Wednesday, 23 July 2014

ಡಾ. ನಿಕೋಲಾ ಟೇಸಲಾ - ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಅವರ ಪೂರ್ವ ಪರಿಚಯ

೨೭ ಮಾರ್ಚ್ ೨೦೧೪ ರ, ಗುರುವಾರದಂದು, ಸದ್ಗುರು ಅನಿರುದ್ಧಾ ಬಾಪೂರವರು ನಮಗೆ ಡಾ.ನಿಕೋಲಾ ಟೇಸಲಾರವರ ಬಗ್ಗೆ ಪರಿಚಯ ಮಾಡಿಕೊಟ್ಟರು. ಡಾ. ಟೇಸಲಾರವರನ್ನು  ಜಗತ್ತಿನಲ್ಲಿ ಎಂದಿಗೂ ಕಾಣ ಸಿಗದ ಬಹಳ ಪ್ರಖ್ಯಾತ ಶಾಸ್ತ್ರಜ್ನರೆಂದು ತಿಳಿಯಲಾಗುತ್ತದೆ. ಈ ಪೃಥ್ವಿಯ ಮೇಲೆ ಪ್ರತಿಯೊಬ್ಬ ಮಾನವನು  ತನ್ನ ನಿತ್ಯದ ಜೀವನದಲ್ಲಿ ಅವರ ಸಂಶೋಧನೆಗಳನ್ನೇ ಅಂಗೀಕರಿಸಿದ್ದನ್ನು ಮರೆತು ಹೋಗಿದ್ದಾರೆ. ಆದ್ದರಿಂದ ಇವತ್ತಿನಿಂದ ನಾನು ಡಾ.ನಿಕೋಲಾ ಟೇಸಲಾರವರ ಪವಿತ್ರ ವ್ಯಕ್ತಿಮತ್ವದ ಹಾಗು ಸಮಯದ ಮೊದಲೇ ಮಾಡಿದ ಆವಿಷ್ಕಾರಗಳ ಬಗ್ಗೆ ಪುನ: ಗಮನ ಸೆಳೆಯಲು ಸರದಿಯನ್ನು ಪ್ರಾರಂಭಿಸುತ್ತಿದ್ದೇನೆ.

ಡಾ. ನಿಕೋಲಾ ಟೇಸಲಾರವರು ಸರ್ಬಿಯಾದಲ್ಲಿ ಜನ್ಮಿಸಿದ  ಅಮೇರಿಕದವರಾಗಿದ್ದರು. ಅವರನ್ನು ಸಹಸ್ರವಾರ್ಷಿಕ ಕಾಲದ ಶಾಸ್ತ್ರಜ್ನರು (ದ ಗ್ರೇಟೆಸ್ಟ್ ಸೈಂಟಿಸ್ಟ್ ಆಫ್ ದ ಮಿಲೇನಿಯಮ್) ಎಂದು ಕರೆದದ್ದು ಉಚಿತವಾಗಿದ್ದರೂ ನಿಜವಾಗಿಯು ಅವರು ಪ್ರಖ್ಯಾತ ಸಂಶೋಧಕರೇ, ಭವಿಷ್ಯತ್ಕಾಲದ ಸ್ಥಿತಿಯನ್ನು ಅರಿತುಕೊಂಡವರು ಮತ್ತು ಭ್ರಾಮಕ ಭೌತವಿಜ್ನಾನಿಯೆಂದು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಪ್ರಸಿದ್ಧಿ ಪಡೆದವರಾಗಿದ್ದು ಪರ್ಯಾಯ ವಿದ್ಯುತ್ ಪ್ರವಾಹ (ಆಲ್ಟರ್ ನೇಟಿಂಗ್ ಕರಂಟ್), ಮುಕ್ತ ಊರ್ಜೆ(ಫ್ರೀ ಎನರ್ಜಿ), ತಂತಿ ವಿರಹಿತ ಯಂತ್ರಶಕ್ತಿಯ ಸಂಚಾರಣೆ (ವಾಯರ್ ಲೆಸ್ ಪಾವರ್ ಟ್ರಾಂಸ್ ಮಿಶನ್) ಇಂತಹ ಸಾವಿರಾರು ಸಂಶೋಧನೆಗಳನ್ನು ಕಂಡು ಹಿಡಿದವುಗಳಲ್ಲಿ ಇವುಗಳಾಗಿವೆ.

ಡಾ. ನಿಕೋಲಾ ಟೇಸಲಾರವರು ಆಸ್ಟ್ರೀಯ ಸಾಮ್ರಾಜ್ಯ (ಈಗಿನ ಕ್ರೋಶಿಯಾ) ದಲ್ಲಿ ೧೦ನೇ ಜುಲ್ಯ ತಿಂಗಳಿನ ಉಗ್ರ ಬೇಸಿಗೆಕಾಲದ ಮಿಂಚಿನ ಬಿರುಗಾಳಿಯಿರುವಾಗ ಮಧ್ಯರಾತ್ರಿಯ ಸಮಯದಲ್ಲಿ ಕೆಥೊಲಿಕ ಧರ್ಮನಿಷ್ಠ ಕುಟುಂಬದಲ್ಲಿ ಜನ್ಮಿಸಿದರು. ಅವರ ತಾಯಿಗೆ ನಿಕೋಲಾರವರನ್ನು ಹೆತ್ತುವಾಗ ಸಹಾಯ ಮಾಡಿದ ಪ್ರಸವಕಾರಿಣಿಯು ಅವರನ್ನು ಬಿರುಗಾಳಿಯ ಮಗು (ದ ಚೈಲ್ಡ್ ಆಫ್ ಸ್ಟೊರ್ಮ್) ಎಂದು ಭವಿಷ್ಯನುಡಿ ಹೇಳಿದ್ದಳು ಮತ್ತು ಅವಳು ಹೇಳಿದಂತೆ ನಿಜವಾಗಿ ಅದು ಸತ್ಯದಲ್ಲಿ ಪರಿವರ್ತಿತವಾಯಿತು.

ವಿದ್ಯುತಚ್ಛಕ್ತಿ  ಮತ್ತು ಯಂತ್ರವಿದ್ಯೆಯನ್ನು ಸಂಗ್ರಹಿಸಿದ ಡಾ. ನಿಕೋಲಾ ಟೇಸಲಾರವರು ಗ್ರೇಝಾದಲ್ಲಿ ಆಸ್ಟ್ರೀಯನ್ ಪೊಲಿಟೆಕ್ನಿಕ್ ಸ್ಕೂಲಿನಲ್ಲಿ ಮಿಲಿಟರಿ ಬೊರ್ಡರ್ ಸ್ಕೊಲರ್ ಶಿಪ್ ನ್ನು ಪಡೆದು ತನ್ನ ದಾಖಲೆ ಮಾಡಿಕೊಂಡರು. ಮುಂದೆ ಫಿಲೋಸಫಿ (ತತ್ವಶಾಸ್ತ್ರ) ಕ್ಕಾಗಿ ಡಾ.ಟೇಸಲಾರವರು ಪ್ರೇಗಿನ ಮಹಾವಿದ್ಯಾಲಯದಲ್ಲಿ ಕಲಿಯಲು ಹೋದರು. ಯೇಲ್ ಮಹಾವಿದ್ಯಾಲಯದ ಹಾಗು ಕೊಲಂಬಿಯಾ ಮಹಾವಿದ್ಯಾಲಯದ ಮೂಲಕ ಡಾ. ಟೇಸಲಾ ಅವರಿಗೆ ಗೌರವಾರ್ಹ ಡಾಕ್ಟರೇಟಿನಿಂದ ಸನ್ಮಾನಿಸಲಾಯಿತು. ಡಾ.ಟೇಸಲಾರವರಿಗೆ ೧೮ ಭಾಷೆಗಳು ಗೊತ್ತಿದ್ದು ಅವರ ೧೨ ಭಾಷೆಗಳಲ್ಲಿ ಪ್ರಭುತ್ವವಿದ್ದು ಅವುಗಳಲ್ಲಿ ಅವರ ಮಾತೃಭಾಷೆ ಸರ್ಬೊ-ಕ್ರೊಅಟ್  ಮತ್ತು ಲ್ಯಾಟಿನ್, ಇಟಾಲಿಯನ್, ಫ್ರೆಂಚ್, ಜರ್ಮನ್ ,ಮತ್ತು ಇಂಗ್ಲಿಷ್ ಭಾಷೆಗಳು ಕೂಡಿವೆ.

ಡಾ. ನಿಕೋಲಾ ಟೇಸಲಾರವರ ಹೆಸರಿನಲ್ಲಿ ೭೦೦ಕ್ಕಿಂತ ಹೆಚ್ಚು ಪ್ರಕಾರಗಳು ಗಣ್ಯತೆ ಪಡೆದದ್ದೇ ಒಂದು ಅಘಟಿತ ದಾಖಲೆಯಾಗಿದೆ. ಹಲವಾರು ಅಸಂಖ್ಯಾತ ಸಂಶೋಧನೆಗಳ ಪಟ್ಟಿಗಳಲ್ಲಿ ಡಾ. ಟೇಸಲಾರವರು ಆಲ್ಟರ್ ನೇಟಿಂಗ್ ಕರಂಟ್, ಪೀಸ್ ರೆ, ಹ್ಯುಮನಾಯಿಡ್ ರೊಬೋಟ್ಸ್, ಟೆಲಿವಿಜನ್, ರಿಮೋಟ್ ಕಂಟ್ರೋಲ್, ಎಕ್ಸ್-ರೇಜ್, ವಾಯರ್ ಲೆಸ್ ಪಾವರ್ ಟ್ರಾನ್ಸ್ ಮಿಶನ್, ಫ್ರೀ ಎನರ್ಜಿ ಫ್ರಮ್ ಕೊಸ್ಮಿಕ್ ರೇಜ್, ಇಂಡಕ್ಷನ್ ಮೋಟರ್, ರೇಡಿಯೋ, ರೊಟೇಟಿಂಗ್ ಮ್ಯಾಗ್ನೇಟಿಕ್ ಫೀಲ್ಡ್ ಪ್ರಿನ್ಸಿಪಲ್, ಟೆಲಿಫೋನ್ ರಿಪೀಟರ್, ಟೇಸಲಾ ಕಾಯಿಲ್ ಟ್ರಾನ್ಸ್ ಫೊರ್ಮರ್, ವಾಯರ್ ಲೆಸ್ ಕಮ್ಯುನಿಕೇಶನ್, ಟೆಲೆಪೋರ್ಟೇಶನ್ , ಸ್ಪೇಸ್ ಟೈಮ್ ಬೆಂಡಿಂಗ್, ಟೈಮ್ ಟ್ರಾವೆಲ್, ಇತ್ಯಾದಿಗಳನ್ನು ಸಂಶೋಧಿಸಿದ ಅಗ್ರಗಾಮಿಯಾಗಿರುವರು. ಈ ಪಟ್ಟಿಯು ಮುಗಿಯುವಂತಿಲ್ಲ.

ಡಾ. ನಿಕೋಲಾ ಟೇಸಲಾರವರನ್ನು ಅನೇಕ ಬಹುಮಾನಗಳಿಂದ ಪ್ರಶಂಸಿಸಲಾಗಿ ಮತ್ತು ನವೀನತೆಯಿಂದ ಕೂಡಿದ ಹಾಗೆಯೇ ವಿಚಾರ ಮಾಡಲು ಅಸಾಧ್ಯವಾದ ಸಂಶೋಧನೆಗಳಿಗಾಗಿ ಮನ್ನಣಿಸಲಾಗಿದೆ. ಇದರಲ್ಲಿ  ಸರ್ಬಿಯಾದ ಮಿಲನಿನ ರಾಜ - ೧ ರವರ ಮೂಲಕ ೧೮೮೩ ರಲ್ಲಿ ’ ದ ಆರ್ಡರ್ ಆಫ್ ಸೇಂಟ್ ಸಾವಾ’ ಎಂಬ ಪದವಿಯು ಈ ಪಟ್ಟಿಯಲ್ಲಿ ಸೇರಿದೆ. ಫ್ರಾಂಕಲಿನ್ ಸಂಸ್ಥೆಯ ಮೂಲಕ  ’ದ ಎಲಿಯೆಟ್ ಕ್ರೆಸನ್ ಮೆಡಲ್’ಎಂಬ ಎಲ್ಲಕ್ಕಿಂತ ಉನ್ನತವಾದ ಬಹುಮಾನ , ಮಾನವನ ’ಸುಖ-ಸಾಧನೆ, ಸುಸ್ಥಿತಿ ಮತ್ತು ಆನಂದ ’ವನ್ನು ಪಡೆಯು ಸಾಧನೆಗಳಿಗೆ ಸಹಾಯವಾಗುವ ಸಂಶೋಧನೆಗಳಿಗಾಗಿ ’ದ ಜೋನ್ ಎವಾರ್ಡ್ ’ಕೊಡಲಾಯಿತು. ಮತ್ತೀತರ ಬಹುಮಾನಗಳಲ್ಲಿ ’ ದ ಆರ್ಡರ್ ಆಫ್ ಪ್ರಿಂಸ್ ಡ್ಯಾನಿಲೊ ’ವನ್ನು ಮೊಂಟೆನೆಗ್ರೊದ ನಿಕೋಲಾ ರಾಜನಿಂದ,  ಯು ಎಸ್ ನಲ್ಲಿ ಬಹುಮೂಲ್ಯ ಪರಿಗಣಿಸಲಾದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾರಿತೋಷಕ ಎಡಿಸನ್ ಮೆಡಲ್ ನ್ನು ೧೯೧೭ ರಲ್ಲಿ ಅವರಿಗೆ ಕೊಡಲಾಗಿದೆ, ಇತ್ಯಾದಿಗಳು.

ಇಂಟರ್ ನೇಶನಲ್ ಯುನಿಟ್ ಆಫ್ ಮ್ಯಾಗ್ನೇಟಿಕ್ ಫ್ಲಕ್ಸ್ ಡೆಂಸಿಟಿಯನ್ನು ಡಾ. ನಿಕೋಲಾ ಟೇಸಲಾರವರ ಹೆಸರಿಂದ ಅಂದರೆ ’ಟೇಸಲಾ ಎಂದು ಕರೆಯಲಾಗುತ್ತಿದೆ   ೧೯೭೫ ರಲ್ಲಿ ಡಾ. ಟೇಸಲಾರವರನ್ನು ಸಂಶೋಧಕರ ಅಂದರೆ ಇನ್ ವೆಂಟರ್ಸ್ ಹಾಲ್ ಆಫ್ ಫೇಮ್ ದಲ್ಲಿ ಸೇರಿಸಲಾಯಿತು. ಯುಎಸ್ ನ ಅಂಚೆ ವಿಭಾಗದವರು ಡಾ.ನಿಕೋಲಾ ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೯೮೩ ರಲ್ಲಿ ಅಂಚೆ ಚೀಟಿ (ಸ್ಟಾಂಪ್) ಯನ್ನು ಜಾರಿಗೆ ತಂದು ಗೌರವಿಸಿದರು. ’ದ ನಿಕೋಲಾ ಟೇಸಲಾ ಎವಾರ್ಡ್’ ನ್ನು ಬಹಳ ಕೀರ್ತಿಯುಕ್ತ ಮನ್ನಣೆ ಪಡೆದ ಬಹುಮಾನವೆಂದು ತಿಳಿಯಲಾಗಿ ಅದನ್ನು ಇಂಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ಮೂಲಕ ೧೯೭೬ ರಿಂದ ಪ್ರತಿವರ್ಷ ಕೊಡಲಾಗುತ್ತಿದೆ. ಇದಲ್ಲದೆ ಡಾ. ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೦ ಜುಲ್ಯದಂದು ಯುನಾಯ್ ಟೇಡ್ ಸ್ಟೇಸ್ಟ್ಸ್ ನಲ್ಲಿ  ’ನಿಕೋಲಾ ಟೇಸಲಾ ಡೇ’ ಎಂದು ಪ್ರತಿ ವರ್ಷ ಆಚರಿಸಲಾಗುತ್ತದೆ.

ಡಾ. ನಿಕೋಲಾ ಟೇಸಲಾರವರ ಎಲ್ಲಾ ಸಂಶೋಧನೆಗಳು ಬಹಳವೇ ಪ್ರಗತಿಶೀಲವಾಗಿದ್ದು ಅದು ಸಮಯದ ಮೊದಲೇ ಶೋಧಿಸಲ್ಪಟ್ಟು ಅವರು ಎರಡನೇ ಉದ್ಯೋಗದ ಕ್ರಾಂತಿಗೆ  ಜನ್ಮ ಕೊಟ್ಟಿದಂತಿದೆ ಮತ್ತು  ಅವರಿಂದಾಗಿ ’ವಿದ್ಯುಚ್ಛಕ್ತಿಯ ಕಾಲ’ (ದ ಎಲೆಕ್ಟ್ರಿಕಲ್ ಎರಾ) ವು ನಿಜವಾಗಿಯೂ ವಿಶೇಷಧಿಕಾರ ಪಡೆಯಿತು. ಸಂಕ್ಷಿಪ್ತದಲ್ಲಿ, ಡಾ. ಟೇಸಲಾರವರ ಸಂಶೋಧನೆಗಳು ೨೦ ನೇ ಶತಮಾನದಲ್ಲದೇ ೨೧ ನೇಯ ಶತಮಾನದ ತಳಹದಿ ಹಾಕಿದಂತಾಯಿತು. ಡಾ. ಟೇಸಲಾರವರ  ಸಂಶೋಧನೆಗಳು ಸಮಯದ ಮೊದಲೇ  ಶೋಧವಾದುದರಿಂದ ಪೃಥ್ವಿ ಮೇಲಿರುವ ಪ್ರತಿಯೊಂದು ದೊಡ್ಡ ರಾಷ್ಟ್ರಗಳು ಈ ಅಸಾಧಾರಣ ಪ್ರಾವಿಣ್ಯತೆಯನ್ನು  ಪಡೆದವನ ಗತಿವಿಧಿಗಳನ್ನು ವೀಕ್ಷಿಸಲು ತನ್ನ ಗೂಢಚಾರರನ್ನು ನೇಮಿಸಿದರು. ಡಾ. ನಿಕೋಲಾ ಟೇಸಲಾರವರು ಶಾಸ್ತ್ರಜ್ನರು, ಹೊಸ ಪದ್ಧತಿಯ ಸಂಶೋಧಕರು, ಒಳ್ಳೆಯ ಮತ್ತು ಅಪರೂಪ ವ್ಯಕ್ತಿಮತ್ವ ಪಡೆದ ಮಾನವ.

ಅವರು ವಿಜ್ನಾನದಲ್ಲಿ ದೇವರ ಅದ್ಭುತತೆಯನ್ನು ಕಂಡರು. ಅವರ ಪ್ರತಿಯೊಂದು ಸಂಶೋಧನೆಗಳಲ್ಲಿ ವಿಜ್ನಾನ ಮತ್ತು ಆಧ್ಯಾತ್ಮವು ಒಂದೇ ನಾಣ್ಯದ ಎರಡು ಬದಿಗಳಾಗಿ ಅವು ಒಬ್ಬೊರಿಗೊಬ್ಬರು ಪ್ರಶಂಸಾಪೂರ್ಣವಾಗಿರುವುದಾಗಿ  ಮತ್ತು ಅದು ’ಪರಮಶ್ರೇಷ್ಟ ಬಲ’ದಿಂದ ಅಂದರೆ ದೇವರಿಂದ ಆಳಿಸಲಾಗಿದೆ ಎಂದು ಸಾಧಿಸಿದರು. ವಿಜ್ನಾನದ ಪರಿಶೋಧಕ ಮತ್ತು ಅಧ್ಯಾತ್ಮಿಕ ಹಾಗು ದೂರದೃಷ್ಟಿಯನ್ನು ಪಡೆದ ಇಂತಹ ಪ್ರತಿಭಾಶಾಲಿಯನ್ನು ಪುನ: ಪಡೆಯಲು ಅಸಾಧ್ಯ. ಅವರ ಎಲ್ಲಾ ಸಂಶೋಧನೆಗಳಿಂದಾಗಿ ಮತ್ತು ಹೊಸ ಪದ್ಧತಿಯ ಸಂಶೋಧಕರೆಂದು ಅವರನ್ನು ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಎಂದು ಸನ್ಮಾನದಿಂದ ಆದರಿಸಲಾಗುತ್ತಿದೆ.

|| ಹರಿ ಓಂ || ಶ್ರೀರಾಮ || ಅಂಬಜ್ನ ||


ಶಾಸ್ತ್ರಜ್ನ ನಿಕೋಲಾ ಟೇಸಲಾರವರ (Scientist Nikola Tesla) ಬಗ್ಗೆ ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನದಲ್ಲಿ ಹೇಳಿದ ಮಾಹಿತಿ

ಪರಮ ಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪೂರವರು ಗುರುವಾರ ದಿ. ೨೭ ಮಾರ್ಚ್ ೨೦೧೪ ರಂದು ಮರಾಠಿ ಪ್ರವಚನದಲ್ಲಿ ಶ್ರೀ ಹರಿಗುರುಗ್ರಾಮದಲ್ಲಿ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾರವರ ಬಹುಮೂಲ್ಯ ಸಂಶೋಧನೆಯ ಕಾರ್ಯದ ಬಗ್ಗೆ ಹೇಳಿದರು.




ಅಸಂಖ್ಯ ತೊಡಕುಗಳನ್ನು ಎದುರಿಸಲಾಗುತ್ತಿದ್ದರೂ ಕೂಡ ಭಗವಂತನ ಮೇಲಿರುವ ಶ್ರದ್ಧೆಯನ್ನು ಸ್ವಲ್ಪ ಕೂಡ ವಿಚಲಿತಗೊಳಿಸದ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾ ಅವರು ಅಥಕ ಪರಿಶ್ರಮದಿಂದ ಬಹುಮೂಲ್ಯ ಸಂಶೋಧನೆಗಳನ್ನು ಮಾಡಿ ಲೋಕೋಪಯೋಗಕ್ಕಾಗಿ ಅನೇಕ ಶೋಧನೆಗಳನ್ನು ಮಾಡಿದರು. ಬಾಪೂರವರು ಅವರ ಮಹಾನ ಕಾರ್ಯದ ಪರಿಚಯವನ್ನು ಮಾಡಿ ಕೊಟ್ಟರು. ಅದನ್ನು ನಾವು ಈ ವ್ಹಿಡಿಯೋದಲ್ಲಿ ನೋಡಬಹುದು.

Tuesday, 8 July 2014

ಬಾಪೂರವರ ನಿತ್ಯದ ಬೆಳಿಗ್ಗೆಯ ಅಲ್ಪೋಪಹಾರ (ನಾಷ್ಟಾ) - ಆಂಬೀಲ ಅಥವಾ ಇಡ್ಲಿ

ಇವತ್ತಿನ ತರಾತುರಿಯ ಜೀವನದಲ್ಲಿ ಬೆಳಗಿನ ಅಲ್ಪೋಪಹಾರಕ್ಕಾಗಿ (ನಾಷ್ಟಾ) ಸಮಯ ಸಿಗುವುದಿಲ್ಲವೆಂದು ಅನೇಕ ಜನರು ಹೇಳುತ್ತಿರುವದನ್ನು ನಾವು ಕೇಳುತ್ತೇವೆ....ಮತ್ತು ಆ ಸಮಯದಲ್ಲಿ ಸಿಕ್ಕಿದ್ದನ್ನು ಹೆಚ್ಚಿನದಾಗಿ ಬ್ರೆಡ್ ನಮ್ಮ ಅಲ್ಪೋಪಹಾರದ ಅವಿಭಾಜ್ಯ ಭಾಗವಾಗುವದು. ’ಬ್ರೆಡ್ ನ ಹೊರತು ನಾಷ್ಟಾ’ ಈ ಸಂಕಲ್ಪನೆಯು ಹಲವರಿಗೆ ಒಪ್ಪುವದಿಲ್ಲ. ಹೀಗಿದ್ದರು ಕೂಡ ಅನೇಕರ ಮನೆಗಳಲ್ಲಿ ಇವತ್ತು ಸಹ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ.


ಆದರೆ ಬಾಪೂರವರ ನಾಷ್ಟಾ ಮಾತ್ರ ಸ್ಟಾಂಡರ್ಡ್ ಆಗಿದೆ. ಬಾಪೂ ತನ್ನ ನಾಷ್ಟಕ್ಕಾಗಿ ಆಂಬೀಲ ಅಥವಾ ಇಡ್ಲಿಯನ್ನು ತಿನ್ನುತ್ತಾರೆ, ಮತ್ತು ಇಡ್ಲಿ ಕೂಡ ಅಕ್ಕಿ ಮಾತ್ತು ಉದ್ದಿನಬೇಳೆಯ ಹಿಟ್ಟಿನ್ನದ್ದೇ ! ಹಲವು ಕಡೆಯಲ್ಲಿ ಇಡ್ಲಿಯನ್ನು ಕೇವಲ ಅಕ್ಕಿಯಿಂದಲೇ ಮಾಡುವ ಪದ್ಧತಿಯಿದೆ. ಆದರೆ ಈ ತರಹ ಮಾಡಿದ ಇಡ್ಲಿಯನ್ನು ಬಾಪೂ ಸಾಧ್ಯವಾದಲ್ಲಿ ತಿನ್ನುತ್ತಿಲ್ಲ. " ಆಂಬೀಲ " ಮಾತ್ರ ಬಾಪೂ ಬೆಳಗಿನ ನಾಷ್ಟಾದಲ್ಲಿ ಹೆಚ್ಚಾಗಿ ತಿನ್ನುತ್ತಾರೆ. ಇವತ್ತಿನ ತರುಣ ಸಂತಾನಕ್ಕೆ ಒಂದು ವೇಳೆ ಆಂಬೀಲದ ಬಗ್ಗೆ  ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ನಾನು ಯಾರೊಡನೆ ಮಾತನಾಡಿದೆ ಅವರು ಆಂಬೀಲವನ್ನು ಬಹಳ ವಿರಳವಾಗಿ ತಿಂದಿರುವದು ತಿಳಿದು ಬಂತು. ಅಕ್ಕಿಯಿಂದ ಮಾಡಿದ, ಮಾಡಲು ಸುಲಭವಾದ ಮತ್ತು ಕಡಿಮೆ ಖರ್ಚಿನಿಂದ ಮಾಡಿದ ಈ ಆಂಬೀಲವು ಶರೀರಕ್ಕಾಗಿ ಮಾತ್ರ ಅತ್ಯಂತ ಗುಣಕಾರಿಯಾಗಿದೆ.

ಇವತ್ತು ಬಾಪೂರವರ ಮಾರ್ಗದರ್ಶನನುಸಾರವಾಗಿ ನಾವು ನಾಷ್ಟಕ್ಕೆ ಆಂಬೀಲವನ್ನೇ ತೆಗೆದುಕೊಳ್ಳುತ್ತೇವೆ. ಚಿಕ್ಕ ಒಂದುವರೆ-ಎರಡು ಬಾವುಲ್ ತುಂಬಿಸಿ ಆಂಬೀಲವು ಒಬ್ಬ ಮನುಷ್ಯನಿಗೆ ಪರ್ಯಾಪ್ತವಾಗಿದೆ. ಆಂಬೀಲವನ್ನು ಅಲ್ಪೋಪಹಾರವಾಗಿ ತೆಗೆದುಕೊಂಡಾಗ ನಾವು ಅದರ ಜೊತೆ ಇನ್ನೇನಾದರು ಪದಾರ್ಥ ತೆಗೆದು ಕೊಳ್ಳುತ್ತಿದ್ದರೆ ಅದರ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಅತಿರಿಕ್ತ ಕ್ಯಾಲರೀಜ್ ಹೊಟ್ಟೆಗೆ ಹೋಗುವ ಪ್ರಶ್ನೆ ಬರಲಾರದು. ಆಂಬೀಲದಿಂದ ಹಸಿವು ತಣಿಯುವದು ಮತ್ತು ಹೊಟ್ಟೆಗಾಗಿ ಶಾಮಕವು ಆಗುವದು. ಇವತ್ತು ಎಲ್ಲರಿಗೂ ತಿಳಿಯಲೆಂದು ಪರಮಪೂಜ್ಯ ನಂದಾಯೀಯವರು ಮನೆಯಲ್ಲಿ ಮಾಡುತ್ತಿರುವ ಆ ಆಂಭೀಲದ ರೆಸಿಪಿಯನ್ನು ಕೆಳಗೆ ಕೊಡುತ್ತಿದ್ದೇನೆ.



ಸಾಹಿತ್ಯ -

ಪರಿಮಲ್ ಅಕ್ಕಿ - ೧ ವಾಟಿ

ಸಕ್ಕರೆ - ೧ ಚಮಚೆ

ಮೊಸರಿನ ಮಜ್ಜಿಗೆ - ೫ ವಾಟಿ

ನೀರು - ೭ ವಾಟಿ

ಉಪ್ಪು - ರುಚಿಗನುಸಾರ


ಮಾಡುವ ಕೃತಿ -

ಮೊಟ್ಟಮೊದಲು ೧ ವಾಟಿ ಪರಿಮಲ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಆ ನಂತರ ಆ ಅಕ್ಕಿಯನ್ನು ಮೂರು ಸಲ ನೀರಿನಿಂದ ತೊಳೆದು ತೆಗೆಯಿರಿ. ತೊಳೆದ ನಂತರ ಅದರಲ್ಲಿ ೭ ವಾಟಿ ನೀರು ತೆಗೆದುಕೊಳ್ಳಿ. ನಾವು ಅಕ್ಕಿಯನ್ನು ಅಳೆಯಲು ಯಾವ ವಾಟಿಯನ್ನು ತೆಗೆದುಕೊಂಡಿದ್ದೇವೆ ಅದೇ ವಾಟಿಯನ್ನು ನೀರಿಗಾಗಿ ಉಪಯೋಗಿಸಿರಿ. ಇದರಿಂದ ಪ್ರಮಾಣದಲ್ಲಿ ಅಂತರ ಬರುವುದಿಲ್ಲ. ನೀರನ್ನು ಹಾಕಿದ ಮೇಲೆ ಅಕ್ಕಿಯ ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಮೂರು ಶಿಟಿಯಾಗುವ ತನಕ ಬೇಯಿಸಬೇಕು.


 
ಅಕ್ಕಿ ಬೇಯಿದ ಮೇಲೆ ಅನ್ನದ ಪಾತ್ರೆಯನ್ನು ಕುಕ್ಕರಿನಿಂದ ಹೊರತೆಗೆದಿಡಬೇಕು. ನಾವು ಯಾವಾಗ ಅನ್ನದ ಪಾತ್ರೆಯನ್ನು ಹೊರಗೆ ತೆಗೆದಿಡಿತ್ತೇವೆ ಆಗ ಅದರಲ್ಲಿ ನೀರು ಇರುವದು. ಈಗ ಈ ಅನ್ನ ತಣ್ಣಗಾದಾಗ ಅದನ್ನು ಮಿಕ್ಸರಿನಲ್ಲಿ ೫ ಸೆಕೆಂದಿನ ತನಕ ಮಾತ್ರ ಸಣ್ಣ ಮಾಡಿ ತೆಗೆಯಬೇಕು. ಮಿಕ್ಸರಿನಿಂದ ಆ ಅನ್ನವನ್ನು ಪುನ: ಅದೇ ಪಾತ್ರೆಯಲ್ಲಿ ತೆಗೆಯಬೇಕು. ಈಗ ಅದರಲ್ಲಿ ೧ ಚಮಚೆ ಸಕ್ಕರೆ ಹಾಗು ರುಚಿಗೆ ಅನುಸಾರವಾಗಿ ಉಪ್ಪನ್ನು ಹಾಕಬೇಕು. ಸಕ್ಕರೆ ಮತ್ತು ಉಪ್ಪು ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಬೇಕು.

ನಂತರ ಹೀಗೆ ಮಿಕ್ಸ್ ಮಾಡಿದ ಅನ್ನದಲ್ಲಿ ೫ ವಾಟಿ ಮಜ್ಜಿಗೆಯನ್ನು ಹಾಕಬೇಕು. ಮಜ್ಜಿಗೆ ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಮಿಕ್ಸ್ ಮಾಡಿದ ಅನ್ನದ ರುಚಿಯನ್ನು ನೋಡಿಕೊಂಡು ಅಗತ್ಯವೆಣಿಸಿದಲ್ಲಿ ಇನ್ನು ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಆ ನಂತರ ಈ ಅನ್ನದ ಪಾತ್ರೆಯನ್ನು ಪೂರ್ಣ ರಾತ್ರೆ ಹಾಗೆಯೇ ಇಡಬೇಕು. ಫ್ರಿಜ್ಜಿನಲ್ಲಿ ಇಡಬಾರದು. ಆಂಬೀಲ ಸಿದ್ದವಾಗಲು ಸಾಧಾರಣ ೧೨-೧೪ ಗಂಟೆಯ ಕಾಲ ಬೇಕಾಗುತ್ತದೆ.


ಈ ತರಹ ಸಿದ್ಧವಾದ ಆಂಬೀಲವನ್ನು ನಾವು ಮರುದಿವಸ, ಅಂದರೆ ೧೪ ಗಂಟೆಯಾದ ಮೇಲೆ ತಿನ್ನಬಹುದು. ಅಂದರೆ ಸಾಯಂಕಾಲ ೮ ಗಂಟೆಗೆ ಮಾಡಿದ ಆಂಬೀಲವನ್ನು ನಾವು ಮರುದಿವಸ ಬೆಳಿಗ್ಗೆ ೧೦ ಗಂಟೆಗೆ ತಿನ್ನಬಹುದು. 
 
|| ಹರಿ ಓಂ || ಶ್ರೀರಾಮ || ಅಂಬಜ್ನ ||