Thursday 14 July 2022

ಸದ್ಗುರು ತನ್ನ ಚರಣಕಮಲಕ್ಕೆ ಭಕ್ತರನ್ನು ಸೆಳೆದು ನಂಬಿಕೆಯನ್ನು ದೃಢ ಮಾಡುವವನು (ಸುದೇಶ್ ಘರತ್, ಬೋಯಿಸರ)

 ಸದ್ಗುರು ನಮಗಾಗಿ ಅಸಂಖ್ಯಾತ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಆದರೆ ಯಾವತ್ತೂ ತಮ್ಮ ತುತ್ತೂರಿಯನ್ನು ಊದುವುದಿಲ್ಲ. ಆದಾಗ್ಯೂಒಬ್ಬ ಭಕ್ತನು ಒಳ್ಳೆಯ ಕಾರ್ಯವನ್ನು ಮಾಡಿದರೆಅದು ಚಿಕ್ಕದಾಗಿದ್ದರೂದೇವರು ಅದನ್ನು ದೊಡ್ಡದನ್ನಾಗಿ  ಮಾಡುತ್ತಾನೆ. ನನ್ನ ಅನುಭವವು ಈ ವಿಚಾರವನ್ನು ದೃಢಪಡಿಸುತ್ತದೆ.

 

ಸದ್ಗುರು ಅನಿರುದ್ಧ ಬಾಪುರವರ ಪವಿತ್ರ ಅನುಗ್ರಹದ ಅನೇಕ ಅನುಭವಗಳನ್ನು ನಾನು ಹೊಂದಿದ್ದೇನೆ. ಅವುಗಳಲ್ಲಿಯ ಕೆಲವನ್ನು  ಮಾತ್ರ ಹೇಳುತ್ತಿದ್ದೇನೆ.

 

ನನ್ನ ಪತ್ನಿ ಸುಷ್ಮಾ ಪಂಚಶೀಲ ಪರೀಕ್ಷೆಯ ಸರಣಿಯಲ್ಲಿ ಮೊದಲನೆಯ ಸಲ ಪರೀಕ್ಷೆಗೆ ಕುಳಿತಿದ್ದಳು. ಅವಳು "ಮುಂದಿನ ಬಾರಿ" ಎಂಬ ರಿಮಾರ್ಕ್ಸ್ ನ್ನು ಪಡೆದಳು (ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ). ಆಗ ಅವಳು ಸಾಕಷ್ಟು ನಿರಾಶೆಗೊಂಡಳು. ಇನ್ನು ಮುಂದೆ ಎಂದಿಗೂ ಪಂಚಶೀಲ ಪರೀಕ್ಷೆ ಕೊಡುವದಿಲ್ಲವೆಂದು ಅವಳು ನಿರ್ಧರಿಸಿದಳು. ಇದು ನನ್ನಿಂದಾಗದ ಮಾತು ಎಂದು ಅವಳು ಭಾವಿಸಿದಳು. ನಾನು ಅವಳಿಗೆ ವಿವರಿಸಿದೆ, "ಪಂಚಶೀಲ ಪರೀಕ್ಷೆಯು ಜ್ಞಾನದ ಪರೀಕ್ಷೆ ಅಲ್ಲಅದು ನಿಮ್ಮ ಭಕ್ತಿಯ, ಪ್ರೇಮದ ಪರೀಕ್ಷೆ ಎಂದು ಬಾಪು ನಮಗೆ ಹೇಳಿದ್ದಾರೆ." ನಾನು ಅವಳನ್ನು ಮತ್ತೆ ಪ್ರಯತ್ನಿಸಲು ಶಿಫಾರಸು ಮಾಡಿದೆ. ನಾನು ಅವಳಿಗೆ ಬಾಪುವಿನ ಮೇಲೆ ನಂಬಿಕೆ ಇಡಲು ಹೇಳಿದೆ. ತನ್ನ ಎಲ್ಲಾ ಭಕ್ತರಿಗಾಗಿಬಾಪು ಈಗಾಗಲೇ " ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ " ಎಂದು ಘೋಷಿಸಿದ್ದಾರೆ.

 

ಸ್ವಲ್ಪ ಕಾಲದ ನಂತರಮತ್ತೊಮ್ಮೆ ಪರೀಕ್ಷೆ ಕೊಡಬೇಕು ಎಂದು ಅವಳು ಭಾವಿಸಿದಳು. ಅವಳು ತನ್ನ ಸದ್ಗುರುವಿನ ಮೇಲೆ ಪೂರ್ತಿ ನಂಬಿಕೆ ಇಟ್ಟಳು ಮತ್ತು ಆಶ್ಚರ್ಯಕರ ಸಂಗತಿಯೊಂದು ಸಂಭವಿಸಿತು. ಪರಮಪೂಜ್ಯ ಬಾಪುರವರ ಕೃಪೆಯಿಂದ, ಅವಳು ಚತುರ್ಥ ಪರೀಕ್ಷೆಯತನಕ ತಲುಪಿದಳು. ಅವಳಿಗೆ ಚತುರ್ಥ ಪರೀಕ್ಷೆಯಲ್ಲಿ "ಡಿಸ್ಟಿಂಕ್ಷನ್" ದೊರಕಿತು. ಹೀಗಾಗಿಯೇಬಾಪು ತನ್ನ ಬೇಷರತ್ತಾದ(UNCONDITIONAL)ಪ್ರೀತಿಯ ಮೂಲಕಪಂಚಶೀಲ ಪರೀಕ್ಷೆಯಲ್ಲಿ ಸುಷ್ಮಾ ತನ್ನ ಯಶಸ್ಸಿನ ಶಿಖರವನ್ನು ಏರಲು ಸಹಾಯ ಮಾಡಿದರು.

ಯಾರು ಈ ಚರಣಕಮಲಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೋ ಮತ್ತು  ದೃಢವಾಗಿ  ನಂಬಿದರೋ !!

ನನ್ನ ಮಗಳು ಶ್ರೇಯಾ ನಮ್ಮೊಂದಿಗೆ ಪರಮಪೂಜ್ಯ ಸುಚಿತದಾದಾರವರ ಕ್ಲಿನಿಕ್‌ಗೆ ಸುಷ್ಮಾ ಅವಳ ಉತ್ತರ ಪತ್ರಿಕೆಯನ್ನು ಪಡೆಯಲು ಬಂದಿದ್ದಳು. ದಾದಾ ಶ್ರೇಯಾಳನ್ನು ಕೇಳಿದರು, " ಮಗುವೇನೀನು ಏನು ಮಾಡುತ್ತಿ?" ಇದಕ್ಕೆ ಶ್ರೇಯಾ, ‘ನಾನು ಇಂಗ್ಲಿಷನಲ್ಲಿ ಡಿ. ಎಡ್  ವ್ಯಾಸಂಗ ಮಾಡುತ್ತಿದ್ದೇನೆ. ವಾಸ್ತವವಾಗಿ ನಾನು ಫಾರ್ಮಸಿಯನ್ನು ಮುಂದುವರಿಸಲು ಬಯಸಿದ್ದೆ ಆದರೆ ಬಾಪು ನನಗೆ ಡಿ.ಎಡ್ ಮಾಡಲು ಮಾರ್ಗದರ್ಶನ ನೀಡಿದರು. ಆಗ ದಾದಾ ಕೇಳಿದರು, "ನೀವು ಬಾಪುರವರನ್ನು ಎಲ್ಲಿ ಭೇಟಿಯಾದಿರಿ?" ಅವರು ನನ್ನ ಕನಸಿನಲ್ಲಿ ಕಾಣಿಸಿಕೊಂಡಾಗ ಅದರ ಬಗ್ಗೆ ಹೇಳಿದ್ದರು ಎಂದು ಶ್ರೇಯಾ ಹೇಳಿದಳು. ಆಗ ದಾದಾ ಆಶ್ಚರ್ಯದಿಂದ ಉದ್ಗರಿಸಿದರು, “ಏನು! ನಿನ್ನ  ಕನಸಿನಲ್ಲಿಮತ್ತು ನೀನು ಒಪ್ಪಿಕೊಂಡೆಯಾ? ” ಅದಕ್ಕೆ ಶ್ರೇಯಾ ಪ್ರತಿಕ್ರಿಯಿಸಿ, "ಹೌದುಅದು ನನ್ನ ಕನಸಿನಲ್ಲಿದ್ದರೂ ಸಹಬಾಪುರವರ ಆದೇಶವು ನನಗೆ ಸರಿಯಾದ ಮತ್ತು ಅತ್ಯಂತ ಸೂಕ್ತವಾಗಿಯೇ ಇದೆ."   ದಾದಾ ಹೇಳಿದರು, "ಶ್ರೀರಾಮ! ಹರಿ ಓಂ!”

 

ದಾದಾ ಅವಳಿಗೆ ಆಶೀರ್ವಾದ ಮಾಡಿದರು!. ಮುಂದಿನ ತಿಂಗಳಲ್ಲಿ ಮೊದಲ ವರ್ಷದ D.Ed ಫಲಿತಾಂಶ ಬರುವದಿತ್ತು. ಶ್ರೇಯಾ ತನ್ನ ಕಾಲೇಜಿನಲ್ಲಿ ಪ್ರಥಮ RANK ಪಡೆದಳು.

 

ವಾಸ್ತವವಾಗಿನಾನು ಪಂಚಶೀಲ ಪರೀಕ್ಷೆಯ ಎಲ್ಲಾ ಐದು ಪರೀಕ್ಷೆಗಳಿಗೆ ಕುಳಿತುಕೊಂಡು   ಉತ್ತೀರ್ಣನಾಗಿದ್ದೆ. ದಾದಾ ಒಮ್ಮೆ ನನ್ನನ್ನು ಕೇಳಿದರು, "ನೀವು ಮತ್ತೊಮ್ಮೆ ಪರೀಕ್ಷೆಗೆ ಏಕೆ ಕುಳಿತುಕೊಳ್ಳಬಾರದು?" ನಾನು ಉತ್ತರಿಸಿದೆ, "ದಾದಾ ನಾನು ಮತ್ತೆ ಕುಳಿತುಕೊಂಡಿದ್ದೇನೆ. ನಾನು ಈಗಷ್ಟೇ ಎರಡನೇ ಪರೀಕ್ಷೆಗೆ ಕುಳಿತುಕೊಂಡಿದ್ದೆ. ಮತ್ತೆ ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳಿ ಎಂದು ಬಾಪುರವರೇ ಹೇಳಿದ್ದಾರೆ. ನೀವು ಒಂದು ಅಂಕ ಹೆಚ್ಚಾಗಿ ಪಡೆದರೆ,ನಿಮ್ಮ ಭಕ್ತಿ ಸ್ವಲ್ಪಮಟ್ಟಿಗೆ ಬೆಳೆದಿದೆ ಎಂದು ತಿಳಿಯಿರಿ. ನಾನು ಅದನ್ನು ನಿಜವಾಗಿಯೂ ಇಷ್ಟಪಟ್ಟೆ. ” ದಾದಾ ಹೇಳಿದರು "ತುಂಬಾ ಚೆನ್ನಾಗಿದೆ"

 

ಹಾಗೆಯೇ ನಮ್ಮ ಮಗ ರಿತೇಶನಿಗೆ ಪುಸ್ತಕದಂತೆ  ಅಧ್ಯಯನ ಮಾಡುವುದು ಇಷ್ಟವಿಲ್ಲ. ಅವನು ತನ್ನ 12 ನೇ ತರಗತಿಯನ್ನು ಸಾಧಾರಣವಾಗಿ  ಉತ್ತೀರ್ಣನಾಗಿದ್ದಾನೆ. ಅವನು ತನ್ನ ಭವಿಷ್ಯ ಮತ್ತು ಮುಂದಿನ ಕ್ರಮದ ಬಗ್ಗೆ ಚಿಂತಿಸುತ್ತಿರುವಾಗಬಾಪುರವರ ಕೃಪೆಯಿಂದ,  ಒಂದು ದಿನ ಅವನ ಸ್ನೇಹಿತನೊಬ್ಬನು  ಬಂದು ರಿತೇಶನ ಆಸಕ್ತಿಯ ಬಗ್ಗೆ ಕೇಳಿದನು. ರಿತೇಶನು ತಾಂತ್ರಿಕ ಜ್ಞಾನ ಪಡೆಯುವ ಆಸಕ್ತಿಯ ಬಗ್ಗೆ ಅವನಿಗೆ ತಿಳಿಸಿದನು. ಅದನ್ನು ಕೇಳಿದ ಅವನ ಸ್ನೇಹಿತ ಬೊರಿವಲಿಯ ಜೆಟ್ಕಿಂಗ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡಿದನು. ಮತ್ತೊಮ್ಮೆ ಬಾಪೂರವರ ಕೃಪೆಯಿಂದ ರಿತೇಶನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎರಡನೇ RANK ಪಡೆದನು.   ಈಗ ಅವನು ಕಂಪ್ಯೂಟರ್ ಸಾಯನ್ಸ್ ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾನೆ. ಇದೆಲ್ಲವೂ ಬಾಪೂರವರ ಕೃಪಾಶೀರ್ವಾದದಿಂದಲೇ!

 

ಬಾಪೂರವರಿಗೆ ನಾವು ಸದಾ ಋಣಿಯಾಗಿದ್ದೇವೆ. ಅವರು ನಮ್ಮ ಕುಟುಂಬಕ್ಕಾಗಿ ಮಾಡಿರುವ ಎಲ್ಲದಕ್ಕೂ ನಾವು ಯಾವಾಗಲೂ ಅವರಿಗೆ ಋಣಿಯಾಗಿರುತ್ತೇವೆ. ಭಕ್ತನ ಒಂದು ಸಣ್ಣ ಕ್ರಿಯೆಯನ್ನು ದೇವರು ಎಷ್ಟು ಹೊಗಳುತ್ತಾನೆ! ನಮ್ಮ ಸದ್ಗುರು ಭಕ್ತನ ಹೆಸರನ್ನು ತೆಗೆದುಕೊಳ್ಳುವುದನ್ನು ನೋಡುವುದು ನಮಗೆ ತುಂಬಾ ಹೆಮ್ಮೆಯ ವಿಷಯ! ಪಂಚಶೀಲ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆಯುವ ಭಕ್ತರ ಹೆಸರನ್ನು ಬಾಪು ಓದುವಾಗ ನಮ್ಮಲ್ಲಿ ಅನೇಕರು ಒಬ್ಬೊಬ್ಬರ  ಹೆಸರನ್ನು ಕೇಳಲು ಆನಂದ ಪಡುತ್ತಾರೆ. ಇದು ಬಾಪುರವರ ಭಕ್ತರ ಮೇಲಿನ ನಿಜವಾದ ಪ್ರೀತಿಯ ಸಂಕೇತವಾಗಿದೆ!

 

ನಾನು ಸದ್ಗುರು ಬಾಪುರವರ ಚರಣಕಮಲಗಳಿಗೆ ನಮಸ್ಕರಿಸುತ್ತೇನೆ!

ಗ್ಯಾಸ್ ಸೋರಿಕೆ ಜೊತೆಗೆ ಅಡುಗೆ, ಆದರೆ ಸದ್ಗುರುವಿನ ಕೃಪೆಯಿಂದ ರಕ್ಷಣೆ (ಅರುಣಾ ಅಲೈ, ಅಮಳನೇರ)

ಗ್ಯಾಸ್ ಸೋರಿಕೆ ಅಥವಾ ಗ್ಯಾಸ್ ಸಿಲಿಂಡರ್‌ ಅಪಘಾತದಿಂದ ಮನೆಗಳಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ನಾವು  ಆಗಾಗ್ಗೆ ಓದುತ್ತಿರುತ್ತೇವೆ. ಅಂತಹ ಅಪಘಾತಗಳ ತೀವ್ರತೆ ಮತ್ತು ಪರಿಣಾಮದ ಬಗ್ಗೆ ನಿಸ್ಸಂಶಯವಾಗಿ ತಿಳಿಯುತ್ತದೆ. ಆದರೆ,ಈ ಘಟನೆಯನ್ನು ನಮಗೆ ಹೇಳುತ್ತಿರುವ ಶ್ರದ್ದಾವಂತಳು  ತನ್ನ ಅಡುಗೆಮನೆಯಲ್ಲಿ ಗ್ಯಾಸ್ ಸೋರಿಕೆ ಇದ್ದಾಗಲೂ  ಸದ್ಗುರು ಅನಿರುದ್ಧ ಬಾಪುರವರ  ಕೃಪೆಯಿಂದ ರಕ್ಷಿಸಲ್ಪಟ್ಟಳು. ಅಷ್ಟೇ ಅಲ್ಲಬೆಳಗಿನ ಉಪಾಹಾರಚಹಾಮಧ್ಯಾಹ್ನದ ಊಟವನ್ನೂ ಸಿದ್ಧಪಡಿಸಿ ಮುಂದೆ ಬರಲಿರುವ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.


ನಾನು ಗಂಗೆಯ ಜಲಧಾರೆಯನ್ನು ನೋಡಿದ್ದೇನೆ. ಗಂಗೋತ್ರಿಗೂ ಭೇಟಿ ನೀಡಿದ್ದೆ. ಸದಾ ಹರಿಯುವ ಆ ನೀರನ್ನು ನೋಡಿದಾಗಸಾವಿರಾರು ವರ್ಷಗಳಿಂದ ನೀರು ನಿರಂತರವಾಗಿ ಹೇಗೆ ಹರಿಯುತ್ತಿದೆ ಎಂದು ನನಗೆ ಆಶ್ಚರ್ಯವಾಯಿತು. ವಿಜ್ಞಾನಕ್ಕೂ ಈ ವಿದ್ಯಮಾನವನ್ನು ವಿವರಿಸಲು ಸಾಧ್ಯವಾಗಲಿಲ್ಲ. ವಿಜ್ಞಾನ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿ ಆಧ್ಯಾತ್ಮಿಕತೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.  ಅಧ್ಯಾತ್ಮದಲ್ಲಿ ನಿಶ್ಚಲ ನಂಬಿಕೆ ಮುಖ್ಯತನ್ನ ದೇವರಲ್ಲಿ, ತನ್ನ ಸದ್ಗುರುವಿನಲ್ಲಿ ಅಚಲವಾದ ನಂಬಿಕೆ ಮತ್ತು ವಿಶ್ವಾಸ ಹೊಂದಿರಬೇಕು. ಅದನ್ನೇ ಬಾಪು ನಮಗೆ ಹೇಳುತ್ತಲೇ ಇರುತ್ತಾರೆ  “ಏಕ್ ವಿಶ್ವಾಸ್ ಅಸಾವಾ ಪುರ್ತಾ ಕರ್ತಾ ಹರ್ತಾ ಗುರು ಐಸಾ”. (ಗುರುವಿನಲ್ಲಿ ದೃಢ ನಂಬಿಕೆ ಇರಬೇಕುಎಲ್ಲವನ್ನು  ಮಾಡುವವನು,ರಕ್ಷಿಸುವವನು ಗುರು ಒಬ್ಬನೇ )

 

ಸಂಪೂರ್ಣವಾಗಿ ವಿವರಿಸಲಾಗದ ನನ್ನ ಅನುಭವ ಹೇಳುತ್ತಿದ್ದೇನೆ. ಸೆಪ್ಟೆಂಬರ್ 03,2013 ರಂದು ಬೆಳಿಗ್ಗೆ ಎದ್ದು ನಾನು ಚಹಾ ಮಾಡಲು ಗ್ಯಾಸ್ ಸ್ಟವ್ ಆನ್ ಮಾಡಲು ಪ್ರಯತ್ನಿಸಿದೆ ಆದರೆ ಅದು ಹೊತ್ತಿಕೊಳ್ಳಲಿಲ್ಲ. ನನ್ನ ಮಗ ಸ್ವಲ್ಪ ಪ್ರಯತ್ನ ಮಾಡಿ ಹೊಸ ಸಿಲಿಂಡರ್ ಅನ್ನು ಜೋಡಿಸಿದನುನಂತರ ಅದು ಹೊತ್ತಿಕೊಂಡಿತು. ನನ್ನ ಸೊಸೆಯು ಚಹಾತಿಂಡಿ ಮತ್ತು ಊಟವನ್ನು ತಯಾರಿಸಿದಳು. ನಂತರ ನಾವು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದೆವು.

 

ನಾನುಅನಿಲ್‌ಸಿಂಹ ಮತ್ತು ನನ್ನ ಮಗಳು ಡ್ರಾಯಿಂಗ್ ರೂಮ್‌ನಲ್ಲಿ ಕುಳಿತಾಗನಮಗೆ  ಗ್ಯಾಸ್ ಸೋರಿಕೆಯ ವಾಸನೆ ಬಂದಿತು. ಏನಾಗುತ್ತಿದೆ ಎಂದು ನೋಡಲು  ತಕ್ಷಣ ನಾವು ಅಡುಗೆ ಮನೆಗೆ ನುಗ್ಗಿದೆವು. ನಮ್ಮೆಲ್ಲರಿಗೂ ಆಶ್ಚರ್ಯವಾಯಿತುಹಿಸ್ಸಿಂಗ್ ಶಬ್ದದೊಂದಿಗೆ ಗ್ಯಾಸ್ ಪೈಪ್ ಮೂಲಕ ಗ್ಯಾಸ್ ಧಾರಾಕಾರವಾಗಿ ಸೋರಿಕೆಯಾಗುತ್ತಿತ್ತು. ಗ್ಯಾಸ್ ಮನೆಯೆಲ್ಲ ಹರಡಿತ್ತು. ಇದರರ್ಥ ನಿಯಂತ್ರಕವನ್ನು(Regulator)ಸರಿಯಾಗಿ ಅಳವಡಿಸಲಾಗಿಲ್ಲ ಮತ್ತು ಗ್ಯಾಸ್ ಸೋರಿಕೆಯಾಗುತ್ತಿತ್ತು. ನಾವು ತಕ್ಷಣ ನಿಯಂತ್ರಕವನ್ನು ಸ್ವಿಚ್ ಆಫ್ ಮಾಡಿದೆವು ಮತ್ತು ಅನಿಲ್‌ಸಿಂಹ ಅವರು ದೂರು ನೀಡಲು ಗ್ಯಾಸ್ ಕಂಪನಿಗೆ ಕರೆ ಮಾಡಿದರು.

 

ಮಧ್ಯಾಹ್ನ 3 ಗಂಟೆಗೆ ಮೆಕ್ಯಾನಿಕ್ ಬಂದು ಪರಿಶೀಲಿಸಿದಾಗ ರೆಗ್ಯುಲೇಟರ್‌ನಲ್ಲಿ ವಾಲ್ವ ಇಲ್ಲದಿರುವುದು ಗೊತ್ತಾಯಿತು. ನಾವು ಗಾಬರಿಗೊಂಡೆವು. ಅದು ಹೇಗೆ ಸಾಧ್ಯ ಯಾಕೆಂದರೆ ಕೆಲವೇ ಗಂಟೆಗಳ ಹಿಂದೆ ಅದೇ ಒಲೆಯ ಮೇಲೆ ಅಡುಗೆ ಮಾಡಿ ಮುಗಿಸಿದ್ದೇವೆ ಎಂದು ಮೆಕ್ಯಾನಿಕ್ ಗೆ ಹೇಳಿದೆವು.

 

ಅವನಿಗೂ ಅಷ್ಟೇ ಆಶ್ಚರ್ಯವಾಯಿತು. ಅವನು ಗೋಡೆಯ ಮೇಲಿದ್ದ ದತ್ತಗುರು ಮತ್ತು ಬಾಪು ಅವರ ಚಿತ್ರವನ್ನು ನೋಡಿ, "ನಿಮ್ಮ ಮೇಲೆ ಸದ್ಗುರುಗಳ ಆಶೀರ್ವಾದವಿದೆ ಮತ್ತು ಅವರಿಂದಲೇ  ದೊಡ್ಡ ಪ್ರಾಣಾಪಾಯವನ್ನು ತಪ್ಪಿಸಲಾಗಿದೆ" ಎಂದು ಹೇಳಿದನು.

 

ನಂತರ ಅವನು ರೆಗ್ಯುಲೇಟರ್‌ನಲ್ಲಿ  ವಾಲ್ವನ್ನು ಅಳವಡಿಸಿದನು ಮತ್ತು ಗ್ಯಾಸ್ ಸಿಲಿಂಡರನ್ನು ನಾರ್ಮಲ್ ಮೋ (mode) ಗೆ ಹೊಂದಿಸಿದನು. ನಾವು ನಮ್ಮ ಮನಸ್ಸಿನಲ್ಲಿಯೇ ಬಾಪುಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದೆವು. ಬಾಪು ಅವರ ಆಶೀರ್ವಾದದಿಂದಾಗಿ ಪ್ರಾಣಾಪಾಯ ತಪ್ಪಿತು. ನಮ್ಮ ಸದ್ಗುರುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಅನುಕ್ರಮವನ್ನು ತಿಳಿದಿದ್ದಾರೆ. ಅವರ ಶ್ರದ್ಧಾವಂತ ಭಕ್ತರು ಎಲ್ಲೇ ಇದ್ದರೂ ಮತ್ತು ಅವರು ಎಷ್ಟೇ ದೊಡ್ಡ ಸಂಕಟದ ಸ್ಥಿತಿಯಲ್ಲಿದ್ದರೂ ಅವರನ್ನು ರಕ್ಷಿಸಲು ನಮ್ಮ ಸದ್ಗುರು ಯಾವಾಗಲೂ ಇರುತ್ತಾರೆ ಎಂಬ ಸತ್ಯವನ್ನು ನಾವು ಅನುಭವಿಸುತ್ತೇವೆ. ಬಾಪುನಾವು ಅಂಬಜ್ಞರಿದ್ದೇವೆ.

 

ಸ್ಮರ್ತೃಗಾಮಿ ಬಾಪು ದತ್ತಗುರು ಗುರುತಿಸಿದೆ I

ಅನಿರುದ್ಧಾ,  ನಾನು ನಿನ್ನ ಎಷ್ಟು ಋಣಿಯಾದೆ II

Saturday 19 September 2020

ಹನುಮಾನಚಲೀಸಾ ಪಠಣ

 

ಹರಿ ಓಂ





ಎಲ್ಲ  ಶ್ರದ್ಧಾವಂತರ ಸಲುವಾಗಿ ಒಂದು ಆನಂದದ ಸುದ್ದಿ ಏನೆಂದರೆ,  ಪ್ರತಿವರ್ಷ ಶ್ರೀ ಅನಿರುದ್ಧ ಗುರುಕ್ಷೇತ್ರಮದಲ್ಲಿ ನಡೆಯಲಿರುವ ಹನುಮಾನಚಲೀಸಾ ಪಠಣ ಈ ವರ್ಷದ ಅಧಿಕ ಆಶ್ವಿನ ಮಾಸದಲ್ಲಿ  ಸೋಮವಾರ ದಿನಾಂಕ 21 ಸಪ್ಟೆಂಬರ 2020 ರಿಂದ ಭಾನುವಾರ ದಿನಾಂಕ 27 ಸಪ್ಟೆಂಬರ 2020  7 ದಿವಸಗಳಲ್ಲಿ ಸಂಪನ್ನವಾಗಲಿದೆ. ಮಾತ್ರ ಈ ವರ್ಷ  ಗುರುಕ್ಷೇತ್ರಮದಲ್ಲಿ ಪ್ರತ್ಯಕ್ಷವಾಗಿ ಪಠಣ ಮಾಡಲು ಬರದೇ ಇರುವ ತೊಂದರೆ ಗಮನಿಸಿ, ಕಳೆದ ಹಲವಾರು ವರ್ಷಗಳ ರೆಕಾರ್ಡಿಂಗನ ಉಪಯೋಗ ಮಾಡಿ, ಅನಿರುದ್ಧ ಟಿ.ವ್ಹಿ., ಫೇಸಬುಕ್ ಪೇಜ್, ಯು ಟ್ಯೂಬ ನ  ಮುಖಾಂತರ ಹಾಗೆಯೇ '' ಅನಿರುದ್ಧ ಭಜನ ಮ್ಯೂಜಿಕ್ ರೇಡಿಯೋ '' ಮೇಲಿಂದ ( ಆಡಿಯೋ ಸ್ವರೂಪದಲ್ಲಿ ) ಶ್ರದ್ಧಾವಂತರಿಗೆ ಈ ಪಠಣದ ಲಾಭವನ್ನು ಪಡೆಯುವ ವ್ಯವಸ್ಥೆ  ಮಾಡಲಾಗಿದೆ.

ಈ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ತಮ್ಮತಮ್ಮ ಮನೆಯಲ್ಲಿ ಕುಳಿತುಕೊಂಡು ಒಂದು ದಿವಸ  ಅಥವಾ ಅವನ ಇಚ್ಛೆ ಇದ್ದರೆ ಒಂದಕ್ಕಿಂತ ಹೆಚ್ಚು ದಿವಸ ಕೂಡಾ ಜಪಕನೆಂದು ಸಹಭಾಗಿ ಆಗಬಹುದು. ಮಾತ್ರ ಸಂಪ್ರದಾಯದಂತೆ ಪ್ರತಿಯೊಂದು ದಿವಸ ಈ ಪಠಣದಲ್ಲಿ '' A  ''  ಹಾಗು  '' B  ''  ಹೀಗೆ ಎರಡು ಬ್ಯಾಚುಗಳು ಇರುವದು ಹಾಗು  ಆ ದಿವಸದ ಪಠಣದಲ್ಲಿ ಪ್ರತಿಯೊಬ್ಬ ಶ್ರದ್ಧಾವಂತನು ಎರಡರಲ್ಲಿಯ ಒಂದೇ ಬ್ಯಾಚಿನಲ್ಲಿ ಹೆಸರನ್ನು ರಜಿಸ್ಟರ್ ಮಾಡಲು ಸಾಧ್ಯ.

ಪಠಣದವೇಳಾಪತ್ರಿಕೆ( ಸಮಯಸೂಚಿ)ಕೆಳಗಿನಂತೆಇರುವದು.

 

'' A '' ಬ್ಯಾಚು

'' B '' ಬ್ಯಾಚು

ಆವರ್ತನೆಗಳು

ಎರಡೂಬ್ಯಾಚುಗಳಲ್ಲಿಯಶ್ರದ್ಧಾವಂತರಿಗೆ ಒಂದೊಂದು ಗಂಟೆಯ ಆವರ್ತನೆ ಇರುವದು ಹಾಗು ಪೂರ್ಣ ದಿವಸದಲ್ಲಿ ಅವರಿಗೆ ಒಟ್ಟಿಗೆ ಆರು ಸಲ ಆವರ್ತನೆಗೆಕುಳಿತುಕೊಳ್ಳುವದಿದೆ. ''A''ಬ್ಯಾಚಿನ ಆವರ್ತನೆ ಆಗುತ್ತಿರುವಾಗ''B''ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು  ಮತ್ತುಅದರಂತೆಯೇ ''B  '' ಬ್ಯಾಚಿನ ಆವರ್ತನೆ ಆಗುತ್ತಿರುವಾಗ'' A   '' ಬ್ಯಾಚಿನಶ್ರದ್ಧಾವಂತರಿಗೆ ವಿಶ್ರಾಂತಿ ಇರುವದು.

 

ಬೆಳಿಗ್ಗೆ  8.00-8.15  ಎರಡೂ ಬ್ಯಾಚುಗಳು ಒಟ್ಟಿಗೆ

3

1

8.15 – 9.00

9.00 – 10.00

8 + 11

2

10.00 – 11.00

11.00 – 12.00

11 + 11

3

12.00 – 1.00

1.00 – 2.00

11 + 11

4

2.00 – 3.00

3.00 – 4.00

11 + 11

5

4.00 – 5.00

5.00 – 6.00

11 + 11

6

6.00 – 7.00

7.00 – 8.00

11 + 11

 

ಸಾಯಂಕಾಲ 8.00-8.15ಎರಡೂ ಬ್ಯಾಚುಗಳು ಒಟ್ಟಿಗೆ

3

 

 ಈ ಪಠಣದಲ್ಲಿ ಸಹಭಾಗಿಯಾಗಲು ಹೆಸರನ್ನು ರಜಿಸ್ಟ್ರೇಷನ್  ಮಾಡುವ ಸಲುವಾಗಿ ಶ್ರದ್ಧಾವಂತರು ಭಾನುವಾರ ದಿನಾಂಕ 13 ಸಪ್ಟೆಂಬರ್ 2020 ರಿಂದ ಕೆಳಗೆ ಕೊಟ್ಟಿರುವ ವೆಬ್ಸೈಟ್ (website) ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರನ್ನು ರಜಿಸ್ಟರ್ ಮಾಡಬಹುದು.

 

ಹೆಸರನ್ನು ರಜಿಸ್ಟರ್ ಮಾಡುವ ಸಲುವಾಗಿ  ವೆಬ್ಸೈಟ್ (website) ಲಿಂಕ್

https://pathan.aniruddha-devotionsentience.com

 

ಹಾಗೆಯೇ ಯಾವನೊಬ್ಬ ಶ್ರದ್ಧಾವಂತನಿಗೆ ಪೂರ್ಣ ದಿವಸ ಜಪಕನೆಂದು ಸಹಭಾಗಿಯಾಗಲು ಸಾಧ್ಯವಾಗದಿದ್ದರೆ, ಅವನು ಪಠಣದ ಈ ಏಳು ದಿವಸಗಳಲ್ಲಿ ದಿವಸದ ಯಾವದೇ ವೇಳೆಗೆ ತನ್ನ ಅನುಕೂಲದಂತೆ ಪಠಣದಲ್ಲಿ ಸಹಭಾಗಿಯಾಗಬಹುದು.

 

ಜಪಕರಿಗೆ ಊಟದ ಪಥ್ಯೆಯ ಅಥವಾ ಡ್ರೆಸ್ ಕೋಡಿನ ಯಾವದೇ  ಬಂಧನ ಇರುವದಿಲ್ಲ ಎಂಬುದನ್ನು ಎಲ್ಲ ಶ್ರದ್ಧಾವಂತರು ಗಮನದಲ್ಲಿಡಬೇಕು. ಆದರೆ ಮಾಂಸಾಹಾರ ಸೇವನೆ ಮಾಡದೇ ಇರುವದು ಶ್ರೇಯಸ್ಕರ.

 

ಅದಕ್ಕಾಗಿ ಸದ್ಗುರು ಅನಿರುದ್ಧರ ಕೃಪಾಶೀರ್ವಾದದಿಂದ ಲಭಿಸಿದ ಈ ಸುವರ್ಣ ಅವಕಾಶದ ಲಾಭವನ್ನು ಆದಷ್ಟು ಹೆಚ್ಚು ಶ್ರದ್ಧಾವಂತರು ಪಡೆಯಬೇಕು.

 

II ಹರಿ ಓಂII  IIಶ್ರೀರಾಮII  IIಅಂಬಜ್ಞII

IIನಾಥಸಂವಿಧ್II

 

- ಸಮೀರಸಿಂಹ ದತ್ತೋಪಾಧ್ಯೆ

ಶುಕ್ರವಾರ ದಿನಾಂಕ  11 ಸಪ್ಟೆಂಬರ್ 2020