Saturday, 20 September 2014

ವಿದ್ಯುತ್ ಪ್ರವಾಹಗಳ ಯುದ್ಧ

ಒಂದು ವೇಳೆ ನಿಕೋಲಾ ಟೇಸಲಾರವರ ನಂಬಿಕೆಗಳು ನಿಜವಾದರೆ ತನ್ನ ವ್ಯವಹಾರದ ಸಾಮ್ರಾಜ್ಯಕ್ಕೆ ಅಪಾಯವಿದೆಯೆಂದು ಥೋಮಸ್ ಎಡಿಸನ್ ಬಹಳ ಅಸ್ತವ್ಯಸ್ತನಾಗಿದ್ದನೆಂದು ನಾವು ಕಳೆದ ವಾರ ನೋಡಿರುವೆವು. ಆದ್ದರಿಂದ  ಟೇಸಲಾನ ಆಲ್ಟರ್ ನೆಟಿಂಗ್ ಕರಂಟಿನ (ಪರ್ಯಾಯ ವಿದ್ಯುತ್ ಪ್ರವಾಹ) ನಂಬಿಕೆಗಳನ್ನು ಎಡಿಸನ್ ನು ನಿಷೇದಿಸಿ ಅವರ ಪರಿಹಾಸ್ಯ ಮಾಡಿದ್ದರೂ ನಿಕೋಲಾ ಟೇಸಲಾನೊಬ್ಬ ಬಹಳ ಪ್ರತಿಭಾಶಾಲಿಯಾಗಿದ್ದು ಅವನನ್ನು ತನ್ನಲ್ಲಿ ಕೆಲಸದಲ್ಲಿಟ್ಟರೆ ಅವನೇ ನನ್ನ ವ್ಯವಹಾರದ ಸಾಮ್ರಾಜ್ಯವನ್ನು ಮುಂದೆ ತರಲು ಸಹಾಯ ಮಾಡಬಹುದೆಂಬ ವಿಶ್ವಾಸ ಎಡಿಸನ್ ಗಿತ್ತು. ಅವನಿಗೆ ಆಲ್ಟರನೇಟಿಂಗ್ ಕರಂಟ್ ಮತ್ತು ರೊಟೇಟಿಂಗ್ ಮ್ಯಾಗನೆಟ್ಸ್ ಬಗ್ಗೆ ಹೆಚ್ಚು ಅರ್ಥವಾಗದಿದ್ದರೂ ಟೇಸಲಾ ಮಾತ್ರ ಬಹಳ ಪ್ರತಿಭಾಶಾಲಿ ವ್ಯಕ್ತಿಯೆಂದು ತಿಳಿದಿತ್ತು. ಆದ್ದರಿಂದ ಅವನು ತನ್ನ ವ್ಯವಹಾರವನ್ನು ಹೆಚ್ಚು ಶಕ್ತಿಶಾಲಿ ಮಾಡಲು ಟೇಸಲಾರ ಪ್ರಭುತ್ವದ ಉಪಯೋಗವನ್ನು ಮಾಡುವ ನಿಶ್ಚಯ ಮಾಡಿದನು. ಆದ್ದರಿಂದ ಎಡಿಸನ್ ಇದಕ್ಕೆ ವಿರೋಧ ಮಾಡುವದಕ್ಕಿಂತ ನಿಕೋಲಾ ಟೇಸಲಾರನ್ನು ತನ್ನ ಸಹಕಾರಿಯೆಂದು ಮಿತಸಂಬಳ ಕೊಟ್ಟು ಭರ್ತಿಮಾಡಿಕೊಂಡನು. ಎಡಿಸನ್ ನಿನ ಕಂಪನಿಯು ತನ್ನ ಕೈಕೆಳಗಿರುವರಿಗೆ ಸಂಬಳ ಕೊಡುವ ಬಗ್ಗೆ ಜಿಪುಣನಾಗಿರುವುದಾಗಿ ಪ್ರಸಿದ್ಧವಾಗಿತ್ತು.

 ಥೋಮಸ್ ಎಡಿಸನ್ ಮತ್ತು ಡಾ. ನಿಕೋಲಾ ಟೇಸಲಾ

ಆದ್ದರಿಂದ ೧೮೮೪ ರರಿಂದ ನಿಕೋಲಾ ಟೇಸಲಾರು ಎಡಿಸನ್ ಮಶೀನ್ ವರ್ಕ್ಸ್ ಗಾಗಿ ಕೆಲಸ ಮಾಡತೊಡಗಿದರು. ಪ್ರಾರಂಭದಲ್ಲಿ ಟೇಸಲಾರವರಿಗೆ ವಿದ್ಯುತ್ ಯಂತ್ರಗಳ ಬಹಳ ಸಾಮಾನ್ಯ ಕೆಲಸಗಳನ್ನು ಕೊಡಲಾಯಿತು, ಆದರೆ ಅದರ ನಂತರ ತಕ್ಷಣವೇ ಕಂಪನಿಗೆ ಎದುರು ಬಂದ ಬಹಳ ತೊಡಕಾದ ಸಮಸ್ಯೆಗಳನ್ನು ಬಿಡಿಸುವ ಕೆಲಸವನ್ನು ಒಪ್ಪಿಸಲಾಯಿತು. ಟೇಸಲಾ ಅವರ ಪ್ರಥಮ ಭೇಟಿಯ ಸಮಯದಲ್ಲಿ ಎಡಿಸನ್ ನ ಡೀಸಿ ಸಿಸ್ಟಮ್ ನನ್ನು ವಿರೋಧ ಮಾಡಿದ್ದರೂ ಡೀಸಿ   ಸಿಸ್ಟಮ್ ನ ಕಾರ್ಯ ಪದ್ಧತಿಯನ್ನು ಕಣ್ಣು ಮುಚ್ಚಿ ಪೂರ್ಣವಾಗಿ ಅದನ್ನು ತ್ಯಜಿಸದೆ ಅದರಲ್ಲಿಯೇ ತನ್ನ ವಿಚಾರ ಮತ್ತು ಅಭಿಪ್ರಾಯವನ್ನು ಉಪಯೋಗಿಸಿ ಅವರಲ್ಲಿಯ ಡೀಸಿ ಸಿಸ್ಟಮಿನಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇನ್ನೂ ಒಳ್ಳೆಯ ರೀತಿಯ ಬದಲಾವಣೆಯನ್ನು ಮಾಡಿದರು.

ಇಲ್ಲಿ ನಾನು ತಪ್ಪು ಸಂಕಲ್ಪನೆಯ ಬಗ್ಗೆ ಸ್ಪಷ್ಟ ಮಾಡಲಿಚ್ಛಿಸುವೆನು. ಕೆಲವು ಪಾಠಗಳಲ್ಲಿ ಮತ್ತು ಸಂದರ್ಭಗಳಲ್ಲಿ ಡಾಯ್ ರೆಕ್ಟ್ ಕರಂಟಿನ ವಿದ್ಯುತ್ತನ್ನು ಎಡಿಸನ್ ಥೋಮಸ್  ಆವಿಷ್ಕಾರ ಮಾಡಿರುವರೆಂದು ಕೊಡಲಾಗಿದೆ. ಆದರೆ ನಿಜವಾದರೆ ಮೈಕಲ್ ಫರಾದಯ್ ಅವರು ೧೮೨೧ ರಲ್ಲಿ ಎಲೆಕ್ಟ್ರಿಕ್ ಮೋಟರ್ ನ ಆವಿಷ್ಕಾರ ಮಾಡಿದಾಗ ಮೊದಲ ಬಾರಿಗೆ ಡಾಯ್ ರೆಕ್ಟ್ ಕರಂಟ್ ನ್ನು ಉಪಯೋಗಿಸಿದ್ದರು ಆದರೆ ’ಡಾಯ್ ರೆಕ್ಟ್ ಕರಂಟ್ ’ನ ಹೆಸರನ್ನು ನಮೂದಿಸಲಿಲ್ಲ. ಎಡಿಸನ್ ಕೇವಲ ಈ ಡೀಸಿ ಪಾವರನ್ನು ವಿದ್ಯುತ್ತನ್ನು ದೂರದ ಅಂತರಕ್ಕೆ ಕಳಿಹಿಸುವಾಗ ತನ್ನ ಪಾವರ್ ಸಿಸ್ಟಮಿನಲ್ಲಿ ಉಪಯೋಗಿಸುವದಕ್ಕಾಗಿ ಅಂಗೀಕರಿಸಿದ್ದನು. ಆದ್ದರಿಂದ ಡೀಸಿ ಪಾವರಿನ ಉತ್ಪತ್ತಿಯು ಥೋಮಸ್ ಎಡಿಸನ್ ಕ್ಕಿಂತ ಮೊದಲೇ ಉಪಯೋಗದಲ್ಲಿತ್ತು.

ಥೋಮಸ್ ಎಡಿಸನ್ ಕೇವಲ ವಿದ್ಯುತ್ ಲಾಯಿಟ್ ಬಲ್ಬನ್ನು ಮಾತ್ರ ಜಗತ್ತಿಗೆ ತೋರಿಸಿದನು ಮತ್ತು ನಿಕೋಲಾ ಟೇಸಲಾರವರನ್ನು ಕೆಲಸದಲ್ಲಿಟ್ಟ ಸಮಯದಲ್ಲಿ ಅವನಿಗೆ ತನ್ನ ಗ್ರಾಹಕರ ಮನೆ-ಮನೆಗೆ ವಿದ್ಯುತ್ತನ್ನು ಸಂಚಲಿಸಲು ಒಂದು ಸಿಸ್ಟಮಿನ (ರಚನೆಯ) ಆವಶ್ಯಕತೆಯಿತ್ತು. ಆದರೆ ಎಡಿಸನ್ ನ ಇಂಜಿನಿಯರುಗಳು ತಯಾರಿಸಿದ್ದ ಡೀಸಿ ಸಿಸ್ಟಮಿನಲ್ಲಿ ಹಲವು ತಪ್ಪುಗಳು ಹಾಗು ಲೋಪಗಳಿದ್ದವು ಎಂದು ಹೇಳಲಾಗುತ್ತದೆ. ಆದರೆ ಎಡಿಸನ್ ಮಶೀನ್ ವರ್ಕ್ಸ್ ದಲ್ಲಿ ಕೂಡ ನಿಕೋಲಾ ಟೇಸಲಾರವರನ್ನು ಬಹಳ ಪ್ರತಿಭಾಶಾಲಿಯೆಂದು ಆದರಿಸಲಾಗುತ್ತಿತ್ತು. ಆದ್ದರಿಂದ ಎಡಿಸನ್ ನ ಡಾಯ್ ರೆಕ್ಟ್ ಕರಂಟ್ ಜನರೇಟರನ್ನು ಪುನ: ತಯಾರಿಸಲು ಟೇಸಲಾರವರಿಗೆ ಹೇಳಲಾಯಿತು. ಮತ್ತು ಅದು ಯಶಸ್ವಿಯಾದರೆ ಟೇಸಲಾರವರಿಗೆ ಐವತ್ತು ಸಾವಿರ ಡಾಲರ್ಸ್ ನ್ನು ಕೊಡಲು ಎಡಿಸನ್ ಒಪ್ಪಿದನು. ಎರಡು ತಿಂಗಳಿನಲ್ಲಿ ತನ್ನ ಕಠಿಣ ಪರಿಶ್ರಮದಿಂದ ಟೇಸಲಾರವರು ಪುನ: ಅದನ್ನು ಹೊಸ ಸ್ವರೂಪದಲ್ಲಿ ತಯಾರಿಸಿ ಯಶಸ್ವಿಯಾದರು. ಇದರ ಫಲಿತಾಂಶವಾಗಿ ಎಡಿಸನ್ ಮಶೀನ್ ವರ್ಕ್ಸ್ ಗೆ ಲಕ್ಷಗಟ್ಟಲೆ ಡಾಲರ್ಸಿನ ಉಳಿತಾಯವಾಯಿತು. ಇವತ್ತಿನ ಕಾಲದಲ್ಲಿ  ಅದನ್ನು ರೂಪಾಂತರಪಡಿಸಿದರೆ ಅದರ ನಿರ್ದಿಷ್ಟಮಾನ ಬಿಲಿಯನಷ್ಟು ಆಗಬಹುದು. ಆದ್ದರಿಂದ ಎಡಿಸನ್ ತನ್ನ ಕಂಪನಿಯಲ್ಲಿ ಸರಿಪಡಿಸಿದ ಡೀಸಿ ಸಿಸ್ಟಮ್ ನನ್ನು  ಉಪಯೋಗಿಸಿದಾಗ ಅದನ್ನು ಡಾ. ನಿಕೋಲಾ ಟೇಸಲಾರವರೇ ಪುನ; ತಯಾರಿಸಿದ್ದಾಗಿತ್ತು.

ತನಗೆ ಕೊಟ್ಟ ಕಾರ್ಯವನ್ನು ನಿಕೋಲಾ ಟೇಸಲಾರವರು ಸಾಧಿಸಿದ್ದರಿಂದ ತನ್ನ ಬಹುಮಾನದ ಬಗ್ಗೆ ಅವರು ಎಡಿಸನ್ ನನ್ನು ಕೇಳಿದರು. ಆದರೆ ಥೋಮಸ್ ಎಡಿಸನ್ ತನ್ನ ಮಾತನ್ನಿಡದೆ ನಾನು ಕುಚೇಷ್ಟೆ ಮಾಡಿದ್ದೇನೆಂದಾಗ ಅವರಿಗೆ ಬಹಳ ಆಶ್ಚರ್ಯ ಮತ್ತು ವೇದನೆ ಆಯಿತು. ಅವನು ಟೇಸಲಾರವರು ’ಸರ್ಬಿಯನ್” ಟೇಸಲಾನು ’ಅಮೇರಿಕದ ಹಾಸ್ಯ’ವನ್ನು ಅರ್ಥಮಾಡಿಕೊಳ್ಳಲಿಲ್ಲವೆಂದು ಅವರ ಅಪಹಾಸ್ಯ ಮಾಡಿದನು. ಎಡಿಸನ್ ಮಾನ್ಯ ಮಾಡಿದ ಐವತ್ತು ಸಾವಿರ ಡಾಲರ್ಸ್ ನ್ನು ಕೊಡುವ ಬದಲು ಟೇಸಲಾರವರ ಸಂಬಳದಲ್ಲಿ ಮಿತ ಹಣವನ್ನು ಹೆಚ್ಚಿಸಿ ಕೊಡಲು ಒಪ್ಪಿದನು. ವಿಶ್ವಾಸಘಾತ ಮಾಡಿದ್ದರಿಂದ ಟೇಸಲಾರವರು ತನ್ನ ಗೌರವವನ್ನು ಉಳಿಸಲೆಂದು ಎಡಿಸನ್ ನ ಕೆಲಸವನ್ನು ತ್ಯಜಿಸಿದರು. ಎಡಿಸನ್ ಆ ಕ್ಷಣದಿಂದಲೇ ಟೇಸಲಾರವರ ಜೊತೆ ವೈರತ್ವ ಸಾಧಿಸಿ ನಿಕೋಲಾ ಟೇಸಲಾರವರ ಬಗ್ಗೆ ಅಪಕೀರ್ತಿ ಹಾಗು ಅವರ ಶೋಧನೆಗಳಿಗೆ ವಿರೋಧ ಮಾಡಿ ತನ್ನ ಉಳಿದ ಆಯುಷ್ಯವನ್ನು ಕಳೆದನು.

ಈ ಘಟನೆಯು ಥೋಮಸ್ ಎಡಿಸನ್ ರನ್ನು ಡಾ. ನಿಕೋಲಾ ಟೇಸಲಾರವರ ಘೋರ ವಿರೊಧಕರನ್ನಾಗಿ ಮಾಡಿತು. ಎಡಿಸನ್ ಎಲ್ಲಾ ತರಹದಲ್ಲಿ ಡಾ. ನಿಕೋಲಾ ಟೇಸಲಾರವರನ್ನು ದೂಷಿಸಿದರು ಮತ್ತು ಅವರ ಶೋಧನೆಗಳು ಮಾನವ ಜೀವನಕ್ಕೆ ಬಹಳ ಹಾನಿಕಾರಕವಾಗಿ ಅದು ಉಪಯೋಗದಲ್ಲವೆಂದು ಸಾಧಿಸ ತೊಡಗಿದರು ಟೇಸಲಾರವರನ್ನು ನಿರ್ನಾಮಮಾಡಲು ಎಡಿಸನ್ ಪ್ರಯತ್ನಿಸಿದ ಪ್ರತಿಯೊಂದು ಘಟನೆಗಳ ಸರದಿಗಳನ್ನು ’ವಾರ್ ಆಫ್ ಕರಂಟ್ಸ್ (ವಿದ್ಯುತ್ ಪ್ರವಾಹಗಳ ಯುದ್ಧ) ಎಂದು ಪ್ರಸಿದ್ಧವಾಯಿತು.

ಎಡಿಸನ್ ನಲ್ಲಿ ರಾಜೀನಾಮೆ ಕೊಟ್ಟು ಟೇಸಲಾರವರು ತನ್ನದೇಯಾದ ಟೇಸಲಾ ಎಲೆಕ್ ಟ್ರಿಕ್ ಲಾಯಿಟ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಆರಂಭಿಸಿದರು. ಇದರ ನಂತರ ನಿಕೋಲಾ ಟೇಸಲಾರವರು ಟೇಸಲಾ ಎಲೆಕ್ರ್ಟಿಕ್ ಕಂಪನಿ ಮಾಡಿದರು. (ಇವೆರೆಡರ ಬಗ್ಗೆ ನಾವು ಡಾ. ನಿಕೋಲಾ ಟೇಸಲಾರವರ ಮುಂದಿನ ಲೇಖನದಲ್ಲಿ ನೋಡಲಿರುವೆವು) ಅಂತ್ಯದಲ್ಲಿ ಟೇಸಲಾರವರು  ಜೊರ್ಜ್ ವೆಸ್ಟಿಂಗ್ ಹೌಸಿನ ವೆಸ್ಟಿಂಗ್ ಹೌಸ್ ಎಲೆಕ್ರ್ಟಿಕ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಸೇರಿದರು. ಆ ಸಮಯದಲ್ಲಿ ಪಾವರ್ ಇಂಡಸ್ಟ್ರಿಯಲ್ಲಿ ಇವರೊಬ್ಬರು ಪ್ರತಿಷ್ಟಿತ ವ್ಯಕ್ತಿಯಾಗಿದ್ದರು. ಟೇಸಲಾರವರೊಡನೆ ಕೂಡಿ ವೆಸ್ಟಿಂಗ್ ಹೌಸರವರು ತನ್ನ ಡೀಸಿ ಪಾವರ್ ಸಿಸ್ಟಿಮ್ ನ್ನು ಏಸಿ ಪಾವರಿಗೆ ರೂಪಾಂತರಪಡಿಸಿದರು.

ಏಸಿ ಪಾವರ್ ರೂಪಾಂತರಗೊಳಿದರೆ ತನ್ನ ವ್ಯವಹಾರ ಸಾಮ್ರಾಜ್ಯಕ್ಕೆ ಹಾನಿಯಾಗುವದೆಂದು ಎಡಿಸನ್ ಏಸಿ ಪಾವರನ್ನು ದೂರಿ ಅದರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಹಾಗು ಅಪಪ್ರಚಾರ ಮಾಡಿ ಅದನ್ನು ಉಪಯೋಗಿಸದಂತೆ ಪರಾವೃತ್ತ ಮಾಡತೊಡಗಿದನು. ಇದಕ್ಕಾಗಿ ಅವನು ಬಹಳ ಕೆಳ ಮಟ್ಟದ ಮತ್ತು ಅಮಾನುಷ ತರಹದ ಉಪಯೋಗ ಮಾಡತೊಡಗಿದನು. ಪ್ರಾರಂಭದಲ್ಲಿ ಎಡಿಸನ್ ಏಸಿ ಪಾವರಿನ ಉಪಯೋಗದಿಂದಾಗಿ ಅಪಘಾತಗಳಾಗುತ್ತಿರುವ ಸುಳ್ಳು ಸುದ್ದಿಗಳನ್ನು ಹರಡಿಸಿದನು. ಇದಕ್ಕಾಗಿ ಅವನು ತನ್ನ ರಾಜಕಾರಣದಲ್ಲಿಯ ತನ್ನ ಪರಿಚಯ ಮತ್ತು ಹಣದ ಬಲವನ್ನು ಏಸಿ ಪಾವರ್ ಸಿಸ್ಟಮ್ ಅದರ ಉಪಯೋಗದ ವಿರುದ್ಧವಾಗಿ ವಿವಿಧ ರಾಜ್ಯ ಶಾಸನ ಮತ್ತು ಕಸಬುದಾರರ ಕ್ಲಬ್ ಹಾಗು ಸಂಸ್ಥೆಗಳ ಮೇಲೆ ಉಪಯೋಗಿಸಿದನು.

 Electrocuting An Elephant (https://www.youtube.com/watch?v=VD0Q5FeF_wU)

ಎಡಿಸನ್ ಅಲ್ಲಿಯೇ ನಿಲ್ಲಲಿಲ್ಲ ಅವನು ಸಾಮಾನ್ಯ ಜನಸಮೂದಾಯದ ಮುಂದೆ ಎಲೆಕ್ರ್ಟಿಕ್ ಕರಂಟಿನ ಸಂಪರ್ಕಕ್ಕೆ ಬಂದ ವಿವಿಧ ಪ್ರಾಣಿಗಳು ಹೇಗೆ ಸಾಯುತ್ತವೆ ಹಾಗೆಯೇ ಇದು ಅನೈಸರ್ಗಿಕವಾಗಿದ್ದು ಕ್ರೌರ್ಯ ರೀತಿಯಿಂದಾಗುವದೆಂದು ಪ್ರದರ್ಶನೆ ಮಾಡಿ ತೋರಿಸತೊಡಗಿದ. ಇದಕ್ಕಾಗಿ ಮಾರ್ಗದ ಬೆಕ್ಕು, ನಾಯಿ, ದನಕರು ಹಾಗು ಕುದುರೆಗಳನ್ನು ಉಪಯೋಗಿಸಿದ. ಇದಲ್ಲದೆ ೧೯೦೩ ರ ಜಾನೇವರಿ ೪ ರಂದು, ಎಡಿಸನ್ ಏಸಿ ಪಾವರನ್ನು ಉಪಯೋಗಿಸಿ ಸರ್ಕಸ್ಸಿನ ಆನೆಯನ್ನು ಜನಸಮೂದಾಯದ ಮುಂದೆ ವಿದ್ಯುತ್ ಪ್ರವಾಹ ಚಲಿಸಿ ಬಹಿರಂಗವಾಗಿ ಕೊಂದನು. ಇಂತಹ ಕ್ರೂರ ಕೃತಿಯಿಂದ ಸಮಾಧಾನ ಪಡಲಿಲ್ಲ ಹಾಗು ಇದರಿಂದ ಆನಂದವನ್ನು ಅನುಭವಿಸಲು ಎಡಿಸನ್ ಈ ಮರಣದಂಡನೆಯನ್ನು ಚಿತ್ರೀಕರಿಸಿ ಅದರ ಭಾಗಗಳನ್ನು ಒಟ್ಟು ಮಾಡಿ ೧೯೦೩ ರಲ್ಲಿ ’ಎಕ್ಝೆಕ್ಯೂಶನ್ ಆನ್ ಎಲೆಫೆಂಟ್ ’ ಎಂಬ ಚಲನಚಿತ್ರವನ್ನು ಪ್ರಕಾಶಿಸಿದನು. ಇವೆಲ್ಲವನ್ನು ಮತ್ತು ಮುಖ್ಯವಾಗಿ ಆನೆಯ ಮರಣದಂಡನೆಯಿಂದ ಎಡಿಸನ್ ಜನಸಮುದಾಯಕ್ಕೆ ಏಸಿ ಪಾವರ್ ನ ಉಪಯೋಗದಿಂದಾಗಿ ಆನೆಯು ಸಾಯುತ್ತಿದ್ದರೆ ಅದು ಜನರಿಗಾಗಿ ಅದರಲ್ಲಿ ಮುಖ್ಯವಾಗಿ ಮಕ್ಕಳಿಗೆ ಖಂಡಿತವಾಗಿ ಅಪಾಯಕಾರಕವಾಗಿದೆ ಎಂದು ಸಿದ್ಧ ಮಾಡುವ ಪ್ರಯತ್ನ ಮಾಡಿದ. ಹೀಗೆ ಜನರಲ್ಲಿ ಭೀತಿ ಉತ್ಪನ್ನ ಮಾಡಿ ಏಸಿ ಪಾವರನ್ನು ಉಪಯೋಗಿಸದಂತೆ ಜನರ ಮನೋಭಾವವನ್ನು ಗೆಲ್ಲುವುದರಲ್ಲಿ ಸ್ವಲ್ಪ ಪ್ರಮಾಣದಲ್ಲಿ  ಯಶಸ್ವಿಯಾದನು.

 ಇದನ್ನು ಜನಸಮುದಾಯದ ಮುಂದೆ ತಂದು ತೋರಿಸಲು ಮತ್ತು ಅವರಲ್ಲಿ ಭೀತಿಯನ್ನು ಹರಡಿಸುವ ಕೆಲಸ ಮಾಡಲೆಂದು ಅವನು ತನ್ನ ಎರಡು ಇಂಜಿನಿಯರುಗಳನ್ನು ನೇಮಿಸಿದನು. ಇವರಿಬ್ಬರಲ್ಲಿ ಒಬ್ಬ ಹೆರಾಲ್ಡ್ ಬ್ರೌನ್, ಇವನು ಎಲೆಕ್ರ್ಟಿಕ್ ಚೇರ್ (ವಿದ್ಯುತ್ ಕುರ್ಚಿ) ನ ಆವಿಷ್ಕಾರವನ್ನು ಮಾಡಿರುವನು. ತನ್ನ ಸಹಕಾರಿಗಳು ಮಾಡಿರುವ ಎಲ್ಲಾ ಆವಿಷ್ಕಾರಗಳ ಶ್ರೇಯಸ್ಸನ್ನು ಎಡಿಸನ್ ಗೆ ತನ್ನ ಹೆಸರಿನಲ್ಲಿ  ಪ್ರಸಿದ್ಧ ಪಡಿಸುವ ಅಭ್ಯಾಸವಿದ್ದರಿಂದ ಈಗ ಕೂಡ ಹಾಗೆಯೇ ಮಾಡಿದನು .ಇದರ ನಿರ್ಮಾಣ ಮತ್ತು ಅದರ ಉಪಯೋಗವನ್ನು ಯುನಾಯ್ ಟೇಡ್ ಸ್ಟೇಸ್ಟ್ ನಲ್ಲಿಯ ಎಲ್ಲಾ ಸೆರೆಮನೆಗಳಲ್ಲಿ ಮರಣೆದಂಡನೆಯ ಯಾದಿಗಳಲ್ಲಿದ್ದ ಕೈದಿಗಳಿಗಾಗಿ ಅವಲಂಬಿಸಲಾಯಿತು. ಎಡಿಸನ್ ಉದ್ದೇಶಪೂರ್ವಕವಾಗಿ ಎಲೆಕ್ರ್ಟಿಕ್ ಚೇರ್ ತಯಾರಿಸುವಾಗ ಬ್ರೌನ್ ಗೆ  ಏಸಿ ಪಾವರಿನ ಪದ್ಧತಿಯನ್ನು ಉಪಯೋಗಿಸಲು ಆಜ್ನೆ ಮಾಡಿದನು ಯಾಕೆಂದರೆ ಇದರಿಂದಾಗಿ ಜನರ ಮನಸ್ಸಿನಲ್ಲಿ ಭೀತಿ ಉತ್ಪನ್ನವಾಗುವದರಿಂದ ಏಸಿ ಪಾವರ್ ನ್ನು ಉಪಯೋಗ ಮಾಡಲಾರರು. ಎಡಿಸನ್ ಈ ಮರಣದಂಡನೆಯ ಪ್ರಕಾರವನ್ನು ವೆಸ್ಟಿಂಗ್ ಹೌಸಿಂಗ್ ಎಂದು ಕರೆದನು ಯಾಕೆಂದರೆ ವೆಸ್ಟಿಂಗ್ ಹೌಸ್ ನು ನಿಕೋಲಾ ಟೇಸಲಾರವರ ಏಸಿ ಪಾವರ್ ಟೆಕ್ನೊಲಾಜಿಯ ಮುಖ್ಯ ಪ್ರತಿಪಾದಕನಾಗಿದ್ದನು.  ಮೃತ್ಯು ಶಿಕ್ಷೆಯನ್ನು ಪಡೆದವನನ್ನು ವಿದ್ಯುತ್ ಕುರ್ಚಿಯಲ್ಲಿ ವಿದ್ಯುತ್ ಪ್ರವಾಹಿಸಿ ಕೊಲ್ಲಲಾಗುವದೆಂದು ಜನರಲ್ಲಿ ರೂಢಿನುಡಿಯಾಗಿ ಕ್ಷಣದಲ್ಲಿಯೇ ಪ್ರಸಿದ್ದವಾಯಿತು. ಮೊದಲನೇಯ ಎಲೆಕ್ರ್ಟಿಕ್ ಚೇರ್ ನ್ಯೂಯಾರ್ಕ್ ಸ್ಟೇಟ್ ನ ಕಾರವಾಸಕ್ಕಾಗಿ ತಯಾರಿಸಲಾಯಿತು ಮತ್ತು ಇದನ್ನು ವಿಲ್ಲಿಯಮ್ ಕೆಮ್ಲರ್ ಎಂಬ ಕೈದಿಯ ಮರಣೆದಂಡನೆಯ ಸಮಯದಲ್ಲಿ ಮೊದಲಬಾರಿಗೆ ಉಪಯೋಗಿಸಲಾಯಿತು. ಇದನ್ನು ಉಪಯೋಗಿಸಿದಾಗ ಕೆಮ್ಲರ್ ನು ಶಾಂತವಾಗಿ ಮರಣಹೊಂದಬಹುದೆಂದು ತಿಳಿದಿದ್ದರು. ಆದರೆ ಇದು ಅವನನ್ನು ಪೂರ್ಣ ಸುಡದೆ ಅರ್ಧವೇ ಸುಟ್ಟಿತು. ಇದನ್ನು ಪೂರ್ಣಗೊಳಿಸಿಲು ಅವರಿಗೆ ಈ ಪದ್ಧತಿಯನ್ನು ಹಲವು ಸಲ ಕ್ಲೆಮರ್ ನ ಮೇಲೆ  ಉಪಯೋಗಿಸಬೇಕಾಯಿತು. ಈ ಪೂರ್ಣ ಘಟನೆಯನ್ನು ಜನಸಮುದಾಯದ ತನಕ ತಲುಪಿಸಲೆಂದು ಪತ್ರಕಾರರನ್ನು ಬೇಕೆಂತಲೇ ಕರೆದು ಅದನ್ನು ತೋರಿಸಲಾಯಿತು. ಇದನ್ನು ನೋಡಿದ ವರದಿಗಾರರು ಈ ರೀತಿಯ ಮರಣಾವಸ್ಥೆಯು ಗಲ್ಲಿಗೇರುಸುವದಕ್ಕಿಂತ ಈ ಪದ್ಧತಿಯು ಎಷ್ಟು ಕ್ರೂರ ಮತ್ತು ಅಮಾನುಷ  ಪ್ರಕಾರವೆಂದು ವಿವರಿಸಿ ಹೇಳತೊಡಗಿದರು. ಹೀಗೆ ನಿರ್ದಯತೆಯಿಂದ ಹಾಗು ಕ್ರೂರ ರೀತಿಯಿಂದ ಕೊಲ್ಲುವ ಪ್ರಕಾರ ಈಗಿನ ಕಾಲದಲ್ಲಿ ಕೂಡ ಯುನಾಯ್ ಟೇಡ್ ಸ್ಟೇಸ್ಟ್ಸ್ ಆಫ್ ಅಮೇರಿಕಾದ ಒಂದೇ ರಾಷ್ಟ್ರದಲ್ಲಿ  ಮಾತ್ರ  ಪಾಲಿಸಲಾಗುತ್ತಿದೆ ಇದನ್ನು ಮುಖ್ಯವಾಗಿ ನಮೂದು ಮಾಡಿ ಗಮನಕ್ಕೆ ತರುವಂತಿದೆ.

ಈಗ ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್, ಮೋಬೈಲ್ ಮೊದಲಾದ ಯಂತ್ರಣಗಳಲ್ಲಿ ಈ ಲೇಖನವನ್ನು ನಿಮ್ಮ ಮನೆ, ಆಫೀಸು ಮತ್ತು ಸಂಸ್ಥೆಗಳಲ್ಲಿ ಆಲ್ಟರ್ ನೇಟಿಂಗ್ ಪಾವರಿನ ಕಾರಣದಿಂದ ಓದಲು ಸಾಧ್ಯವಾಗಿದೆಯೆಂದು ನೆನಪಿನಲ್ಲಿಡಿರಿ. ಇದರಿಂದ ಇಷ್ಟೇ ಸಿದ್ಧವಾಗುತ್ತದೆಂದರೆ ಸಮಯವು ಯಾವಾಗಲು ಸತ್ಯದ ಬದಿಯಲ್ಲಿರುವದು. ಹಲವು ಸುಳ್ಳು ಸುದ್ದಿಯ ಪ್ರಚಾರ ಮತ್ತು ಒಳಸಂಚನ್ನು ಡಾ, ನಿಕೋಲಾ ಟೇಸಲಾರವರ ವಿರುದ್ಧ ಮಾಡಿದ್ದರೂ ವಾರ್ ಆಫ್ ಕರಂಟ್ ಅಂದರೆ ವಿದ್ಯುತ್ ಪ್ರವಾಹಗಳ ಯುದ್ಧದಲ್ಲಿ  ಅವರ ಆಲ್ಟರ್ ನೇಟಿಂಗ್ ಕರಂಟ್ ಯಶಸ್ವಿಯಾಗಿ ಬಂತು. ಡಾ. ನಿಕೋಲಾ ಟೇಸಲಾರವರ ದೊಡ್ಡತನವೆಂದರೆ  ಥೋಮಸ್ ಎಡಿಸನ್ ನು ಎಲ್ಲಾ ಪ್ರಕಾರದ ನೀಚ ತಂತ್ರಗಳನ್ನು ಉಪಯೋಗಿಸಿದರೂ ಅವರು ಮಾತ್ರ ಎಡಿಸನ್ ವಿರುದ್ಧ, ಅವರ ಕುತಂತ್ರಗಳ ಬಗ್ಗೆ ಅಥವಾ ಒಬ್ಬರನೊಬ್ಬರನ್ನು ದೂರುವ ಕಾರಸ್ಥಾನದಲ್ಲಿ ಭಾಗವಹಿಸಲಿಲ್ಲ . ಹಾಗೆಯೇ ಅವರ ವಿರುದ್ಧ ಚಕಾರ ಶಬ್ದ ಉಚ್ಚರಿಸದಿದ್ದರು ಕೊನೆಗೆ ಅವರೇ ಯಶಸ್ವನ್ನು ಪ್ರಾಪ್ತ ಮಾಡಿದರು.

|| ಹರಿ ಓಂ || ಶ್ರೀರಾಮ || ಅಂಬಜ್ನ ||