Monday, 5 August 2013

ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)

Recipe of Wheat Concentrate (Gavhache sattva)
ಗೋದಿಯ  ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)



೨೭ ನೇ ಜೂನ್ ೨೦೧೩ ರ ಪ್ರವಚನದಲ್ಲಿ ಬಾಪೂರವರು ವಿಶದ ಮಾಡಿದ  ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿಯನ್ನು (ರೆಸಿಪಿ) ಇಲ್ಲಿ ಕೊಡಲಾಗಿದೆ. ಗೋದಿಯನ್ನು ರಾತ್ರಿ ನೀರಿನಲ್ಲಿ ನೆನೆದಿಡಬೇಕು. ಈ ನೀರನ್ನು ಮರುದಿವಸ ತೆಗೆದುಹಾಕಿ ಆ ಗೋದಿಯನ್ನು ಪುನ: ಬೇರೆ ನೀರು ಹಾಕಿ ನೆನೆದಿಡಬೇಕು. ಮೂರನೇಯ ದಿವಸ ಈ ನೀರನ್ನು ತೆಗೆದುಹಾಕಿ ಇದೇ ಗೋದಿಯನ್ನು ನೀರಿನಲ್ಲಿ ನೆನೆದಿಡಬೇಕು. ನಾಲ್ಕನೇ ದಿವಸ ಗೋದಿಯ ನೀರನ್ನು ತೆಗೆದುಹಾಕಿದ ನಂತರ ಈ ನೆನೆದಿಟ್ಟ ಗೋದಿಯಲ್ಲಿ ಸ್ವಲ್ಪ ಬೇರೆ ನೀರು ಹಾಕಿ ಈ ಗೋದಿಯನ್ನು ರುಬ್ಬಿಕೊಳ್ಳಬೇಕು. (ಮಿಕ್ಸರಿನಲ್ಲಿ ಅಥವಾ ಕಲ್ಲಿನಲ್ಲಿ) ಈ ಪ್ರಕಾರ ರುಬ್ಬಿದ ಗೋದಿಯನ್ನು ಹಿಂಡಿ ಅದನ್ನು ಸೋಸಿಕೊಂಡು ಬಂದ ಮೆದು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ತೆಗೆದು ಅದನ್ನು ಮುಚ್ಚಿಡಬೇಕು.

ಆರೇಳು ಗಂಟೆಯ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದು ನೋಡಬೇಕು. ಗೋದಿಯ ಸತ್ವವು ಪಾತ್ರೆಯ ಬುಡದಲ್ಲಿದ್ದು ಮೇಲೆ ಕೇವಲ ನೀರು/ಸೋಸಿದ ನೀರು ಕಾಣುವದು. ಮೇಲೆ ಬಂದ ಸೋಸಿದ ನೀರು ತೆಗೆದುಹಾಕಬೇಕು. ಈ ಪ್ರಕಾರ ಸಿದ್ದವಾದ ಗೋದಿಯ ಸತ್ವವನ್ನು ಒಂದು ಸೀಸೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿಡಬೇಕು.

ಪರ್ಯಾಯ ೧:
ಸ್ಥೂಲ ವ್ಯಕ್ಯಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ 
೨) ನೀರು - ನಾಲ್ಕು ವಾಟಿ
೩) ಹಿಂಗು - ಒಂದು ಚಿಕ್ಕ ಚಮಚೆ
೪) ಉಪ್ಪು (ರುಚಿಗನುಸಾರವಾಗಿ)
೫) ಜೀರಿಗೆ ಪುಡಿ (ರುಚಿಗನುಸಾರವಾಗಿ)
ಮೇಲೆ ಹೇಳಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಚಿಕ್ಕ (ಗ್ಯಾಸಿನ) ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣವನ್ನು ಸತತವಾಗಿ ತಿರಿಗಿಸುತ್ತಿರುವ ಆವಶ್ಯಕತೆ ಇದೆ, ಯಾಕೆಂದರೆ ಇದರ ಮುದ್ದೆಯಾಗಿ ಗಟ್ಟಿ ಆಗುವುದಿಲ್ಲ.

ಪರ್ಯಾಯ ೨ :-
ಕೃಶ (ತೆಳು) ವ್ಯಕ್ತಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ)
೨) ತುಪ್ಪ - ಎರಡು ಚಮಚೆ
೩) ಹಾಲು - ಒಂದು ವಾಟಿ
೪) ಸಕ್ಕರೆ - ಎರಡು ಚಮಚೆ
೫) ಏಲಕ್ಕಿ ಪುಡಿ (ರುಚಿಗನುಸಾರವಾಗಿ)
ಒಂದು ಪಾತ್ರೆಯಲ್ಲಿ ಎರಡು ಚಮಚೆ ತುಪ್ಪ ಹಾಕಿದ ನಂತರ ಇದರಲ್ಲಿ ಗೋದಿಯ ಸತ್ವವನ್ನು ಹಾಕಬೇಕು. ಆನಂತರ ಅದರಲ್ಲಿ ಒಂದು ವಾಟಿಯಷ್ಟು ಹಾಲು ಮತ್ತು ಎರಡು ಚಮಚೆ ಸಕ್ಕರೆ ಹಾಕಿ ಅದನ್ನು ಚಿಕ್ಕ ಗ್ಯಾಸಿನಲ್ಲಿ ಕುದಿಸಬೇಕು. ಏಲಕ್ಕಿ ಹುಡಿ (ಬೇಕಿದ್ದರೆ) ಹಾಕಿ ಅದನ್ನು ಸತತ ತಿರಿಗಿಸುತ್ತಿರಬೇಕು. ನುಣ್ಣಗಾದ ಮಿಶ್ರಣದಲ್ಲಿ ಮಿನುಗು ಬಂದ ಮೇಲೆ ಅದು ಚೆನ್ನಾಗಿ ಬೆಂದಿದೆಯೆಂದು ತಿಳಿದು ಗ್ಯಾಸ್ ಆರಿಸಬೇಕು.

ಗೋದಿಯ ಸತ್ವ ದಿನಕ್ಕೊಮ್ಮೆ ಒಂದು ಸಲವಾದರು ನಿತ್ಯ ಬಳಸುವ ವಾಟಿಯಷ್ಟು ತಿನ್ನಬೇಕು.

(ಟಿಪ್ಪಣೆ: ಈ ರೆಸಿಪಿಯ ವ್ಹಿಡಿಯೊ ಬೇಗನೇ ಕೊಡಲಾಗುವದು)

Saturday, 29 June 2013

ಧಾರೀ ದೇವಿಯ (ಧಾರಾ ಮಾತಾ) ಪ್ರಕೋಪ

ಚಾರ್ (ನಾಲ್ಕು) ಧಾಮಿನ ಯಾತ್ರೆಯನ್ನು ಮಾಡುವ ಭಾವಿಕರ ಸಂರಕ್ಷಣೆಯನ್ನು ಧಾರೀದೇವಿಯು ಮಾಡುತ್ತಾಳೆಂದು ವಿಶ್ವಾಸವಿದೆ. ಆದ್ದರಿಂದಲೇ ಉತ್ತರಾಖಂಡದ ಶ್ರೀನಗರಿನ ಅಲಕನಂದಾ ನದಿಯ ದಡದಲ್ಲಿರುವ ಧಾರೀದೇವಿಯ ಮಂದಿರವನ್ನು ಸರ್ಕಾರವು ಬೀಳಿಸಬಾರದೆಂದು ಕಳೆದ ಎರಡು ವರ್ಷಗಳಿಂದ ಕೇಳಲಾಗುತ್ತಿತ್ತು. ಅಲಕನಂದಾ ನದಿಯ ಪ್ರವಾಹವನ್ನು ಧಾರೀದೇವಿಯು ನಿಯಂತ್ರಿತ ಮಾಡುವಳು ಮತ್ತು ಆ ನಿಯಂತ್ರಣದ ಕಾರಣದಿಂದಾಗಿ ಅಲಕಾನಂದಾ ನದಿಯ ಸ್ವರೂಪ ಸೌಮ್ಯವಾಗಿರುವದೆಂಬ ಅಲ್ಲಿಯ ಸ್ಥಾನಿಕ ಜನತೆಯರ ವಿಶ್ವಾಸವಿತ್ತು. ಆದ್ದರಿಂದಲೇ ಸ್ಥಾನಿಕ ಧಾರ್ಮಿಕ ಸಂಘಟನೆಯಿಂದ ಸರ್ವಸಾಮಾನ್ಯ ಜನರತನಕ ಎಲ್ಲರೂ ಧಾರೀದೇವಿಯ ಮಂದಿರದ ಕುರಿತಾಗಿ ಸರ್ಕಾರವು ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಾರದೆಂದು ವಿನಂತಿಸುತ್ತಿತ್ತು. ಆದರೆ ವಿಕಾಸಕ್ಕಾಗಿ ವಿದ್ಯುತ್ತಿನ ಆವಶ್ಯಕತೆವಿರುವ ಕಾರಣವನ್ನು ಮುಂದೆ ಮಾಡಿ ಸರ್ಕಾರವು ಈ ಕೋರಿಕೆಯ ಕಡೆ ದುರ್ಲಕ್ಷ ಮಾಡಿತು.  ಜೂನ್ ತಿಂಗಳಿನ ೧೬ ರಂದು ಸಾಯಂಕಾಲ ಆರು ಗಂಟೆಗೆ ಧಾರೀದೇವಿಯ ಮಂದಿರವನ್ನು ಬೀಳಿಸಲಾಯಿತು. ಮಂದಿರದಲ್ಲಿಯ ಧಾರೀದೇವಿಯ ಮೂರ್ತಿಯನ್ನು ಅಲ್ಲಿಂದ ಸ್ಥಲಾಂತರಿಸಲಾಯಿತು.

ಇದೇ ವೇಳೆಗೆ ಕೇದಾರ್ ನಾಥಿನಲ್ಲಿ ಮೋಡಸಿಡಿಯಿತು ಮತ್ತು ಅದರನಂತರ ಎರಡು ಗಂಟೆಗಳಲ್ಲಿ ಅತಿವೃಷ್ಟಿಯಾಗಿ ಗೊಂದಲ ಹರಡಿಸಿತು. ಚಾರ್ ಧಾಮಿನ ಯಾತ್ರೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಭಾವಿಕರು ಈ ಸ್ಥಳದಲ್ಲಿ ಸಿಲುಕಿ ಬಿದ್ದರು. ಅತಿಯಾಗಿ ಸುರಿಯುವ ಮಳೆ, ಭೂಸ್ಖಲನದಿಂದ ಅಲ್ಲಿ ಸಿಲುಕಿರುವ ಭಾವಿಕರನ್ನು ಸುಖರೂಪವಾಗಿ ಹೊರಗೆ ತೆಗೆಯುವುದು ತೊಡಕಿನದ್ದಾಯಿತು. ಮತ್ತು ಈ ಆಪತ್ತಿನ ತೀವ್ರತೆಯು ಹೆಚ್ಚುತ್ತ ಹೋಯಿತು. ಈ ಪ್ರಕಾರದ ಆಪತ್ತಿಗಳು ಬಂದಾಗ ಅದಕ್ಕೆ ಯಾರು ಹೊಣೆಗಾರರು ಇದನ್ನು ಹುಡುಕುವ ಹೊಣೆಗಾರಿಕೆಯನ್ನು ಪ್ರಸಾರಮಾಧ್ಯಮವು ತಾವಾಗಿಯೇ ಸ್ವೀಕರಿಸುತ್ತದೆ. ಉತ್ತರಾಖಂಡದ ಆಪತ್ತಿಯ ನಂತರವೂ ಹೀಗೆಯೇ ಆಯಿತು. ಬಲಿಹೋದವರ ಸಂಖ್ಯೆ ಮತ್ತು ಅಲ್ಲಿ ಸಿಲುಕಿರುವ ಭಾವಿಕರ ಬಗ್ಗೆ ಮಾಹಿತಿಯನ್ನು ಕೊಡುವಾಗ , ಪರಿಸರದ ವಿಚಾರ ಮಾಡದೆ ತಿಳಿಗೇಡಿಯವರಂತೆ ಸಿದ್ಧ ಮಾಡಿದ ಯೋಜನೆಗಳು ಹಾಗು ಪ್ರಕಲ್ಪದ ಬಗ್ಗೆ ವೃತ್ತಾಂತವನ್ನು ಕೊಟ್ಟು ಪ್ರಸಾರಮಾಧ್ಯಮಗಳು  ಸರಕಾರವನ್ನು ಚುಚ್ಚ ತೊಡಗಿತು. ಆದರೆ ಇದನ್ನೆಲ್ಲ ಸ್ವೀಕರಿಸಿ ಕೂಡ, ಸ್ಥಾನಿಕ ಜನರು ಧಾರೀದೇವಿಯ ಮಂದಿರದಕಡೆ ಬೆರಳು ತೋರಿಸಿ ತನ್ನ ಅಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದರು.

ಕಳೆದ ೮೦೦ ವರ್ಷಗಳಿಂದ ಧಾರೀದೇವಿಯ ಮಂದಿರವು ಇದೇ ಸ್ಥಳದಲ್ಲಿತ್ತು. ಇದು ಪ್ರಾಚೀನ ಸಿದ್ಧಪೀಠವಾಗಿದೆಯೆಂದು ತಿಳಿಯಲಾಗಿದೆ. ಧಾರೀದೇವಿಯು ಕಾಲಿಮಾತೆಯ ಇನ್ನೊಂದು ರೂಪವೆಂದು ಧಾರಣೆಯಿದೆ. ಈ ಸಿದ್ಧಪೀಠದ ಬಗ್ಗೆ ಮಾಹಿತಿಯು ಶ್ರೀಮದ್ ಭಾಗವತದಲ್ಲಿ ಕೂಡ ನಮೂದಿಸಲಾಗಿದೆ. ಉತ್ತರಾಖಂಡದ ಶ್ರೀನಗರದ ಹತ್ತಿರ (ಜಮ್ಮು-ಕಾಶ್ಮೀರಿನ ಶ್ರೀನಗರವಲ್ಲ) ಕಾಲಿಯಾಸೂರವೆಂಬ ಸ್ಥಳದಲ್ಲಿರುವ ಈ ಧಾರೀದೇವಿಯ ಮಂದಿರವು ಸ್ಥಾನಿಕರ ಶೃದ್ಧೆಯ ಸ್ಥಾನವಾಗಿದೆ. ಧಾರೀದೇವಿಯ ಮೂರ್ತಿಯು ಬಹಳ  ಉಗ್ರವಾಗಿದ್ದರೂ ಆ ತಾಯಿಯು ಸ್ವೀಕರಸಿದ ಉಗ್ರರೂಪವು ನಮ್ಮೆಲ್ಲರ ರಕ್ಷಣೆಗಾಗಿಯೇ ಇರುವುದೆಂದು ಪಾರಂಪರಿಕ ತಿಳುವಳಿಕೆಯಾಗಿದೆ. ಇದರ ಕುರಿತಾಗಿ ಐತಿಹಾಸಿಕ ಕಥೆಗಳನ್ನು ಕೂಡ ಹೇಳಲಾಗುವದು.

೧೮೮೨ ರಲ್ಲಿ ಒಬ್ಬ ತಲೆತಿರುಕ ರಾಜನು ಈ ಮಂದಿರದೊಡನೆ ಹೀಗೆಯೇ ಕುಚೋದ್ಯ ಮಾಡಲು ಪ್ರಯತ್ನಿಸಿದಾಗ, ಆ ಸಮಯದಲ್ಲೂ ಕೂಡ ಭಯಂಕರ ನೈಸರ್ಗಿಕ ಸಂಕಟಗಳು ಉದ್ಭವಿಸಿತ್ತೆಂದು ಹೇಳಲಾಗುತ್ತದೆ. ಆದ್ದರಿಂದ ರಕ್ಷಣಕರ್ತ್ಯೆ ಧಾರೀದೇವಿಯ ಮಂದಿರದ ಬಗ್ಗೆ ಅಲ್ಲಿಯ ಸ್ಥಾನಿಕರ ಭಾವನೆಯು ಬಹಳ  ತೀವ್ರವಾಗಿರುವದು ಆಶ್ಚರ್ಯದಾಯಕದಲ್ಲ.

ಈ ಮಂದಿರವನ್ನು ಸರಕಾರವು ಬೀಳಿಸಿದರೆ, ಅದರ ಭಯಂಕರ ಪರಿಣಾಮವನ್ನು ಮಾತ್ರ ಎಲ್ಲರಿಗೂ ಸಹಿಸಬೇಕಾಗುವದು ಇದು ಅಲ್ಲಿಯ ಸ್ಥಾನಿಕರಿಗೆ ಮನದಟ್ಟಾಗಿತ್ತು. ಮತ್ತು  ಆದದ್ದು ಹಾಗೆಯೇ. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಕೇವಲ ಕೆಲವೇ ಗಂಟೆಗಳ ಕಾಲದೊಳಗೆ ಪ್ರಳಯಂಕಾರಿ ವೃಷ್ಟಿಯಾಗುತ್ತದೆ. ಗಂಗೆಯ ಉಪನದಿಯಾದ ಅಲಕನಂದೆಯು ತನ್ನ ರೌದ್ರಭೀಷಣ ರೂಪವನ್ನು ಪ್ರಕಟ ಮಾಡುತ್ತದೆ., ಇದು ಯೋಗಾಯೋಗದ ವಿಷಯವೇ ಅಲ್ಲವೆಂದು ಶ್ರದ್ಧಾವಾನರು ನಂಬುತ್ತಾರೆ. ಸ್ಥಾನಿಕ ಮಾಧ್ಯಮದವರು ಜನರ ಈ ಮಾತನ್ನು ಪ್ರಸಿದ್ಧ ಮಾಡಿದ್ದಾರೆ, ಇಲ್ಲಿಯ ಧಾರ್ಮಿಕ ಸಂಘಟನೆಗಳು ಮತ್ತು ಧರ್ಮಾಚಾರ್ಯರು ಕೂಡ ಧಾರೀದೇವಿಯ ಮಂದಿರವನ್ನು ಬೀಳಿಸಿರುವ ಸರ್ಕಾರವನ್ನು ಕಠೋರ ಶಬ್ದಗಳಲ್ಲಿ ದೂಷಿಸಿದ್ದಾರೆ. ಉತ್ತರಾಖಂಡದಲ್ಲಿ ಪರಿಸರದ ವಿಚಾರ ಮಾಡದೆ ಕೇಂದ್ರ ಸರ್ಕಾರವು ನೂರಾರು ಪ್ರಕಲ್ಪಗಳನ್ನು ಮಾಡಲು ಒಪ್ಪಿಗೆಯನ್ನು ಕೊಟ್ಟಿದೆ. ಧಾರೀದೇವಿಯ ಮಂದಿರವನ್ನು ಬೀಳಿಸಿ ಅಲಕನಂದಾ ನದಿಯ ಮೇಲೆ ಅಣೆಕಟ್ಟನ್ನು ಕಟ್ಟುವ ಯೋಜನೆಯು ಈ ಅನೇಕ ಪ್ರಕಲ್ಪದ ಒಂದು ಭಾಗವಾಗಿದೆ.

ವಿಕಾಸ ಪ್ರಕಲ್ಪಗಳಿಗೆ ಸ್ಥಾನಿಕರ ವಿರೋಧಗಳು ಆಗುತ್ತಲೇ ಇರುವವು. ಧಾರೀದೇವಿಯ  ಮಂದಿರವನ್ನು ಬೀಳಿಸಿ ಅಣೆಕಟ್ಟನ್ನು ಕಟ್ಟುವ ಯೋಜನೆಗೆ ಕೂಡ ಇದೇ ಪ್ರಕಾರದ ವಿರೋಧವಾಗಿರಬೇಕೆಂದು ಸರ್ಕಾರವು ಎಣಿಸಿಕೊಂಡಿತ್ತು. ಆದ್ದರಿಂದ ಈ ಮಂದಿರದೊಡನೆ ಜೋಡಿದ್ದ ಶ್ರದ್ಧಾಭಾವನೆಯ ವಿಚಾರವನ್ನು ಮಾಡುವ ಅಗತ್ಯ ಸರ್ಕಾರಕ್ಕೆ ತೋರಲಿಲ್ಲ. ಮಾತ್ರ ಯಾವ ಶ್ರದ್ಧೆಯಿಂದ  ಈ ಚಾರ್ ಧಾಮಿನ ಯಾತ್ರೆಯನ್ನು ಮಾಡುವರು , ಆ ಶ್ರದ್ಧಾಭಾವನೆಯ ಮೇಲೆಯೇ ಈ ನಮ್ಮ ಪ್ರಕಲ್ಪವು ಆಘಾತವನ್ನು ಮಾಡುತ್ತಿದೆ ಇದನ್ನು ಪ್ರಕಲ್ಪ ಯೋಜಿಸುವವರು ಮರೆತು ಹೋದರು. ಅದರ ಭಯಂಕರ ವೆಚ್ಚವನ್ನು ನಾವು ಹಿಂದಿರುಗಿ ಕೊಡಬೇಕಾಗುತ್ತಿದೆಯೆಂದು ಸ್ಥಾನಿಕರು ಹೇಳುತ್ತಿದ್ದಾರೆ. ಮತ್ತು ವಿಶೇಷವೆಂದರೆ ಧರ್ಮಶ್ರದ್ಧೆಯ ವಿಷಯದಲ್ಲಿ ಬಹಳ ದೊಡ್ಡ ಆಸ್ಥೆವಿಲ್ಲದ ಪರಿಸರವಾದಿಗಳು ಕೂಡ ಅಣೆಕಟ್ಟಿನ ವಿರೋಧ ಮಾಡುತ್ತಿದ್ದರು. ಅಂದರೆ ಶ್ರದ್ಧಾಭಾವ ಮತ್ತು ಪರಿಸರ ಇವೆರಡರ ಅನಾದರ ಮಾಡಿ ಸರ್ಕಾರವು ಅಲಕನಂದೆಗೆ ಅಣೆಕಟ್ಟು ಕಟ್ಟುವ ನಿರ್ಣಯವನ್ನು ತೆಗೆದುಕೊಂಡಿತು.

ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಈ ಆಪತ್ತಿಯು ಬರಲಿಲ್ಲ, ಆದರೆ ಈ ಆಪತ್ತಿಯ ಕಾರಣ ಪರಿಸರವಾಗಿದೆ ಎಂದು ತಿಳಿಯುತ್ತಿರುವವರು ಕೂಡ ೮೦೦ ವರ್ಷದ ಪುರಾತನದ ದೇವಸ್ಥಾನವನ್ನು ಸಮಭೂಮಿ ಮಾಡುವಾಗ, ಸರ್ಕಾರ ತೋರಿಸಿದ ಅಜಾಗರೂಕತೆ ನಂಬಲು ಅಸಾಧ್ಯ. ಈ ಆಪತ್ತಿ ಬಂದಿರದಿರದಿದ್ದರೆ ಕೂಡ ಸರ್ಕಾರವು ಜನತೆಯವರ ಭಾವನೆಯ ಬಗ್ಗೆ ಇಷ್ಟು ಅಸಂವೇದನೆಶೀಲವಾಗಿರುವದು ಸರ್ವಥಾ ಅಯೋಗ್ಯವೇ ಆಗಿದೆ. ಆದರೆ ವಿದ್ಯುತ್ತಿನ ಪ್ರಕಲ್ಪಕದ ಹೆಸರಿನಲ್ಲಿ ’ದೇವಭೂಮಿ’ಯಾಗಿರುವ ಹಿಮಾಲಯದಲ್ಲಿ ಮನಸ್ಸಿಗೆ ಬಂದಂತೆ ಮಾಡುವುದನ್ನು ನೋಡಿದರೆ , ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಭೂಮಿಯಲ್ಲಿ ಶ್ರದ್ಧೆಯ ಜೊತೆಗೆ ಪರಿಸರವನ್ನು ಕೂಡ ದುರ್ಲಕ್ಷಿಸುತ್ತಿದೆ ಎಂದು ತೋರಿ ಬರುವದು.

ಗಂಗೆಯ ಪ್ರವಾಹದ ಮೇಲೆ ಕಟ್ಟಲ್ಪಟ್ಟ ಅಣೆಕಟ್ಟು ವಿಧ್ಯುತ್ತಿನ ನಿರ್ಮಾಣಕ್ಕಾಗಿ ಆವಶ್ಯಕವೆಂದು ಸರ್ಕಾರದ ಕಡೆಯಿಂದ ಹೇಳಲಾಗುತ್ತಿದೆ. ಆದರೆ ಇದರದ್ದು ಗಂಗೆಯ ಪ್ರವಾಹದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಪ್ರವಾಹದ ಮೇಲೆ ಪರಿಣಾಮವಾಗುವುದರಿಂದ ಗಂಗೆಯು ಹೆಚ್ಚು ಪ್ರದೂಷಿತವಾಗುತ್ತಿದೆ ಇದನ್ನು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲ. ಇದು ಕೇವಲ ಶ್ರದ್ಧೆಗೆ ಸೀಮಿತವಾದ ವಿಷಯವಾಗಿರದೆ ಹಿಮಾಲಯದ ನದಿಗಳ ಮೇಲೆ ಭಾರತೀಯವರ ಜೀವನ ಅವಲಂಬಿಸಿದೆ ಇದನ್ನು ಸರ್ಕಾರಕ್ಕೆ ಮನಗಾಣಿಸಿಕೊಡಬೇಕಾಗಿದೆ. ಪರಿಸರದ ನಾಶದಬಗ್ಗೆ ಚಿಂತೆ ವ್ಯಕ್ತ ಮಾಡುವಾಗ , ಭಾರತದ ಧರ್ಮಸಂಸಕೃತಿಯಿಂದ ಅರ್ಥಕಾರಣದವರೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ್ದಾಗಿರುವ ನದಿಗಳ ಕುರಿತಾಗಿ ಸರ್ಕಾರದ ಯಂತ್ರಣೆಯು ಇಷ್ಟು ಅಜಾಗರೂಕತೆಯನ್ನು ಹೇಗೆ ತೋರಿಸಬಲ್ಲದು ಇಂತಹ ಪ್ರಶ್ನೆಯನ್ನು ಉತ್ತರಾಖಂಡದಲ್ಲಿ ಈ ಆಪತ್ತಿಯ ಕಾರಣದಿಂದಾಗಿ ಕೇಳಲಾಗುತ್ತಿದೆ. ಸಂಪೂರ್ಣ ಲೋಕಶಾಹಿವಾದಿಯ ಮಾಧ್ಯಮವೆನಿಸಿಕೊಂಡ ಇಂಟರ್ ನೆಟ್ಟಿನ ಮೇಲೆ ಬರುತ್ತಿರುವ ಪ್ರತಿಕ್ರಿಯೆಗಳು ಸರ್ಕಾರದ ಈ ಅಜಾಗರೂಕತೆಯ ಮೇಲೆ ಆಕ್ರಮಣವನ್ನು ಮಾಡುತ್ತಿದೆ.

ಸೋಶಲ್ ನೆಟ್ ವರ್ಕಿಂಗ್ ಸಂಕೇತ ಸ್ಥಳಗಳಲ್ಲಿ ಕೂಡ ಸರ್ಕಾರವು ತೋರಿಸುತ್ತಿರುವ ಅಸಂವೇದನೆಶೀಲತೆಯ ಮೇಲೆ ಬಹಳ ಪ್ರಖರವಾದ ಮತಪ್ರದರ್ಶನಗಳು ಆಗುತ್ತಿವೆ. ಇದರಕಡೆ ರಾಷ್ಟ್ರೀಯ ಮಾಧ್ಯಮಗಳಿಗೂ ಕೂಡ  ಗಮನ ಸೆಳೆಯಬೇಕಾಯಿತು. ಈ ಪ್ರಳಯವು ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಅಯಿತೇನು? ಇಂತಹ ಪ್ರಶ್ನಾರ್ಥಕ ಶೀರ್ಷಿಕೆಯನ್ನು ಕೊಟ್ಟು, ಇದರ ಕುರಿತಾಗಿ ವೃತ್ತವನ್ನು ಪ್ರಸಿದ್ಧ ಮಾಡಲಾಗುತ್ತಿದೆ. ಮತ್ತು ಅದೇ ಸಮಯದಲ್ಲಿ ಗಂಗಾ ನದಿಯನ್ನು ರಾಷ್ಟೀಯಕರಣ ಮಾಡಬೇಕೆಂಬ ಕೇಳಿಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಲ್ಲಿ ಮಾಡಲಾಗುತ್ತಿದೆ. ಭಾರತೀಯ ಸಂಸಕೃತಿಯಲ್ಲಿ ಅಸಾಧಾರಣ ಸ್ಥಾನವಿರುವ ಹಿಮಾಲಯದ ನದಿಗಳ ಮತ್ತು ಅದರಿಂದ ಪರಿಸರದ ಸಂರಕ್ಷಣೆ ಮಾಡುವ ಕೋರಿಕೆ ಕೇವಲ ಧರ್ಮದ ಮೇಲೆ ಶ್ರದ್ಧೆವಿರುವ ಜನರಲ್ಲದೆ ಪರಿಸರದ ರಕ್ಷಣೆಗಾಗಿ ಹೋರಾಡುವವರು ಕೂಡ ಅಷ್ಟೇ ಆಸ್ಥೆಯಿಂದ ಮಾಡುತ್ತಿದ್ದಾರೆ. ಆದ್ದರಿಂದ ಯಾರಿಗೂ ಕೂಡ ಇದರೆಡೆ ದುರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ .

ಜನರ ಭಾವನೆಯ ಕಡೆ ದುರ್ಲಕ್ಷ್ಯ ಮಾಡಿ ಯಾವ ಪ್ರಕಾರದ ನಿರ್ಣಯವನ್ನು ಕೂಡ ತೆಗೆದುಕೊಳ್ಳಬಹುದು ಮತ್ತು ಅದರ ಪರಿಣಾಮದಿಂದ ತನ್ನನ್ನು ಬೇರೆ ಮಾಡಿಡಬಹುದು ಈ ಭ್ರಮೆಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಕೂಡದು. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಆದ ವಿನಾಶ, ಬಲಿಹೋದ ಸಂಬಂಧಿಕರಿಗೆ ಸಹಾಯನಿಧಿ ಘೋಷಣೆ ಮಾಡಿ ಅಥವಾ ಹೊಸ ಯೋಜನೆಗಳನ್ನು ಕೈಕೊಳ್ಳುವ ಘೋಷಣೆಮಾಡುವುದರಿಂದ ಕಳೆದದ್ದನ್ನು ಪಡೆಯಲು ಸಾಧ್ಯವಿಲ್ಲ.

ಬೇರೆಯವರ ಶ್ರದ್ಧೆಯ ಮೇಲೆ ಹಲ್ಲೆ ಮಾಡುವಾಗ ,ಅದರ ಮೇಲೆ ಯಾವ ಮಾರ್ಗದಿಂದಲಾದರೂ ಪ್ರತಿಕ್ರಿಯೆ ಬರುವುದು , ಇದನ್ನು ಸರ್ಕಾರ ಧ್ಯಾನ ಕೊಟ್ಟರೆ ಒಳ್ಳೆದು. ಹತೋಟಿಯಲ್ಲಿರದ ನದಿಗಳನ್ನು ತಡೆಗಟ್ಟಲು ಅಥವಾ ಕೋಪಿತಗೊಂಡ ನಿಸರ್ಗವನ್ನು ನಿರ್ಬಂಧಿಸುವ ಉಪಾಯಗಳು ಇಂದೂ ಕೂಡ ವಿಜ್ನಾನ ತಂತ್ರಜ್ನಾನಿಗಳಿಗೆ ಸಿಗಲಿಲ್ಲ. ಆದ್ದರಿಂದ ವಿನಾಶಕ್ಕೆ ಆಮಂತ್ರಣವನ್ನು ಕೊಡುವ ’ಅಧಾರ್ಮಿಕ ವಿಕಾಸ’ದ ಪುರಸ್ಕಾರ ಮಾಡುವುದನ್ನು ಸರ್ಕಾರ ಇಲ್ಲಿಯೇ ನಿಲ್ಲಿಸಬೇಕು. ಕೋಪ ದೈವಿವಿದೆಯೇ ಅಥವಾ ನೈಸರ್ಗಿಕ ಇದರ ಅಲೋಚನೆ ಮಾಡುವುದಕ್ಕಿಂತ ,ತನ್ನ ತಪ್ಪನ್ನು ಸ್ವೀಕರಿಸಿ ಅದನ್ನು ತಿದ್ದಲು ಸರ್ಕಾರ ಮುಂದೆಹೆಜ್ಜೆ ಹಾಕಬೇಕು. ಹೀಗೆ ಮಾಡಿದ್ದಲ್ಲಿ ಸರ್ಕಾರದ  ಸಂವೇದನಶೀಲತೆಯು ಇನ್ನೂ ಉಳಿದಿದೆಯೆಂದು ಸಿದ್ಧವಾಗುವದು. ಮತ್ತು ಸ್ವಲ್ಪ ಪ್ರಮಾಣದಲ್ಲಿಯಾದರೂ ವಿಶ್ವಾಸವಿಡುವಂತಹದಾಗುವದು. ಇಲ್ಲದಿದ್ದರೆ ಭಯಾನಕ ಸಂಕಟಗಳ ಮಾಲೆಗಳಿಗೆ ಎದುರು ಹೋಗುವಾಗ , ಸರ್ಕಾರಕ್ಕೆ ಒಂದೇ ಸಮಯದಲ್ಲಿ ದೈವಿ, ನೈಸರ್ಗಿಕ ಹಾಗು ಜನರ ಅವಕೃಪೆಯನ್ನು ಎದುರಿಸಬೇಕಾಗುವದು.



- ಸಿದ್ಧಾರ್ಥ ನಾಯೀಕ್

Thursday, 20 June 2013

ಯುರೋಪಿನ ಆರ್ಥಿಕಪರಿಸ್ಥಿತಿ ( European Economy )

ಕಳೆದ ವಾರದಲ್ಲಿ, ರೆಡ್ ಕ್ರಾಸ್ ನ ಪ್ರಧಾನ ಕಾರ್ಯದರ್ಶಿಯರಾದ (Bekele Geleta) ಬೆಕೆಲೇ ಗೆಲೇಟಾರವರು ಯುರೋಪಿಯನ್ ದೇಶಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನವು ಅಶಾಂತಿಯನ್ನು ಉದ್ದೀಪನಗೊಳಿಸುವ ಕಾರಣವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಮತ್ತು ಈ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ಒಮ್ಮೆಲೇ ಬಂಡಾಯಕ್ಕೆ ಕಾರಣವಾಗಬಹುದು. ಜರ್ಮನಿಯ ಹಣಕಾಸು ಸಚಿವರಾದ Wolfgang Schaeuble, ಇದೇ ವಿಷಯಗಳ ಬಗ್ಗೆ ಮಾತನಾಡುತ್ತಿರುವಾಗ,ನಿರುದ್ಯೋಗ ಸಮಸ್ಯೆಯನ್ನು ಕೇಂದ್ರೀಕೃತವಾಗಿ ಪರಿಹರಿಸದೇ ಹೋದರೆ, ಯುರೋಪ್ ವಿಭಜನೆ ಆಗುವ ಸಾಧ್ಯತೆವಿದೆ  ಎಚ್ಚರಿಸಿದ್ದಾರೆ. 



ಯುರೋಪಿನ ಅತ್ಯಂತ ಸುಸ್ಥಾಪಿತ ಮತ್ತು ಆರ್ಥಿಕಸ್ಥಿರತೆಯುಳ್ಳ ದೇಶಗಳಲ್ಲಿ ಒಂದಾಗಿರುವ ಸ್ವೀಡನ್  ರಾಜಧಾನಿ ನಗರ  ಸ್ಟೊಖೋಲ್ಮ್ , ಏಕಾಏಕಿ ಆರಂಭಗೊಂಡ  ಭಾರಿ ಹಿಂಸಾಚಾರಗಳ ಸಾಕ್ಷಿಯಾಗಿದೆ. ನಿಜವಾಗಿಯೂ, ಸ್ವೀಡಿಷ್ ರಾಜಧಾನಿಯಾದ  ಸ್ಟೊಖೋಲ್ಮ್ ನಗರ ಯುರೋಪಿನ ಒಂದು ಆರ್ಥಿಕವಾಗಿ ಅತ್ಯಂತ  ಸಮೃದ್ಧ ನಗರವೆಂದು ಪರಿಗಣಿಸಲಾಗುತ್ತದೆ. ಈ ಮೊದಲು, ಸ್ವೀಡನ್ ಇಂತಹ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಗಳನ್ನು ಎಂದಿಗೂ ಕಂಡಿರಲಿಲ್ಲ. ಈ ಹಿಂಸಾಚಾರಗಳು ಪರಿಣಾಮಕಾರಿಯಾಗಿ ಲೋಕಪ್ರಸಿದ್ಧವಾದ ಯುರೋಪಿನ ಸಮೃದ್ಧಿಯ ಗುಳ್ಳೆಯು ಕಾಲಾಂತರವಾಗಿ ಸಿಡಿದು ಬಂದಿದೆ ಎಂಬ ವಾಸ್ತವತೆಯನ್ನು ಎತ್ತಿತೋರಿಸುತ್ತವೆ.

ಯುರೋಪಿನ ಬಹುತೇಕ ದೇಶಗಳು ತಮ್ಮ GDPs ಗಳ ಗಮನಾರ್ಹವಾದ ಕಡಿತದ ಜೊತೆಯಲ್ಲಿ ಸಾಲ ಹೆಚ್ಚುತ್ತಿರುವ ಪರ್ವತವನ್ನು ಎದುರಿಸುತ್ತಿವೆ. ಈ ನಡುವೆ, ಸ್ವೀಡನ್ ಒಂದು ಒಳ್ಳೆಯ ಆರ್ಥಿಕ ಬೆಳವಣಿಗೆಯ ದರವನ್ನು ಕಾಪಾಡಿಕೊಳ್ಳಲು ನಿರ್ವಹಿಸುತ್ತಿದ್ದ ಕಾರಣ, ಇಂದು ಸ್ವೀಡನ್ ಆರ್ಥಿಕವಾಗಿ ಜರ್ಮನಿ ಮತ್ತು ಫ್ರಾನ್ಸ್ ಗಿಂತ ಅಧಿಕ ಪ್ರಬಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಸ್ವೀಡನ್ ಆರ್ಥಿಕಸ್ಥಿರತೆಯುಳ್ಳ ದೇಶವಾಗಿದ್ದರೂ ಕೂಡ ಇಂತಹ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಆರಂಭಗೊಂಡಿರುವುದು ಎಲ್ಲರಿಗೂ ಗೊಂದಲಕ್ಕೀಡಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆಯ ಸನ್ನಿವೇಶಗಳಲ್ಲಿ, ಆರ್ಥಿಕ ಹಿಂಜರಿತದ ನಂತರದ ಪರಿಸ್ಥಿತಿಗಳು ಈ ಗಲಭೆಗೆ ಕಾರಣವೆನ್ನಲಾಗಿದೆ.  ಸ್ಟೊಖೋಲ್ಮ್ ಹಾಗೂ ಪಕ್ಕದ ಪ್ರದೇಶಗಳು ವಲಸಿಗರ ಭಾರಿ ಒಳಹರಿವಿನ ಸಾಕ್ಷಿಯಾಗಿದ್ದಾರೆ. ಒಂದು ಉತ್ತಮ ಭವಿಷ್ಯದ ಸ್ವಪ್ನವನ್ನು ಕಾಣುತ್ತಾ ಜನರು ತಂಡಗಳಲ್ಲಿ ಉದ್ಯೋಗಗಳನ್ನು ಹುಡುಕಿಕೊಂಡು ಬಂದಿರುವರು, ಆದರೆ ಇನ್ನೂ ಈ ಮಾತು ಅವರಿಗೆ ದೂರದ ವಾಸ್ತವಗಳಾಗಿ ಉಳಿದಿದೆ. ಉದ್ಯೋಗಗಳ ಅವಕಾಶಗಳು ತೀವ್ರವಾಗಿ ಕಡಿಮೆಯಾಗಿವೆ ಮತ್ತು ಯುವಕ ಹಾಗು ಶಿಕ್ಷಿತ ವರ್ಗದವರಿಗೂ ಕೂಡ ಉದ್ಯೋಗ ಪಡೆಯುವುದು ಕಠಿಣವಾಗಿದೆ. ಯುರೋಪಿನಲ್ಲೆಲ್ಲಾ ಇದೇ ರೀತಿಯ ಪರಿಸ್ಥಿತಿಯು ಎದುರಿಸುತ್ತಿರುವುದು ಕಂಡು ಬರುತ್ತಿದೆ. ಯುರೋಪಿನ ಅತ್ಯಾಧಿಕ ನಿರುದ್ಯೋಗ ದರ   ಗ್ರೀಸ್ ದಲ್ಲಿ 64.2% ಗಗನಕ್ಕೆರಿದ್ದು ಕಂಡುಬಂದಿರುವುದು ಮತ್ತು ದೇಶದ ಕೆಲವು ಭಾಗಗಳಲ್ಲಿ ಈ ದರ 75% ಗೆ ತಲಪುವ ಸಾಧ್ಯತೆ ಇದೆ. ಸ್ಪೇನ್ ಕೂಡ ಈ ವಿಪರೀತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅಲ್ಲಿ ಯುವ ನಿರುದ್ಯೋಗ ದರವು ದಿಗ್ಭ್ರಮೆಗೊಳಿಸುವ 56.4% ಗೆ ಮುಟ್ಟಿದೆ. ಪೋರ್ಚುಗಲ್ ನಲ್ಲಿ ಕೂಡ ಯುವ ನಿರುದ್ಯೋಗ ದರ 42.5%ರಷ್ಟು ಹೆಚ್ಚಿನ ಮಟದಲ್ಲಿದ್ದು ಈ ಸಮಸ್ಯೆಯಲ್ಲಿ ಹಿಂದಿಲ್ಲ. ಅದೇ ಸಮಯದಲ್ಲಿ, ಇತರ EU ಸದಸ್ಯರು ಉದಾಹರಣೆಗೆ. ಸೈಪ್ರಸ್, ಲಾಟ್ವಿಯಾ, ಐರ್ಲೆಂಡ್, ಲಿಥುವೇನಿಯಾ ಮತ್ತು ಎಸ್ಟೋನಿಯಾ ಕೂಡ ಹೆಚ್ಚಿನ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ದರಗಳನ್ನು ಕಾಣುತ್ತಿದೆ. ಅಲ್ಲದೇ EU ದಲ್ಲಿ ಒ೦ದನೇ ಮೂರು ಅ೦ಶ, 15 ರಿ೦ದ 24 ವಯಸ್ಸಿನ ನಡುವಿನ ವ್ಯಕ್ತಿಗಳಿಗೆ ಬಡತನದ ಅಪಾಯವಿರುವುದು.

ಅದರ ಜೊತೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಸಹ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಮೇಲಿನ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ, ಅದರಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಕಡಿತ ಒಳಗೊಂಡಿದೆ. ಈ ಕ್ರಮವು ಯುವಕರಲ್ಲಿ ನಿರಾಶೆ ಮತ್ತು ಖಿನ್ನತೆಯನ್ನು ಇನ್ನಷ್ಟು ಕೆರಳಿಸಿರುವುದನ್ನು ಸ್ಟಾಖೋಲ್ಮ್ ಗಲಭೆಯ ರೂಪದಲ್ಲಿ ಅಭಿವ್ಯಕ್ತವಾಗಿರುವುದನ್ನು ಕಂಡುಕೊಂಡಿದೆ. 

ಇದೇ ರೀತಿಯ ಗಲಭೆಗಳು ವರ್ಷ ೨೦೦೧ ರಲ್ಲಿ ಯುನೈಟೆಡ್ ಕಿಂಗ್ಡಮ್ ಬೀದಿಗಳಲ್ಲಿ ಕಂಡಿರುವುದು. ಲಂಡನ್ ಐದು ದಿನಗಳವರೆಗೂ ಜ್ವಾಲೆಯಲ್ಲಿ ಸುಡುತ್ತಿತ್ತು. ಈ ಹಿಂಸೆ ಮತ್ತು ಕ್ಷೋಭೆಯು ಶೀಘ್ರದಲ್ಲೇ ತನ್ನ ನೆರೆಹೊರೆಯ ಮತ್ತು ಪಕ್ಕದ ಪಟ್ಟಣಗಳಲ್ಲಿ ಹರಡಿತು. ಅಂಗಡಿಗಳು ಕೊಳ್ಳೆಗೊಳಗಾಗಿದ್ದವು ಮತ್ತು ಪೊಲೀಸ್ ಅಸಹಾಯಕರಾಗಿರುವುದು ಕಂಡುಬರುತ್ತಿತ್ತು. ಈ ಗಲಭೆಗಳು ಕೂಡ ಬೆಳೆಯುತ್ತಿರುವ ನಿರುದ್ಯೋಗ, ಬಡತನ, ವಲಸೆಗಳ ಒಳಹರಿವು ಮತ್ತು ವಿಸ್ತರಿಸುತ್ತಿರುವ ಶ್ರೀಮಂತ- ಬಡವರ ವಿಭಜನೆ ಮುಂತಾದ ಹೋಲುವ ಆರ್ಥಿಕ ಸಮಸ್ಯೆಗಳಲ್ಲಿ ತಮ್ಮ ಬೇರುಗಳನ್ನು ಹೊಂದಿರುವುದು ಎಂದು  ಕಂಡುಬಂದಿತ್ತು.




ಸ್ಟೊಖೋಲ್ಮದಲ್ಲಿ ನಡೆದ ಹಿಂಸಾಚಾರಗಳು ಯುರೋಪಿನಲ್ಲಿ ಪರಿಸ್ಥಿತಿಗಳು ೨೦೧೧ ರಿಂದ ಸುಧಾರಿಸಿರುವುದಿಲ್ಲ ಎಂಬುವ ವಾಸ್ತವತೆಯನ್ನು ಕೇವಲ ದರ್ಶಿಸದೇ, ಬದಲಿಗೆ ಯುರೋಜೋನ್ನ ಒಡಕಿ ಹೋಗುವ ಸಾಧ್ಯತೆಯನ್ನು ಸೂಚಿಸಿರುವುದರಿಂದ ಅಂತಿಮವಾಗಿ ಇದು ಯುರೋಪಿನ ಒಡಕಿ ಹೋಗುವ ಕಾರಣವಾಗುತ್ತದೆ.
ಯೋಜಿತವಾದ ಆರ್ಥಿಕ ಪರಿಸ್ಥಿತಿಗಳ ಸುಧಾರಣೆ ಮತ್ತು ಕಡಿತವಾಗುತ್ತಿದ್ದ ಹಿಂಜರಿಕೆಯ ಚಿತ್ರ, ವಾಸ್ತವದಲ್ಲಿ ನಿಜವಾದ ದರಕಿಂತ ಬಹಳ ಕೆಳಗಿರುವುದು.  

ತಮ್ಮ exchequers ಮೇಲೆ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಬಹುತೇಕ ರಾಷ್ಟ್ರಗಳಲ್ಲಿ ಅನೇಕ ಕಟ್ಟುನಿಟ್ಟಾದ ಯೋಜನೆಗಳನ್ನು ಆರಂಭಿಸಿದ್ದಾರೆ.  ಉದ್ಯೋಗದ ನಷ್ಟ ಬೆಳೆಯುತ್ತಿರುವ ಅಸಹಾಯಕತೆಯ ಕಾರಣವಾಗಿ ಕುಟುಂಬ ಖರ್ಚಿನ ಶ್ರಮದಾಯಕತೆ ಮತ್ತು ಪುಷ್ಟಿಯು, ಜೊತೆಯಲ್ಲಿ ಸರ್ಕಾರಿ ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಗಮನಾರ್ಹವಾದ ಕಡಿತ ಸೇರಿಕೊಂಡು ಯುರೋಪಿನಲ್ಲೆಲ್ಲಾ ಅಸಮಾಧಾನತೆಯು ಹರಡಿರುವುದು ಕಾಣಿಸಿಕೊಳ್ಳುತ್ತಿದೆ.
ಇತ್ತೀಚಿನ ಪೂರ್ವದಲ್ಲಿ ಗ್ರೀಸ್, ಪೋರ್ಚುಗಲ್, ಇಟಲಿ, ಐರ್ಲೆಂಡ್ ಮತ್ತು ಸ್ಪೇನ್ ರಾಷ್ಟ್ರಗಳು ಸ್ಪಷ್ಟವಾಗಿ ಸಾಮಾಜಿಕ ವೆಚ್ಚದಲ್ಲಿ ಕಡಿತದ ವಿರುದ್ಧ ಈ ಪ್ರಸಿದ್ಧ ಅಸಮಾಧಾನತೆಯ ಸಾಕ್ಷಿಯಾಗಿದ್ದರು. ಆದರೂ, ಈ ಅಸಮಾಧಾನತೆ ಕೂಡ ಜರ್ಮನಿಯಂತಹ ಆರ್ಥಿಕ ಸ್ಥಿರತೆಯುಳ್ಳ ರಾಷ್ಟ್ರದಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.




ವರ್ಷ ೨೦೧೧ ರಲ್ಲಿ, ಅರಬ್ ರಾಷ್ಟ್ರಗಳಲ್ಲಿ ಕ್ರಾಂತಿಯ ಜ್ವಾಲೆ ಅವರಿಸಿದ್ದ ಸಮಯದಲ್ಲಿ ಅಮೇರಿಕಾ ಮತ್ತು ಯುರೋಪಿ ಬೀದಿಗಳಲ್ಲಿ "Occupy" ಚಳವಳಿ ದಿಗ್ಭ್ರಮೆಗೊಳಿಸುತಿತ್ತು.ಈ ಚಳವಳಿ ಬಂಡವಾಳಶಾಹಿ ಉದ್ಯಮಿಗಳ ಆಸಕ್ತಿಗಳನ್ನು ಮಾತ್ರ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಸರ್ಕಾರಗಳ ವಿರುದ್ಧ  ಗುರಿಮಾಡಲಾಗಿದ ಸಂದರ್ಭದಲ್ಲಿ  ಅಸಂಖ್ಯ ಜನರು ಬೀದಿಗಿಳಿದು ವಿರೋಧ ಪ್ರದರ್ಶಿಸಿದರು. ವಿಶ್ವದಾದ್ಯಂತ ಅನೇಕ ಪ್ರಮುಖ ನಗರಗಳು ಈ ಚಳವಳಿಯ ಸಾಕ್ಷಿಯಾಗಿದ್ದರು. ಸುಮಾರು ಒಂದು ವರ್ಷದಿಂದ ಯುರೋಪ್ನಲ್ಲಿ "Blockupy" ಹೆಸರಿನಲ್ಲಿ ಇದೇ ರೀತಿಯ ಚಳವಳಿ ಅಭಿವೃದ್ಧಿ ಹೊಂದುತ್ತಿರುವುದು, ಈಗ ಪರಿಸ್ಥಿತಿ ಅತ್ಯಂತ ವಿರುದ್ಧವಾಗಿ ಕಾಣುತ್ತದೆ ಕಾರಣ ಯುರೋಪಿನ ಬಂಡವಾಳಶಾಹಿ ಯೋಜನೆಗಳಿಂದ ಲಾಭ ಮತ್ತು ಅಭಿವೃದ್ಧಿ ಪಡೆಯುತ್ತಿರುವ ರಾಷ್ಟ್ರಗಳು ಈಗ ವಾಸ್ತವದಲ್ಲಿ ಅದೇ ವಿರೋಧದಲ್ಲಿ ಕ್ರಾಂತಿ ಎದುರಿಸುತ್ತಿವೆ. ಯುರೋಪ್ ಮತ್ತು ಆರ್ಥಿಕ ಸ್ಥಿರತೆಯುಳ್ಳ ಜರ್ಮನಿ ಕೂಡ ಈ ಪ್ರತಿಭಟನೆಯ ಮೂಲಭೂಮಿಯಾಗಿದೆ ಎಂದು ಗಮನಿಸುವುದು ಮುಖ್ಯವಾದ ವಿಷಯ. ವಿವಿಧ ಯುರೋಪಿಯನ್ ಸರ್ಕಾಗಳ ಮೇಲೆ ಯುರೋಪಿಯನ್ ಯೂನಿಯನ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಹೇರಿದ ಕಟ್ಟುನಿಟ್ಟಿನ ಕ್ರಮಗಳು ವಿರುದ್ಧವಾಗಿ ಈ ಚಳವಳಿ ನಡೆದಿದೆ. ಕಾರಣ, ಈ ಸಂಸ್ಥೆಗಳ ಮೂಲಕ ಅವರಿಗೆ  bailouts (ವಿಮೋಚನೆಗಳು) ವಿತರಿಸಲಾಗಿದೆ. ಈ ಬಿಕ್ಕಟ್ಟುಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿರುವ ಕಾರಣ ವಿವಿಧ ಯುರೋಪಿಯನ್ ದೇಶಗಳಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಎದುರುನೋಡುತ್ತಿರುವ ಅನೇಕ ಆರ್ಥಿಕವಾಗಿ ಸಮೃದ್ಧ ಪ್ರದೇಶಗಳು ಮಾಡಲಾಗಿದ ಬೇಡಿಕೆ. ಈ ಪ್ರದೇಶಗಳ ಪಟ್ಟಿ ಬಹಳ ಉದ್ದವಾಗಿದೆ ಮತ್ತು ಅವುಗಳಲ್ಲಿ ಇಟಲಿ ನಲ್ಲಿ ವೆನೆಟೊ ಹಾಗು ಲೊಂಬಾರ್ಡಿ ಪ್ರದೇಶಗಳು, ಯುನೈಟೆಡ್ ಕಿಂಗ್ಡಮ್ ಭಾಗವಾದ ಸ್ಕಾಟ್ಲೆಂಡ್, ಸ್ಪೇನ್ ನಲ್ಲಿ ಕಟಾಲೋನಿಯಾ, ಬೆಲ್ಜಿಯಂ ನಲ್ಲಿ ಫ್ಲಾಂಡರ್ಸ್, ಫ್ರಾನ್ಸ್ ನಲ್ಲಿ ಕೊರ್ಸಿಕಾ, ಮುಂತಾದವು. ಈ ಪ್ರದೇಶಗಳು ಸಮೃದ್ಧವಾಗಿದ್ದರಿಂದ ತಮ್ಮ ರಾಷ್ಟ್ರೀಯ GDPs ಮತ್ತು ತೆರಿಗೆ ಸಂಗ್ರಹಣೆಗಳಿಗೆ  ಗರಿಷ್ಠ ಕೊಡುಗೆಯನ್ನು ನೀಡುತ್ತಿದ್ದಾರೆ, ಆದರೆ ಇದಕ್ಕೆ ಪ್ರತಿಯಾಗಿ ಅವರು ಪಡೆಯುತ್ತಿರುವ ಲಾಭ, ಸೌಲಭ್ಯಗಳು ಮತ್ತು ಅಭಿವೃದ್ಧಿಯ ಯೋಜನೆಗಳು ತೀರಾ ಕೆಟ್ಟದಾಗಿವೆ. ಈ ಅಸಮಾನತೆಯು ಈಗ ಸ್ವಾತಂತ್ರ್ಯ ಅಬ್ಬರಿಸುವ ಬೇಡಿಕೆಗಳಲ್ಲಿ ರೂಪಾಂತರಿಸಿಕೊಂಡು ಈ ಪ್ರದೇಶಗಳಲ್ಲಿ ಒಂದು ದೀರ್ಘಾವಧಿಯ ಅತೃಪ್ತಿಯನ್ನು ಉದ್ದೀಪನಗೊಳಿಸಲಾಗಿದೆ. ಆದ್ದರಿಂದ, ಸಂಕ್ಷಿಪ್ತದಲ್ಲಿ, ಯುರೋಪಿನ ಆರ್ಥಿಕ ಅವನತಿ ಕೇವಲ ಯುರೋಜೋನ್ನ ವಿಘಟನೆಗೊಳಿಸುವ ಪರಿಣಾಮವಾಗದೇ, ವಿವಿಧ ಪ್ರದೇಶಗಳ ಮತ್ತು ಹಲವು ಯುರೋಪಿಯನ್ ರಾಷ್ಟ್ರಗಳ ಪ್ರಾಂತಗಳ ಬೇರ್ಪಡಿಯ ಪರಿಣಾಮವಾಗಿಸುವುದು.





ಅಮೇರಿಕನ್ ಡಾಲರ್ ಈಗಾಗಲೇ ಅಸ್ಥಿರ ಮಾರ್ಪಟ್ಟಿದ ಸಮಯದಲ್ಲಿ, ಯುರೋದ ಭವಿಷ್ಯ ಕೂಡ ಅನಿಶ್ಚಿತವೆಂದು ಕಂಡುಬರುತ್ತಿದೆ. ನಿರುದ್ಯೋಗ ಮತ್ತು ಬಡತನಗಳ ಭಾರೀ ಏರಿಕೆಯ ಜೊತೆಯಲ್ಲಿ ಯುರೋಪಿನ ಆರ್ಥಿಕ ಸ್ಥಿತಿ ಇಳಿಕೆಯಾಗುತ್ತಿರುವ ಬೆಳವಣಿಗೆಯ ದರಗಳು ಸೇರಿಕೊಂಡು ಮತ್ತೊಂದು ಕುಸಿತ ಆರಂಭವಾಗುವ ಸಂಭಾವನೆಯನ್ನು ತೋರಿಸುತ್ತಿದೆ ಎಂದು ಖಚಿತವಾಗಿ ಹೇಳಬಹುದು, ಆದ್ದರಿಂದ ಕೇವಲ ಯುರೋಜೋನ್ನಲ್ಲದೇ ಸಂಪೂರ್ಣ ಯುರೋಪ್ ಮುಳುಗಿ ಹೋಗುವ ಪರಿಣಾಮವಾಗಬಹುವುದು. ಈ ಘಟನೆಗಳ ಹಿನ್ನೆಲೆಯ ವಿರುದ್ಧವಾಗಿ ಅಮೇರಿಕನ್ ಡಾಲರ್ ವಿರುದ್ಧ ಭಾರತೀಯ ರುಪಾಯಿಯ ಭಾರೀ ಕುಸಿತ ಕಂಡು ಬಂದಿದೆ ಮತ್ತು ಇಂದಿರುವ ಮಾಹಿತಿ ಪ್ರಕಾರ ಅಮೇರಿಕನ್ ಡಾಲರ್ ವಿರುದ್ಧ ರುಪಾಯಿ ದರ 57.14 ಆಗಿದ್ದು, ಈವರೆಗಿನ ಅತ್ಯಂತ ಕಡಿಮೆ ದರಕ್ಕೆ ಇಳಿದಿರುವುದು ಗಮನಿಸಬೇಕಾಗಿದೆ.