದರು. ಈ ಪೂಜೆಯ ಮಹತ್ವವನ್ನು ಹೇಳುವಾಗ ಬಾಪೂ ಮುಂದೆ ಹೇಳಿದರು, "ಶುಂಭ ಹಾಗು ನಿಶುಂಭರ ವಧೆಯಾದ ನಂತರ ಅದರಲ್ಲಿ ಶುಂಭನ ಮಗನಾದ ದುರ್ಗಮನು ಮಾತ್ರ ಉಳಿದನು. ಅವನಿಗೆ ಕಾಗೆಯ ರೂಪವನ್ನು ಕೊಟ್ಟರೆಂದು ಅವನು ಉಳಿದವನಲ್ಲ, ಆದರೆ ಅವನನ್ನು ನೋಡಿದಾಗ ಈ ಏಳು ಸೇನಾಪತಿಯವರ ಮಾತೃಭಾವ ಜಾಗೃತವಾಯಿತು ಆದ್ದರಿಂದ ಅವರು ಮಾತೃತ್ವದ ಭಾವದಿಂದ ಶತ್ರುವಿನ ಬಾಲಕನಿಗೂ ಜೀವದಾನವನ್ನು ನೀಡಿದರು. ಅವರ ಈ ಕೃತ್ಯದಿಂದ ಪ್ರಸನ್ನವಾಗಿ ಮಹಾಸರಸ್ವತಿಯು ಅವರಿಗೆ ಆಶೀರ್ವಾದ ಕೂಟ್ಟರು, " ಯಾವ ಮಾನವನು ಅವರ ಮನೆಯಲ್ಲಿ ಮಗು ಜನ್ಮಕ್ಕೆ ಬಂದ ನಂತರ ಅವರ (ಅಂದರೆ ಈ ಏಳು ಮಾತೃಕರವರ) ಪೂಜನೆಯನ್ನು ಮಾಡುವನು, ಆ ಮಗುವಿನ ನೀವು ರಕ್ಷಣಕರ್ತ್ಯ ರಾಗುವಿರಿ " ಆದ್ದರಿಂದ ಮನೆ-ಮನೆಯಲ್ಲಿ ಮಗು ಜನ್ಮಕ್ಕೆ ಬಂದ ನಂತರ ಈ ಸಪ್ತಮಾತೃಕರವರ ಪೂಜನೆಯನ್ನು ಮಾಡುವ ವಾಡಿಕೆ ಆರಂಭವಾಯಿತು.’
ಅದರ ನಂತರ ಬಾಪೂರವರು ಈ ಪೂಜೆಯನ್ನು ಹೇಗೆ ಮಾಡಬೇಕು ಅದರ ಬಗ್ಗೆ ಸವಿಸ್ತರವಾದ ಮಾಹಿತಿಯನ್ನು ಕೊಟ್ಟರು.
 

ಪೂಜೆ ಮಾಡುವ ಕ್ರಮ:
೧) ಒಂದು ಮಣೆ ತೆಗೆದುಕೊಳ್ಳಬೇಕು. ಅದರ ಕೆಳಗೆ ’ಸ್ವಸ್ತಿಕ’ಅಥವಾ ’ಶ್ರೀ’ ರಂಗೋಲಿಯಿಂದ ತೆಗೆಯಬೇಕು ಯಾಕೆಂದರೆ ಇವು ಮಂಗಲಚಿಹ್ನಗಳಾಗಿವೆ. ಪೂಜೆಯ ಸಾಮಗ್ರಿಗಳನ್ನೆಲ್ಲ ಮಣೆಯ ಮೇಲೆಯೇ ಬಿಡಿಸಿ ಇಡಬೇಕು, ಚೌರಂಗದ ಮೇಲೆ ಅಥವಾ ಟೇಬಲಿನ ಮೇಲೆ ಮಾಡಬಾರದು ಯಾಕೆಂದರೆ ನಮ್ಮ ಮೋಠಿ  ಆಯೀಗೆ
(ದೊಡ್ಡ ತಾಯಿ - ಮಹಿಷಾಸುರಮರ್ದಿನೀ) ನಾವೆಲ್ಲರು ಅವಳ ಚಿಕ್ಕ ಮಕ್ಕಳೇ ಆಗಿರುವೆವು. ಮಗು ತನ್ನ ಮೊದಲ ಹೆಜ್ಜೆಯನ್ನು ಮಣೆಯ ಎತ್ತರದಷ್ಟೇ ಇಡುವದು ಆದ್ದರಿಂದ ಪೂಜೆ ಮಾಡಲು ಮಣೆಯನ್ನೇ ಉಪಯೋಗಿಸಬೇಕು.

೨) ಮಣೆಯ ಮೇಲೆ ಶಾಲು/ಸೊವಳ (ರೇಶ್ಮಿ ವಸ್ತ್ರ)/ಚದ್ದರು ಹಾಕಬೇಕು. ಮಣೆಯ ಸುತ್ತಲು ರಂಗೋಲಿ ಹಾಕಬಹುದು.

೩) ಒಂದು ಹರಿವಾಣದಲ್ಲಿ ಗೋದಿಯನ್ನು ತುಂಬಿ ಸಮಾನಾಗಿ ಹಾಕಬೇಕು.

೪) ಅದರ ಮದ್ಯದಲ್ಲೊಂದು ಮತ್ತು ಅದರ ಸುತ್ತಲು ಆರು ಅಡಿಕೆಯನ್ನಿಡಬೇಕು.

೫) ಮಣೆಯ ಮೇಲೆ ಹರಿವಾಣದ ಎರಡು ಬದಿಯಲ್ಲಿ ಎರಡು ತೆಂಗಿನಕಾಯಿಗಳನ್ನಿಡಬೇಕು. ತೆಂಗಿನಕಾಯಿಗೆ ಅರಶಿನ ಮತ್ತು ಕುಂಕುಮ ಹಚ್ಚಬೇಕು.

೬) ಎರಡು ತೆಂಗಿನಕಾಯಿಯ ಒಳಗಿನ ಬದಿಗೆ, ಹರಿವಾಣದ ಮುಂದೆ ಕೆಂಪು ಅಕ್ಷತದ ರಾಶಿಯನ್ನು ಮಾಡಿಡಬೇಕು. ಈ ರಾಶಿಗಳೆಂದರೆ ದೇವರ ವೈದ್ಯರಾಗಿದ್ದ ಅಶ್ವಿನಿಕುಮಾರರ ಪತ್ನಿಯರಾಗಿರುವರು. ಇವರು ಅವಳಿ ಜವಳಿ ಸೋದರಿಗಳು ಹಾಗು ಅವರಿಗೆ ಜರಾ ಹಾಗು ಜೀವಂತಿಕಾ ಎಂದು ಹೆಸರುಗಳಿವೆ. ಇವರಿಬ್ಬರು ಅಶ್ವಿನಿಕುಮಾರರಂತೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರರು ಮತ್ತು ಇವರಿಬ್ಬರೂ ಮಗು ಚಿಕ್ಕದಿರುವಾಗ ಅವರ ಜೊತೆ ಆಡುತ್ತಿರುತ್ತಾರೆ, ಅವರ ಜೋಪಾನ ಮಾಡುತ್ತಾರೆಂಬ ಧಾರಣೆಯಿದೆ. ಮೂರು ತಿಂಗಳಾಗುವ ತನಕ ಮಕ್ಕಳು ಯಾವಾಗ ನಗುವರು ಆಗ, ಅವರ ಈ ಹಾಸ್ಯವು ಇವರಿಬ್ಬರಿಗೆ ಕೊಟ್ಟ ಪ್ರತಿಸಾದವೆನ್ನುತ್ತಾರೆ.

ಅ) ಜರಾವೆಂದರೆ ಮುಪ್ಪುತನವನ್ನು ಕೊಡುವವಳು, ಮಗು ತುಂಬಾ ಮುಪ್ಪಾಗುವ ತನಕ ಬಾಳಲೆಂದು ಇವಳು ಆಶೀರ್ವಾದ ಕೊಡುವಳು.

ಬ) ಜೀವಂತಿಕಾವೆಂದರೆ ಮಗುವಿನ ಜೀವನದ ಅಂತ್ಯತನಕ ಅದರ ಆರೋಗ್ಯವನ್ನು ಕಾಪಾಡುವೆನೆಂದು ಆಶೀರ್ವಾದ ಕೊಡುವವಳು.

೭) ಮಣೆಯ ಮೇಲೆ ನಾಲ್ಕು ದಿಕ್ಕಿಗೆ ನಾಲ್ಕು ವೀಳ್ಯವನ್ನಿಡಬೇಕು. ಅದರ ಮೇಲೆ ಅಡಿಕೆಯನ್ನಿಡಿ. ಪೂಜನೆಯಲ್ಲಿ ವೀಳ್ಯವನ್ನು ಇಡುವುದೆಂದರೆ ದೇವರಿಗೆ ’ಆವ್ಹಾನ"ವನ್ನು ಮಾಡುವದು. ವೀಳ್ಯ-ಅಡಿಕೆಯಿಂದ ಮಾಡಿದ ಆವ್ಹಾನವು ಯಾವುದೇ ಮಂತ್ರವನ್ನು ಹೇಳದೆ ಮಾಡಿದ ಆವ್ಹಾನವಾಗಿರುವದು ಮತ್ತು ಇದನ್ನು ಸಾಕ್ಷಾತ್ ಆದಿಮಾತೆಯ ಸ್ವರೂಪವಾಗಿದ್ದ ಕಾತ್ಯಾಯನಿ ಹೇಳಿರುವರು. ವೀಳ್ಯವನ್ನಿಟ್ಟರೆ ದೇವರಿಗೆ ಆಮಂತ್ರಣವು ತಲುಪುವದು ಕಾರಣ ಇದು ಕಾತ್ಯಾಯನಿಯ ಸಂಕಲ್ಪವಾಗಿದೆ.

೮) ಹರಿವಾಣದ ಹಿಂದಿನ ಬದಿಗೆ ಹರಿವಾಣಕ್ಕೆ ತಾಗಿಸಿ ಸಪ್ತಮಾತೃಕೆಯ ಫೋಟೋವನ್ನಿಡಬೇಕು.
 

ಪೂಜನೆಯ ವಿಧಿಗಳು
೧) ಈ ಪೂಜೆಯನ್ನು ಸೂರ್ಯೋದಯದಿಂದ ಹಾಗು ಸೂರ್ಯಾಸ್ತದ ವಳಗೆ ಮಾಡಬೇಕು. ಯಾವುದೇ ದಿವಸದಂದು ಈ ಪೂಜೆಯನ್ನು ಮಾಡಬಹುದು. ಅಮಾವಾಸ್ಯೆಯ ದಿವಸದಂದು ಮಾಡಿದರೂ ಆಗಬಹುದು.

೨) ಮಗು ಜನ್ಮಕ್ಕೆ ಬಂದ ನಂತರವೇ ಇದರ ಮೊದಲನೇಯ ಪೂಜೆಯನ್ನು ಮಗುವಿನ ತಂದೆಯೇ ಮಾಡಬೇಕು. ಈ ಪೂಜೆಯನ್ನು ಮಾಡುವಾಗ ತಂದೆಯು ಮಗುವನ್ನು ಸ್ವಲ್ಪ ಸಮಯಕ್ಕಾದರು ತನ್ನ ಮಡಿಲಿನಲ್ಲಿ ತೆಗೆದುಕೊಂಡು ಕೂಡಬೇಕು. ಈ ಪೂಜೆಯನ್ನು ಮಗುವಿನ ಜನ್ಮದ ಮೂರು ದಿವಸದ ನಂತರ ಯಾವಾಗಲು ಕೂಡ ಮಾಡಬಹುದು.

೩) ಪೂಜೆಯನ್ನು ಆರಂಭಿಸುವಾಗ ಸರ್ವಪ್ರಥಮವಾಗಿ ’ವಕ್ರತುಂಡ ಮಹಾಕಾಯ...’ ಈ ಶ್ಲೋಕವನ್ನು ಹೇಳಬೇಕು.

೪) ಅದರ ನಂತರ ಗುರುಕ್ಷೇತ್ರಮ್ ಮಂತ್ರವನ್ನು ಹೇಳಬೇಕು. ಹಾಗು ಅದರ ನಂತರ ಸದ್ಗುರುವಿನ ನಾಮಸ್ಮರಣೆ ಆತ್ಯಾವಶ್ಯಕವಾಗಿದೆ.

೫) ವೀಳ್ಯದ ಮೇಲಿರುವ ಅಡಿಕೆಗೆ ಅರಶಿನ, ಕುಂಕುಮ, ಅಕ್ಷತೆ ಹಾಗು ಗಂಧವನ್ನು ಅರ್ಪಿಸಬೇಕು. ಕುಂಕುಮವನ್ನು ಸಾದ್ಯವಾದಲ್ಲಿ ಒದ್ದೆ ಮಾಡಿ ಹಚ್ಚಿರಿ. ಅದರ ನಂತರ ಹರಿವಾಣದ ಮೇಲಿರುವ ಅಡಿಕೆಗೆ ಅರಶಿನ, ಕುಂಕುಮ, ಅಕ್ಷತೆ ಹಾಗು ಗಂಧವನ್ನು ಅರ್ಪಿಸಬೇಕು..

೬) ಅದರ ನಂತರ ಮಾತೃವಾತ್ಸಲ್ಯವಿಂದಾನಮ್ ನಲ್ಲಿದ್ದ ’ನವಮಂತ್ರಮಾಲಾ ಸ್ತ್ರೋತ್ರಮ್ ನ’ ಪಠಣವನ್ನು ಮಾಡುತ್ತಾ ಪೂಜೆಯನ್ನು ಮಾಡಬೇಕು. ಈ ಸ್ತ್ರೋತ್ರವನ್ನು ಒಂದು ಸಲ ಅಥವಾ ನಿಮಗೆ ಬೇಕಾದಷ್ಟು ಸಲ ಹೇಳಿದರು ಆಗಬಹುದು.

೭) ಸ್ತ್ರೋತ್ರ ಪಠಣ ಮಾಡುವಾಗ ಗಂಧಾಕ್ಷತೆ ಸುಗಂಧಿತ ಹೂವನ್ನು ಅರ್ಪಣೆ ಮಾಡಬೇಕು. ಸುಗಂಧಿತ ಪುಷ್ಪಗಳಿಲ್ಲದಿದ್ದರೆ ಸಾಧಾರಣ ಹೂವು ಕೂಡ ಆಗಬಹುದು. ಹೂವನ್ನು ಅಡಿಕೆಯ ಮೇಲೆ, ಸಪ್ತಮಾತೃಕೆಯ ಚಿತ್ರಕ್ಕೆ ಹಾಗು ಜರಾ ಮತ್ತು ಜೀವಂತಿಕೆಯ ಪ್ರತೀಕವಾಗಿರುವ ಅಕ್ಷತದ ರಾಶಿಯ ಮೇಲೂ ಅರ್ಪಣೆ ಮಾಡಬೇಕು. ಸ್ತ್ರೋತ್ರವನ್ನು ಪಠಣೆ ಮಾಡುತ್ತಿರುವಾಗ ಕೇವಲ ಮೊದಲನೇಯ ಆವರ್ತನೆಯ ಸಮಯದಲ್ಲಿ ಮಾತ್ರ ಹೂವನ್ನು ಅರ್ಪಣೆ ಮಾಡಬೇಕು.

೮) ಅದರ ನಂತರ ದೀಪ ಮತ್ತು ಧೂಪವನ್ನು ಮಾಡಬೇಕು.

೯) ಅದರ ನಂತರ ನೈವೇದ್ಯದ ಏಳು ಬಟ್ಟಲುಗಳನ್ನು ಸಿದ್ಧ ಮಾಡಿ ಪೂರಣ್ - ವರಣ್ (ಬೇಳೆಯ ಸಿಹಿ ಮುದ್ದೆ-ಅನ್ನ ಮತ್ತು ಬೇಳೆಸಾರು) ಅರ್ಪಣೆ ಮಾಡಬೇಕು. ಅದರ ಜೊತೆ ಬೆಲ್ಲ-ಕೊಬ್ಬರಿಯ ಒಂದು ಭಾಗ (ಒಣಗಿದ ತೆಂಗಿನಕಾಯಿ) ದ ನೈವೇದ್ಯ ಅರ್ಪಣೆ ಮಾಡಬೇಕು. ಯಾವುದೇ ಕಾರಣದಿಂದಾಗಿ ನೈವೇದ್ಯದ ಏಳು ಬಟ್ಟಲುಗಳನ್ನು ಅರ್ಪಣೆ ಮಾಡಲು ಅಸಾಧ್ಯವಾದರೆ, ಕೇವಲ ಬೆಲ್ಲ-ಕೊಬ್ಬರಿಯ ನೈವೇದ್ಯವನ್ನು ಅರ್ಪಣೆ ಮಾಡಬಹುದು.
 
೧೦) ನೈವೇದ್ಯ ಅರ್ಪಣೆ ಮಾಡಿದ ಮೇಲೆ ಎಲ್ಲಕ್ಕಿಂತ ಕೊನೆಗೆ ಸಾಧ್ಯವಾದಲ್ಲಿ ಕಮಲದ ಹೂವನ್ನು ಅರ್ಪಣೆ ಮಾಡಬೇಕು ಯಾಕೆಂದರೆ ’ಕಮಲ’ ವು ಈ ದೇವತೆಗಳ ಮೆಚ್ಚಿನ ಪುಷ್ಪವಾಗಿದೆ.’


ಇದರ ನಂತರ ಬಾಪೂ ಹೇಳಿದರು, ’ಮಗು ಜನ್ಮಕ್ಕೆ ಬಂದ ಮೇಲೆ ಮಾಡುವ ಮೊದಲ ಪೂಜೆಯನ್ನು ಮಗುವಿನ ತಂದೆಯೇ ಮಾಡಬೇಕು.ಪೂಜೆಯು ನಡೆಯುತ್ತಿರುವಾಗ ಮಗುವಿನ ತಾಯಿಯು ಸ್ವಲ್ಪ ಸಮಯಕ್ಕಾಗಿ ಪೂಜೆಯಲ್ಲಿ ಕುಳಿತುಕೊಳ್ಳಬೇಕು ಹಾಗು ಪೂಜೋಪಚಾರವನ್ನು ಮಾಡಬೇಕು. ಆದರೆ ಮೂಲ ಪೂಜೆಯನ್ನು ಮಾತ್ರ ಮಗುವಿನ ತಂದೆಯೇ ಮಾಡಬೇಕು. ಯಾವುದಾದರು ಕಾರಣದಿಂದಾಗಿ ಮಗುವಿನ ತಂದೆ ಪೂಜೆಯ ಸಮಯದಲ್ಲಿ ಉಪಸ್ಥಿತವಾಗಿರದಿದ್ದರೆ ಪಿತಾಮಹ (ಮಗುವಿನ ತಂದೆಯ ತಂದೆ) ಅಥವಾ ಮಾತಾಮಹ (ಮಗುವಿನ ತಾಯಿಯ ತಂದೆ) ಈ ಪೂಜೆಯನ್ನು ಮಾಡಬಹುದು. ಒಂದು ವೇಳೆ ಅವರು ಕೂಡ ಇರದಿದ್ದರೆ ಆಗ ಹತ್ತಿರದ ಸಂಬಂಧಿಕರಾದ ಪುರುಷ ವ್ಯಕ್ತಿಯು ಈ ಪೂಜೆಯನ್ನು ಮಾಡಬೇಕು. ಮಗು ದೊಡ್ಡದಾದ ಮೇಲೆ ಮಾತ್ರ ಈ ಪೂಜೆಯನ್ನು ತಾಯಿ ತನ್ನ ಬೆಳೆದಿರುವ ಮಗುವಿಗಾಗಿ ಎಂದು ಕೂಡ ಮಾಡಬಹುದು.ಇದಕ್ಕಾಗಿ ವಯಸ್ಸಿನ ಯಾವುದೇ ಪ್ರಕಾರದ ಬಂಧನವಿಲ್ಲ. ನೀವು ನಿಮ್ಮ ಮಗುವಿನ ಈ ಪೂಜೆಯನ್ನು ಎಷ್ಟು ಸಲ ಕೂಡ ಮಾಡಬಹುದು.ಅವರ ಹುಟ್ಟುಹಬ್ಬದ ದಿವಸದಂದು ಮಾಡಿ, ಮಗು ಕಾಯಿಲೆಯಿಂದ ಒಳ್ಳೆದಾದ ಮೇಲೆ ಮಾಡಿ, ಅಥವಾ ಇನ್ನಿತರ ಯಾವುದೇ ದಿವಸದಂದು ಮಾಡಬಹುದು. ಇಂತಹ ಸಮಯದಲ್ಲಿ ಈ ಪೂಜೆಯನ್ನು ತಾಯಿ-ತಂದೆ ಒಬ್ಬರೇ ಅಥವಾ ಇಬ್ಬರು ಒಟ್ಟಾಗಿ ಕೂಡಿ ಮಾಡಬಹುದು. ಹಾಗೆಯೇ ಒಮ್ಮೆ ಪೂಜೆ ಮಾಡಿದ ಮೇಲೆ ಪುನ: ಪೂಜೆ ಮಾಡಲೇ ಬೇಕೆಂದಿಲ್ಲ. ಒಂದು ವೇಳೆ ಮನೆಯಲ್ಲಿ ಒಬ್ಬರಿಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪ್ರತಿಯೊಬ್ಬರಿಗಾಗಿ ಬೇರೆ ಬೇರೆ ಪೂಜೆ ಮಾಡಿದ್ದಲ್ಲಿ ಅದು ಬಹಳ ಶ್ರೇಯಸ್ಕರ. ಆದರೆ ಯಾವುದೇ ಅಪರಿಹಾರ್ಯ ಕಾರಣದಿಂದಾಗಿ ಸಮಯ ಸಿಗದಿಲ್ಲದಿದ್ದರೆ ಎಲ್ಲಾ ಮಕ್ಕಳಿಗಾಗಿ ಕೂಡಿ ಒಂದು ಪೂಜೆ ಮಾಡಿದರು ಆಗಬಹುದು.


ಧನಲಕ್ಷ್ಮಿ ಪೂಜನೆಯ ದಿವಸ ಅಂದರೆ ಶುಕ್ರವಾರ, ೧ ನವೆಂಬರ್ ೨೦೧೩ ರಂದು ಸಪ್ತಮಾತೃಕೆಯ ಫೋಟೋ ಎಲ್ಲಾ ಶ್ರದ್ಧಾವಾನರಿಗಾಗಿ ಶ್ರೀಹರಿಗುರುಗ್ರಾಮದಲ್ಲಿ ಉಪಲಬ್ಧವಾಗಿರುತ್ತದೆ.

ಅದೇ ರೀತಿ ಸಪ್ತಮಾತೃಕೆಯ ಪೂಜನೆಯನ್ನು ಮಾಡಲು ಅಗತ್ಯವಿರುವ ’ನವಮಂತ್ರಮಾಲಾ ಸ್ತ್ರೋತ್ರಮ್’ನ ಸಂಸ್ಕೃತದ ಪದಛೇದ ಮಾಡಿದ ಪ್ರತಿಯು ಹಾಗೆಯೇ ಮರಾಠಿ ಮತ್ತು ಹಿಂದಿಯಲ್ಲಿ ಕೂಡ  ಸ್ತ್ರೋತ್ರದ ಪ್ರತಿಗಳನ್ನು ಈ ಪೋಸ್ಟ್ ನಲ್ಲಿ ಜೋಡಿಸಲಾಗಿದೆ. ಪರಮಪೂಜ್ಯ ಬಾಪೂರವರು ಹೇಳಿದ ಪ್ರಕಾರ ಪೂಜೆಯ ಸಮಯದಲ್ಲಿ ಈ ಸ್ತ್ರೋತ್ರವನ್ನು ಸಂಸ್ಕೃತ, ಮರಾಠಿ ಹಾಗು ಹಿಂದಿಯ ಯಾವುದೇ ಒಂದು ಭಾಷೆಯಲ್ಲಿ ಹೇಳಿದರು ಆಗಬಹುದು.


|| ಹರಿ ಓಂ ||
ಅಥನವಮಂತ್ರಮಾಲಾಸ್ತ್ರೋತ್ರಮ್ |
(ಪದಛೇದ)

ಯಾ ಮಾಯಾ ಮಧುಕೈಟಭ-ಪ್ರಮಥನೀ ಯಾ ಮಹಿಷೋನ್ಮೂಲಿನೀ
ಯಾ ಧೂಮ್ರೇಕ್ಷಣ-ಚಂಡಮುಂಡ-ಮಥನೀ ಯಾ ರಕ್ತಬೀಜಾಶನೀ |
ಶಕ್ತಿ: ಶುಂಭನಿಶುಂಭ-ದೈತ್ಯ-ದಲಿನೀ ಯಾ ಸಿದ್ಧಿಲಕ್ಷ್ಮೀ: ಪರಾ
ಸಾ ಚಂಡಿ ನವ-ಕೋಟಿ-ಮೂರ್ತಿ-ಸಹಿತಾ ಮಾಂ ಪಾತು ವಿಶ್ವೇಶ್ವರೀ ||

ಸ್ತುತಾ ಸುರೈ: ಪೂರ್ವಮ್-ಅಭೀಷ್ಟ-ಸಂಶ್ರಯಾತ್ ತಥಾ ಸುರೇಂದ್ರೇಣ ದಿನೇಷು ಸೇವಿತಾ |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಯಾ ಸಾಂಪ್ರತಂ ಚೋದ್ಧತ-ದೈತ್ಯ-ತಾಪಿತೈ: ಅಸ್ಮಾಭಿರೀಶಾ ಚ ಸುರೈರ್-ನಮಸ್ಯತೆ |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಯಾ ಚ ಸೃತಾ ತತ್ಕ್ಷಣಮೇವ ಹಂತಿ ನ: ಸರ್ವಾಪದೋ ಭಕ್ತಿ-ವಿನಮ್ರ-ಮೂರ್ತಿಭಿ: |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಸರ್ವಬಾಧಾಪ್ರಶಮನಮ್ ತ್ರೈಲೋಕ್ಯಸ್ಯ ಅಖಿಲೇಶ್ವರಿ |
ಏವಮೇವ ತ್ವಯಾ ಕಾರ್ಯಮ್ ಅಸ್ಮದ್-ವೈರಿ-ವಿನಾಶನಮ್ ||

ಸರ್ವಮಂಗಲಮಾಂಗಲ್ಯೆ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರಿ ನಾರಾಯಣಿ ನಮೋಸ್ತು ತೆ ||

ಸೃಷ್ಟಿ-ಸ್ಥಿತಿ-ವಿನಾಶಾನಾಮ್ ಶಕ್ತಿಭೂತೆ ಸನಾತನಿ |
ಗುಣಾಶ್ರಯೆ ಗುಣಮಯೆ ನಾರಾಯಣಿ ನಮೋಸ್ತು ತೆ ||

ಶರಣಾಗತ-ದೀನಾರ್ತ-ಪರಿತ್ರಾಣ-ಪರಾಯಣೆ |
ಸರ್ವಸ್ಯಾರ್ತಿಹರೆ ದೇವಿ ನಾರಾಯಣಿ ನಮೋಸ್ತು ತೆ ||

ಸರ್ವಸ್ವರೂಪೆ ಸರ್ವೇಶೆ ಸರ್ವಶಕ್ತಿ-ಸಮನ್ವಿತೆ |
ಭಯೆಭ್ಯಸ್-ತ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತು ತೆ ||
 _____________________________________________________


|| ಹರಿ ಓಂ ||
|| ಅಥ ನವಮಂತ್ರಮಾಲಾಸ್ತೋತ್ರಮ್ ||
(ಮರಾಠಿ)

ಜೀ ಮಾತಾ ಮಧು-ಕೈಟಭ-ಘಾತಿನೀ ಮರ್ದಿ ಜೀ ಮಹಿಷಾಸುರಾ
ಜೀ ಧೂಮ್ರೇಕ್ಷಣ-ಚಂಡ-ಮುಂಡ-ನಾಶಿನೀ ವಧೆ ರಕ್ತಬೀಜಾಸುರಾ |
ನಿರ್ದಾಳೀ ಶುಂಭ-ನಿಶುಂಭ-ದೈತ್ಯಾ ಜೀ ಸಿದ್ಧಿಲಕ್ಷ್ಮೀ ಪರಾ
ತೀ ಚಂಡಿಕಾ ನವ-ಕೋಟಿ-ಮೂರ್ತಿ-ಸಹಿತಾ ಪ್ರತಿಪಾಳೊ ಆಮ್ಹಾ ಲೇಕರಾ ||

ಅನಿರುದ್ಧಮಾತಾ ನವಮಂತ್ರಮಾಲಿನಿ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಅಭೀಷ್ಟ-ಪೂರ್ತಿಸಾಠಿ ದೇವಾದಿಕಾನೀ ಸ್ತವಿಲೀ ಭಜಿಲೀ ಜಿಲಾ ತೀ ಆದಿಮಾತಾ |
ಶುಭಹೇತುರೀಶ್ವರೀ ತೀ ಮಾಯ ಆಮುಚೀ  ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನಿ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಉನ್ಮತ್ತ ದೈತ್ಯಾಮುಳೆ ಗಾಂಜಲೇಲ್ಯಾ ಆಮುಚೆ ಕ್ಷೇಮ ಕರೋ ಪರಾಂಬಾ ಸುರವಂದಿತಾ |
ಶುಭಹೇತುರೀಶ್ವರಿ ತೀ ಮಾಯ ಆಮುಚೀ ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಜೀ ಸ್ಮರಣ ಕರತಾಚಿ ಹರೆ ದು:ಖಕ್ಲೇಶ | ಭಕ್ತಿಶೀಲ ಆಮ್ಹೀ ತಿಲಾ ಶರಣ ಅಸತಾ |
ಶುಭಹೇತುರೀಶ್ವರೀ ತೀ ಮಾಯ ಆಮುಚೀ  ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಬಾಧಾಂಚೆ ಪ್ರಶಮನ ಕರೀ ತ್ರೈಲೋಕ್ಯಾಚಿ ಅಖಿಲಸ್ವಾಮಿನೀ |
ಆಮುಚ್ಯಾ ವೈರ್ಯಾಂಚೆ ನಿರ್ದಾಲನ ಕರಾವೆ ಹೇಚಿ ತ್ವಾ ಭಕ್ತ-ಉದ್ಧಾರಿಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಮಂಗಲಾಂಚ್ಯಾ ಮಾಂಗಲ್ಯೆ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರೀ  ನಾರಾಯಣಿ ನಮೋ ಅಂಬಿಕೆ ||                                                                                                                 ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸೃಷ್ಟಿಚೀ ಉತ್ಪತ್ತಿ ಸ್ಥಿತಿ ಲಯ ಕರೀ ಜೀ ಆಧ್ಯಶಕ್ತಿ ಸನಾತನೀ |
ವಂದಿತೋ ಗುಣಾಶ್ರಯೆ ಗುಣಮಯೆ ವಾತ್ಸಲ್ಯನಿಲಯೆ ನಾರಾಯಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಶರಣಾಗತ ಪಾಮರ ಲೇಕರಾ ತತ್ಪರ ಜೀ ಪ್ರತಿಪಾಲನೀ |
ಪ್ರಣಾಮ ತುಜ ಸರ್ವಪೀಡಾಹಾರಿಣೀ ಕ್ಷಮಾಸ್ವರೂಪೆ ನಾರಾಯಣಿ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಸ್ವರೂಪೆ ಸರ್ವೇಶ್ವರಿ ಸರ್ವಶಕ್ತಿ-ಸಮನ್ವಿತೆ |
ಭಯಾಪಾಸೂನ ರಕ್ಷಿ ಆಮ್ಹಾ ದೇವಿ ದುರ್ಗೆ ಆದಿಮಾತೆ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||
 _____________________________________________________

 || ಹರಿ ಓಂ ||
|| ಅಥ ನವಮಂತ್ರಮಾಲಾಸ್ತೋತ್ರಮ್ ||
(ಹಿಂದಿ}

ಜೋ ಮಾತಾ ಮಧುಕೈಟಭ-ಘಾತಿನೀ ಮಹಿಷಾಸುರಮರ್ದಿನೀ
ಜೋ ಧೂಮ್ರೇಕ್ಷಣ-ಚಂಡಮುಂಡ-ನಾಶಿನೀ ರಕ್ತಬೀಜ-ನಿರ್ಮೂಲಿನೀ |
ಜೋ ಹೈ ಶುಂಭನಿಶುಂಭ-ದೈತ್ಯಛೇದಿನೀ ಜೋ ಸಿದ್ಧಿಲಕ್ಷ್ಮೀ ಪರಾ
ವಹ ಚಂಡಿಕಾ ನವಕೋಟೀಮೂರ್ತಿಸಹಿತಾ ಚರಣೋ ಮೇ ಹಮೆ ದೇ ಆಸರಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಅಭೀಷ್ಟ-ಪೂರ್ತಿಹೇತು ಸುರಗಣೋ ನೆ ಕೀ ಜಿಸಕೀ ಸ್ತುತಿ ಭಕ್ತಿ ವಹ ಆದಿಮಾತಾ |
ಶುಭಹೇತುರೀಶ್ವರೀ ವಹ ಮಾ ಹಮಾರೀ  ಕರೆ ಶುಭಭದ್ರ, ಹರೇ ಸರ್ವ ಆಪದಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಉನ್ಮತ್ತ ದೈತ್ಯೋ ಸೆ ಗ್ರಸ್ತ ಹೈ ಹಮ್  ಕರೋ ಕ್ಷೇಮ ಹಮಾರಾ ಪರಾಂಬಾ ಸುರವಂದಿತಾ |
ಶುಭಹೇತುರೀಶ್ವರೀ ವಹ ಮಾ ಹಮಾರೀ  ಕರೇ ಶುಭಭದ್ರ, ಹರೇ ಸರ್ವ ಆಪದಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸ್ಮರಣ ಕರತೆ ಹೀ ದು:ಖಕ್ಲೇಶ ಹೈ ಹರತೀ |  ಭಕ್ತಿಶೀಲ ಹಮ್ ಜಬ್ ಶರಣ ಮೇ ಹೋ ಉಸಕೆ |
ಶುಭಹೇತುರೀಶ್ವರೀ ವಹ ಮಾ ಹಮಾರೀ | ಕರೇ ಶುಭಭದ್ರ, ಹರೇ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸರ್ವಬಾಧಾವೋಂ ಕಾ ಪ್ರಶಮನ  ಕರೇ ತ್ರೈಲೋಕ್ಯ ಕೀ ಅಖಿಲಸ್ವಾಮಿನೀ |
ಹಮಾರೆ ಬೈರಿಯೋಂಕಾ ನಿರ್ದಾಲನ  ಕರೋ ಯಹೀ ಮಾ ತುಮ್ ಭಕ್ತೋದ್ಧಾರಿಣೀ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||

ಸರ್ವಮಂಗಲೋಂಕಾ ಮಾಂಗಲ್ಯ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರೀ  ನಾರಾಯಣೀ ನಮೋ ಅಂಬಿಕೆ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸೃಷ್ಟಿ ಕೀ ಉತ್ಪತ್ತಿ ಸ್ಥಿತಿ ಲಯ್ ಕರೆ ಜೋ ಆಧ್ಯಶಕ್ತಿ ಸನಾತನೀ |
ವಂದನ ತುಮ್ಹೆ ಗುಣಾಶ್ರಯೆ ಗುಣಮಯೆ ವಾತ್ಸಲ್ಯನಿಲಯೆ ನಾರಾಯಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಶರಣಾಗತ ದೀನದು:ಖಿ ಸಂತಾನೋಂಕೆ ಪರಿಪಾಲನ ಮೇ ತತ್ಪರ ಜನನೀ |
ಪ್ರಣಾಮ ತುಮ್ಹೆ ಸರ್ವಪೀಡಾಹಾರಿಣೀ ಕ್ಷಮಾಸ್ವರೂಪೆ ನಾರಾಯಣೀ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸರ್ವಸ್ವರೂಪೆ ಸರ್ವೇಶ್ವರೀ ಸರ್ವಶಕ್ತಿಸಮನ್ವಿತೆ |
ಭಯ ಸೇ ಹಮಾರೀ ಸುರಕ್ಷಾ ಕರನಾ ದೇವಿ ದುರ್ಗೆ ಆದಿಮಾತೆ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||

ಪ್ರತಿಯೊಬ್ಬ ಶ್ರದ್ಧಾವಾನರು ತನ್ನ-ತನ್ನ ಮನೆಯಲ್ಲಿ ಈ ಪೂಜನೆಯನ್ನು ಖಂಡಿತವಾಗಿ ಮಾಡುವೆರೆಂದು ನನಗೆ ಪೂರ್ಣ ವಿಶ್ವಾಸವಿದೆ.

ಹರಿ ಓಂ
ಶ್ರೀರಾಮ

Saturday, 2 November 2013

ಶ್ರೀಗಂಗಾ ತ್ರಿವೇಣಿ Algorithm

ಮೊನ್ನೆ ಅಂದರೆ ೧೯ ಸಪ್ಟೆಂಬರ್ ೨೦೧೩ ರಂದು ಸದ್ಗುರು ಬಾಪೂರವರು ’ಶ್ರೀಗಂಗಾ ತ್ರಿವೇಣಿ Algorithm’ ನ್ನು ಎಲ್ಲಾ ಶ್ರದ್ಧಾವಾನರಿಗೆ ತಿಳಿಸಿ ಹೇಳಿದಾಗ, ಬಾಪೂರವರು Pascal Triangle ನ Algorithm ಒಟ್ಟಿಗೆ ಇದ್ದ ಸಂದರ್ಭವನ್ನು ಕೊಟ್ಟರು. ಶ್ರೀಗಂಗಾ ತ್ರಿವೇಣಿ algorithm (ಎಲ್ಗೋರಿದಮ್) ಬಗ್ಗೆ ತಿಳಿಸುವಾಗ ಬಾಪೂ ಹೇಳಿದರು, ’ಗಂಗಾ-ಯಮುನಾ-ಸರಸ್ವತಿ ಈ ಮೂರು ನದಿಗಳ ಎಲ್ಲಿ ಸಂಗಮವಾಗುವದು ಅದಕ್ಕೆ ತ್ರಿವೇಣಿ ಸಂಗಮ ಹೇಳುತ್ತಾರೆ. "ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ನಮ್ಮ ದೇಹದಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ನಾಡಿಯ ರೂಪದಲ್ಲಿರುತ್ತದೆ, "ಮನುಷ್ಯನ ಹಣೆಯ ಮಧ್ಯಭಾಗದಲ್ಲಿ ಅಂದರೆ ಆಜ್ನಾಚಕ್ರದಲ್ಲಿ ಈ ಮೂರು ನಾಡಿಗಳ ತ್ರಿವೇಣಿ ಸಂಗಮವಾಗುವದು. ಸುಷುಮ್ನೆಯಲ್ಲಿ ಹನುಮಂತನ ಸಂಚಾರವಿರುವದು ಅಂದರೆ ಅದರಲ್ಲಿ ಮಹಾಪ್ರಾಣನ ಸಾಮ್ರಾಜ್ಯವಿರುವದು.

ನಮ್ಮ ಮನದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಕುರಿತಾಗಿ ನಮಗೆ ಗೊತ್ತಿರುವುದು ಆವಶ್ಯಕವಾಗಿದೆ. ಈ ಮೂರು ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳ ಕ್ಷಾಲನವಾಗುವುದೆಂಬ ಸಿದ್ಧಾಂತವಿದೆ. ಆದರೆ ತ್ರಿವೇಣಿ ಸಂಗಮದಲ್ಲಿ ನಿಜವಾಗಲೂ ಸ್ನಾನಮಾಡುವುದೆಂದರೆ ನಮ್ಮ ಮನದಲ್ಲಿಯ ಗಂಗಾ, ಯಮುನಾ ಸರಸ್ವತಿಯ ಸಂಗಮದಲ್ಲಿ ಅಂದರೆ ಇಡಾ, ಪಿಂಗಲಾ ಹಾಗು ಸುಷುಮ್ನೆಯ ಸಂಗಮದಲ್ಲಿ ಸ್ನಾನ ಮಾಡಿದಂತಿರುವದು. ಮತ್ತು ಈ ಸಂಧಿಯು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ.

 
                                          श्रीगंगा त्रिवेणी Algorithm

ಮೇಲಿನ ಆಕೃತಿಯು ನಮ್ಮ ದೇಹದಲ್ಲಿಯ ಇಡಾ, ಪಿಂಗಲಾ ಹಾಗು ಸುಷುಮ್ನಾ ಅಂದರೆ ಗಂಗಾ, ಯಮುನಾ ಹಾಗು ಸರಸ್ವತಿಯ ಕಾರ್ಯವನ್ನು ತೋರಿಸುವದು. ಈ ತ್ರಿಕೋನದಲ್ಲಿ ೧ ರಿಂದ ೯ ಹಾಗು ೦ ಯ ಅಂಕೆಯು ಒಂದು ನಿರ್ಧಾರಿತ ಕ್ರಮದಲ್ಲಿ ಬರುವದು. ಕೇವಲ ಸುಷುಮ್ನಾ ನಾಡಿಯ ಮೇಲೆ ನಮಗೆ ಶೂನ್ಯ ಕಾಣುತ್ತದೆ. ಈ ಶೂನ್ಯಾವಸ್ಥೆ ಅಂದರೆ ಶಾಂತ-ತೃಪ್ತಾವಸ್ಥೆ ಅಂದರೇನೆ ಪೂರ್ಣತ್ವ. ಹನುಮಂತನು ಪೂರ್ಣನಿರುವರು. ಆದ್ದರಿಂದ  ಸುಷುಮ್ನಾ ನಾಡಿಯಲ್ಲಿ ಅವರ ಸಂಚಾರವಿರುವದು. ಈ ಸುಷುಮ್ನೆಯನ್ನೇ ’ಜ್ಯೋತಿಷಮತಿ’ ಕೂಡ ಹೇಳುವರು ಯಾಕೆಂದರೆ ಇದಕ್ಕೆ ಮುಂದಿನದು ಗೊತ್ತಿರುವದು.

ಆದರೆ ಈ ಗಂಗಾ-ತ್ರಿವೇಣಿಯ ತ್ರಿಕೋನದಲ್ಲಿ ಸ್ನಾನ ಹೇಗೆ ಮಾಡಬೇಕು? ನಮ್ಮ ಮೆಚ್ಚಿನ ದೇವರ ಪ್ರತಿಮೆಗೆ (ಮೂರ್ತಿ/ಫ್ರೇಮ್) ಅಭಿಷೇಕವನ್ನು ಮಾಡುವಾಗ ಹರಿವಾಣದ ಕೆಳಗೆ ಈ ಶ್ರೀಗಂಗಾ ತ್ರಿವೇಣಿ algorithm ತೆಗೆದಿರುವ ಕಾಗದವನ್ನಿಡಬೇಕು. ಇದರಿಂದ ಗಂಗಾ-ತ್ರಿವೇಣಿ ಸಂಗಮದ ಪಾವಿತ್ರ್ಯವು ಅಭಿಷೇಕದ ತೀರ್ಥದಲ್ಲಿ ಇಳಿಯುವದು. ಆನಂತರ ದೇವರ ಅಭಿಷೋಕ್ತ ಪ್ರತಿಮೆಗೆ ಅತ್ಯಂತ ಪ್ರೀತಿಯಿಂದ ಹಾಗು ಜಾಗರೂಕತೆಯಿಂದ ಒರೆಸಬೇಕು. ಅಭಿಷೇಕ ಮಾಡಿದ ಮೇಲೆ ಈ ತೀರ್ಥವನ್ನು ಗಂಗಾ, ಯಮುನಾ ಸರಸ್ವತಿಯ ಸ್ಮರಣೆ ಮಾಡುತ್ತ ನಾವು ಅದರ ಪ್ರಾಶನ ಮಾಡಬೇಕು. ಈ ಜಲವು ಗಂಗಾ, ಯಮುನಾ, ಸರಸ್ವತಿಯದ್ದೇ ಆಗಿದೆಯೆಂಬ ಭಾವವಿಡಬೇಕು. ಹಾಗೆಯೇ ನಮ್ಮ ಮೇಲೆ ಯಾರು ನಿಜವಾದ ಪ್ರೀತಿ ಮಾಡುವರು ಆ ಪ್ರತಿಯೊಬ್ಬರಿಗಾಗಿ ಕೂಡ ಈ ತೀರ್ಥವನ್ನು ಪ್ರಾಶನ ಮಾಡುತ್ತಿರುವೆಂಬ ಭಾವ ಇರಬೇಕು. ಆ ತೀರ್ಥವನ್ನು ತೆಗೆದುಕೊಂಡ ಮೇಲೆ ಅದೇ ಒದ್ದೆ ಕೈಯನ್ನು ಎರಡು ಕಣ್ಣು, ಆಜ್ನಾಚಕ್ರ ಹಾಗು ತಲೆಯ ಹಿಂದೆ ಅಂದರೆ Circle of Willis ನ ಸ್ಥಳದಲ್ಲಿ ಇಡಬೇಕು. ಈ ರೀತಿಯ ಅಭಿಷೇಕವನ್ನು ನಾವು ದಿನಂಪ್ರತಿ ಮಾಡಿದರೆ ಅದು ನಮಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಂತಾಗಿರುವದು.

ಇದರ ಚಿಹ್ನೆಯನ್ನು ತೆಗೆಯುವಾಗ ಅದರ ಮೇಲಿನ ಭಾಗದಲ್ಲಿ ಶ್ರೀಗಂಗಾ ತ್ರಿವೇಣಿ ಬರೆಯಬೇಕು. ಅದರ ಕೆಳಗೆ ಮಧ್ಯಭಾಗದಲ್ಲಿ algorithm ನ ಚಿಹ್ನೆಯನ್ನು ತೆಗೆಯಬೇಕು. ಚಿಹ್ನೆಯ ಕೆಳಗೆ ನಮ್ಮ ಮೆಚ್ಚಿನ ದೇವರ ಹೆಸರನ್ನು ಬರೆಯಬೇಕು. ಕಾಗದದಮೇಲೆ, ವಸ್ತ್ರದಮೇಲೆ ಬರೆದು ದೇವರಿಡುವ ಸ್ಥಳದ ಕೆಳಗೆ ಈ algorithm ನ್ನು ಇಟ್ಟರೆ ಬಹಳ ಶ್ರೇಯಸ್ಕರವಾಗಿರುವದು. ಒಂದು ವೇಳೆ ನಾವು ಈ ಪ್ರತಿಮೆಗೆ ಅರಶಿನ ಹಾಗು ಕುಂಕುಮವನ್ನು ಹಚ್ಚಲು ಮರೆತರೂ ನಡೆಯಬಹುದು. ಕೇವಲ ನಾವು ಎನು ಮಾಡುತ್ತೇವೆ ಅದನ್ನು ಬಹಳ ಪ್ರೀತಿಯಿಂದ ಮಾಡಬೇಕು. ಈ algorithm ನ ಪ್ರತಿಮೆಯನ್ನು ನಮ್ಮ ವಾಹನದಲ್ಲಿಟ್ಟರು ಕೂಡ ನಡೆಯಬಹುದು, ಯಾಕೆಂದರೆ ಹೀಗೆ ಮಾಡುವುದರಿಂದ ಈ ಪ್ರತಿಮೆಯ ಮೇಲೆ ಸೂರ್ಯಕಿರಣದ ಅಭಿಷೇಕವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯಕಿರಣದ ಅಭಿಷೇಕವನ್ನು ಬಹಳ ಪವಿತ್ರ ಹಾಗು ಸರ್ವೋತ್ತಮವೆಣಿಸಲಾಗುತ್ತದೆ. ಈ algorithm ನ್ನು ನಾವು ರಂಗೋಲಿಯಲ್ಲಿಯೂ ತೆಗೆಯಬಹುದು ಮತ್ತು ಇದರಲ್ಲಿ ಯಾವುದೇ ಬಣ್ಣವನ್ನು ಉಪಯೋಗಿಸಿದರೂ ಆಗಬಹುದು. ಈ ಗಂಗಾ-ತ್ರಿವೇಣಿಯ ಚಿಹ್ನೆಯನ್ನು ನಾವು ದೇವರನ್ನು ಯಾವ ವಸ್ತ್ರದ ಮೇಲೆ ಇಡುತ್ತೇವೆ ಆ ವಸ್ತ್ರದ ಕೆಳಗಿಟ್ಟರೆ ದೇವರಪೂಜೆ ಮಾಡುವ ಸಮಯದಲ್ಲಿ ನಮ್ಮ ಕೈಯಿಂದ ಯಾವುದೇ ಪ್ರಕಾರದ ತಪ್ಪಾದರೆ ಹೆದರುವ ಕಾರಣವಿಲ್ಲ.