Friday, 13 September 2013

ಯೂ ಟ್ಯೂಬ್ ವಿಡಿಯೋ ಚ್ಯಾನೆಲ್ - ಅನಿರುದ್ಧಾ ಪ್ರೇಮಸಾಗರದ ಪ್ರಸಾರಣೆ

ಇವತ್ತು ನಾವು ಅನಿರುದ್ಧ ಪ್ರೇಮಸಾಗರದ ಹೆಸರಿನಲ್ಲಿ (http://www.youtube.com/watch?v=iWnOGGfHRRQ) ಯೂ ಟ್ಯೂಬ್ ವಿಡಿಯೋ ಚ್ಯಾನೆಲಿನ ಸ್ವತಂತ್ರರಿತ್ಯವಾಗಿ ಪ್ರಸಾರಣೆಯನ್ನು ಮಾಡುತ್ತಿರುವುದನ್ನು ತಿಳಿಸಲು ನನಗೆ ಬಹಳ ಆನಂದವಾಗುತ್ತಿದೆ. ನೀವು ಕೇವಲ ಯೂ ಟ್ಯೂಬಿನ ಹೆಸರನ್ನು ಹುಡುಕಿದರೆ ಅದನ್ನು ನೀವು ನೋಡಬಹುದು. ಈ ಚ್ಯಾನೆಲಿನ ಮೂಲಕ ಮೊದಲ ಬಾರಿಗೆ ಪ್ರಕಟವಾದ ವಿಡಿಯೋಗಳನ್ನು ಕೆಳಗೆ ಕೊಡಲಾಗಿದೆ.




ಅನಿರುದ್ಧ ಪ್ರೇಮಸಾಗರದ ಈ ಚ್ಯಾನೆಲ್ ಶ್ರದ್ಧಾವಾನರರಿಂದ ಶ್ರದ್ಧಾವಾನರಿಗಾಗಿರುವುದು. ಪ್ರಾರಂಭದಲ್ಲಿ, ಎರಡು ಮೂರು ವಾರಗಳ ಅವಧಿಯಲ್ಲಿ ಅನಿರುದ್ಧಾ ಪ್ರೇಮಸಾಗರ ಚ್ಯಾನೆಲಿನಲ್ಲಿ ನಾವು ೧೫೦ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಅದರಲ್ಲಿ ಪರಮ ಪೂಜ್ಯ ಬಾಪೂರವರ ಕೆಲವಾರು ಸಂದರ್ಭಗಳಲ್ಲಿ, ಅಂದರೆ ದೊಡ್ಡ ಕಾರ್ಯಕ್ರಮಗಳಂತಹ ರಾಮನವಮಿ, ಗುರುಪೂರ್ಣಿಮೆ, ಅನಿರುದ್ಧ ಪೂರ್ಣಿಮ ಇತ್ಯಾದಿ, ಹಾಗೆಯೇ ಶ್ರದ್ಧಾವಾನರು ಆಚರಿಸುವತ್ತಿರುವ ಪಾದುಕಾ ಪೂಜನೆ, ಸಚ್ಚಿದಾನಂದ ಆನಂದೋತ್ಸವ, ಕಂಠಕೂಪ ಪಾಷಾಣ ಪೂಜೆ (೨೦೦೩) ಮತ್ತು ಧರ್ಮಚಕ್ರ ಪೂಜನೆ (೧೯೯೯) ಅದಲ್ಲದೆ ಇದರ ಮೊದಲು ಮಾಡಿರುವ ಹಲವಾರು ಕಾರ್ಯಕ್ರಮಗಳು, ಅದರಂತೆ ಅನಿರುದ್ಧ ಚಲಿಸದ ಸ್ಲೈಡ್ ಶೋಜ್, ಪಿಪಾಸದ ಅಭಂಗಗಳು,  ತನ್ನ ಮಿತ್ರರ ಹಾಗು ಶ್ರದ್ಧಾವಾನರ ಕೆಲವು ಕೌಟುಂಬಿಕ ಸಮಾರಂಭಗಳಿಗೆ ಬಾಪೂರವರು  ಬಂದು ಗೌರವಿಸಿದ್ದು ಮೊದಲಾದವುಗಳು ಇರುವವು. ಶ್ರದ್ಧಾವಾನರು ಮೇಲೆ ಹೇಳಿರುವ ದೊಡ್ಡ ಕಾರ್ಯಕ್ರಮಗಳ ಹಾಗು ಪಾದುಕಾ ಪೂಜನೆಯ ಆಚರಣೆಯ ವಿಡಿಯೋ ಫೂಟೇಜ್ ಅಥವಾ ಸ್ಲೈಡ್ ಶೋಜ್ ಅವರಲ್ಲಿದ್ದರೆ ಅದನ್ನು ನೇರವಾಗಿ aniruddhapremsagara@gmail.com ಗೆ ಕಳುಹಿಸಬಹುದು ಅಥವಾ ನೀವು ವಿಡಿಯೋಗಳನ್ನು ನಮಗೆ www.dropbox.com, Google Drive – www.google.com/drive ಅಥವಾ ಇನ್ನಿತರ ಸಂಬಂಧಿತ ಸೈಟ್ ಗಳ ಮೂಲಕ ಕಳುಹಿಸಬಹುದು. ಆದರೆ ಈ ಫೂಟೇಜಿನ ಕಾಲಾವಧಿ ಐದು ನಿಮಿಷಗಳ ಮೇಲಿರಬಾರದೆಂದು ಗಮನದಲ್ಲಿಡಬೇಕು. ಅದಾಗದಿದ್ದರೆ ಈ ವಿಡಿಯೋಗಳ ಸೀಡಿಯನ್ನು ಶ್ರೀ ಹರಿಗುರುಗ್ರಾಮದಲ್ಲಿ ಗುರುವಾರದಂದು ಅಥವಾ ಹ್ಯಾಪ್ಪಿ ಹೋಮ್ ನ ಎರಡನೆಯ ಮಾಳಿಗೆಯಲ್ಲಿಯ ಗುಣಸಂಕೀರ್ತನದ ವಿಭಾಗದಲ್ಲಿ ತಂದು ಕೊಡಬಹುದು.

Monday, 26 August 2013

ಇಂಗ್ಲೀಷ್ ಭಾಷೆಯನ್ನು ಕಲಿಯಲು ನಂದಾಯಿಯವರು ಬರೆದ ಪುಸ್ತಕಾದ ಪ್ರಕಾಶನೆ



ನಂದಾಯಿಯವರು ಆತ್ಮಬಲದ ವರ್ಗದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾಗ

೨೦೧೦ ರ ಮೇ ೬ ರಂದು ’ರಾಮರಾಜ್ಯ ೨೦೨೫’ರ ಸಂಕಲ್ಪನೆಯ ಮೇಲೆ ಆದ ಪರಮಪೂಜ್ಯ ಬಾಪೂರವರ ಪ್ರವಚನವನ್ನು ಶ್ರದ್ಧಾವಾನರು ಕೇಳಿದ್ದಾರೆ. ಈ ಪ್ರವಚನದಲ್ಲಿ ಬಾಪೂರವರು ಅನೇಕವಿಧದ ವಿಷಯಗಳ ಮೇಲೆ ಮಹತ್ವಪೂರ್ಣವಾದ ಮಾತುಗಳನ್ನು ತಿಳಿಸಿರುವರು. ಅದರಲ್ಲಿ ಒಂದು ಮಹತ್ವದ ವಿಷಯವಿತ್ತು, ಅದೆಂದರೆ ’ಒಳ್ಳೆಯ ಪ್ರಕಾರದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಕಲಿಯುವದು. ಆಗ ಮಾತನಾಡುವಾಗ ಬಾಪೂರವರು ಹೇಳಿದ್ದರು,’ಇವತ್ತು ಇಂಗ್ಲೀಷ್ ಭಾಷೆಯು ಜಗತ್ತಿನ ವ್ಯವಹಾರದ ಭಾಷೆಯಾಗಿದೆ. ಮಾತೃಭಾಷೆಯ ಅಭಿಮಾನವಿರಬೇಕು, ಆದರೆ ಇಂದಿನ ಸಮಯದಲ್ಲಿ ನಮ್ಮ ಸಾಮಾಜಿಕ ಜೀವನದಲ್ಲಿ ಇಂಗ್ಲೀಷನ್ನು ಸುಧಾರಿಸುವುದು ಆವಶ್ಯಕವಾಗಿದೆ. ನಮಗೆ ವಿಶ್ವದ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ನಮಗೆ ನಿರರ್ಗಳವಾಗಿ (ತಡೆಯಿಲ್ಲದೆ) ಇಂಗ್ಲೀಷ್ ಮಾತನಾಡಲು ಬರಬೇಕು. ಅದಕ್ಕಾಗಿ ನಾವು ’ಅನಿರುದ್ದಾಜ್ ಇನ್ಸ್ಟಿಟ್ಯೂಟ್ ಆಂಡ್ ಲಿಂಗ್ವಿಸ್ಟಿಕ್ಸ್’ ಈ ಸಂಸ್ಥೆಯ ಸ್ಥಾಪನೆ ಮಾಡುತ್ತಿದ್ದೇವೆ. ಅದರ ನಂತರ ಬಾಪೂ ಹೇಳಿದ್ದರು,’ಅನೇಕ ಜನರು ಇಂಗ್ಲೀಷ್ ಮಾತನಾಡಬೇಕಾದರೆ ಮೊದಲು ತನ್ನ ಮಾತೃಭಾಷೆಯಲ್ಲಿ ಅದರ ವಿಚಾರವನ್ನು ಮಾಡುತ್ತಾರೆ ನಂತರ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಇದು ತಪ್ಪು. ಈ ತರಹ ವಿಚಾರ ಮಾಡುವುದರಲ್ಲಿ ಹಾಗು ವ್ಯಕ್ತ ಮಾಡುವಾಗ ಒಂದು ಕಂದರ ನಿರ್ಮಾಣವಾಗುವದು. ಈ ಕಂದರದಿಂದಾಗಿ ಭಾಷೆಯ ಪ್ರವಾಹ ಕುಂದುವದು. ಭಾಷೆಗೆ ಹರಿತವಿರುವುದು ಮಹತ್ವದ್ದಾಗಿರುವದು ಅದರ ನಿರರ್ಗಳತೆಯು ಮಹತ್ವದ್ದಾಗಿದೆ.

ಹಾಗೆಯೇ ಈ ಇನ್ಸ್ಟಿಟ್ಯೂಟಿನ ಪ್ರಮುಖ ಹಾಗು ಸರ್ವೇಸರ್ವ ಸ್ವತ: ’ಸೌ. ಸ್ವಪ್ನಗಂಧಾವೀರಾ ಅನಿರುದ್ಧ ಜೋಶಿ’ (ಅಂದರೆ ನಮ್ಮೆಲ್ಲರ ಪ್ರೀತಿಯ ನಂದಾಯಿ) ಇರುವರೆಂದು ಆ ಸಮಯದಲ್ಲಿ ಬಾಪೂರವರು ವ್ಯಕ್ತ ಮಾಡಿರುವರು. ನಮಗೆಲ್ಲರಿಗೆ ಗೊತ್ತಿದ್ದಂತೆ ಕಳೆದ ಅನೇಕ ವರ್ಷಗಳಿಂದ ’ಸ್ತ್ರೀಯರ ಆತ್ಮಬಲವಿಕಾಸ ವರ್ಗ’ವನ್ನು ಅವರು ನಡೆಸುತ್ತಿದ್ದು ಅದರಲ್ಲಿ ಇಂಗ್ಲೀಷ್ ಕಲಿಯುವದು ಆತ್ಮಬಲದ ಅಭ್ಯಾಸಕ್ರಮದಲ್ಲಿಯ ಒಂದು ಮಹತ್ವದ ಅಂಗವಾಗಿದೆ. ಆತ್ಮಬಲದ ವರ್ಗದಲ್ಲಿ ಪ್ರವೇಶಿರುವ ಕೆಲವು ಸ್ತ್ರೀಯರಿಗೆ ಆರಂಭದಲ್ಲಿ ಇಂಗ್ಲೀಷ್ ಭಾಷೆಯ ಗಂಧವಿರುವಿದಿಲ್ಲ. ಆದರೆ ಅಂತಹ ಸ್ತ್ರೀಯರಿಗೆ ನಂದಾಯಿಯವರು ಆರು ತಿಂಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಹಾಗು ಬರೆಯಲು ಕಲಿಸುತ್ತಾರೆ. ಇದರಿಂದಾಗಿ ಆತ್ಮಬಲದ ಕ್ಲಾಸ್ ಮಾಡಿದ ಸ್ತ್ರೀಯರು ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ಇಂಗ್ಲೀಷ್ ಭಾಷೆಯನ್ನು ಉಪಯೋಗಿಸಲು ಕಲಿಯುತ್ತಾರೆ ಹಾಗೆಯೇ ಆತ್ಮಬಲದ ಕೋರ್ಸಿನ ಮುಕ್ತಾಯದ ಸಮಯದಲ್ಲಿರುವ ಸ್ನೇಹಸಮ್ಮೇಲನದಲ್ಲಿ ಇದರಲ್ಲಿದ್ದ ಕೆಲವು ಸ್ತ್ರೀಯರು ಇಂಗ್ಲೀಷ್ ನಾಟಕದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿಕೊಳ್ಳುತ್ತಾರೆ.

ಇದನ್ನು ಅನುಸರಿಸಿ, ಸ್ವತ: ನಂದಾಯಿಯವರು ಇಂಗ್ಲೀಷ್ ಭಾಷೆಯನ್ನು ಕಲಿಯಲು ಉಪಯುಕ್ತವಾಗಲೆಂದು ಬರೆದ ಪುಸ್ತಕಗಳು ಸಂಚಯದ ಸ್ವರೂಪದಲ್ಲಿ ಬಹಳ ಬೇಗನೇ ಪ್ರಕಾಶಿತವಾಗುತ್ತಿದೆ. ಈ ಪುಸ್ತಕದ ಮೂಲಕ ಶ್ರದ್ಧಾವಾನರಿಗೆ ಇಂಗ್ಲೀಷ್ ಕಲಿಯಲು ಸುಲಭ ಹಾಗು ಸಹಜ ಮಾರ್ಗ ತೆರೆಯಲಿದೆ. ಈ ಪುಸ್ತಕವನ್ನು ನೋಡುವದು, ಓದುವದು ಹಾಗು ಉಪಯೋಗಿಸುವದು ಅಂದರೆ ಅದೊಂದು ಬಹಳ ಭಿನ್ನ ಪ್ರಕಾರದ ಆನಂದದಾಯಿಯಾದ ಅನುಭವವಾಗಲಿದೆ. ಹಾಗೆಯೇ ಬಾಪೂರವರಿಗೆ ಅಪೇಕ್ಷಿತವಾದ ರಾಮರಾಜ್ಯದ ಪ್ರವಾಸದಲ್ಲಿನ ಇದೊಂದು ಮಹತ್ವದ ಹೆಜ್ಜೆಯಾಗಿರುವುದೆಂದು ಮಾತ್ರ ನಿಶ್ಚಿತ.

Monday, 5 August 2013

ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)

Recipe of Wheat Concentrate (Gavhache sattva)
ಗೋದಿಯ  ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)



೨೭ ನೇ ಜೂನ್ ೨೦೧೩ ರ ಪ್ರವಚನದಲ್ಲಿ ಬಾಪೂರವರು ವಿಶದ ಮಾಡಿದ  ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿಯನ್ನು (ರೆಸಿಪಿ) ಇಲ್ಲಿ ಕೊಡಲಾಗಿದೆ. ಗೋದಿಯನ್ನು ರಾತ್ರಿ ನೀರಿನಲ್ಲಿ ನೆನೆದಿಡಬೇಕು. ಈ ನೀರನ್ನು ಮರುದಿವಸ ತೆಗೆದುಹಾಕಿ ಆ ಗೋದಿಯನ್ನು ಪುನ: ಬೇರೆ ನೀರು ಹಾಕಿ ನೆನೆದಿಡಬೇಕು. ಮೂರನೇಯ ದಿವಸ ಈ ನೀರನ್ನು ತೆಗೆದುಹಾಕಿ ಇದೇ ಗೋದಿಯನ್ನು ನೀರಿನಲ್ಲಿ ನೆನೆದಿಡಬೇಕು. ನಾಲ್ಕನೇ ದಿವಸ ಗೋದಿಯ ನೀರನ್ನು ತೆಗೆದುಹಾಕಿದ ನಂತರ ಈ ನೆನೆದಿಟ್ಟ ಗೋದಿಯಲ್ಲಿ ಸ್ವಲ್ಪ ಬೇರೆ ನೀರು ಹಾಕಿ ಈ ಗೋದಿಯನ್ನು ರುಬ್ಬಿಕೊಳ್ಳಬೇಕು. (ಮಿಕ್ಸರಿನಲ್ಲಿ ಅಥವಾ ಕಲ್ಲಿನಲ್ಲಿ) ಈ ಪ್ರಕಾರ ರುಬ್ಬಿದ ಗೋದಿಯನ್ನು ಹಿಂಡಿ ಅದನ್ನು ಸೋಸಿಕೊಂಡು ಬಂದ ಮೆದು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ತೆಗೆದು ಅದನ್ನು ಮುಚ್ಚಿಡಬೇಕು.

ಆರೇಳು ಗಂಟೆಯ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದು ನೋಡಬೇಕು. ಗೋದಿಯ ಸತ್ವವು ಪಾತ್ರೆಯ ಬುಡದಲ್ಲಿದ್ದು ಮೇಲೆ ಕೇವಲ ನೀರು/ಸೋಸಿದ ನೀರು ಕಾಣುವದು. ಮೇಲೆ ಬಂದ ಸೋಸಿದ ನೀರು ತೆಗೆದುಹಾಕಬೇಕು. ಈ ಪ್ರಕಾರ ಸಿದ್ದವಾದ ಗೋದಿಯ ಸತ್ವವನ್ನು ಒಂದು ಸೀಸೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿಡಬೇಕು.

ಪರ್ಯಾಯ ೧:
ಸ್ಥೂಲ ವ್ಯಕ್ಯಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ 
೨) ನೀರು - ನಾಲ್ಕು ವಾಟಿ
೩) ಹಿಂಗು - ಒಂದು ಚಿಕ್ಕ ಚಮಚೆ
೪) ಉಪ್ಪು (ರುಚಿಗನುಸಾರವಾಗಿ)
೫) ಜೀರಿಗೆ ಪುಡಿ (ರುಚಿಗನುಸಾರವಾಗಿ)
ಮೇಲೆ ಹೇಳಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಚಿಕ್ಕ (ಗ್ಯಾಸಿನ) ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣವನ್ನು ಸತತವಾಗಿ ತಿರಿಗಿಸುತ್ತಿರುವ ಆವಶ್ಯಕತೆ ಇದೆ, ಯಾಕೆಂದರೆ ಇದರ ಮುದ್ದೆಯಾಗಿ ಗಟ್ಟಿ ಆಗುವುದಿಲ್ಲ.

ಪರ್ಯಾಯ ೨ :-
ಕೃಶ (ತೆಳು) ವ್ಯಕ್ತಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ)
೨) ತುಪ್ಪ - ಎರಡು ಚಮಚೆ
೩) ಹಾಲು - ಒಂದು ವಾಟಿ
೪) ಸಕ್ಕರೆ - ಎರಡು ಚಮಚೆ
೫) ಏಲಕ್ಕಿ ಪುಡಿ (ರುಚಿಗನುಸಾರವಾಗಿ)
ಒಂದು ಪಾತ್ರೆಯಲ್ಲಿ ಎರಡು ಚಮಚೆ ತುಪ್ಪ ಹಾಕಿದ ನಂತರ ಇದರಲ್ಲಿ ಗೋದಿಯ ಸತ್ವವನ್ನು ಹಾಕಬೇಕು. ಆನಂತರ ಅದರಲ್ಲಿ ಒಂದು ವಾಟಿಯಷ್ಟು ಹಾಲು ಮತ್ತು ಎರಡು ಚಮಚೆ ಸಕ್ಕರೆ ಹಾಕಿ ಅದನ್ನು ಚಿಕ್ಕ ಗ್ಯಾಸಿನಲ್ಲಿ ಕುದಿಸಬೇಕು. ಏಲಕ್ಕಿ ಹುಡಿ (ಬೇಕಿದ್ದರೆ) ಹಾಕಿ ಅದನ್ನು ಸತತ ತಿರಿಗಿಸುತ್ತಿರಬೇಕು. ನುಣ್ಣಗಾದ ಮಿಶ್ರಣದಲ್ಲಿ ಮಿನುಗು ಬಂದ ಮೇಲೆ ಅದು ಚೆನ್ನಾಗಿ ಬೆಂದಿದೆಯೆಂದು ತಿಳಿದು ಗ್ಯಾಸ್ ಆರಿಸಬೇಕು.

ಗೋದಿಯ ಸತ್ವ ದಿನಕ್ಕೊಮ್ಮೆ ಒಂದು ಸಲವಾದರು ನಿತ್ಯ ಬಳಸುವ ವಾಟಿಯಷ್ಟು ತಿನ್ನಬೇಕು.

(ಟಿಪ್ಪಣೆ: ಈ ರೆಸಿಪಿಯ ವ್ಹಿಡಿಯೊ ಬೇಗನೇ ಕೊಡಲಾಗುವದು)