Saturday 2 November 2013

ಶ್ರೀಗಂಗಾ ತ್ರಿವೇಣಿ Algorithm

ಮೊನ್ನೆ ಅಂದರೆ ೧೯ ಸಪ್ಟೆಂಬರ್ ೨೦೧೩ ರಂದು ಸದ್ಗುರು ಬಾಪೂರವರು ’ಶ್ರೀಗಂಗಾ ತ್ರಿವೇಣಿ Algorithm’ ನ್ನು ಎಲ್ಲಾ ಶ್ರದ್ಧಾವಾನರಿಗೆ ತಿಳಿಸಿ ಹೇಳಿದಾಗ, ಬಾಪೂರವರು Pascal Triangle ನ Algorithm ಒಟ್ಟಿಗೆ ಇದ್ದ ಸಂದರ್ಭವನ್ನು ಕೊಟ್ಟರು. ಶ್ರೀಗಂಗಾ ತ್ರಿವೇಣಿ algorithm (ಎಲ್ಗೋರಿದಮ್) ಬಗ್ಗೆ ತಿಳಿಸುವಾಗ ಬಾಪೂ ಹೇಳಿದರು, ’ಗಂಗಾ-ಯಮುನಾ-ಸರಸ್ವತಿ ಈ ಮೂರು ನದಿಗಳ ಎಲ್ಲಿ ಸಂಗಮವಾಗುವದು ಅದಕ್ಕೆ ತ್ರಿವೇಣಿ ಸಂಗಮ ಹೇಳುತ್ತಾರೆ. "ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ನಮ್ಮ ದೇಹದಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ನಾಡಿಯ ರೂಪದಲ್ಲಿರುತ್ತದೆ, "ಮನುಷ್ಯನ ಹಣೆಯ ಮಧ್ಯಭಾಗದಲ್ಲಿ ಅಂದರೆ ಆಜ್ನಾಚಕ್ರದಲ್ಲಿ ಈ ಮೂರು ನಾಡಿಗಳ ತ್ರಿವೇಣಿ ಸಂಗಮವಾಗುವದು. ಸುಷುಮ್ನೆಯಲ್ಲಿ ಹನುಮಂತನ ಸಂಚಾರವಿರುವದು ಅಂದರೆ ಅದರಲ್ಲಿ ಮಹಾಪ್ರಾಣನ ಸಾಮ್ರಾಜ್ಯವಿರುವದು.

ನಮ್ಮ ಮನದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಕುರಿತಾಗಿ ನಮಗೆ ಗೊತ್ತಿರುವುದು ಆವಶ್ಯಕವಾಗಿದೆ. ಈ ಮೂರು ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳ ಕ್ಷಾಲನವಾಗುವುದೆಂಬ ಸಿದ್ಧಾಂತವಿದೆ. ಆದರೆ ತ್ರಿವೇಣಿ ಸಂಗಮದಲ್ಲಿ ನಿಜವಾಗಲೂ ಸ್ನಾನಮಾಡುವುದೆಂದರೆ ನಮ್ಮ ಮನದಲ್ಲಿಯ ಗಂಗಾ, ಯಮುನಾ ಸರಸ್ವತಿಯ ಸಂಗಮದಲ್ಲಿ ಅಂದರೆ ಇಡಾ, ಪಿಂಗಲಾ ಹಾಗು ಸುಷುಮ್ನೆಯ ಸಂಗಮದಲ್ಲಿ ಸ್ನಾನ ಮಾಡಿದಂತಿರುವದು. ಮತ್ತು ಈ ಸಂಧಿಯು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ.

 
                                          श्रीगंगा त्रिवेणी Algorithm

ಮೇಲಿನ ಆಕೃತಿಯು ನಮ್ಮ ದೇಹದಲ್ಲಿಯ ಇಡಾ, ಪಿಂಗಲಾ ಹಾಗು ಸುಷುಮ್ನಾ ಅಂದರೆ ಗಂಗಾ, ಯಮುನಾ ಹಾಗು ಸರಸ್ವತಿಯ ಕಾರ್ಯವನ್ನು ತೋರಿಸುವದು. ಈ ತ್ರಿಕೋನದಲ್ಲಿ ೧ ರಿಂದ ೯ ಹಾಗು ೦ ಯ ಅಂಕೆಯು ಒಂದು ನಿರ್ಧಾರಿತ ಕ್ರಮದಲ್ಲಿ ಬರುವದು. ಕೇವಲ ಸುಷುಮ್ನಾ ನಾಡಿಯ ಮೇಲೆ ನಮಗೆ ಶೂನ್ಯ ಕಾಣುತ್ತದೆ. ಈ ಶೂನ್ಯಾವಸ್ಥೆ ಅಂದರೆ ಶಾಂತ-ತೃಪ್ತಾವಸ್ಥೆ ಅಂದರೇನೆ ಪೂರ್ಣತ್ವ. ಹನುಮಂತನು ಪೂರ್ಣನಿರುವರು. ಆದ್ದರಿಂದ  ಸುಷುಮ್ನಾ ನಾಡಿಯಲ್ಲಿ ಅವರ ಸಂಚಾರವಿರುವದು. ಈ ಸುಷುಮ್ನೆಯನ್ನೇ ’ಜ್ಯೋತಿಷಮತಿ’ ಕೂಡ ಹೇಳುವರು ಯಾಕೆಂದರೆ ಇದಕ್ಕೆ ಮುಂದಿನದು ಗೊತ್ತಿರುವದು.

ಆದರೆ ಈ ಗಂಗಾ-ತ್ರಿವೇಣಿಯ ತ್ರಿಕೋನದಲ್ಲಿ ಸ್ನಾನ ಹೇಗೆ ಮಾಡಬೇಕು? ನಮ್ಮ ಮೆಚ್ಚಿನ ದೇವರ ಪ್ರತಿಮೆಗೆ (ಮೂರ್ತಿ/ಫ್ರೇಮ್) ಅಭಿಷೇಕವನ್ನು ಮಾಡುವಾಗ ಹರಿವಾಣದ ಕೆಳಗೆ ಈ ಶ್ರೀಗಂಗಾ ತ್ರಿವೇಣಿ algorithm ತೆಗೆದಿರುವ ಕಾಗದವನ್ನಿಡಬೇಕು. ಇದರಿಂದ ಗಂಗಾ-ತ್ರಿವೇಣಿ ಸಂಗಮದ ಪಾವಿತ್ರ್ಯವು ಅಭಿಷೇಕದ ತೀರ್ಥದಲ್ಲಿ ಇಳಿಯುವದು. ಆನಂತರ ದೇವರ ಅಭಿಷೋಕ್ತ ಪ್ರತಿಮೆಗೆ ಅತ್ಯಂತ ಪ್ರೀತಿಯಿಂದ ಹಾಗು ಜಾಗರೂಕತೆಯಿಂದ ಒರೆಸಬೇಕು. ಅಭಿಷೇಕ ಮಾಡಿದ ಮೇಲೆ ಈ ತೀರ್ಥವನ್ನು ಗಂಗಾ, ಯಮುನಾ ಸರಸ್ವತಿಯ ಸ್ಮರಣೆ ಮಾಡುತ್ತ ನಾವು ಅದರ ಪ್ರಾಶನ ಮಾಡಬೇಕು. ಈ ಜಲವು ಗಂಗಾ, ಯಮುನಾ, ಸರಸ್ವತಿಯದ್ದೇ ಆಗಿದೆಯೆಂಬ ಭಾವವಿಡಬೇಕು. ಹಾಗೆಯೇ ನಮ್ಮ ಮೇಲೆ ಯಾರು ನಿಜವಾದ ಪ್ರೀತಿ ಮಾಡುವರು ಆ ಪ್ರತಿಯೊಬ್ಬರಿಗಾಗಿ ಕೂಡ ಈ ತೀರ್ಥವನ್ನು ಪ್ರಾಶನ ಮಾಡುತ್ತಿರುವೆಂಬ ಭಾವ ಇರಬೇಕು. ಆ ತೀರ್ಥವನ್ನು ತೆಗೆದುಕೊಂಡ ಮೇಲೆ ಅದೇ ಒದ್ದೆ ಕೈಯನ್ನು ಎರಡು ಕಣ್ಣು, ಆಜ್ನಾಚಕ್ರ ಹಾಗು ತಲೆಯ ಹಿಂದೆ ಅಂದರೆ Circle of Willis ನ ಸ್ಥಳದಲ್ಲಿ ಇಡಬೇಕು. ಈ ರೀತಿಯ ಅಭಿಷೇಕವನ್ನು ನಾವು ದಿನಂಪ್ರತಿ ಮಾಡಿದರೆ ಅದು ನಮಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಂತಾಗಿರುವದು.

ಇದರ ಚಿಹ್ನೆಯನ್ನು ತೆಗೆಯುವಾಗ ಅದರ ಮೇಲಿನ ಭಾಗದಲ್ಲಿ ಶ್ರೀಗಂಗಾ ತ್ರಿವೇಣಿ ಬರೆಯಬೇಕು. ಅದರ ಕೆಳಗೆ ಮಧ್ಯಭಾಗದಲ್ಲಿ algorithm ನ ಚಿಹ್ನೆಯನ್ನು ತೆಗೆಯಬೇಕು. ಚಿಹ್ನೆಯ ಕೆಳಗೆ ನಮ್ಮ ಮೆಚ್ಚಿನ ದೇವರ ಹೆಸರನ್ನು ಬರೆಯಬೇಕು. ಕಾಗದದಮೇಲೆ, ವಸ್ತ್ರದಮೇಲೆ ಬರೆದು ದೇವರಿಡುವ ಸ್ಥಳದ ಕೆಳಗೆ ಈ algorithm ನ್ನು ಇಟ್ಟರೆ ಬಹಳ ಶ್ರೇಯಸ್ಕರವಾಗಿರುವದು. ಒಂದು ವೇಳೆ ನಾವು ಈ ಪ್ರತಿಮೆಗೆ ಅರಶಿನ ಹಾಗು ಕುಂಕುಮವನ್ನು ಹಚ್ಚಲು ಮರೆತರೂ ನಡೆಯಬಹುದು. ಕೇವಲ ನಾವು ಎನು ಮಾಡುತ್ತೇವೆ ಅದನ್ನು ಬಹಳ ಪ್ರೀತಿಯಿಂದ ಮಾಡಬೇಕು. ಈ algorithm ನ ಪ್ರತಿಮೆಯನ್ನು ನಮ್ಮ ವಾಹನದಲ್ಲಿಟ್ಟರು ಕೂಡ ನಡೆಯಬಹುದು, ಯಾಕೆಂದರೆ ಹೀಗೆ ಮಾಡುವುದರಿಂದ ಈ ಪ್ರತಿಮೆಯ ಮೇಲೆ ಸೂರ್ಯಕಿರಣದ ಅಭಿಷೇಕವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯಕಿರಣದ ಅಭಿಷೇಕವನ್ನು ಬಹಳ ಪವಿತ್ರ ಹಾಗು ಸರ್ವೋತ್ತಮವೆಣಿಸಲಾಗುತ್ತದೆ. ಈ algorithm ನ್ನು ನಾವು ರಂಗೋಲಿಯಲ್ಲಿಯೂ ತೆಗೆಯಬಹುದು ಮತ್ತು ಇದರಲ್ಲಿ ಯಾವುದೇ ಬಣ್ಣವನ್ನು ಉಪಯೋಗಿಸಿದರೂ ಆಗಬಹುದು. ಈ ಗಂಗಾ-ತ್ರಿವೇಣಿಯ ಚಿಹ್ನೆಯನ್ನು ನಾವು ದೇವರನ್ನು ಯಾವ ವಸ್ತ್ರದ ಮೇಲೆ ಇಡುತ್ತೇವೆ ಆ ವಸ್ತ್ರದ ಕೆಳಗಿಟ್ಟರೆ ದೇವರಪೂಜೆ ಮಾಡುವ ಸಮಯದಲ್ಲಿ ನಮ್ಮ ಕೈಯಿಂದ ಯಾವುದೇ ಪ್ರಕಾರದ ತಪ್ಪಾದರೆ ಹೆದರುವ ಕಾರಣವಿಲ್ಲ.

No comments:

Post a Comment