Friday, 8 August 2014

ಡಾ. ನಿಕೋಲಾ ಟೇಸಲಾರವರ - ಆರಂಭಿಕ ಜೀವನ

ಹಿಂದಿನ ಲೇಖನದಲ್ಲಿ ನಾವು ಅತೀ ಉಚ್ಚದ ವ್ಯಕ್ತಿಮತ್ವ ಪಡೆದ ಡಾ. ನಿಕೋಲಾ ಟೇಸಲಾ ಎಂದು ಜಗತ್ತಿನಲ್ಲಿ ಪ್ರಸಿದ್ದರಾಗಿರುವರ ಪರಿಚಯ ಮಾಡಿ ಕೊಂಡೆವು. ಡಾ. ಟೇಸಲಾರವರ ಮಹತ್ಕಾರ್ಯಗಳು ಮತ್ತು ಅವರ ಜೀವನವನ್ನು ವರ್ಣಿಸುವಾಗ’ ಅತೀ ಉಚ್ಚ’ ಶಬ್ದದ ಉಪಯೋಗ ಬಹಳ ಸಣ್ಣದಾಗಿದೆಯೆಂದು ಎಣಿಸುವದು. ನನಗೆ ಅದನ್ನು ಸರಿಯಾದ ಅರ್ಥದಲ್ಲಿ ಉಪಯೋಗಿಸಬೇಕಾದರೆ ನಾನು ಅದನ್ನು ’ಹಿಮಾಲಯದಂತಿರುವ ವ್ಯಕ್ತಿಮತ್ವ’ ಹೇಳಬಲ್ಲೆ ಯಾಕೆಂದರೆ ಡಾ. ಟೇಸಲಾರವರು ನಿಜವಾಗಿಯೂ ಅತಿ ದೊಡ್ಡ ಎತ್ತರವನ್ನು ಪಾರು ಮಾಡಿದವರು ಮತ್ತು ಅದಕ್ಕಾಗಿಯೇ ಅವರನ್ನು ವಿಜ್ನಾನದ ದೇವರು’ (ಗಾಡ್ ಆಫ್ ಸಾಯನ್ಸ್) ಎಂದು ಗುರುತಿಸಲಾಗಿತ್ತು. ಇವತ್ತು ನಾವು ಈ ಪ್ರತಿಭಾವಂತನ ಬಗ್ಗೆ ಹೆಚ್ಚು ಪರಿಚಯ ಮಾಡಿಕೊಳ್ಳುವ.

ನನ್ನ ಹಿಂದಿನ ಬ್ಲಾಗ್ ಪೋಸ್ಟ್ ನಲ್ಲಿ ನಾನು ವಿಶೇಷವಾಗಿ ನಿಕೋಲಾ ಟೇಸಲಾರವರ ಜನ್ಮ ಮತ್ತು ಅವರ ಶಿಕ್ಷಣ, ಅವರಿಗೆ ಸಿಕ್ಕಿದ ಮಾನ್ಯತೆ ಮತ್ತು ಅವರ ಕೆಲವು ಪ್ರತಿಷ್ಠಿತ ಶೋಧನೆಗಳ ಬಗ್ಗೆ ಬರೆದಿದ್ದೆ. ಇವತ್ತಿನ ಬ್ಲಾಗ್ ಪೋಸ್ಟ್ ನಲ್ಲಿ , ಅವರ ಬಾಲ್ಯತನದ ಜೀವನ ಪರಿಚಯ, ತಾರುಣ್ಯಕ್ಕೆ ಬರುವ ಮೊದಲಿನ ವರ್ಷಗಳು ಮತ್ತು ಆನಂತರ ತಾರುಣ್ಯದಲ್ಲಿ ಉದಯಕ್ಕೆ ಬರುತ್ತಿರುವ ಸಂಶೋಧಕನ ಕೆಲೈಡೋಸ್ಕೋಪ್ (ವಿವಿಧ ಚಿತ್ರದರ್ಶಕ) ನ್ನು ಕೊಡಲಿದ್ದೇನೆ. ಈ ಕಾಲದಲ್ಲಿಯೇ ಡಾ. ಟೇಸಲಾರವರು ಭಕ್ತಿಯಲ್ಲಿ ಸುಸ್ಥಾಪಿತರಾದರು ಮತ್ತು ಇದೇ ಅವರನ್ನು ನವೀನತೆಯ ಸಂಶೋಧಕನಾಗಿ ಆಕಾರಕ್ಕೆ ತಂದಿತು.
 
ಡಾ. ನಿಕೋಲಾ ಟೇಸಲಾರವರು ಧರ್ಮನಿಷ್ಠ ಕೆಥೊಲಿಕ ಕುಟುಂಬದಲ್ಲಿ ಜನ್ಮಿಸಿದರೆಂದು ನಮಗೆ ಈಗ ತಿಳಿದಿದೆ. ಅವರ ತಂದೆ, ಮಿಲುಟಿನ್ ಟೇಸಲಾರವರು ಪಾದ್ರಿಯಾಗಿದ್ದು ಅವರ ತಾಯಿಯ ತಂದೆಯವರು ಕೂಡ ಪಾದ್ರಿಯಾಗಿದ್ದರು. ಅವರ ತಾಯಿ, ಡ್ಯುಕಾ ಟೇಸಲಾ ಅಶಿಕ್ಷಿತರಾಗಿದ್ದರು. ಅವರಿಗೆ ಯಾವ ಶಿಕ್ಷಣ ಸಿಗದಿದ್ದರೂ ಕೂಡ ಹೊಸ ಪದ್ಧತಿಯಲ್ಲಿ ರುಚಿಯುಳ್ಳ ಗೃಹಿಣಿಯಾಗಿದ್ದರು. ಅವರ ಪ್ರತಿದಿನದ ಹೊಸ ಕಲ್ಪನೆಯಿಂದಾಗಿ ಅವರು ಮೊಟ್ಟೆಯನ್ನು ಒಡೆದು ಏಕಜೀವ  ಮಾಡುವ ಯಂತ್ರ (ಮೆಕ್ಯಾನಿಕಲ್ ಎಗ್ ಬೀಟರ್) ವನ್ನು ತಯಾರಿಸಿದರು. ಹೀಗೆ ತಾರುಣ್ಯದಿಂದಲೇ ನಿಕೋಲಾರವರಿಗೆ ಅವರ ಬೆಳೆಯುತ್ತಿರುವ ವಯಸ್ಸಿನಲ್ಲಿ ವಿಜ್ನಾನ ಮತ್ತು ಆಧ್ಯಾತ್ಮಿಕ (ಭಕ್ತಿ) ದ ಪರಿಚಯವಾಯಿತು. ಅವರ ಜೀವನವನ್ನು ಮುಂದುವರಿಸಲು, ಅವರ ಉತ್ಕೃಷ್ಟವಾದ ಸುಧಾರಿತ ವಿಜ್ನಾನ ಹಾಗು ಅಚಲ ಭಕ್ತಿಯು  ಎರಡು ಸಮಾನ ಶಕ್ತಿಗಳಾಗಿ ಆಧಾರಸ್ತಂಭಗಳಂತಾಗಿದ್ದವು. ಡಾ. ನಿಕೋಲಾ ಟೇಸಲಾರವರು ಅವರ ತಾಯಿಗೆ ಬಹಳ ಹತ್ತಿರವಾಗಿದ್ದು ತನಗೆ ಲಭಿಸಿದ ಛಾಯಾಚಿತ್ರಣದಂತಹ ಸೃತಿಶಕ್ತಿ ಹಾಗು ನಿರ್ಮಾಣಮಾಡುವ ಕೃತಿಯ ಶ್ರೇಯಸ್ಸನ್ನು ಅವರ ತಾಯಿಗೆ ಕೊಟ್ಟಿರುವರು. ನಿಜವಾಗಿಯೇ ಪಾಲಕರೇ ತನ್ನ ಮಕ್ಕಳ ವ್ಯಕ್ತಿಮತ್ವವನ್ನು ಬಾಲ್ಯತನದಿಂದಲೇ ನಿರ್ಮಿಸಿ ಮತ್ತು ರೂಪಿಸುತ್ತಾರೆ ಮತ್ತು ಅವರನ್ನು ಮುಂದಿನ ಪ್ರಯಾಣಕ್ಕಾಗಿ ಸಿದ್ಧಪಡಿಸುತ್ತಾರೆ. ಆದರೆ ಅವರ ತಂದೆ-ತಾಯಿಗಳು ತನ್ನ ಮಗುವನ್ನು ನಿಕೋಲಾ ಟೇಸಲಾನಂತೆ ರೂಪಿಸಬೇಕಾದರೆ ಅವರು ನಿಜವಾಗಿಯೂ ಅವರ ಜೀವನದಲ್ಲಿ ವಿಶಾಲ ಮನಸ್ಸಿನ, ನವೀನತೆಯನ್ನು ಕಲ್ಪಿಸುವ, ವಾದ ಸಾಮರ್ಥ್ಯಯುಕ್ತ, ಭಯರಹಿತ ಹಾಗು ವಿಶೇಷವಾಗಿ ಧರ್ಮನಿಷ್ಠರಾಗಿರಬೇಕು.

ಅವರ ತಾಯಿ-ತಂದೆಯಲ್ಲದೆ ಡಾ. ನಿಕೋಲಾ ಟೇಸಲಾರವರಿಗೆ ಮಿಲ್ಕಾ, ಎಂಜಲೀನಾ, ಮತ್ತು ಮಾರಿಕಾ ಅಂತ ಮೂರು ಅಕ್ಕ-ತಂಗಿಯರು ಹಾಗು ಡೇನ್ ಅಂತ ದೊಡ್ಡ ಅಣ್ಣ ಕುಟುಂಬದಲ್ಲಿದ್ದರು. ದುರ್ದೈವದಿಂದ ಡೇನ್ ಕುದುರೆ ಅಪಘಾತದಲ್ಲಿ ಅಕಾಲಿಕ ಹಾಗು ದು;ಖದ ಮರಣ ಹೊಂದಿದ್ದನು.ಈ ಅಪಘಾತದಲ್ಲಿ ನಿಕೋಲಾರವರ ಕೈ ಇದೆಯೆಂದು ಟೇಸಲಾರವರ ಪ್ರತಿರೋಧಿಗಳು ಕಥೆಮಾಡಿ ಹೇಳತೊಡಗಿದರು. ಇದು ಕೇವಲ ಡಾ. ನಿಕೋಲಾ ಟೇಸಲಾರವರನ್ನು ದೂಷಿಸಲೆಂದು ಅಸತ್ಯವನ್ನು ಪ್ರಚಾರಮಾಡಿದ್ದಾಗಿತ್ತು.

ನಿಕೋಲಾರವರ ಜನ್ಮಭೂಮಿಯಾದ ಸ್ಮಿಲ್ಜನ್ ನಲ್ಲಿ ಜರ್ಮನ್, ಗಣಿತಶಾಸ್ತ್ರ ಮತ್ತು ಧರ್ಮವನ್ನು ಶಿಶುವಿಹಾರ ಹಾಗು ಪ್ರಾಥಮಿಕ ಶಾಲೆಗಳಲ್ಲಿ ಕಲಿತ ನಂತರ ನಿಕೋಲಾರವರ ತಂದೆಯು ಪಾದ್ರಿಯ ಕೆಲಸ ತೆಗೆದುಕೊಂಡ ಕಾರಣಕ್ಕಾಗಿ ಟೇಸಲಾ ಕುಟುಂಬವು ಗೊಸ್ಪಿಕ್ ಗೆ ಸ್ಥಲಾಂತರ ಮಾಡಿತು. ನಿಕೋಲಾರವರ ಶಾಲೆಯ ಶಿಕ್ಷಣ ಮುಗಿದಂತೆ ಟೇಸಲಾರವರು ೧೮೭೦ ರಲ್ಲಿ ಕಾರ್ವೋಲಾಕ್ ಗೆ ಸ್ಥಲಾಂತರ ಮಾಡಿಕೊಂಡರು ಇಲ್ಲಿ ನಿಕೋಲಾರವರು ತನ್ನ ಉಚ್ಚ ಶಿಕ್ಷಣವನ್ನು ಮುಂದುವರಿಸಿದರು. ಇಲ್ಲಿ ನಿಕೋಲಾರವರು ಪೂರ್ಣಾಂಕದ ನಿಶ್ಚಿತರೀತಿಯ ಪ್ರಶ್ನೆಗಳ ಒಗಟುಗಳನ್ನು ಕಾಗದದ ಮೇಲೆ ಬಿಡಿಸದೆ ತನ್ನ ಮನಸ್ಸಿಲ್ಲಿ ಬಿಡಿಸುತ್ತಿದ್ದರು. ಕೇವಲ ಮನಸ್ಸಿನಲ್ಲಿ ...ಇದು ನಂಬಲು ಅಸಾಧ್ಯವಾದದ್ದು ಮತ್ತು ಶಿಕ್ಷಕರು ಆರಂಭದಲ್ಲಿ ನಿಕೋಲಾರವರು ನಮಗೆ ಮೋಸ ಮಾಡುತ್ತಿದ್ದಾನೆಂದು ತಿಳಿದಿದ್ದರು. ಆದರೆ ಅದು ನಿಜವಾಗಿರಲಿಲ್ಲ. ಯಾಕೆಂದರೆ ಇದರ ನಂತರ ನಿಕೋಲಾರವರು ತನ್ನ ಪದವಿಯ ಶಿಕ್ಷಣವನ್ನು ನಾಲ್ಕು ವರ್ಷ ತೆಗೆದುಕೊಳ್ಳದೆ ಕೇವಲ ಮೂರು ವರ್ಷಗಳಲ್ಲಿ ಮುಗಿಸಿ ತನ್ನ ಅಸಾಧಾರಣ ಬುದ್ಧಿಶಕ್ತಿಯನ್ನು ಸಿದ್ದಪಡಿಸಿದರು. ಮತ್ತು ೧೮೭೩ ರಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅವರು ಸ್ಮಿಲ್ಜನ್ ಗೆ ಹಿಂತಿರುಗಿ ಬಂದರು ಆದರೆ ಪ್ರಾಣಾಂತಕವಾದ ಕೊಲೇರಾ ರೋಗದಿಂದ ಪೀಡಿತರಾದರು ಇದರಿಂದಲು ಅವರು ಹೆಚ್ಚು ಬಲಶಾಲಿಯಾಗಿ ಹೊರಬಂದರು.
 
೧೮೭೪ ರಲ್ಲಿ ಡಾ. ನಿಕೋಲಾ ಟೇಸಲಾರವರು ಪರ್ವತೀಯ ಗ್ರಾಮಾಂತರ ಪ್ರದೇಶಗಳ ಬಗ್ಗೆ ಪರಿಚಯ ಮಾಡಿ, ಅರ್ಥಮಾಡಿ, ದೇವರು ಮತ್ತು ನಿಸರ್ಗ ಹಾಗು ಅದರ ಕಾರ್ಯಪದ್ಧತಿಗಳನ್ನು ತಿಳಿಯಲೆಂದು ಅಲ್ಲಿ ಸಂಚಾರಿಸಿದರು.ಇದು ಟೇಸಲಾರವರನ್ನು ಮಾನಸಿಕವಾಗಿ ಅಲ್ಲದೆ ಶಾರೀರಿಕ ದೃಷ್ಟಿಯಲ್ಲಿಯು ಹೆಚ್ಚು ಬಲಶಾಲಿ ಮಾಡಿ ನೈಸರ್ಗಿಕ ಕಾರ್ಯ ಪದ್ಧತಿಯ ಬಗ್ಗೆಯೂ ಪರಿಚಿತರಾದರು. ಇದೇ ಮುಂದೆ ಅವರಿಗೆ ಅವರ ಸಂಶೋಧನೆಗಳಿಗಾಗಿ ಮೂಲ ಕಾರಣವಾಯಿತು.

೧೮೭೫ ರಿಂದ ಡಾ. ನಿಕೋಲಾ ಟೇಸಲಾರವರು ಗ್ರೇಝಿನ್ ಆಸ್ಟ್ರಿಯನ್ ಪೊಲಿಟೆಕ್ನಕ್ ನಲ್ಲಿ ತನ್ನನ್ನು ಸೇರಿಸಿಕೊಂಡರು. ಇಲ್ಲಿಯ ಅವರ ವಾಸ್ತವ್ಯ ವಿಶೇಷವಾಗಿ ಗಮನಿಸುವಂತಿದೆ. ಮೊದಲು ಅವರು ವಿದ್ಯಾರ್ಥಿವೇತನವನ್ನು ಪಡೆದು ದಾಖಲೆ ತೆಗೆದುಕೊಂಡರು. ಜ್ನಾನ ಪಡೆಯಲು ತವಕಗೊಂಡ ನಿಕೋಲಾರವರು ಯಾವುದೇ ಲೆಕ್ಚರನ್ನು ತಪ್ಪಿಸಲಿಲ್ಲ ಆದ್ದರಿಂದ ಅವರು ಎಲ್ಲರಿಗಿಂತ ಉಚ್ಚ ಕ್ರಮಾಂಕ ಪಡೆದರು, ವಾಸ್ತವ್ಯದಲ್ಲಿ ಆವಶ್ಯಕತೆಯಿಂದ ಎರಡು ಪಾಲರಷ್ಟು ಹೆಚ್ಚಾಗಿರುವ ಒಂಬತ್ತು ಪರೀಕ್ಷೆಗಳಲ್ಲಿ ಉತ್ತೀರ್ಣರಾದರು ಮತ್ತು ಸರ್ಬಿಯನ್ ಕಲ್ಚರ್ ಕ್ಲಬ್ ನ್ನು ಕೂಡ ಆರಂಭಿಸಿದರು. ಅಂತ್ಯದಲ್ಲಿ ಪೊಲಿಟೆಕ್ನಿಕಿನ ಡೀನ್ (ವೈದ್ಯಕೀಯ ಕಾಲೇಜಿನ ಮುಖ್ಯಸ್ಥ) ಗುಣವಿವೇಚನೆಯ ಪತ್ರವನ್ನು ನಿಕೋಲಾರವರ ತಂದೆಗೆ ಬರೆದು ನಿಕೋಲಾರವರನ್ನು ಪ್ರಶಂಸಿದರು ಮತ್ತು ನಿಕೋಲಾರವರನ್ನು ’ಸ್ಟಾರ್ ಆಫ್ ಫರ್ಸ್ಟ್ ರೆಂಕ್ ’ ಕೊಡಲು ನಿರ್ಣಯಿಸಿದ್ದನ್ನು ತಿಳಿಸಿದರು. ಇಲ್ಲಿಂದಲೇ ಮುಂದೆ ಡಾ. ನಿಕೋಲಾ ಟೇಸಲಾರವರು ತನ್ನ ಕಠೋರ ಪರಿಶ್ರಮದ ವಿವರಪಟ್ಟಿಯನ್ನು ಆರಂಭಿಸಿದರು, ಬೆಳಿಗ್ಗೆ ೩.೦೦ ರಿಂದ ರಾತ್ರಿಯ ೧೧.೦೦ ಗಂಟೆಯತನಕ ಅಂದರೆ ದಿವಸದಲ್ಲಿ ೨೦ ಗಂಟೆಯ ಕಾಲ ಕೆಲಸ ಮಾಡತೊಡಗಿದರು, ಅದು ಕೂಡ ಯಾವುದೇ  ಹಬ್ಬ ಅಥವಾ ರಜೆಯನ್ನು ತೆಗೆದುಕೊಳ್ಳದೆ. ೧೮೭೮ ರ ಡಿಸೆಂಬರ್ ತಿಂಗಳಿನಲ್ಲಿ ನಿಕೋಲಾ ಗ್ರೇಝ್ ನ್ನು ಬಿಟ್ಟು ಪುನ: ಗೊಸ್ಪಿಕ್ ಗೆ ಬಂದು ಅವರು ಮಾಧ್ಯಮಿಕ ಶಾಲೆಯಲ್ಲಿ ಕಲಿಸ ತೊಡಗಿದರು.

೧೮೮೦ ರಲ್ಲಿ ಪ್ರೇಗಿನಲ್ಲಿದ್ದ ಮೇಲೆ ಡಾ. ನಿಕೋಲಾ ಟೇಸಲಾರವರು ಬುಡಾಪೇಸ್ಟ್ ಗೆ ಬಂದು ಬುಡಾಪೇಸ್ಟ್ ನಲ್ಲಿ ಫೆರೆನ್ ಪುಸ್ಕಸ್ ದಲ್ಲಿ ಕಟ್ಟಲ್ಪಡುತ್ತಿರುವ ಟೆಲಿಫೋನ್ ಎಕ್ಸ್ ಚೆಂಜ್ ನಲ್ಲಿ ಕೆಲಸ ಮಾಡತೊಡಗಿದರು. ಹೀಗೆ ಟೇಸಲಾರವರು ಸೆಂಟ್ರಲ್ ಟೆಲೆಗ್ರಾಫ್ ಕಾರ್ಯಾಲಯದಲ್ಲಿ ಕರಡುಪ್ರತಿಗಳನ್ನು ತಯಾರಿಸುವ ಕೆಲಸ ತೆಗೆದುಕೊಂಡರು ಇಲ್ಲಿಂದ ಸ್ವಲ್ಪ ತಿಂಗಳಿನಲ್ಲಿ ಬುಡಾಪೇಸ್ಟಿನ ಟೆಲಿಫೋನ್ ಎಕ್ಶ್ ಚೆಂಜ್ ಕಾರ್ಯರತವಾಯಿತು ಮತ್ತು ಟೇಸಲಾರವರನ್ನು ಮುಖ್ಯವಾಗಿ ಚೀಫ್ ಎಲೆಕ್ಟ್ರಿಶೀಯನ್ ನ್ನಾಗಿ ಮಾಡಿದರು. ಇಲ್ಲಿರುವಾಗ ಆವರು ಸೆಂಟ್ರಲ್ ಸ್ಟೇಶನ್ ಎಕ್ವಿಪ್ ಮೆಂಟ್ ನಲ್ಲಿ ಅನೇಕ ಪ್ರಕಾರದ ಬದಲಾವಣೆಗಳನ್ನು ಮಾಡಿದರು. ಇಲ್ಲಿರುವಾಗಲೇ ಡಾ. ಟೇಸಲಾರವರು ತಮ್ಮ ಪ್ರಥಮ ಸಂಶೋಧನೆಯನ್ನು ಮಾಡಿದರು. ಡಾ. ಟೇಸಲಾರವರು ಟೆಲಿಫೋನ್ ರಿಪೀಟರ್ ಮತ್ತು ಎಂಪ್ಲಿಫೈರ್ ನ್ನು ಪೂರ್ಣಗೊಳಿಸಿದರು. ಟೇಸಲಾರವರು ತಾನು ಮಾಡಿದ ಈ ಸಂಶೋಧನೆಯ ಶ್ರೇಯಸ್ಸನ್ನು ಕೂಡ ಜನಕಲ್ಯಾಣಕ್ಕಾಗಿ ಸಮರ್ಪಿತ ಮಾಡಿದರು.

ಇದರ ನಂತರ ಟೇಸಲಾರವರು ಫ್ರಾಂಸ್ ನಲ್ಲಿರುವ ಪ್ಯಾರೀಸಿನಲ್ಲಿ ಕೊಂಟಿನೆಂಟಲ್ ಎಡಿಸನ್ ಕಂಪನಿಯಲ್ಲಿ ಇಂಜಿನಿಯರ್ ಆಗಿ, ವಿದ್ಯುತಚ್ಛಕ್ತಿಯ ಸಾಧನಸಲಕರಣೆಗಲ್ಲಿ ಶಕ್ಯವಾದ ಸುಧಾರಣೆ ಮಾಡುವ ಕೆಲಸಕ್ಕೆ ಸೇರಿದರು. ಇಲ್ಲಿ ಕೂಡ ಟೇಸಲಾರವರು ಫಲೋತ್ಪಾದಕ ಕಾರ್ಯ ಮಾಡಿ ತೋರಿಸಿದರು.ಇದರ ಪರಿಣಾಮವಾಗಿ ಚಾರ್ಲ್ಸ್ ಬಾಚುಲರ್ ಯಾರಿಗೆ ನಿಕೋಲಾ ಟೇಸಲಾರವರು ವರದಿಕೊಡುತ್ತಿದ್ದರು, ಅವರು ಟೇಸಲಾರವರನ್ನು ನಿವ್ ಯಾರ್ಕ್, ಯುನಾಯಿಟೇಡ್ ಸ್ಟೇಸ್ಟ್ ಗೆ ಥೋಮಸ್ ಆಲ್ವಾ ಎಡಿಸನ್ ರನ್ನು ನೇರವಾಗಿ ಭೇಟಿ ಮಾಡಲು ಕಳುಹಿಸಿದರು. ’ನನಗೆ ಎರಡು ಸರ್ವೋತ್ತಮ ವ್ಯಕ್ತಿಗಳ ಪರಿಚಯವಿದೆ; ಅದರಲ್ಲಿ ಒಬ್ಬರು ನೀವು ಮತ್ತೊಬ್ಬ ಈ ತರುಣನು " ಎಂದು ಅವರನ್ನು ಕಳುಹಿಸಿದಾಗ ಬಾಚುಲರರು ಎಡಿಸನ್ ಗೆ ವಿಶೇಷ ಶಿಫಾರಸಿನ ಪತ್ರ ಬರೆದು ಕೊಟ್ಟರು. ಹೀಗೆ ೧೮೮೪ ರಲ್ಲಿ ಕೇವಲ ನಾಲ್ಕು ಸೆಂಟ್ಸ್ ನ್ನು ಜೇಬಿನಲ್ಲಿಟ್ಟು ಡಾ. ನಿಕೋಲಾ ಟೇಸಲಾರವರು ಯುನಾಯಿಟೇಡ್ ಸ್ಟೇಸ್ಟ್ ಆಫ್ ಅಮೇರಿಕಾದ ಭೂಮಿಯ ಮೇಲೆ ಕಾಲಿಟ್ಟರು. ಇದೇ ಭೂಮಿಯಲ್ಲಿ ಅವರು ೭೦೦ ಕ್ಕಿಂತ ಮೇಲೆ ಮೀರಿದ ಹೊಸ ದಾಖಲೆಗಳನ್ನು ಮುಂದಿನ ಅರವತ್ತು ವರ್ಷಗಳಲ್ಲಿ ತನ್ನ ಹೆಸರಿನಲ್ಲಿ ನಮೂದು ಮಾಡಿದರು.

ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ನನ್ನು ಪ್ರತ್ಯಕ್ಷದಲ್ಲಿ ಭೇಟಿಯಾಗಲು ಬಹಳ ಉತ್ತೇಜಿತರಾಗಿದ್ದರು ಯಾಕೆಂದರೆ ಅಷ್ಟರವರೆಗೆ ಟೇಸಲಾರವರು ಎಡಿಸನ್ ನನ್ನು ಪೂಜಿಸುತ್ತಿದ್ದರು. ಆದರೆ ತೀವ್ರದಲ್ಲಿಯೇ ಅದು ಹಾಗೆ ಆಗಲಿಕ್ಕಿಲ್ಲ...... (ಮುಂದುವರಿಯಲಿದೆ)

|| ಹರಿ ಓಂ || ಶ್ರೀರಾಮ || ಅಂಬಜ್ನ ||

Wednesday, 23 July 2014

ಡಾ. ನಿಕೋಲಾ ಟೇಸಲಾ - ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಅವರ ಪೂರ್ವ ಪರಿಚಯ

೨೭ ಮಾರ್ಚ್ ೨೦೧೪ ರ, ಗುರುವಾರದಂದು, ಸದ್ಗುರು ಅನಿರುದ್ಧಾ ಬಾಪೂರವರು ನಮಗೆ ಡಾ.ನಿಕೋಲಾ ಟೇಸಲಾರವರ ಬಗ್ಗೆ ಪರಿಚಯ ಮಾಡಿಕೊಟ್ಟರು. ಡಾ. ಟೇಸಲಾರವರನ್ನು  ಜಗತ್ತಿನಲ್ಲಿ ಎಂದಿಗೂ ಕಾಣ ಸಿಗದ ಬಹಳ ಪ್ರಖ್ಯಾತ ಶಾಸ್ತ್ರಜ್ನರೆಂದು ತಿಳಿಯಲಾಗುತ್ತದೆ. ಈ ಪೃಥ್ವಿಯ ಮೇಲೆ ಪ್ರತಿಯೊಬ್ಬ ಮಾನವನು  ತನ್ನ ನಿತ್ಯದ ಜೀವನದಲ್ಲಿ ಅವರ ಸಂಶೋಧನೆಗಳನ್ನೇ ಅಂಗೀಕರಿಸಿದ್ದನ್ನು ಮರೆತು ಹೋಗಿದ್ದಾರೆ. ಆದ್ದರಿಂದ ಇವತ್ತಿನಿಂದ ನಾನು ಡಾ.ನಿಕೋಲಾ ಟೇಸಲಾರವರ ಪವಿತ್ರ ವ್ಯಕ್ತಿಮತ್ವದ ಹಾಗು ಸಮಯದ ಮೊದಲೇ ಮಾಡಿದ ಆವಿಷ್ಕಾರಗಳ ಬಗ್ಗೆ ಪುನ: ಗಮನ ಸೆಳೆಯಲು ಸರದಿಯನ್ನು ಪ್ರಾರಂಭಿಸುತ್ತಿದ್ದೇನೆ.

ಡಾ. ನಿಕೋಲಾ ಟೇಸಲಾರವರು ಸರ್ಬಿಯಾದಲ್ಲಿ ಜನ್ಮಿಸಿದ  ಅಮೇರಿಕದವರಾಗಿದ್ದರು. ಅವರನ್ನು ಸಹಸ್ರವಾರ್ಷಿಕ ಕಾಲದ ಶಾಸ್ತ್ರಜ್ನರು (ದ ಗ್ರೇಟೆಸ್ಟ್ ಸೈಂಟಿಸ್ಟ್ ಆಫ್ ದ ಮಿಲೇನಿಯಮ್) ಎಂದು ಕರೆದದ್ದು ಉಚಿತವಾಗಿದ್ದರೂ ನಿಜವಾಗಿಯು ಅವರು ಪ್ರಖ್ಯಾತ ಸಂಶೋಧಕರೇ, ಭವಿಷ್ಯತ್ಕಾಲದ ಸ್ಥಿತಿಯನ್ನು ಅರಿತುಕೊಂಡವರು ಮತ್ತು ಭ್ರಾಮಕ ಭೌತವಿಜ್ನಾನಿಯೆಂದು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಪ್ರಸಿದ್ಧಿ ಪಡೆದವರಾಗಿದ್ದು ಪರ್ಯಾಯ ವಿದ್ಯುತ್ ಪ್ರವಾಹ (ಆಲ್ಟರ್ ನೇಟಿಂಗ್ ಕರಂಟ್), ಮುಕ್ತ ಊರ್ಜೆ(ಫ್ರೀ ಎನರ್ಜಿ), ತಂತಿ ವಿರಹಿತ ಯಂತ್ರಶಕ್ತಿಯ ಸಂಚಾರಣೆ (ವಾಯರ್ ಲೆಸ್ ಪಾವರ್ ಟ್ರಾಂಸ್ ಮಿಶನ್) ಇಂತಹ ಸಾವಿರಾರು ಸಂಶೋಧನೆಗಳನ್ನು ಕಂಡು ಹಿಡಿದವುಗಳಲ್ಲಿ ಇವುಗಳಾಗಿವೆ.

ಡಾ. ನಿಕೋಲಾ ಟೇಸಲಾರವರು ಆಸ್ಟ್ರೀಯ ಸಾಮ್ರಾಜ್ಯ (ಈಗಿನ ಕ್ರೋಶಿಯಾ) ದಲ್ಲಿ ೧೦ನೇ ಜುಲ್ಯ ತಿಂಗಳಿನ ಉಗ್ರ ಬೇಸಿಗೆಕಾಲದ ಮಿಂಚಿನ ಬಿರುಗಾಳಿಯಿರುವಾಗ ಮಧ್ಯರಾತ್ರಿಯ ಸಮಯದಲ್ಲಿ ಕೆಥೊಲಿಕ ಧರ್ಮನಿಷ್ಠ ಕುಟುಂಬದಲ್ಲಿ ಜನ್ಮಿಸಿದರು. ಅವರ ತಾಯಿಗೆ ನಿಕೋಲಾರವರನ್ನು ಹೆತ್ತುವಾಗ ಸಹಾಯ ಮಾಡಿದ ಪ್ರಸವಕಾರಿಣಿಯು ಅವರನ್ನು ಬಿರುಗಾಳಿಯ ಮಗು (ದ ಚೈಲ್ಡ್ ಆಫ್ ಸ್ಟೊರ್ಮ್) ಎಂದು ಭವಿಷ್ಯನುಡಿ ಹೇಳಿದ್ದಳು ಮತ್ತು ಅವಳು ಹೇಳಿದಂತೆ ನಿಜವಾಗಿ ಅದು ಸತ್ಯದಲ್ಲಿ ಪರಿವರ್ತಿತವಾಯಿತು.

ವಿದ್ಯುತಚ್ಛಕ್ತಿ  ಮತ್ತು ಯಂತ್ರವಿದ್ಯೆಯನ್ನು ಸಂಗ್ರಹಿಸಿದ ಡಾ. ನಿಕೋಲಾ ಟೇಸಲಾರವರು ಗ್ರೇಝಾದಲ್ಲಿ ಆಸ್ಟ್ರೀಯನ್ ಪೊಲಿಟೆಕ್ನಿಕ್ ಸ್ಕೂಲಿನಲ್ಲಿ ಮಿಲಿಟರಿ ಬೊರ್ಡರ್ ಸ್ಕೊಲರ್ ಶಿಪ್ ನ್ನು ಪಡೆದು ತನ್ನ ದಾಖಲೆ ಮಾಡಿಕೊಂಡರು. ಮುಂದೆ ಫಿಲೋಸಫಿ (ತತ್ವಶಾಸ್ತ್ರ) ಕ್ಕಾಗಿ ಡಾ.ಟೇಸಲಾರವರು ಪ್ರೇಗಿನ ಮಹಾವಿದ್ಯಾಲಯದಲ್ಲಿ ಕಲಿಯಲು ಹೋದರು. ಯೇಲ್ ಮಹಾವಿದ್ಯಾಲಯದ ಹಾಗು ಕೊಲಂಬಿಯಾ ಮಹಾವಿದ್ಯಾಲಯದ ಮೂಲಕ ಡಾ. ಟೇಸಲಾ ಅವರಿಗೆ ಗೌರವಾರ್ಹ ಡಾಕ್ಟರೇಟಿನಿಂದ ಸನ್ಮಾನಿಸಲಾಯಿತು. ಡಾ.ಟೇಸಲಾರವರಿಗೆ ೧೮ ಭಾಷೆಗಳು ಗೊತ್ತಿದ್ದು ಅವರ ೧೨ ಭಾಷೆಗಳಲ್ಲಿ ಪ್ರಭುತ್ವವಿದ್ದು ಅವುಗಳಲ್ಲಿ ಅವರ ಮಾತೃಭಾಷೆ ಸರ್ಬೊ-ಕ್ರೊಅಟ್  ಮತ್ತು ಲ್ಯಾಟಿನ್, ಇಟಾಲಿಯನ್, ಫ್ರೆಂಚ್, ಜರ್ಮನ್ ,ಮತ್ತು ಇಂಗ್ಲಿಷ್ ಭಾಷೆಗಳು ಕೂಡಿವೆ.

ಡಾ. ನಿಕೋಲಾ ಟೇಸಲಾರವರ ಹೆಸರಿನಲ್ಲಿ ೭೦೦ಕ್ಕಿಂತ ಹೆಚ್ಚು ಪ್ರಕಾರಗಳು ಗಣ್ಯತೆ ಪಡೆದದ್ದೇ ಒಂದು ಅಘಟಿತ ದಾಖಲೆಯಾಗಿದೆ. ಹಲವಾರು ಅಸಂಖ್ಯಾತ ಸಂಶೋಧನೆಗಳ ಪಟ್ಟಿಗಳಲ್ಲಿ ಡಾ. ಟೇಸಲಾರವರು ಆಲ್ಟರ್ ನೇಟಿಂಗ್ ಕರಂಟ್, ಪೀಸ್ ರೆ, ಹ್ಯುಮನಾಯಿಡ್ ರೊಬೋಟ್ಸ್, ಟೆಲಿವಿಜನ್, ರಿಮೋಟ್ ಕಂಟ್ರೋಲ್, ಎಕ್ಸ್-ರೇಜ್, ವಾಯರ್ ಲೆಸ್ ಪಾವರ್ ಟ್ರಾನ್ಸ್ ಮಿಶನ್, ಫ್ರೀ ಎನರ್ಜಿ ಫ್ರಮ್ ಕೊಸ್ಮಿಕ್ ರೇಜ್, ಇಂಡಕ್ಷನ್ ಮೋಟರ್, ರೇಡಿಯೋ, ರೊಟೇಟಿಂಗ್ ಮ್ಯಾಗ್ನೇಟಿಕ್ ಫೀಲ್ಡ್ ಪ್ರಿನ್ಸಿಪಲ್, ಟೆಲಿಫೋನ್ ರಿಪೀಟರ್, ಟೇಸಲಾ ಕಾಯಿಲ್ ಟ್ರಾನ್ಸ್ ಫೊರ್ಮರ್, ವಾಯರ್ ಲೆಸ್ ಕಮ್ಯುನಿಕೇಶನ್, ಟೆಲೆಪೋರ್ಟೇಶನ್ , ಸ್ಪೇಸ್ ಟೈಮ್ ಬೆಂಡಿಂಗ್, ಟೈಮ್ ಟ್ರಾವೆಲ್, ಇತ್ಯಾದಿಗಳನ್ನು ಸಂಶೋಧಿಸಿದ ಅಗ್ರಗಾಮಿಯಾಗಿರುವರು. ಈ ಪಟ್ಟಿಯು ಮುಗಿಯುವಂತಿಲ್ಲ.

ಡಾ. ನಿಕೋಲಾ ಟೇಸಲಾರವರನ್ನು ಅನೇಕ ಬಹುಮಾನಗಳಿಂದ ಪ್ರಶಂಸಿಸಲಾಗಿ ಮತ್ತು ನವೀನತೆಯಿಂದ ಕೂಡಿದ ಹಾಗೆಯೇ ವಿಚಾರ ಮಾಡಲು ಅಸಾಧ್ಯವಾದ ಸಂಶೋಧನೆಗಳಿಗಾಗಿ ಮನ್ನಣಿಸಲಾಗಿದೆ. ಇದರಲ್ಲಿ  ಸರ್ಬಿಯಾದ ಮಿಲನಿನ ರಾಜ - ೧ ರವರ ಮೂಲಕ ೧೮೮೩ ರಲ್ಲಿ ’ ದ ಆರ್ಡರ್ ಆಫ್ ಸೇಂಟ್ ಸಾವಾ’ ಎಂಬ ಪದವಿಯು ಈ ಪಟ್ಟಿಯಲ್ಲಿ ಸೇರಿದೆ. ಫ್ರಾಂಕಲಿನ್ ಸಂಸ್ಥೆಯ ಮೂಲಕ  ’ದ ಎಲಿಯೆಟ್ ಕ್ರೆಸನ್ ಮೆಡಲ್’ಎಂಬ ಎಲ್ಲಕ್ಕಿಂತ ಉನ್ನತವಾದ ಬಹುಮಾನ , ಮಾನವನ ’ಸುಖ-ಸಾಧನೆ, ಸುಸ್ಥಿತಿ ಮತ್ತು ಆನಂದ ’ವನ್ನು ಪಡೆಯು ಸಾಧನೆಗಳಿಗೆ ಸಹಾಯವಾಗುವ ಸಂಶೋಧನೆಗಳಿಗಾಗಿ ’ದ ಜೋನ್ ಎವಾರ್ಡ್ ’ಕೊಡಲಾಯಿತು. ಮತ್ತೀತರ ಬಹುಮಾನಗಳಲ್ಲಿ ’ ದ ಆರ್ಡರ್ ಆಫ್ ಪ್ರಿಂಸ್ ಡ್ಯಾನಿಲೊ ’ವನ್ನು ಮೊಂಟೆನೆಗ್ರೊದ ನಿಕೋಲಾ ರಾಜನಿಂದ,  ಯು ಎಸ್ ನಲ್ಲಿ ಬಹುಮೂಲ್ಯ ಪರಿಗಣಿಸಲಾದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾರಿತೋಷಕ ಎಡಿಸನ್ ಮೆಡಲ್ ನ್ನು ೧೯೧೭ ರಲ್ಲಿ ಅವರಿಗೆ ಕೊಡಲಾಗಿದೆ, ಇತ್ಯಾದಿಗಳು.

ಇಂಟರ್ ನೇಶನಲ್ ಯುನಿಟ್ ಆಫ್ ಮ್ಯಾಗ್ನೇಟಿಕ್ ಫ್ಲಕ್ಸ್ ಡೆಂಸಿಟಿಯನ್ನು ಡಾ. ನಿಕೋಲಾ ಟೇಸಲಾರವರ ಹೆಸರಿಂದ ಅಂದರೆ ’ಟೇಸಲಾ ಎಂದು ಕರೆಯಲಾಗುತ್ತಿದೆ   ೧೯೭೫ ರಲ್ಲಿ ಡಾ. ಟೇಸಲಾರವರನ್ನು ಸಂಶೋಧಕರ ಅಂದರೆ ಇನ್ ವೆಂಟರ್ಸ್ ಹಾಲ್ ಆಫ್ ಫೇಮ್ ದಲ್ಲಿ ಸೇರಿಸಲಾಯಿತು. ಯುಎಸ್ ನ ಅಂಚೆ ವಿಭಾಗದವರು ಡಾ.ನಿಕೋಲಾ ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೯೮೩ ರಲ್ಲಿ ಅಂಚೆ ಚೀಟಿ (ಸ್ಟಾಂಪ್) ಯನ್ನು ಜಾರಿಗೆ ತಂದು ಗೌರವಿಸಿದರು. ’ದ ನಿಕೋಲಾ ಟೇಸಲಾ ಎವಾರ್ಡ್’ ನ್ನು ಬಹಳ ಕೀರ್ತಿಯುಕ್ತ ಮನ್ನಣೆ ಪಡೆದ ಬಹುಮಾನವೆಂದು ತಿಳಿಯಲಾಗಿ ಅದನ್ನು ಇಂಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ಮೂಲಕ ೧೯೭೬ ರಿಂದ ಪ್ರತಿವರ್ಷ ಕೊಡಲಾಗುತ್ತಿದೆ. ಇದಲ್ಲದೆ ಡಾ. ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೦ ಜುಲ್ಯದಂದು ಯುನಾಯ್ ಟೇಡ್ ಸ್ಟೇಸ್ಟ್ಸ್ ನಲ್ಲಿ  ’ನಿಕೋಲಾ ಟೇಸಲಾ ಡೇ’ ಎಂದು ಪ್ರತಿ ವರ್ಷ ಆಚರಿಸಲಾಗುತ್ತದೆ.

ಡಾ. ನಿಕೋಲಾ ಟೇಸಲಾರವರ ಎಲ್ಲಾ ಸಂಶೋಧನೆಗಳು ಬಹಳವೇ ಪ್ರಗತಿಶೀಲವಾಗಿದ್ದು ಅದು ಸಮಯದ ಮೊದಲೇ ಶೋಧಿಸಲ್ಪಟ್ಟು ಅವರು ಎರಡನೇ ಉದ್ಯೋಗದ ಕ್ರಾಂತಿಗೆ  ಜನ್ಮ ಕೊಟ್ಟಿದಂತಿದೆ ಮತ್ತು  ಅವರಿಂದಾಗಿ ’ವಿದ್ಯುಚ್ಛಕ್ತಿಯ ಕಾಲ’ (ದ ಎಲೆಕ್ಟ್ರಿಕಲ್ ಎರಾ) ವು ನಿಜವಾಗಿಯೂ ವಿಶೇಷಧಿಕಾರ ಪಡೆಯಿತು. ಸಂಕ್ಷಿಪ್ತದಲ್ಲಿ, ಡಾ. ಟೇಸಲಾರವರ ಸಂಶೋಧನೆಗಳು ೨೦ ನೇ ಶತಮಾನದಲ್ಲದೇ ೨೧ ನೇಯ ಶತಮಾನದ ತಳಹದಿ ಹಾಕಿದಂತಾಯಿತು. ಡಾ. ಟೇಸಲಾರವರ  ಸಂಶೋಧನೆಗಳು ಸಮಯದ ಮೊದಲೇ  ಶೋಧವಾದುದರಿಂದ ಪೃಥ್ವಿ ಮೇಲಿರುವ ಪ್ರತಿಯೊಂದು ದೊಡ್ಡ ರಾಷ್ಟ್ರಗಳು ಈ ಅಸಾಧಾರಣ ಪ್ರಾವಿಣ್ಯತೆಯನ್ನು  ಪಡೆದವನ ಗತಿವಿಧಿಗಳನ್ನು ವೀಕ್ಷಿಸಲು ತನ್ನ ಗೂಢಚಾರರನ್ನು ನೇಮಿಸಿದರು. ಡಾ. ನಿಕೋಲಾ ಟೇಸಲಾರವರು ಶಾಸ್ತ್ರಜ್ನರು, ಹೊಸ ಪದ್ಧತಿಯ ಸಂಶೋಧಕರು, ಒಳ್ಳೆಯ ಮತ್ತು ಅಪರೂಪ ವ್ಯಕ್ತಿಮತ್ವ ಪಡೆದ ಮಾನವ.

ಅವರು ವಿಜ್ನಾನದಲ್ಲಿ ದೇವರ ಅದ್ಭುತತೆಯನ್ನು ಕಂಡರು. ಅವರ ಪ್ರತಿಯೊಂದು ಸಂಶೋಧನೆಗಳಲ್ಲಿ ವಿಜ್ನಾನ ಮತ್ತು ಆಧ್ಯಾತ್ಮವು ಒಂದೇ ನಾಣ್ಯದ ಎರಡು ಬದಿಗಳಾಗಿ ಅವು ಒಬ್ಬೊರಿಗೊಬ್ಬರು ಪ್ರಶಂಸಾಪೂರ್ಣವಾಗಿರುವುದಾಗಿ  ಮತ್ತು ಅದು ’ಪರಮಶ್ರೇಷ್ಟ ಬಲ’ದಿಂದ ಅಂದರೆ ದೇವರಿಂದ ಆಳಿಸಲಾಗಿದೆ ಎಂದು ಸಾಧಿಸಿದರು. ವಿಜ್ನಾನದ ಪರಿಶೋಧಕ ಮತ್ತು ಅಧ್ಯಾತ್ಮಿಕ ಹಾಗು ದೂರದೃಷ್ಟಿಯನ್ನು ಪಡೆದ ಇಂತಹ ಪ್ರತಿಭಾಶಾಲಿಯನ್ನು ಪುನ: ಪಡೆಯಲು ಅಸಾಧ್ಯ. ಅವರ ಎಲ್ಲಾ ಸಂಶೋಧನೆಗಳಿಂದಾಗಿ ಮತ್ತು ಹೊಸ ಪದ್ಧತಿಯ ಸಂಶೋಧಕರೆಂದು ಅವರನ್ನು ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಎಂದು ಸನ್ಮಾನದಿಂದ ಆದರಿಸಲಾಗುತ್ತಿದೆ.

|| ಹರಿ ಓಂ || ಶ್ರೀರಾಮ || ಅಂಬಜ್ನ ||


ಶಾಸ್ತ್ರಜ್ನ ನಿಕೋಲಾ ಟೇಸಲಾರವರ (Scientist Nikola Tesla) ಬಗ್ಗೆ ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನದಲ್ಲಿ ಹೇಳಿದ ಮಾಹಿತಿ

ಪರಮ ಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪೂರವರು ಗುರುವಾರ ದಿ. ೨೭ ಮಾರ್ಚ್ ೨೦೧೪ ರಂದು ಮರಾಠಿ ಪ್ರವಚನದಲ್ಲಿ ಶ್ರೀ ಹರಿಗುರುಗ್ರಾಮದಲ್ಲಿ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾರವರ ಬಹುಮೂಲ್ಯ ಸಂಶೋಧನೆಯ ಕಾರ್ಯದ ಬಗ್ಗೆ ಹೇಳಿದರು.




ಅಸಂಖ್ಯ ತೊಡಕುಗಳನ್ನು ಎದುರಿಸಲಾಗುತ್ತಿದ್ದರೂ ಕೂಡ ಭಗವಂತನ ಮೇಲಿರುವ ಶ್ರದ್ಧೆಯನ್ನು ಸ್ವಲ್ಪ ಕೂಡ ವಿಚಲಿತಗೊಳಿಸದ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾ ಅವರು ಅಥಕ ಪರಿಶ್ರಮದಿಂದ ಬಹುಮೂಲ್ಯ ಸಂಶೋಧನೆಗಳನ್ನು ಮಾಡಿ ಲೋಕೋಪಯೋಗಕ್ಕಾಗಿ ಅನೇಕ ಶೋಧನೆಗಳನ್ನು ಮಾಡಿದರು. ಬಾಪೂರವರು ಅವರ ಮಹಾನ ಕಾರ್ಯದ ಪರಿಚಯವನ್ನು ಮಾಡಿ ಕೊಟ್ಟರು. ಅದನ್ನು ನಾವು ಈ ವ್ಹಿಡಿಯೋದಲ್ಲಿ ನೋಡಬಹುದು.