Wednesday, 24 December 2014

ಮಾನವ ಸ್ವಭಾವ ತಿಳಿದ ಟೇಸಲಾ

ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಏರು-ಪೇರುಗಳು ಬರುತ್ತಿರುತ್ತವೆ. ಕೆಲಸದಲ್ಲಿಯ ವಿಫಲತೆ, ನಮ್ಮ ಆತ್ಮೀಯರನ್ನು ಕಳೆದುಕೊಳ್ಳುವದು ಅಥವಾ ಕೇವಲ ಆರ್ಥಿಕ ನಷ್ಟವೂ ಕೂಡ ಬಹಳ ಆಶಾವಾದಿಯಾದ ವ್ಯಕ್ತಿಯನ್ನು ನಿರಾಶವಂತನಾಗಿ ಮಾಡಲು ಸಾಧ್ಯವಿದೆ. ಹಾಗಿರುವಾಗ, ಯಾರು ತಾನು ಸ್ವಪ್ನಿಸಿದ ಕಾರ್ಯಗಳು, ಅವನು ಸಾಧಿಸಿದ್ದು ಹಾಗು ಅವನ ಜೀವನವಿಡಿ ಮಾಡಿದ ಎಲ್ಲಾ ಕಾರ್ಯಗಳು ನಾಶವಾಗುತ್ತಿರುವುದನ್ನು ಕಣ್ಣಾರೆ ಕಂಡಾಗ ಅವನಿಗೆಷ್ಟು ಕಷ್ಟವಾಗಿರಬೇಕೆಂದು ನೀವು ಕಲ್ಪಿಸಬಹುದು. ಇದನ್ನು ವಾಸ್ತವದಲ್ಲಿ ಸಂಪೂರ್ಣ ಧ್ವಂಸವೆನ್ನಬೇಕು. ಇಂತಹದನ್ನು ಎದುರಿಸಿದಾಗ ಹೆಚ್ಚಿನ ಜನರು ತನ್ನ ನಿದ್ದೆ, ಚಿತ್ತ ಮತ್ತು ದೇವರಲ್ಲಿಯ ವಿಶ್ವಾಸವನ್ನು ಕಳೆದುಕೊಳ್ಳುವರು.

ಹಿಂದಿನ ಲೇಖನದಲ್ಲಿ ಡಾ.ನಿಕೋಲಾ ಟೇಸಲಾರವರು ಅವರ ಪ್ರಯೋಗಶಾಲೆಯು ಬೆಂಕಿಯಿಂದಾಗಿ ಸುಟ್ಟಾಗ ಇಂತಹದೇ ಸಮಾನವಾದ ಪರಿಸ್ಥಿತಿಯನ್ನು   ಎದುರಿಸಿದರೆಂದು ನಾವು ನೋಡಿರುವೆವು. ಡಾ. ಟೇಸಲಾರವರಿಗೆ ತಾನು ಸಾಧಿಸಿದ ಕಾರ್ಯಗಳು , ಅವರ ಸ್ವಪ್ನಗಳು, ಅವರ ಮನೋರಾಜ್ಯವು ಅಗ್ನಿಯಲ್ಲಿ ಉರಿದು ಬೂದಿಯಾದದ್ದನ್ನು ನೋಡುವದು ನಿಜವಾಗಿಯೂ ಹೃದಯ ತಿರುಚಿದಂತಾಗಿತ್ತು. ಇದರ ಪರಿಣಾಮವಾಗಿ ಅವರು ತನ್ನನ್ನು ಜನರ ಗಮನದಿಂದ ದೂರ ಮಾಡಿಕೊಂಡರು. ಡಾ. ಟೇಸಲಾರವರು ಅವರ ತಾಯಿಯು ಅಮೇರಿಕಕ್ಕೆ ಬಂದಾಗ ಹೆಚ್ಚಾಗಿ ಹೋಗುತ್ತಿರುವ ಗ್ರಾಮಾಂತರ ಪ್ರದೇಶದ ಚರ್ಚಿಗೆ ತಿರುಗಿ ಬಂದರೆಂದು ಹೇಳಲಾಗುತ್ತದೆ. ಇಲ್ಲಿಯೇ ಡಾ. ಟೇಸಲಾರವರ ಪುರ್ನ್ಜನ್ಮವಾಯಿತು. ದೇವರು ಅವರನ್ನು ಯಾವುದೋ ಉದ್ದೇಶಕ್ಕಾಗಿ ಜೀವಂತವಾಗಿ ಇಟ್ಟಿದ್ದಾರೆಂದು ಮತ್ತು ಆದ ವಿನಾಶಕ್ಕೆ ದೇವರನ್ನು ದೂಷಿಸದೆ ಆ ಉದ್ದೇಶವನ್ನು ಅವರು ಪರಿಪೂರ್ಣಿಸಬೇಕೆಂದು ಅವರಿಗೆ ಅರಿವಾಯಿತು. ಅವರನ್ನು ತನ್ನ ದೈವಿಕ ಹಸ್ತಕ್ಷೇಪದಿಂದ  ಕಾಪಾಡಿದಕ್ಕಾಗಿ ಡಾ. ಟೇಸಲಾರವರು ದೇವರಿಗೆ ಕೃತಜ್ನತೆಯನ್ನು ಅಭಿವ್ಯಕ್ತಿಸಿದರು. ಯಾವುದೋ ಉದ್ದೇಶಕ್ಕಾಗಿ ದೇವರು ಹೀಗೆ ಆಗಲು ಬಿಟ್ಟರೆಂದು ಡಾ. ಟೇಸಲಾರವರ ನಂಬಿಕೆಯಾಗಿತ್ತು ಅದರ ಅರ್ಥ ಡಾ.ಟೇಸಲಾರವರು ಇದನ್ನು ಪುನ: ವಿಚಾರ ಮಾಡಿ ಅವರು ಮಾಡುವ ಕೆಲವು ಕಾರ್ಯಗಳನ್ನು ಬದಲಾಯಿಸುವ ಆವಷ್ಯಕತೆಯಿದೆ ಎಂದು ತಿಳಿದರು.

ಒಂದು ತಿಂಗಳ ತನಕ ಆಲೋಚನೆ ಮಾಡಿದ ನಂತರ, ಡಾ. ಟೇಸಲಾರವರು ಪುನ: ಶೂನ್ಯದಿಂದ ಅರಂಭಿಸಲು ಹಾಗು ಅಳಿಸಿ ಹೋದದ್ದನ್ನು ಇನ್ನೊಂದು ಸಲ ಮುಂದಿನಂತೆ ತಯಾರಿಸಿ ನಿಲ್ಲಿಸಲೆಂದು ದೃಢ ನಿರ್ಧಾರ ಮಾಡಿ ಹಿಂದಿರುಗಿ ನಿವ್ ಯಾರ್ಕಿಗೆ ಬಂದರು. ಇದನ್ನು ಸಾಧಿಸುವದು ನಿಜವಾಗಿಯೂ ಬಹಳ ದೊಡ್ಡ ಗುರಿಯಾಗಿತ್ತು. ಆಲ್ಟರ್ ನೇಟಿಂಗ್ ಕರಂಟಿನ ಆಧಾರದ ಮೇಲೆ ಹೈಡ್ರೊ-ಎಲೆಕ್ಟ್ರಿಕ್ ಪಾವರ್ ಜನರೇಶನ್ ಪ್ಲಾಂಟ್ ನ್ನು ನೈಗರ ಫಾಲ್ಸ್ ಮೇಲೆ ಕಟ್ಟುವ ಮೊದಲ ಧ್ಯೇಯವಾಗಿತ್ತು. ಇದು ಡಾ.ಟೇಸಲಾರವರು ಚಿಕ್ಕಂದಿನಿಂದ ನೋಡಿದ ಸ್ವಪ್ನವಾಗಿತ್ತು.
Tesla-_nigara


ಡಾ. ಕೆಲ್ವಿನ್ ಮತ್ತು ಅವರ ಕಮೀಶನ್ (ನಿಯೋಗಿಸುವವರು) ರವರು ನೈಗರದ ಪಾವರ್ ಸರಂಜಾಮು ಮಾಡುತ್ತಿದ್ದು ಬಫೆಲೊ ಪಟ್ಟಣಕ್ಕು ಕೂಡ ಪಾವರ್ (ಯಂತ್ರಶಕ್ತಿ) ಮಾಡುವ  ಅಧಿಕಾರಿಗಳಾಗಿದ್ದರು. ಮುಖ್ಯದ ಸಂಗತಿಯೆಂದರೆ ಇವತ್ತು ಅದು ನಿವ್ ಯಾರ್ಕ್ ಪ್ರಾಂತದ ಎರಡನೇಯ ಬಹಳ ಶಕ್ತಿಶಾಲಿ ನಗರವಾಗಿದ್ದು ಇದರ ಕರಾರನ್ನು ಸಂಯೋಜಕರಾಗಿರುವ ಜೊರ್ಜ್ ವೆಸ್ಟಿಂಗ್ ಹೌಸ್ ಹಾಗು ಡಾ.ಟೇಸಲಾರವರಿಗೆ ಕೊಡಲಾಯಿತು. ಇದರಿಂದ ಡಾ.ಟೇಸಲಾರವರ ಸ್ವಪ್ನ ಸಾಕಾರವಾದಂತಾಯಿತು. ಈ ಪ್ರಕಲ್ಪಕ್ಕಾಗಿ ಅವರು ನಿರಂತರ ಪರಿಶ್ರಮ ಮಾಡಿ ಮತ್ತು ಅಪರಮಿತ ಸಮರ್ಪಣೆಯಿಂದ ದುಡಿದರು ಹಾಗು ಅವರ ಈ ಕಠಿಣ ಪರಿಶ್ರಮದಿಂದಾಗಿ ಸಂಪೂರ್ಣ ಏಸಿ ಪಾವರ್ ಪ್ಲಾಂಟ್ ನ ಕೆಲಸವನ್ನು ನೈಗರದಲ್ಲಿ  ಹನ್ನೊಂದು ತಿಂಗಳಿನಲ್ಲಿ ಅಸಾಧ್ಯವಾಗಿರುವುದನ್ನು ಅಲ್ಪ ಸಮಯದಲ್ಲಿ ಸಾಧ್ಯ ಮಾಡಿ ತೋರಿಸಿದರು. ಇದು ೧೬ ನೇ ನವೆಂಬರ್ ೧೮೯೬ ದಿವಸದಂದು ಅಂದರೆ ಅವರ ಪ್ರಯೋಗಶಾಲೆಯು ಪೂರ್ಣ ಭೂಮಿಗತವಾಗಿ ಒಂದು ವರ್ಷ ಆಗುವ ಒಳಗೆ  ಡಾ. ನಿಕೋಲಾ ಟೇಸಲಾರವರು ಬಫೆಲೊದಲ್ಲಿಯ ಉದ್ಯೋಗಗಳಿಗಾಗಿ ನೈಗರದಲ್ಲಿರುವ ಎಡ್ ವರ್ಡ್ ಡೀನ್ ಆಡಮ್ಸ್ ಸ್ಟೇಷನ್ ನಿಂದ ಹೈಡ್ರೊಎಲೆಕ್ಟ್ರಿಕ್ ಜನರೇಟರ್ಸ್ ಮೂಲಕ ಎಲೆಕ್ಟ್ರಿಕ್ ಪಾವರನ್ನು ಜನರೇಟ್ ಹಾಗು ಟ್ರಾಂಸ್ ಮಿಟ್ ಮಾಡಿದರು. ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕೊರ್ಪೊರೇಶನ್ ರವರು ಡಾ. ಟೇಸಲಾರವರ ಏಸಿ ಸಿಸ್ಟಮ್ ನ ಪೇಟೆಂಟ್ ಗಳನ್ನು ಉಪಯೋಗಿಸಿ ಜನರೇಟರ್ಸ್ ನ್ನು ತಯಾರಿಸಿದ್ದರು. ಜನರೇಟರ್ಸ್ ಗಳ ಮೇಲೆ ನಿಕೋಲಾ ಟೇಸಲಾರವರ ಹೆಸರನ್ನು ನಮೂದು ಮಾಡಲಾಗಿತ್ತು. ಕೆಲವೇ ವರ್ಷದ ಒಳಗೆ ಒಟ್ಟು ಹತ್ತು ಜನರೇಟರ್ಸ್ ಗಳು ಪ್ರಕಲ್ಪದ ರಚನಾಕ್ರಮೆಯಂತೆಯೇ ನೈಗರಾದಲ್ಲಿ ಕೆಲಸ ಮಾಡ ತೊಡಗಿದವು. ಈಗ ಈ ಪ್ಲಾಂಟ್ ನ ಮೂಲಕವೇ ಸಂಪೂರ್ಣ ನಿವ್ ಯಾರ್ಕ್ ನಗರಕ್ಕೆ ಎಲೆಕ್ಟ್ರಿಸಿಟಿಯನ್ನು ಪೂರೈಸಲಾಗುತ್ತಿದೆ. ಸಿಟಿ ಬ್ರಾಡ್ ವೆಜ್, ಎಂದು ಕರೆಯಲಾಗುತ್ತಿರುವ ಬಹಳ ಲೋಕಪ್ರಿಯವಾದ ಮನೋರಂಜನೆಯ ಜಿಲ್ಲೆಗಳು ಪ್ರಕಾಶದಿಂದ ಜಗಜಗಿಸುತ್ತಿದೆ, ಲಿಫ್ಟ್ ಗಳು, ರೇಲ್ವೆಯ ಹಾದಿಗಳು ಮತ್ತು ಒಳಹಾದಿಗಳು ನೈಗರಾದಿಂದ ಪಡೆಯುವ ಎಲೆಕ್ಟ್ರಿಸಿಟಿಯಿಂದ ಪ್ರಕಾಶಿಸುತ್ತಿವೆ. ಆದರೆ ಬಹಳ ಆಶ್ಚರ್ಯಕರ ಹಾಗು ದಿಗ್ಬ್ರಮೆ ಮಾಡುವ ಮಾತೆಂದರೆ ಎಡಿಸನ್ ಕೂಡ ತನ್ನ ಸಾಂಪ್ರದಾಯಿಕ (ಕನ್ ವೆಂಶನಲ್) ಡಾಯ್ ರೆಕ್ಟ್ ಕರಂಟ್ ಸಿಸ್ಟಮನ್ನು ಆಲ್ಟರ್ ನೇಟಿಂಗ್ ಕರಂಟ್ ಸಿಸ್ಟಮ್ ಗೆ ಪರಿವರ್ತಿಸಿದನು. ಡಾ. ನಿಕೋಲಾ ಟೇಸಲಾರವರ ಪತನ ನಾಶನದಿಂದ ಅದ್ಭುತವಾದ ಏಳಿಕೆಯು ಅದು ಕೂಡ ಅವರ ಪ್ರಯೋಗಶಾಲೆಯು ನಾಶವಾಗಿ ಹನ್ನೊಂದು ತಿಂಗಳಿನ ಒಳಗೆ ಆದಾಗ ಅದನ್ನು ನಾವು ಪ್ರಸಿದ್ಧವಾದ ಫಿನಿಕ್ಸ್ ಪಕ್ಷಿಯು ಬೂದಿಯಿಂದ ಹೊರಬಂದು ಮೇಲೇರಿ ಹಾರಾಡಿತು ಎಂಬುದಕ್ಕೆ  ಹೋಲಿಸಬಹುದು. ಮತ್ತು ಹೀಗೆ ಹಿಂದಿರುಗಿ ಗೆದ್ದು ಬಂದ ಹೋರಾಟವನ್ನು ನಿಜವಾಗಿಯೂ ದೇವರಲ್ಲಿ ದೃಢ ವಿಶ್ವಾಸವಿದ್ದವನಿಂದಲೇ ಅಪೇಕ್ಷಿಸಬಹುದು. ಕೇವಲ ವಿಶ್ವಾಸವೇ ಇಂತಹ ತತ್ವವನ್ನು ಪಾಲಿಸುವದು.

೧೨ನೇ ಜನೇವರಿ ೧೮೯೭ ರಂದು ಪ್ಲಾಂಟಿನ ಪ್ರಾರಂಭೋತ್ಸವದ ಮುಖ್ಯವಾದ ಪ್ರಸಂಗದ ಸಮಯದಲ್ಲಿ ಡಾ.ನಿಕೋಲಾ ಟೇಸಲಾರವರು ಕೆಳಗಿನ ಶಬ್ದಗಳನ್ನು ಉಚ್ಚರಿಸಿದರು, " ನಮ್ಮ ಹತ್ತಿರ ಕಳೆದ ಕಾಲದ ಹಲವು ಸ್ಮಾರಕ ಚಿಹ್ನೆಗಳಿವೆ, ನಮ್ಮ ಹತ್ತಿರ ಅರಮನೆಗಳು ಹಾಗು ಗೋಪುರಗಳಿವೆ, ಗ್ರೀಕಿನ ದೇವಸ್ಥಾನಗಳು ಹಾಗು ಕ್ರೈಸ್ತ ಪ್ರಪಂಚದ ಆರಾಧನಾ ಮಂದಿರಗಳಿವೆ. ಅವುಗಳಲ್ಲಿ ನಿದರ್ಶನಕ್ಕೆ ಬರುವಂತಹದು ಮನುಷ್ಯನ ಶಕ್ತಿ, ರಾಷ್ಟ್ರಗಳ ಮಹತ್ವ, ಕಲೆ ಮೇಲಿನ ಪ್ರೀತಿ ಮತ್ತು ಧಾರ್ಮಿಕ ಭಕ್ತಿ. ಆದರೆ ನೈಗರಾದ ಸ್ಮಾರಕಚಿಹ್ಮೆಯು ತನ್ನಲ್ಲಿಯೇ ಒಂದು ಮಹತ್ವದ್ದುಳ್ಳದಾಗಿದೆ, ನಮ್ಮ ವರ್ತಮಾನದ ವಿಚಾರ ಹಾಗು ಪ್ರವೃತ್ತಿಯನ್ನು ಒಡಂಬಡಿಸಿದೆ. ಇದು ನಮ್ಮ ವಿಜ್ನಾನ ಕಾಲದ ಬಹಳ ಬಹುಮೂಲ್ಯವಾದ ಸ್ಮಾರಕಚಿಹ್ಮೆಯಾಗಿದೆ, ಜ್ನಾನೋದಯದ ಹಾಗು ಶಾಂತಿಯ ನಿಜವಾದ ಸ್ಮಾರಕಚಿಹ್ಮೆಯಾಗಿದೆ. ಇದು ಮಾನವನ ಸೇವೆಗಾಗಿ ನೈಸರ್ಗಿಕ ಶಕ್ತಿಯ ವಿಜಯವನ್ನು ಸೂಚಿಸುತ್ತದೆ. ಕ್ರೂರ ಪದ್ಧತಿಗಳಿಂದ ಬಿಡುಗಡೆ, ದಶಲಕ್ಷ (ಮಿಲ್ಲಿಯನ್ಸ್) ಜನರ ಕಷ್ಟತಾಪತ್ರಯಗಳನ್ನು ಪರಿಹರಿಸಿದೆ." ಡಾ.ಟೇಸಲಾರವರ ಉದಾತ್ತ ಧ್ಯೇಯದ ಉದ್ದೇಶ ಮತ್ತು ಅವರ ಅಸಮಾನತೆಯನ್ನು ಕೊನೆಗೊಳಿಸುವ ದೂರದೃಷ್ಟಿಯು ಅವರ ಈ ಮಾತುಗಳಿಂದ ವ್ಯಕ್ತವಾಗಿತ್ತು ಮತ್ತು ಡಾ.ಟೇಸಲಾರಂತಹ ಒಬ್ಬ ಸತ್ಪುರುಷನೇ ಇದನ್ನು ಸ್ವಪ್ನಿಸಬಹುದು ಹಾಗು ಆ ಪ್ರಕಲ್ಪವನ್ನು ನಿರ್ವಹಿಸಿ, ನಿರಹಂಕಾರಿಯಾಗಿ ಉಳಿದು ಹಾಗು ಮಾನವ ಜೀವನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಮಾಡಲು ಅವರು ತನ್ನ ಪ್ರಯೋಗಶಾಲೆಗೆ ಹಿಂದಿರುಗಿದರು.

ಆದರೆ ಅವರ ಈ ವಿಜಯವು ಸಿಹಿ-ಕಹಿಯಂತಿತ್ತು. ೧೮೮೯ರ ಸಮಯದಲ್ಲಿ ಥೋಮಸ್ ಎಡಿಸನ್ ರವರಿಗೆ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಉತ್ಪಾದಿಸುವ ಹಲವು ಕಂಪನಿಗಳಲ್ಲಿ ಔದ್ಯೋಗಿಕ ರುಚಿಯಿತ್ತು. ೧೮೮೯ ರಲ್ಲಿ  ಜೆ.ಪಿ ಮೊರ್ಗನ್ ಮತ್ತು ಅಂಥೋನಿ ಡ್ರೆಕ್ಸೆಲ್ ರವರು ಸ್ಥಾಪಿಸಿದ ಡ್ರೆಕ್ಸೆಲ್, ಮೊರ್ಗನ್ ಆಂಡ್ ಕಂಪನಿಗಳು ಎಡಿಸನ್ ರವರ ಸಂಶೋಧನೆಗಳಿಗಾಗಿ ಆರ್ಥಿಕ ಸಹಾಯ ಮಾಡುತಿತ್ತು ಮತ್ತು ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿಯನ್ನು ಸ್ಥಾಪಿಸಿ ಒಂದು ಸಂಸ್ಥೆಯ ಅಧಿಪತ್ಯದಲ್ಲಿ ಬರಲು ಈ ಕಂಪನಿಗಳಿಗೆ ಒಂದಾಗಲು ಸಹಾಯ ಮಾಡಿದ್ದರು. ಹೊಸತಾಗಿ ಸ್ಥಾಪಿತವಾದ ಈ ಕಂಪನಿಯು ಸ್ಪ್ರೇಗ್ ಎಲೆಕ್ಟ್ರಿಕ್ ರೇಲ್ವೆ ಆಂಡ್ ಮೋಟರ್ ಕಂಪನಿಯನ್ನು ಕೂಡ ಅದೇ ವರ್ಷದಲ್ಲಿ ಪಡೆದು ಕೊಂಡಿತು.

ಅದೇ ಸಮಯದಲ್ಲಿ ಚಾರ್ಲ್ಸ್ ಕೊಫಿನ್ ರವರ ಅಧಿಪತ್ಯದಲ್ಲಿ ಥೊಮಸನ್-ಹ್ಯುಸ್ಟನ್ ಎಲೆಕ್ಟ್ರಿಕ್ ಕಂಪನಿಯು ಹಲವು ಪ್ರತಿಸ್ಪರ್ಧಿಗಳನ್ನು ಹಾಗು ಅವರ ಬಹಳ ಮಹತ್ವದ ಪೇಟೆಂಟ್ ಗಳನ್ನು ಸುಗಮತೆಯಿಂದ ಪಡೆದುಕೊಂಡರು. ನಂತರ ೧೮೯೨ ರಲ್ಲಿ ಔಪಚಾರಿಕವಾಗಿ ಜನರಲ್ ಎಲೆಕ್ಟ್ರಿಕ್ ಸ್ಥಾಪಿತಮಾಡಿ ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿ ಆಫ್ ಸ್ಕೆನೆಕ್ಟಡಿ, ನಿವ್ ಯಾರ್ಕ್ ಮತ್ತು ಥೊಮಸನ್ -ಹ್ಯುಸ್ಟನ್ ಎಲೆಕ್ಟಿಕ್ ಕಂಪನಿ ಆಫ್ ಲಿಯನ್ ಮ್ಯಾಸ್ಸಾಚುಸೆಟ್ಸ್ ಗಳನ್ನು ಅದರಲ್ಲಿ ಒಂದುಗೂಡಿಸಿದಾಗ ಎಡಿಸನ್ ತನ್ನ ಕಂಪನಿಯ ಕಸಬು ಪ್ರವೀಣರಾದ ಕಾರ್ಯಸ್ಥಾಪಕರ ಮೇಲಿನ ಅಧಿಕಾರವನ್ನು ಕಳೆದುಕೊಂಡರು ಹಾಗು ಜನರಲ್ ಎಲೆಕ್ಟ್ರಿಕ್ ಎಂಬ ಹೆಸರಿನಲ್ಲಿ ಒಂದಾಗಿ ಉದಯಕ್ಕೆ ಬಂದಿತು. ಮತ್ತು ಏಸಿ ಸಿಸ್ಟಮ್ ನ ಪೇಟೆಂಟಿಗಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯ ವಿರುದ್ಧ ಜನರಲ್ ಎಲೆಕ್ಟ್ರಿಕ್ ಕಂಪನಿಯು ಕಾನೂನಿನ ಸಹಾಯಪಡೆದುಕೊಂಡಿತು. ಆದರೆ ಈ ಕೇಸಿನಲ್ಲಿ ವೆಸ್ಟಿಂಗ್ ಹೌಸ್ ರವರು ವಿಜಯಿಯಾದರು ಕೂಡ ಈ ವಿಜಯಕ್ಕಾಗಿ ಬಹಳ ಹಣವು ವ್ಯಯವಾಯಿತು. ಇದರಿಂದಾಗಿ ವೆಸ್ಟಿಂಗ್ ಹೌಸ್ ಗೆ ತನ್ನನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಯಿತು. ೧೯೦೭ ರಲ್ಲಿ ಇಂತಹ ವಿಪತ್ಕರ ಸಂದರ್ಭದಲ್ಲಿ ಮತ್ತು ಆರ್ಥಿಕ ವ್ಯವಹಾರದ ಮಾರುಕಟ್ಟೆಯಲ್ಲಿ ಡಾ.ಟೇಸಲಾರವರಿಗೆ ವಿರೋಧಿಸುತ್ತಿರುವ ವಿಪರೀತ ಉದ್ದೇಶವುಳ್ಳ ಸಂಚುಗಾರರ ಕಾರಣದಿಂದಾಗಿ ವೆಸ್ಟಿಂಗ್ ಹೌಸ್ ಕಂಪನಿಯ ಸ್ಟಾಕ್ ನ ಬೆಲೆಯು ಬೀಳತೊಡಗಿತು.

ಇಂತಹ ಸಮಯದಲ್ಲಿ ಡಾ. ಟೇಸಲಾರವರು ಇನ್ನೊಮ್ಮೆ ವೆಸ್ಟಿಂಗ್ ಹೌಸ್ ರವರ ಸಹಾಯಕ್ಕೆಂದು ಮುಂದೆ ಬಂದರು. ಡಾ. ನಿಕೋಲಾ ಟೇಸಲಾರವರು ವೆಸ್ಟಿಂಗ್ ಹಾಸ್ ರವರ ಜೊತೆ ಮಾಡಿದ ೧೨ ಮಿಲ್ಲಿಯನ್ ಡಾಲರಿನ ಬೆಲೆಯ ಕರಾರನ್ನು ನಿಜದಲ್ಲಿ ಹರಿದು ಬಿಸಾಡಿದರು ಇದರ ಪ್ರಕಾರ ವೆಸ್ಟಿಂಗ್ ಹೌಸ್ ರವರು ಡಾ. ಟೇಸಲಾರವರಿಗೆ ಅವರ ಏಸಿ ಪೇಟಂಟ್ ನ್ನು ಉಪಯೋಗಿಸಿ  ಪ್ರತಿಯೊಂದು ಹೊರ್ಸ್ ಪಾವರ್ ಆಫ್ ಎನರ್ಜಿಯನ್ನು ಜನರೇಟ್ ಮಾಡಿದಾಗ ಒಂದು ಡಾಲರಿನಂತೆ ಕೊಡಲು ಅವರ ಕಂಪನಿಯು ವಚನ ಬದ್ಧವಾಗಿತ್ತು. ಚಿತ್ತಾಕರ್ಷಕದ ವಿಷಯವೆಂದರೆ ಇಂದಿನ ಕಾಲದಲ್ಲಿ ಈ ಕರಾರನ್ನು ೩೦೦ ಮಿಲ್ಲಿಯನ್ ಡಾಲರ್ಸ್ ನಷ್ಟು ಮೂಲ್ಯವಾಗಿದೆಯೆಂದು ಬ್ಯಾಂಕಿನವರು ಅಂದಾಜು ಹಾಕಿರುವರು.

ಡಾ. ಟೇಸಲಾರವರು ವೆಸ್ಟಿಂಗ್ ಹೌಸ್ ನ ಕಂಪನಿಯನ್ನು ಋಣ ಮುಕ್ತಮಾಡಲು ತನ್ನ ಆರ್ಥಿಕ ಲಾಭವನ್ನು ಹೀಗೆಯೇ ಬಿಟ್ಟು ಕೊಟ್ಟರು ಯಾಕೆಂದರೆ ಅವರ ಪ್ರಾರಂಭದ ಪೇಚಾಟದ ದಿವಸದಲ್ಲಿ ವೆಸ್ಟಿಂಗ್ ಹೌಸ್ ನವರು ಅವರಿಗೆ ಸಹಾಯ ಮಾಡಿದ್ದರು ಮತ್ತು ಜನಸಾಮಾನ್ಯರಿಗೆ ಬಹಳ ಕಡಿಮೆ ಕ್ರಯದಲ್ಲಿ ಎಲೆಕ್ಟ್ರಿಸಿಯನ್ನು ಪೂರೈಸಿದ್ದರು. ಡಾ. ಟೇಸಲಾರವರ ಇಂತಹ ನಿ:ಸ್ವಾರ್ಥದ ವರ್ತನೆಯಿಂದಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯು ಜೆ.ಪಿ. ಮೊರ್ಗನ್ ರವರ ಕೈಯಲ್ಲಿ ಸ್ಥಾನಾಂತರವಾಗುವದು ತಳ್ಳಿತು ಹಾಗು ಪಾವರ್ ಜನರೇಶನ್ ನ ವ್ಯಾಪಾರ ಸಂಸ್ಥೆಗಳಿಗೆ ಏಕಾಧಿಕಾರ ಸಿಗದಿದ್ದರಿಂದ ಸಾಮಾನ್ಯ ಜನರ ತನಕ ಅಗ್ಗವಾದ ಎಲೆಕ್ಟ್ರಿಸಿಟಿ ತಲುಪಲು ಅಡ್ಡಿ ಬರಲಾಗಲಿಲ್ಲ. ಅವರ ಪೇಟಂಟ್ಸ್ ಗಳನ್ನು ಮಾರಿದ್ದರಿಂದ ಮತ್ತು ಅವರ ೧೨ ಮಿಲ್ಲಿಯನ್ ಡಾಲರಿನ ಕರಾರನ್ನು ರದ್ದು ಮಾಡಿದ್ದರಿಂದ ಡಾ. ಟೇಸಲಾರವರ ಸ್ಥಾಯಿಕ ಉತ್ಪಾದನೆಯು ತೀವ್ರವಾಗಿ ನಶಿಸಿತು ಆದರೂ ಅವರು ಕೇವಲ ಒಂದೇ ಒಂದು ಕಾರಣಕ್ಕಾಗಿ ಅಂದರೆ ಮಾನವೀಯತೆಯ ಉದ್ಧಾರವನ್ನು ಬಯಸಿದ್ದರು.

ಈ ಮಹಾನ ಮನುಷ್ಯನ ಅದ್ಭುತಕಾರ್ಯಗಳು ಮತ್ತು ಶಬ್ದಗಳು ನಿಜವಾಗಿಯೂ ಪ್ರೇರಣೆ ಕೊಡುತ್ತದೆ. ಇಂತಹ ಆವ್ಹಾನಗಳನ್ನು ಮತ್ತು ವಿಷಮ ಪರಿಸ್ಥಿತಿಗಳನ್ನು               ಒಂಟಿಯಾಗಿಯೇ ಎದುರಿಸಿ ಯಾವುದಕ್ಕು ಕೂಡ ಬಗ್ಗದೆ ಅಭಿಮಾನದಿಂದ ನಡೆದ ಅವರು ಮೆಚ್ಚಿಗೆಯ ಪಾತ್ರವಲ್ಲದೆ ಅದನ್ನು ಕಲ್ಪಪಿಸಲು ಕೂಡ ಅಸಾಧ್ಯ. ನಮ್ಮ ಮುಂದಿನ ಲೇಖನದಲ್ಲಿ ನಾವು ಡಾ. ನಿಕೋಲಾ ಟೇಸಲಾರವರ ಕಥೆಯ ಬಹಳ ಚಿತ್ತಾಕರ್ಷಕ ಭಾಗವನ್ನು ನೋಡಲಿರುವೆವು. ಅಲ್ಲಿಯ ತನಕ ಹೇಗೆ ಒಬ್ಬ ಮನುಷ್ಯನು  ತನ್ನ ಸರ್ವಸ್ವವನ್ನು ಕಳೆದುಕೊಂಡರೂ ವಿಶ್ವಾಸ ಮಾತ್ರ ಕಳೆದುಕೊಳ್ಳದೆ ಕೇವಲ ದೇವರಲ್ಲಿಯ ದೃಢ ವಿಶ್ವಾಸದಿಂದಾಗಿ ತನ್ನ ತತ್ವ ಮತ್ತು ಉದ್ದೇಶವನ್ನು  ಸಾದಿಸಬಹುದೆನ್ನುವುದನ್ನು ವಿಚಾರ ಮಾಡಿ.


|| ಹರಿ ಒಂ ||  || ಶ್ರೀರಾಮ || || ಅಂಬಜ್ನ ||  

Saturday, 15 November 2014

ತಂತಿರಹಿತ ವಿದ್ಯುತಚ್ಛಕ್ತಿ : ಭಾಗ-೨

ಹಿಂದಿನ ಲೇಖನದಲ್ಲಿ ನಾವು ಡಾ.ನಿಕೋಲಾ ಟೇಸಲಾರವರು ಹೇಗೆ ಇಂಪಲ್ಸೆಸ್ ನ ಮೂಲತತ್ವಗಳನ್ನು ಕಂಡುಹಿಡಿದು ಮತ್ತು ಅದನ್ನು ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ಗೆ ಪ್ರಯೋಗಿಸಿದರು ಹಾಗೆಯೇ ಕರಂಟ್ ಗಾಳಿಯ ಮೂಲಕ ಸಂಚಾರ ಮಾಡುವುದನ್ನು ನೋಡಿದೇವು.

ಇದೊಂದು ಕೇವಲ ತಂತಿರಹಿತ ವಿದ್ಯುತಚ್ಛಕ್ತಿಯ ಕಡೆಗೆ ಹೋಗುವ ಮೊದಲನೇಯ ಹೆಜ್ಜೆಯಾಗಿತ್ತು. ಲೇಖನದ ಈ ಸರದಿಗಳಲ್ಲಿ ನಾವು ತಂತಿರಹಿತ ವಿದ್ಯುತಚ್ಛಕ್ತಿಯ ಬಳಸುವಿಕೆ ಹಾಗೆಯೇ ಈ ಮೂಲತತ್ವಗಳು ಹೇಗೆ ಡಾ.ನಿಕೋಲಾ ಟೇಸಲಾರವರ ಮುಂದಿನ ಕೆಲವು ಹೊಸ ಪದ್ಧತಿಯ ಸಂಶೋಧನೆಗಳನ್ನು ರೂಪಿಸಿರುವುದನ್ನು ನೋಡಲಿರುವೆವು.



ಈಗ ನಾವು ಸ್ವಲ್ಪ ಹಿಂದೆ ಹೋಗಿ ಡಾ. ಟೇಸಲಾರವರು ಅವರ ಪ್ರಯೋಗಗಳನ್ನು ತನ್ನ ಪ್ರಯೋಗಶಾಲೆಯಲ್ಲಿ ಹೇಗೆ ಮಾಡುತ್ತಿದ್ದರೆಂದು ನೋಡುವ. ಡಾ. ಟೇಸಲಾರವರು ಇಂಪಲ್ಸಿನ ಮೂಲತತ್ವಗಳನ್ನು ಉಪಯೋಗಿಸಿ ವಿದ್ಯುತಚ್ಛಕ್ತಿಯನ್ನು ತಂತಿರಹಿತವಾಗಿ ಹೇಗೆ ಪ್ರವಹಿಸಬಹುದೆಂದು ತಿಳಿದಾಗ ಮುಂದೆ ಅವರು ಸರ್ಕಿಟಿನಲ್ಲಿ  ಬದಲಾವಣೆ ಮಾಡಿ ೬೦೦೦ ಆರ್ ಪಿಎಮ್ (ರೆವುಲುಶನ್ ಪರ್ ಮಿನಿಟ್) ನ ಗತಿಯಲ್ಲಿ ಹಚ್ಚಿಸುವ ಮತ್ತು ಆರಿಸುವ ರೋಟರಿ ಸ್ವಿಚ್ಚಿ (ಸರತಿಯ ಒತ್ತುಗುಂಡಿ) ನ ಸಂಕಲನೆ ಮಾಡಿ ಅದರಲ್ಲಿಯ ಕರಂಟ್ ನ್ನು ೧೫,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದರು.

ಈಗ ಸರ್ಕಿಟನ್ನು ಅವರು ಚಲಾಯಿಸಿದಾಗ ರೋಟರಿ ಸ್ವಿಚ್ಚಿನ ಕಾರ್ಯದ ಕಾರಣದಿಂದಾಗಿ ಸೂಜಿಯಂತೆ ತಿವಿಯುವ ನೋವಿನ ತೀವ್ರತೆಯು ಹೆಚ್ಚಾಯಿತು. ಟ್ರಾಂಸ್ ಫೊರಮರನ್ನು ಉಪಯೋಗಿಸಿದಾಗ ವೋಲ್ಟೇಜ್ ಹೆಚ್ಚಾಗುವದು ಎಂಬ ವಿಷಯ ಅವರಿಗೆ ತಿಳಿದಿತ್ತು, ಆದರೆ ಇಲ್ಲಿ ಟ್ರಾಂಸ್ ಫೊರಮರನ್ನು ಉಪಯೋಗಿಸದಿದ್ದಾಗ ಕಡಿಮೆ ಸಮಯದ ಅಂತರದಲ್ಲಿ ಇಂಪಲ್ಸೆಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜನರೇಟ್ ಮಾಡಿದಾಗ ವೋಲ್ಟೇಜ್ ಗಳು ಹೆಚ್ಚಾಗುತ್ತಿರುವುದೆಂದು ಅವರ ಗಮನಕ್ಕೆ ಬಂತು (ಇಂಪಲ್ಸೆಸ್ ಗಳು ಕರಂಟ್ ಮತ್ತು ವೋಲ್ಟೇಜನ್ನು ಹೆಚ್ಚಿಸುವದು). ತಾಮ್ರದ ತಂತಿಗಳ ಸುತ್ತಲು ಬಿಳಿ ಮತ್ತು ನೀಲಿ ಬಣ್ಣದ ಅಗ್ನಿಕಣಗಳನ್ನು ಕೂಡ ಅವರು ನೋಡಿದರು.

ಈ ಪ್ರಯೋಗದ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರು ಸೂಜಿಯಂತೆ ತಿವಿಯುವ ತೀಕ್ಷಣತೆಯು ಹೆಚ್ಚಿದನ್ನು ಅನುಭವಿಸಿದರು. ಆದರೂ ಕೂಡ ಅವರು ವೋಲ್ಟೇಜ್ ನ್ನು ಮತ್ತು ಕಾಯಿಲ್ ನ್ನು ಹಚ್ಚಿಸಿ ಮತ್ತು ಆರಿಸುವ ಕ್ರಮವನ್ನು ಸ್ವಿಚ್ಚಿನ ಮೂಲಕ ಹೆಚ್ಚಿಸಿ ತನ್ನ ಪ್ರಯೋಗಗಳನ್ನು ಸತತವಾಗಿ ಮಾಡತೊಡಗಿದರು. ಇದನ್ನು ಅವರು ಕೇವಲ ವಿಜ್ನಾನದ ಜ್ನಾನದ ಮೇಲೆ ತನಗಿರುವ ವಿಶ್ವಾಸ ಮತ್ತು ಸರ್ವಸಮರ್ಥ ಪರಮೇಶ್ವರರ ಮೇಲಿದ್ದ ವಿಶ್ವಾಸದ ಕಾರಣದಿಂದಾಗಿಯೇ ಮಾಡಲಾಯಿತು. ಈ ಅದ್ಭುತವಾದ ರಕ್ಷಾಕವಚವನ್ನು ಸರಿಯಾಗಿ ಉಪಯೋಗಿಸಿದ್ದಲ್ಲಿ ಅದನ್ನು ಮಾನವಸಮಾಜಕ್ಕೆ ಪ್ರಯೋಜನಕಾರವಾದ ಹೊಸ ಪ್ರಕಾರದ ವಿದ್ಯುತಚ್ಛಕ್ತಿಯ ರೂಪದಲ್ಲಿ ಪಡೆಯಬಹುದು ಎಂದು ಅವರ ನಂಬಿಕೆಯಾಗಿತ್ತು.

ಅವರ ಪ್ರಯೋಗಗಳನ್ನು ಹೆಚ್ಚು ಸುಧಾರಿಸಲೆಂದು ಅವರು ಬಹಳ ಸಾಹಸದ ಪ್ರಯತ್ನಗಳನ್ನು ಮಾಡುತ್ತಿರುವಾಗ ಡಾ. ನಿಕೋಲಾ  ಟೇಸಲಾರವರು ತ್ವರಿತಗತಿಯ ಯಾಂತ್ರಿಕ ರೋಟರಿ ಸ್ವಿಚ್ಚನ್ನು ತಾವೇ ತಯಾರಿಸಿದರು ಮತ್ತು ಅದು ಒಂದು ಸೆಕೆಂದಿನಲ್ಲಿ ಹತ್ತು ಸಾವಿರದ ಭಾಗದಷ್ಟು ಕೆಲಸ ಮಾಡಿತು. ಅಂದರೆ ೬,೦೦,೦೦೦ ರೊಟೇಶನ್ ಪರ್ ಸೆಕೆಂದ್ (ಒಂದು ನಿಮಿಷದ ಆವರ್ತನೆ). ಅವರು ವೋಲ್ಟೇಜನ್ನು ೧,೦೦,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದಾಗ ಬಹಳ ಅದ್ಭುತದಂತಹ ಶೋಧನೆಯನ್ನು ಕಂಡು ಹಿಡಿದು ಅದನ್ನು ’ಎಲೆಕ್ಟ್ರಿಕಲ್ ಸೌನಾ’ಇಫೆಕ್ಟ್’ (ವಿದ್ಯುತಚ್ಛಕ್ತಿಯನ್ನು ಉಪಯೋಗಿಸಿ ಮಾಡಿದ ಬಿಸಿಬಾಷ್ಪದ ಸ್ನಾನಗೃಹ) ಎಂದು ಹೆಸರಿಟ್ಟರು.

ಡಾ. ನಿಕೋಲಾ ಟೇಸಲಾರವರು ಅವರ ಈ ಪ್ರಯೋಗದಲ್ಲಿ ಬದಲಾವಣೆ ಮಾಡಿ ಸ್ವಿಚ್ಚುಗಳ ಬದಲಾಗಿ ವರ್ತುಳಾಕಾರದ ಸಂದಿರುವ ಚುಂಬಕದ ಪರಿಚಯ ಮಾಡಿಕೊಟ್ಟರು. ಅವರು ಪ್ರಧಾನ ಹಾಗು ಎರಡನೆ (ಪರ್ಯಾಯ) ಕಾಯಿಲಿನ (ಸುರುಳಿಸುತ್ತು) ವ್ಯವಸ್ಥೆ ಮಾಡಿದರು, ಇವರು ಪ್ರಧಾನ ಸುರುಳಿಯಸುತ್ತಿನಲ್ಲಿರುವ (ಪ್ರೈಮರಿ ಕಾಯಿಲ್) ವೋಲ್ಟೇಜನ್ನು ಎರಡನೆ ಸುರುಳಿಸುತ್ತಿನಲ್ಲಿ (ಸೆಕೆಂಡರಿ ಕಾಯಿಲ್) ಬಹಳ ಹೆಚ್ಚಿನ ಪ್ರಮಾಣದಲ್ಲಿ ಪ್ರವರ್ತನೆ ಮಾಡಲು ಉಪಯೋಗಿಸಿದರು. ಡಾ. ಟೇಸಲಾರವರು ಅವರ ಹೊಸ ಇಂಪಲ್ಸ್ ಟ್ರಾಂಸ್ ಫೊರಮರ್ಸ್ ಗಳು ಅದಕ್ಕೆ ಪೂರೈಸಿದ ಪಾವರನ್ನು ಒಳ್ಳೆಯ ರೀತಿಯಿಂದ ಹೆಚ್ಚಿಸುತ್ತದೆ ಎಂದು ಕಂಡು ಹಿಡಿದರು. ಹೀಗೆ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ಕೂಡ ವಿಸ್ತಾರಗೊಳ್ಳುವದು. ಈ ಪದ್ಧತಿಯಿಂದ ವಿದ್ಯುತಚ್ಛಕ್ತಿಯು ’ಮಿಲ್ಲಿಯನ್ಸ್ ಆಫ್ ವೋಲ್ಟ್ ಸ್’ (ದಶಲಕ್ಷ ವೋಲ್ಟ್ ಸ್) ನ್ನು ಉತ್ಪನ್ನ ಮಾಡಲು ಸಾಧ್ಯವಿದೆ ಹಾಗೆಯೇ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ತಂತಿಗಳಿಲ್ಲದೆ ದೂರದ ಅಂತರಕ್ಕೆ ಕಳುಹಿಸಲು ಕೂಡ ಸಹಾಯವಾಗಬಹುದೆಂದು ಡಾ ಟೇಸಲಾರವರು ಕಂಡು ಹಿಡಿದರು

ಹಾಗೆಯೇ ಅವರು ಈ ಪ್ರಯೋಗದಲ್ಲಿ, ಸಂಪೂರ್ಣ ಸುರುಳಿಯ (ಕಾಯಿಲ್) ಬಾಹ್ಯ ಸ್ವರೂಪದಿಂದ ನೀಲಿ-ಬಿಳಿ ಬಣ್ಣದ ಅಪರಿಮಿತ ಸ್ರಾವವು ಹಾರಾಡುತ್ತಿರುವುದನ್ನು ಗಮನಿಸಿದರು. ಒಂದು ಮುಖ್ಯವಾದ ವಿಷಯ ಧ್ಯಾನಕ್ಕೆ ತರಬೇಕಾದುದೆಂದರೆ ಹೊರಬರುತ್ತಿರುವ ಈ ಬಿಳಿ ಬಣ್ಣದ ಸ್ರಾವವು, ಕಡಿಮೆ ಪ್ರಮಾಣದ ಫ್ರಿಕ್ವೆನ್ಸಿಯಲ್ಲಿ ವಸ್ತುಗಳ ಒಳಗಿಂದ ಹಾದು ಹೋಗುವಾಗ ಸೂಜಿಯಂತೆ ತಿವಿಯುತ್ತಿರುವ ತೀಕ್ಷಣತೆ ಮತ್ತು ಉರಿ ಬರುವ ಸಂವೇದನೆಯನ್ನು ಕೊಡದೆ ಅದು ಶಾಂತವಾದ, ತಂಪಾದ ಅನುಭವವನ್ನು ಮಾಡಿಸಿ ಭೌತದ್ರವ್ಯ ಹಾಗೆಯೇ ಎಲ್ಲಾ ಸ್ಥೂಲ ಪದಾರ್ಥಗಳ ಒಳಗಿಂದ ಕೂಡ ಹೊರಬರುತ್ತಿದ್ದವು.

ಹಾಗೆಯೇ ಈ ಹೊರಬರುತ್ತಿರುವ ನೀಲಿ-ಬಿಳಿ ಬಣ್ಣದ ಸ್ರಾವಗಳು ಕೆಲವು ನಿಶ್ಚಯಾತ್ಮಕ ಫ್ರಿಕ್ವೆನ್ಸಿಯಲ್ಲಿ, ಈ ಕರಂಟ್ ನ್ನು ಪಡೆದ ಕಾಯಿಲ್ಸ್ ಗಳ ಸಮೀಪ ತಂದಾಗ ಆರಿಸಿರುವ ಟ್ಯುಬಗಳನ್ನು, ವಿಶಿಷ್ಠ ಬಲ್ಬುಗಳು ಹಾಗು ದೀಪಗಳನ್ನು ಕೂಡ ಹಚ್ಚಿಸುತ್ತಿದ್ದವು. ಡಾ. ನಿಕೋಲಾ ಟೇಸಲಾರವರು ದೀಪಗಳನ್ನು ಅವರ ಕೈಯಲ್ಲಿ ಹಿಡಿದು ತಂತಿರಹಿತ ವಿದ್ಯುತ್ತಿನ ಮೂಲಕ ಅದನ್ನು ಹಚ್ಚಿಸಿದರು.
ರಯೋಗದಲ್ಲಿ ಮುಂದಿನ ಸುಧಾರಣೆ ಮಾಡುವಾಗ, ಗೋಲಾಕಾರದ ತಾಮ್ರವನ್ನು ಸೆಕೆಂಡರಿ ಟ್ರಾಂಸ್ ಫೊರಮರ್ ನ ಕೊನೆಯಲ್ಲಿ ಕೂಡಿಸಿದರು. ಹೊರಬರುತ್ತಿರುವ  ಬಣ್ಣದ ಸ್ರಾವವೆಲ್ಲಾ ಈ ತಾಮ್ರದ ಗೋಲದಲ್ಲಿ ಒಟ್ಟಾಯಿತು, ಈಗ ಈ ತಾಮ್ರದ ಗೋಲದಿಂದ ಹೊರಬರುತ್ತಿರುವ ಬಣ್ಣದ ಸ್ರಾವವು ಬಹಳ ಜೋರಿನ ಶಬ್ದ ಮಾಡತೊಡಗಿತು. ಇದರಿಂದಾಗಿ ಆವಶ್ಯಕವಾಗಿರುವ ವಿದ್ಯುತ್ತಿನ ಪ್ರಮಾಣ ಕೂಡ ಕಡಿಮೆಯಾಗಿ ತಂತಿರಹಿತ ವಿದ್ಯುತಚ್ಛಕ್ತಿಯ ಸುತ್ತನ್ನು ಬಹಳ ನಿಶ್ಚಿತ ಮತ್ತು ಸುರಕ್ಷಿತ ಮಾಡಿತು. ಇದು ಪ್ರಖ್ಯಾತವಾಗಿ ಕರೆಯಲ್ಪಟ್ಟ " ಟೇಸಲಾ ಕಾಯಿಲ್ " ಗೆ ಜನ್ಮ ಕೊಟ್ಟಿತು. ಈ ಟೇಸಲಾ ಕಾಯಿಲ್ ನ ಸಹಾಯದಿಂದ ಡಾ. ನಿಕೋಲಾ ಟೇಸಲಾರವರು ಜನಸಾಮಾನ್ಯರ ಉಪಯೋಗಕ್ಕೆ ಬಹಳ ಸುರಕ್ಷಿತವಾಗಿರುವ ವಾಯರ್ ಲೆಸ್  ಎಲೆಕ್ಟ್ರಿಕಲ್ ಎನರ್ಜಿ (ತಂತಿರಹಿತ ವಿದ್ಯುತಚ್ಛಕ್ತಿಯ ಶಕ್ತಿ) ಯನ್ನು ತಯಾರಿಸಲು ಯಶಸ್ವಿಯಾದರು. ಈ ತಂತಿರಹಿತ ವಿದ್ಯುತಚ್ಛಕ್ತಿಯನ್ನು ವಿಶೇಷ ರೀತಿಯಲ್ಲಿ ತಯಾರಿಸಲಾದ ಸರ್ಕಿಟಿನ ಸಹಾಯದಿಂದ ಬಹಳ ದೂರದ ಅಂತರದಲ್ಲಿ ಪಡೆಯಬಹುದು. ಡಾ. ನಿಕೋಲಾ ಟೇಸಲಾರವರು ತಂತಿರಹಿತ ವಿದ್ಯುತಚ್ಛಕ್ತಿಯ ಸಂಕಲ್ಪನೆಗೆ ಜನ್ಮ ಕೊಟ್ಟರು.

ಇದು ತಂತಿರಹಿತ ಶಕ್ತಿಗಳನ್ನು (ವಾಯರ್ ಲೆಸ್ ಎನರ್ಜಿ) ಹತ್ತಿರದ ವಿಭಾಗಗಳಿಗೆ ಸ್ಥಾನಾಂತರ ಮಾಡುವ ಪ್ರಾತ್ಯಕ್ಷಿಕ ನಮೂನೆಯಾಯಿತು. ಈ ನಮೂನೆಯು ಬೇರೆ ಯಾವುದೇ ಆಗದೆ ಅದು ಟೇಸಲಾ ಕಾಯಿಲ್ ಆಗಿತ್ತು. ಇವತ್ತು ಹಲವು ಉತ್ಸಾಹಪೂರ್ಣ ಚಲನಚಿತ್ರಗಳಲ್ಲಿ ಮತ್ತು ಆಟಗಳಲ್ಲಿ ಟೇಸಲಾ ಕಾಯಿಲ್ ನಿಂದ ಹೊರಬರುವ ಸ್ರಾವಗಳನ್ನು ಅಂದರೆ ಕರಂಟ್ ಗಳು ಎಲ್ಲಿ ಬೀಳುವದು ಆ ಸ್ಥಳವನ್ನು ಅದು ಸುಡುತ್ತದೆ ಆದ್ದರಿಂದ ಅಪಾಯಕಾರಿಯೆಂದು ತೋರಿಸಲಾಗುತ್ತಿದೆ. ಆದರೆ ಡಾ. ಟೇಸಲಾರವರ ನಿರೂಪಣೆಗಳ ಪ್ರಕಾರ ಅದರ ಸತ್ಯಸ್ಥಿತಿಯು ಪೂರ್ಣ ವಿರುದ್ಧವಾಗಿತ್ತು. ಡಾ. ನಿಕೋಲಾ ಟೇಸಲಾರವರು ಟೇಸಲಾ ಕಾಯಿಲ್ ಪರಿಪೂರ್ಣವಾಗಿ ತಂತಿರಹಿತ ಶಕ್ತಿಯನ್ನು ಕಳುಹಿಸುವ ಸಲಕರಣೆಯಾಗಿದೆ ಎಂದು ತನ್ನ ವಿಧಾನದಿಂದ ಸಿದ್ಧಮಾಡಿದರು.

ಟೇಸಲಾರವರ ಈ ಕಾಯಿಲ್ ಪ್ರಯೋಗಗಳನ್ನು ವಿಶೇಷ ಪ್ರವೀಣರ ಮಾರ್ಗದರ್ಶನ ತೆಗೆದುಕೊಳ್ಳದೆ ಮಾಡಬಾರದು ಅಥವಾ ಆ ವಿಷಯದ ಒಳ್ಳೆ ಮತ್ತು ಪೂರ್ಣ ಜ್ನಾನವಿದ್ದಾಗ ಮಾತ್ರ ಮಾಡಬೇಕು. ಯೋಗ್ಯ ತಿಳುವಳಿಕೆ ಮತ್ತು ಪ್ರಯೋಗದಿಂದ ಟೇಸಲಾ ಕಾಯಿಲ್ ನ್ನು ಅನೇಕ ವಿಧದ ಉದ್ದೇಶಗಳಿಗಾಗಿ ಅಂದರೆ ತಂತಿರಹಿತವಾಗಿ ಬಲ್ಬುಗಳನ್ನು ಹಚ್ಚಿಸಲು ಮತ್ತು ವಾಯರ್ ಲೆಸ್ ಎಲೆಕ್ಟ್ರಿಕಲ್ ಸ್ಥಾನಾಂತರ ಮಾಡುವಾಗ ಉಪಯೋಗಿಸಬಹುದು.

|| ಹರಿ ಓಂ || ಶ್ರೀರಾಮ || ಅಂಬಜ್ನ ||

Wednesday, 8 October 2014

ತಂತಿರಹಿತ ವಿದ್ಯುತಚ್ಛಕ್ತಿ (ಭಾಗ-೧)

೧೮೯೦ ರಲ್ಲಿ ಡಾ. ನಿಕೋಲಾ ಟೇಸಲಾರವರು ಸ್ವಪ್ರಯತ್ನದಿಂದ ಆಲ್ಟರ್ ನೇಟಿಂಗ್ ಕರಂಟ್ ನ ಸಂಕಲ್ಪನೆಯನ್ನು ವಿಕಸಿತಗೊಳಿಸಿದರು. ಇದರಲ್ಲಿ ಮಾಡಿದ  ಬದಲಾವಣೆಯಿಂದಾಗಿ ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಬಹಳ ಉತ್ತಮ ಪ್ರಕಾರದಿಂದ ಉಪಯೋಗಿಸಲು ಕಾರಣವಾಯಿತು ಮತ್ತು ನಂತರ ವಿಸ್ಮಯಕಾರಕದ ತಂತಿರಹಿತ ವಿದ್ಯುತಚ್ಛಕ್ತಿಯ ಶೋಧನೆ ಮಾಡಲಾಯಿತು. ಹಾಗು ಇವುಗಳು ಎಂದಿಗೂ ಪ್ರಕೃತಿಯ ಏಕತಾಳದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಡಾ. ಟೇಸಲಾರವರು ಯಾವಾಗಲು ಹೇಳುತ್ತಿದ್ದರು.

ಡಾ. ನಿಕೋಲಾ ಟೇಸಲಾರವರ ಏಸಿ ಸಿಸ್ಟಮ್ ಆಫ್ ಕರಂಟ್ ನ್ನು ದೂಷಿಸಲು ಎಡಿಸನ್ ಜನಸಮೂದಾಯದ ಮುಂದೆ ವಿದ್ಯುತ್ತಿನಿಂದ ಪ್ರಾಣಿಗಳನ್ನು ಕೊಲ್ಲುವ ಕೃತಿಗಳನ್ನು ಮಾಡಿ ತೋರಿಸುತ್ತಿದ್ದರೆಂದು ನಮಗೆಲ್ಲಾ ಗೊತ್ತಿದೆ. ಇದರಿಂದಾಗಿ ಡಾ. ಟೇಸಲಾರವರು ಅವರ ಏಸಿ ಪಾವರಿಂದ ಮಾಡಿದ ವಿದ್ಯುತ ಕುರ್ಚಿಗಳ ಉಪಯೋಗಮಾಡಿ ಕಾರಾಗೃಹದ ಕೈದಿಗಳನ್ನು ಸಾರ್ವಜನಿಕವಾಗಿ ವಿದ್ಯುತ್ತಿನಿಂದ ಕೊಲ್ಲುತ್ತಿರುವುದನ್ನು ನೋಡಿ ಅಸ್ವಸ್ಥಗೊಂಡರು. ಡಾ.ಟೇಸಲಾರವರು ಧಾರ್ಮಿಕ ಹಾಗು ಬಹಳ ಕರುಣಾಮಯಿ ವ್ಯಕ್ತಿಯಾಗಿದ್ದು ಅವರಿಗೆ ಕೈದಿಗಳ ಈ ಅವಸ್ಥೆಯನ್ನು ಹಾಗು ಪ್ರಾಣಿಗಳಿಗೆ ಕೊಡಲಾಗುತ್ತಿರುವ ಅಮಾನುಷ ಯಾತನೆಗಳನ್ನು ನೋಡಿ ಅವರ ಹೃದಯ ಕರಗುತ್ತಿತ್ತು. ಆದ್ದರಿಂದ ಡಾ. ಟೇಸಲಾರವರು ಈ ತಪ್ಪು ಸುದ್ದಿಗಳನ್ನು ಹರಡಿಸುತ್ತಿರುವ ಎಡಿಸನ್ ರವರ ವಿರುದ್ಧ ಹೋಗುವ ನಿರ್ಧಾರ ಮಾಡಿದರು.

ಅವರು  ಜೊರ್ಜ್ ವೆಸ್ಟಿಂಗ್ ಹೌಸರವರ ಸಹಾಯದಿಂದ ಪತ್ರಕಾರರ ಸಭೆಯನ್ನು ಕರೆದರು ಮತ್ತು ಹಲವು ಪ್ರಸಿದ್ಧ ವೈಜ್ನಾನಿಕ ಉದ್ಯೋಗಪತಿಗಳನ್ನು ತನ್ನ ಪ್ರಯೋಗಶಾಲೆಯಲ್ಲಿ ಆಲ್ಟರ್ ನೇಟಿಂಗ್ ಕರಂಟ್ ನ ಬಗ್ಗೆ ಪ್ರಾತ್ಯಕ್ಷಿಕವನ್ನು ಮಾಡಿ ತೋರಿಸಲು ಕರೆದರು. ಅಲ್ಲಿ ಅವರು ೧,೦೦,೦೦೦ ವೋಲ್ಟ್ ಸಿನ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಏಸಿ ಜನರೆಟೇರ್ಸ್ ನ್ನು ಸ್ಥಾಪಿಸಿದರು. ಏಸಿ ಸಿಸ್ಟಮ್ ನನ್ನು ಸರಿಯಾಗಿ ನಿರ್ಬಂಧದಲ್ಲಿಟ್ಟಾಗ ಅದು ಮನುಷ್ಯನ ಜೀವನಕ್ಕೆ ಹಾನಿಯಾಗಲಾರದೆಂದು ಪ್ರತಿಪಾದಿಸಿದರು. ಇದನ್ನು ಸಿದ್ದಪಡಿಸಲು ಡಾ. ಟೇಸಲಾರವರು ೧,೦೦,೦೦೦ ವೋಲ್ಟ್ ಸ್ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಜನರೇಟರಿನ ಬದಿಯಲ್ಲಿ  ಕುಳಿತುಕೊಂಡರು. ಜನಕಲ್ಯಾಣಕ್ಕಾಗಿ ಹಾಗು ಮನುಷ್ಯತ್ವಕ್ಕಾಗಿ ತನ್ನ ಜೀವವನ್ನು ಪಣಕ್ಕಿಟ್ಟರು ಇದನ್ನು ಕೇವಲ ಏಸಿ ಕರಂಟ್ ಬಗ್ಗೆ ಜನರಲ್ಲಿದ್ದ ಭಯವನ್ನು ಹೊರದೂಡಿಸಡಲೆಂದು ಮಾಡಿ ತೋರಿಸಿದರು, ಇದರಿಂದ ಯಾವ ಪ್ರಕಾರದ ಹಾನಿಯಾಗದೆ ಒಂದು ಗೀರು ಕೂಡ ಅವರ ಶರೀರದ ಮೇಲಾಗಲಿಲ್ಲ. ಇದನ್ನು ನೋಡಿದ ವೀಕ್ಷಕರು ಆಶ್ಚರ್ಯಚಕಿತರಾಗಿ ಜನರೆಲ್ಲಾ ಸಂಭ್ರಾಂತರಾದರು. ನೆನಪಿನಲ್ಲಿಡಿ, ಏನೆಂದರೆ ಎಡಿಸನ್ ಏಸಿ ವಿದ್ಯುತಚ್ಛಕ್ತಿಯನ್ನು ಪ್ರಾಣಿ ಹಾಗು ಕೈದಿಗಳ ಶರೀರದೊಳಗಿಂದ ತೆಗೆದರು ಅದರ ವಿಪರೀತವಾಗಿ ಡಾ. ಟೇಸಲಾರವರು ವಿದ್ಯುತಚ್ಛಕ್ತಿಯನ್ನು ತನ್ನ ಶರೀರದ ಒಳಗಿಂದ ತೆಗೆದು ತೋರಿಸಿದರು.


ಡಾ. ಟೇಸಲಾರವರು ಮೊದಲ ಬಾರಿಗೆ ತಂತಿರಹಿತ ವಿದ್ಯುತಚ್ಛಕ್ತಿಯನ್ನು ಸಾರ್ವಜನಿಕವಾಗಿ ಪ್ರಾತ್ಯಕ್ಷಿಕ ಮಾಡಿ ತೋರಿಸಿದರು. ಹೌದು, ನೀವು ಸರಿಯಾಗಿ ಕೇಳಿದ್ದಿರಿ!! " ತಂತಿರಹಿತ ವಿದ್ಯುತಚ್ಛಕ್ತಿ " ಅದೆಂದರೆ ’ತಂತಿಗಳಿಲ್ಲದ ವಿದ್ಯುತಚ್ಛಕ್ತಿ ’ಮತ್ತು ಇದನ್ನು ಮಾಡುವಾಗ ಅವರು ಫ್ಲುರೊಸೆಂಟ್ ಬಲ್ಬನ್ನು ಮತ್ತು ಟ್ಯುಬ್ಸ್ ಗಳನ್ನು ತನ್ನ ಕೈಯಲ್ಲಿ ಹಿಡಿದು ಹಚ್ಚಿಸಿದರು. ಅವರು ಇದನ್ನು ಹೇಗೆ ಸಾಧಿಸಿದರು ? ಟೇಸಲಾರವರು ಸಂಶೋಧನೆಯನ್ನು ಹೇಗೆ ಮಾಡಿದರು, ಅದಕ್ಕಾಗಿ ಅವರು ಮಾಡಿದ ಪ್ರಯೋಗಗಳನ್ನು ತಿಳಿಯಲೆಂದು ನಮಗೆ ಸ್ವಲ್ಪ ಹಿಂದೆ ಹೋಗಿ ಅವರ ನಿವ್ ಯಾರ್ಕ್ ನಲ್ಲಿದ್ದ ಪ್ರಯೋಗಶಾಲೆಗೆ ಹೋಗಬೇಕಾಗುತ್ತದೆ. ಡಾ. ಟೇಸಲಾರವರ ನಿವ್ ಯಾರ್ಕ್ ನಲ್ಲಿದ್ದ ಪ್ರಯೋಗಶಾಲೆಯು ಬಹುವಿಧದ ಸಂಶೋಧನೆ ಹಾಗು ಉತ್ಪನ್ನ ಮಾಡಲು ಸೌಕರ್ಯವಿದ್ದ ಪ್ರಯೋಗಶಾಲೆಯಾಗಿತ್ತು. ಅದರಲ್ಲಿ ಬಹಳ ಭಾಗಗಳಿದ್ದು ಅಸಂಖ್ಯ ಅಂತಸ್ತುಗಳಿದ್ದು ಮತ್ತು ಬಹುವಿಧದ ದ್ವಾರಮಂಟಪಗಳಿದ್ದವು. ಇದನ್ನು ನಾವು ಸಣ್ಣ ಸಂಶೋಧನ ಮತ್ತು ಸುಧಾರಿತ ಮಾಲಿನಂತೆ ಕಲ್ಪಿಸಬಹುದು. ಡಾ. ಟೇಸಲಾರವರು ಹಲವು ಟ್ರಾಂಸ್ ಫೊರ್ಮ್ ರ್ಸ್ ಮತ್ತು ಜನರೇಟರ್ಸ್ ನ್ನು ಕೆಳಗಿನ ಅಂತಸ್ತದಲ್ಲಿ ಮತ್ತು ಅವರ ಖಾಸಗಿ ಸಂಶೋಧನೆಯ ಪ್ರಯೋಗಶಾಲೆಯನ್ನು ಮೇಲಿನ ಅಂತಸ್ತದಲ್ಲಿಟ್ಟಿದ್ದರು. ಅವರಲ್ಲಿ ಕೆಲವರು ಟೆಕ್ನಿಶಿಯನ್ ನೌಕರರಾಗಿದ್ದರು. ಮಿ.ಕೊಲ್ ಮನ್ ಝಿಟೊ ಅವರಲ್ಲೊಬ್ಬರು ಮತ್ತು ಡಾ. ಟೇಸಲಾರವರ ವಿಶ್ವಾಸಯುಳ್ಳ ಮಿತ್ರರಾಗಿದ್ದು ಜೀವನದ ಕೊನೆಯ ತನಕ ಅವರ ಜೊತೆ ಇದ್ದರು.

ಇಲ್ಲಿ ನಮಗೆ ಗಮನಿಸಬೇಕೆಂದರೆ ಡಾ. ನಿಕೋಲಾ ಟೇಸಲಾರವರು ಬಹಳ ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದರು. ಅವರ ಇಷ್ಟು ದೊಡ್ಡ ಪ್ರಯೋಗಶಾಲೆಯನ್ನು ಕೇವಲ ಅವರಿಗೆ ಜೊರ್ಜ್ ವೆಸ್ಟಿಂಗ್ ಹೌಸ್ ರವರಿಂದ ಸಿಕ್ಕಿದ ಸಹಾಯದಿಂದ ಕಟ್ಟಿದ್ದರು. ಅವರ ಪ್ರಯೋಗದ ವೇಳೆಯಲ್ಲಿ ಮತ್ತು ಸಂಶೋಧನೆ ಮಾಡುತ್ತಿರುವಾಗ ಎನಾದರು ಕೂಟಕೃತ್ಯವನ್ನು ಕಂಡುಹಿಡಿದರೆ ಅವರು ಅದರ ತಕ್ಷಣವೇ ಪ್ರಯೋಗದ ಮೂಲಕ ಹೆಚ್ಚು ಅಭ್ಯಾಸಮಾಡಿ ಮತ್ತು ಅದರಲ್ಲಿ ನೂರಾರು ಅದಲು-ಬದಲು ಹಾಗು ಬೇರೆ-ಬೇರೆ ಜೋಡಣೆ ಮಾಡಿ ಅನುಸರಿಸುತ್ತಿದ್ದರು. ಈ ತರಹದ ಅಭ್ಯಾಸ ಮತ್ತು ಸಂಶೋಧನೆಗಳು ಅವರಿಗೆ ಅಪರಿಮಿತ ಜ್ನಾನ ಕೊಡುತ್ತಿತ್ತು ಮತ್ತು ಇದರಿಂದಾಗಿ ಅವರ ಹೊಸ ಸಂಶೋಧನೆಗಳು ರೂಪಗೊಳ್ಳುತ್ತಿದ್ದವು ಮತ್ತು ಹೊಸ ದಾಖಲೆಗಳನ್ನು (ಪೇಟಂಟ್ಸ್) ಸ್ಥಾಪಿಸುತ್ತಿದ್ದರು. ಇದೇ ಪ್ರಕಾರ ಅವರು ಸತತವಾಗಿ ತನ್ನ ಸಂಶೋಧನೆ ಹಾಗು ಪ್ರಯೋಗಗಳನ್ನು ತಿದ್ದುಪಡೆ ಮಾಡುತ್ತಿದ್ದರು.

ಡಾ. ನಿಕೋಲಾ ಟೇಸಲಾರವರು ದೂರದ ಅಂತರಕ್ಕೆ ವಿದ್ಯುತಚ್ಛಕ್ತಿಯನ್ನು ಪೂರೈಸುವ ಬಹಳ ಕಾರ್ಯಕ್ಷಮತೆಯುಳ್ಳ ಮತ್ತು ಉಚ್ಚ ಪ್ರಕಾರದಲ್ಲಿ ಕೆಲಸ ಮಾಡುವ ಸುಧಾರಿತ ಪೊಲಿಫೇಜ್ (ಮೂರು ತರಹದ) ಏಸಿ ಸಿಸ್ಟಮ್ ನ್ನು ತಯಾರಿಸಿದರು. ಆದರೆ ಟೇಸಲಾರವರು ಇಲ್ಲಿಯೇ ನಿಲ್ಲಲಿಲ್ಲ. ಅವರು ತನ್ನ ಸಂಶೋಧನಗಳನ್ನು ಮುಂದುವರಿಸಿದರು ಮತ್ತು ದೃಢತೆಯಿಂದ ಪ್ರಯತ್ನ ಮಾಡಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಪೊಲಿಫೇಸ್ ಏಸಿ ಸಿಸ್ಟಮ್ ನ್ನು ಪತ್ತೆ ಹಚ್ಚಿದರು ಮತ್ತು ಇದನ್ನು ಮಾಡುತ್ತಿರುವಾಗ ಡಾ. ಟೇಸಲಾರವರು ಅದರ ಪುನರಾವರ್ತನೆಯನ್ನು (ಫ್ರಿಕ್ವೆನ್ಸಿ) ಹೆಚ್ಚಿಸುವ ಜನರೇಟರ್ಸ್ ನ್ನು ಪ್ರಾರಂಭಿಸಿದರು. ಅವರು ಸತತವಾಗಿ ಮಾಡುತ್ತಿರುವ ಪ್ರಯೋಗಗಳಿಂದಾಗಿ ಏಸಿ ಫ್ರಿಕ್ವೆನ್ಸಿಯನ್ನು ೩೦೦೦೦ Hz (ಸೈಕಲ್ಸ್ ಪರ್ ಸೆಕೆಂದ್) ತನಕ ಹೆಚ್ಚಿಸಿದರು. ಇದರಿಂದಾಗಿ ಬಹಳ ಹೆಚ್ಚಿನ ಏಸಿ ಕರಂಟ್ ಫ್ರಿಕ್ವೆನ್ಸಿಯನ್ನು ತಯಾರಿಸಿದರು. ಈ ಹೆಚ್ಚಿಸಿದ ಆಲ್ಟರ್ ನೇಟಿಂಗ್ ಕರಂಟ್ ಫ್ರಿಕ್ವೆನ್ಸಿಯಿಂದಾಗಿ ಸಂಪೂರ್ಣ ಜಗತ್ತಿಗೆ ಪಾವರನ್ನು ಪೂರೈಸಲಾಗಬಹುದೆಂದು  ಡಾ. ಟೇಸಲಾರವರು ತಿಳಿದಿದ್ದರು. ಹಾಯರ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಪೂರೈಸುವ ಹಲವು ಅಸಾಧಾರಣ ಜನರೇಟರ್ಸ್ ನ್ನು ತಯಾರಿಸಿ ಅದರ ದಾಖಲೆಗಳನ್ನು (ಫೇಟಂಟ್ಸ್) ಮಾಡಿಕೊಂಡರು. ಹಾಯ್ ಫ್ರಿಕ್ವೆನ್ಸಿ ಕರಂಟ್ ಬಗ್ಗೆ ಬಹಳ ವಿಲಕ್ಷಣ ಸಂಗತಿಯೆಂದರೆ ಅದು ಮನುಷ್ಯನ ದೇಹಕ್ಕೆ ನೇರ‍ವಾಗಿ ಸಂಪರ್ಕಕ್ಕೆ ಬಂದರು ಕೂಡ ’ಪೂರ್ಣವಾಗಿ ನಿರೂಪದ್ರವ ’ವಾಗಿದೆಯೆಂದು ಡಾ. ಟೇಸಲಾರವರು ಕಂಡು ಹಿಡಿದಿದ್ದರು. ಒಂದು ವೇಳೆ ಮನುಷ್ಯನು ತಪ್ಪಿ ಚಲಿಸುತ್ತಿರುವ ಕರಂಟ್ ನ್ನು ಸ್ಪರ್ಷ ಮಾಡಿದರೆ ಅದರ ಹಾಯ್ ಫ್ರಿಕ್ವೆನ್ಸಿಯ ಕಾರಣದಿಂದಾಗಿ ಅದು ಮನುಷ್ಯನ ದೇಹದ ಹೊರಬದಿಯಿಂದ ಯಾವುದೇ ತರಹದ ಅಪಘಾತ ಮಾಡದೆ ಹೊರಬೀಳುವದು. ವೈಜ್ನಾನಿಕ ಭಾಷೆಯಲ್ಲಿ ಹಾಯ್ ಫ್ರಿಕ್ವೆನ್ಸಿಯ ಕರಂಟ್ ನ ಗುಣಧರ್ಮವನ್ನು ಸ್ಕಿನ್ ಇಫೆಕ್ಟ್ (ತ್ವಚದ ಪರಿಣಾಮ) ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಡಾ. ಟೇಸಲಾರವರು ಏಸಿ ಸಿಸ್ಟಮ್  ಮನುಷ್ಯನಿಗಾಗಿ ಪೂರ್ಣ ನಿರಪದ್ರವವಾಗಿದೆಯೆಂದು ಪ್ರಾತ್ಯಕ್ಷಿಕ ಮಾಡಿ ತೋರಿಸಿದರು. ಆದ್ದರಿಂದ ಇದರ ಪ್ರಾತ್ಯಕ್ಷಿಕ ಮಾಡುವಾಗ ವಿದ್ಯುತಪ್ರವಾಹ ಹರಿಯುತ್ತಿದ್ದಾಗ ಚಲಿಸುತ್ತಿರುವ ಕರಂಟ್ ನ್ನು ತನ್ನ ಕೈಯಲ್ಲಿ ಹಿಡಿದಾಗ ಡಾ.ಟೇಸಲಾರವರಿಗೆ ಅಪಾಯವಾಗದಿದ್ದನ್ನು ಜನರು ಕಣ್ಣಾರೆ ನೋಡಿದರು. ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟಿನ ಕೆಲಸ ಮಾಡುತ್ತಿರುವಾಗ ಡಾ. ಟೇಸಲಾರವರು ಜನರ ಸುರಕ್ಷತೆಯ ಬಗ್ಗೆ ಯಾವಾಗಲೂ ಜಾಗರುಕತೆ ವಹಿಸಿಕೊಳ್ಳುತ್ತಿದ್ದರು.

ಅವರ ಪ್ರಯೋಗಶಾಲೆಯಲ್ಲಿ ಹಾಯ್ ಫ್ರಿಕ್ವೆನ್ಸಿ ಏಸಿಯ ಪ್ರಯೋಗಗಳ ಸರದಿಯನ್ನು ಮಾಡುತ್ತಿರುವಾಗ ಡಾ. ಟೇಸಲಾರವರಿಗೆ ಬಹಳ ವಿಲಕ್ಷಣವಾದ ಅದ್ಭುತವು ಗೋಚರಿಸಿದಾಗ ಅದು ಅವರ ವಿದ್ಯುತಚ್ಛಕ್ತಿಯ ಬಗ್ಗೆ ಅವರಿಗಿದ್ದ ಅಭಿಪ್ರಾಯವನ್ನು ಬದಲಾಯಿಸಿ ಬಿಟ್ಟಿತು. ಒಮ್ಮೆ ಪ್ರಯೋಗ ಮಾಡುತ್ತಿರುವಾಗ ಅವರು ಲೋಹದ ತೆಳ್ಳಗಾದ ತಂತಿಯನ್ನು ತೆಗೆದುಕೊಂಡು ಹಾಯ್ ವೊಲ್ಟೇಜ್ ಏಸಿ ಕರಂಟ್ ಗೆ ತಾಗಿಸಿದಾಗ ಅದು ವಿದ್ಯುತಿನ ಪ್ರದಕ್ಷಿಣೆಯನ್ನು (ಸರ್ಕೀಟ್) ತಕ್ಷಣವೇ ನಿಲ್ಲಿಸಿತು. ಹೀಗೆ ಅಕಸ್ಮಾತಾಗಿ ತಗಲಿದ ಕರಂಟ್ ತಂತಿಯಲ್ಲಿದ್ದ ಹಬೆಯನ್ನು ಪರಿವರ್ತಿಸಿತು. ವೊಲ್ಟೇಜನ್ನು ಹೆಚ್ಚಿಸಿದಂತೆ ಡಾ. ಟೇಸಲಾರವರಿಗೆ ಬಹಳ ಶಕ್ತಿಯುತ ತಿಕ್ಕಾಟದ ಸ್ಪೋಟದ ಸೂಜಿಗಳು ಅವರ ಪೂರ್ಣ ಶರೀರಕ್ಕೆ ತಿವಿದಂತಾಯಿತು. ಮೊದಲು ಅವರು ಇದೊಂದು ಸ್ಪೋಟವಾದ ಲೋಹದ ತಂತಿಗಳ ಬಹಳ ಚಿಕ್ಕ ತುಂಡುಗಳಿರಬೇಕೆಂದು ತಿಳಿದರು. ಟೇಸಲಾರವರು ಯಾವುದೇ ಪ್ರಕಾರದ ಅಪಾಯ ಅಥವಾ ತಿವಿದಿದ್ದನ್ನು ನೋಡಲು ಅವರ ಕೈತೋಳ, ಮುಖ ಮತ್ತು ಎದೆಯನ್ನು ತಿಕ್ಕಿದಾಗ ಅವರ ದೇಹಕ್ಕೆ ಯಾವ ಹಾನಿ ಕೂಡ ಆಗಿರಲಿಲ್ಲ.

ಮುಂದೆ ಡಾ. ಟೇಸಲಾರವರು ಒಂದು ಗಾಜಿನ ದಪ್ಪದ ದುಪ್ಪಟ್ಟಿಯನ್ನು ತನ್ನ ಮತ್ತು ಪ್ರಯೋಗದ ಮಧ್ಯೆ ಇಟ್ಟರು ನಂತರ ವಿದ್ಯುತಪ್ರವಾಹವನ್ನು ಹರಿಯುವ ತಾಮ್ರವನ್ನು ಕೂಡಿಸಿ ೧೦ ಫೂಟಿನ ಅಂತರದಲ್ಲಿ ನಿಂತಾಗಲು ಕೂಡ ವಿದ್ಯುತಿನ ಸರ್ಕಿಟ್ (ಪ್ರದಕ್ಷಿಣೆ) ಮುಗಿಸಿದಾಗ ಸೂಜಿ ಚುಚ್ಚಿದ ಪರಿಣಾಮವನ್ನೇ ಕಂಡರು. ಆದ್ದರಿಂದ ಅವರ ಪ್ರಯೋಗದಲ್ಲಿ ಅವರು ಬಹಳ ಪ್ರಕಾರದ ಬೇರೆ-ಬೇರೆ ಬದಲಾವಣೆ ಮಾಡಿ ಗಮನಿಸಿದರು, ಆದರೂ ಅದೇ ಅನುಭವವಾಯಿತು. ವಿದ್ಯುತ್ತಿನ ಕರಂಟ್ ನ್ನು  ಹಾಯ್ ಫ್ರಿಕ್ವೆನ್ಸಿಯಲ್ಲಿ ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಉಪಯೋಗಿಸುವ ಪರಿಣಾಮವೆಂದರೆ ಇಂಪಲ್ಸ್ (ತಾತ್ಕಾಲಿಕ ಉದ್ವೇಗ). ಇದು ವಾಯರ್ ಲೆಸ್ ಎಲೆಕ್ಟಿಸಿಟಿ (ತಂತಿರಹಿತ ವಿದ್ಯುತಚ್ಛಕ್ತಿ) ಯ ಸಂಕಲ್ಪನೆಗೆ ಜನ್ಮ ಕೊಟ್ಟಿತು. ಡಾ. ಟೇಸಲಾರವರು ಇದರ ನೀರಿಕ್ಷಣೆಯ ಆಧಾರದ ಮೇಲೆ ಸರ್ಕಿಟ್ (ಪ್ರದಕ್ಶಿಣೆ)  ಮುಗಿದಾಗ ಅದು ತಕ್ಷಣವೇ ಕರಂಟ್ ನ ಇಂಪಲ್ಸ್ ಗೆ (ತಾತ್ಕಾಲಿಕ ಉದ್ವೇಗ) ಕಾರಣವಾಗಿ ಗಾಳಿಯ ಮೂಲಕ ಸಂಚರಿಸುತ್ತದೆ - ಅಂದರೆ ತಂತಿರಹಿತವಾಗಿ ಚಲಿಸಿ ಮತ್ತು ಅದು ಅವರ ಶರೀರವನ್ನು ತಲುಪುವದು.

ಡಾ. ಟೇಸಲಾರವರ ಮುಂದಿನ ಎಲ್ಲಾ ಕೆಲಸಗಳು ಇಂಪಲ್ಸೆಸ್, ಫ್ರಿಕ್ವೆನ್ಸಿಸ್ ಮತ್ತು ರಿಝಾನನ್ಸ್ (ಪ್ರತಿಕಂಪನೆ) ಗಳ ಮೂಲತತ್ವಗಳನ್ನು ಆಧಾರಿತವಾಗಿದ್ದು ಅವುಗಳನ್ನು ನಾವು ಮುಂದಿನ ಲೇಖನದ ಸರದಿಯನ್ನು ನೋಡೋಣ.
         
ನಮ್ಮ ಮುಂದಿನ ಲೇಖನದಲ್ಲಿ ನಾವು ಡಾ. ಟೇಸಲಾರವರು ಕರಂಟ್ ನ್ನು ಗಾಳಿಯಲ್ಲಿ ಸಂಚಾರ ಮಾಡುವ ಸಂಕಲ್ಪನೆಯಲ್ಲಿ ಬದಲಾವಣೆ ಮಾಡಿ ನಂತರ ವಾಯರ್ ಲೆಸ್ ಎಲೆಕ್ಟಿಸಿಟಿ (ತಂತಿರಹಿತ ವಿದ್ಯುತಚ್ಛಕ್ತಿ) ಯ ಕೆಲಸದ ಮಾದರಿಯನ್ನು ತಯಾರಿಸಿದ ಪ್ರಕಾರವನ್ನು ನೋಡುವ.

 || ಹರಿ ಓಂ || ಶ್ರೀರಾಮ || ಅಂಬಜ್ನ ||