Saturday, 2 November 2013

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ-೨)

[continued from Part I (dated: 5th October 2013)...]
ಯು ಎಸ್ ಮತ್ತು ರಶಿಯಾ ಎರಡೂ ದೇಶಗಳ ಹೇತುಗರ್ಭಿತವಾದ ಅಭಿರುಚಿ ಈ ಪ್ರದೇಶದಲ್ಲಿದೆ. ರಶಿಯಾದವರಿಗೆ, ಅವರಿಗೆ ಅನುಕೂಲವಾದ ಶಾಸನ ಶಿರಿಯಾದಲ್ಲಿರುವದು ಬಹಳ ಮಹತ್ವದ್ದಾಗಿದೆ. ಶಿರಿಯಾದ ಟಾರ್ಟ್ಸ್ ಪಟ್ಟಣದಲ್ಲಿ ಬಂದರು ಇದ್ದು ರಶಿಯಾದವರ ಬಹಳ ಮಹತ್ವದ ನೌಕಾದಲದ ಸೈನ್ಯದ ಮುಖ್ಯ ಸ್ಥಳವಾಗಿದೆ ಮತ್ತು ಮೊದಲಿನ ಸೋವಿಯತ್ ಯುನಿಯನ್ ನವರಿಂದ ಪರದೇಶದಲ್ಲಿ ಸ್ಥಾಪಿಸಲ್ಪಟ್ಟ ಇದೊಂದೇ ಸದ್ಯದ ಸೈನ್ಯ ಸೌಕರ್ಯವಾಗಿದೆ. ಮತ್ತು ಇದೇ  ಕಾರಣದಿಂದಾಗಿ ರಶಿಯಾ ಅಸ್ಸಾದಿನ ಶಾಸನಕ್ಕೆ ತನ್ನ ಸ್ಥಿರವಾದ ಬೆಂಬಲ ಕೊಡುತ್ತಿದೆ.

ಆದರೆ ಅದರ ಒಟ್ಟಿಗೆ ಮಿಡಲ್ ಈಸ್ಟೀನ ಇತರ ದೇಶಗಳು, ಮುಖ್ಯತ: ಯು ಎಸ್ ನ ಮಿತ್ರರಾಗಿದ್ದ  ಸುನ್ನಿ ರಾಷ್ಟ್ರಗಳು ಬಹಳ ಆತುರತೆಯಿಂದ ಅಸ್ಸಾದ್ ಸರಕಾರವನ್ನು ಪರಾಭವಗೊಳಿಸಲು ಕಾಯುತ್ತಿದ್ದಾರೆ. ಕತಾರ್ ದೇಶವು ಯುರೋಪಿಗೆ ನ್ಯಾಚುರಲ್ ಗ್ಯಾಸ್ ನ್ನು ಸರಬರಾಯಿ ಮಾಡುವ ಇಚ್ಛೆ ಪಡೆದುಕೊಂಡಿದೆ. ಕತಾರ್ ದೇಶವು ಯುರೋಪ್ ದೇಶಗಳಿಗೆ ನ್ಯಾಚುರಲ್ ಗ್ಯಾಸನ್ನು ಸರಬರಾಯಿ ಮಾಡುವ ಸಲುವಾಗಿ ಪೈಪ್ ಲಾಯಿನ್ ಹಾಕಿದಾಗ ಅದು ಶಿರಿಯಾದಿಂದ ಹೋಗಬೇಕಿತ್ತು. ಆದರೆ ಈ ಯೋಜನೆಗೆ ಶಿರಿಯಾದ ರಾಷ್ಟ್ರಪತಿಯಾದ ಬಶಾರ್ ಅಲ್-ಅಸ್ಸಾದ್ ಅವರು ವಿರೋಧ ಮಾಡಿದ್ದಾರೆ. ಒಂದು ಕಡೆಯಲ್ಲಿ ಅಸ್ಸಾದ್ ಶಾಸನ ಯುರೋಪ್ ದೇಶಗಳಲ್ಲಿ ಕತಾರಿನ ಪೈಪ್ ಲಾಯಿನಿನ ಪ್ರಸ್ತಾಪವನ್ನು ನಿರಾಕರಿಸಿದರೆ, ಇನ್ನೊಂದು ಕಡೆಯಲ್ಲಿ  ಹತ್ತು ಬಿಲಿಯನ್ ಡಾಲರಿನ ಅದೇ ಕರಾರಿಗೆ ಕಳೆದ ವರ್ಷ ಜುಲ್ಯ ತಿಂಗಳಿನಲ್ಲಿ ಇರಾಣ್ ಮತ್ತು ಇರಾಕ್ ಜೊತೆ ಕೂಡಿ ಸಮ್ಮತಿಯನ್ನು ಕೊಟ್ಟಿದ್ದಾರೆ. ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾದೆಂದರೆ ಶಿರಿಯಾದ ಸೈನ್ಯಬಲ ಮತ್ತು ದಂಡೆಕೋರರ ನಡುವಿನ ತಿಕ್ಕಾಟವು ಶಿರಿಯಾ ಮಾಡಿದ ಈ ಕರಾರಿನ ಸಮಯದಲ್ಲೇ ಆಗಿದೆ. ಕತಾರ್ ದೇಶವು ತನ್ನ ಗ್ಯಾಸ್ ಪೈಪ್ ಲಾಯಿನ್ ನ ಪ್ರಸ್ತಾಪವನ್ನು ಇಡುವ ಸಮಯದಲ್ಲಿ ಸೌದಿ ಅರೇಬಿಯಾದವರು ಕೂಡ ಸಮಿತಿಯಲ್ಲಿ ತನ್ನನ್ನು ಒಳಗೂಡಿಸಬೇಕೆಂದು ರಶಿಯಾದವರ ಮೇಲೆ ತನ್ನ ಪ್ರಭಾವ ಬೀಳಿಸಲು ಪ್ರಯತ್ನ ಪಟ್ಟಿದ್ದರೆಂದು ತಿಳಿಯಲಾಗುತ್ತಿದೆ. ಇಂಧನಿನ ಉದ್ದಿಮೆಯಲ್ಲಿ ತನ್ನ ವರ್ಚಸ್ಸನ್ನಿಡಲು ಹಾಗು ಅದನ್ನು ವೃದ್ಧಿಸುವ ದೃಷ್ಟಿಕೋನದಿಂದ ಸೌದಿ ಅರೇಬಿಯಾದವರು ಕೂಡ ಸಂವೇದನಶೀಲವಾದ ಶಿರಿಯಾದಂತಹ ಭೂರಾಜ್ಯದಲ್ಲಿ ಮೈತ್ರಿಯ ಶಾಸನವನ್ನು ಇಚ್ಛಿಸುತ್ತಿದ್ದಾರೆ.
 
ಆದರೆ ಯುರೋಪ್ ದೇಶಗಳಿಗೆ ರಶಿಯಾ ಪರಂಪರೆಯಿಂದ ಇಂಧನನ್ನು ಪೂರೈಸುವದರಲ್ಲಿ ಅಗ್ರವಾಗಿದೆ. ಆದ್ದರಿಂದ ರಶಿಯಾವು ಯುರೋಪಿಯನ್ ದೇಶಗಳ ವಿರುದ್ಧ ಈ ಇಂಧನನ್ನು ಅಸ್ತ್ರದ ರೂಪದಲ್ಲಿ ಉಪಯೋಗ ಮಾಡುತ್ತಿದೆಯೆಂದು ಆರೋಪಣೆ ಮಾಡುತ್ತಿದ್ದಾರೆ. ಆದಕ್ಕಾಗಿ ಮಿಡಲ್ ಈಸ್ಟೀನಿಂದ ಯುರೋಪಿಗೆ ಇಂಧನ ತಲುಪಬಾರದೆಂದು ರಶಿಯಾ ಇಚ್ಛಿಸುತ್ತಿದೆ. ಈ ಒಂದು ಕಾರಣದಿಂದಾಗಿ ರಶಿಯಾ, ಶಿರಿಯಾದ ಅಸ್ಸಾದ್ ರೆಜಿಮಿಗೆ ನಿರಂತರ ಬೆಂಬಲ ಕೊಡುತ್ತಿದೆ. ಇದರ ಪರಿಣಾಮವಾಗಿ  ತನ್ನ ಲಾಭದ ಕುರಿತಾಗಿಯೇ ಆಸಕ್ತಿಯುಳ್ಳ ಎಲ್ಲಾ ಪಕ್ಷದಾರರು ಶಿರಿಯಾದಲ್ಲಿಯ ವಿಷಮ ಸ್ಥಿತಿಯನ್ನು ಜಟಿಲವಾದ ಜಾಲದಂತಾಗಿ ಮಾಡಿ ಅದಕ್ಕೆ ನಿರ್ಧಾರವಾದ ಪರಿಹರಣೆ ತರಬಹುದೆಂಬುದು ಒಂದು ದೂರದ ಮಾತಾಗಿದೆ ಮತ್ತು ಸದ್ಯದಲ್ಲಿ ಮಾಡಿದ ಶಾಂತತೆಯ ಪ್ರಯತ್ನವು ಕೇವಲ ತಾತ್ಕಾಲಿನ ವ್ಯವಸ್ಥೆಯಂತಾಗಿದೆ. 


 ಮಿಡಲ್ ಈಸ್ಟರ್ನ್ ರಾಷ್ಟ್ರದೊಡನೆ ಯು ಎಸ್ ಮತ್ತು ರಶಿಯಾ ಹಾಗು ಇತರ ರಾಷ್ಟ್ರಗಳು ಕೂಡ ಮೆಲ್ಲ ಮೆಲ್ಲನೆ ಈ ವಿವಾದದಲ್ಲಿ ಬರತೊಡಗಿದ್ದಾರೆ. ಯು ಎಸ್ ನ ಯುರೋಪದ ಮಿತ್ರ ರಾಷ್ಟ್ರಗಳಾದ, ಯುನೈಟೇಡ್ ಕಿಂಗ್ ಡಮ್, ಜರ್ಮನಿ, ಫ್ರಾಂಸ್, ಇಟಲಿ, ಡೆನ್ ಮಾರ್ಕ್, ಲಕ್ಜೆಂಬರ್ಗ್, ಸ್ಪೇನ್ ಹಾಗು ನಿದರ್ ಲ್ಯಾಂಡಗಳು ೪೩೦ ಮಿಲಿಯನ್ ಡಾಲರಿನ ಆರ್ಥಿಕ ಸಹಾಯ ಶಿರಿಯಾದ ನಿರಾಶ್ರಿತರಿಗೆ ಕೊಡಲು ಮಾತು ಕೊಟ್ಟಿದ್ದಾರೆ. ಯುನೈಟೇಡ್ ಕಿಂಗ್ ಡಮ್ ಮೂರು ಮಿಲಿಯನ್ ಡಾಲರ್ ಅತಿರಿಕ್ತ ಸಹಾಯ ಕೇವಲ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಮತ್ತು ಅದರ ಸೌಲಭ್ಯಗಳನ್ನು ನಾಶಮಾಡಲು ಕೊಡಲಾಗುವುದೆಂದು ಜಾಹಿರು ಮಾಡಿದೆ. ರಶಿಯಾದೊಡನೆ ಚೈನಾವು ಪಾರಂಪರೆಯಿಂದ ಶಿರಿಯಾದ ಜೊತೆಗಿದ್ದು, ಯು ಎಸ್ ನವರು ಶಿರಿಯಾದ ವಿರುದ್ಧ ಸಿದ್ಧ ಮಾಡಿದ ಹಲವು ಒಪ್ಪಂದಗಳಿಗೆ ಯು ಎನ್ ನಲ್ಲಿ ಅದಕ್ಕೆ ಅಡ್ಡ ಬಂದಿರುವರು. ಶಿರಿಯಾದ ವಿರುದ್ಧ ಯಾವುದೇ ಪ್ರಕಾರದ ಸೈನ್ಯ ಬಲದ ಉಪಯೋಗವನ್ನು ಚೈನಾ ಮಾಡಲು ಬಿಡುವುದಿಲ್ಲ. ಮತ್ತು ಇತ್ತೀಚೆಗೆ ಶಿರಿಯಾದ ವಿವಾದವನ್ನು ಬಿಡಿಸಲು ’ಸಂವಾದ’ವೇ ಒಂದು ಮಾರ್ಗ ಮತ್ತು ಒಳ್ಳೆಯ ವಿಕಲ್ಪವೆಂದು ಹೇಳಿದೆ.


ಆ ಸ್ಥಳದಲ್ಲಿ ಹೆಚ್ಚುತ್ತಿರುವ ಅಶಾಂತಿಯು ಅಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸುವವರಿಗಾಗಿ ಮುಖ್ಯವಾದ ಅಹ್ವಾನವಾಗಿದೆ. ಆದರೆ ಅದರ ಜೊತೆ ಇದು ಭಾರತದಂತಹ ರಾಷ್ಟ್ರಗಳಿಗು ಕೂಡ ಗಂಭೀರವಾದ ಆವ್ಹಾನವಾಗಿದೆ. ಯಾಕೆಂದರೆ ಈ ರಾಷ್ಟ್ರಗಳು ೮೦% ಇಂಧನಿನ ಪೂರೈಕೆಯನ್ನು ಆಮದು ಮಾಡಿಕೊಳ್ಳುವರು ಮತ್ತು ಅದಕ್ಕಾಗಿ ಅವರು ಮಿಡಲ್ ಈಸ್ಟೀನ್ ದೇಶಗಳ ಮೇಲೆಯೇ ಹೊಂದಿವೆ. ಭಾರತಕ್ಕೆ ಇಂಧನನ್ನು ಮುಖ್ಯವಾಗಿ ಒದಗಿಸುವ ರಾಷ್ಟ್ರವಾದ ಇರಾಣಿನ ಮೇಲೆ ಯು ಎಸ್ ನವರು ನಿಷೇಧ ಹಾಕಿರುವರು. ಇರಾಣ ದೇಶವು ಹಣ ಜಮೆ ಮಾಡಲು ೯೦ ದಿವಸದ ಅವಧಿಯನ್ನು ಭಾರತದ ಎಣ್ಣೆ ಕಂಪನಿಗಳಿಗೆ ಕೊಡುತ್ತಿದೆ. ಮತ್ತು ಅವರಲ್ಲಿಯ ಕಚ್ಚಾ ಎಣ್ಣೆಯು (ಕ್ರೂಡ್ ಆಯಿಲ್) ಸೌದಿ ಅರೇಬಿಯ ಹಾಗು ಇರಾಕ್ ದೇಶಗಳಿಗಿಂತ ಅಗ್ಗವಾಗಿದೆ. ಮತ್ತು ಅದರ ವೆಚ್ಚದ ಹಣವನ್ನು ಅಲ್ಪ ಭಾಗದಲ್ಲಿ ಭಾರತದ ರೂಪಾಯಿಯ ಸ್ವರೂಪದಲ್ಲಿಯೂ ಸ್ವೀಕರಿಸುತ್ತಾರೆ. ಆದ್ದರಿಂದ ಭಾರತವು ಇರಾಣ್ ದೇಶದಿಂದ ಇಂಧನನ್ನು ಆಮದು ಮಾಡಿಕೊಳ್ಳುವುದರಿಂದ ಪರದೇಶಕ್ಕೆ ಹಣವನ್ನು ಬದಲಾಯಿಸುವಾಗ (ಫೊರೇನ್ ಎಕ್ಸ್ ಚೇಂಜ್) ತಾಗುವ ವೆಚ್ಚವನ್ನು ಉಳಿಸಿಕೊಳ್ಳುತ್ತದೆ. ಆದರೆ ಯು ಎಸ್ ನವರು ಇರಾಣಿನ ಮೇಲೆ ಬಂದಿಯನ್ನು ಹಾಕಿದ್ದರಿಂದ ಭಾರತಕ್ಕೆ ಅಲ್ಲಿಂದ ಇಂಧನನ್ನು ಆಮದು ಮಾಡುವ ಪ್ರಮಾಣ ಕಡಿಮೆ ಮಾಡಬೇಕಾಗಿದೆ. ಆದರೆ ಶಿರಿಯಾವು ಭಾರತಕ್ಕೆ ಎಣ್ಣೆ ಮತ್ತು ಗ್ಯಾಸ್ ಕ್ಷೇತ್ರಗಳಲ್ಲಿ ಸಹಾಯ ಸಲ್ಲಿಸಲು ಒಪ್ಪಿದ್ದಾರೆ. ಅವರಲ್ಲಿ ಸಮುದ್ರದ ಹೊರಗೆ ೧೪ ಎಣ್ಣೆಯ ಸಂಚಯ ಮತ್ತು  ೬ ಸಮುದ್ರದಲ್ಲಿಯ ಎಣ್ಣೆ ಸಂಚಯದ ಸ್ಥಳಗಳಿವೆ. ಆದರೆ ಶಿರಿಯಾದ ಸದ್ಯದ ಪರಿಸ್ಥಿತಿಯನ್ನು ನೋಡಿ ಭಾರತದ ಕಂಪನಿಗಳು ತಾತ್ಕಾಲಿನವಾಗಿ ತನ್ನ ಕೆಲಸವನ್ನು ನಿಲ್ಲಿಸಿವೆ. ಓಎನ್ ಜೀಸಿಯ ಪ್ರಕಲ್ಪ ಮತ್ತು ಭಾರತ್ ಎಲೆಕ್ತ್ರಿಕಲ್ಸ್ ಲಿಮಿಟೇಡ್ ಕಂಪನಿಗಳು ಇವುಗಳ ಭಾಗವಾಗಿವೆ. ಶಿರಿಯಾದಲ್ಲಿದ್ದ  ಕಬ್ಬಿಣದ ಪ್ಲಾಂಟ್ ನಲ್ಲಿ ಕೂಡ ಭಾರತ  ಸಮಾವೇಷಗೊಂಡಿದೆ.

ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಇಂಧನಿನಿಂದ ತುಂಬಿದ ಮಿಡಲ್ ಈಸ್ಟೀನಲ್ಲಿ ಇಂಧನಿನ ಬೆಲೆ ಮೇಲೆ ಕೆಳಗಾಗುತ್ತಿದೆ. ಭಾರತದ ರೂಪಾಯಿಯ ಬೆಲೆ ಕೆಳಗೆ ಬೀಳುತ್ತಿದ್ದರಿಂದ ಪರದೇಶದ ಇಂಧನವು ದುಬಾರಿಯಾಗತೊಡಗಿದೆ. ಇಂಧನಿನ ಬೆಲೆ ಹೆಚ್ಚಾಗುತ್ತಿದ್ದರಿಂದ ಮೊದಲೇ ಕುಂದುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿದ್ದ ಭಾರತೀಯ ಅರ್ಥಶಾಸ್ತ್ರದ ಮೇಲೆ ಪರಿಣಾಮ ಬೀರುತ್ತಿದೆ. ಎಣ್ಣೆಯ ಲೆಕ್ಕಾಚಾರವು ಭಾರತದ ಆಮದು ಬೆಲೆಪಟ್ಟಿಯ ಮೂರನೇ ಭಾಗವಾಗಿದೆ. ವಿಶ್ಲೇಷಕರ ಪ್ರಕಾರ ಶಿರಿಯಾದ ಆಕ್ರಮಣದಿಂದಾಗಿ ಎಣ್ಣೆಯ ದರವು ಈಗಿರುವ ೧೧೫ ಡಾಲರ್ ನಿಂದ ೧೫೦ ಡಾಲರ್ ತನಕ ಹೋಗಬಹುದು. ಎಣ್ಣೆಯ ದರ ಇಷ್ಟು ಮೇಲೆ ಹೋದರೆ ಭಾರತ ಸರಕಾರಕ್ಕೆ ಹಣ ಚಲಾವಣೆಯ ಉಬ್ಬರವನ್ನು (ಇನ್ ಫ್ಲೇಶನ್) ತಡೆಯಲು ಕಠಿಣವಾಗಬಹುದು.

ಈಗಿನ ಪರಿಸ್ಥಿತಿಯು ಅರ್ಥವ್ಯವಸ್ಥೆಗೊಂದು ಆವ್ಹಾನವಾಗಿದೆ ಆದರೆ ಅದಕ್ಕಿಂತ ಮಹತ್ವದೆಂದರೆ ಇದು ಯುದ್ಧ ಕುಶಲರ ಕೂಟ ನೀತಿಯಾಗಿರುವುದರಿಂದ ಬಹಳವೇ ಅಪಾಯಕಾರಿಯಾಗಿದೆ ಎಂದು ತೋರಿಸಿ ಕೊಡುತ್ತದೆ. ಯಾಕೆಂದರೆ ಇಸ್ರಾಯಿಲಿನ ಪ್ರಕಾರ ಇರಾಣ್ ದೇಶದವರು ಅಣುಶಕ್ತಿಯ ಉಪಯೋಗ ಮಾಡಲು ಕೇವಲ ಆರು ತಿಂಗಳಿನ ದೂರದಲ್ಲಿರುವರು. ಲಿಬನಿನ ಹೆಝ್ ಬೊಲ್ಲಾಹ ರವರು ಮಿಸ್ಸಾಯಿಲನ್ನು ಪಡೆದಿದ್ದು ಇಸ್ರಾಯಿಲ್ ನಂತಹ ಸೈನ್ಯಬಲದಿಂದ ಬಹಳ ಸಮರ್ಥವಾದ ದೇಶವನ್ನು ಕೂಡ ಬಗ್ಗಿಸಲು ಯಶಸ್ವಿಯಾಗಿದ್ದಾರೆ. ಅದಲ್ಲದೆ ಶಿರಿಯಾದ ಸೈನ್ಯ ಪರಿತ್ಯಜಿಸಿದ ಬ್ರಿಗೇಡಿಯರ್ ಜನರಲ್ ಝಾಹೇರ್ ಸಾಕೇತ್ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಕಮಾಂಡರ್ ರಾಗಿದ್ದು ಅವರು ಕಳೆದ ವಾರದಲ್ಲಿ ಯು ಎನ್ ಎಸ್ ಸಿ ಒಪ್ಪಂದದ ಪ್ರಕಾರ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಅಸ್ಸಾದ್ ರೆಜಿಮ್ ಒಪ್ಪಿದ್ದರು ಕೂಡ ಅದನ್ನು ಗುಪ್ತರೂಪದಲ್ಲಿ ಲಿಬನಿನ ಹೆಝ್ ಬೊಲ್ಲಾಹ ರಲ್ಲಿಗೆ ಮತ್ತು ಇರಾಕಿಗೆ ಕಳುಹಿಸುತ್ತಿದೆ ಎಂದು ಹೇಳಿರುವರು. ತಮ್ಮ ಮೇಲೆ ಹೆಚ್ಚುತ್ತಿರುವ ಸಂಕಟಗಳಿಂದಾಗಿ ಇಸ್ರಾಯಿಲ್ ತವಕಗೊಳ್ಳುತ್ತಿದೆ ಮತ್ತು ಇರಾಣ್ ಹಾಗು ಶಿರಿಯಾದ ವಿರುದ್ಧ ಸೈನ್ಯಬಲದ ಉಪಯೋಗ ಮಾಡಬೇಕೆನ್ನುವ ಮಾತನ್ನು ಬಹಳ ಸಮಯದಿಂದ ಹೇಳುತ್ತಿದೆ. ಆದರೆ ಇನ್ನೊಂದು ಕಡೆಯಲ್ಲಿ ಯು ಎಸ್ ಈ ಭಾಗದಲ್ಲಿ ತನ್ನ ಸೈನ್ಯಬಲದ ಸ್ಥಾಪಿತವನ್ನು ಕತಾರ್, ಯುಏಈ, ಹಾಗು ಸೌದಿ ಅರೇಬಿಯಾ ದೇಶದ ಸಮ್ಮತದೊಡನೆ ಹೆಚ್ಚಿಸುತ್ತಿದೆ. ಇಸ್ರಾಯಿಲ್ ಹಾಗು ಟರ್ಕಿಯವರು ಕೂಡ ಇತ್ತೀಚಿಗೆ ತನ್ನ ಬಲಪ್ರದರ್ಶನವನ್ನು ಮಾಡಿರುವರು ಮತ್ತು ಒಮ್ಮತದಿಂದ ಶಿರಿಯಾದ ವಿರುದ್ಧ ಸೈನ್ಯಬಲವನ್ನು ಉಪಯೋಗಿಸಿರುವರು. ಈ ಪರಿಸ್ಥಿತಿಯನ್ನು ಸಮತೋಲಮಾಡಲೆಂದು ಮಿಡಲ್ ಇಸ್ಟೀನಲ್ಲಿ ರಶಿಯಾ ತನ್ನ ಸೈನ್ಯ ಬಲವನ್ನು ಹೆಚ್ಚಿಸಿದೆ. ಆದ್ದರಿಂದ ಇರಾಣಿನಿಂದ ಅಣುಶಕ್ತಿಯ ಭಯ ಅದರೊಡನೆ ಇರಾಣಿನ ಎರಡು ಮಿತ್ರರಾಷ್ಟ್ರಗಳಾದ ಶಿರಿಯಾದಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮತ್ತು ಹೆಝ್ ಬೊಲ್ಲಾಹರವರಿಂದ ಮಿಸ್ಸಾಯಿಲಿನ ಆಕ್ರಮಣದ ಭಯವು, ಮುಖ್ಯವಾಗಿ ಮಿಡಲ್ ಈಸ್ಟೀಗೆ ಹಾಗೆಯೇ ಪೂರ್ಣ ವಿಶ್ವಕ್ಕೆ ಬಹಳ ಭಯಂಕರವಾದ ಭಯ ಸೂಚನೆಕೊಡುತ್ತಿದೆ. ನಿಸ್ಸಂದೇಹಯವಾಗಿ ಈ ಸಮಯದಲ್ಲಿ ಪೂರ್ಣ ವಿಶ್ವವು ಮಿಡಲ್ ಈಸ್ಟೀನ ಕೂಡುಹಾದಿಯಲ್ಲಿ ಸಿಲುಕಿದಂತಿದೆ.

No comments:

Post a Comment