ಹಿಂದಿನ ಲೇಖನದಲ್ಲಿ ನಾವು ಡಾ.ನಿಕೋಲಾ ಟೇಸಲಾರವರು ಹೇಗೆ ಇಂಪಲ್ಸೆಸ್ ನ ಮೂಲತತ್ವಗಳನ್ನು ಕಂಡುಹಿಡಿದು ಮತ್ತು ಅದನ್ನು ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ಗೆ ಪ್ರಯೋಗಿಸಿದರು ಹಾಗೆಯೇ ಕರಂಟ್ ಗಾಳಿಯ ಮೂಲಕ ಸಂಚಾರ ಮಾಡುವುದನ್ನು ನೋಡಿದೇವು.
ಇದೊಂದು ಕೇವಲ ತಂತಿರಹಿತ ವಿದ್ಯುತಚ್ಛಕ್ತಿಯ ಕಡೆಗೆ ಹೋಗುವ ಮೊದಲನೇಯ ಹೆಜ್ಜೆಯಾಗಿತ್ತು. ಲೇಖನದ ಈ ಸರದಿಗಳಲ್ಲಿ ನಾವು ತಂತಿರಹಿತ ವಿದ್ಯುತಚ್ಛಕ್ತಿಯ ಬಳಸುವಿಕೆ ಹಾಗೆಯೇ ಈ ಮೂಲತತ್ವಗಳು ಹೇಗೆ ಡಾ.ನಿಕೋಲಾ ಟೇಸಲಾರವರ ಮುಂದಿನ ಕೆಲವು ಹೊಸ ಪದ್ಧತಿಯ ಸಂಶೋಧನೆಗಳನ್ನು ರೂಪಿಸಿರುವುದನ್ನು ನೋಡಲಿರುವೆವು.
ಈಗ ನಾವು ಸ್ವಲ್ಪ ಹಿಂದೆ ಹೋಗಿ ಡಾ. ಟೇಸಲಾರವರು ಅವರ ಪ್ರಯೋಗಗಳನ್ನು ತನ್ನ ಪ್ರಯೋಗಶಾಲೆಯಲ್ಲಿ ಹೇಗೆ ಮಾಡುತ್ತಿದ್ದರೆಂದು ನೋಡುವ. ಡಾ. ಟೇಸಲಾರವರು ಇಂಪಲ್ಸಿನ ಮೂಲತತ್ವಗಳನ್ನು ಉಪಯೋಗಿಸಿ ವಿದ್ಯುತಚ್ಛಕ್ತಿಯನ್ನು ತಂತಿರಹಿತವಾಗಿ ಹೇಗೆ ಪ್ರವಹಿಸಬಹುದೆಂದು ತಿಳಿದಾಗ ಮುಂದೆ ಅವರು ಸರ್ಕಿಟಿನಲ್ಲಿ ಬದಲಾವಣೆ ಮಾಡಿ ೬೦೦೦ ಆರ್ ಪಿಎಮ್ (ರೆವುಲುಶನ್ ಪರ್ ಮಿನಿಟ್) ನ ಗತಿಯಲ್ಲಿ ಹಚ್ಚಿಸುವ ಮತ್ತು ಆರಿಸುವ ರೋಟರಿ ಸ್ವಿಚ್ಚಿ (ಸರತಿಯ ಒತ್ತುಗುಂಡಿ) ನ ಸಂಕಲನೆ ಮಾಡಿ ಅದರಲ್ಲಿಯ ಕರಂಟ್ ನ್ನು ೧೫,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದರು.
ಈಗ ಸರ್ಕಿಟನ್ನು ಅವರು ಚಲಾಯಿಸಿದಾಗ ರೋಟರಿ ಸ್ವಿಚ್ಚಿನ ಕಾರ್ಯದ ಕಾರಣದಿಂದಾಗಿ ಸೂಜಿಯಂತೆ ತಿವಿಯುವ ನೋವಿನ ತೀವ್ರತೆಯು ಹೆಚ್ಚಾಯಿತು. ಟ್ರಾಂಸ್ ಫೊರಮರನ್ನು ಉಪಯೋಗಿಸಿದಾಗ ವೋಲ್ಟೇಜ್ ಹೆಚ್ಚಾಗುವದು ಎಂಬ ವಿಷಯ ಅವರಿಗೆ ತಿಳಿದಿತ್ತು, ಆದರೆ ಇಲ್ಲಿ ಟ್ರಾಂಸ್ ಫೊರಮರನ್ನು ಉಪಯೋಗಿಸದಿದ್ದಾಗ ಕಡಿಮೆ ಸಮಯದ ಅಂತರದಲ್ಲಿ ಇಂಪಲ್ಸೆಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜನರೇಟ್ ಮಾಡಿದಾಗ ವೋಲ್ಟೇಜ್ ಗಳು ಹೆಚ್ಚಾಗುತ್ತಿರುವುದೆಂದು ಅವರ ಗಮನಕ್ಕೆ ಬಂತು (ಇಂಪಲ್ಸೆಸ್ ಗಳು ಕರಂಟ್ ಮತ್ತು ವೋಲ್ಟೇಜನ್ನು ಹೆಚ್ಚಿಸುವದು). ತಾಮ್ರದ ತಂತಿಗಳ ಸುತ್ತಲು ಬಿಳಿ ಮತ್ತು ನೀಲಿ ಬಣ್ಣದ ಅಗ್ನಿಕಣಗಳನ್ನು ಕೂಡ ಅವರು ನೋಡಿದರು.
ಈ ಪ್ರಯೋಗದ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರು ಸೂಜಿಯಂತೆ ತಿವಿಯುವ ತೀಕ್ಷಣತೆಯು ಹೆಚ್ಚಿದನ್ನು ಅನುಭವಿಸಿದರು. ಆದರೂ ಕೂಡ ಅವರು ವೋಲ್ಟೇಜ್ ನ್ನು ಮತ್ತು ಕಾಯಿಲ್ ನ್ನು ಹಚ್ಚಿಸಿ ಮತ್ತು ಆರಿಸುವ ಕ್ರಮವನ್ನು ಸ್ವಿಚ್ಚಿನ ಮೂಲಕ ಹೆಚ್ಚಿಸಿ ತನ್ನ ಪ್ರಯೋಗಗಳನ್ನು ಸತತವಾಗಿ ಮಾಡತೊಡಗಿದರು. ಇದನ್ನು ಅವರು ಕೇವಲ ವಿಜ್ನಾನದ ಜ್ನಾನದ ಮೇಲೆ ತನಗಿರುವ ವಿಶ್ವಾಸ ಮತ್ತು ಸರ್ವಸಮರ್ಥ ಪರಮೇಶ್ವರರ ಮೇಲಿದ್ದ ವಿಶ್ವಾಸದ ಕಾರಣದಿಂದಾಗಿಯೇ ಮಾಡಲಾಯಿತು. ಈ ಅದ್ಭುತವಾದ ರಕ್ಷಾಕವಚವನ್ನು ಸರಿಯಾಗಿ ಉಪಯೋಗಿಸಿದ್ದಲ್ಲಿ ಅದನ್ನು ಮಾನವಸಮಾಜಕ್ಕೆ ಪ್ರಯೋಜನಕಾರವಾದ ಹೊಸ ಪ್ರಕಾರದ ವಿದ್ಯುತಚ್ಛಕ್ತಿಯ ರೂಪದಲ್ಲಿ ಪಡೆಯಬಹುದು ಎಂದು ಅವರ ನಂಬಿಕೆಯಾಗಿತ್ತು.
ಅವರ ಪ್ರಯೋಗಗಳನ್ನು ಹೆಚ್ಚು ಸುಧಾರಿಸಲೆಂದು ಅವರು ಬಹಳ ಸಾಹಸದ ಪ್ರಯತ್ನಗಳನ್ನು ಮಾಡುತ್ತಿರುವಾಗ ಡಾ. ನಿಕೋಲಾ ಟೇಸಲಾರವರು ತ್ವರಿತಗತಿಯ ಯಾಂತ್ರಿಕ ರೋಟರಿ ಸ್ವಿಚ್ಚನ್ನು ತಾವೇ ತಯಾರಿಸಿದರು ಮತ್ತು ಅದು ಒಂದು ಸೆಕೆಂದಿನಲ್ಲಿ ಹತ್ತು ಸಾವಿರದ ಭಾಗದಷ್ಟು ಕೆಲಸ ಮಾಡಿತು. ಅಂದರೆ ೬,೦೦,೦೦೦ ರೊಟೇಶನ್ ಪರ್ ಸೆಕೆಂದ್ (ಒಂದು ನಿಮಿಷದ ಆವರ್ತನೆ). ಅವರು ವೋಲ್ಟೇಜನ್ನು ೧,೦೦,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದಾಗ ಬಹಳ ಅದ್ಭುತದಂತಹ ಶೋಧನೆಯನ್ನು ಕಂಡು ಹಿಡಿದು ಅದನ್ನು ’ಎಲೆಕ್ಟ್ರಿಕಲ್ ಸೌನಾ’ಇಫೆಕ್ಟ್’ (ವಿದ್ಯುತಚ್ಛಕ್ತಿಯನ್ನು ಉಪಯೋಗಿಸಿ ಮಾಡಿದ ಬಿಸಿಬಾಷ್ಪದ ಸ್ನಾನಗೃಹ) ಎಂದು ಹೆಸರಿಟ್ಟರು.
ಡಾ. ನಿಕೋಲಾ ಟೇಸಲಾರವರು ಅವರ ಈ ಪ್ರಯೋಗದಲ್ಲಿ ಬದಲಾವಣೆ ಮಾಡಿ ಸ್ವಿಚ್ಚುಗಳ ಬದಲಾಗಿ ವರ್ತುಳಾಕಾರದ ಸಂದಿರುವ ಚುಂಬಕದ ಪರಿಚಯ ಮಾಡಿಕೊಟ್ಟರು. ಅವರು ಪ್ರಧಾನ ಹಾಗು ಎರಡನೆ (ಪರ್ಯಾಯ) ಕಾಯಿಲಿನ (ಸುರುಳಿಸುತ್ತು) ವ್ಯವಸ್ಥೆ ಮಾಡಿದರು, ಇವರು ಪ್ರಧಾನ ಸುರುಳಿಯಸುತ್ತಿನಲ್ಲಿರುವ (ಪ್ರೈಮರಿ ಕಾಯಿಲ್) ವೋಲ್ಟೇಜನ್ನು ಎರಡನೆ ಸುರುಳಿಸುತ್ತಿನಲ್ಲಿ (ಸೆಕೆಂಡರಿ ಕಾಯಿಲ್) ಬಹಳ ಹೆಚ್ಚಿನ ಪ್ರಮಾಣದಲ್ಲಿ ಪ್ರವರ್ತನೆ ಮಾಡಲು ಉಪಯೋಗಿಸಿದರು. ಡಾ. ಟೇಸಲಾರವರು ಅವರ ಹೊಸ ಇಂಪಲ್ಸ್ ಟ್ರಾಂಸ್ ಫೊರಮರ್ಸ್ ಗಳು ಅದಕ್ಕೆ ಪೂರೈಸಿದ ಪಾವರನ್ನು ಒಳ್ಳೆಯ ರೀತಿಯಿಂದ ಹೆಚ್ಚಿಸುತ್ತದೆ ಎಂದು ಕಂಡು ಹಿಡಿದರು. ಹೀಗೆ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ಕೂಡ ವಿಸ್ತಾರಗೊಳ್ಳುವದು. ಈ ಪದ್ಧತಿಯಿಂದ ವಿದ್ಯುತಚ್ಛಕ್ತಿಯು ’ಮಿಲ್ಲಿಯನ್ಸ್ ಆಫ್ ವೋಲ್ಟ್ ಸ್’ (ದಶಲಕ್ಷ ವೋಲ್ಟ್ ಸ್) ನ್ನು ಉತ್ಪನ್ನ ಮಾಡಲು ಸಾಧ್ಯವಿದೆ ಹಾಗೆಯೇ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ತಂತಿಗಳಿಲ್ಲದೆ ದೂರದ ಅಂತರಕ್ಕೆ ಕಳುಹಿಸಲು ಕೂಡ ಸಹಾಯವಾಗಬಹುದೆಂದು ಡಾ ಟೇಸಲಾರವರು ಕಂಡು ಹಿಡಿದರು
ಹಾಗೆಯೇ ಅವರು ಈ ಪ್ರಯೋಗದಲ್ಲಿ, ಸಂಪೂರ್ಣ ಸುರುಳಿಯ (ಕಾಯಿಲ್) ಬಾಹ್ಯ ಸ್ವರೂಪದಿಂದ ನೀಲಿ-ಬಿಳಿ ಬಣ್ಣದ ಅಪರಿಮಿತ ಸ್ರಾವವು ಹಾರಾಡುತ್ತಿರುವುದನ್ನು ಗಮನಿಸಿದರು. ಒಂದು ಮುಖ್ಯವಾದ ವಿಷಯ ಧ್ಯಾನಕ್ಕೆ ತರಬೇಕಾದುದೆಂದರೆ ಹೊರಬರುತ್ತಿರುವ ಈ ಬಿಳಿ ಬಣ್ಣದ ಸ್ರಾವವು, ಕಡಿಮೆ ಪ್ರಮಾಣದ ಫ್ರಿಕ್ವೆನ್ಸಿಯಲ್ಲಿ ವಸ್ತುಗಳ ಒಳಗಿಂದ ಹಾದು ಹೋಗುವಾಗ ಸೂಜಿಯಂತೆ ತಿವಿಯುತ್ತಿರುವ ತೀಕ್ಷಣತೆ ಮತ್ತು ಉರಿ ಬರುವ ಸಂವೇದನೆಯನ್ನು ಕೊಡದೆ ಅದು ಶಾಂತವಾದ, ತಂಪಾದ ಅನುಭವವನ್ನು ಮಾಡಿಸಿ ಭೌತದ್ರವ್ಯ ಹಾಗೆಯೇ ಎಲ್ಲಾ ಸ್ಥೂಲ ಪದಾರ್ಥಗಳ ಒಳಗಿಂದ ಕೂಡ ಹೊರಬರುತ್ತಿದ್ದವು.
ಹಾಗೆಯೇ ಈ ಹೊರಬರುತ್ತಿರುವ ನೀಲಿ-ಬಿಳಿ ಬಣ್ಣದ ಸ್ರಾವಗಳು ಕೆಲವು ನಿಶ್ಚಯಾತ್ಮಕ ಫ್ರಿಕ್ವೆನ್ಸಿಯಲ್ಲಿ, ಈ ಕರಂಟ್ ನ್ನು ಪಡೆದ ಕಾಯಿಲ್ಸ್ ಗಳ ಸಮೀಪ ತಂದಾಗ ಆರಿಸಿರುವ ಟ್ಯುಬಗಳನ್ನು, ವಿಶಿಷ್ಠ ಬಲ್ಬುಗಳು ಹಾಗು ದೀಪಗಳನ್ನು ಕೂಡ ಹಚ್ಚಿಸುತ್ತಿದ್ದವು. ಡಾ. ನಿಕೋಲಾ ಟೇಸಲಾರವರು ದೀಪಗಳನ್ನು ಅವರ ಕೈಯಲ್ಲಿ ಹಿಡಿದು ತಂತಿರಹಿತ ವಿದ್ಯುತ್ತಿನ ಮೂಲಕ ಅದನ್ನು ಹಚ್ಚಿಸಿದರು.
ರಯೋಗದಲ್ಲಿ ಮುಂದಿನ ಸುಧಾರಣೆ ಮಾಡುವಾಗ, ಗೋಲಾಕಾರದ ತಾಮ್ರವನ್ನು ಸೆಕೆಂಡರಿ ಟ್ರಾಂಸ್ ಫೊರಮರ್ ನ ಕೊನೆಯಲ್ಲಿ ಕೂಡಿಸಿದರು. ಹೊರಬರುತ್ತಿರುವ ಬಣ್ಣದ ಸ್ರಾವವೆಲ್ಲಾ ಈ ತಾಮ್ರದ ಗೋಲದಲ್ಲಿ ಒಟ್ಟಾಯಿತು, ಈಗ ಈ ತಾಮ್ರದ ಗೋಲದಿಂದ ಹೊರಬರುತ್ತಿರುವ ಬಣ್ಣದ ಸ್ರಾವವು ಬಹಳ ಜೋರಿನ ಶಬ್ದ ಮಾಡತೊಡಗಿತು. ಇದರಿಂದಾಗಿ ಆವಶ್ಯಕವಾಗಿರುವ ವಿದ್ಯುತ್ತಿನ ಪ್ರಮಾಣ ಕೂಡ ಕಡಿಮೆಯಾಗಿ ತಂತಿರಹಿತ ವಿದ್ಯುತಚ್ಛಕ್ತಿಯ ಸುತ್ತನ್ನು ಬಹಳ ನಿಶ್ಚಿತ ಮತ್ತು ಸುರಕ್ಷಿತ ಮಾಡಿತು. ಇದು ಪ್ರಖ್ಯಾತವಾಗಿ ಕರೆಯಲ್ಪಟ್ಟ " ಟೇಸಲಾ ಕಾಯಿಲ್ " ಗೆ ಜನ್ಮ ಕೊಟ್ಟಿತು. ಈ ಟೇಸಲಾ ಕಾಯಿಲ್ ನ ಸಹಾಯದಿಂದ ಡಾ. ನಿಕೋಲಾ ಟೇಸಲಾರವರು ಜನಸಾಮಾನ್ಯರ ಉಪಯೋಗಕ್ಕೆ ಬಹಳ ಸುರಕ್ಷಿತವಾಗಿರುವ ವಾಯರ್ ಲೆಸ್ ಎಲೆಕ್ಟ್ರಿಕಲ್ ಎನರ್ಜಿ (ತಂತಿರಹಿತ ವಿದ್ಯುತಚ್ಛಕ್ತಿಯ ಶಕ್ತಿ) ಯನ್ನು ತಯಾರಿಸಲು ಯಶಸ್ವಿಯಾದರು. ಈ ತಂತಿರಹಿತ ವಿದ್ಯುತಚ್ಛಕ್ತಿಯನ್ನು ವಿಶೇಷ ರೀತಿಯಲ್ಲಿ ತಯಾರಿಸಲಾದ ಸರ್ಕಿಟಿನ ಸಹಾಯದಿಂದ ಬಹಳ ದೂರದ ಅಂತರದಲ್ಲಿ ಪಡೆಯಬಹುದು. ಡಾ. ನಿಕೋಲಾ ಟೇಸಲಾರವರು ತಂತಿರಹಿತ ವಿದ್ಯುತಚ್ಛಕ್ತಿಯ ಸಂಕಲ್ಪನೆಗೆ ಜನ್ಮ ಕೊಟ್ಟರು.
ಇದು ತಂತಿರಹಿತ ಶಕ್ತಿಗಳನ್ನು (ವಾಯರ್ ಲೆಸ್ ಎನರ್ಜಿ) ಹತ್ತಿರದ ವಿಭಾಗಗಳಿಗೆ ಸ್ಥಾನಾಂತರ ಮಾಡುವ ಪ್ರಾತ್ಯಕ್ಷಿಕ ನಮೂನೆಯಾಯಿತು. ಈ ನಮೂನೆಯು ಬೇರೆ ಯಾವುದೇ ಆಗದೆ ಅದು ಟೇಸಲಾ ಕಾಯಿಲ್ ಆಗಿತ್ತು. ಇವತ್ತು ಹಲವು ಉತ್ಸಾಹಪೂರ್ಣ ಚಲನಚಿತ್ರಗಳಲ್ಲಿ ಮತ್ತು ಆಟಗಳಲ್ಲಿ ಟೇಸಲಾ ಕಾಯಿಲ್ ನಿಂದ ಹೊರಬರುವ ಸ್ರಾವಗಳನ್ನು ಅಂದರೆ ಕರಂಟ್ ಗಳು ಎಲ್ಲಿ ಬೀಳುವದು ಆ ಸ್ಥಳವನ್ನು ಅದು ಸುಡುತ್ತದೆ ಆದ್ದರಿಂದ ಅಪಾಯಕಾರಿಯೆಂದು ತೋರಿಸಲಾಗುತ್ತಿದೆ. ಆದರೆ ಡಾ. ಟೇಸಲಾರವರ ನಿರೂಪಣೆಗಳ ಪ್ರಕಾರ ಅದರ ಸತ್ಯಸ್ಥಿತಿಯು ಪೂರ್ಣ ವಿರುದ್ಧವಾಗಿತ್ತು. ಡಾ. ನಿಕೋಲಾ ಟೇಸಲಾರವರು ಟೇಸಲಾ ಕಾಯಿಲ್ ಪರಿಪೂರ್ಣವಾಗಿ ತಂತಿರಹಿತ ಶಕ್ತಿಯನ್ನು ಕಳುಹಿಸುವ ಸಲಕರಣೆಯಾಗಿದೆ ಎಂದು ತನ್ನ ವಿಧಾನದಿಂದ ಸಿದ್ಧಮಾಡಿದರು.
ಟೇಸಲಾರವರ ಈ ಕಾಯಿಲ್ ಪ್ರಯೋಗಗಳನ್ನು ವಿಶೇಷ ಪ್ರವೀಣರ ಮಾರ್ಗದರ್ಶನ ತೆಗೆದುಕೊಳ್ಳದೆ ಮಾಡಬಾರದು ಅಥವಾ ಆ ವಿಷಯದ ಒಳ್ಳೆ ಮತ್ತು ಪೂರ್ಣ ಜ್ನಾನವಿದ್ದಾಗ ಮಾತ್ರ ಮಾಡಬೇಕು. ಯೋಗ್ಯ ತಿಳುವಳಿಕೆ ಮತ್ತು ಪ್ರಯೋಗದಿಂದ ಟೇಸಲಾ ಕಾಯಿಲ್ ನ್ನು ಅನೇಕ ವಿಧದ ಉದ್ದೇಶಗಳಿಗಾಗಿ ಅಂದರೆ ತಂತಿರಹಿತವಾಗಿ ಬಲ್ಬುಗಳನ್ನು ಹಚ್ಚಿಸಲು ಮತ್ತು ವಾಯರ್ ಲೆಸ್ ಎಲೆಕ್ಟ್ರಿಕಲ್ ಸ್ಥಾನಾಂತರ ಮಾಡುವಾಗ ಉಪಯೋಗಿಸಬಹುದು.
|| ಹರಿ ಓಂ || ಶ್ರೀರಾಮ || ಅಂಬಜ್ನ ||
No comments:
Post a Comment