Wednesday 27 February 2013

ಡಾ ಅನಿರುದ್ದ ಡಿ ಜೋಷಿಯವರ ಮೂರನೇ ವಿಶ್ವಯುಧ್ದ ಪುಸ್ತಕದ ಪ್ರಸ್ತಾವನೆ



ಕಾರಣವೆಂದರೆ........

ಮೂರನೆ ಸಹಸ್ತ್ರಕ ಆರಂಭವಾದಾಗಲೇ ಅಂದರೆ 11 ಸಪ್ತೆಂಬರ್ 2001 ರಂದು ಜಗತ್ತಿನ ಪ್ರತಿಯೊಂದು ರಾಷ್ಟ್ರವು ತನ್ನ ಸಂರಕ್ಷಣೆ ಮತ್ತು ಭವಿಷ್ಯದ ರಾಜಕೀಯ ಧೋರಣೆಯನ್ನು ಹೊಸತಾಗಿ ಪುನರ್ವಿಚಾರ ಮಾಡತೊಡಗಿತು. ಜಗೆತ್ತಿನ ಬಹುತೇಕ ಪ್ರಮುಖ ರಾಷ್ತ್ರಗಳಿಗೆ ಆತಂಕವಾದದ ಮಾರ್ಗಗಳ ಮೊದಲೇ ಪರಿಚಯವಾಗಿತ್ತು. ಅಮೇರಿಕಾ ಮತ್ತು ರಶ್ಯವು ಇಂತಹ ಆತಂಕವಾದಿಗಳ ಸಂಘಟನೆಗಳನ್ನು ಒಬ್ಬರೊಬ್ಬರ ವಿರುದ್ಧ ಪ್ರೋತ್ಸಾಹನೆ ಕೊಟ್ಟು ಉಪಯೋಗಿಸಿದ್ದರು. ಆದರೆ ಸಪ್ಟೆಂಬರ್ 11 ರಂದು ಆದ ಘಟನೆಯು ಕಡಿಮೆ ಸಮಯದಲ್ಲಿ ಹಾಗು ಕಡಿಮೆ ಖರ್ಚಿನಲ್ಲಿ ಆಗಿ ಹೋದದ್ದರಿಂದ ಆತಂಕವಾದಿಗಳ ಒಳಸಂಚಿನ ನಿಜ ಸಾಮರ್ಥ್ಯ ಪೃಥ್ವಿ ಮೇಲಿನ ಏಕಮೇವರಾಗಿರುವ ಅನಿರ್ಬಂಧರಾದ  ಅಮೇರಿಕೆಗೆ ಪೂರ್ಣವಾಗಿ ಅರಿವಾಯಿತು. ಕಳೆದ ಹಲವು ವರ್ಷಗಳಿಂದ ಭಾರತವು ಅನುಭವಿಸುತ್ತಿರುವ ಈ ಆತಂಕವಾದಿಗಳ ಒಳಸಂಚಿನ ಅನುಭವ ಅಮೇರಿಕಯ ಹಣೆಯ ಮೇಲೆ ಇಷ್ಟು ಜೋರಾಗಿ ಅಪ್ಪಳಿಸಿತು ಎಂದರೆ ಒಂದೇ ಕ್ಷಣದಲ್ಲಿ ಅಮೇರಿಕೆಯ ಮುಖ ಪೂರ್ಣವಾಗಿ ಸುಟ್ಟಿ ಹೋಯಿತು ಹಾಗು ಅಷ್ಟರ ತನಕ ಭಾರತವು ಆತಂಕವಾದಿಗಳ ಒಳಸಂಚಿನಕುರಿತಾಗಿ ಮಂಡಿಸಿದ ಪುರಾವೆಯನ್ನು ದುರ್ಲಕ್ಸಿಸಿದ ಅಮೇರಿಕೆಗೆ ಒಂದುಕಾಲದಲ್ಲಿ ತಾವೇ ಬೆಂಬಲಕೊಟ್ಟು ಜೋಪಾನ ಮಾಡಿದ ಈ ಆತಂಕವಾದಿಗಳ ವಿರುದ್ಧ ದೃಢದಿಂದ ಬಹಿರಂಗವಾಗಿ ನಿಲ್ಲಲೇಬೇಕಾಯಿತು.

ಈ ಲೇಖಮಾಲೆಯ ವಿಷಯ ಕೇವಲ ಆತಂಕವಾದ ಹಾಗು ಆತಂಕವಾದಿಗಳ ವಿರುದ್ಧ ಯುದ್ಧವಲ್ಲದೆ ಬರುವ ಕಾಲದಲ್ಲಿ ತೋರಿಬರುತ್ತಿರುವ ಜಾಗತೀಕ ಬದಲಾವಣೆಯ ಸಾಧ್ಯತೆಯ ವಿಚಾರವನ್ನು ಇಷ್ಟರವರೆಗೆ ಘಟಿಸಿದ ಘಟನೆಯ ಅಭ್ಯಾಸದ ಆಧಾರದ ಮೂಲಕ ಮಾಡುವುದಾಗಿದೆ.

ಸಂಘರ್ಷವೇ ಮುಂದೆ ಬರಲಿರುವ ಇಪತ್ತರಿಂದ ಇಪ್ಪತ್ತೈದು ವರ್ಷಗಳ ಕಾಲಕ್ಕಾಗಿ ಪೃಥ್ವಿಯ ಮೇಲೆ ಪ್ರತಿಯೊಂದು ಸ್ಥಳದಲ್ಲಿ ದೈನಂದಿನ ವ್ಯವಹಾರವಾಗಲಿದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯವೆಂದರೆ ಈ ಸಂಘರ್ಷದಲ್ಲಿ ಸೈಧ್ಯಾಂತಿಕ ಅಥವಾ ತಾತ್ವಿಕ ಮೂಲ್ಯಕ್ಕೆ ಯಾವುದೇ ಸ್ಥಾನವಿರುವದಿಲ್ಲ "ಬಲವೇ ಶ್ರೇಷ್ಟ"ವೆಂಬುವದು ಏಕಮೇವ ಸಿದ್ಧಾಂತವಾಗಲಿದೆ.  ಅದಕ್ಕಾಗಿ ರಾಜಕೀಯ ಕುಟಿಲಯುಕ್ತಿ ಹಾಗು ಕೂಟನೀತಿಗಳ ಉಪಯೋಗವಾಗಲಿದ್ದರೂ ಆಕ್ರಮಕ, ಹಿಂಸಕ ಹಾಗು ಅತ್ಯಂತಿಕ ಕ್ರೌರ್ಯದ ಅವಲಂಬನೆ ಮಾಡುವ ಸಂಖ್ಯಾತ್ಮಕ  ಬಲವು ಬಹಳ ಕಾಲದ ತನಕ ಈ ಸಂಘರ್ಷದಲ್ಲಿ ಅಧಿಕ ಬಲಶಾಲಿ ಹಾಗು ಯಶಸ್ವಿ ಆಗಲಿದೆ. ಒಮ್ಮೆ ಈ ಯುದ್ಧವು ಪ್ರಾರಂಭವಾಯಿತೆಂದರೆ ಹಾಗು ಅದರಲ್ಲಿ ಎರಡು ಕಡೆಯಿಂದ ಅಧಿಕಾಧಿಕ ಮಿತ್ರ ರಾಷ್ಟ್ರಗಳ ಸಮಾವೇಶವಾಗತೊಡಗಿದಾಗ ಅದೇ ಗತಿಯಲ್ಲಿ ಒಂದೊಂದೇ ಎಲ್ಲ ನೀತಿಮೂಲ್ಯಗಳ ಹಾಗು ಮರ್ಯಾದೆಗಳ ಉಲ್ಲಂಘನೆಯು ಬಹಿರಂಗವಾಗಿ ಆರಂಭವಾಗುವದು ಮತ್ತು ಅದರಲ್ಲಿ ತಮ್ಮ ಕೃತ್ಯಕ್ಕೆ ಸೋಗುಹಾಕಿ ನೈತಿಕ ಸಮರ್ಥನೆಯನ್ನು ಕೊಡುವ ಅವಶ್ಯಕತೆಯು ಯಾವ ಪಕ್ಶವು ಕೂಡ ಮಾಡಲಿಚ್ಛಿಸುವದಿಲ್ಲ ಇದು ಈಗಲು ಕೂಡ ಕೆಲವು ಅಂಶದಲ್ಲಿ ಅಗುತ್ತಲಿದೆ ಮತ್ತು ಇನ್ನು ಪ್ರತಿ ವರ್ಷಕ್ಕೆ ಇದರ ಪ್ರಮಾಣ ಪ್ರಚಂಡ ವೇಗದಲ್ಲಿ ಹೆಚ್ಚುತ್ತ ಹೋಗುವದು.


ಸಾಮನ್ಯ ಜನರ ಅಥವಾ ಕೆಲವು ಸಲ ರಾಜಕೀಯ ನೇತೃತ್ವದವರ ಕೂಡ ಯುದ್ಧಚರ್ಚೆ ಹಾಗು ಯುದ್ಧಮಿಮಾಂಸೆ ಇದು ಬಹಿರಂಗವಾಗಿ ಆಗಲು ಸಾಧ್ಯವೇ ಇಲ್ಲವೆಂದು ಅವರ ವಿಚಾರವಿರುವದು ಯಾಕೆಂದರೆ ಯುದ್ಧವೆಂದರೆ ರಹಸ್ಯಮಯ ಒಳಸಂಚಿನ ಆಕಸ್ಮಿಕ ಪ್ರಗಟಣೆಯ ಆವಿಷ್ಕಾರವಿರುವದು. ಅದರ ಜೊತೆ ಭಾರತದವರೇ ಆಗದೆ ಜಗತ್ತಿನ ಪ್ರತಿಯೊಂದು ದೇಶದ ತೊಂಬತ್ತು ಪ್ರತಿಶೇಕಡಕ್ಕಿಂತ ಹೆಚ್ಚು ಜನತೆಯರು ಯುದ್ಧ, ಯುದ್ಧದ ಹಿನ್ನೆಲೆಯ ರಾಜಕೀಯ ಕಾರಣ ಹಾಗು ಅದರ ಪರಿಪೂರ್ತಿ ಇದರ ವಿಷಯವಾಗಿ ಕೇವಲ ಅಲ್ಪ ಮಾಹಿತಿಯ ಮೇಲೆ ಯುದ್ಧದ ವಿಷಯವಾಗಿ ವಿಚಾರ ಮಾಡಬಲ್ಲರು ಆದರೆ ಯುದ್ಧದ ಪರಿಣಾಮ ಮಾತ್ರ ಈ ಸಾಮಾನ್ಯ ಜನತೆಯರಿಗೆ ನೂರು ಪಾಲಿನಷ್ಟು  ಸಹಿಸಬೇಕಾಗುವದು ಮತ್ತು ಹೊರೆಯಬೇಕಾಗುವದು.
                    
ಕೇವಲ ಪ್ರಜಾಸತ್ತಾತ್ಮಕವೇ ಈ ಯುದ್ಧದ ಭೀಷಣ ಸ್ವರೂಪವನ್ನು ಸೌಮ್ಯ ಮಾಡುವ ಏಕಮೇವ ಶಕ್ತಿಯಾಗಿರುವದು ಆದರೆ ಇಂದು ಜಗತ್ತಿನ ಎಷ್ಟು ರಾಜ್ಯದಲ್ಲಿ ಇಂತಹ ನಿಜವಾದ ಪ್ರಜಾಸತ್ತೆಯಿದೆ? ಸಂಸದೀಯ ಪ್ರಜಾಸತ್ತಾತ್ಮಕದ ಜನಕತ್ವವನ್ನು ಮೆರೆಯುವ ಬ್ರಿಟನ್ನಿನಲ್ಲಿ ಕೂಡ ಲೋಕಸತ್ತೆಯು ಭ್ರಷ್ಟಾಚಾರ ಹಾಗು ಸುಂದೋಪಸುಂದಿನದಿಂದ ಕ್ಸೀಣವಾಗುತ್ತ ಹೋಗುತ್ತಿದೆ. ಭಾರತದಂತ ಭೂಖಂಡ ದೇಶದಲ್ಲಿ ಭದ್ರವಾಗಿ ನೆಟ್ಟಿದ ಲೋಕಸತ್ತೆಯು ಕೂಡ, ಅಸಂಖ್ಯೆ ಚಿಕ್ಕ-ದೊಡ್ಡ ಪಕ್ಷದ ಕಾರಣದಿಂದಾಗಿ ದಿಶೆಹೀನವಾಗುತ್ತಿದೆ  ಹಾಗು ಭ್ರಷ್ಟಾಚಾರದ ಜೋರಾಗಿ ಸತತ ಸುರಿಯುತ್ತಿರುವ ಮಳೆಯಿಂದಾಗಿ "ಒದ್ದೆ ಬರಗಾಲದ" ದು:ಖ ಅನುಭವಿಸುತ್ತಿದೆ. ರಶಿಯ ಮತ್ತು ಚೀನ ಈ ಎರಡು ಮಹಾಸತ್ತಾತ್ಮಕದ ಹತ್ತಿರ ಲೋಕಸತ್ತೆಯು ಒಂದಂಶ ಕೂಡ ಸಂಶೋಧನೆಗಾಗಿಯೂ ಉಳಿದಿಲ್ಲ. ಅಮೇರಿಕೆಯ ಲೋಕಸತ್ತೆಯು ಆ ದೃಷ್ಟಿಯಿಂದ ನೋಡಲು ಅಧಿಕ ಸಶಕ್ತ ಹಾಗು ಸಕ್ಷಮ ಕಾಣುತ್ತಿದ್ದರು ಅತ್ಯಂತ   ವೇಗದಿಂದ ತರುಣ ವರ್ಗದಲ್ಲಿ ವ್ಯಸನದ ಪ್ರಮಾಣ ಹೆಚ್ಚುತ್ತಿದ್ದು ಮುಲ ಅಮೇರಿಕ ನಾಗರಿಕರಲ್ಲಿ ಉಚ್ಚಶಿಕ್ಸಣದ ಪ್ರಮಾಣ ಕಡಿಮೆ ಆಗುತ್ತಿದೆ, ಈ ಸಮಸ್ಯದೊಡನೆ ನಾಗರಿಕರ ಸಹಭಾಗ ಕಡಿಮೆಯಾಗುತ್ತಿರುವದರಿಂದ ಅಮೇರಿಕದ ಲೋಕಸತ್ತೆಯು ಕೂಡ ದೋಷರಹಿತವಾಗಿ ಉಳಿಯಲಿಲ್ಲ. ಅದರಲ್ಲಿ ಅಮೇರಿಕೆಯ ಗುಪ್ತಚರ ಸಂಘಟನೆಗಳು ಸ್ಥಾಪಿಸಿದ ಪ್ರಚಂಡ ಹಾಗು ಪ್ರಸಾರ ಶಾಖೆಗಳು ಅಮೇರಿಕೆಯಲ್ಲದೆ ಇತರ ದೇಶಗಳ ಪ್ರಸಾರಮಾಧ್ಯಮಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯಶಸ್ವಿಯಾಗುತ್ತಿದೆ.  ಭಾರತದ ಜನ್ಮ ಶತ್ರುವಾದ ಪಾಕಿಸ್ತಾನವೇ ಆತಂಕವಾದಿ ಗ್ರಂಥದ "ಅಮಂಗಲಾಚರಣ" ವಾಗಿದೆ ಹಾಗು ಇನ್ನು ಮುಂದಿನ ಕಾಲದಲ್ಲಿ ಪಾಕಿಸ್ತಾನ ಬಹಿರಂಗವಾಗಿ ಈ ಯುದ್ಧನಾಟ್ಯದ ಕಥೆಯನ್ನು ಆತಂಕವಾದಿಯ ನೇಪಥ್ಯದಿಂದ ಸಿಂಗರಿಸಲು ಆರಂಭಿಸಲಿದೆ.

ಮುಂದಿನ ಕಾಲದಲ್ಲಿ ಇವತ್ತಿನ ಸಮೀಕರಣ ನಾಳೆ ಇದ್ದೆ ಇರಬಹುದಿಂದಿಲ್ಲ, ಹಾಗಿರುವಾಗ ಬೆಳಗ್ಗಿನ ಏಳು ಗಂಟೆಯ ಸಮೀಕರಣ ಏಳಾಗಿ ಐದು ನಿಮಿಷದಲ್ಲಿ ಮೂಲ ಉದ್ದೇಶ ಸಾಧ್ಯವಾದ ಕೂಡಲೇ ಸಂಪೂರ್ಣವಾಗಿ ಎಸೆದುಬಿಟ್ಟದ್ದನ್ನು ಕಾಣಲು ಸಿಗುವದು.

ಇದು ಭವಿಷ್ಯಕಥೆನೆಯಲ್ಲ. ಈ ಅಭ್ಯಾಸ ಇತಿಹಾಸದದ್ದು ಮತ್ತು ಇಂದಿನ ಸ್ಥಿತಿಗಳ ಹಾಗು ಈ ಸಂಶೋಧನೆಯು ಜಾಗತಿಕ ರಂಗಮಂಚದ ಮೇಲಿನ ವಿವಿಧ ಪಾತ್ರಗಳ ಮನೋಗತದ. ಬರುವ ಇಪ್ಪತ್ತು ವರ್ಷದಲ್ಲಿ ಅಕ್ಷರಶ: ನೂರಾರು ಸ್ಥಳಗಳಲ್ಲಿ ಸಾವಿರಾರು ಘಟನೆಗಳು ಘಟಿಸಲಿರುವ ಅರಿವು ಪ್ರತಿಯೊಬ್ಬ ಸುಬುದ್ಧಿಗೆ ಹಾಗು ಕಲಿತ ವಿಚಾರವಂತನಿಗಾಗುತ್ತಿದೆ. ಈ ಕ್ಷಣಕ್ಕೆ ನೂರು ಘಟನೆಗಳಾಗುತ್ತಿರಬಹುದು ಆದರೆ ಇಲ್ಲಿ ಮಾತ್ರ ಕೇವಲ ಲೆಕ್ಕಮಾಡಿ ಹತ್ತು ಪ್ರಾತಿನಿಧಿಕಗಳ ಉಲ್ಲೇಖವಿದೆ. ಆದಕಾರಣ ಇನ್ನುಳಿದ ತೊಂಬತ್ತು ಘಟನೆಗಳ ದಾಖಲೆ ಮಾಡಲಿಲ್ಲ ಅಷ್ಟೆ, ಆದರೆ ಅದರ ಅಂತರ್ಭಾವ ಅಭ್ಯಾಸದಲ್ಲಿ ಖಂಡಿತ ಮಾಡಲಾಗಿದೆ.

ಪ್ರತಿವರ್ಷ ಕ್ಯಾಲೆಂಡರ್ (ದಿನದರ್ಶಿಕೆ) ಬರುವದು, ಕಾರಣ ಅದರಲ್ಲಿ ಒಂದು ನಿಶ್ಚಿತವಾದ ಸ್ವರೂಪದ ಗಣಿತ ಸೂತ್ರವಿದ್ದು ರಚನೆಯು ಇರುವದು ಆದರೆ ಬರಲಿರುವ "ಮೂರನೇ ಮಹಾಯುದ್ಧದ" ಕ್ಯಾಲೆಂಡರ್ ಮಾತ್ರ ದಿನನಿತ್ಯ ಹೊಸತಿರುವದು. 

ನನ್ನಂತಹ ನನ್ನ ಸಾಮಾನ್ಯ ಮಿತ್ರರಿಗೆ ಈ ಮೂರನೇ ಮಹಾಯುದ್ಧದ ಕಿಂಚಿತವಾಗಿ ಎರಡಂಶದಷ್ಟಾದರು ಪರಿಚಯವಾಗಲೆಂದು ಮಾಡಿದ ಈ ಲೇಖನಪ್ರಪಂಚ.
                                                                                                                                             .... ನನ್ನ ಮಿತ್ರರಿಗೆ,

No comments:

Post a Comment